Category Archives: Blog

Your blog category

ಹೇಳಿದ್ದೇ ಒಂದು, ಅಲ್ಲಿ ಮಾಡಿದ ಕಥೆಯೇ ಇನ್ನೊಂದು; ಫ್ಲಾಪ್ ಚಿತ್ರದ ಬಗ್ಗೆ ರಶ್ಮಿಕಾ ಮಾತು – Kannada News | Rashmika Mandanna Exposes ‘Sikandar’ Script Change, Flop Film Controversy

ಯಾವುದೇ ಸಿನಿಮಾ ಹಿಟ್ ಆದರೆ ಅದರ ಹುಳುಕುಗಳು ಏನಿವೆ ಎಂಬುದು ಚರ್ಚೆಗೆ ಬರೋದೇ ಇಲ್ಲ. ಎಲ್ಲಾ ಕಲಾವಿದರು ಪ್ರೀತಿಯಿಂದ ಮಾತನಾಡುತ್ತಾರೆ. ಒಬ್ಬರನ್ನೊಬ್ಬರು ಹೊಗಳುತ್ತಾರೆ. ನಿರ್ದೇಶಕರ ಶ್ರಮವನ್ನು ಮೆಚ್ಚುತ್ತಾರೆ. ಅದೇ ಸಿನಿಮಾ ಫ್ಲಾಪ್ ಆಯಿತು ಎಂದುಕೊಳ್ಳಿ, ಆಗ ಶುರುವಾಗುತ್ತೆ ನೋಡಿ ಕಿತ್ತಾಟ. ‘ಸಿಕಂದರ್’ ಸಿನಿಮಾ ವಿಷಯದಲ್ಲಿ ಹೀಗೇ ಆಯಿತು. ಸಲ್ಮಾನ್ ಸೆಟ್​​ಗೆ ತಡವಾಗಿ ಬರುತ್ತಾರೆ ಎಂದು ನಿರ್ದೇಶಕ ಎಆರ್ ಮುರುಗದಾಸ್ ಆರೋಪಿಸಿದ್ದರು. ಇದಕ್ಕೆ ಸಲ್ಲು ಕೌಂಟರ್ ಕೂಡ ಕೊಟ್ಟಿದ್ದರು. ಈಗ ಈ ಫ್ಲಾಪ್ ಚಿತ್ರದ ಮತ್ತೊಂದು ಹುಳುಕನ್ನು ರಶ್ಮಿಕಾ ಮಂದಣ್ಣ (Rashmika Mandanna) ಬಿಚ್ಚಿಟ್ಟಿದ್ದಾರೆ.

‘ಎಆರ್ ಮುರುಗದಾಸ್ ಅವರು ಸ್ಕ್ರಿಪ್ಟ್ ಹೇಳುವಾಗ ಆ ಕಥೆ ಬೇರೆ ರೀತಿಯೇ ಇತ್ತು. ಅದು ಸಿನಿಮಾ ಆದಾಗ ಕಥೆ ಸಂಪೂರ್ಣವಾಗಿ ಬದಲಾಯಿತು. ಸಿನಿಮಾಗಳಲ್ಲಿ ಅದು ಸಾಮಾನ್ಯ. ಸಿನಿಮಾ ಸಾಗಿದಂತೆ ಕಥೆ ಬದಲಾಗುತ್ತದೆ. ಸಿಕಂದರ್ ಚಿತ್ರದಲ್ಲೂ ಹಾಗೆಯೇ ಆಯಿತು’ ಎಂದು ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಮಧ್ಯೆ ಯಾವುದೇ ಕೆಮಿಸ್ಟ್ರಿ ಇರಲಿಲ್ಲ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಕಥೆ ಚೆನ್ನಾಗಿ ಇದ್ದರೂ ಇವರ ಪರ್ಫಾರ್ಮೆನ್ಸ್ ಕಾರಣದಿಂದ ಸಿನಿಮಾ ಹಿಟ್ ಆಗುತ್ತಿರಲಿಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ರಶ್ಮಿಕಾ ಮಂದಣ್ಣ ನಟನೆ ಮೊದಲಿಗಿಂತ ಸಾಕಷ್ಟು ಏಳ್ಗೆ ಕಂಡಿದೆ. ಆದರೆ, ಮರಸುತ್ತುವ ಪಾತ್ರಗಳು ಮಾತ್ರ ಅವರಿಗೆ ಹೊಂದಿಕೆ ಆಗುತ್ತವೆ ಎಂಬ ಅಭಿಪ್ರಾಯವೂ ಇದೆ. ‘ಸಿಕಂದರ್’ ಸಿನಿಮಾದ ಬಜೆಟ್​ ದೊಡ್ಟ ಮಟ್ಟದಲ್ಲಿದೆ. ಆದರೆ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 200 ಕೋಟಿ ರೂಪಾಯಿ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ನಿರ್ಮಾಪಕರಿಗೆ ನಷ್ಟವಾಗಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಮದುವೆಗೂ ಮುನ್ನ ವಿದೇಶದಲ್ಲಿ ಕಾಲ ಕಳೆದು ಬಂದ ರಶ್ಮಿಕಾ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಅವರು ಸದ್ಯ ಮದುವೆ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ.ವಿಜಯ್ ದೇವರಕೊಂಡ ಜೊತೆ ಅವರ ಮದುವೆ ನಡೆಯುತ್ತಿದೆ. ಫೆಬ್ರವರಿ 26ರಂದು ರಶ್ಮಿಕಾ ಅವರು ರಾಜಸ್ಥಾನದಲ್ಲಿ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಈ ವಿಷಯವನ್ನು ಅವರಿನ್ನೂ ಖಚಿತಪಡಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಧಿ ಸಿಕ್ಕಿದ್ದೇ ಸಿಕ್ಕಿದ್ದು, ಲಕ್ಕುಂಡಿಯಲ್ಲಿ ಜಮೀನಿನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ – Kannada News | Gold Treasure Discovery Sparks Land Price Boom in Gdag’s Lakkundi, Rates Hit All Time High

ಗದಗ, ಜನವರಿ 21: ಗದಗದ (Gadag) ಲಕ್ಕುಂಡಿಯಲ್ಲಿ (Lakkundi) ಮನೆಗೆ ಪಾಯ ಆಗೆಯುವಾಗ ಬಂಗಾರದ ನಿಧಿ ಸಿಕ್ಕಿದ್ದು ನಂತರ ಹಲವಾರು ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದೀಗ ಲಕ್ಕುಂಡಿಯಲ್ಲಿ ಸರ್ಕಾರದ ವತಿಯಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು ಆರನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನಗಳ ಉತ್ಖನನದಲ್ಲಿ ಅನೇಕ ಐತಿಹಾಸಿಕ ವಸ್ತುಗಳು ದೊರೆತಿದ್ದು ಪಟ್ಟಣದ ಪಾರಂಪರಿಕ ಮಹತ್ವ ಹೆಚ್ಚಿಸಿದೆ. ಮತ್ತೊಂದೆಡೆ, ಈ ಎಲ್ಲ ಬೆಳವಣಿಗೆಗಳಿಂದಾಗಿ ಲಕ್ಕುಂಡಿಯಲ್ಲಿ ಜಮೀನಿನ ಬೆಲೆ ಎರಡು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿ ಜಮೀನಿನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಕೇವಲ ಎರಡು ವರ್ಷಗಳ ಹಿಂದೆ, ಅಂದರೆ 2023 ರಲ್ಲಿ ಲಕ್ಕುಂಡಿ ಬಳಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಕೃಷಿ ಭೂಮಿಯ ಬೆಲೆ ಎಕರೆಗೆ ಸುಮಾರು 50 ಲಕ್ಷ ರೂ.ಗಳಷ್ಟಿತ್ತು. ಈಗ ಬೆಲೆ ಬಹುತೇಕ ದ್ವಿಗುಣಗೊಂಡಿದ್ದು, ಈ ಪ್ರದೇಶದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಲಕ್ಕುಂಡಿಯಲ್ಲಿ ಭೂಮಿ ಬೆಲೆ ಹೆಚ್ಚಳಕ್ಕೆ ಅಸಲಿ ಕಾರಣ ಏನು?

ಗ್ರಾಮದ ಪಾರಂಪರಿಕ ಮೌಲ್ಯದಲ್ಲಿ ಹೆಚ್ಚಳ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಪರ್ಕದಲ್ಲಿ ಸುಧಾರಣೆ ಕಂಡುಬಂದಿದ್ದು ಈ ಪ್ರದೇಶದ ತ್ವರಿತ ಬೆಳವಣಿಗೆಗೆ ಕಾರಣ ಎಂದು ರಿಯಲ್ ಎಸ್ಟೇಟ್ ಏಜೆಂಟರು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಕ್ಕುಂಡಿ ಮತ್ತು ಸುತ್ತಮುತ್ತ ಉತ್ಖನನ ಪ್ರಾರಂಭಿಸುವ ಪ್ರವಾಸೋದ್ಯಮ ಇಲಾಖೆಯ ನಿರ್ಧಾರ ಕೂಡ ಗ್ರಾಮದ ಭವಿಷ್ಯವನ್ನು ಗಮನಾರ್ಹವಾಗಿ ಬದಲಾಯಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ವರದ ಉಲ್ಲೇಖಿಸಿದೆ.

ಉತ್ಖನನವು ಐತಿಹಾಸಿಕ ಕಲಾಕೃತಿಗಳು ಮತ್ತು ಸಂಪತ್ತನ್ನು ಹೊರತೆಗೆಯಲು ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಉತ್ತಮ ಪುನರ್ವಸತಿ ಮತ್ತು ವಸತಿಗೆ ದಾರಿ ಮಾಡಿಕೊಡುತ್ತದೆ ಎಂದು ಗ್ರಾಮಸ್ಥರು ಆಶಿಸಿದ್ದಾರೆ. ಪೂರ್ವಜರ ಮನೆಗಳನ್ನು ಹೊಂದಿರುವ ಕೆಲವು ನಿವಾಸಿಗಳು ಸರ್ಕಾರವು ತಮ್ಮ ಅಸ್ತಿತ್ವದಲ್ಲಿರುವ ಸ್ಥಳ ಪ್ರದೇಶಗಳಿಗೆ ಅನುಗುಣವಾಗಿ ಪರ್ಯಾಯ ಮನೆಗಳನ್ನು ಒದಗಿಸಬೇಕೆಂದು ನಿರೀಕ್ಷಿಸಿದ್ದಾರೆ. 70ರ ಹರೆಯದ ನಿವಾಸಿಯೊಬ್ಬರು ತಮ್ಮ ಕುಟುಂಬವು ಎರಡು ಅಂತಸ್ತಿನ ಪೂರ್ವಜರ ಮನೆಯನ್ನು ಹೊಂದಿದ್ದು, ಸರ್ಕಾರವು ಅದರ ಬದಲಿಗೆ ಒಳ್ಳೆಯ ಮನೆಯನ್ನು ಒದಗಿಸುತ್ತದೆ ಎಂದು ಆಶಿಸಿದ್ದಾರೆ. ಏಕೆಂದರೆ ಅವರು ತಮ್ಮ ಪೂರ್ವಜರು ನಿರ್ಮಿಸಿದ ಮನೆಗಳನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ.

ಉತ್ಖನನ ಸ್ಥಳಗಳಲ್ಲಿ ಹಾಜರಿದ್ದ ಹಲವಾರು ಗ್ರಾಮಸ್ಥರು, ಆವಾಸ್ ಯೋಜನೆಯಂತಹ ಯೋಜನೆಗಳ ಅಡಿಯಲ್ಲಿ ತಮಗೆ ಮನೆಗಳನ್ನು ನೀಡಬಾರದು. ಬದಲಿಗೆ ತಮ್ಮ ಅಸ್ತಿತ್ವದಲ್ಲಿರುವ ಆಸ್ತಿಗಳ ಪಾರಂಪರಿಕ ಮೌಲ್ಯವನ್ನು ಪರಿಗಣಿಸಿ ಸರಿಯಾದ ಬದಲಿ ಮನೆಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಗೆದಷ್ಟು ಕೌತಕ: ಲಕ್ಕುಂಡಿಯಲ್ಲಿ 4ನೇ ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ

ಆದರೆ, ಕೃಷಿ ಭೂಮಿಯನ್ನು ವಸತಿ ನಿವೇಶನಗಳಾಗಿ ಪರಿವರ್ತಿಸುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯು ಸುಗಮ ಸಂಪರ್ಕವನ್ನು ಒದಗಿಸುತ್ತಿದ್ದು, ಲಕ್ಕುಂಡಿ ಬಗ್ಗೆ ಹೂಡಿಕೆದಾರರ ಆಸಕ್ತಿ ತೀವ್ರವಾಗಿ ಹೆಚ್ಚಾಗಿದೆ ಎಂದೂ ವರದಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate Today Bangalore: ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬೆಳ್ಳಿಯೂ ಬೆಂಕಿ – Kannada News | Gold Price Today on 21st January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 21: ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿದೆ. ಒಂದೇ ದಿನ ಚಿನ್ನದ ಬೆಲೆ (Gold Rate) ಬರೋಬ್ಬರಿ 690 ರೂ ಹೆಚ್ಚಿದೆ. 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬಹುತೇಕ 7,000 ರುಗಳಷ್ಟು ಬೆಲೆ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 14,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆಯೂ 15,000 ರೂ ಗಡಿ ದಾಟಿದೆ. ಕಳೆದ ಮೂರು ದಿನದಲ್ಲಿ ಗ್ರಾಮ್​ಗೆ 1,000 ರೂನಷ್ಟು ಬೆಲೆ ಏರಿಕೆ ಆಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ಹೆಚ್ಚಿನ ಕಡೆಯೂ ಚಿನ್ನದ ಬೆಲೆ ಏರಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆಯ ಹೈಜಂಪ್ ಮುಂದುವರಿದಿದೆ. ಬುಧವಾರ ಇದರ ಬೆಲೆ 10 ರೂ ಹೆಚ್ಚಿದೆ. ಮೂರು ದಿನಗಳಲ್ಲಿ ಬರೋಬ್ಬರಿ 30 ರೂ ಬೆಲೆ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 32,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 32,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 34,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 21ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,480 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,190 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,611 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,480 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,190 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,190 ರೂ
  • ಚೆನ್ನೈ: 14,250 ರೂ
  • ಮುಂಬೈ: 14,190 ರೂ
  • ದೆಹಲಿ: 14,205 ರೂ
  • ಕೋಲ್ಕತಾ: 14,190 ರೂ
  • ಕೇರಳ: 14,190 ರೂ
  • ಅಹ್ಮದಾಬಾದ್: 14,195 ರೂ
  • ಜೈಪುರ್: 14,205 ರೂ
  • ಲಕ್ನೋ: 14,205 ರೂ
  • ಭುವನೇಶ್ವರ್: 14,190 ರೂ

ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್​ಗಳ ನಡುವೆ ಏನು ವ್ಯತ್ಯಾಸ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 610 ರಿಂಗಿಟ್ (13,740 ರುಪಾಯಿ)
  • ದುಬೈ: 529 ಡಿರಾಮ್ (13,156 ರುಪಾಯಿ)
  • ಅಮೆರಿಕ: 147.50 ಡಾಲರ್ (13,476 ರುಪಾಯಿ)
  • ಸಿಂಗಾಪುರ: 192.80 ಸಿಂಗಾಪುರ್ ಡಾಲರ್ (13,719 ರುಪಾಯಿ)
  • ಕತಾರ್: 525 ಕತಾರಿ ರಿಯಾಲ್ (13,160 ರೂ)
  • ಸೌದಿ ಅರೇಬಿಯಾ: 536 ಸೌದಿ ರಿಯಾಲ್ (13,059 ರುಪಾಯಿ)
  • ಓಮನ್: 56 ಒಮಾನಿ ರಿಯಾಲ್ (13,290 ರುಪಾಯಿ)
  • ಕುವೇತ್: 43.28 ಕುವೇತಿ ದಿನಾರ್ (12,935 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 325 ರೂ
  • ಚೆನ್ನೈ: 340 ರೂ
  • ಮುಂಬೈ: 325 ರೂ
  • ದೆಹಲಿ: 325 ರೂ
  • ಕೋಲ್ಕತಾ: 325 ರೂ
  • ಕೇರಳ: 340 ರೂ
  • ಅಹ್ಮದಾಬಾದ್: 325 ರೂ
  • ಜೈಪುರ್: 325 ರೂ
  • ಲಕ್ನೋ: 325 ರೂ
  • ಭುವನೇಶ್ವರ್: 340 ರೂ
  • ಪುಣೆ: 325

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಕಲ್ಲಿನಿಂದ ಜಜ್ಜಿ ಹಲ್ಲೆ – Kannada News | Violent Clash Inside Hindalaga Jail in Belagavi, Prisoner Attacked with Stone Over STD Phone Dispute

ಬೆಳಗಾವಿ, ಜನವರಿ 21: ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಓರ್ವ ಕೈದಿ ಗಾಯಗೊಂಡಿದ್ದಾನೆ. ಎಸ್‌ಟಿಡಿ ಫೋನ್ ಕಾಲ್ ವಿಚಾರವಾಗಿ ಕೈದಿಗಳ ಮಧ್ಯೆ ಘರ್ಷಣೆ ಶುರುವಾಗಿದೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಮಂಗಳೂರು ಮೂಲದ ಫಯಾನ್, ಬೆಳಗಾವಿ ಮೂಲದ ಮತ್ತೊಬ್ಬ ಅತ್ಯಾಚಾರ ಆರೋಪಿ ಸುರೇಶ್ ಮೇಲೆ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ದಾನೆ. ಗಾಯಾಳು ಸುರೇಶ್​​ನನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shinzo Abe Murder Case: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ – Kannada News | Life Behind Bars for a Political Shock: Shinzo Abe Assassin Sentenced in Japan

ಜಪಾನ್, ಜನವರಿ 21: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ(Shinzo Abe) ಕೊಲೆ ಪ್ರಕರಣದ ಆರೋಪಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಜುಲೈ 8, 2022 ರಂದು ಜಪಾನ್‌ನ ನಾರಾದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ಶೂಟರ್ ಟೆಟ್ಸುಯಾ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಗುಂಡು ತಗಲಿದ ಪರಿಣಾಮ ರಕ್ತಸ್ರಾವದಿಂದ ಅವರು ಆಸ್ಪತ್ರೆಯಲ್ಲಿ ನಿಧನರಾದರು.

ಇದು ಜಪಾನ್‌ನಲ್ಲಿ ದಶಕಗಳ ನಂತರ ನಡೆದ ಮೊದಲ ರಾಜಕೀಯ ಹತ್ಯೆಯಾಗಿತ್ತು. ಶೂಟರ್ ಅಬೆಗೂ, ತಾನು ದ್ವೇಷಿಸುತ್ತಿದ್ದ ಸಂಘಟನೆಗೂ ಸಂಬಂಧವಿದೆ ಎಂದು ಹೇಳಿ ಆರೋಪಿ  ಈ ಕೃತ್ಯ ಎಸಗಿದ್ದ. ಶಿಂಜೋ ಅಬೆ ಜಪಾನ್​​ನಲ್ಲಿ ಅತಿ ಹೆಚ್ಚು ಆಡಳಿತ ನಡೆಸಿರುವ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2006-2007, 2012-2020ರವರೆಗೂ ಅವರು ಪ್ರಧಾನಿ ಆಗಿದ್ದರು.

ಮಾಜಿ ಪ್ರಧಾನಿ ಅಬೆ ಅವರ ಮೇಲೆ ನಾರಾದಲ್ಲಿ  ಗುಂಡು ಹಾರಿಸಲಾಗಿತ್ತು. ಶೂಟರ್​ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆತನ ಶಿಂಜೋ ಅಬೆ ಅವರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ. ಅದೇ ಕಾರಣಕ್ಕೆ ಅವರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದ ಎಂದು ಹೇಳಲಾಗಿದೆ.

ಮತ್ತಷ್ಟು ಓದಿ: Shinzo Abe Death: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ; ಭಾರತದಲ್ಲಿ ಇಂದು ರಾಷ್ಟ್ರೀಯ ಶೋಕಾಚರಣೆ

ನಾರಾ ಸಿಟಿಯ ನಿವಾಸಿ ಎನ್ನಲಾದ 41 ವರ್ಷದ ಟೆಟ್ಸುಯಾ ಯಮಗಾಮಿ ಎಂಬಾತನನ್ನು ಶಿಂಜೋ ಅಬೆ ಮೇಲೆ ಗುಂಡಿಕ್ಕಿ ಕೊಲೆ ಯತ್ನದ ಶಂಕೆಯ ಮೇಲೆ ಬಂಧಿಸಲಾಗಿತ್ತು. ಟಿವಿಯಲ್ಲಿ ಪ್ರಸಾರವಾದ ದೃಶ್ಯಗಳಲ್ಲಿ, ಶಿಂಜೋ ಅಬೆ ಗುಂಡೇಟಿನಿಂದ ಕುಸಿದು ಬೀಳುತ್ತಿರುವುದನ್ನು ಕಾಣಬಹುದು. ತಕ್ಷಣ ಹಲವಾರು ಭದ್ರತಾ ಸಿಬ್ಬಂದಿ ಅವರ ಕಡೆಗೆ ಓಡಿದ್ದಾರೆ. ಅಬೆ ಕುಸಿದು ಬಿದ್ದಾಗ ಅವರು ತಮ್ಮ ಎದೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದಿರುವುದನ್ನು ನೋಡಬಹುದು. ಅವರ ಶರ್ಟ್​ ಪೂರ್ತಿ ರಕ್ತದಿಂದ ತೊಯ್ದುಹೋಗಿತ್ತು.

ಅಕ್ಟೋಬರ್‌ನಲ್ಲಿ ಪ್ರಾರಂಭವಾದ ವಿಚಾರಣೆಯ ಸಂದರ್ಭದಲ್ಲಿ ಟೆಟ್ಸುಯಾ ಯಮಗಾಮಿ ಕೊಲೆಗೆ ತಪ್ಪೊಪ್ಪಿಕೊಂಡಿದ್ದ. ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಯೂನಿಫಿಕೇಶನ್ ಚರ್ಚ್‌ಗೆ ಸಂಬಂಧಿಸಿದ ಗುಂಪಿಗೆ ಮಾಜಿ ನಾಯಕ ಅಬೆ ಕಳುಹಿಸಿದ ವೀಡಿಯೊ ಸಂದೇಶವನ್ನು ನೋಡಿದ ನಂತರ ತಾನು ಅವರನ್ನು ಕೊಂದಿದ್ದೇನೆ ಎಂದು ಆರೋಪಿ ಹೇಳಿದ್ದ.

ಜಪಾನ್‌ನ ಅತ್ಯಂತ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾದ ಅಬೆ, ಪ್ರಧಾನ ಮಂತ್ರಿ ಹುದ್ದೆಯನ್ನು ತೊರೆದ ನಂತರ ನಿಯಮಿತ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾಗ, 2022 ರಲ್ಲಿ ಪಶ್ಚಿಮ ನಗರವಾದ ನಾರಾದಲ್ಲಿ ಪ್ರಚಾರ ಮಾಡುವಾಗ ಕೊಲೆಯಾಗಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟ್ರಂಪ್ ಸ್ವಿಟ್ಜರ್‌ಲ್ಯಾಂಡ್​ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ – Kannada News | Trump’s Air Force One Glitch: Technical Snag Delays Davos Trip to Switzerland

ವಾಷಿಂಗ್ಟನ್, ಜನವರಿ 21: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಸ್ವಿಟ್ಜರ್‌ಲ್ಯಾಂಡ್​ಗೆ ಪ್ರಯಾಣಿಸುತ್ತಿದ್ದ ಏರ್ ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಾಷಿಂಗ್ಟನ್‌ಗೆ ಮರಳಿದೆ. ವಿಮಾನದಲ್ಲಿ ಸಿಬ್ಬಂದಿಗೆ ಸಣ್ಣ ವಿದ್ಯುತ್ ಸಮಸ್ಯೆ ಕಂಡುಬಂದಿತ್ತು. ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ವಿಶ್ವದ ಅನೇಕ ನಾಯಕರನ್ನು ಭೇಟಿಯಾಗಲು ಅಧ್ಯಕ್ಷರು ಹೊರಟಿದ್ದರು.

ವಿಮಾನ ಹಾರಾಟ ಆರಂಭಿಸಿದ ಬಳಿಕ AF1 ಸಿಬ್ಬಂದಿ ಸಣ್ಣ ವಿದ್ಯುತ್ ಸಮಸ್ಯೆಯನ್ನು ಪತ್ತೆ ಹಚ್ಚಿದ್ದರು. ಅಧ್ಯಕ್ಷರು ಮತ್ತು ತಂಡವು ಬೇರೆ ವಿಮಾನವನ್ನು ಹತ್ತಿ ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಿದ್ದಾರೆ. ಹಾರಾಟದ ಸುಮಾರು ಅರ್ಧ ಗಂಟೆಯ ನಂತರ ವಿಮಾನ ಹಿಂದಿರುಗಿತ್ತು. ಕಳೆದ ಫೆಬ್ರವರಿಯಲ್ಲಿ, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಜರ್ಮನಿಗೆ ಕರೆದೊಯ್ಯುತ್ತಿದ್ದ ವಾಯುಪಡೆಯ ವಿಮಾನವು ಯಾಂತ್ರಿಕ ಸಮಸ್ಯೆಯಿಂದಾಗಿ ವಾಷಿಂಗ್ಟನ್‌ಗೆ ಹಿಂತಿರುಗಬೇಕಾಯಿತು.

ಅಕ್ಟೋಬರ್‌ನಲ್ಲಿ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನು ಕರೆದೊಯ್ಯುತ್ತಿದ್ದ ಮಿಲಿಟರಿ ವಿಮಾನವು ವಿಂಡ್‌ಶೀಲ್ಡ್‌ನಲ್ಲಿನ ಬಿರುಕುಯಿಂದಾಗಿ ಯುನೈಟೆಡ್ ಕಿಂಗ್‌ಡಂನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.

ಮತ್ತಷ್ಟು ಓದಿ: ಟ್ರಂಪ್​ಗೆ ಒಂದಲ್ಲಾ ಎಂಟು ನೊಬೆಲ್ ಪುರಸ್ಕಾರಗಳು ಬೇಕಿತ್ತಂತೆ, ಅಮೆರಿಕ ಅಧ್ಯಕ್ಷ ಹೇಳಿದ್ದೇನು?

2011 ರಲ್ಲಿ, ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಕನೆಕ್ಟಿಕಟ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿದ್ದಾಗ ಕೆಟ್ಟ ಹವಾಮಾನದಿಂದಾಗಿ ಏರ್ ಫೋರ್ಸ್ ಒನ್ ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸಿತು. ಒಂದು ವರ್ಷದ ನಂತರ, 2012 ರಲ್ಲಿ, ಆಗಿನ ಉಪಾಧ್ಯಕ್ಷ ಜೋ ಬೈಡನ್ ಅವರನ್ನು ಹೊತ್ತೊಯ್ಯುತ್ತಿದ್ದ ಏರ್ ಫೋರ್ಸ್ ಟು, ಕ್ಯಾಲಿಫೋರ್ನಿಯಾದಲ್ಲಿ ಪಕ್ಷಿಗಳಿಗೆ ಡಿಕ್ಕಿ ಹೊಡೆದಿತ್ತು./ ಆದರೆ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಇಳಿಯಿತು.

ಗಮನಾರ್ಹವಾಗಿ, ಪ್ರಸ್ತುತ ಏರ್ ಫೋರ್ಸ್ ಒನ್ ಆಗಿ ಬಳಸಲಾಗುವ ಎರಡು ವಿಮಾನಗಳು ಸುಮಾರು ನಾಲ್ಕು ದಶಕಗಳಿಂದ ಹಾರಾಟ ನಡೆಸುತ್ತಿವೆ. ಬೋಯಿಂಗ್ ಬದಲಿ ಕೆಲಸ ಮಾಡುತ್ತಿದೆ. ಅಧ್ಯಕ್ಷರು ಮಿಲಿಟರಿಯೊಂದಿಗೆ ಸಂಪರ್ಕದಲ್ಲಿರಲು ಮತ್ತು ಪ್ರಪಂಚದ ಎಲ್ಲಿಂದಲಾದರೂ ಆದೇಶಗಳನ್ನು ನೀಡಲು ಅನುವು ಮಾಡಿಕೊಡಲು ಅವು ವಿವಿಧ ಸಂವಹನ ವ್ಯವಸ್ಥೆಗಳನ್ನು ಸಹ ಒಳಗೊಂಡಿವೆ.

ಕಳೆದ ವರ್ಷ, ಕತಾರ್‌ ಟ್ರಂಪ್‌ಗೆ ಐಷಾರಾಮಿ ಬೋಯಿಂಗ್ 747-8 ಜಂಬೋ ಜೆಟ್ ಅನ್ನು ಉಡುಗೊರೆಯಾಗಿ ನೀಡಿತು, ಇದನ್ನು ಏರ್ ಫೋರ್ಸ್ ಒನ್ ಫ್ಲೀಟ್‌ಗೆ ಸೇರಿಸಲಾಯಿತು

ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹವಾಲ ದಾಳಿ ಬೆನ್ನಲ್ಲೇ ನಡೆಯಿತಾ ಅಮಾನತು? ಇನ್‌ಸ್ಪೆಕ್ಟ‌ರ್ ರವಿ ಸಸ್ಪೆಂಡ್ ಹಿಂದಿನ ರಹಸ್ಯವೇನು? – Kannada News | Bengaluru Police Inspector Ravi Suspended: The reason behind the action is Hawala Seizure or Murder Case Negligence?

ಇನ್‌ಸ್ಪೆಕ್ಟ‌ರ್ ರವಿ ಸಸ್ಪೆಂಡ್ ಹಿಂದಿನ ರಹಸ್ಯವೇನು?

ಬೆಂಗಳೂರು, ಜನವರಿ 21: ತನ್ನ ವ್ಯಾಪ್ತಿಯಲ್ಲಿದ್ದ ಕೊಲೆ ಪ್ರಕರಣವನ್ನು ನಿರ್ಲಕ್ಷಿಸಿದ್ದಕ್ಕೆ ಕರ್ತವ್ಯ ಲೋಪದ ಆರೋಪದ ಮೇಲೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟ‌ರ್ ಎಂ.ಎಸ್.ರವಿ (Inspector Ravi suspended )ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಮಂಗಳವಾರ ಆದೇಶಿಸಿದ್ದರು. ಆದರೆ ಈ ಪ್ರಕರಣವೀಗ ಮಹತ್ವದ ತಿರುವು ಪಡೆದಿದ್ದು, ಹವಾಲ ದಂಧೆಯಲ್ಲಿ ತೊಡಗಿಕೊಂಡವ ಮೇಲೆ ದಾಳಿ ನಡೆಸಿದ ಕಾರಣಕ್ಕೆ ಅಧಿಕಾರಿಯನ್ನು ವಜಾಗೊಳಿಸಲಾಯಿತೇ ಎಂಬ ಶಂಕೆ ವ್ಯಕ್ತವಾಗಿದೆ.

ಕಳೆದ ವರ್ಷದ ಪ್ರಕರಣವನ್ನು ಮುಂದಿಟ್ಟುಕೊಂಡು ಅಮಾನತು

ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ಮಲ್ಲತ್ತಹಳ್ಳಿಯಲ್ಲಿ ಅನ್ನಪೂರ್ಣೇಶ್ವರಿನಗರ ನಿವಾಸಿ ದೀಪಕ್ ರಾಜ್ (18) ಎಂಬ ಯುವಕನ ಹತ್ಯೆಯಾಗಿತ್ತು. ಆದರೆ, ಜ್ಞಾನಭಾರತಿ ಠಾಣಾಧಿಕಾರಿ ರವಿ ಈ ಕೇಸ್ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಯಾವುದೇ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಈ ಮಧ್ಯೆ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ ಎಂಬುದು ಗೊತ್ತಾಗಿ, ಮತ್ತೆ ಇದೇ ಠಾಣೆಗೆ ಕೇಸ್​ ವರ್ಗಾವಣೆ ಮಾಡಿದ್ದರು.

ಹೀಗಾಗಿ ಸೆ.13ರಂದು ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಹಾಗೂ ಕನಿರ್ಲಕ್ಷ್ಯದ ಆರೋಪದ ಮೇರೆಗೆ ಇನ್ಸ್ಪೆಕ್ಟರ್ ರವಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಡಿಸಿಪಿ ವರದಿ ನೀಡಿದ್ದರು. ಆದರೆ ಅಧಿಕಾರಿಯ ಅಮಾನತಿನ ಹಿಂದೆ ಬೇರೆಯೇ ಕಾರಣವಿದೆಯೇ ಎಂಬ ಅನುಮಾನವೀಗ ಕಾಡುತ್ತಿದೆ.

ತಮ್ಮ ವ್ಯಾಪ್ತಿ ಮೀರಿ ದಾಳಿ ನಡೆಸಿದ್ದ ರವಿ

ಜನವರಿ 15ರ ಮುಂಜಾನೆ ನಾಗರಬಾವಿ ಪ್ರದೇಶದಿಂದ ತಮಿಳುನಾಡಿನತ್ತ ಸಾಗುತ್ತಿದ್ದ ಹವಾಲ ಹಣದ ಕುರಿತು ಖಚಿತ ಮಾಹಿತಿ ಪಡೆದಿದ್ದ ಇನ್ಸ್ಪೆಕ್ಟರ್ ರವಿ ಹಾಗೂ ಅವರ ತಂಡ ಆರೋಪಿಗಳನ್ನು ಚೇಸ್ ಮಾಡಿ ನೈಸ್ ರಸ್ತೆ ಟೋಲ್ ಬಳಿ ಕಾರನ್ನು ತಡೆದಿದ್ದರು. ಈ ವೇಳೆ ಹುಳಿಮಾವು ಠಾಣೆಯ ಪೊಲೀಸರಿಗೆ ಸಹ ಸಹಾಯಕ್ಕಾಗಿ ಮಾಹಿತಿ ನೀಡಲಾಗಿದ್ದು, ಬಳಿಕ ಜಂಟಿಯಾಗಿ ದಾಳಿ ನಡೆಸಲಾಗಿದೆ.

ಪೊಲೀಸರು ತಡೆದ ಹುಂಡೈ ಐ-10 ಕಾರಿನ ಪರಿಶೀಲನೆ ವೇಳೆ ಸುಮಾರು 1 ಕೋಟಿ 5 ಲಕ್ಷ ರೂ. ನಗದು ಹಣ ಪತ್ತೆಯಾಗಿದ್ದು, ಹಣವನ್ನು ಸೀಜ್ ಮಾಡಲಾಗಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಾರ್ಥ, ಸಾಂಬಶಿವ ಹಾಗೂ ದಿನೇಶ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆದರೆ ಈ ದಾಳಿಯ ಕುರಿತು ನಗರ ಪೊಲೀಸ್ ಆಯುಕ್ತರು ಹಲವಾರು ಪ್ರಶ್ನೆಗಳನ್ನಿಟ್ಟಿದ್ದಾರೆ.

ಇದನ್ನೂ ಓದಿ ಪ್ರೀತಿಸಿ ಮದುವೆಯಾಗಿ ನಾಲ್ಕೇ ನಾಲ್ಕು ತಿಂಗಳು, ಮೂವರು ಪುರುಷರೊಂದಿಗೆ ಸಿಕ್ಕಿಬಿದ್ದ ಪತ್ನಿಯ ಕೊಲೆಗೈದ ಪತಿ

ಪೊಲೀಸ್ ಆಯುಕ್ತರ ಪ್ರಶ್ನೆಗಳೇನು?

  • ಇನ್ಸ್ಪೆಕ್ಟರ್ ರವಿ ತಮ್ಮ ಪೊಲೀಸ್ ವ್ಯಾಪ್ತಿಯನ್ನು ಮೀರಿ ದಾಳಿ ನಡೆಸಿದ್ದೇಕೆ?
  • ಕಾರಿನಲ್ಲಿ ನಿಜಕ್ಕೂ ಎಷ್ಟು ಹಣ ಇತ್ತು?
  • ಸೀಜ್ ಮಾಡಲಾದ ಹಣದ ಪ್ರಮಾಣದಲ್ಲಿ ವ್ಯತ್ಯಾಸವಿದೆಯೇ?
  • ಪ್ರಕರಣದಲ್ಲಿ ಯಾರಾದರೂ ಪೊಲೀಸ್ ಅಧಿಕಾರಿಗಳ ಭಾಗವಹಿಸುವಿಕೆ ಇದೆಯೇ?

ಈ ಎಲ್ಲ ಪ್ರಶ್ನೆಗಳ ಹಿನ್ನೆಲೆಯಲ್ಲಿ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿಗೆ ನಿರ್ದೇಶನ ನೀಡಿದ್ದಾರೆ. ಹವಾಲ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಇನ್ಸ್ಪೆಕ್ಟರ್ ರವಿ ನೀಡಿದ ದೂರಿನ ಆಧಾರದಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣದ ಒಂದು ಭಾಗ ಮಿಸ್ ಆಗಿರುವ ಆರೋಪವೂ ಕೇಳಿಬರುತ್ತಿದೆ. ಇದನ್ನೇ ಮನಸಲ್ಲಿಟ್ಟುಕೊಂಡು, ಕಳೆದ ವರ್ಷದ ಪ್ರಕರಣದ ಸಬೂಬು ಕೊಟ್ಟು ಇನ್ಸ್ಪೆಕ್ಟರ್ ರವಿಯನ್ನು ವಜಾಗೊಳಿಸಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶೂಟಿಂಗ್ ವೇಳೆ ಮಾಡಿದ ತಪ್ಪಿನಿಂದ ಈ ಸ್ಥಿತಿಗೆ ಬಂದ ಖ್ಯಾತ ಹಾಸ್ಯನಟ – Kannada News | Rajendran’s Hair Loss Accident: How a Tragedy Shaped His Unique Comedy Career

ತಮಿಳು ನಟ ರಾಜೇಂದ್ರನ್ ಅನಿಕೇರಿಗೆ ಪರಿಚಯ ಇದೆ. ಅವರು ಮೊಟ್ಟ ರಾಜೇಂದ್ರನ್ ಎಂದೇ ಫೇಮಸ್. ಅವರ ಹೆಸರು ಗೊತ್ತಿರದೆ ಇರಬಹುದು, ಆದರೆ ಅವರ ಫೋಟೋ ನೋಡಿದರೆ ಎಲ್ಲರಿಗೂ ಗೊತ್ತಾಗುತ್ತದೆ. ಸದಾ ಬೋಳು ತಲೆಯಲ್ಲಿ ಕಾಣಿಸಿಕೊಂಡು ರಾಜೇಂದ್ರನ್ ಪ್ರೇಕ್ಷಕರನ್ನು ನಗಿಸುತ್ತಾರೆ. ಕನ್ನಡದಲ್ಲಿ ಎರಡೇ ಸಿನಿಮಾ ಮಾಡಿರುವ ಅವರು ಪರಭಾಷಿಗರಿಗೆ ಹೆಚ್ಚು ಪರಿಚಿತರು.

ರಾಜೇಂದ್ರನ್ ಅವರು ಪ್ರಸ್ತುತ ತೆಲುಗು ಜೊತೆಗೆ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ನಿಜ ಜೀವನದಲ್ಲಿಯೂ ರಾಜೇಂದ್ರನ್ ಯಾವಾಗಲೂ ಬೋಳಿಸಿಕೊಂಡ ತಲೆಯೊಂದಿಗೆ ಕಾಣಿಸಿಕೊಳ್ಳುತ್ತಾರೆ. ಕನಿಷ್ಠ ಅವರಿಗೆ ರೆಪ್ಪೆಗೂದಲುಗಳಿಲ್ಲ. ಒಂದು ಕಾಲದಲ್ಲಿ ದಪ್ಪ ಕೂದಲಿನೊಂದಿಗೆ ನಾಯಕನಾಗಿದ್ದ ರಾಜೇಂದ್ರನ್ ಬೋಳು ತಲೆಯಾಗಿ ಬದಲಾಗುವುದರ ಹಿಂದೆ ಕಣ್ಣೀರಿನ ಕಥೆಯಿದೆ.

ರಾಜೇಂದ್ರನ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದರು. ಅವರು ಅನೇಕ ಚಿತ್ರಗಳಿಗೆ ಅತ್ಯುತ್ತಮ ಸ್ಟಂಟ್ ಮ್ಯಾನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಅನೇಕ ನಾಯಕರಿಗೆ ಸಾಹಸ ದೃಶ್ಯಗಳನ್ನು (ಸ್ಟಂಟ್ ಡಬಲ್) ಸಹ ಮಾಡಿದ್ದಾರೆ. ರಾಜೇಂದ್ರನ್ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಫೈಟರ್ ಆಗಿ ಕೆಲಸ ಮಾಡಿದ್ದಾರೆ. ಆದರೆ, ಮಲಯಾಳಂ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಾಜೇಂದ್ರನ್ ತಪ್ಪೊಂದನ್ನು ಮಾಡಿದರು. ಅದಕ್ಕಾಗಿಯೇ ಅವರು ಹೀಗೆ ಬದಲಾದರು. ರಾಜೇಂದ್ರ ಸ್ವತಃ ಒಂದು ಸಂದರ್ಭದಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

‘ಮಲಯಾಳಂ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ನಾನು 15 ಅಡಿ ಎತ್ತರದಿಂದ ನೀರಿಗೆ ಬೀಳಬೇಕಾಯಿತು. ನಾನು ಯೋಚಿಸದೆ ಜಿಗಿದಿದ್ದೇನೆ. ಗ್ರಾಮಸ್ಥರು ನನ್ನನ್ನು ನೋಡಿದಾಗ, ‘ಇದೆಲ್ಲ ಕಾರ್ಖಾನೆಗಳಿಂದ ಬರುವ ರಾಸಾಯನಿಕ ನೀರು. ನೀವು ಈ ನೀರಿಗೆ ಏಕೆ ಹಾರಿದ್ದೀರಿ?’ ಎಂದು ಹೇಳಿದರು” ಎಂದು ರಾಜೇಂದ್ರನ್ ಹೇಳಿದರು. ಆ ಕ್ಷಣದಿಂದ, ನನ್ನ ಕೂದಲು ಉದುರಲು ಪ್ರಾರಂಭಿಸಿತು. ಸ್ವಲ್ಪ ಸಮಯದ ನಂತರ, ನಾನು ಸಂಪೂರ್ಣವಾಗಿ ಬೋಳಿಸಿಕೊಂಡೆ. ನನ್ನ ಹುಬ್ಬುಗಳು ಸಹ ಮಾಯವಾದವು. ರಾಸಾಯನಿಕಗಳೊಂದಿಗೆ ಬೆರೆಸಿದ ನೀರು ನನ್ನ ಹೊಟ್ಟೆಗೆ ಹೋದಂತೆ, ನನಗೆ ವಿವಿಧ ಆರೋಗ್ಯ ಸಮಸ್ಯೆಗಳೂ ಬಂದವು. ನನಗೆ ಜೀರ್ಣಕ್ರಿಯೆ ಸಮಸ್ಯೆಗಳೂ ಇದ್ದವು. ಆದರೆ ನಾನು ಈ ಸಮಸ್ಯೆಗಳಿಂದ ನಿಧಾನವಾಗಿ ಚೇತರಿಸಿಕೊಂಡೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ವಿಳಂಬವಾಗುತ್ತಿದೆ ‘ಜನ ನಾಯಗನ್’ ರಿಲೀಸ್; ಚುನಾವಣೆ ಘೋಷಣೆ ಆದರೆ ಸದ್ಯಕ್ಕಿಲ್ಲ ಬಿಡುಗಡೆ

ಅಪಘಾತದ ನಂತರ ತನಗೆ ಖಳನಾಯಕನ ಪಾತ್ರಗಳಲ್ಲ, ಹಾಸ್ಯ ಪಾತ್ರಗಳೇ ಸಿಗುತ್ತಿವೆ ಎಂದು ರಾಜೇಂದ್ರನ್ ಹೇಳುತ್ತಾರೆ. ನಿರ್ದೇಶಕರು ವಿಗ್ ಕೂಡ ಧರಿಸದೆ ಹಾಗೆ ನಟಿಸಲು ಹೇಳುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ತಾನು ಮೈನಸ್ ಎಂದು ಭಾವಿಸಿದ್ದೇ ತನಗೆ ಪ್ಲಸ್ ಆಗಿ ಮಾರ್ಪಟ್ಟಿದೆ ಎಂದು ಸ್ಟಾರ್ ಹಾಸ್ಯನಟ ಸಂತೋಷದಿಂದ ಹೇಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:05 am, Wed, 21 January 26

Source link

Swapna Shastra: ತಾಳಿ ಮುರಿದಂತೆ ಕನಸು ಬಿದ್ದರೆ ಅಪಶಕುನವೇ? ಸ್ವಪ್ನಶಾಸ್ತ್ರ ಹೇಳುವುದೇನು? – Kannada News | Mangalsutra Dream Meaning: Auspicious Taali in Dreams per Swapna Shastra

ಸ್ವಪ್ನ ಶಾಸ್ತ್ರವು ಕನಸುಗಳ ಅರ್ಥವನ್ನು ವಿವರಿಸುವ ಪ್ರಾಚೀನ ಭಾರತೀಯ ಶಾಸ್ತ್ರವಾಗಿದ್ದು, ಕನಸುಗಳು ವ್ಯಕ್ತಿಯ ಭವಿಷ್ಯದಲ್ಲಿ ಸಂಭವಿಸಬಹುದಾದ ಶುಭ–ಅಶುಭ ಘಟನೆಗಳ ಸೂಚನೆಗಳಾಗಿರುತ್ತವೆ ಎಂಬ ನಂಬಿಕೆ ಇದೆ. ಈ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಣಿಸುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಅರ್ಥವಿದೆ. ಅದರಂತೆ, ಕನಸಿನಲ್ಲಿ ಮಂಗಳ ಸೂತ್ರವನ್ನು (ತಾಳಿ) ನೋಡುವುದು ಅತ್ಯಂತ ಶುಭ ಸಂಕೇತವೆಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.

ಕನಸಿನಲ್ಲಿ ಮಂಗಳ ಸೂತ್ರವನ್ನು ನೋಡುವುದು ಪತಿಯ ದೀರ್ಘಾಯುಷ್ಯ, ಕುಟುಂಬದಲ್ಲಿ ನೆಮ್ಮದಿ ಹಾಗೂ ದಾಂಪತ್ಯ ಜೀವನದ ಸಂತೋಷವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಮಂಗಳ ಸೂತ್ರವು ವಿವಾಹಿತ ಮಹಿಳೆಯ ಜೀವನದಲ್ಲಿ ಪವಿತ್ರತೆಯ ಹಾಗೂ ಸುಖಸಮೃದ್ಧಿಯ ಸಂಕೇತವಾಗಿರುವುದರಿಂದ, ಅದನ್ನು ಕನಸಿನಲ್ಲಿ ಕಾಣುವುದು ಉತ್ತಮ ಫಲಿತಾಂಶಗಳನ್ನು ತರುತ್ತದೆ ಎಂದು ಸ್ವಪ್ನ ಶಾಸ್ತ್ರ ವಿವರಿಸುತ್ತದೆ.

ಆದರೆ, ಕನಸಿನಲ್ಲಿ ಮಂಗಳ ಸೂತ್ರ ಮುರಿದಂತೆ ಕಾಣಿಸಿದರೆ ಅದನ್ನು ಅಶುಭ ಸೂಚನೆ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ವಿವಾಹಿತ ಮಹಿಳೆಯರು ತಮ್ಮ ಕನಸಿನಲ್ಲಿ ತಾಳಿ ಮುರಿದು ಹೋದಂತೆ ಕಂಡರೆ ಅದು ಪತಿಯ ಜೀವನದಲ್ಲಿ ನಡೆಯುತ್ತಿರುವ ತೊಂದರೆಗಳ ಸಂಕೇತವಾಗಿರಬಹುದು ಎಂದು ಜ್ಯೋತಿಷ್ಯ ತಜ್ಞರು ಎಚ್ಚರಿಸುತ್ತಾರೆ. ಈ ರೀತಿಯ ಕನಸು ಗಂಡನ ಆರೋಗ್ಯ, ಉದ್ಯೋಗ ಅಥವಾ ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ತಜ್ಞರ ಅಭಿಪ್ರಾಯದಂತೆ, ಇಂತಹ ಅಶುಭ ಕನಸು ಕಂಡ ಮಹಿಳೆಯರು ಭಯಪಡದೇ ಶಾಂತವಾಗಿ ಶಿವನನ್ನು ಪೂಜಿಸಬೇಕು. ಪತಿಯ ದೀರ್ಘಾಯುಷ್ಯ ಹಾಗೂ ಸಂಕಷ್ಟ ನಿವಾರಣೆಗೆ ಸಂಬಂಧಿಸಿದ ಪೂಜೆ, ವ್ರತ ಮತ್ತು ಪ್ರಾರ್ಥನೆಗಳನ್ನು ಮಾಡುವುದರಿಂದ ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಜೊತೆಗೆ ಮನಸ್ಸಿನಲ್ಲಿ ಧೈರ್ಯ ಮತ್ತು ಸಕಾರಾತ್ಮಕತೆ ಉಳಿಸಿಕೊಂಡು ದೇವರ ಅನುಗ್ರಹವನ್ನು ಬೇಡಿಕೊಳ್ಳುವುದು ಒಳಿತೆಂದು ವಿದ್ವಾಂಸರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಫ್ರಾಂಚೈಸಿಗೆ ಗಡುವು ನೀಡಿದ BCCI

Source link