Category Archives: Blog

Your blog category

ಮಾತು ಕೊಟ್ಟಿದ್ದೀರಿ, ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಪರೋಕ್ಷವಾಗಿ ಸಿಎಂಗೆ ಟಾಂಗ್ ಕೊಟ್ರಾ ಡಿಕೆ ಸುರೇಶ್! – Kannada News | DK Suresh’s Subtle Dig at CM Siddaramaiah Over Power Sharing Sparks Political Buzz in Karnataka

ಬೆಂಗಳೂರು, ಜನವರಿ 20: ಡಿಸಿಎಂ ಡಿಕೆ ಶಿವಕುಮಾರ್ ಅವರ ಪಕ್ಷ ನಿಷ್ಠೆ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಡಿಕೆ ಸುರೇಶ್, ಮಾತು ಕೊಟ್ಟಿದ್ದೀರಿ, ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಿವಕುಮಾರ್ ಅವರು ಯಾವಾಗಲೂ ಪಕ್ಷಕ್ಕೆ ನಿಷ್ಠರಾಗಿದ್ದಾರೆ ಹೊರತು ವ್ಯಕ್ತಿಗಳಿಗಲ್ಲ. ಪಕ್ಷ ಅಧಿಕಾರದಲ್ಲಿದ್ದಾಗ ಅಥವಾ ಇಲ್ಲದಿದ್ದಾಗಲೂ ಅವರು ಪಕ್ಷದ ಜೊತೆ ನಿಂತಿದ್ದಾರೆ ಮತ್ತು ಎಲ್ಲವನ್ನೂ ತಾಳ್ಮೆಯಿಂದ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಪಂಚಾಯಿತಿ ಚೇರ್ಮನ್‌ಗಳ ಉದಾಹರಣೆಯನ್ನು ನೀಡಿ ಮಾತನಾಡಿದ ಸುರೇಶ್, ಆರಂಭದಲ್ಲಿ ಚೇರ್ಮನ್ ಸ್ಥಾನ ಬೇಡ ಎನ್ನುತ್ತಾರೆ. ಆ ಸ್ಥಾನಕ್ಕೆ ಅರ್ಹತೆ ಪಡೆದ ನಂತರ ಅಥವಾ ಲಭ್ಯವಾದಾಗ ‘ಬೇಕೇ ಬೇಕು’ ಎಂದು ಪಟ್ಟು ಹಿಡಿಯುತ್ತಾರೆ. ಮಾತನ್ನು ಕೊಟ್ಟು ಒಮ್ಮೆ ಹುದ್ದೆ ಪಡೆದ ನಂತರ ಅದನ್ನು ಬಿಟ್ಟುಕೊಡುವುದು ಅಥವಾ ಇತರರನ್ನು ಮನವೊಲಿಸುವುದು ಬಹಳ ಕಷ್ಟಕರ. ಇದು ರಾಜಕಾರಣದಲ್ಲಿ ನಂಬಿಕೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದರು. ತಾವು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಬೆಳವಣಿಗೆಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ ಎಂದು ಸುರೇಶ್ ಸ್ಪಷ್ಟಪಡಿಸಿದರು. ಸುರೇಶ್ ಅವರು ಪಂಚಾಯಿತಿ ಚೇರ್ಮನ್ ಹುದ್ದೆಗಳ ವಿಚಾರ ಪ್ರಸ್ತಾಪಿಸಿ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೇ ಟಾಂಗ್ ಕೊಟ್ಟರಾ ಎಂಬ ಪ್ರಶ್ನೆ ಈಗ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ತಂದೆ ಆಗುತ್ತಿದ್ದಾರೆ ಖ್ಯಾತ ನಿರ್ದೇಶಕ ಅಟ್ಲಿ; ಇಲ್ಲಿವೆ ಫೋಟೋಸ್

Source link

ಬಜೆಟ್​ನಲ್ಲಿ ಫ್ಯಾಮಿಲಿ ಭಾಗ್ಯ; ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ತರಲು ಯೋಜನೆ; ಯಾರಿಗೆ ಲಾಭ? – Kannada News | Budget 2026 27 may bring more tax relief to married couples through joint taxation system

ನವದೆಹಲಿ, ಜನವರಿ 20: ಕಳೆದ ಬಜೆಟ್​ನಲ್ಲಿ (Union Budget) ಭರ್ಜರಿ ಟ್ಯಾಕ್ಸ್ ರಿಲೀಫ್ ಕೊಟ್ಟಿದ್ದ ಸರ್ಕಾರ ಈಗ ಮುಂಬರುವ ಬಜೆಟ್​ನಲ್ಲೂ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ವರದಿಗಳ ಪ್ರಕಾರ ಸರ್ಕಾರವು ಅಮೆರಿಕ, ಜರ್ಮನಿ ಮೊದಲಾದ ಕೆಲ ದೇಶಗಳಲ್ಲಿ ಇರುವ ರೀತಿಯಲ್ಲಿ ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ಅಥವಾ ಜಂಟಿ ತೆರಿಗೆ ವ್ಯವಸ್ಥೆ ತರುವ ಬಗ್ಗೆ ಯೋಜಿಸಿದೆ. ಇದೇನಾದರೂ ಜಾರಿಗೆ ಬಂದಲ್ಲಿ ಒಂದೇ ಆದಾಯಮೂಲ ಇರುವ ಕುಟುಂಬಗಳಿಗೆ ತೆರಿಗೆ ಉಳಿಸಲು ಅನುಕೂಲವಾಗುವ ನಾಧ್ಯತೆ ಇದೆ.

ಜಂಟಿ ಟ್ಯಾಕ್ಸೇಶನ್ ಸಿಸ್ಟಂ ಹೇಗಿರುತ್ತೆ?

ಗಂಡ ಮತ್ತು ಹೆಂಡತಿ ಇಬ್ಬರೂ ಪ್ರತ್ಯೇಕವಾಗಿ ಟ್ಯಾಕ್ಸ್ ಫೈಲ್ ಮಾಡುವ ಬದಲು ಜಂಟಿಯಾಗಿ ಐಟಿ ರಿಟರ್ನ್ಸ್ ಸಲ್ಲಿಸಲು ಅವಕಾಶ ಇರುತ್ತದೆ. ಜಂಟಿಯಾಗಿ ಸಲ್ಲಿಸಿದಾಗ ಹೆಚ್ಚಿನ ವಿನಾಯಿತಿಗಳು ಸಿಗುತ್ತವೆ. ಮೂಲ ಡಿಡಕ್ಷನ್ ಪ್ರಮಾಣ ಹೆಚ್ಚುತ್ತದೆ. ಸರ್ಚಾರ್ಜ್ ಮಿತಿ ಹೆಚ್ಚುತ್ತದೆ.

ಇದನ್ನೂ ಓದಿ: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…

ಸದ್ಯ ಇರುವ ಪ್ರಸ್ತಾಪದ ಪ್ರಕಾರ, ಜಂಟಿ ಟ್ಯಾಕ್ಸೇಶನ್​ನಲ್ಲಿ ಗಂಡ ಮತ್ತು ಹೆಂಡತಿ ಇಬ್ಬರ ಒಟ್ಟು ಆದಾಯದಲ್ಲಿ 8 ಲಕ್ಷ ರೂ ಟ್ಯಾಕ್ಸ್ ಎಕ್ಸೆಂಪ್ಷನ್ ಅಥವಾ ತೆರಿಗೆ ವಿನಾಯಿತಿ ಕೊಡಲಾಗುತ್ತದೆ. ಶೇ. 30 ತೆರಿಗೆ ಅನ್ವಯ ಆಗುವ ಆದಾಯ ಮಿತಿಯನ್ನು 48 ಲಕ್ಷ ರೂಗೆ ಏರಿಸಲಾಗಬಹುದು.

ಅಂದರೆ, ಕಳೆದ ವರ್ಷದ ಸ್ಲ್ಯಾಬ್ ದರದ ಪ್ರಕಾರ 24 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ಟ್ಯಾಕ್ಸ್ ಅನ್ವಯ ಆಗುತ್ತದೆ. ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಲ್ಲಿ 48 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ಟ್ಯಾಕ್ಸ್ ಅನ್ವಯ ಆಗಬಹುದು.

ಹಾಗೆಯೇ, ಈಗಿರುವ ವ್ಯವಸ್ಥೆಯಲ್ಲಿ 50 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಸರ್ಚಾರ್ಜ್ ಅನ್ವಯ ಆಗುತ್ತದೆ. ಶೇ. 10ರಿಂದ 25ರವರೆಗೂ ಸರ್ಚಾರ್ಜ್ ಇದೆ. ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಲ್ಲಿ ಸರ್ಚಾರ್ಜ್ 75 ಲಕ್ಷ ರೂ ಆದಾಯದಿಂದ ಶುರುವಾಗುತ್ತದೆ.

ಇದನ್ನೂ ಓದಿ: ಬಜೆಟ್​ಗೆ ಮುಂಚೆ ಆರ್ಥಿಕ ಸಮೀಕ್ಷೆ ವರದಿ; ಏನಿದರ ಮಹತ್ವ?

ಸಿಂಗಲ್ ಇನ್ಕಮ್ ಇರುವ ಕುಟುಂಬಗಳಿಗೆ ಅನುಕೂಲ

ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಿಂದ ಅನುಕೂಲಗಳು ಬಹಳಷ್ಟಾಗಬಹುದು. ಗಂಡ ಮತ್ತು ಹೆಂಡತಿ ಇಬ್ಬರಿದ್ದು ಗಂಡ ಮಾತ್ರವೇ ಕೆಲಸಕ್ಕೆ ಹೋಗುತ್ತಿದ್ದು, ಹೆಂಡತಿ ಗೃಹಿಣಿಯಾಗಿದ್ದರೆ, ಹಾಗೂ ಗಂಡನ ಆದಾಯ ಬಹಳ ಹೆಚ್ಚಿದ್ದರೆ ಆಗ ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ಅತಿಹೆಚ್ಚು ಅನುಕೂಲ ತರುತ್ತದೆ.

ಗಂಡ ಮತ್ತು ಹೆಂಡತಿ ಇಬ್ಬರೂ ದುಡಿಯುತ್ತಿದ್ದರೆ ಜಂಟಿಯಾಗಿಯೇ ಐಟಿಆರ್ ಸಲ್ಲಿಸಬೇಕೆಂದು ಕಡ್ಡಾಯ ಪಡಿಸಲಾಗುವುದಿಲ್ಲ. ಪ್ರತ್ಯೇಕವಾಗಿ ಸಲ್ಲಿಸಬಹುದು, ಅಥವಾ ಜಂಟಿಯಾಗಿಯೂ ಸಲ್ಲಿಸಬಹುದು. ಟ್ಯಾಕ್ಸ್ ಬಾಧ್ಯತೆ ಮತ್ತು ಅನುಕೂಲತೆಗಳನ್ನು ಎಣಿಸಿ ನಿರ್ಧಾರ ತೆಗೆದುಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SSLC ವಿದ್ಯಾರ್ಥಿಗಳೇ ಗಮನಿಸಿ: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ – Kannada News | SSLC Preparatory Exam Changes: New Guidelines After Paper Leak in Karnataka

ಬೆಂಗಳೂರು, ಜನವರಿ 20: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆ ಎಚ್ಚೆತ್ತ ಶಿಕ್ಷಣ ಇಲಾಖೆ ಮುಂದಿನ ಪರೀಕ್ಷೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.ಹೊಸ ಮಾರ್ಗಸೂಚಿಗಳ ಪ್ರಕಾರ, ಎರಡನೇ ಪೂರ್ವಸಿದ್ಧತಾ ಪರೀಕ್ಷೆಗಳು ಜನವರಿ 27ರಿಂದ ಫೆಬ್ರವರಿ 2ರವರೆಗೆ ನಡೆಯಲಿವೆ. ಬೆಳಿಗ್ಗೆ 10 ಗಂಟೆಗೆ ಬದಲು 11 ಗಂಟೆಗೆ ಪರೀಕ್ಷೆಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಯಿಂದ ನಿಯಮಿತ ತರಗತಿಗಳಿಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.

ಇನ್ನು ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಶಾಲೆಯ ಲಾಗಿನ್‌ನಿಂದ ಬೆಳಿಗ್ಗೆ 9.30ಕ್ಕೆ ಡೌನ್‌ಲೋಡ್ ಮಾಡಬೇಕು. ಬಳಿಕ 10 ಗಂಟೆಯೊಳಗೆ ಅವನ್ನು ಮುದ್ರಿಸಬೇಕು. ಅಲ್ಲದೆ ಬೆಳಿಗ್ಗೆ 10.50ಕ್ಕಿಂತ ಮುಂಚಿತವಾಗಿ ಪರೀಕ್ಷಾ ಹಾಲ್‌ಗೆ ಕಳುಹಿಸಬಾರದು ಎಂದು ಸೂಚಿಸಲಾಗಿದೆ. ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯ ಘಟನೆ ನಡೆದರೆ, ಸಂಬಂಧಿತ ಶಾಲೆಯ ಮುಖ್ಯಶಿಕ್ಷಕ, ನೋಡಲ್ ಶಿಕ್ಷಕ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರತಿ ಪ್ರಕರಣಕ್ಕೂ ಪ್ರತ್ಯೇಕ ಎಫ್‌ಐಆರ್ ದಾಖಲಾಗಲಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಇದನ್ನೂ ಓದಿ: SSLC ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್; ಮುಖ್ಯೋಪಾಧ್ಯಾಯರು ಸೇರಿ 8 ಮಂದಿ ಅರೆಸ್ಟ್

ಕಳೆದ ವಾರ ನಡೆದ SSLC ಪೂರ್ವಭಾವಿ ಪರೀಕ್ಷೆಯಲ್ಲಿ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಆಗಿದ್ದು, ಕೃತ್ಯವನ್ನು ಹಲವು ಶಾಲೆಗಳೇ ಎಸಗಿದ್ದವು. ಪರೀಕ್ಷೆಗೆ ಮೂರು ಗಂಟೆಗಳಿಗೂ ಮುನ್ನ ಪ್ರಶ್ನೆ ಪತ್ರಿಕೆಗಳ ಫೋಟೋ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದರು. ಅಲ್ಲದೆ ಪ್ರಶ್ನೆ ಪತ್ರಿಕೆ ಮಾರಾಟಕ್ಕಾಗಿ ಇನ್‌ಸ್ಟಾಗ್ರಾಂನಲ್ಲಿ ‘ಡೆಲ್ಟಾ ಹ್ಯಾಕರ್‌ 32’ ಹಾಗೂ ‘ಡೆಲ್ಟಾ ಹ್ಯಾಕರ್‌’ ಸೇರಿದಂತೆ 8ಕ್ಕೂ ಅಧಿಕ ಖಾತೆಗಳನ್ನು ತೆರೆದಿರೋದು ಕೂಡ ಬೆಳಕಿಗೆ ಬಂದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ನಾನು ಇಲ್ಲಿಗೆ ಬಂದು ದೊಡ್ಡ ತಪ್ಪು ಮಾಡಿದೆ’: ಮತಾಂತರಗೊಂಡು ಪಾಕ್​​​ ವ್ಯಕ್ತಿಯನ್ನು ಮದುವೆಯಾಗಿ ಕಣ್ಣೀರು ಹಾಕಿದ ಭಾರತದ ಮಹಿಳೆ – Kannada News | Pakistan Ordeal: Sarabjit Kaur Seeks India Return After Conversion & Harassment Claims

ಮಹಿಳೆಯೊಬ್ಬರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ನೋವು ಪಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.  ಕಳೆದ ವರ್ಷ ನವೆಂಬರ್‌ನಲ್ಲಿ ಸಿಖ್ ತೀರ್ಥಯಾತ್ರೆಗಾಗಿ ಪಾಕಿಸ್ತಾನಕ್ಕೆ ಹೋಗಿ ಇಸ್ಲಾಂಗೆ ಮತಾಂತರಗೊಂಡು ಪಾಕಿಸ್ತಾನಿ ಪುರುಷನನ್ನು ಮದುವೆಯಾದ ಭಾರತೀಯ ಮಹಿಳೆ ಸರಬ್ಜೀತ್ ಕೌರ್ (Sarabjit Kaur) ಇದೀಗ ಮತ್ತೆ ತನ್ನ ಧರ್ಮಕ್ಕ ಸೇರಬೇಕು. ಭಾರತಕ್ಕೆ ಮತ್ತೆ ಬರಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಕೌರ್ ಭಾರತದಲ್ಲಿರುವ ತನ್ನ ಮಾಜಿ ಪತಿಯೊಂದಿಗೆ ಮಾತನಾಡುತ್ತಾ, ನನಗೆ ಇಲ್ಲಿ ಕಿರುಕುಳ ನೀಡುತ್ತಿದ್ದಾರೆ, ನನ್ನನ್ನು ಹೇಗಾದರೂ ಮಾಡಿ ಪಾಕಿಸ್ತಾನದಿಂದ ಕರೆದುಕೊಂಡು ಹೋಗಿ ಎಂದು ಕಣ್ಣೀರು ಹಾಕಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ, ಸುಮಾರು 2,000 ಸಿಖ್ ಯಾತ್ರಿಕರೊಂದಿಗೆ, ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಅಮಾನಿಪುರ ಗ್ರಾಮದಲ್ಲಿ ವಾಸಿಸುವ ಸರಬ್ಜೀತ್ ಕೌರ್ ಭಾರತದಿಂದ ವಾಘಾ ಗಡಿಯ ಮೂಲಕ ಗುರುನಾನಕ್ ಅವರ ಜನ್ಮದಿನವನ್ನು ಆಚರಿಸಲು ಪಾಕಿಸ್ತಾನಕ್ಕೆ ಹೋಗಿದ್ದಾರೆ. ಸರಬ್ಜೀತ್ ಕೌರ್ ಜತೆಗೆ ಹೋಗಿದ್ದ ಇತರ ಯಾತ್ರಿಕರು ವಾಪಸ್​​​ ಭಾರತಕ್ಕೆ ಬಂದಿದ್ದಾರೆ. ಆದರೆ ಸರಬ್ಜೀತ್ ಕೌರ್ ನಾಪತ್ತೆಯಾಗಿದ್ದರು. ಕೌರ್ ನವೆಂಬರ್ 4 ರಂದು (ಕೌರ್ ಪಾಕಿಸ್ತಾನಕ್ಕೆ ಬಂದ ಮರುದಿನ) ಲಾಹೋರ್‌ನಿಂದ ಸರಿಸುಮಾರು 50 ಕಿ.ಮೀ ದೂರದಲ್ಲಿರುವ ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಅವರನ್ನು ವಿವಾಹವಾದರು ಎಂದು ಲಾಹೋರ್ ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: ಪ್ರತಿ ದಿನ 100 ಜೀವಂತ ಕೀಟಗಳನ್ನು ತಿನ್ನುವ ವ್ಯಕ್ತಿ, ಕಾರಣವೇನು ಗೊತ್ತೇ?

ಇಲ್ಲಿದೆ ನೋಡಿ ಎಕ್ಸ್​​ ಖಾತೆ ಪೋಸ್ಟ್​​:

ಆದರೆ ಸ್ವಲ್ಪ ದಿನದ ನಂತರ ಸರಬ್ಜೀತ್ ಕೌರ್ ತಾನು ಮದುವೆಯಾದ ವ್ಯಕ್ತಿ ಹಾಗೂ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದಾರೆ. ನನಗೆ ಇಲ್ಲಿ ಜೀವನ ನಡೆಸಲು ಆಗುತ್ತಿಲ್ಲ. ನಾನು ಮರಳಿ ಭಾರತಕ್ಕೆ ಬರಬೇಕು. ನಾನು ಮತ್ತೆ ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ದಯವಿಟ್ಟು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಲ್ಲ ಕಣ್ಮೀರು ಹಾಕಿದ್ದಾರೆ. “ನನಗೆ ನನ್ನ ಮಕ್ಕಳನ್ನು ಬಿಟ್ಟು ಬದುಕಲು ಆಗುತ್ತಿಲ್ಲ. ಇಲ್ಲಿಯವರೆಗೆ 10 ಲಕ್ಷದ ವರೆಗೆ ಹಣ ನೀಡಿದ್ದೇನೆ. ಆದರೆ ಮತ್ತೆ ಆ ಹಣ ಕೇಳಿದ್ರೆ ಹಿಂಸೆ ನೀಡುತ್ತಿದ್ದಾರೆ. ನಾನು ನನ್ನ ಮಕ್ಕಳ ಬಳಿ ಹೋಗಬೇಕು. ಇಲ್ಲಿ, ನಾನು ಪ್ರತಿ ಪೈಸೆಗೂ ಕಷ್ಟಪಡುತ್ತಿದ್ದೇನೆ” ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video:ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ – Kannada News | PM Modi Strikes Humble Note, Calls Himself Party Worker Under Nitin Nabin

ನವದೆಹಲಿ, ಜನವರಿ 20: ನಿತಿನ್ ನಬಿನ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ ಎಂದು ಹೇಳಿದ್ದಾರೆ. ಬಿಜೆಪಿ ಒಂದು ಸಂಸ್ಕೃತಿ. ಬಿಜೆಪಿ ಒಂದು ಕುಟುಂಬ. ಇಲ್ಲಿ, ನಮ್ಮ ಸಂಬಂಧಗಳು ಸದಸ್ಯತ್ವವನ್ನು ಮೀರಿವೆ. ನಮ್ಮ ಅಧ್ಯಕ್ಷರು ಬದಲಾಗುತ್ತಾರೆ, ಆದರೆ ನಮ್ಮ ಆದರ್ಶಗಳು ಬದಲಾಗುವುದಿಲ್ಲ.

ನಾಯಕತ್ವ ಬದಲಾಗುತ್ತದೆ, ಆದರೆ ನಿರ್ದೇಶನ ಒಂದೇ ಆಗಿರುತ್ತದೆ. ಇಂದು ದೇಶದ ಪ್ರತಿಯೊಂದು ಮೂಲೆಯ ಜನರು ಬಿಜೆಪಿಯೊಂದಿಗೆ ಇದ್ದಾರೆ, ಬಿಜೆಪಿಗೆ ಸೇರುತ್ತಿದ್ದಾರೆ. ನಿತಿನ್ ನಬಿನ್ ಅವರಿಗೆ ಯುವ ಶಕ್ತಿ ಮತ್ತು ಸಂಘಟನೆಯಲ್ಲಿ ಕೆಲಸ ಮಾಡುವ ದೀರ್ಘ ಅನುಭವವಿದೆ, ಇದು ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರಿಗೂ ಉಪಯುಕ್ತವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮುಂದಿನ 25 ವರ್ಷಗಳು ಬಹಳ ಮುಖ್ಯ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬೇಕಾದ ಅವಧಿ ಇದು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಜೆಟ್​ನಲ್ಲಿ ಫ್ಯಾಮಿಲಿ ಭಾಗ್ಯ; ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ತರಲು ಯೋಜನೆ; ಯಾರಿಗೆ ಲಾಭ? – Kannada News | Budget 2026 27 may bring more tax relief to married couples through joint taxation system

ನವದೆಹಲಿ, ಜನವರಿ 20: ಕಳೆದ ಬಜೆಟ್​ನಲ್ಲಿ (Union Budget) ಭರ್ಜರಿ ಟ್ಯಾಕ್ಸ್ ರಿಲೀಫ್ ಕೊಟ್ಟಿದ್ದ ಸರ್ಕಾರ ಈಗ ಮುಂಬರುವ ಬಜೆಟ್​ನಲ್ಲೂ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ವರದಿಗಳ ಪ್ರಕಾರ ಸರ್ಕಾರವು ಅಮೆರಿಕ, ಜರ್ಮನಿ ಮೊದಲಾದ ಕೆಲ ದೇಶಗಳಲ್ಲಿ ಇರುವ ರೀತಿಯಲ್ಲಿ ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ಅಥವಾ ಜಂಟಿ ತೆರಿಗೆ ವ್ಯವಸ್ಥೆ ತರುವ ಬಗ್ಗೆ ಯೋಜಿಸಿದೆ. ಇದೇನಾದರೂ ಜಾರಿಗೆ ಬಂದಲ್ಲಿ ಒಂದೇ ಆದಾಯಮೂಲ ಇರುವ ಕುಟುಂಬಗಳಿಗೆ ತೆರಿಗೆ ಉಳಿಸಲು ಅನುಕೂಲವಾಗುವ ನಾಧ್ಯತೆ ಇದೆ.

ಜಂಟಿ ಟ್ಯಾಕ್ಸೇಶನ್ ಸಿಸ್ಟಂ ಹೇಗಿರುತ್ತೆ?

ಗಂಡ ಮತ್ತು ಹೆಂಡತಿ ಇಬ್ಬರೂ ಪ್ರತ್ಯೇಕವಾಗಿ ಟ್ಯಾಕ್ಸ್ ಫೈಲ್ ಮಾಡುವ ಬದಲು ಜಂಟಿಯಾಗಿ ಐಟಿ ರಿಟರ್ನ್ಸ್ ಸಲ್ಲಿಸಲು ಅವಕಾಶ ಇರುತ್ತದೆ. ಜಂಟಿಯಾಗಿ ಸಲ್ಲಿಸಿದಾಗ ಹೆಚ್ಚಿನ ವಿನಾಯಿತಿಗಳು ಸಿಗುತ್ತವೆ. ಮೂಲ ಡಿಡಕ್ಷನ್ ಪ್ರಮಾಣ ಹೆಚ್ಚುತ್ತದೆ. ಸರ್ಚಾರ್ಜ್ ಮಿತಿ ಹೆಚ್ಚುತ್ತದೆ.

ಇದನ್ನೂ ಓದಿ: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…

ಸದ್ಯ ಇರುವ ಪ್ರಸ್ತಾಪದ ಪ್ರಕಾರ, ಜಂಟಿ ಟ್ಯಾಕ್ಸೇಶನ್​ನಲ್ಲಿ ಗಂಡ ಮತ್ತು ಹೆಂಡತಿ ಇಬ್ಬರ ಒಟ್ಟು ಆದಾಯದಲ್ಲಿ 8 ಲಕ್ಷ ರೂ ಟ್ಯಾಕ್ಸ್ ಎಕ್ಸೆಂಪ್ಷನ್ ಅಥವಾ ತೆರಿಗೆ ವಿನಾಯಿತಿ ಕೊಡಲಾಗುತ್ತದೆ. ಶೇ. 30 ತೆರಿಗೆ ಅನ್ವಯ ಆಗುವ ಆದಾಯ ಮಿತಿಯನ್ನು 48 ಲಕ್ಷ ರೂಗೆ ಏರಿಸಲಾಗಬಹುದು.

ಅಂದರೆ, ಕಳೆದ ವರ್ಷದ ಸ್ಲ್ಯಾಬ್ ದರದ ಪ್ರಕಾರ 24 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ಟ್ಯಾಕ್ಸ್ ಅನ್ವಯ ಆಗುತ್ತದೆ. ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಲ್ಲಿ 48 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ಟ್ಯಾಕ್ಸ್ ಅನ್ವಯ ಆಗಬಹುದು.

ಹಾಗೆಯೇ, ಈಗಿರುವ ವ್ಯವಸ್ಥೆಯಲ್ಲಿ 50 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಸರ್ಚಾರ್ಜ್ ಅನ್ವಯ ಆಗುತ್ತದೆ. ಶೇ. 10ರಿಂದ 25ರವರೆಗೂ ಸರ್ಚಾರ್ಜ್ ಇದೆ. ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಲ್ಲಿ ಸರ್ಚಾರ್ಜ್ 75 ಲಕ್ಷ ರೂ ಆದಾಯದಿಂದ ಶುರುವಾಗುತ್ತದೆ.

ಇದನ್ನೂ ಓದಿ: ಬಜೆಟ್​ಗೆ ಮುಂಚೆ ಆರ್ಥಿಕ ಸಮೀಕ್ಷೆ ವರದಿ; ಏನಿದರ ಮಹತ್ವ?

ಸಿಂಗಲ್ ಇನ್ಕಮ್ ಇರುವ ಕುಟುಂಬಗಳಿಗೆ ಅನುಕೂಲ

ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಿಂದ ಅನುಕೂಲಗಳು ಬಹಳಷ್ಟಾಗಬಹುದು. ಗಂಡ ಮತ್ತು ಹೆಂಡತಿ ಇಬ್ಬರಿದ್ದು ಗಂಡ ಮಾತ್ರವೇ ಕೆಲಸಕ್ಕೆ ಹೋಗುತ್ತಿದ್ದು, ಹೆಂಡತಿ ಗೃಹಿಣಿಯಾಗಿದ್ದರೆ, ಹಾಗೂ ಗಂಡನ ಆದಾಯ ಬಹಳ ಹೆಚ್ಚಿದ್ದರೆ ಆಗ ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ಅತಿಹೆಚ್ಚು ಅನುಕೂಲ ತರುತ್ತದೆ.

ಗಂಡ ಮತ್ತು ಹೆಂಡತಿ ಇಬ್ಬರೂ ದುಡಿಯುತ್ತಿದ್ದರೆ ಜಂಟಿಯಾಗಿಯೇ ಐಟಿಆರ್ ಸಲ್ಲಿಸಬೇಕೆಂದು ಕಡ್ಡಾಯ ಪಡಿಸಲಾಗುವುದಿಲ್ಲ. ಪ್ರತ್ಯೇಕವಾಗಿ ಸಲ್ಲಿಸಬಹುದು, ಅಥವಾ ಜಂಟಿಯಾಗಿಯೂ ಸಲ್ಲಿಸಬಹುದು. ಟ್ಯಾಕ್ಸ್ ಬಾಧ್ಯತೆ ಮತ್ತು ಅನುಕೂಲತೆಗಳನ್ನು ಎಣಿಸಿ ನಿರ್ಧಾರ ತೆಗೆದುಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಖಾಸಗಿ ಯಾಚ್​​​ನಲ್ಲಿ ನಯನತಾರಾ-ತ್ರಿಶಾ ಸುತ್ತಾಟ; ಮತ್ತಷ್ಟು ಗಟ್ಟಿಯಾದ ಬಂಧ

Source link

ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ! – Kannada News | Hidden Ancient Temple Discovered Inside House During Excavation in Lakkundi, Gadag

ಗದಗ, ಜನವರಿ 20: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಐದನೇ ದಿನವೂ ಮುಂದುವರಿದೆ. ಈ ಮಧ್ಯೆ, ಉತ್ಖನನದ ವೇಳೆ ಮನೆಯೊಂದರ ಆವರಣದೊಳಗೆ ಪುರಾತನ ದೇವಾಲಯ ಪತ್ತೆಯಾಗಿದೆ. ಈ ದೇವಾಲಯ ಕಲ್ಯಾಣ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದ್ದು ಇರಬಹುದು ಎಂದು ಇತಿಹಾಸ ತಜ್ಞರು ಅಂದಾಜಿಸಿದ್ದಾರೆ. ಈ ದೇಗುಲ ಹೊರಗಿನಿಂದ ಸಾಮಾನ್ಯ ಮನೆಯಂತೆ ಕಂಡರೂ, ಒಳಗೆ ವಿಶಿಷ್ಟ ಶಿಲ್ಪಕಲೆಗಳನ್ನು ಒಳಗೊಂಡಿದೆ. ದೇಗುಲದಲ್ಲಿ ಈಶ್ವರ ಮತ್ತು ಅರ್ಧನಾರೀಶ್ವರ ವಿಗ್ರಹಗಳಿವೆ. ಸುಮಾರು ನಾಲ್ಕು ತಲೆಮಾರುಗಳಿಂದ ಈ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬವು ಈ ದೇವಾಲಯಗಳನ್ನು ಪೂಜಿಸಿಕೊಂಡು ಬಂದಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತವು ಈ ಹುದುಗಿದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಯೋಜನೆ ರೂಪಿಸಿವೆ. ಸೂಕ್ತ ಪರಿಹಾರ ನೀಡಿದ್ದಲ್ಲಿ ದೇವಾಲಯಗಳನ್ನು ಸರ್ಕಾರದ ವಶಕ್ಕೆ ನೀಡಲು ಸಿದ್ಧರಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೂಡ್ಸ್​​ ವಾಹನದಲ್ಲಿ ಗಾಂಜಾ ಸಾಗಾಟ: ಫಿಲ್ಮಿ ಸ್ಟೈಲ್​​ನಲ್ಲಿ ಖಾಕಿ ರೇಡ್​ ; ಇಬ್ಬರು ಅರೆಸ್ಟ್​​ – Kannada News | Mangaluru Drug Bust: Film Style Operation Seizes 106 kg of Ganja; Two Peddlers Arrested

ಮಂಗಳೂರು, ಜನವರಿ 20: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಡ್ರಗ್ಸ್​​ ದಂಧೆಕೋರರ ಹುಟ್ಟಡಗಿಸುತ್ತಿದ್ದು, ಒಂದೊಂದೇ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಮಂಗಳೂರು ಸಿಸಿಬಿ, 4 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಸಮೇತ ಉಗಾಂಡ ಮೂಲದ ಮಹಿಳೆಯನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು. ಆ ಬೆನ್ನಲ್ಲೇ ಇದೀಗ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾವನ್ನು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ಸೀಜ್​​ ಮಾಡಿದೆ.

ಸುಮಾರು 106 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು ಇದರ ಮೌಲ್ಯ ಸುಮಾರು 53 ಲಕ್ಷ ರೂಪಾಯಿಗಳು ಎನ್ನಲಾಗಿದೆ. ಪ್ರಕರಣ ಸಂಬಂಧ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ನಿವಾಸಿಗಳಾದ ಅಬ್ದುಲ್ ಸಾದಿಕ್ (37) ಮತ್ತು ರಫೀಕ್ ಪಿ. (37) ಎಂಬವರನ್ನು ಬಂಧಿಸಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದೇಗುಲಕ್ಕೆಂದು ಹೋದ ಬಾಲಕ ಕೆರೆಯಲ್ಲಿ ಹೆಣವಾಗಿ ಪತ್ತೆ; ಪ್ರಾಣಿ ದಾಳಿಯೋ? ಕೊಲೆಯೋ?

ನಿನ್ನೆಯೂ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ವಿದ್ಯಾರ್ಥಿಗಳಿಗೆ ಡ್ರಗ್ಸ್​ ಮಾರುತ್ತಿದ್ದ ಕೇರಳ ಮೂಲದ ಯುವಕ ಜೂಡ್ ಮಾಥ್ಯೂ(20) ಎಂಬಾತನನ್ನು ಬಂಧಿಸಿದ್ದರು. ಕೇರಳದ ಎರ್ನಾಕುಲಂ ಮುತೊಲಪುರಂ ನಿವಾಸಿ ಜೂಡ್ ಮಾಥ್ಯೂ ಬೈಕ್​ನಲ್ಲಿ ಎಂಡಿಎಂಎ ಸಾಗಿಸುತ್ತಿದ್ದಾಗ ಪದವು ಗ್ರಾಮದ ಕೈಲಾಸ ಕಾಲೋನಿ ಬಳಿ ದಾಳಿ ಮಾಡಿದ್ದ ಕದ್ರಿ ಪೊಲೀಸರು ಬೈಕ್​​ ಮತ್ತು ಮಾದಕ ವಸ್ತುವನ್ನು ಜಪ್ತಿ ಮಾಡಿದ್ದರು. ಸೀಜ್​​ ಮಾಡಲಾದ ವಸ್ತುಗಳ ಮೌಲ್ಯ 70 ಸಾವಿರ ಎನ್ನಲಾಗಿದ್ದು, ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲೆಯ ಆರು​ ಪೆಡ್ಲರ್​ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಬಂಧಿಸಿದ್ದರು. ಜಿಗಣಿ ಬಳಿ ಉಗಾಂಡದ ಮಹಿಳೆ ಜಲಿಯಾ ಝಲ್ವಾಂಗೋ ಅರೆಸ್ಟ್​​ ಮಾಡಲಾಗಿದ್ದು, ಆಕೆ ಬಳಿ ಇದ್ದ 4 ಕೋಟಿ ರೂ. ಮೌಲ್ಯದ MDMAಯನ್ನು ಪೊಲೀಸರು ಜಪ್ತಿ ಮಾಡಿದ್ದರು. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ನಡೆದಿದ್ದ ಈ ಕಾರ್ಯಾಚರಣೆ ರಾಜ್ಯಾದ್ಯಂತ ಸುದ್ದಿಯಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link