Economic Survey: ಬಜೆಟ್ಗೆ ಮುಂಚೆ ಆರ್ಥಿಕ ಸಮೀಕ್ಷೆ ವರದಿ; ಏನಿದರ ಮಹತ್ವ? – Kannada News | Economic Survey 2026, know its significance for common people and government
ನವದೆಹಲಿ, ಜನವರಿ 18: ಪ್ರಸಕ್ತ ಹಣಕಾಸು ವರ್ಷದ (2025-26) ಆರ್ಥಿಕ ಸಮೀಕ್ಷೆ ವರದಿಯನ್ನು (Economic Survey) ಇದೇ ಜನವರಿ 29, ಗುರುವಾರದಂದು ಬಹಿರಂಗಗೊಳ್ಳಲಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಸಿದ್ಧಪಡಿಸಲಾದ ಈ ಸಮೀಕ್ಷಾ ದಾಖಲೆ ಪುಸ್ತಕವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ ಪ್ರಸ್ತುತಪಡಿಸಲಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದ ತಂಡವು ಈ ವರದಿಯನ್ನು ಸಿದ್ಧಪಡಿಸಿ ಹಣಕಾಸು ಸಚಿವಾಲಯಕ್ಕೆ ಕೊಡುತ್ತದೆ. ಈ ಬಾರಿಯ ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 28ರಂದು ಆರಂಭವಾಗಿ ಫೆಬ್ರುವರಿ…