Category Archives: Blog

Your blog category

Economic Survey: ಬಜೆಟ್​ಗೆ ಮುಂಚೆ ಆರ್ಥಿಕ ಸಮೀಕ್ಷೆ ವರದಿ; ಏನಿದರ ಮಹತ್ವ? – Kannada News | Economic Survey 2026, know its significance for common people and government

ನವದೆಹಲಿ, ಜನವರಿ 18: ಪ್ರಸಕ್ತ ಹಣಕಾಸು ವರ್ಷದ (2025-26) ಆರ್ಥಿಕ ಸಮೀಕ್ಷೆ ವರದಿಯನ್ನು (Economic Survey) ಇದೇ ಜನವರಿ 29, ಗುರುವಾರದಂದು ಬಹಿರಂಗಗೊಳ್ಳಲಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಸಿದ್ಧಪಡಿಸಲಾದ ಈ ಸಮೀಕ್ಷಾ ದಾಖಲೆ ಪುಸ್ತಕವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್​ನಲ್ಲಿ ಪ್ರಸ್ತುತಪಡಿಸಲಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದ ತಂಡವು ಈ ವರದಿಯನ್ನು ಸಿದ್ಧಪಡಿಸಿ ಹಣಕಾಸು ಸಚಿವಾಲಯಕ್ಕೆ ಕೊಡುತ್ತದೆ.

ಈ ಬಾರಿಯ ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 28ರಂದು ಆರಂಭವಾಗಿ ಫೆಬ್ರುವರಿ 13ರವರೆಗೂ ಇರುತ್ತದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಸಾಮಾನ್ಯವಾಗಿ ಬಜೆಟ್ ಮಂಡನೆಗೆ ಹಿಂದಿನ ದಿನ ಆರ್ಥಿಕ ಸಮೀಕ್ಷೆಯ ವರದಿ ಪ್ರಸ್ತುತಪಡಿಸಲಾಗುತ್ತದೆ. ಆದರೆ ಈ ಬಾರಿ ತುಸು ಬೇಗ ಪ್ರಸ್ತುತವಾಗುತ್ತಿದೆ.

ಇದನ್ನೂ ಓದಿ:

ಆರ್ಥಿಕ ಸಮೀಕ್ಷೆಯಲ್ಲಿ ಏನಿರುತ್ತೆ? ಏನದರ ಮಹತ್ವ?

ಮುಂದಿನ ಹಣಕಾಸು ವರ್ಷದ ಅಂದಾಜು ಆದಾಯ ಮತ್ತು ವ್ಯಯದ ಲೆಕ್ಕಪತ್ರವೇ ಬಜೆಟ್. ಸರ್ಕಾರದ ಬಳಿ ಎಷ್ಟು ಆದಾಯ ಇದೆ, ಎಷ್ಟು ಆದಾಯ ಬರುತ್ತದೆ, ಎಷ್ಟು ಸಾಲ ಮಾಡಲಾಗುತ್ತದೆ, ಯಾವ್ಯಾವ ಯೋಜನೆ, ಇಲಾಖೆಗಳಿಗೆ ಎಷ್ಟೆಷ್ಟು ಹಣ ಕೊಡಲಾಗುತ್ತದೆ ಎಂಬುದನ್ನು ಪೂರ್ವದಲ್ಲೇ ನಿರ್ಧರಿಸಿ, ಅಥವಾ ಅಂದಾಜಿಸಿ ಬಜೆಟ್ ಸಿದ್ಧಪಡಿಸಲಾಗುತ್ತದೆ.

ಆದರೆ, ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಪರಿಸ್ಥಿತಿಯನ್ನು ಅವಲೋಕಿಸುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಒಟ್ಟಾರೆ ಆರ್ಥಿಕ ಸಾಧನೆ ಹೇಗಿತ್ತು ಎಂದು ವಿಶ್ಲೇಷಿಸುತ್ತದೆ. ಕೃಷಿ, ಉದ್ಯಮ ಸೇರಿದಂತೆ ವಿವಿಧ ಸೆಕ್ಟರ್​ಗಳ ಸಾಧನೆಯನ್ನೂ ಪರಾಮರ್ಶಿಸಲಾಗುತ್ತದೆ.

ಇದನ್ನೂ ಓದಿ:

ಜಿಡಿಪಿ ಬೆಳವಣಿಗೆ, ಹಣದುಬ್ಬರ, ವಿತ್ತೀಯ ಕೊರತೆ ಇತ್ಯಾದಿ ಆರ್ಥಿಕ ಮಾನದಂಡಗಳಿಗೆ ಸಂಬಂಧಿಸಿದ ಅಂಕಿ ಅಂಶಗಳ ಅಗರವೇ ಈ ಸಮೀಕ್ಷೆಯಲ್ಲಿ ಇರುತ್ತದೆ. ಹಾಗೆಯೇ, ಸರ್ಕಾರದ ಮುಂದಿನ ಆರ್ಥಿಕ ಮತ್ತು ಹಣಕಾಸು ನೀತಿ ಹೇಗಿರಬೇಕು ಎಂದು ಈ ವರದಿಯಲ್ಲಿ ಸಲಹೆಗಳನ್ನು ನೀಡಲಾಗುತ್ತದೆ. ಈ ಆರ್ಥಿಕ ಸಮೀಕ್ಷಾ ವರದಿಯಿಂದ ಸರ್ಕಾರಕ್ಕೆ ದೇಶದ ಸ್ಥೂಲ ಆರ್ಥಿಕತೆ ವಾಸ್ತವಿಕ ಪರಿಸ್ಥಿತಿಯ ದರ್ಶನವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

10 ಸಾವಿರಕ್ಕೆ ಅಬ್ಬಾ ಎಂದಿದ್ದ ಗಿಲ್ಲಿ ಈಗ 50 ಲಕ್ಷ ಗೆಲ್ಲುವ ಹೊಸ್ತಿಲಲ್ಲಿ – Kannada News | Once 10 thousand was a big amount for Gilli Nata now he is winning 50 lakh rs

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ಇಂದು (ಜನವರಿ 18) ನಡೆಯಲಿದೆ. ಗಿಲ್ಲಿ ನಟ ಬಿಗ್​​ಬಾಸ್​ ಫಿನಾಲೆಯ ವಿನ್ನರ್ ಆಗಲಿದ್ದಾರೆ ಎಂದು ಅವರು ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ಪ್ರಾರಂಭ ಮಾಡಿದ್ದಾರೆ. ಗಿಲ್ಲಿಗೆ ರಾಜ್ಯದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಗಿಲ್ಲಿಯ ಫೋಟೊವನ್ನು ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಒಂದು ಸಣ್ಣ ಹಳ್ಳಿಯ, ತೀರಾ ಸಾಮಾನ್ಯ ಕುಟುಂಬದಿಂದ ಬಂದ ಗಿಲ್ಲಿ, ಬಿಗ್​​ಬಾಸ್ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಇದೀಗ ಬಿಗ್​​ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅಂದಹಾಗೆ ಗಿಲ್ಲಿ, ಜೀವನದ ಒಂದು ಹಂತದಲ್ಲಿ ಕೇವಲ 10 ಸಾವಿರ ರೂಪಾಯಿ ಸಂಭಾವನೆ ಸಿಕ್ಕಿದ್ದಕ್ಕೆ ಅಬ್ಬಾ, ಎಷ್ಟು ದೊಡ್ಡ ಮೊತ್ತ ಎಂದುಕೊಂಡಿದ್ದರು, ಈಗ 50 ಲಕ್ಷ ಗೆಲ್ಲುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ನಿರೂಪಕಿ ಅನುಶ್ರೀ ಅವರ ಪಾಡ್​​ಕಾಸ್ಟ್​​ನಲ್ಲಿ ಗಿಲ್ಲಿ ನಟ ಭಾಗವಹಿಸಿದ್ದರು. ಪಾಡ್​​ಕಾಸ್ಟ್​​ನಲ್ಲಿ ವಿಷಯವೊಂದನ್ನು ಗಿಲ್ಲಿ ನಟ ಹಂಚಿಕೊಂಡಿದ್ದರು. ಯೂಟ್ಯೂಬ್ ವಿಡಿಯೋಗಳ ಬಳಿಕ ರಿಯಾಲಿಟಿ ಶೋಗಳಿಗೆ ಬಂದಿದ್ದ ಗಿಲ್ಲಿ ನಟ ತಕ್ಕಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದ್ದರು. ಆಗೆಲ್ಲ ತಬಲ ನಾಣಿ ಇನ್ನೂ ಕೆಲವು ಕಲಾವಿದರು ಫೋನ್ ಮಾಡಿ ಗಿಲ್ಲಿಯನ್ನು ಇವೆಂಟ್​​ಗಳಿಗೆ ಕರೆಯುತ್ತಿದ್ದರಂತೆ. ಆದರೆ ಗಿಲ್ಲಿಗೆ, ಆ ಇವೆಂಟ್​​ಗಳಿಗೆ ಹಣ ಕೊಡುತ್ತಾರೆ ಎಂಬುದು ಸಹ ಅವರಿಗೆ ಗೊತ್ತಿರಲಿಲ್ಲವಂತೆ.

ಈ ಬಗ್ಗೆ ಹೇಳಿರುವ ಗಿಲ್ಲಿ ನಟ, ಅವರು ಫೋನ್ ಮಾಡಿ ಕರೆಯುತ್ತಿದ್ದರು, ಪೆಟ್ರೋಲ್ ಹಾಕಿಕೊಂಡು ನಾನೇ ಹೋಗಬೇಕಲ್ಲ ಎಂದುಕೊಂಡು ನಾನು ಹೋಗುತ್ತಲೇ ಇರಲಿಲ್ಲ. ಹೀಗೆ ಸುಮಾರು ಎಂಟೊಂಬತ್ತು ಶೋಗಳು ಕೈಬಿಟ್ಟು ಹೋದವು. ಆದರೆ ಒಮ್ಮೆ ಮಿಮಿಕ್ರಿ ಮಾಡುವ ನನ್ನ ಗೆಳೆಯ ಕರೆ ಮಾಡಿ, ಹೀಗೊಂದು ಕಾರ್ಯಕ್ರಮ ಇದೆ ಒಂದು ಗಂಟೆ ಕಾರ್ಯಕ್ರಮ, ಹತ್ತು ಸಾವಿರ ಕೊಡುತ್ತಾರೆ ಎಂದರಂತೆ. ಆಗ ಗಿಲ್ಲಿಗೆ ‘ಅಬ್ಬಾ ಒಂದು ಗಂಟೆ ಶೋ ಮಾಡಿದರೆ ಹತ್ತು ಸಾವಿರ ಕೊಡುತ್ತಾರಾ’ ಎಂದು ಆಶ್ಚರ್ಯ ಆಯ್ತಂತೆ. ಬರೀ ಒಂದು ಗಂಟೆಗೆ ಹತ್ತು ಸಾವಿರ ರೂಪಾಯಿ ಯಾರಪ್ಪ ಕೊಡ್ತಾರೆ ಎಂದುಕೊಂಡೆ, ಆ ಮೇಲೆ ಯಾವ ಶೋ ಅನ್ನೂ ಮಿಸ್ ಮಾಡಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಕೇವಲ ಹತ್ತು ಸಾವಿರ ರೂಪಾಯಿ ಗಿಲ್ಲಿಗೆ ಒಂದು ಸಮಯದಲ್ಲಿ ಬಹಳ ದೊಡ್ಡ ಮೊತ್ತ ಆಗಿತ್ತು. ಹತ್ತು ಸಾವಿರ ರೂಪಾಯಿ ಗಳಿಸಲು ಎಲ್ಲಿಂದ ಎಲ್ಲಿಗೋ ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಗಿಲ್ಲಿ, ಬಿಗ್​​ಬಾಸ್ ಸೀಸನ್ 12ರ ವಿನ್ನರ್ ಆಗುವ ಹೊಸ್ತಿಲಲ್ಲಿ ಇದ್ದಾರೆ. ಇದೀಗ ಗಿಲ್ಲಿಯ ಹಳೆಯ ದಿನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ‘ಬಡವರ ಮಕ್ಳು ಬೆಳೀಬೇಕು’ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಗಿಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೆಡ್ಡಿ, ಡಿಕೆಶಿ​ ಮಧ್ಯೆ ಕಾಳಗವಾಗಿ ಬದಲಾಯ್ತಾ ಬ್ಯಾನರ್ ಗಲಾಟೆ? ಭದ್ರತೆ ವಿಚಾರವಾಗಿ ಡಿಸಿಎಂ ವಿರುದ್ಧ ಟೀಕೆ – Kannada News | Ballari Banner Riots: Janardhana Reddy Dig at DK Shivakumar Sparks Congress Rage

ಶಾಸಕ ಜನಾರ್ದನ ರೆಡ್ಡಿ, ಡಿಕೆ ಶಿವಕುಮಾರ್​

ಬೆಂಗಳೂರು, ಜನವರಿ 18: ‘ನೀನು ಏನು ಕಿಸಿಯೋದಕ್ಕೆ ಇವತ್ತು ರಾಜ್ಯದ ಉಪಮುಖ್ಯಮಂತ್ರಿಯಾಗಿ ಇಲ್ಲಿದ್ದೀಯಾ? ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಶನಿವಾರ ಪ್ರತಿಭಟನಾ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಾಗ್ದಾಳಿ ಮಾಡಿದ್ದರು. ಇದೇ ವಾಗ್ದಾಳಿ ಈಗ ಕಾಂಗ್ರೆಸ್ ನಾಯಕರನ್ನ ಕೆರಳಿಸಿದೆ. ರೆಡ್ಡಿ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ ಕಾರ್ಯಕರ್ತರು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಬ್ಯಾನರ್ ಗಲಾಟೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಳ್ಳಾರಿ ಗಲಾಟೆ ವಿಚಾರಾಗಿಯೇ ಡಿಕೆ ಶಿವಕುಮಾರ್​​ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರ್​ಸ್ವಾಮಿ​ ಮಧ್ಯೆ ವಾಗ್ಯುದ್ಧ ನಡೆದಿತ್ತು. ಇದೀಗ ಇದೇ ಮಾತಿನ ಯುದ್ಧ ಡಿಕೆ ಶಿವಕುಮಾರ್​ ವರ್ಸಸ್ ಜನಾರ್ದನ ರೆಡ್ಡಿ ಕಡೆಗೆ ತಿರುಗಿದೆ.

ಇದನ್ನೂ ಓದಿ: ಡಿಕೆಶಿಗೆ ನಿಂದನೆ ಆರೋಪ: ‘ಕೈ’ ಕಾರ್ಯಕರ್ತರಿಂದ ಜನಾರ್ದನ ರೆಡ್ಡಿ ಮನೆಗೆ ಮುತ್ತಿಗೆ ಯತ್ನ

ಜನವರಿ 17ರಂದು ಬಳ್ಳಾರಿಯಲ್ಲಿ ಕೇಸರಿ ಪಡೆ ನಾಯಕರು ಗರ್ಜಿಸಿದ್ದರು. ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರವಾಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಸಮಾವೇಶದಲ್ಲಿ ಮಾತನಾಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಗುಡುಗಿದ್ದರು. ರೆಡ್ಡಿಗೆ ಭದ್ರತೆ ನೀಡೋ ವಿಚಾರವಾಗಿ ಮಾತನಾಡಿದ್ದ ಡಿಕೆ ಶಿವಕುಮಾರ್​​ ಅಮೆರಿಕದಿಂದ ಬೇಕಾದ್ರೂ ಭದ್ರತೆ ತೆಗೆದುಕೊಳ್ಳಲಿ ಎಂದಿದ್ದರು. ಇದಕ್ಕೆ ನಿನ್ನೆ ತಿರುಗೇಟು ಕೊಟ್ಟಿದ್ದ ಜನಾರ್ದನ ರೆಡ್ಡಿ, ನೀನು ಏನ್ ಕಿಸಿಯೋಕೆ ಇದ್ಯಾ ಅಂತಾ ಪ್ರಶ್ನಿಸಿದ್ದಾರೆ.

ಸದ್ಯ ಶಾಸಕ ಜನಾರ್ದನ ರೆಡ್ಡಿ ಆಡಿದ ಮಾತು ಕಾಂಗ್ರೆಸ್ ಕಾರ್ಯಕರ್ತರನ್ನ ಕೆರಳಿಸಿದೆ. ಬೆಂಗಳೂರಿನಲ್ಲಿರುವ ರೆಡ್ಡಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದು. ದೊಡ್ಡ ಹಂಗಾಮವೇ ನಡೆದಿದೆ. ಇನ್ನೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ ಮನೋಹರ್ ರೆಡ್ಡಿ ನನ್ನ ಮುಂದೆ ಬರಲಿ ಅಂತಾ ಸವಾಲ್ ಹಾಕಿದ್ದಾರೆ.

ರೆಡ್ಡಿ ವರ್ಸಸ್ ಸಿಎಂ ಮಧ್ಯೆ ‘ರಿಪಬ್ಲಿಕ್ ಆಫ್ ಬಳ್ಳಾರಿ’ ವಾರ್! 

ರಿಪಬ್ಲಿಕ್ ಆಫ್ ಬಳ್ಳಾರಿ ಅಂತಾ ವಾಗ್ದಾಳಿ ನಡೆಸುತ್ತಿದ್ದ ಕೈ ನಾಯಕರಿಗೆ ತಿರುಗೇಟು ಕೊಟ್ಟಿರುವ ಜನಾರ್ದನ ರೆಡ್ಡಿ, ಇಡೀ ಕರ್ನಾಟಕವನ್ನೇ ಕಾಂಗ್ರೆಸ್ ರಿಪಬ್ಲಿಕ್ ಮಾಡಿದೆ ಅಂತಾ ಗುಡುಗಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಸಿಎಂ ಸಿದ್ದರಾಮಯ್ಯ, ಲೋಕಾಯುಕ್ತರೇ ರಿಪಬ್ಲಿಕ್ ಆಫ್ ಬಳ್ಳಾರಿ ಅಂತಾ ಬರೆದಿದ್ದಾರೆ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ: ಸರ್ಕಾರದ ವಿರುದ್ಧ ಗುಡುಗಿದ ಕೇಸರಿ ಪಡೆ

ಬ್ಯಾನರ್ ಗಲಾಟೆ ವಿಚಾರವಾಗಿ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿದ್ದರೆ, ಮತ್ತೊಂದ್ಕಡೆ ಮೂವರು ಗನ್‌ಮ್ಯಾನ್‌ಗಳನ್ನ ಬಂಧಿಸಿರುವ ಸಿಐಡಿ, ತನಿಖೆ ಚುರುಕುಗೊಳಿಸಿದೆ. ರಾಜಶೇಖರ್ ಗುರಿಯಾಗಿಸಿ ಫೈರಿಂಗ್ ಮಾಡಿಲ್ಲವೆಂದು ಬಂಧಿತರ ಹೇಳಿಕೆ ನೀಡಿದ್ದಾರೆ.

ವರದಿ: ಬ್ಯುರೋ ರಿಪೋರ್ಟ್ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ – Kannada News | Win Is not My cup of Tea Says Gilli Nata Ahead of Bigg Boss Kannada Season 12 Finale

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಯಾರು ಮೊದಲು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಹೀಗಿರುವಾಗಲೇ ಮೊದಲ ಎಲಿಮಿನೇಷನ್ ನಡೆದಿದೆ. ಅತಿ ಕಡಿಮೆ ವೋಟ್ ಪಡೆದು ಒಬ್ಬರು ಹೊರ ಬಂದಿದ್ದಾರೆ. ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎನಿಸುತ್ತದೆ ಎಂದು ಗಿಲ್ಲಿ ಹೇಳಿದ್ದಾರೆ. ಅವರು ಹೀಗೇಕೆ ಹೇಳಿದರು ಎಂಬುದಕ್ಕೆ ಉತ್ತರ ಶೋನಲ್ಲಿ ಸಿಗಲಿದೆ. ಮೊದಲ ಎಲಿಮಿನೇಷನ್​​ನಲ್ಲಿ ಧನುಶ್ ಹೊರ ಹೋಗಿದ್ದಾರೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

NABARD Recruitment 2026: ಬ್ಯಾಂಕಿಂಗ್ ವಲಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣವಕಾಶ – Kannada News | NABARD Development Assistant Recruitment 2026: 162 Posts – Apply Online Now!

ಬ್ಯಾಂಕಿಂಗ್ ವಲಯದಲ್ಲಿ ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಯುವಜನರಿಗೆ, ನಬಾರ್ಡ್ ಗುಡ್​ ನ್ಯೂಸ್​ ಪ್ರಕಟಿಸಿದೆ. ಹೌದು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಅಭಿವೃದ್ಧಿ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ಒಟ್ಟು 162 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಆಸಕ್ತ ಅಭ್ಯರ್ಥಿಗಳು ನಬಾರ್ಡ್‌ನ ಅಧಿಕೃತ ವೆಬ್‌ಸೈಟ್ nabard.org ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಅಧಿಕೃತ ಅಧಿಸೂಚನೆಯಲ್ಲಿ ಈ ನೇಮಕಾತಿಯನ್ನು ಗ್ರೂಪ್ ಬಿ ಕೇಡರ್ ಅಡಿಯಲ್ಲಿ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ನೇಮಕಾತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುವುದು ಮತ್ತು ಆಯ್ಕೆಯಾದ ಅಭ್ಯರ್ಥಿಗಳನ್ನು ವಿವಿಧ ನಬಾರ್ಡ್ ಕಚೇರಿಗಳಿಗೆ ನೇಮಿಸಲಾಗುವುದು. ಸಂಕ್ಷಿಪ್ತ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ವಿವರವಾದ ಜಾಹೀರಾತು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ:

ಅಭಿವೃದ್ಧಿ ಸಹಾಯಕ ಹುದ್ದೆಗೆ ಅಭ್ಯರ್ಥಿಗಳು ಬಿ.ಎ. ಅಥವಾ ಬಿ.ಕಾಂ. ಪದವಿ ಪಡೆದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು, ಆದರೆ ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಮತ್ತು ಮಾಜಿ ಸೈನಿಕರ ಅಭ್ಯರ್ಥಿಗಳು ಕೇವಲ ಪದವಿ ಪಡೆದಿದ್ದರೆ ಸಾಕು. ಅಭಿವೃದ್ಧಿ ಸಹಾಯಕ (ಹಿಂದಿ) ಹುದ್ದೆಗೆ ಹಿಂದಿ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಪದವಿ ಪಡೆದಿರಬೇಕು. ಅಭ್ಯರ್ಥಿಗಳು ಹಿಂದಿಯಿಂದ ಇಂಗ್ಲಿಷ್‌ಗೆ ಮತ್ತು ಹಿಂದಿಗೆ ಭಾಷಾಂತರಿಸುವ ಉತ್ತಮ ಸಾಮರ್ಥ್ಯವನ್ನು ಹೊಂದಿರಬೇಕು.

ಅಭ್ಯರ್ಥಿಗಳು 21 ರಿಂದ 35 ವರ್ಷ ವಯಸ್ಸಿನವರಾಗಿರಬೇಕು. ಸರ್ಕಾರಿ ನಿಯಮಗಳ ಪ್ರಕಾರ ಮೀಸಲು ವರ್ಗಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು. ಈ ಅರ್ಹತೆ ಮತ್ತು ವಯಸ್ಸಿನ ಅವಶ್ಯಕತೆಗಳು ಹಿಂದಿನ ನೇಮಕಾತಿಯನ್ನು ಆಧರಿಸಿವೆ ಮತ್ತು ಹೊಸ ವಿವರವಾದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ನಬಾರ್ಡ್ ಅಭಿವೃದ್ಧಿ ಸಹಾಯಕ ನೇಮಕಾತಿ ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಭಾಷಾ ಪ್ರಾವೀಣ್ಯತೆಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಹಿಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಅಂತಿಮ ಆಯ್ಕೆಯು ಎಲ್ಲಾ ಹಂತಗಳಲ್ಲಿನ ಕಾರ್ಯಕ್ಷಮತೆ ಮತ್ತು ದಾಖಲೆ ಪರಿಶೀಲನೆಯನ್ನು ಆಧರಿಸಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ನಬಾರ್ಡ್ ವೆಬ್‌ಸೈಟ್‌ಗೆ ಭೇಟಿ ನೀಡಿ ವೃತ್ತಿ ಸೂಚನೆಗಳ ವಿಭಾಗದಲ್ಲಿ ಲಭ್ಯವಿರುವ ನೇಮಕಾತಿ ಲಿಂಕ್ ಅನ್ನು ಕ್ಲಿಕ್ ಮಾಡಬಹುದು. ಹೊಸ ಅಭ್ಯರ್ಥಿಗಳು ಮೊದಲು ನೋಂದಾಯಿಸಿಕೊಳ್ಳಬೇಕು, ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು ಮತ್ತು ಅರ್ಜಿ ಶುಲ್ಕವನ್ನು ಪಾವತಿಸಬೇಕು. ಬಹು ಮುಖ್ಯವಾಗಿ ಅಭ್ಯರ್ಥಿಗಳು ಅರ್ಜಿ ನಮೂನೆಯ ಪ್ರತಿಯನ್ನು ಇಟ್ಟುಕೊಳ್ಳುವುದು ಅಗತ್ಯ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಟೋಲ್​ನಲ್ಲಿ ಕಾರುಗಳಿಗೆ ಡಿಕ್ಕಿ ಹೊಡೆದು, ಸಿಬ್ಬಂದಿಯನ್ನು 50 ಮೀಟರ್ ಎಳೆದೊಯ್ದ ಟ್ರಕ್

ಝಾನ್ಸಿ, ಜನವರಿ 18: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಟೋಲ್ ಪ್ಲಾಜಾದಲ್ಲಿ ಕಾಯುತ್ತಿದ್ದ ಎರಡು ಕಾರುಗಳಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಟೋಲ್ ಸಿಬ್ಬಂದಿ ಮತ್ತು ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾತ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ಪುರ ಹೆದ್ದಾರಿಯಲ್ಲಿರುವ ಸೆಮ್ರಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಪ್ಲಾಜಾದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಫಾಸ್ಟ್​ ಟ್ಯಾಗ್ ವರ್ಕ್​ ಆಗಲಿಲ್ಲ ಎಂದು ಎರಡು ಕಾರುಗಳು ಟೋಲ್​ನಲ್ಲೇ ನಿಂತಿದ್ದವು, ಟೋಲ್ ಸಿಬ್ಬಂದಿ ಟ್ಯಾಗ್​ ಸ್ಕ್ಯಾನ್ ಮಾಡುತ್ತಿದ್ದಾಗ ಹಿಂದಿನಿಂದ ಅತಿ ವೇಗದಲ್ಲಿ ಬಂದ ಟ್ರಕ್ ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಿಲ್ಲಿ ನಟ ಕೇಳಿದ್ದಕ್ಕಿಂತ ಡಬಲ್ ಪ್ರೀತಿ ನೀಡಿದ ಫ್ಯಾನ್ಸ್: 2 ಮಿಲಿಯನ್ ಗ್ಯಾರಂಟಿ – Kannada News | Bigg Boss Kannada Season 12 Gilli Nata Instagram followers count reached 16 Million

ಕಾಮಿಡಿ ಕಲಾವಿದ ಗಿಲ್ಲಿ ನಟ (Gilli Nata) ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಅವರ ಬಗ್ಗೆಯೇ ಮಾತುಕತೆ ನಡೆಯುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋಗೆ ಬರುವುದಕ್ಕೂ ಮುನ್ನ ಗಿಲ್ಲಿ ಅವರಿಗೆ ತಕ್ಕಮಟ್ಟಿಗಿನ ಜನಪ್ರಿಯತೆ ಇತ್ತು. ಆದರೆ ಬಿಗ್ ಬಾಸ್ ಶೋನಿಂದಾಗಿ ಅವರು ಸೂಪರ್ ಸ್ಟಾರ್ ಆಗಿದ್ದಾರೆ. ಗಿಲ್ಲಿಯನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಗಿಲ್ಲಿ ನಟ ಅವರ ಇನ್​ಸ್ಟಾಗ್ರಾಮ್ ಫಾಲೋವರ್ಸ್ (Gilli Nata Instagram Followers) ಸಂಖ್ಯೆ ಅಚ್ಚರಿಯ ರೀತಿಯಲ್ಲಿ ಏರಿಕೆ ಆಗಿದೆ. ಇದನ್ನು ನೋಡಿದರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಗಿಲ್ಲಿ ನಟ ಅವರಿಗೆ ಅಚ್ಚರಿ ಆಗುವುದು ಗ್ಯಾರಂಟಿ.

ಬಿಗ್ ಬಾಸ್ ಶೋಗೆ ಹೋಗುವಾಗ ಗಿಲ್ಲಿ ನಟ ಅವರಿಗೆ 1 ಲಕ್ಷದ 6 ಸಾವಿರ ಜನರು ಫಾಲೋವರ್ಸ್ ಇದ್ದರು. ತಮಗೆ ಒಂದು ಮಿಲಿಯನ್, ಅಂದರೆ 10 ಲಕ್ಷ ಫಾಲೋವರ್ಸ್ ಆಗಬೇಕು ಎಂದು ಗಿಲ್ಲಿ ನಟ ಬಯಸಿದ್ದರು. ಅಭಿಮಾನಿಗಳು ಆ ಬಯಕೆಯನ್ನು ಕೆಲವೇ ದಿನಗಳ ಹಿಂದೆ ಈಡೇರಿಸಿದರು. ನೋಡನೋಡುತ್ತಿದ್ದಂತೆಯೇ ಗಿಲ್ಲಿ ನಟ ಅವರ ಇನ್​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಏರಿಕೆ ಕಂಡಿದೆ.

ಇತ್ತೀಚೆಗೆ ಗಿಲ್ಲಿ ನಟ ಅವರ ಇನ್​ಸ್ಟಾಗ್ರಾಮ್ ಖಾತೆಗೆ 10 ಲಕ್ಷ (1 ಮಿಲಿಯನ್) ಫಾಲೋವರ್ಸ್ ಆಗಿದ್ದರು. ಫಿನಾಲೆ ಹತ್ತಿರ ಆದಂತೆಲ್ಲ ಗಿಲ್ಲಿ ನಟ ಅವರ ಕ್ರೇಜ್ ಜಾಸ್ತಿ ಆಗುತ್ತಲೇ ಹೋಯಿತು. ಚಿಕ್ಕ ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಗಿಲ್ಲಿ ನಟ ನೆಚ್ಚಿನ ಸ್ಪರ್ಧಿ ಆದರು. ಅವರ ಕಾಮಿಡಿಗೆ ಜನರು ಮನಸೋತರು. ಅದರ ಪರಿಣಾಮವಾಗಿ ಫಿನಾಲೆಯ ದಿನ (ಜನವರಿ 18) ಗಿಲ್ಲಿ ನಟ ಅವರನ್ನು ಬರೋಬ್ಬರಿ 16 ಲಕ್ಷ (1.6 ಮಿಲಿಯನ್) ಜನರು ಫಾಲೋ ಮಾಡುತ್ತಿದ್ದಾರೆ.

ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಗಂಟೆ ಗಂಟೆಗೂ ಗಿಲ್ಲಿ ನಟ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಫಿನಾಲೆ ಮುಗಿಯುವುದರೊಳಗೆ ಮತ್ತೊಂದು ಲಕ್ಷ ಫಾಲೋವರ್ಸ್ ಹೊಸದಾಗಿ ಸೇರ್ಪಡೆ ಆದರೂ ಅಚ್ಚರಿ ಏನಿಲ್ಲ. ಅಷ್ಟೇ ಅಲ್ಲದೇ, ಇನ್ನು ಕೆಲವೇ ದಿನಗಳಲ್ಲಿ ಅವರಿಗೆ ಬರೋಬ್ಬರಿ 2 ಮಿಲಿಯನ್ (20 ಲಕ್ಷ) ಫಾಲೋವರ್ಸ್ ಆಗುವುದು ಖಚಿತ.

ಇದನ್ನೂ ಓದಿ: Bigg Boss Kannada Winner: ಗಿಲ್ಲಿ ನಟ ಗೆದ್ದಾಯಿತು; ತೀರ್ಪು ನೀಡಿದ ‘ಬಿಗ್ ಬಾಸ್ ಕನ್ನಡ 12’ ವೀಕ್ಷಕರು

ಯೂಟ್ಯೂಬ್ ವಿಡಿಯೋಗಳ ಮೂಲಕ ಗಿಲ್ಲಿ ನಟ ಅವರು ಫೇಮಸ್ ಆಗಿದ್ದರು. ಬಳಿಕ ಅವರಿಗೆ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ನಂತರ ಬಿಗ್ ಬಾಸ್ ಮೂಲಕ ಅದೃಷ್ಟದ ಬಾಗಿಲು ತೆರೆಯಿತು. ಇನ್ಮೇಲೆ ಅವರಿಗೆ ಸಿನಿಮಾ ಅವಕಾಶಗಳು ಹೇರಳವಾಗಿ ಸಿಗಲಿವೆ. ಬಡ ಕುಟುಂಬದಿಂದ ಬಂದ ಅವರು ಈ ಮೂಲಕ ಯಶಸ್ಸು ಗಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಗೆದ್ದರೆ ಬಹಳ ಖುಷಿ; ಕಾರಣ ತಿಳಿಸಿದ ನಟ ಮಿತ್ರ – Kannada News | Bigg Boss Kannada Season 12 Finale Actor Mithra wants Rakshita Shetty to win

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ (Bigg Boss Kannada 12 Finale) ತಲುಪಿರುವ 6 ಸ್ಪರ್ಧಿಗಳು ವಿಶೇಷ ವ್ಯಕ್ತಿತ್ವದ ಕಾರಣಕ್ಕೆ ಗಮನ ಸೆಳೆದಿದ್ದಾರೆ. ಗಿಲ್ಲಿ ನಟ ಅವರು ಕಾಮಿಡಿ ಮೂಲಕ ಮನರಂಜನೆ ನೀಡಿದ್ದಾರೆ. ರಕ್ಷಿತಾ ಶೆಟ್ಟಿ (Rakshita Shetty) ಅವರು ತುಳುನಾಡಿನ ವೀಕ್ಷಕರ ಬೆಂಬಲ ಪಡೆದಿದ್ದಾರೆ. ನಟ ಮಿತ್ರ ಕೂಡ ರಕ್ಷಿತಾ ಶೆಟ್ಟಿಯ ಗೆಲುವನ್ನು ನಿರೀಕ್ಷಿಸಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ‘ಈ ಮೊದಲು ಯಾವುದೇ ಮನರಂಜನಾ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದ ರಕ್ಷಿತಾ ಶೆಟ್ಟಿ ಅವರಿಗೆ ಈಗ ಹೆಚ್ಚು ಬೆಂಬಲ ಸಿಗುತ್ತಿದೆ. ಆಕೆಗೆ ಸಾಮಾಜಿಕ ಕಳಕಳಿ ಇದೆ. ಹುಲಿಕುಣಿತದ ಬಗ್ಗೆ ಅವರು ಮಾತನಾಡಿದ್ದು ಇಷ್ಟ ಆಯಿತು. ಚಿಕ್ಕ ವಯಸ್ಸಿನಲ್ಲಿ ಆಕೆಗೆ ಅಷ್ಟು ಪ್ರಬುದ್ಧತೆ ಇದೆ. ಬಿಗ್ ಬಾಸ್​ನಲ್ಲಿ ಗಿಲ್ಲಿ (Gilli Nata) ಒಂದು ತೂಕ ಆದರೆ ರಕ್ಷಿತಾ ಇನ್ನೊಂದು ತೂಕ. ನಮ್ಮ ಮನೆಯಲ್ಲಿ ನಾವು ಆಕೆಗೆ ಸಪೋರ್ಟ್ ಮಾಡುತ್ತೇವೆ’ ಎಂದು ಮಿತ್ರ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಓವರ್ ಟೇಕ್ ಮಾಡೋಕೆ ಹೋಗಿ ಆಗಿದ್ದೇನು ನೋಡಿ; ಭೀಕರ ಅಪಘಾತದ ಸಿಸಿಟಿವಿ ದೃಶ್ಯ – Kannada News | Viral Ernakulam Bike Accident: Overtaking Error Caught on CCTV

ಕೇರಳದ ಎರ್ನಾಕುಲಂನಲ್ಲಿ ನಡೆದ ಭೀಕರ ಬೈಕ್ ಅಪಘಾತದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್ ಸವಾರನೊಬ್ಬ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿರುವುದು ಕಂಡುಬಂದಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವ್ಯಾಪಕವಾಗಿ ಹರಿದಾಡುತ್ತಿದೆ. @kothamangalam__varthakal ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ 5ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

Source link

‘ಗೆದ್ದವರು 50 ಲಕ್ಷ ರೂಪಾಯಿನ ನಿಮಗೆ ಕೊಡಲ್ಲ’; ಚರ್ಚೆ ಹುಟ್ಟುಹಾಕಿದ ಸುದೀಪ್ ಮಾತು – Kannada News | BBK12 Finale: Sudeep’s Winner Won’t Share 50 Lakh Comment Stirring Controversy

ಕಿಚ್ಚ ಸುದೀಪ್ (Sudeep) ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಶೋ ನಡೆಸಿಕೊಡುತ್ತಿದ್ದಾರೆ. ಇಂದು (ಜನವರಿ 18) ಶೋ ಕೊನೆಯಾಗಲಿದೆ. ಅವರು ಈ ಬಾರಿ ವಿವಾದಗಳ ಮೂಲಕವೂ ಚರ್ಚೆಯಾದರು. ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಟ್ಟಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದಕ್ಕೆ ಸ್ಪಷ್ಟನೆ ಕೊಡುವಾಗ ಅವರು ಆಡಿದ ಮಾತು ಮತ್ತೆ ಚರ್ಚೆಗೆ ಕಾರಣ ಆಗಿದೆ.

ಕಳೆದ ವಾರ ಧ್ರುವಂತ್ ಅವರಿಗೆ ಕಿಚ್ಚನ ಚಪ್ಪಾಳೆ ನೀಡಲಾಯಿತು. ಇದನ್ನು ಅನೇಕರು ಪ್ರಶ್ನೆ ಮಾಡಿದರು. ಈ ವಿಷಯ ಗಿಲ್ಲಿ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿತ್ತು. ಸುದೀಪ್ ಮಾಡಿದ್ದು ಸರಿ ಅಲ್ಲ ಎಂಬ ಮಾತುಗಳು ವ್ಯಕ್ತವಾದವು. ‘ಧ್ರುವಂತ್ ಅಲ್ಲ, ಗಿಲ್ಲಿಗೆ ಚಪ್ಪಾಳೆ ಕೊಡಬೇಕಿತ್ತು’ ಎಂದಿದ್ದಾರೆ ಗಿಲ್ಲಿ ಫ್ಯಾನ್ಸ್. ಇದಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ಚಪ್ಪಾಳೆ ನನ್ನ ವೈಯಕ್ತಿಕ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ.

ಆ ಬಳಿಕ ರಘು ಹಾಗೂ ಅಶ್ವಿನಿ ಅವರ ಫನ್ ವಿಟಿ ತೋರಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸುವಾಗ, ‘ನಾನು ಶೋ ಮುಗಿದ ಬಳಿಕ ಮನೆಗೆ ಹೋಗೋದು’ ಎಂದರು ಅಶ್ವಿನಿ. ಆಗ ಸುದೀಪ್, ‘ಶೋ ಮುಗಿಸಿಕೊಂಡು ನಾನು ನಮ್ಮನೆಗೆ ಹೋಗೋದು. ಗೆದ್ದವರು 50 ಲಕ್ಷ ರೂಪಾಯಿ ಯಾರಿಗೂ ಕೊಡಲ್ಲ. ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿ ನೋಡಿದರೆ ಎಲ್ಲರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಅವರಿಗೆ ಗೆದ್ದವರು ಹಣ ಕೊಡಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಧ್ರುವಂತ್​​ಗೆ ‘ಸೀಸನ್ ಚಪ್ಪಾಳೆ’ ಕೊಟ್ಟಿದ್ದನ್ನು ಟೀಕಿಸಿದವರಿಗೆ ಕ್ಲ್ಯಾರಿಟಿ ಕೊಟ್ಟ ಸುದೀಪ್

ಈ ಬಗ್ಗೆ ಅನೇಕರು ಚರ್ಚೆ ಮಾಡಿದ್ದಾರೆ. ‘ಸಿನಿಮಾ ವಿಷಯದಲ್ಲೂ ಜನರು ಹೀಗೆಯೇ ಮಾಡಿದ್ದರೆ ಏನಾಗುತ್ತಿತ್ತು’ ಎಂದು ಕೆಲವರು ಕೇಳಿದ್ದಾರೆ. ‘ಸಿನಿಮಾ ನೋಡಿದ ಮಾತ್ರಕ್ಕೆ ಆ ಹಣವನ್ನು ಹೀರೋಗಳು ನಮಗೆ ಕೊಡುವುದಿಲ್ಲ ಎಂದು ಸುಮ್ಮನಾಗಿದ್ದರೆ ಏನಾಗುತ್ತಿತ್ತು’ ಎಂಬುದು ಕೆಲವರ ಪ್ರಶ್ನೆ. ‘ಅಭಿಮಾನಿಗಳು ಅಭಿಮಾನ ತೋರಿಸುತ್ತಾರೆ ಹಣ ನಿರೀಕ್ಷೆ ಮಾಡುವುದಿಲ್ಲ’ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link