Category Archives: Blog

Your blog category

ಅಪ್ಪಾ ನನಗೆ ಸಾಯಲು ಇಷ್ಟವಿಲ್ಲ, ಬದುಕಬೇಕು, ನೀರಿನ ಹೊಂಡಕ್ಕೆ ಬಿದ್ದು ಕರೆ ಮಾಡಿದ್ದ ಟೆಕ್ಕಿ, ಕೊನೆಗೂ ಪ್ರಾಣ ಉಳೀಲಿಲ್ಲ – Kannada News | Noida Techie Dies in Pit: Delivery Agent’s Heroic Bid, Family Blames Negligence

ನೋಯ್ಡಾ, ಜನವರಿ 18: ಕಾರು ಸಮೇತ 70 ಅಡಿ ಆಳದ ನೀರಿನ ಹೊಂಡಕ್ಕೆ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಲು ತನ್ನ ಜೀವದ ಹಂಗನ್ನೂ ತೊರೆದು ಡೆಲಿವರಿ ಏಜೆಂಟ್(Delivery Agent) ಹೋರಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಎರಡು ಗಂಟೆಗಳ ಕಾಲ ಕಾರು ನೀರಿನ ಮೇಲೆ ತೇಲುತ್ತಿತ್ತು. ಆದರೆ ಯಾರ ಕಣ್ಣಿಗೂ ಬೀಳಲಿಲ್ಲ, ಅಲ್ಲೇ ಹೋಗುತ್ತಿದ್ದ ಡೆಲಿವರಿ ಏಜೆಂಟ್ ಅದನ್ನು ಗಮನಿಸಿ ಕೂಡಲೇ ಕೆಳಗೆ ದುಮುಕಿದ್ದಾರೆ.

ಟೆಕ್ಕಿ ಯುವರಾಜ್ ಮೆಹ್ತಾ ಎಂಬುವವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಆಯತಪ್ಪಿ ನಿರ್ಮಾಣ ಹಂದಲ್ಲಿರುವ ಮಾಲ್​ನ ನೀರು ತುಂಬಿದ ಗುಂಡಿಗೆ ಕಾರು ಸಮೇತ ಬಿದ್ದಿದ್ದರು. ಕೂಡಲೇ ಟೆಕ್ಕಿ ತಮ್ಮ ತಂದೆಗೆ ಕರೆ ಮಾಡಿ, ಅಪ್ಪಾ ನನಗೆ ಸಾಯಲು ಇಷ್ಟವಿಲ್ಲ, ನಾನು ಹೀಗೆ ನೀರಿನಲ್ಲಿ ಬಿದ್ದಿದ್ದೇನೆ ಬಂದು ಕಾಪಾಡಿ ಎಂದು ಬೇಡಿಕೊಂಡಿದ್ದರು.

ಡೆಲಿವರಿ ಏಜೆಂಟ್ ಬೇರೇನೂ ಯೋಚಿಸದೆ ನೀರಿಗೆ ಇಳಿದಿದ್ದರು, ತಮ್ಮ ಕೈಲಾದ ಪ್ರಯತ್ನ ಮಾಡಿದ್ದರು. ಪೊಲೀಸರು, ಡೈವರ್​ಗಳು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಎಲ್ಲರೂ ಅಲ್ಲಿ ಸೇರಿದ್ದರು. ಫ್ಲಿಪ್‌ಕಾರ್ಟ್ ವಿತರಣಾ ಏಜೆಂಟ್ ಆಗಿರುವ ಮೊನಿಂದರ್, ಮೆಹ್ತಾ ಟಾರ್ಚ್ ಹಿಡಿದು ಕಾರಿನ ಒಳಗಿನಿಂದ ಸಹಾಯಕ್ಕಾಗಿ ಕಿರುಚುತ್ತಿರುವುದನ್ನು ನೋಡಿದ್ದರು.

ಮೆಹ್ತಾ ಉಸಿರಾಡಲು ಕಷ್ಟಪಡುತ್ತಿರುವುದನ್ನು ಅರಿತುಕೊಂಡ ಮೊನಿಂದರ್ ತನ್ನ ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡು ಚರಂಡಿಯೊಳಗೆ ಹಾರಿ ಅವನನ್ನು ಉಳಿಸಲು ಪ್ರಯತ್ನಿಸಿದರು.ಮೆಹ್ತಾ ಆಗಲೇ ಸಾವನ್ನಪ್ಪಿದ್ದರು.

ಮತ್ತಷ್ಟು ಓದಿ: ಮಧ್ಯರಾತ್ರಿ ಊಟ ಆರ್ಡರ್, ಕೆಳಗೆ ಬನ್ನಿ ಅಂದ್ರೂ ಬಾರದ ಗ್ರಾಹಕ, ತಾನೇ ತಿಂದ ಜೊಮ್ಯಾಟೊ ಏಜೆಂಟ್

ಸುಮಾರು 10 ದಿನಗಳ ಹಿಂದೆ ಟ್ರಕ್ ಹಳ್ಳಕ್ಕೆ ಬಿದ್ದಾಗಲೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮೊನಿಂದರ್ ಆರೋಪಿಸಿದರು. ಶುಕ್ರವಾರ ರಾತ್ರಿ ಸೆಕ್ಟರ್ 150 ರ ಬಳಿ ಈ ದುರಂತ ಘಟನೆ ನಡೆದಿದ್ದು, ಟೆಕ್ಕಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆಯಿಂದಾಗಿ ಕಾರು ನಿಯಂತ್ರಣ ತಪ್ಪಿ ರಸ್ತೆ ತಿರುವಿನ ಬಳಿ ಇರುವ ನೀರು ತುಂಬಿದ ನಿರ್ಮಾಣ ಗುಂಡಿಗೆ ಡಿಕ್ಕಿ ಹೊಡೆದಿದೆ.

ಆ ಸ್ಥಳದಲ್ಲಿ ಸರಿಯಾದ ಬ್ಯಾರಿಕೇಡಿಂಗ್, ಎಚ್ಚರಿಕೆ ಫಲಕಗಳು ಮತ್ತು ಬೆಳಕಿನ ಕೊರತೆ ಇದೆ ಎಂದು ವರದಿಯಾಗಿದೆ.ಮೆಹ್ತಾ ಅವರ ಕಿರುಚಾಟ ಕೇಳಿ ಆ ದಾರಿಯಲ್ಲಿ ಹೋಗುತ್ತಿದ್ದ ಕೆಲವರು ಸಹಾಯ ಮಾಡಲು ಪ್ರಯತ್ನಿಸಿದರು, ಆದರೆ ಕಾರು ಸಂಪೂರ್ಣವಾಗಿ ಮುಳುಗಿತ್ತು.

ಸುಮಾರು ಐದು ಗಂಟೆಗಳ ರಕ್ಷಣಾ ಪ್ರಯತ್ನದ ಟೆಕ್ಕಿ ಮತ್ತೆ ಕಾರನ್ನು ಕಂದಕದಿಂದ ಹೊರತೆಗೆಯಲಾಯಿತು. ಮೆಹ್ತಾ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಘಟನೆಯ ನಂತರ, ಮೆಹ್ತಾ ಅವರ ಕುಟುಂಬವು ದೂರು ದಾಖಲಿಸಿದ್ದು, ಅಧಿಕಾರಿಗಳು ಸರ್ವಿಸ್ ರಸ್ತೆಯ ಉದ್ದಕ್ಕೂ ಪ್ರತಿಫಲಕಗಳನ್ನು ಅಳವಡಿಸಿಲ್ಲ ಅಥವಾ ಚರಂಡಿಗಳನ್ನು ಮುಚ್ಚಿಲ್ಲ ಎಂದು ಆರೋಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಎಸ್ಸಿ ಓದಿ ಶೋಕಿಗಾಗಿ ಕಳವು: ಸಿನಿಮಾ ಸ್ಟೈಲ್​​ನಲ್ಲಿ ಖಾಕಿ ಬಲೆಗೆ ಬಿದ್ದ ಅಂತಾರಾಜ್ಯ ಕಳ್ಳ – Kannada News | Mysuru police arrested a BSc Computer Science graduate for his alleged involvement in a series of home thefts

ಆರೋಪಿ ದ್ವಾರಕಪುರಿ ವೆಂಕಟೇಶ್ವರ ರೆಡ್ಡಿ

ಮೈಸೂರು, ಜನವರಿ 18: ಬಿಎಸ್ಸಿ ಕಂಪ್ಯೂಟರ್​​ ಸೈನ್ಸ್​​ನಲ್ಲಿ ಪದವಿ ಪಡೆದಿದ್ದರೂ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ದ್ವಾರಕಪುರಿ ವೆಂಕಟೇಶ್ವರ ರೆಡ್ಡಿ (34) ಬಂಧಿತ ಆರೋಪಿಯಾಗಿದ್ದು, ಸರಣಿ ಕಳ್ಳತನ ಮಾಡಿ ಜನರ ನೆಮ್ಮದಿ ಹಾಳು ಮಾಡಿದ್ದ ಐನಾತಿ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಈತ ಆಂಧ್ರ ಪ್ರದೇಶದ ಡಾ. ಬಿ. ಆರ್. ಅಂಬೇಡ್ಕರ್ ಕೋಣಸೀಮದ ನಿವಾಸಿ. ವಿದ್ಯಾವಂತನಾಗಿದ್ದ ರೆಡ್ಡಿ ಯಾವುದಾದರೂ ಕಂಪನಿಗೆ ಸೇರಿ ಕೆಲಸ ಮಾಡುವ ಬದಲು, ಸುಲಭವಾಗಿ ಹಣ ಮಾಡುವದರ ಹಿಂದೆ ಬಿದ್ದಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಇತ್ತೀಚೆಗೆ ಮೈಸೂರಿನಲ್ಲಿ ಸರಣಿ ಮನೆಗಳ್ಳತನವಾಗಿತ್ತು. 2025ರ ಡಿಸೆಂಬರ್ 31ರಂದು  ರಾಮಕೃಷ್ಣನಗರದ ವಾಸು ಬಡಾವಣೆಯ ಪ್ರೊ. ನಾಗಭೂಷಣ್ ಎಂಬುವರ ಮನೆ ಬೀಗ ಮುರಿದು 150 ಗ್ರಾಂ ಬೆಳ್ಳಿ ವಸ್ತುಗಳು, ಮನೆಗೆ ಅಳವಡಿಸಿದ್ದ 3 ಸಿಸಿ ಟಿವಿ ಕ್ಯಾಮರಗಳ ಕಳುವು ಮಾಡಲಾಗಿತ್ತು. ಅದೇ ದಿನ ರಾತ್ರಿ ಕುವೆಂಪುನಗರ ಹೆಚ್ ಬ್ಲಾಕ್ 5ನೇ ಮೇನ್, 1ನೇ ಕ್ರಾಸ್ ನಲ್ಲಿರುವ ಬ್ಯಾಂಕ್ ನಿವೃತ್ತ ನೌಕರ ಅನಂತ ಪದ್ಮನಾಭ ಅವರ ಮನೆಯ ಕಿಟಕಿ ಸರಳು ಮುರಿದು ಒಳನುಗ್ಗಿ 40 ಗ್ರಾಂ ತೂಕದ ಬೆಳ್ಳಿ ನಾಣ್ಯಗಳು ಹಾಗೂ 60,000 ರೂಪಾಯಿ ನಗದು ಕದಿಯಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ 2026ರ ಜನವರಿ 2ರಂದು ರಾತ್ರಿ ಶ್ರೀರಾಂಪುರ 2ನೇ ಹಂತ, 2ನೇ ಕ್ರಾಸ್‌ನಲ್ಲಿರುವ ಮೇಘನಾ ಎಂಬುವರ ಮನೆಗೆ ನುಗ್ಗಿ 120 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಸ್ಥಳಕ್ಕೆ ಕುವೆಂಪು ನಗರ ಠಾಣೆ ಇನ್ಸ್‌ಪೆಕ್ಟರ್ ಯೋಗೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸುತ್ತಲಿನ ಪ್ರದೇಶದಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿ  ಸಂಗ್ರಹಿಸಿ ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು.

ಇದನ್ನೂ ಓದಿ: ಚೋರ್​​ ಮಗ ಚಂಡಾಳ್​​ ಅಪ್ಪ; ದೇಗುಲದಲ್ಲಿ ಕದ್ದು ಸಿಕ್ಕಿಬಿದ್ದ ಐನಾತಿಗಳು!

ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ ಪೊಲೀಸರಿಗೆ ಈ ಎಲ್ಲ ಕಡೆ ಕಳ್ಳತನ ಮಾಡಿರುವುದು ಒಬ್ಬನೇ ಅನ್ನೋ ವಿಚಾರ ಸ್ಪಷ್ಟವಾಗಿತ್ತು. ಮತ್ತಷ್ಟು ಮಾಹಿತಿ ಸಂಗ್ರಹಿಸಿದಾಗ ಆರೋಪಿ ದ್ವಾರಕಪುರಿ ವೆಂಕಟೇಶ್ವರ ರೆಡ್ಡಿ ಅನ್ನೋ ಅಂತಾರಾಜ್ಯ ಕಳ್ಳ ಅಂತಾ ಗೊತ್ತಾಗಿದೆ. ಆತ ಅದಾಗಲೇ ಆಂಧ್ರಪ್ರದೇಶ, ಪುದುಚೇರಿ, ಕೇರಳ, ಹೈದ್ರಾಬಾದ್, ಹುಬ್ಬಳ್ಳಿ ಧಾರವಾಡಗಳಲ್ಲಿ ಕಳ್ಳತನ ಮಾಡಿದ್ದ. ಒಮ್ಮೆ ಬಂಧಿತನಾಗಿ ಪುದುಚೇರಿ ಜೈಲಿನಲ್ಲಿಯೂ ಇದ್ದ. ಜಾಮೀನಿನ ಮೇಲೆ ಹೊರಗೆ ಬಂದವನು ಮತ್ತೆ ಹಳೇ ಚಾಳಿ ಮುಂದುವರಿಸಿದ್ದ ಎಂಬ ಮಾಹಿತಿ ಸಿಕ್ಕಿದೆ.

ಕಳ್ಳತನಕ್ಕೂ ವಿಶೇಷ ತಯಾರಿ

ದ್ವಾರಕಪುರಿ ವೆಂಕಟೇಶ್ವರ ರೆಡ್ಡಿ ತಾನು ಕಳ್ಳತನ ಮಾಡುವ ಮುನ್ನ ವಿಶೇಷ ತಯಾರಿ ನಡೆಸುತ್ತಿದ್ದ. ಮೈಸೂರಿಗೆ ಕಳ್ಳತನಕ್ಕೆ ಬಂದವನು ಮೊದಲು ಹೋಗಿದ್ದು ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನ ಚಾಮುಂಡಿ ಬೆಟ್ಟಕ್ಕೆ. ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿ, ಕಳ್ಳತನ ಪ್ರಯತ್ನ ಫಲಿಸಲಿ ಅಂತಾ ಪ್ರಾರ್ಥನೆ ಮಾಡಿದ್ದ. ಇದಾದ ನಂತರ ಮೈಸೂರು ಸುತ್ತ ಒಂದು ರೌಂಡ್ ಹಾಕಿದ್ದ. ತನ್ನ ಕಾರಿನಲ್ಲಿ ಸುತ್ತಾಡಿ ಯಾವ ಮನೆ ಬೀಗ ಹಾಕಿದೆ? ಎಲ್ಲಿ ಸಿಸಿ ಕ್ಯಾಮರಾಗಳಿಲ್ಲ? ತಪ್ಪಿಸಿಕೊಳ್ಳಲು ಸರಿಯಾದ ಮಾರ್ಗ ಯಾವುದು? ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲನೆ ನಡೆಸಿದ್ದ. ನಂತರ ಮಧ್ಯರಾತ್ರಿ 1ರಿಂದ ಮುಂಜಾನೆ 4ಗಂಟೆ ಅವಧಿಯಲ್ಲಿ ಮನೆಗಳವು ಮಾಡುವುದು ಸೂಕ್ತ ಅಂತಾ ನಿರ್ಧರಿಸಿ ಕಳ್ಳತನ ಮಾಡಿ ಯಶಸ್ವಿಯಾಗಿದ್ದ. ಇನ್ನು ಈತ ಮನೆಯಲ್ಲಿದ್ದ ನಗದು, ಚಿನ್ನ, ಬೆಳ್ಳಿ ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ. ಆದ್ರೆ ಮನೆಯ ದೇವರ ಕೋಣೆಯಲ್ಲಿದ್ದ ಯಾವುದೇ ವಸ್ತುಗಳನ್ನು ಮುಟ್ಟುತ್ತಿರಲಿಲ್ಲ.

ಯಾವಾಗ ಈತನ ಬಗ್ಗೆ ಮಾಹಿತಿ ಸಿಕ್ಕಿತೋ ಮೈಸೂರು ಪೊಲೀಸರು ಅಲರ್ಟ್ ಆಗಿ, ವಿಶೇಷ ತಂಡ ರಚಿಸಿದ್ದರು. ಖಚಿತ ಮಾಹಿತಿ ಆಧರಿಸಿ 2026ರ ಜನವರಿ 6ರಂದು ಮಧ್ಯರಾತ್ರಿ ಹಾಸನ ನಗರದಲ್ಲಿ ದೂರದಲ್ಲಿ ಕಾರು ನಿಲ್ಲಿಸಿ ಮನೆಯೊಂದರಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಕುಖ್ಯಾತ ಕಳ್ಳ ವೆಂಕಟೇಶ್ವರ ರೆಡ್ಡಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 310 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 67 ಸಾವಿರ ನಗದು ಸೇರಿ ಮೂರು ಸಿಸಿ ಕ್ಯಾಮರಾ, ಕೃತ್ಯಕ್ಕೆ ಬಳಸಿದ್ದ ಪೋರ್ಡ್ ಕಾರು ವಶಪಡಿಸಿಕೊಳ್ಳಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಾವೊಸ್ ಶೃಂಗಸಭೆ 2026: ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ – Kannada News | Davos WEF Summit 2026, strong India pavilion and presence in the meeting at Swiss city

ನವದೆಹಲಿ, ಜನವರಿ 18: ಸ್ವಿಟ್ಜರ್​ಲ್ಯಾಂಡ್​ನ ಡಾವೊಸ್​ನಲ್ಲಿ ಸೋಮವಾರದಿಂದ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ (Davos WEF Summit 2026) ಭಾರತ ಸೇರಿದಂತೆ ವಿವಿಧ ದೇಶಗಳ ಆಡಳಿತಗಾರರು, ಉದ್ಯಮಿಗಳು, ಸಂಘ ಸಂಸ್ಥೆಗಳು, ಕಾರ್ಮಿಕ ಒಕ್ಕೂಟಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಒಟ್ಟು 3,000ಕ್ಕೂ ಅಧಿಕ ಮಂದಿ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಜನವರಿ 19, ಸೋಮವಾರದಿಂದ ಜನವರಿ 23, ಶುಕ್ರವಾರದವರೆಗೆ ಐದು ದಿನಗಳ ಕಾಲ ಈ ಸಮಿಟ್ ನಡೆಯಲಿದೆ.

ಅಮೆರಿಕ ಈ ಬಾರಿಯ ಸಭೆಯಲ್ಲಿ ವಿಶೇಷ ಅಸ್ಥೆ ವಹಿಸಿದೆ. ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಅಮೆರಿಕದ ಅತಿದೊಡ್ಡ ನಿಯೋಗವು ಡಾವೋಸ್ ಸಮಿಟ್​ನಲ್ಲಿ ಪಾಲ್ಗೊಳ್ಳಲಿದೆ. ಬೇರೆ ಬೇರೆ ದೇಶಗಳ ವಿದೇಶ ಮಂತ್ರಿಗಳು, ವಿತ್ತ ಮಂತ್​ರಿಗಳು, ವಾಣಿಜ್ಯ ಮಂತ್ರಿಗಳು ಪಾಲ್ಗೊಳ್ಳಬಹುದು.

ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್​ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ

ಭಾರತದಿಂದ ಪ್ರಬಲ ತಂಡ…

ಡಾವೋಸ್ ಡಬ್ಲ್ಯುಇಎಫ್ 2026 ಸಭೆಯಲ್ಲಿ ಭಾರತದಿಂದ ಪ್ರಬಲ ಪ್ರಾತಿನಿಧ್ಯ ಇರುತ್ತದೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಅಶ್ವಿನಿ ವೈಷ್ಣವ್, ಶಿವರಾಜ್ ಸಿಂಗ್ ಚೌಹಾಣ್, ಕೆ ರಾಮಮೋಹನ್ ನಾಯ್ಡು ಪಾಲ್ಗೊಳ್ಳಬಹುದು. ಆರು ರಾಜ್ಯಗಳ ಮುಖ್ಯಮಂತ್ರಿಗಳು ಡಾವೋಸ್​ಗೆ ತೆರಳುತ್ತಿದ್ದಾರೆ. ಮಹಾರಾಷ್ಟ್ರ ಸಿಎಂ ದೆವೇಂದ್ರ ಫಡ್ಣವಿಸ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಸ್ಸಾಂ ಸಿಎಂ ಹಿಮಂತ ಬಸ್ವ ಶರ್ಮಾ, ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಜಾರ್ಖಂಡ್ ಸಿಎಂ ಹೇಮಂತ್ ಸೋರೇನ್ ಅವರು ಪಾಲ್ಗೊಳ್ಳುತ್ತಿದ್ದಾರೆ. ನೂರಕ್ಕೂ ಅಧಿಕ ಪ್ರಮುಖ ಕಂಪನಿಗಳ ಸಿಇಒಗಳ ಉಪಸ್ಥಿತಿಯೂ ಇರುತ್ತದೆ.

ಡಾವೋಸ್ ಕಾಂಗ್ರೆಸ್ ಸೆಂಟರ್​ನ ಕಟ್ಟಡದ ಒಂದೇ ಫ್ಲೋರ್​ನಲ್ಲಿ ಭಾರತದ ಎಂಟು ರಾಜ್ಯಗಳ ಪೆವಿಲಿಯನ್ ಇದೆ. ಕರ್ನಾಟಕ ತೆಲಂಗಾಣ, ಗುಜರಾತ್, ಉತ್ತರಪ್ರದೇಶ ಹೀಗೆ ವಿವಿಧ ರಾಜ್ಯಗಳಿಗೆ ವಿಶೇಷ ಮೀಟಿಂಗ್ ಹಾಲ್​ಗಳನ್ನು ಒಂದೇ ಫ್ಲೋರ್​ನಲ್ಲಿ ಮೀಸಲಿರಿಸಲಾಗಿದೆ.

ಇದನ್ನೂ ಓದಿ: ಹಲವು ವರ್ಷಗಳ ಬಳಿಕ ಮೊದಲ ಆದಾಯ ಸವಿದ ಭಾರತದ ಡಿಸ್ಕಾಂ ಕಂಪನಿಗಳು

ಕರ್ನಾಟಕದಿಂದ ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ

ಕರ್ನಾಟಕದಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಬೇಕಿತ್ತು. ಆದರೆ, ಕಾರಣಾಂತರದಿಂದ ಅವರು ಹೋಗುತ್ತಿಲ್ಲ. ಸಚಿವರಾದ ಎಂಬಿ ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ವೆಸ್ಟ್ ಕರ್ನಾಟಕ ಎಂದು ಪ್ರತ್ಯೇಕ ಪೆವಿಲಿಯನ್ ನಿರ್ಮಿಸಲಾಗಿದೆ.

ಉದ್ಯಮಿಗಳ ಪೈಕಿ ಮುಕೇಶ್ ಅಂಬಾನಿ, ಎನ್ ಚಂದ್ರಶೇಖರನ್, ಸಂಜೀವ್ ಬಜಾಜ್, ಹರಿ ಎಸ್ ಭಾರ್ತಿಯಾ, ಸುದರ್ಶನ್ ವೇಣು, ಅನೀಶ್ಶಾ, ನಾದಿರ್ ಗೋದ್ರೇಜ್, ಸಾಜ್ಜನ್ ಜಿಂದಾಲ್, ನಿಖಿಲ್ ಕಾಮತ್, ಸುನೀಲ್ ಭಾರ್ತಿ ಮಿಟ್ಟಲ್, ನಂದನ್ ನಿಲೇಕಣಿ, ಸಲೀಲ್ ಪರೇಖ್, ರಿಷದ್ ಪ್ರೇಮ್​ಜಿ ಮೊದಲಾದವರು ಡಾವೋಸ್ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದ ಎಫ್​ಡಿಎ! – Kannada News | Lokayukta Arrests FDA Caught Red Handed Taking Bribe

ಕಲಬುರಗಿ, ಜನವರಿ 18:  ಜಿಲ್ಲೆಯ ಕಮಲಾಪುರ ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗ (Bribe) ಪ್ರಥಮ ದರ್ಜೆ ಸಹಾಯಕರಾದ (ಎಫ್‌ಡಿಎ) ಶಶಿಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಜಮೀನು ದಾಖಲೆಗಳನ್ನು ನೀಡುವ ವಿಚಾರದಲ್ಲಿ ಶಶಿಕುಮಾರ್, ಪುಟ್ಟ ಕಿಶನ್ ರಾಥೋಡ್ ಎಂಬುವವರಿಂದ ಹಣ ಸ್ವೀಕರಿಸುತ್ತಿದ್ದರು. ಶಶಿಕುಮಾರ್ ಅವರು ದಾಖಲೆ ಪತ್ರಗಳನ್ನು ನೀಡಲು 20,000 ರೂ.ಗಿಂತ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ಕಿಶನ್ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ ಪೊಲೀಸರು, ಹಣ ಪಡೆಯುತ್ತಿದ್ದಾಗಲೇ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Video: ಹರಿಯುವ ನೀರಿನಲ್ಲಿ ತೇಲಿ ಹೋದ ಮರಿ ಆನೆಯನ್ನು ಬದುಕಿಸಿದ ತಾಯಿ – Kannada News | A Mother’s Instinct: Elephant Mom Saves Calf From Raging Waters

ಪ್ರಾಣಿಯೇ ಆಗಿರಲಿ, ಮನುಷ್ಯರಾಗಿರಲಿ ತಾಯಿಗೆ ಮಗುವಿನ ಮೇಲಿರುವ ಮಮತೆ ಒಂದೇ. ಹರಿಯುವ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮರಿಯಾನೆಯನ್ನು ತಾಯಿ ಆನೆ ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ನೀರಿನ ಹರಿವು ಎಷ್ಟು ಪ್ರಬಲವಾಗಿದೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು ಮತ್ತು ಆನೆ ಮತ್ತು ಅದರ ಮರಿ ಪ್ರವಾಹದಲ್ಲಿ ಕೊಚ್ಚಿ ಹೋಗುವುದನ್ನು ನೀವು ನೋಡಬಹುದು. ಆನೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು, ಆದರೆ ಮರಿ ಆನೆ ನೀರಿನಲ್ಲಿ ತೇಲಲಾರಂಭಿಸಿತು. ಹೆಣ್ಣು ಆನೆ ಮರಿ ಆನೆಯನ್ನು ಹಿಡಿದು ನೀರಿನಿಂದ ಹೊರತೆಗೆದಿತ್ತು. ಈ ವೀಡಿಯೊ ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ತಂದೆ ಜಾಗ ನೀಡಿದ್ದ ಆಸ್ಪತ್ರೆಯಲ್ಲೇ ಮಗನ ದುರಂತ ಅಂತ್ಯ: ಅಷ್ಟಕ್ಕೂ ಆಗಿದ್ದೇನು? – Kannada News | Son Dies in Hospital Built on Land Donated by His Father Amid Ambulance Delay in Tumakuru

ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​​ ಸಿಗದೆ ವ್ಯಕ್ತಿ ಸಾವು

ತುಮಕೂರು, ಜನವರಿ 18: ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​​ ಸಿಗದ ಕಾರಣ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರೋಗಿಯೊಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ನಡೆದಿದೆ. ಸೈಯ್ಯದ್​​ ಅಕ್ರಮ್(42) ಮೃತ ದುರ್ದೈವಿಯಾಗಿದ್ದು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದು, ನಮಗಾದ ತೊಂದರೆ ಮತ್ಯಾರಿಗೂ ಆಗಬಾರದು ಎಂದು ಅಲವತ್ತುಕೊಂಡಿದ್ದಾರೆ.

1 ಗಂಟೆ ಕಾದರೂ ಸಿಗದ ಆ್ಯಂಬುಲೆನ್ಸ್​​!

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೈಯ್ಯದ್​​ ಅಕ್ರಮ್​​ರನ್ನು ಸೋದರ ನಯಾಜ್​ ಜ.16ರಂದು ಸಮುದಾಯದ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ರೋಗಿಯ ಬಿಪಿ ಕಡಿಮೆಯಾಗಿದೆ ಎಂದಿದ್ದು, ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ರೋಗಿಯ ಸ್ಥಳಾಂತರಕ್ಕೆ ಸುಮಾರು 1 ಗಂಟೆ ಕಾದರೂ ಆ್ಯಂಬುಲೆನ್ಸ್​​ ಸಿಕ್ಕಿಲ್ಲ. ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್​​ ಇದ್ರೂ ಚಾಲಕನಿಲ್ಲ ಎನ್ನಲಾಗಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ತಮ್ಮ ಸಹೋದರ ಮೃತಪಟ್ಟಿದ್ದಾನೆ ಎಂಬುದು ನಯಾಜ್​ ಆರೋಪ.

ಇದನ್ನೂ ಓದಿ: ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ! ಆ ರಾತ್ರಿ ತೋಟದ ಮನೆಯಲ್ಲಿ ನಡೆದಿದ್ದೇನು ಗೊತ್ತಾ?

ಒಂದೂವರೆ ಎಕರೆ ಜಮೀನು ನೀಡಿದ್ದ ಸೈಯದ್​​ ತಂದೆ

ಇನ್ನು ಈ ಆಸ್ಪತ್ರೆಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದಿದ್ದು ಮೃತ ಸೈಯ್ಯದ್ ತಂದೆ. ಜನರ ಜೀವ ಉಳಿಸಲು ಆಸ್ಪತ್ರೆಯ ಅಗತ್ಯ ಮನಗಂಡಿದ್ದ ಅವರು, ಕೋಟ್ಯಂತರ ಮೌಲ್ಯದ ಒಂದೂವರೆ ಎಕರೆ ಭೂಮಿಯನ್ನು ನೀಡಿದ್ದರು. ಆದರೆ ದುರ್ದೈವ ಎಂಬಂತೆ ಅದೇ ಜಾಗದಲ್ಲೀಗ ಅವರ ಮಗ ಸರಿಯಾಗಿ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡಿದ್ದಾರೆ. ನನ್ನ ಸಹೋದರನಿಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ಆಸ್ಪತ್ರೆಗೆ ಕೂಡಲೇ ಅಗತ್ಯ ತಜ್ಞ ವೈದ್ಯರು, ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್​ ವ್ಯವಸ್ಥೆಯನ್ನು ಮಾಡುವ ಮೂಲಕ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ನಯಾಜ್ ಕಣ್ಣೀರು ಹಾಕಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕ ಟೆಸ್ಟ್ ತಂಡ ಪ್ರಕಟ – Kannada News | Karnataka squad for ranji trophy 2026

ಜನವರಿ 22 ರಿಂದ ಶುರುವಾಗಲಿರುವ ರಣಜಿ ಟೂರ್ನಿಯ ದ್ವಿತೀಯಾರ್ಧದ ಪಂದ್ಯಗಳಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ಇನ್ನು ಮೊದಲ ಸುತ್ತಿನಲ್ಲಿ ಕರ್ನಾಟಕ ಪರ ಕಣಕ್ಕಿಳಿದಿದ್ದ ಸ್ಮರಣ್ ರವಿಚಂದ್ರನ್ ಈ ಬಾರಿ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ವಿಜಯ ಹಝಾರೆ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಸ್ಮರಣ್ ರವಿಚಂದ್ರನ್ ಅವರ ಭುಜಕ್ಕೆ ಗಾಯವಾಗಿತ್ತು. ಹೀಗಾಗಿ ವಿಜಯ ಹಝಾರೆ ಟೂರ್ನಿಯ ಸೆಮಿಫೈನಲ್ ಮ್ಯಾಚ್​ನಲ್ಲಿ ಅವರು ಕಣಕ್ಕಿಳಿದಿರಲಿಲ್ಲ.

ಇದೇ ಗಾಯದ ಕಾರಣ ಸ್ಮರಣ್ ರವಿಚಂದ್ರನ್ ಅವರನ್ನು ರಣಜಿ ತಂಡದಿಂದ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಸ್ಮರಣ್ ಬದಲಿಗೆ ಈ ಬಾರಿ ನಿಕಿನ್ ಜೋಸ್ ಕರ್ನಾಟಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ರಣಜಿ ಟೂರ್ನಿಯ ಉಳಿದ ಪಂದ್ಯಗಳಿಗೆ ಕರ್ನಾಟಕ ತಂಡ ಈ ಕೆಳಗಿನಂತಿದೆ…

ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೃತಿಕ್ ಕೃಷ್ಣ, ಕೆವಿ ಅನೀಶ್, ಎಂ. ವೆಂಕಟೇಶ್.

ಅಗ್ರಸ್ಥಾನದಲ್ಲಿ ಕರ್ನಾಟಕ:

2025-26ರ ಸಾಲಿನ ರಣಜಿ ಟೂರ್ನಿಯಲ್ಲಿ ಗ್ರೂಪ್-ಬಿ ನಲ್ಲಿ ಕಣಕ್ಕಿಳಿಯುತ್ತಿರುವ ಕರ್ನಾಟಕ ತಂಡವು ಈವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಪಂದ್ಯಗಳಲ್ಲಿ 2 ಗೆಲುವು ಹಾಗೂ ಮೂರು ಡ್ರಾ ಸಾಧಿಸುವಲ್ಲಿ ಕರ್ನಾಟಕ ತಂಡ ಯಶಸ್ವಿಯಾಗಿದೆ.

ಇಲ್ಲಿ ಸೌರಾಷ್ಟ್ರ ಮತ್ತು ಗೋವಾ ವಿರುದ್ಧ ಡ್ರಾ ಸಾಧಿಸಿದ್ದ ಕರ್ನಾಟಕ ತಂಡವು ಮೂರನೇ ಪಂದ್ಯದಲ್ಲಿ ಕೇರಳ ವಿರುದ್ಧ ಜಯ ದಾಖಲಿಸಿತ್ತು. ಇನ್ನು ನಾಲ್ಕನೇ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ಐದನೇ ಪಂದ್ಯದಲ್ಲಿ ಚಂಡಿಗಢ್​ ವಿರುದ್ಧ ಇನಿಂಗ್ಸ್ ಹಾಗೂ 185 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ: ಪ್ಲೇಆಫ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕ ತಂಡವು ದ್ವಿತೀಯಾರ್ಧದ ಮೊದಲ ಮ್ಯಾಚ್​ನಲ್ಲಿ ಮಧ್ಯ ಪ್ರದೇಶ್ ತಂಡವನ್ನು ಎದುರಿಸಲಿದೆ. ಜನವರಿ 22 ರಿಂದ ಬೆಂಗಳೂರಿನ ಆಲೂರಿನಲ್ಲಿ ನಡೆಯಲಿರುವ ಈ ಪಂದ್ಯದ ಬಳಿಕ ಕರ್ನಾಟ ತಂಡವು ಪಂಜಾಬ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್ ಶುರುವಾಗುವುದು ಜನವರಿ 29 ರಿಂದ.

ಈ ಎರಡು ಮ್ಯಾಚ್​ಗಳೊಂದಿಗೆ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿದೆ.

Source link

Video: ಹೈದರಾಬಾದ್​ನ ಜೈನ ದೇವಾಲಯದ ಬಳಿ ವಾಷಿಂಗ್​ ಮಷಿನ್ ಸ್ಫೋಟ – Kannada News | Loud Explosion Near Hyderabad Jain Temple Triggers Panic

ಹೈದರಾಬಾದ್, ಜನವರಿ 18: ಹೈದರಾಬಾದಿನ ಕೃಷ್ಣ ನಗರ ಪ್ರದೇಶದಲ್ಲಿರುವ ಜೈನ ದೇವಾಲಯದ ಬಳಿ ವಾಷಿಂಗ್​ ಮಷನ್ ಸ್ಫೋಟಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸ್ಯಾಮ್‌ಸಂಗ್ ವಾಷಿಂಗ್ ಮೆಷಿನ್ ಸ್ಫೋಟಗೊಂಡಿದೆ. ಟನೆಯ ಸಮಯದಲ್ಲಿ ವಾಷಿಂಗ್ ಮೆಷಿನ್ ಬಳಿ ಯಾರೂ ಇರಲಿಲ್ಲ, ಆದ್ದರಿಂದ ದೊಡ್ಡ ಅಪಘಾತವನ್ನು ತಪ್ಪಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ ಶಬ್ದ ಕೇಳಿ ಎಲ್ಲರೂ ಬಾಂಬ್ ಸ್ಫೋಟವಾದಂತೆ ಭಯಪಟ್ಟು ಮನೆಯಿಂದ ಓಡಿ ಬಂದಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

DISCOMs: ಹಲವು ವರ್ಷಗಳ ಬಳಿಕ ಮೊದಲ ಆದಾಯ ಸವಿದ ಭಾರತದ ಡಿಸ್ಕಾಂ ಕಂಪನಿಗಳು – Kannada News | India’s Power distributing DISCOMs see first profit in over a decade of losses

ನವದೆಹಲಿ, ಜನವರಿ 18: ಭಾರತದ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂ) 2024-25ರ ಹಣಕಾಸು ವರ್ಷದಲ್ಲಿ 2,701 ಕೋಟಿ ರೂ ನಿವ್ವಳ ಲಾಭ ಗಳಿಸಿವೆ. ಇದು ತೆರಿಗೆ ಕಳೆದ ನಂತರ ಉಳಿಯುವ ಲಾಭವಾಗಿದೆ. ಭಾರತದ ಒಟ್ಟೂ ಡಿಸ್ಕಾಂ ಕಂಪನಿಗಳಿಗೆ ಸಿಕ್ಕಿರುವ ಒಟ್ಟೂ ಪಿಎಟಿ ಲಾಭ ಇದು. ಹತ್ತಕ್ಕೂ ಹೆಚ್ಚು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ಕಂಪನಿಗಳು ಲಾಭ ಕಂಡಿವೆ.

ನಷ್ಟಗಳ ಕೂಪದಲ್ಲೇ ಸಿಲುಕಿದ್ದ ಡಿಸ್ಕಾಂ ಕಂಪನಿಗಳು ಲಾಭದ ಹಳಿಗೆ ಬರುವಂತಾಗಲು ಹಲವು ವರ್ಷಗಳ ಸುಧಾರಣಾ ಹಾದಿಯೇ ಕಾರಣವಾಗಿದೆ. 2024-25ರಲ್ಲಿ ಡಿಸ್ಕಾಂಗಳು ಲಾಭ ಕಂಡಿರುವುದು ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾದಂತಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಮನೋಹರಲಾಲ್ ಹೇಳಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್​ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ

2013-14ರಲ್ಲಿ ಡಿಸ್ಕಾಂ ಕಂಪನಿಗಳಿಗೆ ಒಟ್ಟು ಆಗಿದ್ದ ನಷ್ಟ 67,962 ಕೋಟಿ ರೂ. 2023-24ರ ಹಣಕಾಸು ವರ್ಷದಲ್ಲಿ ಇವು 25,553 ಕೋಟಿ ರೂ ನಷ್ಟ ಕಂಡಿದ್ದವು. ಈಗ 2024-25ರಲ್ಲಿ 2,701 ಕೋಟಿ ರೂ ಲಾಭ ಮಾಡಿವೆ.

ಸರ್ಕಾರದ ವಿವಿಧ ಸುಧಾರಣಾ ಕ್ರಮಗಳು

ವಿತರಣಾ ಕ್ಷೇತ್ರದ ಪುನಾರಚನೆ ಸ್ಕೀಮ್ (ಆರ್​ಡಿಎಸ್​ಎಸ್), ಎಲೆಕ್ಟ್​ರಿಸಿಟಿ ನಿಯಮಗಳಿಗೆ ತಿದ್ದುಪಡಿ, ತಡಪಾವತಿ ಸುಂಕ ನಿಯಮ, ವಿದ್ಯುತ್ ವಿತರಣೆ ಖಾತೆ ಮತ್ತು ಹೆಚ್ಚುವರಿ ಮಾಹಿತಿ ನಿಯಮ 2025 ಇತ್ಯಾದಿ ಸರ್ಕಾರ ಕೈಗೊಂಡ ಅನೇಕ ಸುಧಾರಣಾ ಕ್ರಮಗಳು ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಪರಿವರ್ತನೆಯನ್ನೇ ತಂದಿವೆ ಎಂದು ಹೇಳಲಾಗುತ್ತಿದೆ.

ತಗ್ಗಿದ ವಿದ್ಯುತ್ ಪೋಲು

ಈ ಸುಧಾರಣೆಗಳಿಂದ ಡಿಸ್ಕಾಂಗಳ ಆದಾಯದಲ್ಲಿ ಸುಧಾರಣೆ ಕಂಡಿರುವುದು ಮಾತ್ರವಲ್ಲ, ಅವುಗಳ ಕಾರ್ಯನಿರ್ವಹಣೆಯ ಇತರ ಸೂಚಕಗಳಲ್ಲೂ ಪ್ರಗತಿ ಕಾಣಬಹುದಾಗಿದೆ. ಎಟಿ ಅಂಡ್ ಸಿ ನಷ್ಟ 2013-14ರಲ್ಲಿ ಶೇ. 22.62 ಇತ್ತು. 2024-25ರಲ್ಲಿ ಇದು ಶೇ. 15.04ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ: 2026ರಲ್ಲಿ ಭಾರತವಾಗಲಿದೆ ವಿಶ್ವದ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆ

ಎಟಿ ಅಂಡ್ ಸಿ ಎಂದರೆ ಅಗ್ರಿಗೇಟ್ ಟೆಕ್ನಿಕಲ್ ಮತ್ತು ಕಮರ್ಷಿಯಲ್. ವಿದ್ಯುತ್ ವಿತರಣೆ ವೇಳೆ ಆಗುವ ವಿದ್ಯುತ್ ಪೋಲು, ಮೀಟರ್ ದೋಷ, ಬಿಲ್ಲಿಂಗ್ ದೋಷ ಇತ್ಯಾದಿ ಕಾರಣದಿಂದ ಆಗುವ ಲಾಭ ನಷ್ಟವನ್ನು ಎಟಿ ಅಂಡ್ ಸಿ ನಷ್ಟ ಎಂದು ಪರಿಗಣಿಸಲಾಗುತ್ತದೆ. ಈ ನಷ್ಟದಲ್ಲಿ ಇಳಿಮುಖ ಆಗುತ್ತಿರುವುದು ಈ ಸೆಕ್ಟರ್​ನ ಕಾರ್ಯಕ್ಷಮತೆ ಹೆಚ್ಚುತ್ತಿರುವುದರ ಸಂಕೇತವಾಗಿದೆ.

ಹಾಗೆಯೇ, ಸರಬರಾಜು ವೆಚ್ಚ ಹಾಗೂ ವಾಸ್ತವ ಆದಾಯದ ನಡುವಿನ ಅಂತರ 2013-14ರಲ್ಲಿ ಪ್ರತೀ ಕೆಡಬ್ಲ್ಯುಎಚ್​ಗೆ 78 ಪೈಸೆ ಇತ್ತು. 2024-25ರಲ್ಲಿ ಇದು 6 ಪೈಸೆಗೆ ಇಳಿಕೆ ಆಗಿದೆ. ಹಾಗೆಯೇ, ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಕೊಡಬೇಕಿರುವ ಬಾಕಿ ಹಣದಲ್ಲೂ ಗಣನೀಯ ಇಳಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ – Kannada News | India vs New Zealand 3rd ODI Toss Update and Playing XI

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಮ್ಯಾಚ್ ಶುರುವಾಗಿದೆ. ಇಂದೋರ್​ನ ಹೋಲ್ಕರ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಇನ್ನು ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ರಾಜ್​ಕೋಟ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಪ್ರಸಿದ್ಧ್ ಕೃಷ್ಣ ಅವರನ್ನು ಈ ಬಾರಿ ಕೈ ಬಿಡಲಾಗಿದ್ದು, ಅವರ ಬದಲಿಗೆ ಅರ್ಷದೀಪ್ ಸಿಂಗ್​ಗೆ ಅವಕಾಶ ನೀಡಲಾಗಿದೆ. ಅದರಂತೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ನ್ಯೂಝಿಲೆಂಡ್ ಪ್ಲೇಯಿಂಗ್ XI: ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ(ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್ (ನಾಯಕ), ಝಕಾರಿ ಫೌಲ್ಕ್ಸ್, ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಜೇಡನ್ ಲೆನ್ನೊಕ್ಸ್.

ಫೈನಲ್ ಫೈಟ್ ಪಂದ್ಯ:

ಈ ಪಂದ್ಯವು ಸರಣಿ ನಿರ್ಣಾಯಕ. ಏಕೆಂದರೆ ಮೂರು ಪಂದ್ಯಗಳ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಗೆಲುವು ದಾಖಲಿಸಿದೆ. ಅದರಂತೆ ಇದೀಗ ಮೂರನೇ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 2-1 ಅಂತರದಿಂದ ಸರಣಿ ಗೆಲ್ಲಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಆಯುಷ್ ಬದೋನಿ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).

ಇದನ್ನೂ ಓದಿ: ಸಿಕ್ಸರ್​ಗಳ ಸುರಿಮಳೆ… ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣ

ನ್ಯೂಝಿಲೆಂಡ್ ಏಕದಿನ ತಂಡ: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೆ, ಝ್ಯಾಕ್ ಫೌಲ್ಕ್ಸ್, ಮಿಚ್ ಹೇ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಜೇಡನ್ ಲೆನಾಕ್ಸ್, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.

Source link