ಗಾಜಿಯಾಬಾದ್: ಮಣಿಕಟ್ಟು ಸೀಳಿಕೊಂಡು ಅಪಾರ್ಟ್ಮೆಂಟ್ನ 11ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ ಯುವಕ – Kannada News | Ghaziabad Tragedy: 28 Year Old Man Dies After Fall From Residential Building
ಗಾಜಿಯಾಬಾದ್, ಜನವರಿ 13: ಯುವಕನೊಬ್ಬ ಮಣಿಕಟ್ಟು ಸೀಳಿಕೊಂಡು ಅಪಾರ್ಟ್ಮೆಂಟ್(Apartment)ನ 11ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. 11 ನೇ ಮಹಡಿಯಲ್ಲಿರುವ ತನ್ನ ಮನೆಯ ಬಾಲ್ಕನಿಯಿಂದ ಹಾರಿ 28 ವರ್ಷದ ಯಜ್ಞ ಪಾಂಡೆ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಂದಿರಾಪುರಂನ ಸೊಸೈಟಿಯೊಂದರ ನಿವಾಸಿಯಾಗಿರುವ ಯಜ್ಞ ಪಾಂಡೆ ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು…