Headlines

‘ವೆಲ್ಕಮ್ ಟು ದಿ ಜಂಗಲ್’: ದೇಶಾದ್ಯಂತ ಪ್ರದರ್ಶಕರಿಗೆ ದೊಡ್ಡ ಬೇಡಿಕೆಯಿಟ್ಟ ವಿತರಕರು – Kannada News | Welcome To The Jungle release Strategy Distributor Demands maximum shows in Multiplex and Single Screens

ಮುಂಬೈ: ಬಾಲಿವುಡ್ ಮಲ್ಟಿಸ್ಟಾರರ್ ಸಿನಿಮಾ ‘ವೆಲ್ಕಮ್ ಟು ದಿ ಜಂಗಲ್’ (Welcome To The Jungle) ಈ ವಾರ (ಜೂನ್ 25) ತೆರೆಗೆ ಬರಲು ಸಿದ್ಧವಾಗಿದೆ. ಅಕ್ಷಯ್ ಕುಮಾರ್ ಸೇರಿದಂತೆ ಹತ್ತಾರು ಸ್ಟಾರ್ ನಟರಿರುವ ಈ ಬಿಗ್ ಬಜೆಟ್ ಸಿನಿಮಾವನ್ನು ದೇಶಾದ್ಯಂತ ಅತ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ವಿತರಕ ಸಂಸ್ಥೆ ‘ಸ್ಟಾರ್ ಸ್ಟುಡಿಯೋ 18’ (Star Studio 18) ಭರ್ಜರಿ ಮಾಸ್ಟರ್ ಪ್ಲಾನ್ ಮಾಡಿದೆ. ಚಿತ್ರಮಂದಿರಗಳ ಮಾಲೀಕರಿಗೆ ವಿತರಕರು ಕಳುಹಿಸಿರುವ ಇಮೇಲ್‌ನಲ್ಲಿ ಶೋಗಳ ಹಂಚಿಕೆ ಕುರಿತು ಕೆಲವು ಅಚ್ಚರಿಯ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ವರದಿ ಆಗಿದೆ.

ಶೋಗಳ ಹಂಚಿಕೆಗೆ ವಿತರಕರು ದೊಡ್ಡ ಡಿಮ್ಯಾಂಡ್ ಇಟ್ಟಿದ್ದಾರೆ. ಸಿನಿಮಾದ ಮೇಲಿರುವ ಭಾರಿ ಕ್ರೇಜ್ ದೃಷ್ಟಿಯಲ್ಲಿಟ್ಟುಕೊಂಡು ಪ್ರದರ್ಶಕರಿಗೆ ವಿತರಕರು ಈ ರೀತಿ ಬೇಡಿಕೆ ಇಡುತ್ತಿದ್ದಾರೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಎಲ್ಲಾ ಶೋಗಳೂ ‘ವೆಲ್ಕಮ್ ಟು ದಿ ಜಂಗಲ್’ ಚಿತ್ರಕ್ಕೇ ಮೀಸಲಿರಬೇಕು. 2 ಸ್ಕ್ರೀನ್ ಇರುವ ಚಿತ್ರಮಂದಿರಗಳಲ್ಲಿ ಕನಿಷ್ಠ 7ರಿಂದ 8 ಶೋಗಳು ಬೇಕು ಎಂಬ ಬೇಡಿಕೆ ಇದೆ.

3 ಸ್ಕ್ರೀನ್ ಇರುವ ಚಿತ್ರಮಂದಿರಗಳಲ್ಲಿ 9ರಿಂದ 10 ಶೋಗಳನ್ನು ನೀಡಬೇಕು. 4 ಸ್ಕ್ರೀನ್​ಗಳ ಮಲ್ಟಿಪ್ಲೆಕ್ಸ್​ನಲ್ಲಿ 11 ರಿಂದ 12 ಶೋಗಳು, 5 ಸ್ಕ್ರೀನ್ ಇರುವ ಮಲ್ಟಿಪ್ಲೆಕ್ಸ್​ನಲ್ಲಿ 13ರಿಂದ 14 ಶೋಗಳು, 6 ಸ್ಕ್ರೀನ್​ಗಳ ಮಲ್ಟಿಪ್ಲೆಕ್ಸ್​ನಲ್ಲಿ 15ರಿಂದ 16 ಶೋಗಳಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಬೇಕು. 6ಕ್ಕಿಂತ ಹೆಚ್ಚು ಸ್ಕ್ರೀನ್ ಇರುವ ಮಲ್ಟಿಪ್ಲೆಕ್ಸ್​ನಲ್ಲಿ ಪ್ರತಿ ಸ್ಕ್ರೀನ್‌ನಲ್ಲಿ ಕಡ್ಡಾಯವಾಗಿ 3 ಶೋಗಳನ್ನು ನೀಡಬೇಕು.

ವಿತರಕರ ಈ ಬೃಹತ್ ಬೇಡಿಕೆಯು ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಮತ್ತು ಈ ವಾರ ಬಿಡುಗಡೆಯಾಗಲಿರುವ ಇತರ ಸಿನಿಮಾಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಸ್ತುತ ಬಾಲಿವುಡ್‌ನಲ್ಲಿ ‘ಕಾಕ್‌ಟೇಲ್ 2’ ಮತ್ತು ‘ಮೈ ವಾಪಸ್ ಆವುಂಗಾ’ ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಇದರೊಂದಿಗೆ ಪ್ರಾದೇಶಿಕ ಭಾಷೆಯ ಸಿನಿಮಾಗಳು ಕೂಡ ಪ್ರದರ್ಶನ ಆಗುತ್ತಿದ್ದು, ‘ವೆಲ್ಕಮ್ ಟು ದಿ ಜಂಗಲ್’ ಬಂದರೆ ಆ ಎಲ್ಲ ಸಿನಿಮಾಗಳಿಗೆ ತೊಂದರೆ ಆಗಲಿದೆ.

ಇದನ್ನೂ ಓದಿ: ವೆಲ್ಕಮ್ ಟು ದಿ ಜಂಗಲ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಶಾಕ್; ಬಿಕಿನಿ ದೃಶ್ಯಕ್ಕೆ ಕತ್ತರಿ

ಈ ಚಿತ್ರದಲ್ಲಿ ಬಾಲಿವುಡ್‌ನ ಸ್ಟಾರ್‌ಗಳ ದಂಡೇ ಇದೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್, ಅರ್ಷದ್ ವಾರ್ಸಿ, ಜಾಕಿ ಶ್ರಾಫ್, ಪರೇಶ್ ರಾವಲ್, ರವೀನಾ ಟಂಡನ್, ಲಾರಾ ದತ್ತಾ, ಜಾನಿ ಲಿವರ್, ಶ್ರೇಯಸ್ ತಲ್ಪಾಡೆ, ತುಷಾರ್ ಕಪೂರ್, ರಾಜ್‌ಪಾಲ್ ಯಾದವ್, ಕೃಷ್ಣ ಅಭಿಷೇಕ್, ಕಿಕು ಶಾರದಾ, ದಲೇರ್ ಮೆಹಂದಿ, ಉರ್ವಶಿ ರೌಟೇಲಾ ಸೇರಿದಂತೆ 30ಕ್ಕೂ ಹೆಚ್ಚು ಖ್ಯಾತ ನಟ-ನಟಿಯರು ಈ ಕಾಮಿಡಿ ಚಿತ್ರದಲ್ಲಿ ಒಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *