Category Archives: Blog

Your blog category

Optical Illusion: ನಿಮಗೊಂದು ಸವಾಲ್; ಬಾತುಕೋಳಿಗಳ ನಡುವೆ ಅಡಗಿರುವ ಮೀನುಗಳನ್ನು ಪತ್ತೆ ಹಚ್ಚಿ – Kannada News | Optical Illusion: If you can spot fishes hiding among ducks, it means you have sharp eyes

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಒಗಟಿನ ಚಿತ್ರಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ಕಷ್ಟ. ಹೀಗಾಗಿ ಹೆಚ್ಚಿನವರು ಇಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಬಿಡಿಸುವತ್ತ ಆಸಕ್ತಿ ತೋರಿಸುತ್ತಾರೆ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರವು ಆಪ್ಟಿಕಲ್ ಇಲ್ಯೂಷನ್‌ಗೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ. ಇದು ನಿಮ್ಮ ಮೆದುಳಿಗೆ ನೂರಕ್ಕೆ ನೂರರಷ್ಟು ಕೆಲಸ ನೀಡುತ್ತವೆ. ಇದೀಗ ಕಷ್ಟಕರವಾದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾತುಕೋಳಿಗಳ ನಡುವೆ ಅಡಗಿರುವ ಹತ್ತು ಮೀನುಗಳನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ. ಈ ಒಗಟಿನ ಚಿತ್ರ ಬಿಡಿಸಲು ಇರುವ ಕಾಲವಕಾಶ 10 ಸೆಕೆಂಡುಗಳು ಮಾತ್ರ. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ.

ಇಲ್ಯೂಷನ್ ಚಿತ್ರದಲ್ಲಿ ಏನು ಕಾಣಿಸಿತು?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಚಿತ್ರಗಳು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಉತ್ತರವನ್ನು ನಿಗದಿತ ಸಮಯದೊಳಗೆ ಕಂಡುಹಿಡಿಯುವುದು ಕಷ್ಟವಾಗಬಹುದು. ಇದೀಗ ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಸರೋವರದಲ್ಲಿರುವ ಬಾತುಕೋಳಿಗಳು ಕಾಣಿಸುತ್ತವೆ. ಆದರೆ ಈ ಬಾತುಕೋಳಿಗಳ ನಡುವೆ 10 ಮೀನುಗಳು ಇವೆ. ಆ ಮೀನುಗಳನ್ನು ನೀವು ಪತ್ತೆ ಹಚ್ಚಬೇಕು. ಕಣ್ಣು ಅಗಲಿಸಿ ಚಿತ್ರ ನೋಡಿ ಮೀನುಗಳನ್ನು ಗುರುತಿಸಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಮೀನನ್ನು7 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ

ಮೀನುಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತೇ?

ನಿಮಗೆ ಕೊಟ್ಟಿರುವ ಹತ್ತು ಸೆಕೆಂಡುಗಳೊಳಗೆ ಮೀನುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಹೆಚ್ಚು ಚಿಂತಿಸಬೇಡಿ. ಹೆಚ್ಚಿನವರಿಗೆ ಈ ಒಗಟು ಬಿಡಿಸಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಒಂದೆರಡು ಮೀನುಗಳು ಮಾತ್ರ ಕಾಣಿಸಿರಬಹುದು. ಈ ಕೆಳಗಿನ ಚಿತ್ರದಲ್ಲಿ ಮೀನುಗಳು ಎಲ್ಲಿವೆ ಎಂದು ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Spiritual Benefits: ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ಹರಳೆಣ್ಣೆ ಸ್ನಾನ ಮಾಡಿಸಿ; ಪ್ರಯೋಜನ ಸಾಕಷ್ಟಿವೆ – Kannada News | Weekly Abhyanga Snana: Unlocking Physical and Spiritual Benefits for Kids

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಹರಳೆಣ್ಣೆ ಅಭ್ಯಂಜನ ಸ್ನಾನದ ಮಹತ್ವವನ್ನು ತಿಳಿಸಿದ್ದಾರೆ. ಮಕ್ಕಳಿರುವಾಗ ಹೊಕ್ಕಳಿಗೆ ಹರಳೆಣ್ಣೆ ಹಚ್ಚುವ ಪದ್ಧತಿ ಹಿಂದಿನಿಂದಲೂ ಇದೆ. ತಾಯಿಯಿಂದ ಮಗುವಿಗೆ ಆಹಾರ ಹೊಕ್ಕಳ ಮೂಲಕವೇ ಬರುವುದರಿಂದ, ಈ ಜೀವದ ಮತ್ತು ದೇಹದ ಉಸಿರಾಟಕ್ಕೆ ಹೊಕ್ಕಳು ಮಹತ್ವದ ಕೇಂದ್ರ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಆದ್ದರಿಂದ ಹರಳೆಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದು ವಿಶೇಷ ಮಹತ್ವ ಪಡೆದಿದೆ.

ಗಂಡು ಮಕ್ಕಳಿಗೆ 21 ವರ್ಷದವರೆಗೆ ಮತ್ತು ಹೆಣ್ಣು ಮಕ್ಕಳಿಗೆ 18 ವರ್ಷದವರೆಗೆ (ಇದು ವಯಸ್ಸಿನ ಮಿತಿಯಲ್ಲ, ಪ್ರಬುದ್ಧತೆಯ ಹಂತದ ಸೂಚಕ) ವಾರಕ್ಕೊಮ್ಮೆಯಾದರೂ ಅರಳೆಣ್ಣೆ ಅಭ್ಯಂಜನ ಸ್ನಾನ ಮಾಡಿಸುವುದು ಅತ್ಯಂತ ಪ್ರಯೋಜನಕಾರಿ. ದೊಡ್ಡವರೂ ಸಹ ಈ ಅಭ್ಯಾಸವನ್ನು ಪಾಲಿಸಬಹುದು. ಹರಳೆಣ್ಣೆಯನ್ನು ತಲೆಗೆ, ಹೊಕ್ಕಳಿಗೆ, ಪಾದಗಳಿಗೆ ಮತ್ತು ಅಂಗೈಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಚ್ಚಿ, ನಂತರ ಮಕ್ಕಳನ್ನು ಬಿಸಿಲಿನಲ್ಲಿ ಸ್ವಲ್ಪ ಸಮಯ ಓಡಾಡಲು ಬಿಡಬೇಕು. ಇದರಿಂದ ಮೂರು ಪ್ರಮುಖ ಫಲಿತಾಂಶಗಳು ದೊರೆಯುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮೊದಲನೆಯದಾಗಿ, ಮಕ್ಕಳ ದೇಹದ ಉಷ್ಣಾಂಶ ಸಮತೋಲನಗೊಳ್ಳುತ್ತದೆ. ಇದು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಜೊತೆಗೆ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.

ಎರಡನೆಯದಾಗಿ, ಜ್ಯೋತಿಷ್ಯದ ಪ್ರಕಾರ, ಈ ಅಭ್ಯಾಸವು ಮಕ್ಕಳ ಕರ್ಮಫಲಗಳನ್ನು ಕಡಿಮೆ ಮಾಡುತ್ತದೆ, ಬುದ್ಧಿಶಕ್ತಿಯನ್ನು ಚುರುಕುಗೊಳಿಸುತ್ತದೆ ಮತ್ತು ಗ್ರಹದೋಷಗಳನ್ನು ನಿವಾರಿಸುತ್ತದೆ. ಇದು ಅನುಭವದ ಮೂಲಕ ಸತ್ಯ ಎಂದು ಹೇಳಲಾಗುತ್ತದೆ. ಪೂರ್ವಜರು ಮತ್ತು ಗುರುಗಳ ಅನುಭವವು ಈ ಸತ್ಯಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ವಾರಕ್ಕೊಮ್ಮೆ, ವಿಶೇಷವಾಗಿ ರಜಾ ದಿನವಾದ ಭಾನುವಾರ, ಮಕ್ಕಳನ್ನು ಪ್ರವಾಸಗಳಿಗೆ ಕರೆದುಕೊಂಡು ಹೋಗುವ ಬದಲು ಅವರ ಆರೋಗ್ಯದ ಕಡೆ ಗಮನ ಹರಿಸಿದರೆ ವಾರವಿಡೀ ಮಕ್ಕಳು ಹೆಚ್ಚು ಚುರುಕಾಗಿರುತ್ತಾರೆ. ಅರಳೆಣ್ಣೆ ಸ್ನಾನದಿಂದ ಅವರ ನೆನಪಿನ ಶಕ್ತಿ (ಮೆಮರಿ ಪವರ್) ಹೆಚ್ಚುತ್ತದೆ. ಆಲೋಚನಾ ಶಕ್ತಿ ಉತ್ತಮವಾಗುತ್ತದೆ ಮತ್ತು ದೃಷ್ಟಿ ಉತ್ತಮಗೊಳ್ಳುತ್ತದೆ. ಕರಿಬೇವು ಎಲೆಗಳನ್ನು ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ ಎಂದು ಆಯುರ್ವೇದ ಮತ್ತು ಹಿರಿಯರು ಹೇಳುವಂತೆ, ಹರಳೆಣ್ಣೆಯೂ ದೃಷ್ಟಿಗೆ ಸಹಕಾರಿ.

ಹರಳೆಣ್ಣೆಯನ್ನು ಹೆಚ್ಚು ಸುರಿಯದೆ, ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ತಲೆ, ಅಂಗೈ, ಪಾದ ಮತ್ತು ಹೊಕ್ಕಳಿಗೆ ಹಚ್ಚಬೇಕು. ನಂತರ ತುಂಬಾ ಬಿಸಿ ಇಲ್ಲದ, ಮಂದ ಬೆಚ್ಚಗಿನ ನೀರಿನಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವುದರಿಂದ ಅವರಿಗೆ ಬಹಳ ಒಳ್ಳೆಯದಾಗುತ್ತದೆ. ಈ ಅಭ್ಯಾಸವನ್ನು ಎಲ್ಲರೂ, ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ, ಅನುಸರಿಸಬಹುದು. ಇದು ಎಲ್ಲಾ ವಿಧದಲ್ಲೂ ಶುಭಕರ ಎಂದು ಗುರೂಜಿ ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:55 am, Tue, 13 January 26

Source link

Video: ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ, ಆ ರಾತ್ರಿ ನಡೆದಿದ್ದೇನು? – Kannada News | Goa Lost After Dark, Saved by Kindness, A Ride That Restored Faith, Foreign Woman Lost At Night , what happens

ಗೋವಾ, ಜನವರಿ 13: ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆ ಅಕ್ಷರಶಃ ಭಯಭೀತರಾಗಿದ್ದರು. ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ್ದರು. ಆಗ ರಾತ್ರಿ ಹತ್ತು ಗಂಟೆಯಾಗಿತ್ತು, ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂದು ಅರಿಯದೆ ನಿಂತಲ್ಲೇ ನಿಂತಿದ್ದರು. ಆಗ ಸಹಾಯಕ್ಕೆ ಬಂದಿದ್ದೇ ರ್ಯಾಪಿಡೊ ಚಾಲಕಿ ಸಿಂಧು ಕುಮಾರಿ. ಅವರು ತಮ್ಮ ವಾಹನವನ್ನು ನಿಲ್ಲಿಸಿ ಆ ಮಹಿಳೆಗೆ ಧೈರ್ಯ ತುಂಬಿ, ಸುರಕ್ಷಿತವಾಗಿ ಹೋಟೆಲ್​ ಕೊಕೊನಟ್​ಗೆ ಇಳಿಸಿ, ಅವರ ಭಯವನ್ನು ನಗುವಾಗಿ ಪರಿವರ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ವಿದೇಶಿ ಮಹಿಳೆ ಕೂಡಾ ಕೃತಜ್ಞತೆ ಸಲ್ಲಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ಹೃದ್ರೋಗಿಗಳಿಗೆ ಶುಭ ಸುದ್ದಿ: ಜಿಬಿಎ 5 ಕಾರ್ಪೊರೇಷನ್​ಗಳಲ್ಲಿ ಸ್ಥಾಪನೆಯಾಗಲಿದೆ ಜಯದೇವ ಆಸ್ಪತ್ರೆ ಸ್ಯಾಟಲೈಟ್ ಘಟಕ – Kannada News | Good News for Heart Patients: Jayadeva Hospital Satellite Units to Come Up in 5 GBA Corporations

ಬೆಂಗಳೂರು, ಜನವರಿ 13: ಈ ಹಿಂದೆ 40 ವರ್ಷ‌ ಮೇಲ್ಪಟ್ಟವರಲ್ಲಿ ಹೃದಯಾಘಾತ (Heart Attack) ಸಂಭವಿಸುತ್ತಿತ್ತು. ಆದರೆ ಈಗ ಯುವ ಸಮೂಹವನ್ನೇ ಹೃದಯಾಘಾತ ಕಾಡಲಾರಂಭಿಸಿದೆ. ಯುವಕರಲ್ಲಿ ಹೆಚ್ಚು ಹೃದಯಾಘಾತ ಸಂಭವಿಸುತ್ತಿರುವ ಬಗ್ಗೆ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹೆಚ್ಚು ಹೃದಯಘಾತ ಹಿನ್ನಲೆ ಶಸ್ತ್ರಚಿಕಿತ್ಸೆಗೆ ಒಟಿಗಳ ಬೆಡ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಬೆಂಗಳೂರಿನಲ್ಲಿ 5 ಜಯದೇವ ಯೂನಿಟ್ ಶುರು ಮಾಡಲು ಮುಂದಾಗಿದೆ.

5 ಜಯದೇವ ಯೂನಿಟ್ ಶುರು ಮಾಡುವ ಬಗ್ಗೆ ಕ್ಯಾಬಿನೆಟ್​​ನಲ್ಲಿ ಪ್ರಸ್ತಾಪಿಸಿ ಅನುಮೋದನೆ ಪಡೆಯಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದೆ. ಜಯದೇವದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸಾವಿರಕ್ಕಿಂತ ಕಡಿಮೆ ಇದ್ದ ವಾಕ್ ಇನ್‌ ರೋಗಿಗಳ ಸಂಖ್ಯೆ ಈಗ 2 ಸಾವಿರದ ಗಡಿದಾಟಿದೆ. ಹೀಗಾಗಿ ಹೊಸದಾಗಿ ರಚನೆಯಾದ ಗ್ರೇಟರ್ ಬೆಂಗಳೂರಿನ 5 ಕಾರ್ಪೊರೇಷನ್​ಗಳಲ್ಲಿ ಜಯದೇವ ಸ್ಯಾಟಲೈಟ್ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾವನೆ ನೀಡಿದ್ದು ಈಗ ವೈದ್ಯಕೀಯ ಶಿಕ್ಷಣ ಇಲಾಖೆ ಇದಕ್ಕೆ ಸರ್ಕಾರದ ಹಂತದಲ್ಲಿ ಗ್ರೀನ್ ಸಿಗ್ನಲ್ ಪಡೆಯಲು ಮುಂದಾಗಿದೆ. ಜನಸಂಖ್ಯೆಗೆ ತಲಾ 100 ಹಾಸಿಗೆಗಳ ಸಾಮರ್ಥ್ಯದ ಐದು ಸ್ಯಾಟಲೈಟ್ ಕೇಂದ್ರಗಳನ್ನ ಶುರು ಮಾಡಲು ಮುಂದಾಗಿದೆ. ರಾಜ್ಯದ ಎಲ್ಲ ಜಿಲ್ಲ ಕೇಂದ್ರಗಳಿಂದ ರೋಗಿಗಳ
ಸಂಖ್ಯೆ ಹೆಚ್ಚಾಗಿ ಜಯದೇವ ಆಸ್ಪತ್ರೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಐದು ಕಾರ್ಪೊರೇಷನ್​​ಗಳಲ್ಲಿ ಪ್ರತಿಯೊಂದರಲ್ಲಿಯೂ ಒಂದು ಸ್ಯಾಟಲೈಟ್ ಕೇಂದ್ರ ಆರಂಭಕ್ಕೆ ಮುಂದಾಗಿದೆ.

ಇದನ್ನೂ ಓದಿ: ಹೃದಯ ಚೆನ್ನಾಗಿರಬೇಕು ಅಂದ್ರೆ ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ 3 ಆಹಾರಗಳನ್ನು ಸೇವಿಸಬೇಡಿ

ಒಟ್ಟಿನಲ್ಲಿ ರಾಜಧಾನಿಯಲ್ಲಿ ಇದೀಗ ಜಯದೇವ ಆಸ್ಪತ್ರೆ ಮೇಲೆ ಹೆಚ್ಚು ಒತ್ತಡದ ಜೊತೆಗೆ ಟ್ರಾಫಿಕ್ ಸಮಸ್ಯೆಯಿಂದ ಬೇಗ ಆಸ್ಪತ್ರೆ ತಲುಪಲು ಸಾಧ್ಯವಾಗದ ಹಿನ್ನಲೆ ಬೆಂಗಳೂರಿನಲ್ಲಿ 5 ಜಯದೇವ ಘಟಕ ಸ್ಥಾಪನೆಗೆ ಇಲಾಖೆ ಮುಂದಾಗಿದೆ. ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪಹರಿಸಿ ಆರ್ಕೆಸ್ಟ್ರಾ ಡ್ಯಾನ್ಸರ್​ ಮೇಲೆ ಸಾಮೂಹಿಕ ಅತ್ಯಾಚಾರ, ಆರೋಪಿಯ ಫೋನ್ ಕದ್ದು ಪೊಲೀಸರಿಗೆ ಕರೆ ಮಾಡಿದ ಮಹಿಳೆ – Kannada News | Brave Orchestra Dancer: Physical Assault in Bihar, Calls 112 from Attacker’s Phone for Rescue

ಬಿಹಾರ, ಜನವರಿ 13: ಆರ್ಕೆಸ್ಟ್ರಾ ನರ್ತಕಿ(Dancer)ಯನ್ನು ಕೆಲವು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. 24 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಕುಡಿದ ಮತ್ತಿನಲ್ಲಿದ್ದ ಆರೋಪಿಯೊಬ್ಬನ ಫೋನ್​ ಬಳಸಿ ಯುವತಿ ಪೊಲೀಸರಿಗೆ ಕರೆ ಮಾಡಿ ರಕ್ಷಣೆ ಕೋರಿದ್ದಾಳೆ.

ಇದರಿಂದಾಗಿ ಆಕೆಯ ರಕ್ಷಣೆ ಮತ್ತು ಆರು ಆರೋಪಿಗಳಲ್ಲಿ ಒಬ್ಬನ ಬಂಧನ ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ಇಬ್ಬರು ಪುರುಷರು ಆಕೆಯನ್ನು ಅಪಹರಿಸಿ ಸುಮಾರು 25 ಕಿ.ಮೀ ದೂರದ ಗೋಡೌನ್‌ಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಇತರೆ ನಾಲ್ವರು ಪುರುಷರು ಈಗಾಗಲೇ ಅಲ್ಲಿದ್ದರು.

ಬಲವಂತವಾಗಿ ಮದ್ಯ ಸೇವಿಸಿ ನೃತ್ಯ ಮಾಡಿಸಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಆರು ಪುರುಷರು ಒಬ್ಬರ ನಂತರ ಒಬ್ಬರು ಅತ್ಯಾಚಾರ ಎಸಗಿದ್ದಾರೆ. ಹಲ್ಲೆಯ ನಂತರ, ಐವರು ಪುರುಷರು ಆಕೆಯನ್ನು ಕೋಣೆಯೊಳಗೆ ಕೂಡಿಹಾಕಿ ಪರಾರಿಯಾಗಿದ್ದಾರೆ. ಆದರೆ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಒಳಗೆ ಮಲಗಿದ್ದ.

ಮತ್ತಷ್ಟು ಓದಿ: Video: ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ

ಪರಿಸ್ಥಿತಿಯ ಲಾಭ ಪಡೆದುಕೊಂಡ ಮಹಿಳೆ, ಮಲಗಿದ್ದ ವ್ಯಕ್ತಿಯ ಫೋನ್ ಬಳಸಿ, ಮಧ್ಯರಾತ್ರಿ 12.15 ರ ಸುಮಾರಿಗೆ ತುರ್ತು ಸಂಖ್ಯೆ 112 ಗೆ ಕರೆ ಮಾಡಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತುರ್ತು ಕರೆ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊರಗಿನಿಂದ ಬಾಗಿಲು ಲಾಕ್ ಮಾಡಲಾಗಿತ್ತು ಮತ್ತು ಪೊಲೀಸ್ ಸಿಬ್ಬಂದಿ ಗೋಡೌನ್ ಒಳಗೆ ಪ್ರವೇಶಿಸಲು ಬಾಗಿಲು ಒಡೆಯಬೇಕಾಯಿತು ಎಂದು ಅಧಿಕಾರಿ ಹೇಳಿದರು. ಮೂಲದ ಪ್ರಕಾರ, ಸಂತ್ರಸ್ತೆ ಒಳಗೆ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮದ್ಯದ ಬಾಟಲಿಗಳು ಕೋಣೆಯಲ್ಲಿ ಹರಡಿಕೊಂಡಿವೆ. ಅಲ್ಲಿ ಒಬ್ಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಬಿದ್ದಿರುವುದು ಕಂಡುಬಂದಿದೆ.

ಗಾಯಗೊಂಡ ಮಹಿಳೆಯನ್ನು ಪೂರ್ಣಿಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಪ್ರಸ್ತುತ ಆಕೆಯ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಸ್ಥಳೀಯ ನಿವಾಸಿ ಮೊಹಮ್ಮದ್ ಜುನೈದ್ (35) ಎಂದು ಗುರುತಿಸಲಾಗಿದ್ದು, ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತ ಆರೋಪಿಗಳ ಹೊರತಾಗಿ, ಯುವರಿ ಇತರ ಇಬ್ಬರ ಹೆಸರನ್ನು ಹೆಸರಿಸಿದ್ದಾರೆ ಎಂದು ಸಹರಾವತ್ ಹೇಳಿದರು.

ಆರೋಪಿಗಳ ತನಿಖೆ ಮತ್ತು ವಿಚಾರಣೆಯ ಸಮಯದಲ್ಲಿ, ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಸಂಗತಿಗಳು ಸಹ ತಿಳಿದುಬಂದಿದೆ. ಸಂತ್ರಸ್ತೆಯ ಪತಿ ಒಂದು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ನಿಧನರಾದ್ದರು ಮತ್ತು ಅವರು ಒಂಟಿಯಾಗಿ ವಾಸಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಜನ ನಾಯಗನ್’ ಪ್ರಕರಣ ಕೋರ್ಟ್​​ನಲ್ಲಿರುವಾಗ ವಿಜಯ್​ಗೆ ಸಿಬಿಐನಿಂದ ಸಂಕಷ್ಟ – Kannada News | Actor Vijay Faces CBI Inquiry for Karur Incident Amid Jana Nayagan Film in SC

ಟಿವಿಕೆ ಮುಖ್ಯಸ್ಥ ಹಾಗೂ ನಟ ದಳಪತಿ ವಿಜಯ್​ಗೆ (Thalapathy Vijya) ಒಂದಾದ ಮೇಲೆ ಒಂದರಂತೆ ಕಷ್ಟ ಎದುರಾಗುತ್ತಿದೆ. ಅವರ ನಟನೆಯ ‘ಜನ ನಾಯಗನ್’ ರಿಲೀಸ್ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ. ಹೀಗಿರುವಾಗಲೇ ಅವರು ಸಿಬಿಐ ವಿಚಾರಣೆ ಎದುರಿಸಬೇಕಾಗಿದೆ. ದೆಹಲಿಯ ಸಿಬಿಐ ಕಚೇರಿಗೆ ತೆರಳಿ ಅವರು ವಿಚಾರಣೆ ಎದುರಿಸಿದ್ದಾರೆ. ಇದಕ್ಕೆ ಕಾರಣ ಕರೂರು ಕಾಲ್ತುಳಿತದ ಘಟನೆ. ಈ ಪ್ರಕರಣದಲ್ಲಿ ಅವರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟ ಹೆಚ್ಚೋ ಸಾಧ್ಯತೆ ಇದೆ.

ಕಳೆದ ವರ್ಷ ಸೆಪ್ಟೆಂಬರ್ 27ರಂದು ವಿಜಯ್ ಅವರು ಕರೂರಿನಲ್ಲಿ ಪಕ್ಷದ ಸಮಾವೇಶ ಆಯೋಜನೆ ಮಾಡಿದ್ದರು. ಈ ವೇಳೆ ದೊಡ್ಡ ಮಟ್ಟದಲ್ಲಿ ಜನರು ಸೇರಿದ್ದರು. ಈ ಪ್ರಕರಣದಲ್ಲಿ 41 ಜನರು ನಿಧನ ಹೊಂದಿದ್ದರು.ಈ ಘಟನೆಗೆ ವಿಜಯ್ ಅವರೇ ಕಾರಣ ಎಂಬ ಆರೋಪಗಳು ಎದುರಾದವು. ಈಗ ಪ್ರಕರಣವನ್ನು ಸಿಬಿಐಗೆ ಕೈಗೆತ್ತಿಕೊಂಡು ವಿಚಾರಣೆ ಮಾಡುತ್ತಿದೆ.

ಆರಂಭದಲ್ಲಿ ಈ ಪ್ರಕರಣವನ್ನು ಎಸ್​​​ಐಟಿ ತನಿಖೆ ಮಾಡುತ್ತಿತ್ತು. ಸುಪ್ರೀಂಕೋರ್ಟ್ ಆದೇಶದ ಅನುಸಾರ ಪ್ರಕರಣ ಸಿಬಿಐಗೆ ವರ್ಗಾವಣೆ ಆಗಿದೆ. ಈ ಪ್ರಕರವನ್ನು ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಅವರು ಮಾನಿಟರ್ ಮಾಡುತ್ತಿದ್ದಾರೆ.

ವಿಜಯ್ ಅವರು ಹೇಳಿದ ಸಮಯಕ್ಕೆ ಸಮಾವೇಶಕ್ಕೆ ಬರದೇ ಇದ್ದಿದ್ದೇ ಕಾಲ್ತುಳಿತಕ್ಕೆ ಕಾರಣ ಎಂದು ತಮಿಳುನಾಡು ಪೊಲೀಸರು ದೂರಿದ್ದರು. ಜನರು ಕಾದು ಕಾದು ತಮ್ಮ ತಾಳ್ಮೆ ಕಳೆದುಕೊಂಡಿದ್ದರು ಎಂಬುದು ಪೊಲೀಸರ ಆರೋಪ. ಇನ್ನು, ನೆರೆದಿದ್ದವರಿಗೆ ಆಹಾರ, ನೀರು ಹಾಗೂ ಶೌಚಾಲಯದ ವ್ಯವಸ್ಥೆ ಈ ಭಾಗದಲ್ಲಿ ಇರಲಿಲ್ಲ ಎಂದು ದೂರಲಾಗಿತ್ತು. ಇದು ಆಡಳಿತಾರೂಢ ಡಿಎಂಕೆ ಪಕ್ಷದ ಕೈವಾಡ ಎಂದು ವಿಜಯ್ ಹೇಳಿದ್ದರು.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ‘ಜನ ನಾಯಗನ್’ ಸಿನಿಮಾ ವಿವಾದ

‘ಜನ ನಾಯಗನ್’ ವಿಜಯ್ ಅವರ ಕೊನೆಯ ಸಿನಿಮಾ. ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಸಿನಿಮಾಗೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ನೀಡುತ್ತಿಲ್ಲ. ನೂರಾರು ಕೋಟಿ ರೂಪಾಯಿ ಸುರಿದು ಮಾಡಿರೋ ಈ ಚಿತ್ರ ತೊಂದರೆ ಅನುಭವಿಸುತ್ತಿದೆ. ಈ ಮೊದಲು ಮದ್ರಾಸ್ ಹೈಕೋರ್ಟ್ ಸಿನಿಮಾಗೆ ‘ಯುಎ’ ಸರ್ಟಿಫಿಕೇಟ್ ನೀಡಬೇಕು ಎಂದು ಆದೇಶಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ತನ್ನದೇ ಆದೇಶಕ್ಕೆ ಕೋರ್ಟ್ ತಡೆ ನೀಡಿತ್ತು. ಈಗ ತಂಡದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ – Kannada News | Disguise Unravels: Police Nab 50 Year Old Accused in Mathura Minor Physical assault case

ಮಥುರಾ, ಜನವರಿ 13: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿ ರಾಜೇಂದ್ರ ಸಿಸೋಡಿಯಾ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಮಥುರಾದಲ್ಲಿ ನಡೆದಿದೆ. ಆತನಿಗೆ 50 ವರ್ಷ ವಯಸ್ಸು. ಆತ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆ ಮರೆಸಿಕೊಂಡಿದ್ದ. ಲಿಪ್​ಸ್ಟಿಕ್, ಬುರ್ಖಾ ಧರಿಸಿ ಓಡಾಡುಡುತ್ತಿದ್ದ, ಆದರೂ ಪೊಲೀಸರ ಹದ್ದಿನ ಕಣ್ಣಿಂದ ತಪ್ಪಿಸಿಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜನರ ಸಪೋರ್ಟ್ ಹೇಗಿದೆ ಎಂಬುದನ್ನು ಸ್ಪರ್ಧಿಗಳಿಗೆ ತೋರಿಸಿದ ಬಿಗ್ ಬಾಸ್  – Kannada News | Bigg Boss Shows Fans Love to Contestants in Bigg Boss

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವಾರ ಅದ್ದೂರಿಯಾಗಿ ನಡೆಯುತ್ತಿದೆ. ಧ್ರುವಂತ್, ಕಾವ್ಯಾ, ಧನುಶ್ ಸೇರಿದಂತೆ ಎಲ್ಲರೂ ಜನರನ್ನು ನೋಡಿ ತುಂಬಾನೇ ಖುಷಿಪಟ್ಟಿದ್ದಾರೆ. ಜನರು ತೋರಿಸಿದ ಪ್ರೀತಿ ನೋಡಿ ಅವರ ಸಂತಸ ಹೆಚ್ಚಿದೆ. ಆ ಸಂದರ್ಭದ ಪ್ರೋಮೋನ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ಆ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿ ಏನೇನು ಚಿನ್ನಾಭರಣಗಳಿದ್ದವು ಗೊತ್ತೇ? ಕೊನೆಗೂ ಸಿಕ್ತು ಅಧಿಕೃತ ಮಾಹಿತಿ – Kannada News | Lakkundi Gold Treasure Details Revealed: Official List of Ornaments Found in Gadag

ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ & ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿದ್ದ ಚಿನ್ನಾಭರಣ

ಗದಗ, ಜನವರಿ 13: ಗದಗ (Gadag) ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯದ ಕೆಲಸದ ವೇಳೆ ಚಿನ್ನದ ನಿಧಿ (Gold Treasure) ಸಿಕ್ಕಿದ ವಿಚಾರ ಹತ್ತಾರು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಈವರೆಗೆ ಅರ್ಧ ಕೆಜಿ ಚಿನ್ನದ ನಿಧಿ ದೊರೆತಿದೆ ಎಂಬ ವರದಿಯಾಗಿತ್ತಷ್ಟೇ ವಿನಃ, ಅದರಲ್ಲಿ ಏನೇನಿದ್ದವು ಎಂಬ ಮಾಹಿತಿ ಇರಲಿಲ್ಲ. ಇದೀಗ ಗದಗ ಜಿಲ್ಲಾಧಿಕಾರಿ ಆ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ನಿಧಿಯಲ್ಲಿ ಏನೇನು ಆಭರಣಗಳಿದ್ದವು ಎಂಬುದನ್ನು ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ಬಹಿರಂಗಪಡಿಸಿದ್ದಾರೆ.

ಚಿನ್ನಾಭರಣಗಳ ಸ್ವರೂಪ ಹಾಗೂ ತೂಕದ ವಿವರ

  • ಕೈ ಕಡಗದ 1 ತುಂಡು – 33 ಗ್ರಾಂ
  • ಕೈ ಕಡಗದ 1 ತುಂಡು – 12 ಗ್ರಾಂ
  • ಕಂಠದ ಹಾರ 1 ತುಂಡು – 44 ಗ್ರಾಂ
  • ಕಂಠದ ಹಾರ 1 ತುಂಡು – 137 ಗ್ರಾಂ
  • ಕುತ್ತಿಗೆ ಚೈನ್ 1 ತುಂಡು – 49 ಗ್ರಾಂ
  • 5 ದೊಡ್ಡ ಗುಂಡಿನ 1 ತೋಡೆ ತುಂಡು – 34 ಗ್ರಾಂ
  • 2 ದೊಡ್ಡ ಗುಂಡಿನ 1 ತೋಡೆ ತುಂಡು – 17 ಗ್ರಾಂ
  • 1 ದೊಡ್ಡ ಗುಂಡು + 1 ಸಣ್ಣ ಗುಂಡಿನ 1 ತುಂಡು – 11 ಗ್ರಾಂ
  • 1 ದೊಡ್ಡ ಗುಂಡು + 1 ಸಣ್ಣ ಗುಂಡಿನ 1 ತುಂಡು – 11 ಗ್ರಾಂ
  • 1 ವಂಕಿ ಉಂಗುರ – 23 ಗ್ರಾಂ
  • ಕಿವಿ ಹ್ಯಾಂಗಿಂಗ್ 1 ತುಂಡು – 03 ಗ್ರಾಂ
  • 1 ನಾಗ ರೂಪದ ಕಿವಿಯೋಲೆ ಬಿಳಿ ಮಣಿ ಸಹಿತ – 07 ಗ್ರಾಂ
  • 1 ನಾಗ ರೂಪದ ಕಿವಿಯೋಲೆ ಕೆಂಪು ಮಣಿ ಸಹಿತ – 07 ಗ್ರಾಂ
  • 1 ಓಲೆ (ನೀಲಿ ಹರಳಿನೊಂದಿಗೆ) – 05 ಗ್ರಾಂ
  • 1 ಓಲೆ (ನೀಲಿ ಹರಳಿನೊಂದಿಗೆ) – 05 ಗ್ರಾಂ
  • 1 ಕೇಸರಿ ಹವಳದ ಓಲೆ – 05 ಗ್ರಾಂ
  • 1 ಉಂಗುರ – 08 ಗ್ರಾಂ
  • 1 ಬಿಳಿ ಹರಳು, 1 ಕೆಂಪು ಹರಳು , 1 ಹಸಿರು ಹರಳು ಅಂಗಿ ಗುಂಡಿ ಮತ್ತು 1 ತುಂಡು ಗೆಜ್ಜೆ ಎಲ್ಲ ಸೇರಿ:- 4 ಗ್ರಾಂ
  • 2 ಕಡ್ಡಿಗಳು – 03 ಗ್ರಾಂ
  • 22 ತೂತು ಬಿಲ್ಲೆಗಳು – 48 ಗ್ರಾಂ
  • ಒಟ್ಟು ಚಿನ್ನ : 466 ಗ್ರಾಂ

ಚಿನ್ನಾಭರಣ ಮಾತ್ರವಲ್ಲದೆ ತಾಮ್ರದ ಶಿಥಿಲಗೊಂಡ 1 ಮಡಿಕೆ, 1 ಮುಚ್ಚಳ ಹಾಗೂ 3 ಸಣ್ಣ ತುಂಡು ಸಹಿತ 634 ಗ್ರಾಂ ತಾಮ್ರದ ತೆಂಬಿಗೆ ದೊರೆತಿದೆ.

ಯಾರ ಪಾಲಾಗಲಿದೆ ನಿಧಿ? ಡಿಸಿ ಹೇಳಿದ್ದಿಷ್ಟು…

ನಿಧಿಯ ಕುರಿತು ಸಂಪೂರ್ಣ ಪರಿಶೀಲನೆ, ವಿಚಾರಣೆ ಆಗುವ ವರೆಗೂ ಜಿಲ್ಲಾ ಖಜಾನೆಯಲ್ಲಿರುತ್ತದೆ. ಆಮೇಲೆ ನಿಧಿ ರಾಜ್ಯ ಖಜಾನೆಗೆ ಹೋಗುತ್ತದೆ ಎಂದು ಸಿಎನ್ ಶ್ರೀಧರ್ ಹೇಳಿದ್ದಾರೆ. ಪುರಾತತ್ವ ಇಲಾಖೆಯಿಂದ ವಸ್ತುಗಳ ಸಂಗ್ರಹಾಲಯ ಇಡುತ್ತಾರೆ. ಕಾನೂನು ನಿಯಮದಂತೆ ನಡೆದುಕೊಳ್ಳಬೇಕಾಗುತ್ತದೆ. ಕುಟುಂಬಸ್ಥರ ಅಭಿಪ್ರಾಯದಂತೆ ನಡೆದುಕೊಳ್ಳಲು ಆಗುವುದಿಲ್ಲ. ಕ್ಲೇಮ್ ಕೌಂಟರ್ ಕ್ಲೇಮ್ ಆದ ಮೇಲೆ ಬಹುಮಾನದ ವಿಚಾರ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅರ್ಧ ಕೆಜಿ ಚಿನ್ನದ ನಿಧಿ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರನ ಅಳಲು

ಜಾಗ ವಶಕ್ಕೆ ಪಡೆಯುವುದಕ್ಕೂ ಬಿಡುವುದಕ್ಕೂ ಈಗ ಪ್ರಕ್ರಿಯೆ ಇರುವುದಿಲ್ಲ ಇತಿಹಾಸ ತಜ್ಞರು ಪರಿಶೀಲನೆ ಮಾಡಿದ ಮೇಲೆ, ಅಲ್ಲಿ ಯಾವುದೇ ವಸ್ತು ಸಿಗುವುದಿಲ್ಲ ಎಂಬುದು ಗೊತ್ತಾದ ನಂತರ ಅವರು ಮನೆ ಕಟ್ಟಲು ಮುಂದುವರೆಯಲು ಅವಕಾಶ ನೀಡಲಾಗುತ್ತದೆ. ಎಂಟು ದಿನಗಳ ಒಳಗೆ ಅವಕಾಶ ಕೊಡುತ್ತೇವೆ. ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆ ಅಭಿಪ್ರಾಯ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಣಿಗಲ್ ಉತ್ಸವದಲ್ಲಿ ಬಿಗ್ ಬಾಸ್ ವೀಕ್ಷಕರಿಗೆ ಕಿವಿಮಾತು ಹೇಳಿದ ಸುದೀಪ್ – Kannada News | Bigg Boss Kannada 12 Finale: Sudeep’s Message from Kunigal Utsava for Viewers

ಕಿಚ್ಚ ಸುದೀಪ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಾರೆ. ಇತ್ತೀಚೆಗೆ ಅವರು ‘ಕುಣಿಗಲ್ ಉತ್ಸವ’ಕ್ಕೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ ವೇದಿಕೆ ಮೇಲೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಸೇರಿದಂತೆ ಅನೇಕರು ಇದ್ದರು. ನಿರಂಜನ್ ದೇಶಪಾಂಡೆ ಅವರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ವೇದಿಕೆ ಮೇಲೆ ಸುದೀಪ್ ಮಾತನಾಡುವಾಗ ಅನೇಕರು ಗಿಲ್ಲಿ ಗಿಲ್ಲಿ (Gilli Nata) ಎಂದು ಕೂಗಿದ್ದಾರೆ. ಈ ವೇಳೆ ಸುದೀಪ್ ಕಿವಿಮಾತು ಹೇಳಿದ್ದಾರೆ.

ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆ ನಡೆಯಲಿದೆ. ಶನಿವಾರ ಹಾಗೂ ಭಾನುವಾರ ಎಪಿಸೋಡ್ ಪ್ರಸಾರ ಕಾಣಲಿದೆ. ಇದಕ್ಕೆ ಕೌಂಟ್​ಡೌನ್ ಶುರುವಾಗಿದೆ. ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ. ಗಿಲ್ಲಿ, ಅಶ್ವಿನಿ ಹಾಗೂ ಇತರ ಸ್ಪರ್ಧಿಗಳು ರೇಸ್​​ನಲ್ಲಿ ಇದ್ದಾರೆ. ಈಗ ಸುದೀಪ್ ಆಡಿದ ಮಾತು ಗಮನ ಸೆಳೆದಿದೆ.

ಇತ್ತೀಚೆಗೆ ಕುಣಿಗಲ್ ಉತ್ಸವ ಅದ್ದೂರಿಯಾಗಿ ನಡೆದಿದೆ. ಹ್ಯಾರಿಸ್ ನಲ್ಪಾಡ್ ಅವರ ಕೋರಿಕೆ ಮೇರೆಗೆ ಸುದೀಪ್ ಈ ಕಾರ್ಯಕ್ರಮಕ್ಕೆ ತೆರಳಿದ್ದರು. ವೇದಿಕೆ ಮೇಲೆ ನಿಂತು ಸಾವಿರಾರು ಜನರನ್ನು ನೋಡುವಾಗ ಸುದೀಪ್ ಅವರಿಗೆ ಖುಷಿ ಆಯಿತು. ಈ ವೇಳೆ ಅವರು ಬಿಗ್ ಬಾಸ್ ಬಗ್ಗೆ ಪ್ರಸ್ತಾಪ ಮಾಡಿದರು. ‘ಬಿಗ್ ಬಾಸ್ ಫಿನಾಲೆ ನೋಡ್ತೀರಾ’ ಎಂದು ಜನರ ಬಳಿ ಪ್ರಶ್ನೆ ಮಾಡಿದಾಗ, ಜನರು ‘ಹೌದು’ ಎಂದು ಕೂಗಿದರು.

‘ನಿಮ್ಮಿಷ್ಟದ ಸ್ಪರ್ಧಿಗಳಿಗೆ ವೋಟ್ ಮಾಡಿ. ಕಿತ್ತಾಡಿಕೊಳ್ಳಬೇಡಿ’ ಎಂದು ಕಿಚ್ಚ ಕಿವಿಮಾತು ಹೇಳಿದರು. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕಿತ್ತಾಟ ಜೋರಾಗಿದೆ. ಸ್ಪರ್ಧಿಗಳ ಅಭಿಮಾನಿಗಳ ಮಧ್ಯೆಯೇ ಕಿತ್ತಾಟ ನಡೆಯುತ್ತದೆ. ಈ ಕಾರಣದಿಂದ ಸುದೀಪ್ ಅವರು ಈ ರೀತಿಯ ಕಿವಿಮಾತು ಹೇಳಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಿಚ್ಚ ಸುದೀಪ್ ಮಾತಿಗೂ ಬೆಲೆ ಕೊಡದ ಗಿಲ್ಲಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್

ಬಿಗ್ ಬಾಸ್​ ಅಲ್ಲಿ ಯಾರು ಗೆಲ್ಲುತ್ತಾರೆ,ಯಾರು ಸೋಲುತ್ತಾರೆ ಎಂಬುದು ಜನರ ವೋಟ್​​ಗಳ ಮೇಲೆ ನಿರ್ಧಾರ ಆಗುತ್ತದೆ. ಈ ಬಾರಿ ಯಾರು ವಿನ್ ಆಗುತ್ತಾರೆ ಎಂಬ ಕುತೂಹಲ ಮೂಡಿದೆ. ಜನವರಿ 18ರಂದು ಈ ಪ್ರಶ್ನೆಗೆ ಉತ್ತರ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:37 am, Tue, 13 January 26

Source link