ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರರನ್ನ ಕೊಚ್ಚಿ ಕೊಂದ ಕಾರ್ಮಿಕರು – Kannada News | Contractor vitthal rathod Killed By Workers For illicit relationship Woman at Hubballi
ಹುಬ್ಬಳ್ಳಿ, (ಜನವರಿ 12): ನಗರದ ನವನಗರದಲ್ಲಿರುವ ಕಾನೂನು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದೆ. ಮೂಲತ ವಿಜಯಪುರ ಜಿಲ್ಲೆಯ ಅರಕೇರಾ ತಾಂಡಾ ನಿವಾಸಿಯಾಗಿದ್ದ ಆರವತ್ತು ವರ್ಷದ ವಿಠ್ಠಲ್ ರಾಠೋಡ್ ಕೊಲೆಯಾದ ವ್ಯಕ್ತಿ. ಈತ ಕಾನೂನು ವಿವಿಯ ಆಡಳಿತಾತ್ಮಕ ಕಟ್ಟಡ ನಿರ್ಮಾಣ ಕಾಮಗಾರಿಯ ಉಪ ಗುತ್ತಿಗೆಯನ್ನು ಪಡೆದಿದ್ದ. ಆದ್ರೆ ಜನವರಿ 10 ರಂದು ರಾತ್ರಿ ಸಮಯದಲ್ಲಿ ಕ್ಯಾಂಪಸ್ ನಲ್ಲಿಯೇ ಬಿದ್ದಿದ್ದ. ಆರಂಭದಲ್ಲಿ ವಿಠ್ಠಲ್ ಕುಡಿದು ಬಿದ್ದಿದ್ದ ಅಂತ ಕಾರ್ಮಿಕ ಕುಟುಂಬವೊಂದು ಹೇಳಿತ್ತು. ಹೀಗಾಗಿ ಕುಟುಂಬದ ಮಾತು ಕೇಳಿ ಪೊಲೀಸರು…