ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ ‘ರಾಷ್ಟ್ರಭಾಷೆ’ಯ ಚರ್ಚೆ! – Kannada News | Sanjay Bangar Sparks ‘Rashtrabhasha’ Debate on KL Rahul
ವಡೋದರಾದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್ಗೆ ತಮಿಳಿನಲ್ಲಿ ಸಲಹೆಗಳನ್ನು ನೀಡುತ್ತಿದ್ದರು. ಸುಂದರ್ಗೆ ಚೆಂಡನ್ನು ಹೇಗೆ ಎಸೆಯಬೇಕೆಂದು ತಮಿಳಿನಲ್ಲಿ ಹೇಳುತ್ತಿರುವ ಕೆಎಲ್ ರಾಹುಲ್ ಧ್ವನಿ ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ. ಅತ್ತ ಕೆಎಲ್ ರಾಹುಲ್ಗೆ ತಮಿಳು ಬರುತ್ತಿದ್ದು, ಇತ್ತ ತಮಿಳುನಾಡು ಮೂಲದ ಕ್ರಿಕೆಟಿಗನೊಂದಿಗೆ ತಮಿಳಿನಲ್ಲೇ ಸಂಬೋಧಿಸುತ್ತಿದ್ದರು. ಇದನ್ನು ಕೇಳಿದ ಕಾಮೆಂಟೇಟರ್ ವರುಣ್ ಆರೋನ್, ಸುಂದರ್ ಜೊತೆ ಕೆಎಲ್ ರಾಹುಲ್ ತಮಿಳಿನಲ್ಲಿ ಮಾತನಾಡಬೇಕಾಗುತ್ತದೆ. ಇದರಿಂದ ಅವರಿಗೆ ಬೇಗ…