ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್ಲಿಸ್ಟ್ ಪರಿಶೀಲಿಸಿ – Kannada News | ITR filing deadline nears, things to check before submitting
ನವದೆಹಲಿ, ಜುಲೈ 27: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಡೆಡ್ಲೈನ್ ಹತ್ತಿರವಾಗುತ್ತಿದ್ದಂತೆ, ಧಾವಂತದಲ್ಲಿ ತೆರಿಗೆದಾರರು ಸಣ್ಣಪುಟ್ಟ ತಪ್ಪುಗಳನ್ನು ಮಾಡುವುದು ಸಾಮಾನ್ಯ. ಸಬ್ಮಿಟ್ (Submit) ಬಟನ್ ಒತ್ತುವ ಮುನ್ನ ಈ ಕೆಳಗಿನ ಪ್ರಮುಖ ವಿಷಯಗಳನ್ನು ಪರಿಶೀಲಿಸಿದರೆ, ತೆರಿಗೆ ಇಲಾಖೆಯಿಂದ ನೋಟಿಸ್ ಬರುವುದನ್ನು ತಪ್ಪಿಸಬಹುದು ಹಾಗೂ ರೀಫಂಡ್ (Refund) ಬೇಗನೆ ಸಿಗುವಂತೆ ನೋಡಿಕೊಳ್ಳಬಹುದು. ದಾಖಲೆಗಳನ್ನು ಕೈಯಲ್ಲಿಟ್ಟುಕೊಳ್ಳಿ ಫಾರ್ಮ್ 16, ಬ್ಯಾಂಕ್ ಸ್ಟೇಟ್‌ಮೆಂಟ್, ಬಡ್ಡಿ ಪ್ರಮಾಣಪತ್ರಗಳು (Interest Certificates), ಡಿಮ್ಯಾಟ್/ಮ್ಯೂಚುಯಲ್ ಫಂಡ್ ಕ್ಯಾಪಿಟಲ್…