Category Archives: Blog

Your blog category

ಎ ಸರ್ಟಿಫಿಕೇಟ್ ಸಿನಿಮಾಗೆ ಮಕ್ಕಳನ್ನು ಕರೆತಂದ ಪೋಷಕರು; ‘ಜನ ನಾಯಗನ್’ ಪ್ರದರ್ಶನ ಬಂದ್ – Kannada News | Vijay Jana Nayagan screenings halted in Chennai over A Rating minors Entry issue

ದಳಪತಿ ವಿಜಯ್ ಅಭಿನಯದ, ಹೆಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ (Jana Nayagan) ಸಿನಿಮಾ ಜುಲೈ 23ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಸುಮಾರು 7 ತಿಂಗಳ ಸುದೀರ್ಘ ವಿಳಂಬದ ನಂತರ ಬೆಳ್ಳಿಪರದೆಗೆ ಬಂದಿರುವ ವಿಜಯ್ ಅವರ ಈ ಕೊನೆಯ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆದರೆ, ಚೆನ್ನೈನ ಹಲವು ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ವಿಳಂಬವಾಗುತ್ತಿದ್ದು, ಕೆಲವು ಕಡೆ ಶೋಗಳನ್ನೇ ರದ್ದುಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೆನ್ಸಾರ್ ಮಂಡಳಿ (CBFC) ಈ ಚಿತ್ರಕ್ಕೆ ‘A’ ಪ್ರಮಾಣಪತ್ರ ನೀಡಿದೆ. ನಿಯಮದಂತೆ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಈ ಸಿನಿಮಾ ವೀಕ್ಷಣೆಗೆ ಅವಕಾಶವಿಲ್ಲ. ಆದರೂ ಹಲವು ಪೋಷಕರು ಸಣ್ಣ ಮಕ್ಕಳನ್ನು ಕರೆದುಕೊಂಡು ಥಿಯೇಟರ್‌ಗೆ ಬಂದಿರುವುದೇ ಈ ಎಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.

ಥಿಯೇಟರ್‌ ಸಿಬ್ಬಂದಿ ಜೊತೆ ಪ್ರೇಕ್ಷಕರ ಜಟಾಪಟಿ:

ಚೆನ್ನೈನ ಪಿವಿಆರ್ ಆಂಪಾ ಮಾಲ್​ನಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನವನ್ನು ಸುಮಾರು ಒಂದು ಗಂಟೆ ಕಾಲ ತಡೆಹಿಡಿಯಲಾಗಿತ್ತು. ಪೋಷಕರು ತಮ್ಮ ಮಕ್ಕಳನ್ನು ಕರೆತಂದಿದ್ದರಿಂದ ಥಿಯೇಟರ್ ಸಿಬ್ಬಂದಿ ಹಾಗೂ ಪೋಷಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೊನೆಗೆ ಟಿಕೆಟ್ ಹಣವನ್ನು ವಾಪಸ್ ನೀಡಲು ಥಿಯೇಟರ್​ನವರು ಒಪ್ಪಿಕೊಂಡ ನಂತರ ಪರಿಸ್ಥಿತಿ ತಿಳಿಯಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಕ್ಕಳೊಂದಿಗೆ ಬಂದಿದ್ದ ಪೋಷಕರನ್ನು ಹೊರಗೆ ಕಳುಹಿಸಿದರು.

ಗಲಾಟೆ ವೇಳೆ ಪೊಲೀಸರ ಮಧ್ಯಪ್ರವೇಶ:

ಅದೇ ರೀತಿ, ಪಲ್ಲಾವರಂನ ಪಿವಿಆರ್ ಗ್ರ್ಯಾಂಡ್‌ನಲ್ಲೂ ಪ್ರದರ್ಶನವನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು. ಥಿಯೇಟರ್ ಪ್ರವೇಶಿಸಲು ಯತ್ನಿಸಿದವರನ್ನು ಸಿಬ್ಬಂದಿ ತಡೆದಾಗ ಗಲಾಟೆ ಆರಂಭವಾಗಿ, ಪೊಲೀಸರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಹಣ ಮರುಪಾವತಿಗಾಗಿ ಟಿಕೆಟ್ ಕೌಂಟರ್ ಮುಂದೆ ಸಣ್ಣ ಮಕ್ಕಳನ್ನು ಹಿಡಿದುಕೊಂಡು ನೂರಾರು ಜನರು ಸಾಲಿನಲ್ಲಿ ನಿಂತಿರುವುದು ಕಂಡುಬಂತು.

ಸೋಶಿಯಲ್ ಮೀಡಿಯಾದಲ್ಲಿ ಪೋಷಕರ ವಿರುದ್ಧ ಆಕ್ರೋಶ:

ಈ ಘಟನೆಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೋಷಕರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಇದು A ಪ್ರಮಾಣಪತ್ರ ಪಡೆದ ಸಿನಿಮಾ ಎಂದು ಪೋಷಕರಿಗೆ ಗೊತ್ತಿದ್ದರೂ ಮಕ್ಕಳನ್ನು ಕರೆತಂದಿರುವುದು ತಪ್ಪು. ಥಿಯೇಟರ್‌ನವರು ನಿಯಮ ಪಾಲಿಸದಿದ್ದರೆ ಅವರ ಲೈಸೆನ್ಸ್ ರದ್ದಾಗುತ್ತದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು

ಹೆಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಚಿತ್ರವು 2023ರ ತೆಲುಗು ಹಿಟ್ ಸಿನಿಮಾ ‘ಭಗವಂತ್ ಕೇಸರಿ’ಯ ಅಧಿಕೃತ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ವಿಜಯ್, ಮಮಿತಾ ಬೈಜು, ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾರ್ದಿಕ್ ಪಾಂಡ್ಯ ಕಂಬ್ಯಾಕ್ ಯಾವಾಗ? ಹೊರಬಿತ್ತು ಬಿಗ್ ಅಪ್​ಡೇಟ್

Source link

ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ: ಅತಿಯಾದ ಶುಲ್ಕಗಳಿಂದ ನಷ್ಟದ ಆರೋಪ – Kannada News | Hotel Owners Fume Against Online Food Delivery Apps Over Exorbitant Charges, Allege Significant Losses

ಬೆಂಗಳೂರು, ಜುಲೈ 27: ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳಾದ ಸ್ವಿಗ್ಗಿ ಸೇರಿದಂತೆ ಕೆಲವು ಆಪ್‌ಗಳ ವಿರುದ್ಧ ರಾಜ್ಯದ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಪ್‌ಗಳು ವಿಧಿಸುವ ಅತಿಯಾದ ಶುಲ್ಕಗಳಿಂದ ಹೋಟೆಲ್‌ಗಳಿಗೆ ಭಾರಿ ನಷ್ಟವಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಇವುಗಳಿಗೆ ಕಡಿವಾಣ ವಿಧಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ವಿಶೇಷವಾಗಿ ಸ್ವಿಗ್ಗಿ ಆ್ಯಪ್​​ ವಿರುದ್ಧ ಆರೋಪ ಕೇಳಿಬಂದಿದ್ದು, ಪೇಔಟ್ ಕಲೆಕ್ಷನ್ ಚಾರ್ಜ್, ಲಾಂಗ್ ಡಿಸ್ಟೇನ್ಸ್ ಫೀಸ್, ಕ್ಲಿಕ್ಸ್ ಅಡ್ವಟೈಸ್ ಚಾರ್ಜ್, ಪ್ರಮೋಷನ್ ಚಾರ್ಜ್ ಅಂತ ಬೇಕಾಬಿಟ್ಟಿ ದರ ವಿಧಿಸ್ತಿದ್ದಾರೆ. ಇದರಿಂದಾಗಿ, 1,000 ರೂ. ಮೌಲ್ಯದ ಉತ್ಪನ್ನವನ್ನು ಮಾರಾಟ ಮಾಡಿದಾಗ ಹೋಟೆಲ್ ಮಾಲೀಕರಿಗೆ ಕೇವಲ 400 ರಿಂದ 500 ರೂ. ಮಾತ್ರ ವಾಪಸ್ ಬರುತ್ತಿದೆ. ಉಳಿದ ಮೊತ್ತ ಅವರ ಪಾಲಾಗುತ್ತಿದೆ. ಇದು ಹೋಟೆಲ್ ಮಾಲೀಕರು ಮತ್ತು ಗ್ರಾಹಕರಿಬ್ಬರಿಗೂ ದೊಡ್ಡ ಹೊರೆಯಾಗಿದ್ದು, ಮಧ್ಯಮ ವರ್ಗದ ಹೋಟೆಲ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚೀನಾದ ಉತ್ಪನ್ನಗಳು ಇಷ್ಟು ಕಡಿಮೆ ಬೆಲೆಗೆ ಸಿಗುವುದು ಹೇಗೆ? ಚೀನೀ ಸಿಇಒವೊಬ್ಬರು ಬಿಚ್ಚಿಟ್ಟ ವಾಸ್ತವ ಇದು – Kannada News | How China can manufacture things at low cost, CEO reveals some important points

ಸಿಎನ್​ಸಿ ಲೇತ್ ಮೆಷಿನ್Image Credit source: Getty Images

ದಶಕದ ಹಿಂದಿನವರೆಗೆ ಚೀನಾದ (China) ಸರಕುಗಳೆಂದರೆ ಡೂಪ್ಲಿಕೇಟ್, ನಕಲಿ, ಕಳಪೆ ಎಂದೇ ಬಹಳ ಜನರು ಭಾವಿಸಿದ್ದರು. ಆದರೆ, ಚೀನಾದಲ್ಲಿ ತಯಾರಾಗುವ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟದ್ದಾಗಿರುತ್ತವೆ, ಹಾಗೆಯೇ ಕಡಿಮೆ ಬೆಲೆಯೂ ಇರುತ್ತದೆ. ಚೀನಾಗಿಂತ ಕಾರ್ಮಿಕ ವೇತನ ಕಡಿಮೆ ಇರುವ ಭಾರತದಲ್ಲೂ ಅಷ್ಟು ಕಡಿಮೆ ಬೆಲೆಗೆ ಆ ಗುಣಮಟ್ಟದ ಉತ್ಪನ್ನ ತಯಾರಿಸಲು ಆಗದು. ಹಾಗಾದರೆ, ಚೀನಾದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಅಂಥದ್ದೇನಿದೆ ವಿಶೇಷತೆ? ಸಿಎನ್​ಸಿ ಉತ್ಪನ್ನಗಳನ್ನು ತಯಾರಿಸುವ ಶೆಂಜೆನ್ ಯಿಜಿನ್ ಸಲ್ಯೂಶನ್ಸ್​ನ ಸಿಇಒ ಗ್ಯಾವಿನ್ ಯಿ ಅವರು ಒಂದಷ್ಟು ವಾಸ್ತವ ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ. ಚೀನಾದಲ್ಲಿ ಯಾಕೆ ಉತ್ಪನ್ನಗಳ ತಯಾರಿಕೆ ವೆಚ್ಚ ಕಡಿಮೆ ಇರುತ್ತದೆ, ಅದಕ್ಕೆ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಸಿಎನ್​ಸಿ ಯಂತ್ರಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರಾದರೂ ಅವರು ಹೇಳುವ ಸಂಗತಿಯು ಒಟ್ಟಾರೆ ಚೀನೀ ತಯಾರಿಕಾ ಉದ್ಯಮದ ಚಿತ್ರಣವನ್ನು ತೋರ್ಪಡಿಸುತ್ತದೆ. ಚೀನಾದಲ್ಲಿ ಉತ್ಪಾದನಾ ವೆಚ್ಚ ಕಡಿಮೆಯಾಗಲು ಅವರ ಪ್ರಕಾರ ಮುಖ್ಯ ಕಾರಣಗಳಿವು…

ಕಡಿಮೆ ಕಾರ್ಮಿಕ ವೆಚ್ಚ (Lower Labor Costs)

ಸಿಎನ್‌ಸಿ ಯಂತ್ರಗಳು ತಾನಾಗಿಯೇ ಕೆಲಸ ಮಾಡಿದರೂ, ಯಂತ್ರಗಳ ಸೆಟಪ್‌, ಪಾಲಿಶಿಂಗ್‌, ತಪಾಸಣೆ (Inspection), ಮತ್ತು ಪ್ಯಾಕಿಂಗ್‌ಗೆ ಮಾನವ ಸಂಪನ್ಮೂಲ ಅಗತ್ಯವಿರುತ್ತದೆ. ಚೀನಾದಲ್ಲಿ ಇಂತಹ ಕೆಲಸಗಳಿಗೆ ತಗುಲುವ ವೆಚ್ಚ ಅಮೆರಿಕ ಅಥವಾ ಯುರೋಪ್‌ಗೆ ಹೋಲಿಸಿದರೆ ತೀರಾ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ವೇತನ ಹೆಚ್ಚಾಗುತ್ತಿದ್ದರೂ, ಅಮೆರಿಕದ ಮಾನದಂಡಗಳಿಗೆ ಹೋಲಿಸಿದರೆ ಒಟ್ಟಾರೆ ಉತ್ಪಾದನಾ ವೆಚ್ಚದಲ್ಲಿ ಇಂದಿಗೂ ಗಮನಾರ್ಹ ವ್ಯತ್ಯಾಸವಿದೆ.

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್​​ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್​ಲಿಸ್ಟ್ ಪರಿಶೀಲಿಸಿ

ಕೈಗಾರಿಕಾ ಕ್ಲಸ್ಟರ್‌ಗಳ ಸಾಂದ್ರತೆ

ಚೀನಾದ ‘ಪರ್ಲ್ ರಿವರ್ ಡೆಲ್ಟಾ’ ಮತ್ತು ‘ಯಾಂಗ್ತ್ಸೆ ರಿವರ್ ಡೆಲ್ಟಾ’ ನಂತಹ ಪ್ರದೇಶಗಳಲ್ಲಿ ಸಂಪೂರ್ಣ ಉತ್ಪಾದನಾ ವ್ಯವಸ್ಥೆಯು ಒಂದೇ ಕಡೆ ಕೇಂದ್ರೀಕೃತವಾಗಿದೆ.

ಕಚ್ಚಾವಸ್ತು, ಕಟಿಂಗ್ ಟೂಲ್ಸ್, ಪ್ಲೇಟಿಂಗ್ (Anodizing/Plating), ಮತ್ತು ಹೀಟ್ ಟ್ರೀಟ್‌ಮೆಂಟ್ ನೀಡುವ ಘಟಕಗಳು ಅತ್ಯಂತ ಹತ್ತಿರದಲ್ಲಿರುವುದರಿಂದ, ಸಾರಿಗೆ ವೆಚ್ಚ ಮತ್ತು ಕಾಯುವ ಸಮಯ (Lead time) ಕಡಿಮೆಯಾಗುತ್ತದೆ. ಅಂದರೆ, ಒಂದು ಉತ್ಪಾದನೆಯ ತಯಾರಿಕೆಗೆ ಬೇಕಾದ ಎಲ್ಲಾ ವಸ್ತುಗಳ ಪೂರೈಕೆ ಜಾಲ ಸಮೀಪದಲ್ಲೇ ಇರುತ್ತದೆ.

ಯಂತ್ರಗಳ ಗರಿಷ್ಠ ಬಳಕೆ

ಸಿಎನ್‌ಸಿ ಯಂತ್ರಗಳ ಖರೀದಿ, ನಿರ್ವಹಣೆ ಮತ್ತು ಪ್ರೋಗ್ರಾಮಿಂಗ್ ವೆಚ್ಚಗಳು ಸ್ಥಿರವಾಗಿರುತ್ತವೆ (Fixed Costs). ಚೀನಾದ ಬೃಹತ್ ಕಾರ್ಖಾನೆಗಳಲ್ಲಿ ಈ ಯಂತ್ರಗಳು ನಿರಂತರವಾಗಿ (Spindle hours) ಚಾಲನೆಯಲ್ಲಿರುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಬಿಡಿಭಾಗಗಳನ್ನು ಉತ್ಪಾದಿಸುವುದರಿಂದ, ಪ್ರತಿಯೊಂದು ಭಾಗದ ಮೇಲಿನ ಸ್ಥಿರ ವೆಚ್ಚ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಮಂಡೇ ಧಮಾಕ; ಸತತ ಕುಸಿತದ ಬಳಿಕ ಸಖತ್ ಚೇತರಿಸಿಕೊಂಡ ಮಾರುಕಟ್ಟೆ; ಏನು ಕಾರಣ?

ವರ್ಟಿಕಲ್ ಇಂಟಿಗ್ರೇಶನ್ (Vertical Integration)

ಹೆಚ್ಚಿನ ಚೀನೀ ಉತ್ಪಾದನಾ ಸಂಸ್ಥೆಗಳು ಮೆಷಿನಿಂಗ್, ಶೀಟ್ ಮೆಟಲ್ ಫ್ಯಾಬ್ರಿಕೇಶನ್, ಕೋಟಿಂಗ್ ಮತ್ತು ಕ್ವಾಲಿಟಿ ಚೆಕಿಂಗ್ ಎಲ್ಲವನ್ನೂ ಒಂದೇ ಸೂರಿನಡಿ ನಿರ್ವಹಿಸುತ್ತವೆ. ಇದರಿಂದ ವಿಭಿನ್ನ ಪೂರೈಕೆದಾರರ (Vendors) ಲಾಭದ ಶೇಕಡಾವಾರು (Margin stacking) ಹಂತ-ಹಂತವಾಗಿ ಸೇರ್ಪಡೆಯಾಗುವುದು ತಪ್ಪುತ್ತದೆ ಮತ್ತು ವಿಳಂಬವಿಲ್ಲದೆ ವೇಗವಾಗಿ ಕೆಲಸ ಮುಗಿಯುತ್ತದೆ. ಹಣದ ಉಳಿತಾಯವೂ ಆಯಿತು, ಕೆಲಸಕ್ಕೆ ವೇಗವೂ ಸಿಕ್ಕಿತು. ಇದು ಚೀನಾ ಕೈಗಾರಿಕಾ ಉದ್ಯಮ ಕಂಡುಕೊಂಡ ಪಕ್ವತೆ.

ಸರ್ಕಾರಿ ಪ್ರೋತ್ಸಾಹ ಮತ್ತು ಮೂಲಸೌಕರ್ಯ

ಚೀನಾ ಸರ್ಕಾರದ ಬೆಂಬಲವೂ ಈ ಅಗ್ಗದ ಉತ್ಪಾದನೆಗೆ ಪ್ರಮುಖ ಕಾರಣವಾಗಿದೆ. ತಂತ್ರಜ್ಞಾನ ಆಧಾರಿತ ಉತ್ಪಾದನಾ ಸಂಸ್ಥೆಗಳಿಗೆ ಚೀನಾ ಸರ್ಕಾರ ಕಾರ್ಪೊರೇಟ್ ಟ್ಯಾಕ್ಸ್​ನಲ್ಲಿ ಕೆಲ ವಿನಾಯಿತಿ ನೀಡುತ್ತದೆ. ಎರಡನೆ ಸಂಗತಿ ಎಂದರೆ, ಸರ್ಕಾರ ನಿರ್ಮಿಸಿರುವ ವಿಶ್ವದರ್ಜೆಯ ಮೂಲಸೌಕರ್ಯ. ಅಂದರೆ, ಅತ್ಯಾಧುನಿಕ ಬಂದರುಗಳು, ಹೆದ್ದಾರಿಗಳು ಮತ್ತು ರಫ್ತು ಪ್ರೋತ್ಸಾಹಕಗಳು (Export rebates) ಜಾಗತಿಕ ಸರಕು ಸಾಗಣೆಯನ್ನು ಸುಲಭ ಹಾಗೂ ಅಗ್ಗವಾಗಿಸಿವೆ.

(ಮಾಹಿತಿ ಮೂಲ: yijinsolution)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಡುಗೆ ಮನೆಯ ಖರ್ಚು ಮತ್ತಷ್ಟು ಹೆಚ್ಚಳ! ಮೆಣಸಿನಕಾಯಿ, ಜೀರಿಗೆ, ಏಲಕ್ಕಿ ಸೇರಿ ಮಸಾಲೆ ಪದಾರ್ಥಗಳ ದರದಲ್ಲಿ ಭಾರೀ ಏರಿಕೆ – Kannada News | Spice Prices Surge in Karnataka: Cardamom, Chilli, Cumin and Coriander Rates Hit Household Budgets

ಬೆಂಗಳೂರು, ಜುಲೈ 27: ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಅಕ್ಕಿ, ತುಪ್ಪ ಸೇರಿದಂತೆ ಹಲವು ದಿನಸಿ ವಸ್ತುಗಳ ಬೆಲೆ ಹೆಚ್ಚಳದ ಬೆನ್ನಲ್ಲೇ ಇದೀಗ ಅಡುಗೆಗೆ ಅವಿಭಾಜ್ಯವಾಗಿರುವ ಮಸಾಲೆ ಪದಾರ್ಥಗಳ ದರವೂ (Spice Prices) ಏರಿಕೆಯಾಗಿದೆ. ಇದರಿಂದ ಮನೆಯ ಮಾಸಿಕ ಬಜೆಟ್ ಮತ್ತಷ್ಟು ದುಬಾರಿಯಾಗಿದ್ದು, ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ.

ಮೆಣಸಿನಕಾಯಿ, ಜೀರಿಗೆ, ಧನಿಯಾ, ಮೆಂತೆ, ಸಾಸಿವೆ, ಚಕ್ಕೆ, ಲವಂಗ, ಏಲಕ್ಕಿ ಸೇರಿದಂತೆ ಬಹುತೇಕ ಪ್ರಮುಖ ಮಸಾಲೆ ಪದಾರ್ಥಗಳ ದರ ಕಳೆದ ಕೆಲವು ವಾರಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅಡುಗೆಯ ರುಚಿ ಮತ್ತು ಸುವಾಸನೆ ಹೆಚ್ಚಿಸುವ ಈ ವಸ್ತುಗಳ ಬೆಲೆ ಹೆಚ್ಚಳದಿಂದ ಮನೆ ಬಳಕೆದಾರರ ಜೊತೆಗೆ ಹೋಟೆಲ್, ಬೇಕರಿ ಹಾಗೂ ಆಹಾರ ಉತ್ಪಾದನಾ ಕ್ಷೇತ್ರವೂ ಸಂಕಷ್ಟ ಎದುರಿಸುತ್ತಿದೆ.

ಮಸಾಲೆ ಪದಾರ್ಥ ದರ ಏರಿಕೆಗೆ ಕಾರಣವೇನು?

ವ್ಯಾಪಾರಿಗಳ ಪ್ರಕಾರ, ಸಾಗಾಣಿಕೆ ವೆಚ್ಚ ಏರಿಕೆ, ಕೆಲವು ಮಸಾಲೆ ಬೆಳೆಗಳ ಉತ್ಪಾದನೆ ಕುಸಿತ ಹಾಗೂ ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ ಚಿಲ್ಲರೆ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಸಾಲೆ ಪದಾರ್ಥಗಳನ್ನು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಸಾಲೆ ಪದಾರ್ಥಗಳ ಹಳೆಯ ಹಾಗೂ ಹೊಸ ಸಗಟು ದರ (ಪ್ರತಿ ಕೆ.ಜಿ.ಗೆ ರೂ.ಗಳಲ್ಲಿ)

ಹೋಟೆಲ್, ಬೇಕರಿ ಉದ್ಯಮದ ಮೇಲೂ ಪರಿಣಾಮ

ಹೋಟೆಲ್ ಹಾಗೂ ಬೇಕರಿ ಉದ್ಯಮದಲ್ಲೂ ಉತ್ಪಾದನಾ ವೆಚ್ಚ ಹೆಚ್ಚಳ ಕಂಡುಬಂದಿದ್ದು, ಹಲವು ಆಹಾರ ಪದಾರ್ಥಗಳ ತಯಾರಿಕೆ ವೆಚ್ಚದ ಮೇಲೂ ಪರಿಣಾಮ ಬೀರಿದೆ. ಬೆಲೆ ಏರಿಕೆಯ ಒತ್ತಡ ಮುಂದುವರಿದರೆ ಮುಂದಿನ ದಿನಗಳಲ್ಲಿ ತಿನಿಸುಗಳ ದರವೂ ಹೆಚ್ಚುವ ಸಾಧ್ಯತೆ ಇದೆ ಎಂಬ ಆತಂಕ ವ್ಯಾಪಾರಿಗಳಲ್ಲಿದೆ.

ಇದನ್ನೂ ಓದಿ: ಗ್ರಾಹಕರಿಗೆ ಚಿಕನ್ ಮತ್ತು ಮೊಟ್ಟೆ ಬೆಲೆ ಏರಿಕೆ ಬಿಸಿ: ದಾಖಲೆ ಬರೆದ ದರ

ಒಟ್ಟಾರೆ, ಅಗತ್ಯ ದಿನಸಿ ವಸ್ತುಗಳ ಬೆಲೆ ಏರಿಕೆಯ ಸರಣಿಗೆ ಈಗ ಮಸಾಲೆ ಪದಾರ್ಥಗಳೂ ಸೇರ್ಪಡೆಯಾಗಿವೆ. ಅಡುಗೆ ಮನೆಯ ಸುವಾಸನೆಗೆ ಈಗ ಗ್ರಾಹಕರು ಹೆಚ್ಚುವರಿ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ವೆಚ್ಚದ ಮೇಲೆ ಇದರ ನೇರ ಪರಿಣಾಮ ಬೀಳುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಂಎಲ್​​​ಸಿ ಸಿಟಿ ರವಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್, ಬಂಧನದಿಂದ ಬಚಾವ್ – Kannada News | Derogatory remarks on muslim dont take precipitative action against bjp mlc ravi karnataka hc tells police

ಬೆಂಗಳೂರು, (ಜುಲೈ 27): ನೀಟ್ ಪ್ರತಿಭಟನೆ (NEET Protest) ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ (CT Ravi) ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಕರಣ ಚಿಕ್ಕಮಗಳೂರಿನಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಇನ್ನೊಂದಡೆ ಎಫ್ಐಆರ್ ಪ್ರಶ್ನಿಸಿ ಸಿಟಿ ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (Karnataka High Court), ಜುಲೈ 31ಕ್ಕೆ ವಿಚಾರಣೆ ಮುಂದೂಡಿದ್ದು, ಅಲ್ಲಿಯವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿದೆ.

ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಸಂಖ್ಯೆ 149ಕ್ಕೆ ತಡೆ ನೀಡುವಂತೆ ಕೋರಿ ಸಿಟಿ ರವಿ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಿದ್ದಾರೆ. 3ನೇ ವ್ಯಕ್ತಿ ಈ ಕೇಸ್ ನಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಸಿಟಿ ರವಿ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದಾರೆ. ಇನ್ನು ನೋಟಿಸ್ ತಲುಪಿಲು ಹೋದ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಕಾಂಗರೂ ಕೋರ್ಟ್ ನಂತೆ ವರ್ತಿಸಿದ್ದಾರೆಂದು ಎಸ್ ಪಿಪಿ ಬಿ.ಎನ್. ಜಗದೀಶ್ ಎಂದು ಪ್ರತಿವಾದ ಮಂಡಿಸಿದರು. ಈ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿದೆ. ಅಲ್ಲದೇ ಅಲ್ಲಿಯವರೆಗೂ ಸಿಟಿ ರವಿ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಪೊಲೀಸರಿಗೆ ಸೂಚಿಸಿದೆ.

ಇದನ್ನೂ ಓದಿ: ಮುಲ್ಲಾಗಳಿಗೆ ಎದೆ ಸೀಳಿದ್ರೆ 3 ಅಕ್ಷರ ಬರಲ್ಲ ಹೇಳಿಕೆ ಕೇಸ್: ಸಿಟಿ ರವಿ ನಿವಾಸಕ್ಕೆ ನೋಟಿಸ್​ ಅಂಟಿಸಿದ ಪೊಲೀಸ್

ಸಿಟಿ ರವಿ ಹೇಳಿದ್ದೇನು?

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ನಡೆದ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ್ದ ಸಿಟಿ ರವಿ, ‘ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಮುಲ್ಲಾಗಳ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ. ಅವರು ಬಂದು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದರೆ ಅದರ ಅರ್ಥವೇನು? ಎಂದಿದ್ದು, ಇದು ಮುಸ್ಲಿಂ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜಾಮಿಯಾ ಮಸೀದಿ ಸಮಿತಿಯ ಅರ್ಧಯಕ್ಷರ ದೂರಿನ ಮೇರೆಗೆ ಕ್ರಮ

ಜಾಮಿಯಾ ಮಸೀದಿ ಸಮಿತಿಯ ಅಧ್ಯಕ್ಷ ಮುದಾಸಿರ್ ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಈಗಾಗಲೇ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಬಳಿಕ ಸಿ.ಟಿ. ರವಿ ಅವರ ನಿವಾಸಕ್ಕೂ ತನಿಖಾಧಿಕಾರಿ ಹಾಗೂ ನಗರ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ನೋಟಿಸ್ ಅಂಟಿಸಿದ್ದರು.

ಇದೀಗ ಈ ಎಫ್‌ಐಆರ್ ಪ್ರಕರಣವು ಚಿಕ್ಕಮಗಳೂರಿನಿಂದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಏನು ಮಾಡಬಹುದು? ಸೈಬರ್ ತಜ್ಞ ಡಾ‌.ಅನಂತ್ ಪ್ರಭು ನೀಡಿರುವ ಸಲಹೆಗಳು ಇಲ್ಲಿವೆ – Kannada News | Exam Reforms: 13 Tech Driven Solutions by Cyber Expert Dr. Ananth Prabhu to Eliminate Paper Leaks

ಸೈಬರ್ ತಜ್ಞ ಡಾ‌.ಅನಂತ್ ಪ್ರಭುImage Credit source: Tv9 Kannada and Getty Images

ಮಂಗಳೂರು, ಜುಲೈ 27: ನೀಟ್​​ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆದು ಧರ್ಮೇಂದ್ರ ಪ್ರಧಾನ್​​ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರೋದು ನಮಗೆಲ್ಲ ಗೊತ್ತಿರುವ ವಿಚಾರ. ಅಷ್ಟಕ್ಕೂ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಎಂಬದು ಇದೇ ಮೊದಲೇನಲ್ಲ. ಆದರೆ ಈ ಸಂಬಂಧ ಮತ್ತಷ್ಟು ಕಠಿಣ ಕ್ರಮ ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಲ್ಲಿ ಇಂತಹ ಘಟನೆಗಳಿಗೆ ಅಂತ್ಯಹಾಡಬಹುದಾಗಿದೆ. ಈ ಸಂಬಂಧ ಸೈಬರ್ ತಜ್ಞ ಡಾ‌.ಅನಂತ್ ಪ್ರಭು ಅವರು ಟಿವಿ9 ಜೊತೆಗೆ ಕೆಲ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಹೈಬ್ರೀಡ್ ಮಾಡೆಲ್​​ನಲ್ಲಿ ಪರೀಕ್ಷಾ ಅಕ್ರಮ ತಡಗಟ್ಟಬಹುದು ಎಂದು ಡಾ‌.ಅನಂತ್ ಪ್ರಭು ಅಭಿಪ್ರಾಯಪಟ್ಟಿದ್ದು, AI ತಂತ್ರಜ್ಞಾನ ಬಳಸಿಕೊಂಡು ಎಕ್ಸಾಂ ನಡೆಸಲಿ. NEET, JE, UPSC ಸೇರಿದಂತೆ ಹಲವು ಪರೀಕ್ಷೆಗಳಿಗೆ ಒಂದೇ ರೀತಿ ವ್ಯವಸ್ಥೆ ಮಾಡಬೇಕು. ಎಕ್ಸಾಂ ಪೇಪರ್ ಬದಲಿಗೆ ಲ್ಯಾಪ್​​ಟಾಪ್​​ ಅನ್ನು ಅಭ್ಯರ್ಥಿಗಳಿಗೆ ನೀಡಬೇಕು ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಪಶುವೈದ್ಯ ನೇಮಕಾತಿ ಹಗರಣ; ಕೆಪಿಎಸ್‌ಸಿ ಕಚೇರಿಗೆ ಆರ್​​. ಅಶೋಕ್​​ ಒಳಗೊಂಡ ಬಿಜೆಪಿ ನಿಯೋಗ ಭೇಟಿ

ಪರೀಕ್ಷಾ ಅಕ್ರಮ ತಡಗಟ್ಟಲು ಸಲಹೆಗಳು

  • NEET ಕೇವಲ ಒಂದು ಪರೀಕ್ಷೆಯಲ್ಲ. ಇದು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ರಾಷ್ಟ್ರೀಯ ಮಹತ್ವದ ಪರೀಕ್ಷೆಯಾಗಿದೆ. ಆದ್ದರಿಂದ ಇದನ್ನು ರಾಷ್ಟ್ರೀಯ ಮಹತ್ವದ ಮೂಲಸೌಕರ್ಯ (National Critical Infrastructure) ಎಂಬ ಮಟ್ಟದಲ್ಲಿ ಪರಿಗಣಿಸಿ ಅತ್ಯುನ್ನತ ಭದ್ರತೆ, ಆಡಳಿತ ಮತ್ತು ಜವಾಬ್ದಾರಿತನದೊಂದಿಗೆ ನಡೆಸಬೇಕು. ಅದೇ ಸಮಯದಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಯೊಂದು ಪರೀಕ್ಷೆಯೂ ಸಮಾನ ಮಹತ್ವದ್ದೆಂಬುದನ್ನು ಮರೆಯಬಾರದು.
  • ಯಾವುದೇ ಪರೀಕ್ಷಾ ವ್ಯವಸ್ಥೆಯ ಅತಿದೊಡ್ಡ ದುರ್ಬಲತೆ ತಂತ್ರಜ್ಞಾನವಲ್ಲ, ಮಾನವ ಅಂಶವಾಗಿದೆ. ಹೆಚ್ಚಿನ ಪ್ರಶ್ನೆಪತ್ರಿಕೆ ಸೋರಿಕೆಗಳು ಮತ್ತು ಪರೀಕ್ಷಾ ವಂಚನೆಗಳು ಅತ್ಯಾಧುನಿಕ ಹ್ಯಾಕರ್‌ಗಳಿಂದಲ್ಲ; ಒಳಗಿನ ಸಿಬ್ಬಂದಿ ಅಥವಾ ಅಧಿಕೃತ ಪ್ರವೇಶ ಹೊಂದಿರುವವರಿಂದಲೇ ನಡೆಯುತ್ತವೆ. ಆದ್ದರಿಂದ ಸಿಬ್ಬಂದಿಯ ಸಮಗ್ರ ಹಿನ್ನೆಲೆ ಪರಿಶೀಲನೆ, ನಿಯಮಿತ ವರ್ಗಾವಣೆ, ಕರ್ತವ್ಯಗಳ ಪ್ರತ್ಯೇಕೀಕರಣ ಮತ್ತು ಕಟ್ಟುನಿಟ್ಟಿನ ಜವಾಬ್ದಾರಿತನ ಅತ್ಯಗತ್ಯ. ಜೊತೆಗೆ, ಅಂತರರಾಷ್ಟ್ರೀಯ ಸೈಬರ್ ದಾಳಿಗಳ ಸಾಧ್ಯತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸೈಬರ್ ಅಪರಾಧಗಳಿಗೆ ಭೌಗೋಳಿಕ ಗಡಿಗಳಿಲ್ಲ. ಭಾರತವು ಇನ್ನೂ ವಿದೇಶಿ ಆಪರೇಟಿಂಗ್ ಸಿಸ್ಟಂಗಳು, ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿದೆ. ಚೀನಾದಂತಹ ದೇಶಗಳು ಸ್ವದೇಶಿ ತಂತ್ರಜ್ಞಾನ ಪರಿಸರವನ್ನು ಅಭಿವೃದ್ಧಿಪಡಿಸಿರುವುದರಿಂದ ತಮ್ಮ ಡಿಜಿಟಲ್ ಮೂಲಸೌಕರ್ಯದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿವೆ.
  • ಪ್ರಶ್ನೆಪತ್ರಿಕೆ ರಚನೆ, ಪರಿಶೀಲನೆ, ಅಂತಿಮ ಸಿದ್ಧತೆ, ಮುದ್ರಣ, ಸಾಗಣೆ, ಸಂಗ್ರಹಣೆ, ಪರೀಕ್ಷಾ ಕೇಂದ್ರಗಳು, ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆ ಸೇರಿದಂತೆ ಪರೀಕ್ಷೆಯ ಸಂಪೂರ್ಣ ಜೀವನಚಕ್ರದ ಪ್ರತಿಯೊಂದು ಹಂತಕ್ಕೂ ಭದ್ರತೆ ಅನ್ವಯಿಸಬೇಕು. ಸರಪಳಿಯ ಬಲ ಅದರ ಅತ್ಯಂತ ದುರ್ಬಲ ಕೊಂಡಿಯಷ್ಟೇ.
  • ಹೊಸದಾಗಿ ರಚಿಸಲಾದ ರಾಷ್ಟ್ರೀಯ ಪರೀಕ್ಷಾ ಭದ್ರತಾ ಕಾರ್ಯಪಡೆಯಲ್ಲಿ ಸೈಬರ್ ಭದ್ರತಾ ತಜ್ಞರು, ಡಿಜಿಟಲ್ ಫೊರೆನ್ಸಿಕ್ ಪರಿಣಿತರು, ಕಾನೂನು ಜಾರಿ ಅಧಿಕಾರಿಗಳು, ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು ಮತ್ತು ಪರೀಕ್ಷಾ ಆಡಳಿತ ತಜ್ಞರು ಇರಬೇಕು. ಇವರು ನಿರಂತರವಾಗಿ ಅಪಾಯಗಳನ್ನು ಪರಿಶೀಲಿಸಿ, ಭದ್ರತಾ ಲೆಕ್ಕಪರಿಶೋಧನೆ ನಡೆಸಿ, ಸುಧಾರಣೆಗಳನ್ನು ಶಿಫಾರಸು ಮಾಡಬೇಕು.
  • ಯಾವುದೇ ವ್ಯಕ್ತಿ, ಗುತ್ತಿಗೆದಾರ, ಮುದ್ರಣಾಲಯ ಅಥವಾ ಪರೀಕ್ಷಾ ಕೇಂದ್ರವನ್ನು ಪೂರ್ವನಿಯೋಜಿತವಾಗಿ ನಂಬದ ‘Zero Trust’ ಭದ್ರತಾ ವ್ಯವಸ್ಥೆಯನ್ನು ಅಳವಡಿಸಬೇಕು. ಪ್ರತಿಯೊಂದು ಪ್ರವೇಶ, ಬದಲಾವಣೆ ಮತ್ತು ಚಟುವಟಿಕೆ ದೃಢೀಕರಣ, ಅನುಮೋದನೆ ಮತ್ತು ಸಂಪೂರ್ಣ ಲೆಕ್ಕಪತ್ರದ ಮೂಲಕವೇ ನಡೆಯಬೇಕು.
  • ಪ್ರಶ್ನೆಗಳನ್ನು ನಿಗದಿತ ಸಮಯದಲ್ಲಿ ಸುರಕ್ಷಿತವಾಗಿ ಕಂಪ್ಯೂಟರ್ ಪರದೆಯ ಮೇಲೆ ಪ್ರದರ್ಶಿಸಿ, ವಿದ್ಯಾರ್ಥಿಗಳು ಉತ್ತರಗಳನ್ನು ಭೌತಿಕ OMR ಹಾಳೆಯಲ್ಲೇ ದಾಖಲಿಸುವ ಸಂಯೋಜಿತ (Hybrid) ಪರೀಕ್ಷಾ ವ್ಯವಸ್ಥೆಯನ್ನು ಪರಿಗಣಿಸಬಹುದು. ಇದರಿಂದ ಪ್ರಶ್ನೆಪತ್ರಿಕೆ ಸೋರಿಕೆಯ ಅಪಾಯ ಕಡಿಮೆಯಾಗುವುದರ ಜೊತೆಗೆ ಭೌತಿಕ ದಾಖಲೆಯೂ ಉಳಿಯುತ್ತದೆ.
  • ರಾಷ್ಟ್ರಮಟ್ಟದ ದೊಡ್ಡ ಎನ್‌ಕ್ರಿಪ್ಟ್ ಮಾಡಲಾದ ಪ್ರಶ್ನೆ ಬ್ಯಾಂಕ್ ನಿರ್ಮಿಸಬೇಕು. ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು, ಇಂಟರ್‌ನೆಟ್ ಸಂಪರ್ಕವಿಲ್ಲದ (Air-Gapped) ಸುರಕ್ಷಿತ ವಾತಾವರಣದಲ್ಲಿ ಪೂರ್ವನಿರ್ಧರಿತ ಪಠ್ಯಕ್ರಮ ಮತ್ತು ಕಠಿಣತೆಯ ಮಾನದಂಡಗಳ ಆಧಾರದ ಮೇಲೆ ಅಂತಿಮ ಪ್ರಶ್ನೆಪತ್ರಿಕೆಯನ್ನು ರಚಿಸಬೇಕು. ಪ್ರಶ್ನೆ ಬ್ಯಾಂಕ್‌ಗೆ ಮಿಲಿಟರಿ ಮಟ್ಟದ ಎನ್‌ಕ್ರಿಪ್ಷನ್ ಮತ್ತು ಭದ್ರತೆ ಒದಗಿಸಬೇಕು.
  • ಪರೀಕ್ಷಾ ಕೇಂದ್ರ ಪ್ರವೇಶದ ವೇಳೆ ಹಾಗೂ OMR ಹಾಳೆ ಸಲ್ಲಿಸುವ ಮೊದಲು ಆಧಾರ್ ಆಧಾರಿತ ಬೆರಳಚ್ಚು ಮತ್ತು ಮುಖ ಗುರುತಿಸುವಿಕೆ (Facial Recognition) ಹೊಂದಿದ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸಬೇಕು. ಇದರಿಂದ ಸೋಗುಹಾಕಿ ಪರೀಕ್ಷೆ ಬರೆಯುವ (Impersonation) ಪ್ರಕರಣಗಳನ್ನು ತಡೆಯಬಹುದು.
  • ಒಂದೇ ಬಾರಿ ನಡೆಯುವ ಅತ್ಯಂತ ಮಹತ್ವದ ಪರೀಕ್ಷೆಯ ಬದಲಿಗೆ ವರ್ಷದಲ್ಲಿ ಮೂರು ಬಾರಿ NEET ನಡೆಸುವ ಬಗ್ಗೆ ಪರಿಗಣಿಸಬಹುದು. ಅಂತಿಮ ಅಂಕವನ್ನು ಅತ್ಯುತ್ತಮ ಅಂಕದ ಬದಲಿಗೆ ಎರಡು ಪ್ರಯತ್ನಗಳ ಸರಾಸರಿಯ ಆಧಾರದ ಮೇಲೆ ನಿರ್ಧರಿಸಬಹುದು. ಇದರಿಂದ ವಿದ್ಯಾರ್ಥಿಗಳ ಒತ್ತಡ ಕಡಿಮೆಯಾಗುತ್ತದೆ ಹಾಗೂ ನ್ಯಾಯಸಮ್ಮತ ಮೌಲ್ಯಮಾಪನ ಸಾಧ್ಯವಾಗುತ್ತದೆ.
  •  OMR ಹಾಳೆಗಳ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಸುರಕ್ಷಿತ ಡಿಜಿಟಲ್ Chain of Custody ವ್ಯವಸ್ಥೆ ಜಾರಿಗೆ ತರಬೇಕು. ಪ್ರತಿಯೊಂದು OMR ಹಾಳೆಯಲ್ಲೂ ವಿಶಿಷ್ಟ ಎನ್‌ಕ್ರಿಪ್ಟ್ ಮಾಡಲಾದ QR ಕೋಡ್ ಮತ್ತು ಸೀರಿಯಲ್ ಸಂಖ್ಯೆ ಇರಬೇಕು. ಪರೀಕ್ಷೆ ಮುಗಿದ ತಕ್ಷಣ ಸರ್ಕಾರದ ಸುರಕ್ಷಿತ ಸಾಧನದ ಮೂಲಕ ಅದನ್ನು ಸ್ಕ್ಯಾನ್ ಮಾಡಿ, ಡಿಜಿಟಲ್ ಸಹಿ, ಸಮಯದ ಮುದ್ರೆ (Time Stamp) ಮತ್ತು ಕ್ರಿಪ್ಟೋಗ್ರಾಫಿಕ್ ಹ್ಯಾಶ್ ಮೂಲಕ ಸುರಕ್ಷಿತಗೊಳಿಸಬೇಕು. ನಂತರ ಯಾವುದೇ ಬದಲಾವಣೆ ಅಥವಾ ತಿರುಚುವಿಕೆ ನಡೆದರೆ ಅದು ತಕ್ಷಣವೇ ಪತ್ತೆಯಾಗಬೇಕು.
  • ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಕೃತಕ ಬುದ್ಧಿಮತ್ತೆ (AI) ಆಧಾರಿತ CCTV ಮತ್ತು ರೇಡಿಯೋ ಫ್ರೀಕ್ವೆನ್ಸಿ (RF) ನಿಗಾ ವ್ಯವಸ್ಥೆಯನ್ನು ಅಳವಡಿಸಬೇಕು. ಸೋಗುಹಾಕಿ ಪರೀಕ್ಷೆ ಬರೆಯುವುದು, ಉತ್ತರ ಪತ್ರಿಕೆಗಳ ವಿನಿಮಯ, ಎಲೆಕ್ಟ್ರಾನಿಕ್ ಸಾಧನಗಳ ಬಳಕೆ, ಅನುಮಾನಾಸ್ಪದ ಚಲನವಲನ, ಮೇಲ್ವಿಚಾರಕರ ದುರ್ವರ್ತನೆ ಸೇರಿದಂತೆ ಯಾವುದೇ ಅಸಾಮಾನ್ಯ ಘಟನೆಗಳನ್ನು AI ತಕ್ಷಣ ಪತ್ತೆಹಚ್ಚಿ ಕೇಂದ್ರ ನಿಯಂತ್ರಣ ಕೊಠಡಿಗೆ ಎಚ್ಚರಿಕೆ ಕಳುಹಿಸಬೇಕು.
  •  ಭದ್ರತೆಯಷ್ಟೇ ಪಾರದರ್ಶಕತೆಯೂ ಮುಖ್ಯ. ಫಲಿತಾಂಶ ಪ್ರಕಟಣೆಗೆ ಮುನ್ನ ಅಭ್ಯರ್ಥಿಗಳು ತಮ್ಮ ಸ್ಕ್ಯಾನ್ ಮಾಡಿದ OMR ಹಾಳೆಯನ್ನು ವೀಕ್ಷಿಸಲು ಅವಕಾಶ ಇರಬೇಕು. ಪರಿಣಾಮಕಾರಿ ದೂರು ನಿವಾರಣಾ ವ್ಯವಸ್ಥೆ ಮತ್ತು ನಿಯಮಿತ ಸ್ವತಂತ್ರ ತೃತೀಯ ಪಕ್ಷದ ಭದ್ರತಾ ಲೆಕ್ಕಪರಿಶೋಧನೆಗಳ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಬೇಕು.
  •  ಪರೀಕ್ಷಾ ವಂಚನೆಯನ್ನು ದೇಶದ ಭವಿಷ್ಯದ ವಿರುದ್ಧದ ಅಪರಾಧವೆಂದು ಪರಿಗಣಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ, ಸೋಗುಹಾಕಿ ಪರೀಕ್ಷೆ ಬರೆಯುವುದು, ಸಂಘಟಿತ ನಕಲು ಮತ್ತು ಸಂಸ್ಥೆಗಳ ನಿರ್ಲಕ್ಷ್ಯಕ್ಕೆ ತ್ವರಿತ ತನಿಖೆ, ವಿಶೇಷ ನ್ಯಾಯಾಲಯಗಳಲ್ಲಿ ಶೀಘ್ರ ವಿಚಾರಣೆ, ಜೀವಿತಾವಧಿಯ ನಿಷೇಧ, ಭಾರೀ ಆರ್ಥಿಕ ದಂಡ ಹಾಗೂ ಸಂಬಂಧಪಟ್ಟ ಎಲ್ಲರಿಗೂ ಅವರ ಹುದ್ದೆ ಯಾವುದೇ ಆಗಿರಲಿ ಕಠಿಣ ಕ್ರಿಮಿನಲ್ ಶಿಕ್ಷೆ ವಿಧಿಸಬೇಕು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gruha Jyothi Scheme: ಸರ್ವರ್ ಸಮಸ್ಯೆ, ಮೀಟರ್ ರೀಡರ್‌ಗಳ ಕೊರತೆ: ಗಡುವಿನೊಳಗೆ ಸಿಗಲ್ವಾ ಉಚಿತ ವಿದ್ಯುತ್ ಭಾಗ್ಯ? – Kannada News | Server Glitch and Staff Shortage Delay Karnataka Gruha Jyothi Verification

ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ಗೃಹ ಜ್ಯೋತಿ ಯೋಜನೆಯ ಮನೆ-ಮನೆ ಪರಿಶೀಲನೆಗೆ ವಿಳಂಬವಾಗಿದೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಸರ್ವರ್ ಸಮಸ್ಯೆಯಿಂದ ಆ್ಯಪ್ ಕಾರ್ಯನಿರ್ವಹಣೆ ಮಂದಗತಿಯಲ್ಲಿದ್ದು, ಜೊತೆಗೆ ರಾಜ್ಯಾದ್ಯಂತ ಮೀಟರ್ ರೀಡರ್‌ಗಳ ತೀವ್ರ ಅಭಾವ ಎದುರಾಗಿದೆ. 1.65 ಕೋಟಿ ಫಲಾನುಭವಿಗಳ ಪೈಕಿ ಕೇವಲ 45 ಲಕ್ಷ ಮನೆಗಳ ಪರಿಶೀಲನೆಯಷ್ಟೇ ಮುಗಿದಿದ್ದು, ನಿಗದಿತ ಆಗಸ್ಟ್ 31ರ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವುದು ಅನುಮಾನವಾಗಿದೆ. ಇನ್ನು 20,000ಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಬಂದಿದ್ದಾರೆ.

ಪ್ರಸ್ತುತ ಪ್ರಗತಿ

ರಾಜ್ಯದಲ್ಲಿ ಒಟ್ಟು 1.65 ಕೋಟಿ ಫಲಾನುಭವಿಗಳನ್ನು ಪರಿಶೀಲಿಸುವ ಗುರಿ ಹೊಂದಲಾಗಿದ್ದು, ಜುಲೈ 1 ರಿಂದ ಆರಂಭವಾದ ಈ ಪ್ರಕ್ರಿಯೆಯಲ್ಲಿ ಇದುವರೆಗೆ ಕೇವಲ 45 ಲಕ್ಷ ಮನೆಗಳ ಪರಿಶೀಲನೆ ಮಾತ್ರ ಪೂರ್ಣಗೊಂಡಿದೆ. ನಿಗದಿತ ಆಗಸ್ಟ್ 31ರೊಳಗೆ ಈ ಬೃಹತ್ ಗುರಿಯನ್ನು ತಲುಪುವುದು ಕಷ್ಟಕರವೆನಿಸಿದೆ.

ಇಡೀ ರಾಜ್ಯಾದ್ಯಂತ ಕೇವಲ 21,602 ಮೀಟರ್ ರೀಡರ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಸ್ಕಾಂ (Bescom) ವ್ಯಾಪ್ತಿಯಲ್ಲಿ 65 ಲಕ್ಷ ಫಲಾನುಭವಿಗಳಿದ್ದು, ಪರಿಶೀಲನೆಗೆ ಕೇವಲ 7,409 ಮೀಟರ್ ರೀಡರ್‌ಗಳಿದ್ದಾರೆ. ಈಗಾಗಲೇ 25 ಲಕ್ಷ ಮನೆಗಳ ಪರಿಶೀಲನೆ ಮುಗಿದಿದ್ದು, ಇನ್ನು 40 ಲಕ್ಷ ಮನೆಗಳು ಬಾಕಿ ಇವೆ.

ಸರ್ವರ್ ಕ್ರ್ಯಾಶ್ ಮತ್ತು ತಾಂತ್ರಿಕ ತೊಡಕು

ಗೃಹ ಜ್ಯೋತಿ ಡೇಟಾವನ್ನು ‘ಸೇವಾ ಸಿಂಧು’ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಇದೇ ಪೋರ್ಟಲ್‌ನಲ್ಲಿ ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ರೇಷನ್ ಕಾರ್ಡ್ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಖಾತಾ ಸೇವೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಸರ್ವರ್ ಮೇಲಿನ ಲೋಡ್ ಹೆಚ್ಚಾಗಿ ಆ್ಯಪ್ ಪದೇ ಪದೇ ಸ್ಲೋ ಆಗುತ್ತಿದೆ ಅಥವಾ ಕ್ರ್ಯಾಶ್ ಆಗುತ್ತಿದೆ.

ಸುಮಾರು 20,000ಕ್ಕೂ ಹೆಚ್ಚು ಫಲಾನುಭವಿಗಳು ತಮ್ಮ ವೈಯಕ್ತಿಕ ವಿವರಗಳನ್ನು ನೀಡಲು ನಿರಾಕರಿಸಿದ್ದು, ‘Part B’ ಫಾರ್ಮ್‌ಗೆ ಸಹಿ ಮಾಡುವ ಮೂಲಕ ಸ್ವಯಂಪ್ರೇರಿತವಾಗಿ ಗೃಹ ಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯವನ್ನು ಬಿಟ್ಟುಕೊಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್​​ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್​ಲಿಸ್ಟ್ ಪರಿಶೀಲಿಸಿ – Kannada News | ITR filing deadline nears, things to check before submitting

ನವದೆಹಲಿ, ಜುಲೈ 27: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಡೆಡ್​ಲೈನ್ ಹತ್ತಿರವಾಗುತ್ತಿದ್ದಂತೆ, ಧಾವಂತದಲ್ಲಿ ತೆರಿಗೆದಾರರು ಸಣ್ಣಪುಟ್ಟ ತಪ್ಪುಗಳನ್ನು ಮಾಡುವುದು ಸಾಮಾನ್ಯ. ಸಬ್ಮಿಟ್ (Submit) ಬಟನ್ ಒತ್ತುವ ಮುನ್ನ ಈ ಕೆಳಗಿನ ಪ್ರಮುಖ ವಿಷಯಗಳನ್ನು ಪರಿಶೀಲಿಸಿದರೆ, ತೆರಿಗೆ ಇಲಾಖೆಯಿಂದ ನೋಟಿಸ್ ಬರುವುದನ್ನು ತಪ್ಪಿಸಬಹುದು ಹಾಗೂ ರೀಫಂಡ್ (Refund) ಬೇಗನೆ ಸಿಗುವಂತೆ ನೋಡಿಕೊಳ್ಳಬಹುದು.

ದಾಖಲೆಗಳನ್ನು ಕೈಯಲ್ಲಿಟ್ಟುಕೊಳ್ಳಿ

ಫಾರ್ಮ್ 16, ಬ್ಯಾಂಕ್ ಸ್ಟೇಟ್‌ಮೆಂಟ್, ಬಡ್ಡಿ ಪ್ರಮಾಣಪತ್ರಗಳು (Interest Certificates), ಡಿಮ್ಯಾಟ್/ಮ್ಯೂಚುಯಲ್ ಫಂಡ್ ಕ್ಯಾಪಿಟಲ್ ಗೇನ್ಸ್‌ ವಿವರಗಳು ಹಾಗೂ ಹೂಡಿಕೆಯ ಆಧಾರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

AIS ಮತ್ತು Form 26AS ಪರಿಶೀಲನೆ

ನಿಮ್ಮ ಬಳಿಯಿರುವ ದಾಖಲೆಗಳನ್ನು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಲಭ್ಯವಿರುವ AIS (Annual Information Statement) ಮತ್ತು Form 26AS ನೊಂದಿಗೆ ಹೋಲಿಸಿ ಪರಿಶೀಲಿಸಿ.

ಸಂಬಳ, ಬ್ಯಾಂಕ್ ಡೆಪಾಸಿಟ್‌ಗಳ ಬಡ್ಡಿ, ಷೇರು ಮಾರುಕಟ್ಟೆಯ ಲಾಭ ಮತ್ತು ಕಡಿತಗೊಂಡ ತೆರಿಗೆ (TDS) ವಿವರಗಳು ಸರಿಯಾಗಿ ಹೊಂದಾಣಿಕೆಯಾಗಬೇಕು. Mismatch ಇದ್ದರೆ ನೋಟಿಸ್ ಬರುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ

ಸರಿಯಾದ ITR ಫಾರ್ಮ್ ಆಯ್ಕೆಮಾಡಿ

  • ITR-1 (ಸಹಜ್): ₹50 ಲಕ್ಷದವರೆಗೆ ಆದಾಯವಿರುವ, ಒಂದೇ ಮನೆ ಆಸ್ತಿ ಹೊಂದಿರುವ ವೇತನದಾರರಿಗೆ.
  • ITR-2: ₹50 ಲಕ್ಷಕ್ಕಿಂತ ಹೆಚ್ಚು ಆದಾಯ, ಕ್ಯಾಪಿಟಲ್ ಗೇನ್ಸ್ ಅಥವಾ ಒಂದಕ್ಕಿಂತ ಹೆಚ್ಚು ಮನೆ ಆಸ್ತಿ ಹೊಂದಿರುವವರಿಗೆ.
  • ITR-3 / ITR-4: ವ್ಯಾಪಾರ, ವೃತ್ತಿಪರ ಆದಾಯ ಅಥವಾ ಫ್ರೀಲ್ಯಾನ್ಸಿಂಗ್ ಮಾಡುವವರಿಗೆ. (ತಪ್ಪು ಫಾರ್ಮ್ ಆಯ್ಕೆಮಾಡಿದರೆ ನಿಮ್ಮ ಐಟಿಆರ್ ಅಮಾನ್ಯಗೊಳ್ಳುತ್ತದೆ).

ಎಲ್ಲಾ ಆದಾಯದ ಮೂಲಗಳನ್ನು ನಮೂದಿಸಿ

ಸಂಬಳದ ಹೊರತಾಗಿ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ (Savings Interest), ಫಿಕ್ಸ್ಡ್ ಡೆಪಾಸಿಟ್ ಬಡ್ಡಿ, ಡಿವಿಡೆಂಡ್, ಮನೆ ಬಾಡಿಗೆ ಆದಾಯ ಮತ್ತು ಕ್ರಿಪ್ಟೋ/ಷೇರು ಲಾಭಗಳನ್ನು ತಪ್ಪದೇ ನಮೂದಿಸಿ.

ಬ್ಯಾಂಕ್ ಖಾತೆಯ ವಿವರಗಳು

ತೆರಿಗೆ ಮರುಪಾವತಿ (Tax Refund) ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲು, ನಿಮ್ಮ ಬ್ಯಾಂಕ್ ಖಾತೆ ಐಟಿಆರ್ ಪೋರ್ಟಲ್‌ನಲ್ಲಿ Pre-Validated ಆಗಿದೆಯೇ ಹಾಗೂ IFSC ಕೋಡ್ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ತೆರಿಗೆ ವಿಧಾನದ (Tax Regime) ಆಯ್ಕೆ

ನೀವು ‘ಹಳೆಯ ತೆರಿಗೆ ಪದ್ಧತಿ’ (Old Tax Regime) ಅಥವಾ ‘ಹೊಸ ತೆರಿಗೆ ಪದ್ಧತಿ’ (New Tax Regime) ಪೈಕಿ ಯಾವುದರಲ್ಲಿ ಹೆಚ್ಚು ತೆರಿಗೆ ಉಳಿತಾಯವಾಗುತ್ತದೆ ಎಂಬುದನ್ನು ಲೆಕ್ಕಹಾಕಿ ಸರಿಯಾದ ವಿಭಾಗವನ್ನು ಆಯ್ಕೆಮಾಡಿ.

ಐಟಿಆರ್ ಸಬ್ಮಿಟ್ ಮಾಡಿದ ತಕ್ಷಣ ಪ್ರಕ್ರಿಯೆ ಮುಗಿಯುವುದಿಲ್ಲ. ರಿಟರ್ನ್ ಸಲ್ಲಿಸಿದ 30 ದಿನಗಳ ಒಳಗಾಗಿ E-Verification (ಆಧಾರ್ OTP, ನೆಟ್ ಬ್ಯಾಂಕಿಂಗ್ ಮೂಲಕ) ಪೂರ್ಣಗೊಳಿಸುವುದು ಕಡ್ಡಾಯ. ಇ-ವೆರಿಫೈ ಮಾಡದಿದ್ದರೆ ಸಲ್ಲಿಕೆಯಾದ ಐಟಿಆರ್ ರದ್ದಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪಶುವೈದ್ಯ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿಗೆ ಆರ್​​. ಅಶೋಕ್​​ ಒಳಗೊಂಡ ಬಿಜೆಪಿ ನಿಯೋಗ ಭೇಟಿ – Kannada News | KPSC Veterinary Recruitment Scam: BJP Delegation Demands CBI Probe

ಬೆಂಗಳೂರು, ಜುಲೈ 27: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪಶುವೈದ್ಯರ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತೀವ್ರ ಚರ್ಚೆ ಹಿನ್ನಲೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಅವರನ್ನೊಳಗೊಂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಿಯೋಗವು ಬೆಂಗಳೂರಿನ ಕೆಪಿಎಸ್‌ಸಿ ಕಚೇರಿಗೆ ಭೇಟಿ ನೀಡಿದೆ. ಕೆಪಿಎಸ್‌ಸಿ ಹಂಗಾಮಿ ಅಧ್ಯಕ್ಷ ಡಾ. ಬಿ. ಪ್ರಭುದೇವ್ ಅವರನ್ನು ಭೇಟಿಯಾಗಿರುವ ನಿಯೋಗ, ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಚರ್ಚೆ ನಡೆಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link