Category Archives: Blog

Your blog category

Video: ಫಿಶ್ ಟ್ಯಾಂಕ್ ಒಳಗಿಳಿದು ಮೀನು ಹಿಡಿದ ಪುಟ್ಟ ಬಾಲಕ, ವೈರಲ್‌ ಆಯ್ತು ದೃಶ್ಯ – Kannada News

ಪುಟಾಣಿಗಳ (little kids) ಆಟ ತುಂಟಾಟಗಳನ್ನು ನೋಡುವ ಖುಷಿಯೇ ಬೇರೆ. ಕೀಟಲೆ ಮಾಡುವ ಮಕ್ಕಳನ್ನು ಕಂಡರೆ ಪಿತ್ತ ನೆತ್ತಿಗೇರುತ್ತದೆ. ಇಂತಹ ಮಕ್ಕಳನ್ನು ಹೆತ್ತವರು ಹೇಗೆ ಸಹಿಸಿಕೊಳ್ತಾರೆ ಎಂದು ಮನಸ್ಸಲ್ಲೇ ಅಂದುಕೊಳ್ಳುವುದಿದೆ. ಈ ದೃಶ್ಯ ನೋಡಿದ್ರೆ ನಿಮಗೆ ಹಾಗೆ ಅನಿಸಬಹುದು. ಪುಟ್ಟ ಹುಡುಗನೊಬ್ಬ ಫಿಶ್ ಟ್ಯಾಂಕ್ ಒಳಗಿಳಿದು ಮೀನು ಹಿಡಿಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಯಲ್ಯಾಂಗ್ ಅಕ್ವೇರಿಯಂ (Ylang Aquarium) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪುಟಾಣಿಯ ಖತರ್ನಾಕ್ ಕೆಲಸವನ್ನು ನೋಡಬಹುದು. ಮನೆಯಲ್ಲಿ ಯಾರು ಇರದ ಸಂದರ್ಭದಲ್ಲಿ ಪುಟ್ಟ ಹುಡುಗನೊಬ್ಬ ಅಕ್ವೇರಿಯಂ ಟ್ಯಾಂಕ್ ಒಳಗೆ ಇಳಿದು ಮೀನು ಹಿಡಿಯಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಮೀನು ಹಾರಿ ನೆಲದ ಮೇಲೆ ಬಿದ್ದಿರುವುದನ್ನು ಕಾಣಬಹುದು. ಈ ಪುಟ್ಟ ಹುಡುಗನು  ಪಟ್ಟು ಬೀಡದೇ ನೆಲಕ್ಕೆ ಬಿದ್ದ ಮೀನನ್ನು ಹುಡುಕುತ್ತಿರುವುದನ್ನು ನೀವು ನೋಡಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗೋಲ್ಗಪ್ಪಾ ವಿಭಿನ್ನವಾಗಿ ತಿನ್ಬಹುದೆಂದು ತೋರಿಸಿಕೊಟ್ಟ ಪುಟಾಣಿ

ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನನ್ನ ಸಂಬಂಧಿಕರ ಮಗನು ಇಷ್ಟೇ ತರಲೆ ಎಂದಿದ್ದಾರೆ. ಇನ್ನೊಬ್ಬರು, ಕೈಯಲ್ಲಿ ಸ್ಮಾರ್ಟ್ ಫೋನ್ ಇಲ್ಲದೆ ಇದ್ದಾಗ ಈ ಪುಟಾಣಿಯ ಸರ್ಕಸ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಟ್ಯಾಂಕ್ ಗುಣಮಟ್ಟಕ್ಕೆ ನನ್ನದೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗ-ತುಮಕೂರು ಹೆದ್ದಾರಿ ಕಾಮಗಾರಿಯಲ್ಲಿ ಮಹಾ ಯಡವಟ್ಟು: ಕಿರಿದಾದ ಮಣ್ಣಿನ ರಸ್ತೆಯಲ್ಲಿ ಲಾಕ್ ಆಯ್ತು ಗ್ಯಾಸ್ ಟ್ಯಾಂಕರ್ – Kannada News

ಶಿವಮೊಗ್ಗ ಹೆದ್ದಾರಿImage Credit source: Tv9 kannada

ಶಿವಮೊಗ್ಗ, ಜೂ.9: ಅಧಿಕಾರಿಗಳು ಮಾಡುವ ಯಡವಟ್ಟಿನಿಂದ ಜನರಿಗೆ ಭಾರೀ ತೊಂದರೆ ಆಗುತ್ತಿದೆ. ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿ 206ರ ಕಾಮಗಾರಿ ಸಾರ್ವಜನಿಕರಿಗೆ ನಿತ್ಯ ನರಕದರ್ಶನ ಮಾಡಿಸುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮಂದಗತಿಯ ಕೆಲಸಕ್ಕೆ ಇಂದು ಮತ್ತೊಂದು ಭೀಕರ ಅವಾಂತರ ಸೃಷ್ಟಿಯಾಗಿದೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಇರುವ ಕುವೆಂಪು ನಗರ ಗ್ರಾಮದ ಮುಂಭಾಗದ ಕಿರಿದಾದ ತಾತ್ಕಾಲಿಕ ಮಣ್ಣಿನ ರಸ್ತೆಯಲ್ಲಿ ಭಾರಿ ಪ್ರಮಾಣದ ಗ್ಯಾಸ್ ತುಂಬಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಸಿಲುಕಿಕೊಂಡಿದ್ದು, ಕೂದಲೆಳೆ ಅಂತರದಲ್ಲಿ ಭೀಕರ ದುರಂತವೊಂದು ತಪ್ಪಿದೆ.

ಕಳೆದ ಐದು ವರ್ಷಗಳಿಂದ ಈ ಹೆದ್ದಾರಿ ಕಾಮಗಾರಿ ನಡೆಯುತ್ತಲೇ ಇದೆ. ಅತ್ಯಾಧುನಿಕ ಯಂತ್ರೋಪಕರಣಗಳಿದ್ದರೂ ಇಲ್ಲಿನ ಕೆಲಸ ಮಾತ್ರ ಆಮೆಗತಿಯಲ್ಲಿ ಕುಂಟುತ್ತಾ ಸಾಗುತ್ತಿದೆ. ಹೆದ್ದಾರಿ ನಿರ್ಮಾಣಕ್ಕಾಗಿ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಪಕ್ಕದಲ್ಲೇ ಇರುವ 150ಕ್ಕೂ ಹೆಚ್ಚು ಮನೆಗಳಿರುವ ಕುವೆಂಪು ನಗರದ ಜನರಿಗೆ ಸರಿಯಾದ ಸರ್ವಿಸ್ ರಸ್ತೆಯನ್ನೇ ನಿರ್ಮಿಸಿಕೊಟ್ಟಿಲ್ಲ. ಜನರು ಕೇವಲ ಎರಡರಿಂದ ನಾಲ್ಕು ಅಡಿ ಅಗಲದ ಅತ್ಯಂತ ಅಪಾಯಕಾರಿ ತಾತ್ಕಾಲಿಕ ಮಣ್ಣಿನ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಇಂದು ಇದೇ ಕಿರಿದಾದ ರಸ್ತೆಯಲ್ಲಿ ಟ್ಯಾಂಕರ್​​​​​ ಒಂದು ಚಲಿಸಿದೆ. ಆದರೆ ಇದು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿ ನಿಂತಿತ್ತು. ಟ್ಯಾಂಕರ್ ಸಿಲುಕಿದ್ದ ಜಾಗದಿಂದ ಕೇವಲ ಒಂದೇ ಒಂದು ಅಡಿ ಪಕ್ಕದಲ್ಲಿರುವ ಸುಮಾರು 20 ರಿಂದ 25 ಅಡಿಯಷ್ಟು ಆಳದಲ್ಲಿ ಪ್ರಪಾತಕ್ಕೆ ಹೋಗಿ ಬೀಳುತ್ತಿತ್ತು.

ಒಂದು ವೇಳೆ ತುಂಬಿದ್ದ ಗ್ಯಾಸ್ ಟ್ಯಾಂಕರ್ ಕಂದಕಕ್ಕೆ ಬಿದ್ದಿದ್ದರೆ ಭಾರಿ ಪ್ರಮಾಣದ ಗ್ಯಾಸ್ ಸೋರಿಕೆಯಾಗಿ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶ, ಹತ್ತಾರು ಹಳ್ಳಿಗಳು ಹಾಗೂ ಶಿವಮೊಗ್ಗ ಮತ್ತು ಭದ್ರಾವತಿ ನಗರದ ವ್ಯಾಪ್ತಿಯಲ್ಲಿ ದೊಡ್ಡ ಅಗ್ನಿ ದುರಂತವೇ ಸಂಭವಿಸುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಟ್ಯಾಂಕರ್ ಪ್ರಪಾತಕ್ಕೆ ಬೀಳದೆ ಅಲ್ಲಿಯೇ ನಿಂತಿದೆ. ವಿಷಯ ತಿಳಿಯುತ್ತಿದ್ದಂತೆ ಇಂಡಿಯನ್ ಗ್ಯಾಸ್ ಸಂಸ್ಥೆಯ ಎರಡು ಖಾಲಿ ಟ್ಯಾಂಕರ್‌ಗಳು ಹಾಗೂ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದಾವಿಸಿದವು. ಅಗ್ನಿಶಾಮಕ ಸಿಬ್ಬಂದಿ ಹಾಗೂ ತಾಂತ್ರಿಕ ತಂಡ ಎರಡು ಜೆಸಿಬಿ, ಕ್ರೇನ್ ಮತ್ತು ಹಿಟಾಚಿ ಯಂತ್ರಗಳನ್ನು ಬಳಸಿ ಸುಮಾರು 4 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದರು. ಮೊದಲು ಗ್ಯಾಸ್ ಖಾಲಿ ಮಾಡಿ ಆ ಬಳಿಕ ಟ್ಯಾಂಕರ್ ಅನ್ನು ಸುರಕ್ಷಿತವಾಗಿ ಹೊರಗೆಳೆದಿವೆ. ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: ಜೇನುಗೂಡಿಗೆ ಕಲ್ಲು ಎಸೆದ ಪರಿಣಾಮ ಹೆಜ್ಜೇನು ದಾಳಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊರಾರ್ಜಿ ಶಾಲೆಯ 21ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಗುತ್ತಿಗೆದಾರರು ಮತ್ತು ಕಂದಾಯ ಇಲಾಖೆಯ ಬೇಜಾಬ್ದಾರಿತನಕ್ಕೆ ಸ್ಥಳೀಯ ಗ್ರಾಮಸ್ಥರು ಐದು ವರ್ಷಗಳಿಂದ ಈ ರಸ್ತೆಯಲ್ಲಿ ನರಕಯಾತನೆ ಪಡುತ್ತಿದ್ದಾರೆ. ಇಷ್ಟು ಕಿರಿದಾದ ಮತ್ತು ಕೇವಲ ಮಣ್ಣಿನಿಂದ ತಾತ್ಕಾಲಿಕವಾಗಿ ಮಾಡಲಾದ ರಸ್ತೆಯ ಮೇಲೆ ಘನ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಷೇಧ ಹೇರಬೇಕಾಗಿತ್ತು. ಆದರೆ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಶಿವಮೊಗ್ಗ ನಗರಕ್ಕೆ ಸುಲಭವಾಗಿ ತಲುಪಬಹುದು ಎನ್ನುವ ಕಾರಣಕ್ಕೆ ದೊಡ್ಡ ದೊಡ್ಡ ಲಾರಿ ಹಾಗೂ ಟ್ಯಾಂಕರ್‌ಗಳು ನಿರಂತರವಾಗಿ ಇದೇ ಅಪಾಯಕಾರಿ ರಸ್ತೆಯನ್ನೇ ಬಳಸುತ್ತಿವೆ. ಗ್ರಾಮಸ್ಥರಿಗೆ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಗೆ ಹೋಗಲು ಕನಿಷ್ಠ ಸೂಕ್ತವಾದ ಸಂಪರ್ಕ ರಸ್ತೆಯೂ ಇಲ್ಲದೆ ಪರದಾಡುವಂತಾಗಿದ್ದು, ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೆದ್ದಾರಿ ಕಾಮಗಾರಿಗೆ ಶಾಪವಿಮೋಚನೆ ಸಿಗುವುದು ಯಾವಾಗ? ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಸೂಕ್ತ ಸರ್ವಿಸ್ ರಸ್ತೆ ಕಲ್ಪಿಸುತ್ತಾ? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:42 pm, Tue, 9 June 26

Source link

ಕಾಂಗ್ರೆಸ್​ಗೆ ಭಾರೀ ಮುಖಭಂಗ; ರಾಜ್ಯಸಭೆ ಚುನಾವಣೆಗೆ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ – Kannada News

ಭೋಪಾಲ್, ಜೂನ್ 9: ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರಿಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ (Rajya Sabha Elections) ಸ್ಪರ್ಧಿಸಲು ಅವರು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ. ಈ ಮೂಲಕ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ರದ್ದುಗೊಂಡಿದೆ.

ಬಿಜೆಪಿ ಮೀನಾಕ್ಷಿ ನಟರಾಜನ್ ಅವರ ನಾಮನಿರ್ದೇಶನಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ವರದಿಗಳ ಪ್ರಕಾರ, ಮೀನಾಕ್ಷಿ ನಟರಾಜನ್ ತೆಲಂಗಾಣದಲ್ಲಿ ಅವರ ವಿರುದ್ಧ ದಾಖಲಾಗಿದ್ದ ಕೇಸಿನ ಮಾಹಿತಿಯನ್ನು ಮರೆಮಾಚಿದ್ದರು, ಅದಕ್ಕಾಗಿಯೇ ಅವರ ನಾಮಪತ್ರ ರದ್ದುಗೊಂಡಿದೆ. ಈ ರದ್ದತಿಯು ರಾಜ್ಯದ ಮೂರು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿಯ ಮೇಲುಗೈಯನ್ನು ಸೂಚಿಸುತ್ತದೆ. ಇದರಿಂದಾಗಿ ಬಿಜೆಪಿಯ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಚುನಾವಣೆ ಇಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ, ಯಾರ್ಯಾರು?

ತೆಲಂಗಾಣದಲ್ಲಿ ಮೀನಾಕ್ಷಿ ನಟರಾಜನ್ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬಿಜೆಪಿ ನಾಯಕರು ತಮ್ಮ ದೂರಿನಲ್ಲಿ ಆರೋಪಿಸಿದ್ದರು. ಮೀನಾಕ್ಷಿ ಅವರು ಉದ್ದೇಶಪೂರ್ವಕವಾಗಿ ತಮ್ಮ ಅಫಿಡವಿಟ್‌ಗಳಲ್ಲಿ ಈ ವಿವರಗಳನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದ್ದರು. ತಮ್ಮ ಆಸ್ತಿ ಮತ್ತು ಬ್ಯಾಂಕ್ ಬ್ಯಾಲೆನ್ಸ್‌ಗಳ ಸಂಪೂರ್ಣ ವಿವರಗಳನ್ನು ತಮ್ಮ ನಾಮಪತ್ರಗಳಲ್ಲಿ ಸ್ಪಷ್ಟವಾಗಿ ಬಹಿರಂಗಪಡಿಸಲಾಗಿಲ್ಲ ಎಂದು ಬಿಜೆಪಿ ಹೇಳಿತ್ತು. ಚುನಾವಣಾ ನಿಯಮಗಳ ಪ್ರಕಾರ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳು, ಅವರ ಆಸ್ತಿಗಳು ಮತ್ತು ಸಾಲಗಳ ವಿವರಗಳನ್ನು ತಮ್ಮ ಅಫಿಡವಿಟ್‌ಗಳಲ್ಲಿ ಸಂಪೂರ್ಣ ಪಾರದರ್ಶಕತೆಯೊಂದಿಗೆ ಬಹಿರಂಗಪಡಿಸಬೇಕು.

ಈ ಘಟನೆಯಿಂದಾಗಿ ರಾಜ್ಯಸಭಾ ಚುನಾವಣೆಗೆ ಮುನ್ನ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಖಭಂಗ ಉಂಟಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವು ಪರಿಶೀಲನಾ ಪ್ರಕ್ರಿಯೆಯ ವೇಳೆ ತಿರಸ್ಕೃತಗೊಂಡಿದ್ದು, ಈ ಮೂಲಕ ರಾಜ್ಯದ ಮೂರನೇ ರಾಜ್ಯಸಭಾ ಸ್ಥಾನಕ್ಕಾಗಿ ನಡೆಯಬೇಕಿದ್ದ ಸ್ಪರ್ಧೆಗೆ ತೆರೆ ಬಿದ್ದಿದೆ. ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರದೊಂದಿಗೆ, ಬಿಜೆಪಿಯ ಮಹೇಶ್ ಕೇವತ್ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ: ಕಾಂಗ್ರೆಸ್​​ನ 63 ಶಾಸಕರು ರೆಸಾರ್ಟ್​​ಗೆ

230 ಸದಸ್ಯರ ಮಧ್ಯಪ್ರದೇಶ ವಿಧಾನಸಭೆಯಲ್ಲಿ ತನ್ನ ಬಲದ ಆಧಾರದ ಮೇಲೆ ಎರಡು ರಾಜ್ಯಸಭಾ ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸ್ಥಿತಿಯಲ್ಲಿ ಬಿಜೆಪಿ ಇತ್ತು. ಮತ್ತೊಂದೆಡೆ ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆಯುವ ನಿರೀಕ್ಷೆಯಿತ್ತು. ಒಬ್ಬ ಅಭ್ಯರ್ಥಿ ಆಯ್ಕೆಯಾಗಲು 58 ಪ್ರಥಮ ಪ್ರಾಶಸ್ತ್ಯದ ಮತಗಳ ಅಗತ್ಯವಿರುತ್ತದೆ. 164 ಶಾಸಕರನ್ನು ಹೊಂದಿರುವ ಬಿಜೆಪಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಲು ಸಾಕಷ್ಟು ಸಂಖ್ಯಾಬಲವನ್ನು ಹೊಂದಿತ್ತು. ಇನ್ನೂ 48 ಹೆಚ್ಚುವರಿ ಮತಗಳನ್ನು ಕೈಯಲ್ಲಿ ಉಳಿಸಿಕೊಂಡಿತ್ತು. ಆದರೆ, ಮೂರನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪಕ್ಷಕ್ಕೆ ಕ್ರಾಸ್ ವೋಟಿಂಗ್ ಅಥವಾ ಇತರ ಶಾಸಕರ ಬೆಂಬಲದ ಅಗತ್ಯವಿತ್ತು. ಹೀಗಾಗಿ ಈ ಸ್ಪರ್ಧೆಯು ರಾಜಕೀಯವಾಗಿ ಮಹತ್ವದ್ದಾಗಿತ್ತು.

ವಿಧಾನಸಭೆಯಲ್ಲಿ ಕಾಂಗ್ರೆಸ್ 63 ಶಾಸಕರನ್ನು ಹೊಂದಿದೆ. ಆದರೆ ಇಬ್ಬರು ಶಾಸಕರಾದ ರಾಜೇಂದ್ರ ಭಾರ್ತಿ ಮತ್ತು ಮುಖೇಶ್ ಮಲ್ಹೋತ್ರಾ ಅವರು ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅನರ್ಹರಾಗಿದ್ದಾರೆ. ಇದು ಪಕ್ಷದ ಮತದಾನದ ಬಲವನ್ನು 61ಕ್ಕೆ ಇಳಿಸಿತ್ತು, ಇದರಿಂದಾಗಿ ಮೂರನೇ ಸ್ಥಾನದ ಸ್ಪರ್ಧೆಯು ಕಾಂಗ್ರೆಸ್‌ಗೆ ಮತ್ತಷ್ಟು ಸವಾಲಾಗಿ ಪರಿಣಮಿಸಿತ್ತು. ಆದರೆ ಇದೀಗ ಕಾಂಗ್ರೆಸ್​ ಅಭ್ಯರ್ಥಿಯ ನಾಮಪತ್ರವೇ ತಿರಸ್ಕೃತಗೊಂಡಿರುವುದರಿಂದ ಸ್ಪರ್ಧೆಯಿಲ್ಲದೆಯೇ ಬಿಜೆಪಿ ಆ ಸ್ಥಾನವನ್ನು ಕೂಡ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:37 pm, Tue, 9 June 26

Source link

ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ – Kannada News

ನವದೆಹಲಿ, ಜೂನ್ 9: ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆಪ್‌ಗಳು ಗ್ರಾಹಕರನ್ನು ಮರುಳು ಮಾಡಲು ಬಳಸುವ ಮೋಸದ ಜಾಲಗಳಿಗೆ (Dark Patterns) ಬಹಳಷ್ಟು ಭಾರತೀಯರು ಬಲಿಯಾಗುತ್ತಿದೆ ಎನ್ನುವ ಆತಂಕಕಾರಿ ವರದಿಯೊಂದು ಬಂದಿದೆ. ಡಾರ್ಕ್ ಪ್ಯಾಟರ್ನ್ ಮಾದರಿಯ ವಂಚನೆಗಳಿಂದಾಗಿ ಶೇ. 88ರಷ್ಟು ಆನ್​ಲೈನ್ ಗ್ರಾಹಕರು ಹಣ ಕಳೆದುಕೊಳ್ಳುತ್ತಿದ್ದಾರೆನ್ನಲಾಗಿದೆ. ಅಂದರೆ, ಭಾರತದ ಒಟ್ಟು 30.4 ಕೋಟಿ ಆನ್‌ಲೈನ್ ಗ್ರಾಹಕರಲ್ಲಿ 27 ಕೋಟಿಗೂ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಮೋಸದ ಜಾಲದಿಂದಾಗಿ ಭಾರತೀಯ ಗ್ರಾಹಕರು ವಾರ್ಷಿಕವಾಗಿ ಅಂದಾಜು 25,000 ದಿಂದ 28,000 ಕೋಟಿ ರೂಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಗ್ರಾಹಕರು ತಿಂಗಳಿಗೆ ಸರಾಸರಿ 78 ರಿಂದ 87 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಈ ರೀತಿಯ ಮೋಸದ ತಂತ್ರಗಳಿಂದಾಗಿ ಗ್ರಾಹಕರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದು ಒಟ್ಟಾರೆ ಆನ್‌ಲೈನ್ ಮಾರುಕಟ್ಟೆಯ ಸುಮಾರು 55,000 ಕೋಟಿ ರೂ ಮೌಲ್ಯದ ವ್ಯಾಪಾರವನ್ನು (GMV) ಅಪಾಯಕ್ಕೆ ದೂಡಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

‘ಡಾರ್ಕ್ ಪ್ಯಾಟರ್ನ್ಸ್’ ಹೇಗೆ ಕೆಲಸ ಮಾಡುತ್ತವೆ?

ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆಪ್‌ಗಳು ಗ್ರಾಹಕರನ್ನು ಮರುಳು ಮಾಡಲು ಬಳಸುವ ಮೋಸದ ಜಾಲಗಳಿಗೆ ಡಾರ್ಕ್ ಪ್ಯಾಟರ್ನ್ ಎನ್ನುವುದು. ಆನ್‌ಲೈನ್ ಆಪ್‌ಗಳು ಪ್ರಮುಖವಾಗಿ ಮೂರು ರೀತಿಯ ಕುತಂತ್ರಗಳನ್ನು ಬಳಸುತ್ತವೆ:

  • ಗುಪ್ತ ಶುಲ್ಕಗಳು (Hidden Charges/Drip Pricing): ಶೇ. 63 ರಷ್ಟು ಡಿಜಿಟಲ್ ಪಾವತಿ ಬಳಕೆದಾರರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂತಿಮವಾಗಿ ಪೇಮೆಂಟ್ ಮಾಡುವ ಹಂತದಲ್ಲಿ ಮಾತ್ರ ಹೆಚ್ಚುವರಿ ಶುಲ್ಕಗಳನ್ನು ಸೇರಿಸಲಾಗುತ್ತದೆ. ಇದು 2024 ರಲ್ಲಿ ಶೇ. 52 ರಷ್ಟಿತ್ತು.
  • ಬಲವಂತದ ಕ್ರಮಗಳು (Forced Actions): ಶೇ. 73 ರಷ್ಟು ಪ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ಇಷ್ಟವಿಲ್ಲದಿದ್ದರೂ ಕೆಲವು ಆಯ್ಕೆಗಳನ್ನು ಒಪ್ಪಿಕೊಳ್ಳುವಂತೆ ಬಲವಂತಪಡಿಸುತ್ತವೆ (ಉದಾಹರಣೆಗೆ: ಪ್ರೀ-ಸೆಲೆಕ್ಟೆಡ್ ಇನ್ಶೂರೆನ್ಸ್ ಅಥವಾ ಆಡ್-ಆನ್ ಸೇವೆಗಳು).
  • ಬೈಟ್ ಅಂಡ್ ಸ್ವಿಚ್ (Bait-and-Switch): ಶೇ. 50 ಕ್ಕಿಂತ ಹೆಚ್ಚು ಪ್ಲಾಟ್‌ಫಾರ್ಮ್‌ಗಳು ಜಾಹೀರಾತಿನಲ್ಲಿ ಒಂದು ಬೆಲೆ ಅಥವಾ ಆಫರ್ ತೋರಿಸಿ, ಅಂತಿಮವಾಗಿ ಬೇರೆ ಉತ್ಪನ್ನ ಅಥವಾ ಹೆಚ್ಚಿನ ಬೆಲೆಯನ್ನು ವಿಧಿಸುತ್ತವೆ.

ಅಮೆಜಾನ್ ಮೇಲೆ ಹೆಚ್ಚಿನ ನಂಬುಗೆ?

ಡಾಟಮ್ ಇಂಟೆಲಿಜೆನ್ಸ್​ನ ಈ ವರದಿ ಪ್ರಕಾರ, ಇ-ಕಾಮರ್ಸ್ ವಲಯದಲ್ಲಿ ಅಮೆಜಾನ್ (Amazon) ಸಂಸ್ಥೆಯು ಗ್ರಾಹಕರಲ್ಲಿ ಅತಿ ಹೆಚ್ಚು ನಂಬಿಕೆ (50%) ಗಳಿಸಿದೆ. ಆದರೆ ಫ್ಲಿಪ್‌ಕಾರ್ಟ್, ಮಿಂತ್ರಾ ಮತ್ತು ನೈಕಾ ಕಂಪನಿಗಳ ಮೇಲೆ ಗ್ರಾಹಕರು ಹೆಚ್ಚಿನ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್ ಟ್ರಾವೆಲ್ ಬುಕಿಂಗ್‌ನಲ್ಲಿ ‘ಮೇಕ್‌ಮೈಟ್ರಿಪ್’ (MakeMyTrip) ಸುರಕ್ಷಿತ ಎಂದು ಪರಿಣಾಮ ಬೀರಿದ್ದರೆ, ‘ಕ್ಲಿಯರ್‌ಟ್ರಿಪ್’ ಗ್ರಾಹಕರಿಗೆ ಹೆಚ್ಚು ಹಾನಿಕಾರಕವಾಗಿ ಕಂಡುಬಂದಿದೆ. ಕ್ವಿಕ್ ಕಾಮರ್ಸ್ (ತ್ವರಿತ ವಿತರಣೆ) ವಿಭಾಗದಲ್ಲಿ ‘ಬಿಗ್‌ಬಾಸ್ಕೆಟ್’ ಅತಿ ಹೆಚ್ಚು ಡಾರ್ಕ್ ಪ್ಯಾಟರ್ನ್ ತಂತ್ರಗಳನ್ನು ಬಳಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಹೊಸ DL, ವಾಹನ ನಿಯಮ: ಪರವಾನಗಿ ಅವಧಿ ವಿಸ್ತರಣೆ, ಆನ್​ಲೈನ್​ನಲ್ಲೇ ವಾಹನ ಮಾಲಕತ್ವ ವರ್ಗಾವಣೆ

ಜಾಗೃತಿಯಿದ್ದವರೂ ಮೋಸಕ್ಕೆ ಬಲಿ

ವರದಿಯಲ್ಲಿ ಒಂದು ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ — ಶೇ. 81 ರಷ್ಟು ಗ್ರಾಹಕರಿಗೆ ಈ ಚೀಟಿಂಗ್ ಪ್ಯಾಟರ್ನ್​ಗಳ ಬಗ್ಗೆ ಜಾಗೃತಿ ಇದ್ದರೂ, ಅವರಲ್ಲೇ ಶೇಕಡಾ 85 ರಷ್ಟು ಜನರು ಇವುಗಳಿಗೆ ಬಲಿಯಾಗುತ್ತಿದ್ದಾರೆ.

ಇದನ್ನು ತಡೆಯಲು ಮುಂದಿನ 36 ತಿಂಗಳುಗಳ ಕ್ರಿಯಾ ಯೋಜನೆಯನ್ನು ಈ ವರದಿ ಪ್ರಸ್ತಾಪಿಸಿದೆ. ಮೊದಲ ಹಂತವಾಗಿ, ಬುಕಿಂಗ್ ಅಥವಾ ಪಾವತಿ ಮಾಡುವಾಗ ಮೊದಲೇ ಟಿಕ್ ಆಗಿರುವ ಇನ್ಶೂರೆನ್ಸ್ ಆಪ್ಷನ್‌ಗಳನ್ನು ನಿಷೇಧಿಸುವುದು, ಸರ್ಚ್ ರಿಸಲ್ಟ್‌ನಲ್ಲೇ ಸಂಪೂರ್ಣ ಬೆಲೆಯನ್ನು ತೋರಿಸುವುದು ಮತ್ತು ದೂರುಗಳ ಶೀಘ್ರ ವಿಲೇವಾರಿಗೆ ಪ್ರತ್ಯೇಕ ಪೋರ್ಟಲ್ ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಳೆಯ ಟೂತ್‌ಬ್ರಷ್‌ ಎಸೆಯುವ ಬದಲು ಮನೆಯ ಈ ಎಲ್ಲಾ ಕೆಲಸಗಳನ್ನು ಮಾಡಲು ಉಪಯೋಗಿಸಿಕೊಳ್ಳಿ – Kannada News

ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ದೃಷ್ಟಿಯಿಂದ ನಾವೆಲ್ಲರೂ ಹಳೆಯದಾದ, ಮುರಿದ ವಸ್ತುಗಳನ್ನೆಲ್ಲಾ ಮನೆಯಿಂದ ಎಸೆದು ಬಿಡುತ್ತೇವೆ. ಆದರೆ ಏನು ಗೊತ್ತಾ, ಇದರಿಂದ ಉಪಯೋಗವೇ ಇಲ್ಲ ಎಂದು ಬಿಸಾಡುವ ವಸ್ತುಗಳನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳಬಹುದು. ಅಂತಹ ವಸ್ತುಗಳಲ್ಲಿ ಟೂತ್‌ಬ್ರಷ್‌ (toothbrush) ಕೂಡ ಒಂದು. ಸಾಮಾನ್ಯವಾಗಿ ಹಳೆಯ ಟೂತ್‌ಬ್ರಷ್‌ ಅನ್ನು ಎಸೆದು ಬಿಡುತ್ತೇವೆ. ಇದನ್ನು ಎಸೆಯುವ ಬದಲು ಅನೇಕ ಮನೆ ಕೆಲಸಗಳಿಗೆ ಉಪಯೋಗಿಸಬಹುದು, ಇದರ ಸಹಾಯದಿಂದ ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಹಾಗಿದ್ದರೆ ಹಳೆಯ ಟೂತ್‌ಬ್ರಷ್‌ ಸಹಾಯದಿಂದ ಯಾವೆಲ್ಲಾ ಮನೆ ಕೆಲಸಗಳನ್ನು ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.

ಹಳೆಯ ಟೂತ್‌ ಬ್ರಷ್‌ಗಳನ್ನು ಮನೆ ಕೆಲಸಕ್ಕೆ ಈ ರೀತಿಯಾಗಿ ಉಪಯೋಗಿಸಿ:

ಗ್ಯಾಸ್ ಬರ್ನರ್ ಸ್ವಚ್ಛಗೊಳಿಸಬಹುದು: ನಿಮ್ಮ ಗ್ಯಾಸ್ ಬರ್ನರ್‌ಗಳನ್ನು ಸ್ವಚ್ಛಗೊಳಿಸಲು ಹಳೆಯ ಟೂತ್ ಬ್ರಷ್ ಅನ್ನು ಬಳಸಬಹುದು. ಗ್ಯಾಸ್ ಬರ್ನರ್‌ನ ಸಣ್ಣ ರಂಧ್ರಗಳಲ್ಲಿ ಕೊಳಕು ಹೆಚ್ಚಾಗಿ ಸಂಗ್ರಹವಾಗುತ್ತದೆ, ಇದನ್ನು ಬ್ರಷ್‌ನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು.

ಆಭರಣಗಳ ಶುಚಿಗೊಳಿಸುವಿಕೆ: ಹಳೆಯ ಹಲ್ಲುಜ್ಜುವ ಬ್ರಷ್ ಎಸೆಯುವ ಬದಲು ಆಭರಣಗಳನ್ನು ಸ್ವಚ್ಛಗೊಳಿಸಲು ಅವುಗಳನ್ನು ಬಳಸಬಹುದು. ಬೆಳ್ಳಿಯ ಕಾಲ್ಗೆಜ್ಜೆಗಳು ಮತ್ತು ಚಿನ್ನದ ಕಿವಿಯೋಲೆಗಳನ್ನು ಟೂತ್‌ಬ್ರಷ್‌ ಸಹಾಯದಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಸ್ವಲ್ಪ ಸೋಪ್ ಅಥವಾ ಸೌಮ್ಯವಾದ ಕ್ಲೀನರ್ ಬಳಸಿ, ಬ್ರಷ್‌ನಿಂದ ನಿಧಾನವಾಗಿ ಉಜ್ಜುವುದರಿಂದ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕಬಹುದು, ಮಾಸಿ ಹೋದ ಆಭರಣದ ಹೊಳಪನ್ನು ಹೆಚ್ಚಿಸಬಹುದು.

ಶೂಗಳನ್ನು ಸ್ವಚ್ಛಗೊಳಿಸಬಹುದು: ಕೆಲವೊಮ್ಮೆ ಬೂಟುಗಳಲ್ಲಿ ಕಲೆಯಾಗುತ್ತವೆ. ಅದರಲ್ಲೂ ಬಿಳಿ ಶೂಗಳ ಬದಿಗಳಲ್ಲಿ ಕೊಳಕು ಹೆಚ್ಚಾಗಿ ಗೋಚರಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ನೀವು ಅವುಗಳನ್ನು ಸ್ವಚ್ಛಗೊಳಿಸಲು ಹಲ್ಲುಜ್ಜುವ ಬ್ರಷ್ ಅನ್ನು ಬಳಸಬಹುದು. ಸ್ವಲ್ಪ ಸೋಪ್‌ ಅಥವಾ ಲಿಕ್ವಿಡ್‌ ಹಾಕಿ ಬ್ರಷ್‌ನಿಂದ ಸ್ಕ್ರಬ್‌ ಮಾಡಿದರೆ ಶೂಗಳಲ್ಲಿ ಅಂಟಿರುವ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.

ಅಡುಗೆಮನೆಯನ್ನು ಸ್ವಚ್ಛಗೊಳಿಸಬಹುದು: ಅಡುಗೆಮನೆಯನ್ನು ಸ್ವಚ್ಛಗೊಳಿಸಲು ಹಳೆಯ ಟೂತ್ ಬ್ರಷ್ ಕೂಡ ತುಂಬಾ ಉಪಯುಕ್ತವಾಗಿದೆ.  ಸಿಂಕ್, ನಲ್ಲಿ, ನಲ್ಲಿಯ ಅಂಚುಗಳು ಅಥವಾ ಕೆಳಭಾಗವನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.  ಅಲ್ಲದೆ ನೀರಿನ ಬಾಟಲ್‌, ಎಣ್ಣೆ ಬಾಟಲ್‌, ಡಬ್ಬಗಳನ್ನು, ಬ್ಲೆಂಡರ್‌ಗಳು, ಕಾಫಿ ಮೇಕರ್‌ಗಳನ್ನು ಸ್ವಚ್ಛಗೊಳಿಸಲು ಕೂಡ ಟೂತ್‌ ಬ್ರಷ್‌ ಉಪಯೋಗಕ್ಕೆ ಬರುತ್ತದೆ.

ಇದನ್ನೂ ಓದಿ: ಸೊಳ್ಳೆಯ ಕಾಟದಿಂದ ಪಾರಾಗಲು ಮನೆಯಲ್ಲಿ ಗಿಡಗಳನ್ನು ನೆಡುವುದು ಉತ್ತಮ

ಅಲಂಕಾರಿಕ ವಸ್ತುಗಳನ್ನು ಸ್ವಚ್ಛಗೊಳಿಸಬಹುದು: ಸಣ್ಣ ಮರದ ಅಲಂಕಾರಿಕ ವಸ್ತುಗಳನ್ನು ಸ್ವಚ್ಛಗೊಳಿಸಲು ಹಳೆಯ ಟೂತ್ ಬ್ರಷ್ ಸಹ ತುಂಬಾ ಉಪಯುಕ್ತವಾಗಿದೆ. ಈ ವಸ್ತುಗಳು ಸಾಮಾನ್ಯವಾಗಿ ಸಂಕೀರ್ಣವಾದ ಕೆತ್ತನೆಗಳು ಮತ್ತು ಸಣ್ಣ ಚಡಿಗಳನ್ನು ಹೊಂದಿರುತ್ತವೆ, ಇಂತಹ ಪ್ರದೇಶದಲ್ಲಿ ಸಂಗ್ರಹವಾಗುವ ಧೂಳು, ಕೊಳೆಯನ್ನು ತೆಗೆಯುವುದು ಕಠಿಣ ಕೆಲಸ. ಹೀಗಿರುವಾಗ ಟೂತ್‌ಬ್ರಷ್‌ ಸಹಾಯದಿಂದ ಇವುಗಳನ್ನು ಸುಲಭವಾಗಿ ಕ್ಲೀನ್‌ ಮಾಡಬಹುದು.

ಟೈಲ್ಸ್‌ ಸ್ವಚ್ಛಗೊಳಿಸಲು ಸಹಕಾರಿ: ಟೈಲ್ಸ್‌ ನಡುವೆ ಅಂಟಿಕೊಂಡಿರುವ ಕಲೆಗಳು, ಪೈಪ್‌ಗಳ ಸುತ್ತಲಿನ ಕೊಳೆಯನ್ನು ತೆಗೆದುಹಾಕಲು ಅಥವಾ ಕೀಬೋರ್ಡ್‌ಗಳಿಂದ ಧೂಳನ್ನು ತೆಗೆದುಹಾಕಲು ಟೂತ್‌ಬ್ರಷ್‌ ತುಂಬಾ ಉಪಯುಕ್ತವಾಗಿವೆ. ಸ್ವಲ್ಪ ಸೋಪ್ ಅಥವಾ ಕ್ಲೀನರ್‌ನೊಂದಿಗೆ ಇದನ್ನು ಬಳಸುವುದರಿಂದ ಮೊಂಡುತನದ ಕೊಳೆಯನ್ನು ಸಹ ಸುಲಭವಾಗಿ ತೆಗೆದುಹಾಕಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಾವಿಯಲ್ಲಿ ವರುಣನ ಅಬ್ಬರಕ್ಕೆ ನೆಲಕ್ಕುರುಳಿದ 8 ಮನೆಗಳು, ಉಟ್ಟ ಬಟ್ಟೆ ಬಿಟ್ಟು ಎಲ್ಲಾ ನೀರುಪಾಲು

ಬೆಳಗಾವಿ, (ಜೂನ್ 09): ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರ ಜಪರಾಗಿದ್ದು, ಭಾರೀ ಅವಾಂತರ ಸೃಷ್ಟಿಸಿದೆ. ಬೆಳಗಾವಿಯಲ್ಲಂತೂ ವ್ಯಾಪರಸ್ಥರು ವರುಣಾರ್ಭಟಕ್ಕೆ ಹೈರಾಣಾಗಿ ಹೋಗಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಕಲ್ಮಠ ಎಂಬ ಓಣಿಯಲ್ಲಿ ಮಳೆರಾಯ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ವರುಣಾರ್ಭಟಕ್ಕೆ ಒಂದೇ ಕಡೆ ಬರೋಬ್ಬರಿ 8 ಮನೆಗಳು ಧರೆಗುರುಳಿದ್ದು, ಅದೃಷ್ಟವಶಾತ್ 8 ಮನೆಗಳಲ್ಲಿದ್ದ ಜನ ಪವಾಡ ರೀತಿ ಪಾರಾಗಿದ್ದಾರೆ. ಇಲ್ಲಿ ಬಾಡಿಗೆಗೆ ಇದ್ದ ಜನರೆಲ್ಲರೂ ಕೂಲಿಕಾರ್ಮಿಕರು. ಬಟ್ಟೆ, ದವಸ ಧಾನ್ಯ, ದಾಖಲೆಗಳು, ಹಣ ಎಲ್ಲವೂ ಈಗ ಮಣ್ಣುಪಾಲಾಗಿದೆ. ಉಟ್ಟ ಬಟ್ಟೆ ಬಿಟ್ಟು ಎಲ್ಲವನ್ನೂ ಕಳೆದಕೊಂಡ ಜನ ಬೀದಿಗೆ ಬಿದ್ದಿದ್ದು, ಟಿವಿ9 ಬಳಿ ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: Karnataka Weather Forecast: ರಾಜ್ಯದ ಎರಡು ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​; ಎಲ್ಲೆಲ್ಲಿ ವರುಣಾರ್ಭಟ?

Source link

ನಕಲಿ ಸಹಿ ಆರೋಪ; ಮಮತಾ ಬ್ಯಾನರ್ಜಿ ನಿವಾಸದ ಮೇಲೆ ಸಿಐಡಿ ದಾಳಿ – Kannada News

ಕೊಲ್ಕತ್ತಾ, ಜೂನ್ 9: ತೃಣಮೂಲ ಕಾಂಗ್ರೆಸ್ (TMC) ಶಾಸಕರ ‘ನಕಲಿ ಸಹಿ’ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಅಪರಾಧ ತನಿಖಾ ಇಲಾಖೆಯ (CID) ತಂಡವೊಂದು ಇಂದು ಟಿಎಂಸಿ ಪಕ್ಷದ ಕೇಂದ್ರ ಕಚೇರಿಗೆ ತಲುಪಿದೆ. ಈ ಕಚೇರಿಯು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಕಾಳೀಘಾಟ್ ನಿವಾಸವೂ ಆಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯ ತನಿಖಾ ಸಂಸ್ಥೆಯ ಅಧಿಕಾರಿಗಳು ಮಧ್ಯಾಹ್ನ 12 ಗಂಟೆ ಸುಮಾರಿಗೆ 30ಬಿ ಹರೀಶ್ ಚಟರ್ಜಿ ರಸ್ತೆಯ ನಿವಾಸಕ್ಕೆ ಆಗಮಿಸಿದ್ದಾರೆ. ಸಿಐಡಿ ತಂಡದೊಂದಿಗೆ ಕಾಳೀಘಾಟ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಮಹಿಳಾ ಪೊಲೀಸರ ದೊಡ್ಡ ಪಡೆಯೇ ಸ್ಥಳಕ್ಕೆ ಆಗಮಿಸಿತ್ತು. ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್ ಅವರಿಗೆ ವಿರೋಧ ಪಕ್ಷದ ನಾಯಕರನ್ನು ನೇಮಿಸುವಂತೆ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯಲ್ಲಿ ಹಲವು ಟಿಎಂಸಿ ಶಾಸಕರ ಸಹಿಗಳನ್ನು ನಕಲು ಮಾಡಲಾದ ಆರೋಪದ ತನಿಖೆಯ ಭಾಗವಾಗಿ ಸಿಐಡಿ ಈ ಕ್ರಮ ಕೈಗೊಂಡಿದೆ.

ಸ್ಥಳದಲ್ಲಿದ್ದ ಸಿಐಡಿ ಅಧಿಕಾರಿಗಳ ಪ್ರಕಾರ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಈ ಹಿಂದೆ ನೀಡಿದ ನೋಟಿಸ್‌ಗೆ ಸಲ್ಲಿಸಿದ ಉತ್ತರದ ಆಧಾರದ ಮೇಲೆ ಈ ಶೋಧ ಕಾರ್ಯವನ್ನು ಕೈಗೊಳ್ಳಲಾಗಿದೆ. “ಶಾಸಕರ ಸಹಿಗಳನ್ನು 30 ಬಿ ಹರೀಶ್ ಚಟರ್ಜಿ ರಸ್ತೆಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಂಗ್ರಹಿಸಲಾಗಿದೆ ಎಂದು ಅಭಿಷೇಕ್ ಬ್ಯಾನರ್ಜಿ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದರು. ಆ ಹೇಳಿಕೆಯ ಆಧಾರದ ಮೇಲೆ ನಾವು ತನಿಖೆಗೆ ಇಲ್ಲಿಗೆ ಬಂದಿದ್ದೇವೆ” ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಟಿಎಂಸಿ ಬಿಕ್ಕಟ್ಟಿನ ನಡುವೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ

ಆದರೆ, ತನಿಖಾ ತಂಡಕ್ಕೆ ಕಚೇರಿಯ ಆವರಣದೊಳಗೆ ಪ್ರವೇಶಿಸಲು ಅನುಮತಿ ನೀಡದ ಕಾರಣ ಕಚೇರಿ ನಿರ್ವಹಣಾ ಸಿಬ್ಬಂದಿ ಮತ್ತು ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಭಿಷೇಕ್ ಬ್ಯಾನರ್ಜಿ ಅವರ ಅನುಪಸ್ಥಿತಿಯಲ್ಲಿ ಶೋಧ ನಡೆಸುವುದಕ್ಕೆ ಟಿಎಂಸಿ ಆಕ್ಷೇಪ ವ್ಯಕ್ತಪಡಿಸಿತ್ತು.

ಹಿರಿಯ ಟಿಎಂಸಿ ಶಾಸಕ ಸೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಗುರುತಿಸುವಂತೆ ಕೋರಿ ಸ್ಪೀಕರ್‌ಗೆ ಕಳುಹಿಸಲಾದ ಪ್ರಸ್ತಾವನೆಯಲ್ಲಿ ಹಲವು ಶಾಸಕರ ಸಹಿಗಳನ್ನು ನಕಲು ಮಾಡಲಾಗಿದೆ ಎಂಬ ಆರೋಪದ ನಂತರ ಈ ವಿವಾದ ಭುಗಿಲೆದ್ದಿತ್ತು. ಈ ಆರೋಪಗಳು ಎಫ್‌ಐಆರ್ ದಾಖಲಾತಿ ಮತ್ತು ಸಿಐಡಿ ತನಿಖೆಗೆ ಕಾರಣವಾಗಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ: ಕಾಂಗ್ರೆಸ್​​ನ 63 ಶಾಸಕರು ರೆಸಾರ್ಟ್​​ಗೆ

ಬೆಂಗಳೂರು, ಜೂನ್​​ 09: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಭೀತಿ ಹಿನ್ನೆಲೆ, ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಭೋಪಾಲ್​ನಿಂದ ಕೆಂಪೇಗೌಡ ಏರ್​ಪೋರ್ಟ್​ಗೆ ಆಗಮಿಸಲಿರುವ ಶಾಸಕರು, ಕೆಐಎಬಿಯಿಂದ ವಂಡರ್​ ಲಾ ರೆಸಾರ್ಟ್​​ಗೆ ತೆರಳಲಿದ್ದಾರೆ. 63 ಶಾಸಕರು ಸೇರಿದಂತೆ 75 ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದು, ರೆಸಾರ್ಟ್​ನಲ್ಲಿ 54 ರೂಮ್ ಬುಕ್ಕಿಂಗ್ ಆಗಿವೆ. ಜೂನ್ 17ರ ರಾತ್ರಿ ಅಥವಾ 18ರ ಬೆಳಗ್ಗೆ 63 ಶಾಸಕರು ಇಲ್ಲಿಂದ ಹಿಂದಿರುಗಲಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Karnataka Weather Forecast: ರಾಜ್ಯದ ಎರಡು ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​; ಎಲ್ಲೆಲ್ಲಿ ವರುಣಾರ್ಭಟ? – Kannada News

ಬೆಂಗಳೂರು, ಜೂನ್​​ 09: ಕರ್ನಾಟಕದ ಹಲವು ಭಾಗಗಳಲ್ಲಿ, ವಿಶೇಷವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆಯಿದ್ದು, ಉತ್ತರ ಒಳನಾಡು ಭಾಗದ ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿಯೂ ಭಾರಿ ಗಾಳಿಯೊಂದಿಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
  • ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗಲ್ಲಿ ತೀವ್ರ ಮಳೆ
  • ಉತ್ತರ ಒಳನಾಡು ಭಾಗದ ಹಲವೆಡೆಯೂ ವರುಣಾರ್ಭಟ ಸಾಧ್ಯತೆ

ನಾಳೆ ಎರಡು ಜಿಲ್ಲೆಗಳಲ್ಲಿ ಆರೆಂಜ್​​ ಅಲರ್ಟ್​​

ಕರಾವಳಿ ಜಿಲ್ಲೆಗಳಲ್ಲಿ ನಾಳೆ ಉತ್ತಮ ಮಳೆಯ ನಿರೀಕ್ಷೆ ಹಿನ್ನೆಲೆ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್​​ 10 ಮತ್ತು 11ರಂದು ಹಾಗೆಯೇ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜೂನ್​​ 10 ಮತ್ತು ಉತ್ತರ ಒಳನಾಡು ಭಾಗದಲ್ಲಿ ಜೂನ್​​ 11ರ ವರೆಗೆ ಕೆಲವು ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ:  ಬೈಲಹೊಂಗಲದಲ್ಲಿ ವರುಣಾರ್ಭಟ; ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ

ಯಾವ್ಯಾವ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ?

ಬೀದರ್​​, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಗದಗ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು, ಕೊಡಗು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಾಳೆ ಮಳೆಯನ್ನು ಅಂದಾಜಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜೇನುಗೂಡಿಗೆ ಕಲ್ಲು ಎಸೆದ ಪರಿಣಾಮ ಹೆಜ್ಜೇನು ದಾಳಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊರಾರ್ಜಿ ಶಾಲೆಯ 21ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ – Kannada News

ಕಾರವಾರ, ಜೂ,9: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕರಗಿನಕೊಪ್ಪ ಗ್ರಾಮದಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Desai Residential School) ಕಟ್ಟಡದ ಮೇಲೆ ಗೂಡು ಕಟ್ಟಿದ್ದ ಹೆಜ್ಜೇನುಗಳು ಒಮ್ಮೆಲೆ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದು, ಪರಿಣಾಮವಾಗಿ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣವೇ ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾಹಿತಿಯ ಪ್ರಕಾರ, ಇಂದು ಮಧ್ಯಾಹ್ನ ಸುಮಾರು 3:30 ರ ವೇಳೆಗೆ ಈ ಘಟನೆ ನಡೆದಿದೆ. ವಸತಿ ಶಾಲಾ ಕಟ್ಟಡದ ಎರಡನೇ ಮಹಡಿಯ ಮೇಲ್ಭಾಗದಲ್ಲಿ ದೊಡ್ಡದಾದ ಹೆಜ್ಜೇನು ಗೂಡು ಇತ್ತು. ಶಾಲೆಯ ಓರ್ವ ಆಟವಾಡುವ ಭರದಲ್ಲಿ ಆ ಜೇನುಗೂಡಿಗೆ ಭಾರವಾದ ಕಲ್ಲು ಎಸೆದಿದ್ದಾನೆ ಎನ್ನಲಾಗಿದೆ. ತಕ್ಷಣ ಜೇನುನೊಣಗಳ ಹಿಂಡು ಒಮ್ಮೆಲೆ ಶಾಲಾ ಆವರಣದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಮುಗಿಬಿದ್ದಿವೆ. ಜೇನುನೊಣಗಳು ಹಿಂಡುಹಿಂಡಾಗಿ ಬಂದು ಕಚ್ಚಲು ಆರಂಭಿಸುತ್ತಿದ್ದಂತೆ ಗಾಬರಿಗೊಂಡ ವಿದ್ಯಾರ್ಥಿಗಳು ಕಿರುಚಾಡುತ್ತಾ ಓಡಿದ್ದಾರೆ. ಘಟನೆಯನ್ನು ಗಮನಿಸಿದ ಶಾಲೆಯ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣವೇ ಧಾವಿಸಿ ಬಂದು ಜೇನುನೊಣಗಳನ್ನು ಓಡಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಸದ್ಯ ಮುಂಡಗೋಡ ತಾಲೂಕು ಆಸ್ಪತ್ರೆಯ ವೈದ್ಯರ ತಂಡ ಮಕ್ಕಳಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link