ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗಳಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ತಂಡದಿಂದ ದೂರವಿದ್ದಾರೆ. ಈ ಗಾಯದಿಂದಾಗಿ ಹಾರ್ದಿಕ್, ಐರ್ಲೆಂಡ್, ಇಂಗ್ಲೆಂಡ್ ಹಾಗೂ ಜಿಂಬಾಬ್ವೆ ಪ್ರವಾಸದಿಂದಲೂ ಹೊರಗುಳಿಯಬೇಕಾಯಿತು. ಗಾಯದಿಂದ ಚೇತರಿಸಿಕೊಳ್ಳಲು ಬೆಂಗಳೂರಿನಲ್ಲಿ ನೆಲೆಸಿರುವ ಹಾರ್ದಿಕ್ ಶ್ರೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದು ಮತ್ತೆ ಮೈದಾನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ವರದಿ ಪ್ರಕಾರ, ಹಾರ್ದಿಕ್ ಆಗಸ್ಟ್ನಿಂದ ಆಯ್ಕೆಗೆ ಲಭ್ಯವಾಗಲಿದ್ದಾರೆ(PC-PTI).
2026 ರ ಐಪಿಎಲ್ನಿಂದಲೂ ಹಾರ್ದಿಕ್ ಪಾಂಡ್ಯ ಗಾಯಗಳಿಂದ ಬಳಲುತ್ತಿದ್ದಾರೆ. ಆರಂಭದಲ್ಲಿ, ಬೆನ್ನುನೋವಿನಿಂದಾಗಿ ಅವರು ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರು. ಆ ನಂತರ ಚೇತರಿಸಿಕೊಂಡು ತಂಡಕ್ಕೆ ಮರಳಿದ ಹಾರ್ದಿಕ್ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಸಮಯದಲ್ಲಿ ಅನಿರೀಕ್ಷಿತ ಕಾಲಿನ ಗಾಯಕ್ಕೆ ತುತ್ತಾದ ಕಾರಣದಿಂದಾಗಿ ಅವರು ತಂಡವನ್ನು ತೊರೆಯಬೇಕಾಯಿತು(PC-PTI).
ಸರಣಿ ಸಮಸ್ಯೆಗಳಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡ್ಯ, ಬೆಂಗಳೂರಿನಲ್ಲಿರುವ ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದರು. ಅಲ್ಲಿ ವೈದ್ಯಕೀಯ ತಜ್ಞರು ಮತ್ತು ಪಿಸಿಯೋ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಹಾರ್ದಿಕ್ ಎಲ್ಲಾ ಫಿಟ್ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಆಗಸ್ಟ್ನಿಂದ ಆಯ್ಕೆಗೆ ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ(PC-PTI).
ಹಾರ್ದಿಕ್ ಆಗಸ್ಟ್ನಲ್ಲಿ ಆಯ್ಕೆಗೆ ಲಭ್ಯವಿದ್ದರೂ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಅಥವಾ ಮುಂಬರುವ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಇದನ್ನು ಗಮನಿಸಿದರೆ, ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವರು ಆಡುವುದು ಖಚಿತವಾಗಿದೆ(PC-PTI).
ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3 ರವರೆಗೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದಾದ ನಂತರ ಅಕ್ಟೋಬರ್ 6 ರಿಂದ 17 ರವರೆಗೆ ಐದು ಪಂದ್ಯಗಳ ಟಿ20ಸರಣಿ ನಡೆಯಲಿದೆ. ಈ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತೆ ಭಾರತೀಯ ಜೆರ್ಸಿಯಲ್ಲಿ ಮೈದಾನಕ್ಕೆ ಇಳಿಯುವ ಸಾಧ್ಯತೆಯಿದೆ(PC-PTI).
ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ, ಹಾರ್ದಿಕ್ರಂತಹ ಅನುಭವಿ ಆಲ್ರೌಂಡರ್ನ ಸೇವೆ ಭಾರತಕ್ಕೆ ಬಹಳ ಮುಖ್ಯ. ಅವರು ತಂಡದಲ್ಲಿದ್ದರೆ, ಅವರು ಬ್ಯಾಟಿಂಗ್ ಲೈನ್ಅಪ್ಗೆ ಅಪಾರ ಬಲವನ್ನು ಸೇರಿಸುವುದಲ್ಲದೆ, ವೇಗದ ಬೌಲಿಂಗ್ಗೆ ಪರ್ಯಾಯವನ್ನೂ ಒದಗಿಸುತ್ತಾರೆ. ಅದಕ್ಕಾಗಿಯೇ ಭಾರತ ವಿಶ್ವಕಪ್ ಗೆಲ್ಲಬೇಕಾದರೆ ಹಾರ್ದಿಕ್ ಪೂರ್ಣ ಫಿಟ್ ಆಗಿರುವುದು ಅತ್ಯಗತ್ಯ(PC-PTI).
