ಬೆಂಗಳೂರು, ಜನವರಿ 11:ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುವ ಜೊತೆಗೆ ಮನೆಯಲ್ಲಿ ಎಲ್ಲರ ಮುಂದೆಯೇ ಬೆತ್ತಲೆಯಾಗಿ ಪತಿ ಓಡಾಡ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡೋದಲ್ಲದೆ, ಹಾಗೆಯೇ ಪ್ಯಾಸೇಜ್ಗೆ ಕೂಡ ಹೋಗಿ ಅಕ್ಕ ಪಕ್ಕದವರಿಗೂ ಮುಜುಗರ ಉಂಟುಮಾಡ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದ ಪ್ರಕರಣಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಆರೋಪಿ ಪತಿ ಮಂಜುನಾಥ್ ಹೆಂಡತಿ ವಿರುದ್ಧವೇ ಬಿಗ್ ಬಾಂಬ್ ಸಿಡಿಸಿದ್ದಾರೆ.
ತನ್ನ ಮೇಲೆ ಸೈಕೋ ವರ್ತನೆ ಮಾಡಿರುವ ಪತ್ನಿ ವಿರುದ್ಧವೇ ಪತಿ ಮಂಜುನಾಥ್ ಗಂಭೀರ ಆರೋಪ ಮಾಡಿದ್ದು, ಹಲವು ಮದುವೆಗಳು ಅವಳಿಗಾಗಿವೆ. ಈಗ ನಾಲ್ಕನೇ ಗಂಡ ಬೇಕಂತೆ. ಶೋಕಿಗೆ ಗಂಡಂದಿರ ಹಣ ಬಳಸಿಕೊಂಡು ಹೀಗೆ ಮಾಡ್ತಿದ್ದಾಳೆ ಎಂದು ದೂರಿದ್ದಾರೆ. ಎರಡನೇ ಗಂಡನ ಜೊತೆ ಜಾಲಿ ಟ್ರಿಪ್, ಶೋಕಿಗೆ ಗಂಡನ ಹಣ ಚಿನ್ನಾಭರಣ ಬಳಸಿಕೊಂಡಿದ್ದಳು. ಆ ಬಳಿಕ ಮೂರನೇಯವನಾಗಿ ನನಗೆ ಖೆಡ್ಡಾ ತೋಡಿದ್ದಳು. 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್ಗಳನ್ನು ತನ್ನಿಂದ ಪಡೆದಿರೋದಾಗಿ ದೂರುದಾರೆ ಮೇಘಶ್ರೀ ವಿರುದ್ಧವೇ ಮಂಜುನಾಥ್ ಆರೋಪಿಸಿದ್ದಾರೆ.
ಮೊದಲ ಹಾಗೂ ಎರಡನೇ ಗಂಡನ ವಿರುದ್ಧ ಮೇಘಶ್ರೀ ಈಗಾಗಲೇ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಆರೋಪಿಸಿರುವ ಮಂಜುನಾಥ್ ತನ್ನ ವಿರುದ್ಧ ಕಂಪ್ಲೇಂಟ್ ದಾಖಲಾಗುತ್ತಿದ್ದಂತೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಆರೋಪಿಸಿ ಆಕೆ ತನ್ನ ವಿರುದ್ಧ ದೂರು ನೀಡಿದ್ದಾಳೆ. ಆಕೆಗೆ 12 ಲಕ್ಷ ಹಣ ನೀಡಿ ಆಕೆಗೆ ಮನೆ ಲೀಸ್ಗೆ ಕೊಡಿಸಿದ್ದೆ. ಅವಳ ಅಸಲಿ ಮುಖವಾಡವನ್ನ ಪೊಲೀಸರ ಮುಂದೆ ಬಯಲು ಮಾಡ್ತೀನಿ ಎಂದು ಮಂಜುನಾಥ್ ಹೇಳಿದ್ದಾರೆ.
ಮದುವೆಗೆ ಅಂತಾ ದಾಖಲಾತಿ ಕೇಳಿದಾಗ ಆಕೆ ನೀಡಿಲ್ಲ. ಮನೆಯಲ್ಲಿ ಬಟ್ಟೆ ಬದಲಿಸುವಾಗ ಕದ್ದು ಫೋಟೋ ತೆಗೆದಿದ್ದಾಳೆ. ಆಕೆ ಕೆಲಸಕ್ಕೆ ಸೇರಿರೋದು ಕೂಡ ಫೇಕ್ ದಾಖಲೆಗಳನ್ನು ನೀಡಿ. ಅಲ್ಲದೆ ರೌಡಿಶೀಟರ್ ಓರ್ವನಿಂದ ತನಗೆ ಧಮ್ಕಿ ಕೂಡ ಹಾಕಿಸಿದ್ದಾಳೆ ಎಂದು ಆರೋಪಿಸಿ ಮಂಜುನಾಥ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಗಿಲ್ಲಿ ನಟ ಅವರು ಮೊದಲಿನಿಂದಲೂ ಆ್ಯಕ್ಟೀವ್ ಆಗಿದ್ದಾರೆ. ಕಾವ್ಯಾ ಶೈವ (Kavya Shaiva) ಜೊತೆ ಅವರಿಗೆ ಸ್ನೇಹ ಇದೆ. ಆದರೂ ಗಿಲ್ಲಿಯಿಂದ ಕಾವ್ಯಾಗೆ ಹಲವು ಬಾರಿ ಕಿರಿಕಿರಿ ಆಗಿದ್ದುಂಟು. ಇಷ್ಟು ದಿನಗಳ ಕೋಪವನ್ನು ಕಾವ್ಯಾ ಅವರು ಈಗ ತೀರಿಸಿಕೊಂಡಿದ್ದಾರೆ. ಗಿಲ್ಲಿಗೆ ಅವರು ಶಿಕ್ಷೆ ನೀಡಿದ್ದಾರೆ. ಕಾವ್ಯಾ ಮಾತ್ರವಲ್ಲದೇ ಮ್ಯೂಟೆಂಟ್ ರಘು ಕೂಡ ಹೀಗೆಯೇ ಮಾಡಿದ್ದಾರೆ. ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ ಅವರಿಗೂ ಗಿಲ್ಲಿಯೇ ಟಾರ್ಗೆಟ್ ಆಗಿದ್ದಾರೆ. ಅಂದಹಾಗೆ, ಇದೆಲ್ಲವೂ ನಡೆದಿರುವುದು ಭಾನುವಾರದ (ಜನವರಿ 11) ಸಂಚಿಕೆಯಲ್ಲಿ. ತುಂಬ ಫನ್ ಆಗಿರುವ ಈ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಬಾರಿ ಗಿಲ್ಲಿ ನಟ (Gilli Nata) ಅವರೇ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ವೀಕ್ಷಕರಿಗೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ.
ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: Social Media
ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿವೆ. ಕಣ್ಣು ಹಾಯಿಸಿದ್ದಲೆಲ್ಲಾ ಮೆದುಳಿಗೆ ವ್ಯಾಯಾಮ ನೀಡುವ ಒಗಟಿನ ಆಟಗಳೇ. ಇದು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುವುದಲ್ಲದೇ, ಒಗಟು ಬಿಡಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆಯೇ ಎಂದು ಪರೀಕ್ಷಿಸುತ್ತದೆ. ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲೊಡ್ಡುವ ಟ್ರಿಕ್ಕಿ ಒಗಟು ಇಲ್ಲಿದೆ. ಈ ಉದ್ಯಾನವನದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ನಾಯಿಯನ್ನು ಪತ್ತೆ ಹಚ್ಚಬೇಕು. ಈ ಕಠಿಣ ಒಗಟನ್ನು ಬಿಡಿಸಲು ಇರುವ ಕಾಲಾವಕಾಶ 15 ಸೆಕೆಂಡುಗಳು ಮಾತ್ರ ಎನ್ನುವುದು ನೆನಪಿರಲಿ.
ಈ ಚಿತ್ರ ಏನು ಹೇಳುತ್ತದೆ?
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳೇ ಹಾಗೆ, ನಮಗೆ ಕಾಣುವುದೇ ಒಂದು. ಅದರಲ್ಲಿ ಅಡಗಿರುವುದೇ ಇನ್ನೊಂದು ಆಗಿರುತ್ತದೆ. ಈ ಚಿತ್ರವನ್ನು ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಉದ್ಯಾನವನವೊಂದು ಕಾಣಿಸುತ್ತದೆ. ರೆಂಬೆ ಕೊಂಬೆಗಳನ್ನು ಚಾಚಿ ನಿಂತಿರುವ ಎರಡು ಮರವನ್ನು ಕಾಣಬಹುದು. ಈ ಮರದಲ್ಲಿ ಎಲೆಗಳು ಒಣಗಿ ಉದುರಿ ಹೋಗಿವೆ. ನೆಲದ ಮೇಲೆ ಬಿದ್ದಿರುವ ಒಣ ಎಲೆಗಳ ರಾಶಿಯನ್ನು ಕಾಣಬಹುದು. ಇದೆಲ್ಲದರ ನಡುವೆ ನಾಯಿಯೊಂದು ಅಡಗಿ ಕುಳಿತಿದೆ. ಈ ಶ್ವಾನವನ್ನು ಹುಡುಕುವುದೇ ನಿಮ್ಮ ಮುಂದಿರುವ ಸವಾಲು. ಕಣ್ಣು ಬಿಟ್ಟು ಚಿತ್ರ ನೋಡಿ ನಾಯಿಯನ್ನು ಪತ್ತೆ ಹಚ್ಚಿ.
ಟ್ರಿಕ್ಕಿ ಒಗಟುಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರಗಳನ್ನು ನೋಡಿದಾಗಲು ಹಾಗೆಯೇ ಅನಿಸುತ್ತದೆ. ಈ ಉದ್ಯಾನವನದಲ್ಲಿರುವ ಶ್ವಾನವನ್ನು ಹುಡುಕುವುದು ಸುಲಭವೆನಿಸಿದರೂ ಟ್ರಿಕ್ಕಿಯಾಗಿದೆ. ನೀವು ಈ ಒಗಟು ಬಿಡಿಸುವಲ್ಲಿ ಸೋತಿದ್ದೀರಾ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಉತ್ತರವನ್ನು ನಾವೇ ಹೇಳುತ್ತೇವೆ. ಈ ಕೆಳಗಿನ ಚಿತ್ರ ನೋಡಿ ಉದ್ಯಾನವನದಲ್ಲಿ ನಾಯಿ ಎಲ್ಲಿದೆ ಎಂದು ನಿಮಗೆ ತಿಳಿಯುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತ ಮತ್ತು ನ್ಯೂಝಿಲೆಂಡ್ (IND vs NZ) ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ (ಜ.11) ಶುರುವಾಗಲಿದೆ. ರಾಜ್ಕೋಟ್ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಗಾಯಗೊಂಡು ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ.
ಹೌದು, ಭಾರತ ಏಕದಿನ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದ ರಿಷಭ್ ಪಂತ್ ಗಾಯಗೊಂಡಿದ್ದಾರೆ. ವಡೋದರಾದಲ್ಲಿ ಶನಿವಾರ ನಡೆದ ಬ್ಯಾಟಿಂಗ್ ಅಭ್ಯಾಸದ ವೇಳೆ ಸೈಡ್ ಆರ್ಮ್ ತಜ್ಞರ ಎಸೆತದಿಂದ ಅವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಈ ಗಾಯದ ಕಾರಣ ರಿಷಭ್ ಪಂತ್ ಅರ್ಧದಲ್ಲೇ ಅಭ್ಯಾಸ ನಿಲ್ಲಿಸಿ ಮೈದಾನ ತೊರೆದಿದ್ದಾರೆ. ತೀವ್ರ ನೋವಿನಿಂದ ನರಳುತ್ತಿದ್ದ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ ಗಾಯವು ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇದೇ ಕಾರಣದಿಂದಾಗಿ ವೈದ್ಯರು ರಿಷಭ್ ಪಂತ್ಗೆ ವಿಶ್ರಾಂತಿ ಸೂಚಿಸಿದ್ದಾರೆ.
ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿಯಲು ರಿಷಭ್ ಪಂತ್ ನಿರ್ಧರಿಸಿದ್ದಾರೆ. ಅಲ್ಲದೆ ಭಾನುವಾರ ಅವರು ಭಾರತ ತಂಡವನ್ನು ತೊರೆಯಲಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ.
ಭಾರತ ಏಕದಿನ ತಂಡ : ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ಅಲಭ್ಯ)
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಅಲೋವೆರಾ ಗಿಡದ ಮಹತ್ವದ ಬಗ್ಗೆ ವಿವರಿಸಿದ್ದಾರೆ. ಅಲೋವೆರಾ ಒಂದು ವಿಶಿಷ್ಟವಾದ ಗಿಡವಾಗಿದ್ದು, ಇದನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಟ್ಟುಕೊಳ್ಳುವುದು ಶುಭಕರವೇ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ, ಅಲೋವೆರಾವನ್ನು ಸರಿಯಾದ ರೀತಿಯಲ್ಲಿ ಇರಿಸಿದಾಗ, ಅದು ವೃತ್ತಿ ಜೀವನ, ಆರ್ಥಿಕ ಸ್ಥಿತಿ ಮತ್ತು ಆರೋಗ್ಯ – ಈ ಮೂರು ಪ್ರಮುಖ ಅಂಶಗಳ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರುತ್ತದೆ.
ಈ ಗಿಡವನ್ನು ಸಾಮಾನ್ಯವಾಗಿ ಬಾಲ್ಕನಿಗಳಲ್ಲಿ, ಗಾಳಿ ಚೆನ್ನಾಗಿ ಬರುವ ಸ್ಥಳಗಳಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಸೂರ್ಯನ ಬೆಳಕು ಬೀಳುವ ಪ್ರದೇಶಗಳಲ್ಲಿ ಇಡುವುದು ಅತ್ಯಂತ ಶುಭಕರ ಎಂದು ಪರಿಗಣಿಸಲಾಗಿದೆ. ಈ ರೀತಿಯ ಸ್ಥಳಗಳಲ್ಲಿ ಇರಿಸಿದಾಗ, ಅಲೋವೆರಾ ಸಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಗಳನ್ನು ವಾತಾವರಣದಲ್ಲಿ ಹರಡುತ್ತದೆ. ಆದಾಗ್ಯೂ, ವಾಸ್ತು ನಿಯಮಗಳ ಪ್ರಕಾರ, ಅಲೋವೆರಾವನ್ನು ಯಾವುದೇ ಕಾರಣಕ್ಕೂ ವಾಯುವ್ಯ (Northwest) ಮತ್ತು ಆಗ್ನೇಯ (Southeast) ದಿಕ್ಕುಗಳಲ್ಲಿ ಇಡಬಾರದು.
ಅಲೋವೆರಾ ಗಿಡಕ್ಕೆ ಮತ್ತೊಂದು ವಿಶೇಷ ಗುಣವಿದೆ. ಅದು ಋಣಾತ್ಮಕ ಶಕ್ತಿಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಮಂಗಳಕರ ಮತ್ತು ಪವಿತ್ರ ಗಿಡವೆಂದು ಬಣ್ಣಿಸಲಾಗುತ್ತದೆ, ಇದು ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಸೌಖ್ಯವನ್ನು ತರುತ್ತದೆ. ಈ ಗಿಡಕ್ಕೆ ಹೆಚ್ಚು ಆರೈಕೆಯ ಅಗತ್ಯವಿಲ್ಲ; ಸ್ವಲ್ಪ ನೀರು ಹಾಕಿದರೆ ಸಾಕು, ಅದು ಉತ್ತಮವಾಗಿ ಬೆಳೆಯುತ್ತದೆ. ಅಲೋವೆರಾವನ್ನು ಪಶ್ಚಿಮ, ಪೂರ್ವ, ನೈರುತ್ಯ (Southwest) ಮತ್ತು ಈಶಾನ್ಯ (Northeast) ದಿಕ್ಕುಗಳಲ್ಲಿ ಇಡಬಹುದು. ಆದರೆ, ವಾಯುವ್ಯ ಮತ್ತು ಆಗ್ನೇಯ ದಿಕ್ಕುಗಳನ್ನು ಕಟ್ಟುನಿಟ್ಟಾಗಿ ತ್ಯಜಿಸಬೇಕು. ಗಿಡವನ್ನು ಸಾಧ್ಯವಾದಷ್ಟು ಸ್ವಲ್ಪ ಎತ್ತರದ ಪ್ರದೇಶದಲ್ಲಿ ಇಡುವುದು ಸಹ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ವಾಸ್ತು ನಂಬಿಕೆಗಳು ಹೇಳುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮುಂಬೈ, ಜನವರಿ 11: ಸಾಕು ನಾಯಿ(Dog) ಬೊಗಳಿದ್ದಕ್ಕೆ ಆರು ಮಂದಿ 15 ವರ್ಷದ ಬಾಲಕನಿಗೆ ಚಾಕು ಇರಿದ ಘಟನೆ ಮುಂಬೈನಲ್ಲಿ ನಡೆದಿದೆ. ಜನವರಿ 8ರಂದು ಈ ಘಟನೆ ನಡೆದಿದೆ. ಮಾತಿನಲ್ಲಿ ಆರಂಭವಾದ ಜಗಳ ಹಿಂಸಾತ್ಮಕ ರೂಪ ತಾಳಿತ್ತು. ಅಂತೋಪ್ ಹಿಲ್ ಪೊಲೀಸರು ನಿತಿನ್ ದಿಕ್ಕಾ, ತುಷಾರ್, ಸವಿತಾ, ಅಮನ್, ಕವಿತಾ ಮತ್ತು ಶರಣಜೀತ್ ಸೇರಿದಂತೆ ಇತರ ಹಲವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕಾಯ್ದೆ ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.
ದೂರುದಾರ ನರೇಶ್ ಉದಯಭನ್ ಬಿಡ್ಲಾನ್ (47), ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಲ್ಲಿ ನೈರ್ಮಲ್ಯ ಕೆಲಸಗಾರರಾಗಿದ್ದಾರೆ, ಅವರು ರಾತ್ರಿ 10.30 ರ ಸುಮಾರಿಗೆ ಆಂಟೋಪ್ ಹಿಲ್‌ನ ಪಂಜಾಬಿ ಕ್ಯಾಂಪ್‌ನ ರಾಜ್ ಹೈಟ್ಸ್ ಟವರ್‌ನಲ್ಲಿರುವ ತಮ್ಮ ನಿವಾಸಕ್ಕೆ ತಮ್ಮ ಪತ್ನಿ ವಂದನಾ ಮತ್ತು ಅಳಿಯ ಆರ್ಯನ್ ಕಗಾದ್ರಾ (15) ಅವರೊಂದಿಗೆ ತಮ್ಮ ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿ ಹಿಂತಿರುಗಿದ್ದರು.
ಲಿಫ್ಟ್‌ಗಾಗಿ ಕಾಯುತ್ತಿದ್ದಾಗ, ನಾಯಿ ಒಂದಷ್ಟು ಜನ ಲಿಫ್ಟ್‌ನಿಂದ ಹೊರಬರುತ್ತಿದ್ದಾಗ ಬೊಗಳಿತು, ಇದು ಮಾತಿನ ಚಕಮಕಿಗೆ ಕಾರಣವಾಯಿತು. ಘಟನೆಯ ನಂತರ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಬಿಡ್ಲಾನ್ ಆರೋಪಿಸಿದ್ದಾರೆ. ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವಾಗ, 25 ವರ್ಷದ ನಿತಿನ್ ಡಿಕ್ಕಾ ಸ್ಥಳಕ್ಕೆ ಆಗಮಿಸಿ ಬಿಡ್ಲಾನ್ ಮೇಲೆ ಮರದ ಕೋಲಿನಿಂದ ಹಲ್ಲೆ ನಡೆಸಿ, ಗುದ್ದಿದ್ದಾನೆ ಮತ್ತು ಒದ್ದಿದ್ದಾನೆ, ಇದರಿಂದ ತಲೆಗೆ ಗಂಭೀರ ಗಾಯಗಳಾಗಿವೆ.
ಒಂದಷ್ಟು ಜನ ಆರ್ಯನ್‌ನನ್ನು ಹೊಡೆಯುತ್ತಿದ್ದರೆ, ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಹುಡುಗನ ಬೆನ್ನಿಗೆ ಮತ್ತು ತೋಳಿಗೆ ಚಾಕುವಿನಿಂದ ಇರಿದಿದ್ದಾರೆ. ಈ ಗಲಾಟೆಯಲ್ಲಿ ಬಿಡ್ಲಾನ್ ಅವರ ಪತ್ನಿ ವಂದನಾ ಅವರ ಮೇಲೂ ಹಲ್ಲೆ ನಡೆಸಲಾಯಿತು.
ಈ ವೇಳೆ ಅವರ ಮಂಗಳಸೂತ್ರ ಹರಿದು ಹೋಗಿದೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಕುಟುಂಬ ಸದಸ್ಯರನ್ನು ಚಿಕಿತ್ಸೆಗಾಗಿ ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾನವ ಕಳ್ಳ ಸಾಗಾಣಿಕೆಯ ವಿರುದ್ಧದ ಜಾಗೃತಿ ದಿನImage Credit source: vecteezy
ಮಾನವ ಕಳ್ಳಸಾಗಾಣಿಕೆಯು (Human Trafficking) ಆಧುನಿಕ ಯುಗದಲ್ಲಿನ ಗುಲಾಮಗಿರಿಯ ಒಂದು ರೂಪವಾಗಿದ್ದು, ಪ್ರತಿ ವರ್ಷ ಪ್ರಪಂಚದಲ್ಲಿನ ಲಕ್ಷಾಂತರ ಅಮಾಯಕ ಜನರು ಈ ಮಾನವ ಕಳ್ಳಸಾಗಾಣಿಕೆಯ ಕೂಪಕ್ಕೆ ಬಲಿಯಾಗಿತ್ತಿದ್ದಾರೆ ಮತ್ತು ಗುಲಾಮಗಿರಿಯ ಸರಪಳಿಯಲ್ಲಿ ಬಂಧಿಯಾಗುತ್ತಿದ್ದಾರೆ. ಇದು ಬಹು ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಭಿಕ್ಷಾಟನೆ, ವೇಶ್ಯಾವಾಟಿಕೆ, ಲೈಂಗಿಕ ಚಟುವಟಿಕೆ, ಬಲವಂತದ ದುಡಿಮೆ, ಜೀತ, ಅಂಗಾಂಗ ಮಾರಾಟ ಮತ್ತು ಇತರ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಮಾನವ ಕಳ್ಳಸಾಗಾಣಿಕೆ ಕೃತ್ಯಗಳು ನಡೆಯುತ್ತಿವೆ. ಈ ಕ್ರಿಮಿನಲ್ ಕೃತ್ಯಗಳಿಗೆ ಮಕ್ಕಳು, ಅಪ್ರಾಪ್ತ ಹೆಣ್ಣು ಮಕ್ಕಳು, ಮಹಿಳೆಯರು. ಆರ್ಥಿಕವಾಗಿ ಹಿಂದುಳಿದವರು ಬಲಿಯಾಗುತ್ತಿದ್ದು, ಇವರುಗಳ ರಕ್ಷಣೆಗಾಗಿ ಹಾಗೂ ಸಮಾಜದಲ್ಲಿ ಮಾನವ ಕಳ್ಳಸಾಗಣಿಕೆ ಕೃತ್ಯವನ್ನು ತಡೆಗಟ್ಟಲು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜನವರಿ 11 ರಂದು ರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ವಿರುದ್ಧ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಮಾನವ ಕಳ್ಳಸಾಗಣಿಕೆ ವಿರುದ್ಧ ಜಾಗೃತಿ ದಿನದ ಇತಿಹಾಸವೇನು?
ಮಾನವ ಕಳ್ಳಸಾಗಾಣಿಕೆ ಬಹುದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಈ ಸಮಸ್ಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 2007 ರಲ್ಲಿ ಯುನೈಟೆಡ್ ಸ್ಟೇಟ್ಸ್ ಸೆನೆಟ್ ಜನವರಿ 11 ರಂದು ʼರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ವಿರುದ್ಧ ಜಾಗೃತಿ ದಿನʼವನ್ನು ಆಚರಿಸಲು ಘೋಷಿಸಿತು. ನಂತರ ಈ ಸಾಮಾಜಿಕ ಪಿಡುಗಿನ ಗಂಭೀರ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು 2010 ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸಂಪೂರ್ಣ ಜನವರಿ ತಿಂಗಳನ್ನು ಮಾನವ ಕಳ್ಳಸಾಗಾಣಿಕೆ ಕುರಿತು ಜಾಗೃತಿ ಮೂಡಿಸಲು ಮೀಸಲಿಟ್ಟರು. ಅಂದಿನಿಂದ ಅಮೆರಿಕ ಸೇರಿದಂತೆ ಪ್ರಪಂಚದ ಇತರೆ ರಾಷ್ಟ್ರಗಳಲ್ಲಿಯೂ ಪ್ರತಿವರ್ಷ ಜನವರಿ 11 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿಯೂ ಕೂಡ ಮಾನವ ಕಳ್ಳ ಸಾಗಾಣೆ ವಿರುದ್ಧ ಜಾಗೃತಿ ಮೂಡಿಸಲು ಕಾನೂನು ಅರಿವು ಕಾರ್ಯಕ್ರಮಗಳು, ಜಾಥಗಳು, ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತದೆ.
ರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ವಿರುದ್ಧ ಜಾಗೃತಿ ದಿನದ ಮಹತ್ವವೇನು?
ಮಾನವ ಕಳ್ಳಸಾಗಾಣಿಕೆಯು ಆಧುನಿಕ ಯುಗದಲ್ಲಿನ ಗುಲಾಮಗಿರಿಯ ಒಂದು ರೂಪವಾಗಿದ್ದು, ಈ ಗುಲಾಮಗಿರಿಯಿಂದ ಜಗತ್ತನ್ನು ಮುಕ್ತಗೊಳಿಸಲು ಈ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
ಈ ದಿನವು ಇಂತಹ ಸಮಸ್ಯೆಗಳನ್ನು ಬೆಳಕಿಗೆ ತರುವುದು, ಭದ್ರತೆಯನ್ನು ಸರಿಪಡಿಸುವುದು ಕಳ್ಳಸಾಗಣೆ ಕೃತ್ಯಗಳು ನಡೆಯದಂತೆ ನೋಡಿಕೊಳ್ಳುವುದು, ಶೋಷಣೆಗೆ ಒಳಗಾದವರಿಗೆ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿದೆ.
ಈ ದಿನದಂದು ಮಾನವ ಕಳ್ಳ ಸಾಗಾಣಿಕೆಯ ವಿರುದ್ಧ ಜಾಗೃತಿ ಮೂಡಿಸಲು ಕಾನೂನು ಅರಿವು ಕಾರ್ಯಕ್ರಮಗಳು, ಜಾಥಗಳು, ವಿಚಾರ ಸಂಕಿರಣಗಳನ್ನು ಸಹ ನಡೆಸಲಾಗುತ್ತದೆ.
ಚಿತ್ರದುರ್ಗ/ಕಲಬುರಗಿ, ಜನವರಿ 11: ಲಾರಿಗೆ ಇನ್ನೋವಾ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲೂಕಿನ ತಮಟಕಲ್ಲು ಗ್ರಾಮದ ಬಳಿ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರದ DySP ವೈಷ್ಣವಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ಅವರ ತಾಯಿ ಕಮಲ(65), ಕಾರು ಚಾಲಕ ರಾಕೇಶ್(40) ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ವೈಷ್ಣವಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಚಿತ್ರದುರ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ತಾಯಿ ಜೊತೆ ತಮಿಳುನಾಡಿಗೆ ಪ್ರವಾಸಕ್ಕೆ ಹೋಗಿದ್ದ DySP ವೈಷ್ಣವಿ ಹಿಂದಿರುಗಿ ಕೊಲ್ಹಾಪುರಕ್ಕೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರ ಬಲಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಬಳಿ ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರ ಬಲಿಯಾಗಿದ್ದಾನೆ. ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಮಧುಸೂದನ್(21) ಮೃತಪಟ್ಟಿದ್ದಾರೆ. ಮಧುಸೂದನ್ ಮಾಗಡಿ ತಾಲೂಕಿನ ವೀರಸಾಗರ ಗ್ರಾಮದ ನಿವಾಸಿಯಾಗಿದ್ದು, ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿರಾಳ ಹಿಸ್ಸಾ ಕ್ರಾಸ್ ಬಳಿ ಬೈಕ್‌ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಲಮೇಲ ಗ್ರಾಮದ ಯುವರಾಜ್ ಭಾಗಣ್ಣ (28) ಮೃತ ದುರ್ದೈವಿಯಾಗಿದ್ದು, ಶಹಾಪುರದಿಂದ ಸಿಂದಗಿ ಕಡೆ ಹೋಗ್ತಿದ್ದ ಕೆಕೆಆರ್‌ಟಿಸ್ ಬಸ್ ಡಿಕ್ಕಿಯಾದ ರಭಸಕ್ಕೆ ತಲೆಯಿಂದ ತೀವ್ರ ರಕ್ತಸ್ರಾವವಾದ ಕಾರಣ ಅವರು ಅಸುನೀಗಿದ್ದಾರೆ ಎನ್ನಲಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಜ.11: ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ. ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಮಾತೃಭಾಷೆಯನ್ನು ಕಡ್ಡಾಯವಾಗಿ ಹೇರುವುದು ಸರಿಯಲ್ಲ. ಮಾತೃಭಾಷೆ ಮಾತನಾಡುವವರಿಗೆ ಮಲಯಾಳಂ ಅನ್ನು ಮೊದಲ ಭಾಷೆಯಾಗಿ ಕಲಿಯುವಂತೆ ಒತ್ತಾಯಿಸುವುದು ಸರಿಯಲ್ಲ. ಒಂದು ವೇಳೆ ರಾಜ್ಯಪಾಲರು ಇಂತಹ ಮಸೂದೆಗೆ ಸಹಿ ಹಾಕಿ ಕಾನೂನಾಗಿಸಿದರೆ, ಕರ್ನಾಟಕ ಸರ್ಕಾರವು ಹೋರಾಟ ನಡೆಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳಿಗೂ ಮನವಿ ಸಲ್ಲಿಸುವ ಮೂಲಕ ಹೋರಾಟ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.