ಬೆಂಗಳೂರು ರೈಲು ಪ್ರಯಾಣಿಕರು ಗಮನಿಸಿ: KSR ಟರ್ಮಿನಲ್ ಬದಲಾವಣೆ, ಹೊಸ ನಿಲ್ದಾಣಗಳು ಇಲ್ಲಿವೆ
ಬೆಂಗಳೂರಿನಿಂದ ವಿವಿಧ ಊರುಗಳಿಗೆ ರೈಲಿನಲ್ಲಿ ಹೋಗುವ ಜನರು ಈ ಬದಲಾವಣೆಗಳನ್ನು ಗಮನಿಸಲೇಬೇಕು. ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಪಿಟ್ ಲೈನ್ ಪುನರ್ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ರೈಲುಗಳ ಟರ್ಮಿನಲ್ ನಿಲ್ದಾಣಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಜ.16ರಿಂದ ಮಾರ್ಚ್ 10ರವರೆಗೆ ಹೊರಡುವ ರೈಲು ಸಂಖ್ಯೆ 12678 ಎರ್ನಾಕುಲಂ ಜಂಕ್ಷನ್ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲುಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿಗೆ ಬದಲಾಗಿ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದವರೆಗೆ ಮಾತ್ರ ಹೋಗಲಿದೆ….