ತೆಲುಗು ಖಾಕಿ ಸಿನೆಮಾ ಸ್ಟೈಲ್ನಲ್ಲಿ ರಾಯಚೂರು ಪೊಲೀಸರ ಆಪರೇಷನ್: ನಕಲಿ ಡಿಸಿ ಫೇಸ್‌ಬುಕ್ ಖಾತೆ ಪ್ರಕರಣದಲ್ಲಿ ಸೈಬರ್ ವಂಚಕ ಅರೆಸ್ಟ್! – Kannada News | Raichur Cyber Police Arrest Notorious Fake Profile Fraudster in Rajasthan
ರಾಯಚೂರು, ಜನವರಿ 10: ತೆಲುಗು ಖಾಕಿ ಸಿನೆಮಾ ಶೈಲಿಯನ್ನು ನೆನಪಿಸುವಂತೆ ರಾಯಚೂರು ಸೈಬರ್ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕುಖ್ಯಾತ ಸೈಬರ್ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸತತ ಎರಡು ತಿಂಗಳ ಕಾಲ ರಾಜಸ್ಥಾನದಲ್ಲಿ ಗುಪ್ತ ಕಾರ್ಯಾಚರಣೆ ನಡೆಸಿದ ಪೊಲೀಸರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ರಾಜಸ್ಥಾನ ಮೂಲದ ಆರೋಪಿ ಅಂದರ್ ಬಂಧಿತನನ್ನು ಶಕೀಲ್ (19) ಎಂದು ಗುರುತಿಸಲಾಗಿದ್ದು, ಆತ ರಾಜಸ್ಥಾನದ ಆಳ್ವಾರ್ ಜಿಲ್ಲೆಯ…