Category Archives: Blog

Your blog category

ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ

ಬೆಂಗಳೂರು, ಜನವರಿ 09: ಮಹಿಳೆಯರು ವಾಸಿಸಲು ಬೆಂಗಳೂರು ಸುರಕ್ಷಿತ ನಗರ ಎಂದು ವರದಿಯೊಂದು ಬಹಿರಂಗವಾಗಿದೆ. ಈ ಬಗ್ಗೆ ಬೆಂಗಳೂರಿನ ಕೆಲ ಮಹಿಳಾ ಮಣಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ತುಂಬಾ ಸುರಕ್ಷಿತ ನಗರ ಅನ್ನಿಸುತ್ತದೆ. ಏಕೆಂದರೆ ಬೆಂಗಳೂರು ಮಹಿಳಾ ಪೋಲಿಸರು ನಮಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತಾರೆ, ಹಾಗಾಗಿ ನಾವು ಸೇಫ್ ಆಗಿದ್ದೇವೆ. ಮಹಿಳೆಯರಿಗಾಗಿ ಸುರಕ್ಷಾ ಆ್ಯಪ್ ಕೂಡ ಇದೆ. ಬೇರೆ ರಾಜ್ಯದಿಂದ ಬಂದಿರುವ ನಮ್ಮ ಸ್ನೇಹಿತೆಯರು ಬೆಂಗಳೂರು ತುಂಬಾ ಸುರಕ್ಷಿತ ನಗರ ಅಂತ ಹೇಳುತ್ತಾರೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

Nava Panchama Raj Yoga 2026: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ – Kannada News | Nava Panchama Raj Yoga 2026 to take place during June 2026; Check effects on few zodiac sisgns

ವೈದಿಕ ಜ್ಯೋತಿಷ್ಯದಲ್ಲಿ ಏಳು ಗ್ರಹಗಳ ಉಲ್ಲೇಖ ಇದೆ- ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ ಮತ್ತು ಶನಿಯದು. ಯುರೇನಸ್, ನೆಪ್ಚೂನ್ ಇವುಗಳನ್ನು ಗಣನೆಗೆ ತೆಗೆದುಕೊಂಡು ಫಲ ಹೇಳುವ ಪದ್ಧತಿ ಇಲ್ಲ. ಪ್ರತಿ ರಾಶಿಯಲ್ಲಿ 7 ವರ್ಷ ಇರುವಂಥ ಗ್ರಹ ಇದು. ಈ ವರ್ಷ ಅಂದರೆ 2026ರಲ್ಲಿ ಜೂನ್ ಒಂದನೇ ತಾರೀಕಿನ ನಂತರ ಮುಖ್ಯವಾದ ನವ-ಪಂಚಮ ಯೋಗ (Nava Panchama Raj Yoga )ಸೃಷ್ಟಿ ಆಗುತ್ತದೆ. ಈ ಹಿಂದೆ 2025ರಲ್ಲಿ ಅಕ್ಟೋಬರ್ ಹದಿನೆಂಟರಿಂದ ಡಿಸೆಂಬರ್ ಐದನೇ ತಾರೀಕಿನವರೆಗೆ ಈ ಯೋಗವಿತ್ತು.

ನವಪಂಚಮ ಯೋಗ ಎಂದರೇನು:

ಪ್ರಮುಖವಾದ ಗ್ರಹಗಳು ಪರಸ್ಪರ ಒಂಬತ್ತು ಹಾಗೂ ಐದನೇ ಮನೆಯಲ್ಲಿ ಇರುವುದು ನವಪಂಚಮ ಯೋಗ. ಈಗ ಮೀನ ರಾಶಿಯಲ್ಲಿ ಶನೈಶ್ಚರ ಇದ್ದಾನೆ. 2026ರಲ್ಲಿ ಜೂನ್ 2ರಿಂದ ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರ ಆಗುತ್ತದೆ. ಮೀನ ರಾಶಿಯಲ್ಲಿರುವ ಶನಿಗೆ ಕರ್ಕಾಟಕ ರಾಶಿಯು ಐದನೇ ಮನೆ (ಪಂಚಮ). ಅಲ್ಲಿ ಗುರು ಗ್ರಹ ಇರುತ್ತದೆ. ಕರ್ಕಾಟಕ ರಾಶಿಯಿಂದ ಮೀನ ರಾಶಿ ಒಂಬತ್ತನೇ ಮನೆ (ನವಮ) ಆಗಿ, ಅಲ್ಲಿ ಶನಿ ಇರುತ್ತದೆ. ಇದನ್ನು ನವಪಂಚಮ ಯೋಗ ಎನ್ನಲಾಗುತ್ತದೆ.

ಕರ್ಕಾಟಕ ರಾಶಿಯಲ್ಲಿ ಜೂನ್ ಗೆ ಉಚ್ಚ ಸ್ಥಿತಿಯಲ್ಲಿ ಬರುವಂಥ ಗುರು, ತಾನು ಇರುವ ಸ್ಥಾನದಿಂದ ಒಂಬತ್ತನೇ ಮನೆ- ಅಂದರೆ ತನ್ನದೇ ಸ್ವಕ್ಷೇತ್ರವಾದ ಮೀನ ರಾಶಿಯನ್ನು, ಆ ಮನೆಯಲ್ಲಿ ಇರುವ ಶನಿಯ ವೀಕ್ಷಣೆ ಮಾಡುತ್ತಾನೆ. ಇದು ಬಹಳ ವಿಶೇಷ. ದಶಾ-ಭುಕ್ತಿಯ ಪ್ರಭಾವವೂ ಉತ್ತಮವಾಗಿದ್ದಲ್ಲಿ ವ್ಯಕ್ತಿಗೆ ಈ ಯೋಗದ ಸಂಪೂರ್ಣ ಫಲ ದೊರೆಯಲಿದೆ.

ಇದನ್ನೂ ಓದಿ: ಈ ಮೂರು ಸಂಖ್ಯೆಯಲ್ಲಿ ಹುಟ್ಟಿದವರು ಜನವರಿಯಲ್ಲಿ ಅತ್ಯಂತ ಜಾಗರೂಕರಾಗಿರಿ!

ನವಪಂಚಮ ಯೋಗದ ಪ್ರಭಾವ:

ಮೇಷ ರಾಶಿ: ಈ ಯೋಗವು ಆರ್ಥಿಕ ಲಾಭವನ್ನು ತರುತ್ತದೆ. ದೀರ್ಘಕಾಲದ ಹೂಡಿಕೆಗಳಿಂದ ಉತ್ತಮ ಆದಾಯ ಬರಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ.

ಮಿಥುನ ರಾಶಿ: ವ್ಯಾಪಾರ ಮತ್ತು ವ್ಯವಹಾರದಲ್ಲಿರುವವರಿಗೆ ಈ ಸಮಯ ಲಾಭದಾಯಕ. ಹೊಸ ಯೋಜನೆಗಳನ್ನು ಆರಂಭಿಸಲು ಸುಸಮಯ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ: ಗುರುವು ಕರ್ಕಾಟಕ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿ ಬರುವುದರಿಂದ, ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ.

ತುಲಾ ರಾಶಿ: ವೃತ್ತಿಜೀವನದಲ್ಲಿ ಎದುರಿಸುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಹೊಸ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಅವಕಾಶಗಳು ಕೈಬರಲಿವೆ. ಆರ್ಥಿಕವಾಗಿ ಸಬಲರಾಗುತ್ತೀರಿ.

ವೃಶ್ಚಿಕ ರಾಶಿ: ಭಾಗ್ಯ ಸ್ಥಾನದಲ್ಲಿ ಗುರುವಿನ ಪ್ರಭಾವದಿಂದಾಗಿ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ವಿದೇಶ ಪ್ರಯಾಣದ ಯೋಗವೂ ಇದೆ.

ಮೀನ ರಾಶಿ: ಆತ್ಮವಿಶ್ವಾಸ ಹೆಚ್ಚಾಗಲಿದೆ. ಜೀವನದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತೀರಿ. ಶನಿ ಮತ್ತು ಗುರುವಿನ ಅನುಗ್ರಹದಿಂದ ಆರ್ಥಿಕ ಬಿಕ್ಕಟ್ಟುಗಳು ದೂರವಾಗಲಿವೆ.

ನವಪಂಚಮದ ಕೆಲವು ಉದಾಹರಣೆ

ಮೀನದಲ್ಲಿ ಶನಿ- ವೃಶ್ಚಿಕದಲ್ಲಿ ಕುಜ

ಕರ್ಕಾಟಕದಲ್ಲಿ ಗುರು- ವೃಶ್ಚಿಕದಲ್ಲಿ ಕುಜ

ಮೀನದಲ್ಲಿ ಶನಿ- ಕರ್ಕಾಟಕದಲ್ಲಿ ಗುರು

ಮಕರದಲ್ಲಿ ಶನಿ- ವೃಷಭದಲ್ಲಿ ಶುಕ್ರ

ಮೇಷದಲ್ಲಿ ಚಂದ್ರ- ಧನುಸ್ಸು ಗುರು

ಮೀನದಲ್ಲಿ ಗುರು- ಕರ್ಕಾಟಕದಲ್ಲಿ ಚಂದ್ರ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ: ದೂರು ದಾಖಲು, Y ಭದ್ರತೆ ಆಗ್ರಹ – Kannada News | KS Eshwarappa receives Life threat call from abroad, Case Book

ಶಿವಮೊಗ್ಗ, (ಜನವರಿ 09) : ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಮತ್ತೊಮ್ಮೆ ಬೆದರಿಕೆ ಕರೆ ಬಂದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನಿಖಿಲ್ ಅವರನ್ನು ಭೇಟಿ ಮಾಡಿ ಅಧಿಕೃತ ದೂರು ಸಲ್ಲಿಸಿದ್ದಾರೆ. ಜ.7ರಂದು ವಿದೇಶದಿಂದ ಈಶ್ವರಪ್ಪ ಅವರಿಗೆ ಬೆದರಿಕೆ ಕರೆ ಬಂದಿದ್ದು, ಇದರಿಂದ ಅವರ ಭದ್ರತೆ ಕುರಿತಾಗಿ ಮತ್ತೆ ಆತಂಕ ಉಂಟಾಗಿದೆ. ಈ ಹಿಂದೆ ಕೂಡ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರಿಗೆ ಪೊಲೀಸ್ ಭದ್ರತೆ ಹಾಗೂ ಎಸ್ಕಾರ್ಟ್ ವ್ಯವಸ್ಥೆ ಒದಗಿಸಲಾಗಿತ್ತು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರ ಎಸ್ಕಾರ್ಟ್ ಹಾಗೂ ಪೊಲೀಸ್ ಭದ್ರತೆಯನ್ನು ಹಿಂಪಡೆದಿತ್ತು . ಇದೀಗ ಮತ್ತೆ ತಮಗೆ Y ಸೆಕ್ಯೂರಿಟಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆಯ ಜೀವ ಉಳಿಸಿದ ಡೆಲಿವರಿ ಬಾಯ್! – Kannada News | Tamil Nadu woman orders rat poison at late night Blinkit delivery agent refuses to deliver and Saved Life

ಚೆನ್ನೈ, ಜನವರಿ 9: ಕೆಲವೊಮ್ಮೆ ನಮ್ಮ ಬದುಕಿನಲ್ಲಿ ಒಬ್ಬೊಬ್ಬರು ನಾನಾ ರೀತಿಯಲ್ಲಿ ಹೀರೋಗಳಾಗಿ ಪ್ರವೇಶ ಮಾಡುತ್ತಾರೆ. ಹೀರೋ ಎಂದರೆ ಹೀಗೇ ಇರಬೇಕು ಎಂಬುದು ಸಿನಿಮಾಗೆ ಮಾತ್ರ ಸೀಮಿತ. ನಿಜ ಜೀವನದ ಹೀರೋಗಳು ಯಾವ ರೂಪದಲ್ಲಿ ಬೇಕಾದರೂ ಇರಬಹುದು. ತಮಿಳುನಾಡಿನ ಮಹಿಳೆಯೊಬ್ಬರ ಪಾಲಿಗೆ ಬ್ಲಿಂಕಿಟ್ ಡೆಲಿವರಿ ಬಾಯ್ ಹೀರೋ ರೂಪದಲ್ಲಿ ಬಂದು ಕಾಪಾಡಿದ್ದಾರೆ. ಆಕೆ ತಡರಾತ್ರಿ ಬ್ಲಿಂಕಿಟ್​​ನಲ್ಲಿ 3 ಇಲಿ ಪಾಷಾಣದ ಪ್ಯಾಕೆಟ್ ಆರ್ಡರ್ ಮಾಡಿದ್ದರು. ಇದನ್ನು ನೋಡಿದಾಗ ಆ ಡೆಲಿವರಿ ಬಾಯ್​​ಗೆ ವಿಚಿತ್ರವೆನಿಸಿತ್ತು. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಈ ಪಾಷಾಣ ಆರ್ಡರ್ ಮಾಡಿರಬಹುದಾ? ಎಂಬ ಅನುಮಾನ ಅವರನ್ನು ಕಾಡಿತ್ತು. ಹೀಗಾಗಿ, ಅವರು ಆ ಪಾಷಾಣವನ್ನು ಆಕೆಗೆ ಡೆಲಿವರಿ ನೀಡಲಿಲ್ಲ. ಅವರು ತೆಗೆದುಕೊಂಡ ಆ ಒಂದು ನಿರ್ಧಾರದಿಂದಾಗಿ ಆ ಮಹಿಳೆಯ ಪ್ರಾಣ ಉಳಿಯಿತು!

ಆ ಡೆಲಿವರಿ ಬಾಯ್ ತನಗೇ ಅರಿವಿಲ್ಲದಂತೆ ಒಂದು ದುರಂತವನ್ನು ತಪ್ಪಿಸಿದ್ದಾರೆ. ತಡರಾತ್ರಿಯಲ್ಲಿ ಯಾರೂ 3 ಪ್ಯಾಕೆಟ್ ಇಲಿ ಪಾಷಾಣ ಆರ್ಡರ್ ಮಾಡುತ್ತಾರೆ ಎಂಬ ಅನುಮಾನ ಬಂದಿದ್ದರಿಂದಾಗಿಯೇ ಆಕೆಯ ಪ್ರಾಣ ಉಳಿದಿದೆ. ಆ ಪಾಷಾಣವನ್ನು ಡೆಲಿವರಿ ನೀಡಲು ಆಕೆಯ ಮನೆಗೆ ಹೋದಾಗ ಅಲ್ಲಿನ ಪರಿಸ್ಥಿತಿ ನೋಡಿ ಡೆಲಿವರಿ ಬಾಯ್​​ಗೆ ಏನೋ ಸರಿಯಿಲ್ಲ ಎನಿಸಿತ್ತು. ಹೀಗಾಗಿ, ಪಾಷಾಣವನ್ನು ನೀಡದೆ ವಾಪಾಸ್ ಬಂದಿದ್ದರು.

ಇದನ್ನೂ ಓದಿ: ಪ್ರೇಯಸಿಯನ್ನು ಮದುವೆಯಾಗಲು ಅಪಘಾತದ ನಾಟಕವಾಡಿದ ಯುವಕನ ಪ್ಲಾನ್ ಉಲ್ಟಾ ಆಗಿದ್ದು ಹೇಗೆ?

ಕೊನೆಗೆ ಅವರು ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. “ಒಟ್ಟು 3 ಇಲಿ ಪಾಯ್ಸನ್ ಪ್ಯಾಕೆಟ್ ಆರ್ಡರ್ ಮಾಡಿದ್ದರು. ಅವರು ಅದನ್ನು ಆರ್ಡರ್ ಮಾಡಿದಾಗ ಅವರು ಏನು ಯೋಚಿಸುತ್ತಿದ್ದರು ಎಂದು ನನಗೆ ತಿಳಿದಿರಲಿಲ್ಲ. ಆದರೆ ಅವರು ತುಂಬಾ ಅಳುತ್ತಿರುವುದನ್ನು ನೋಡಿ ಅವರಿಗೆ ಏನೋ ಸಮಸ್ಯೆ ಆಗಿದೆ ಎಂದು ನನಗೆ ಅನಿಸಿತು. ಅದೇ ಕಾರಣಕ್ಕೆ ನಾನು ಆ ಆರ್ಡರ್​ ಅನ್ನು ಅವರಿಗೆ ನೀಡಲಿಲ್ಲ. ನಾನು ಆ ಮಹಿಳೆಯ ಬಳಿ ನಿಮಗೇನೇ ಸಮಸ್ಯೆಯಿದ್ದರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಹೇಳಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದಂಪತಿ ಸರಸದಲ್ಲಿದ್ದಾಗ ಮಾಸ್ಟರ್​​ ಕೀ ಬಳಸಿ ರೂಂಗೆ ಬಂದ ಸಿಬ್ಬಂದಿ; ಲೀಲಾ ಪ್ಯಾಲೇಸ್​​​ ಹೋಟೆಲ್​ಗೆ 10 ಲಕ್ಷ ರೂ. ದಂಡ!

ಡೆಲಿವರಿ ನೀಡಲು ಹೋದಾಗ ‘ನೀವು ಆತ್ಮಹತ್ಯೆ ಮಾಡಿಕೊಳ್ಳಲು ಇದನ್ನು ಆರ್ಡರ್ ಮಾಡಿದ್ದೀರಾ?’ ಎಂದು ಕೇಳಿದೆ. ಅವರು ‘ಇಲ್ಲ, ಬ್ರದರ್ ಹಾಗಲ್ಲ’ ಎಂದು ತಡವರಿಸಿದರು. ಅದಕ್ಕೆ ನಾನು ‘ಇಲ್ಲ, ಸುಳ್ಳು ಹೇಳಬೇಡಿ. ನೀವು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೀರಿ ಅಲ್ಲವೇ? ನಿಮಗೆ ನಿಜಕ್ಕೂ ಮನೆಯಲ್ಲಿ ಇಲಿಯ ಸಮಸ್ಯೆ ಇದ್ದರೆ ನೀವು ಅದನ್ನು ಸಂಜೆಯೇ ಆರ್ಡರ್ ಮಾಡಬಹುದಿತ್ತು. ನಾಳೆ ಬೆಳಗ್ಗೆಯೂ ಮಾಡಬಹುದಿತ್ತು. ಇಷ್ಟು ರಾತ್ರಿ ವೇಳೆ ಯಾಕೆ ಆರ್ಡರ್ ಮಾಡಿದಿರಿ?’ ಎಂದು ಕೇಳಿದೆ. ಕೊನೆಗೆ ನಾನು ಅವರ ಮನವೊಲಿಸಿ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿಸಿದೆ. ಆಕೆಯ ಜೀವ ಉಳಿಸಿದ ತೃಪ್ತಿ ನನಗಿದೆ” ಎಂದು ಆ ಡೆಲಿವರಿ ಬಾಯ್ ಹೇಳಿದ್ದಾರೆ. ಅವರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Null Stern Hotel: ಈ ಹೋಟೆಲ್​​​ಗೆ ಗೋಡೆ ಇಲ್ಲ, ಛಾವಣಿಯೂ ಇಲ್ಲ, ಎಲ್ಲ ಓಪನ್​; ಆದ್ರೂ ಕೂಡ ಪ್ರೇಮಿಗಳ ನೆಚ್ಚಿನ ತಾಣವಿದು – Kannada News | Null Stern Hotel Switzerland: Experience a Wall Free Open Air Mountain Escape

ಗೋಡೆಗಳೂ ಇಲ್ಲ, ಛಾವಣಿಯೂ ಇಲ್ಲದ ಹೋಟೆಲ್ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ಎಂಬ ಪ್ರಶ್ನೆಯೇ ಅಚ್ಚರಿ ಮೂಡಿಸುವಂತದ್ದು. ಹೆಸರಿಗಷ್ಟೇ ಇದೊಂದು ಹೋಟೆಲ್ ರೂಮ್ ಆಗಿದ್ದರೂ, ಇಲ್ಲಿ ಸಾಮಾನ್ಯ ಹೋಟೆಲ್‌ಗಳಲ್ಲಿ ಕಾಣುವ ಗೋಡೆಗಳು, ಬಾಗಿಲುಗಳು ಅಥವಾ ಛಾವಣಿಯೇ ಇಲ್ಲ. ವಿಶಾಲವಾದ ಬೆಟ್ಟದ ತಪ್ಪಲಿನಲ್ಲಿ ಪ್ರಕೃತಿಯ ಮಧ್ಯೆ ಒಂದೇ ಒಂದು ಹಾಸಿಗೆಯನ್ನು ಇಟ್ಟು ನಿರ್ಮಿಸಲಾದ ಈ ತಾಣವು ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲೊಂದು ಎಂಬ ಖ್ಯಾತಿ ಗಳಿಸಿದೆ. ಪ್ರತೀ ವರ್ಷ ಅನೇಕ ಪ್ರವಾಸಿಗರು ತಮ್ಮ ಸಂಗಾತಿಯೊಂದಿಗೆ ಏಕಾಂತವನ್ನು ಅನುಭವಿಸಲು ಈ ವಿಶಿಷ್ಟ ಹೋಟೆಲ್‌ಗೆ ಭೇಟಿ ನೀಡುತ್ತಾರೆ.

ಈ ರೀತಿಯ ಅಸಾಮಾನ್ಯ ಹೋಟೆಲ್ ವಿಶ್ವದ ಅತ್ಯಂತ ಸುಂದರ ದೇಶಗಳಲ್ಲಿ ಒಂದಾದ ಸ್ವಿಟ್ಜರ್ಲೆಂಡ್‌ನಲ್ಲಿದೆ. ಇದಕ್ಕೆ ‘ನಲ್ ಸ್ಟರ್ನ್’ ಎಂಬ ಹೆಸರಿದ್ದು, ಈ ಪದ ಜರ್ಮನ್ ಭಾಷೆಯಿಂದ ಬಂದಿದ್ದು “ಶೂನ್ಯ ನಕ್ಷತ್ರ” ಎಂಬ ಅರ್ಥವನ್ನು ಹೊಂದಿದೆ. ಸ್ವಿಟ್ಜರ್‌ಲ್ಯಾಂಡ್‌ನ ಗೋಬ್ಸಿ ಎಂಬ ಪರ್ವತ ಶಿಖರದ ಮೇಲೆ ಹಸಿರು ಬೆಟ್ಟಗಳ ಮಧ್ಯೆ ಈ ಹೋಟೆಲ್ ಅನ್ನು ನಿರ್ಮಿಸಲಾಗಿದ್ದು, ಇಲ್ಲಿ ಒಂದು ಹಾಸಿಗೆಯ ಹೊರತು ಬೇರೆ ಯಾವುದೇ ಕಟ್ಟಡದ ರಚನೆ ಇಲ್ಲ. ಪ್ರಕೃತಿಯ ಮಡಿಲಲ್ಲಿ ನಕ್ಷತ್ರಗಳನ್ನು ಎಣಿಸುತ್ತಾ, ಮೌನದ ಸೌಂದರ್ಯವನ್ನು ಅನುಭವಿಸುತ್ತಾ, ಜೋಡಿಗಳು ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆಯಲು ಸಾಧ್ಯವಾಗುವಂತೆ ಈ ಕಲ್ಪನೆಯನ್ನು ರೂಪಿಸಲಾಗಿದೆ.

ಸಮುದ್ರ ಮಟ್ಟಕ್ಕಿಂತ ಸುಮಾರು 6,463 ಅಡಿ ಎತ್ತರದಲ್ಲಿರುವ ಈ ಸ್ಥಳದಲ್ಲಿ ಸುಂದರವಾದ ಕ್ವೀನ್ ಸೈಸ್ ಬೆಡ್ ಅನ್ನು ಅಳವಡಿಸಲಾಗಿದೆ. ಬಿಳಿ ಬಣ್ಣದ ಮೃದುವಾದ ಬೆಡ್‌ಶೀಟ್‌ಗಳಿಂದ ಹಾಸಿಗೆಯನ್ನು ಸಜ್ಜುಗೊಳಿಸಲಾಗಿದ್ದು, ಸುತ್ತಲೂ ಲ್ಯಾಂಪ್ ಸೆಟ್‌ಗಳಿಂದ ಅಲಂಕಾರ ಮಾಡಲಾಗಿದೆ. ರಾತ್ರಿ ಸಮಯದಲ್ಲಿ ಈ ಬೆಳಕುಗಳು ಪ್ರಕೃತಿಯೊಂದಿಗೆ ಬೆರೆತು ವಿಶೇಷವಾದ ರೋಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸುತ್ತವೆ. ಇದೇ ಕಾರಣಕ್ಕೆ ಈ ತಾಣವನ್ನು ಪ್ರಪಂಚದ ಅತ್ಯಂತ ರೋಮ್ಯಾಂಟಿಕ್ ಪ್ರವಾಸಿ ಸ್ಥಳಗಳ ಪೈಕಿ ಒಂದೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ

ಗೋಡೆಗಳೂ ಇಲ್ಲದ, ಛಾವಣಿಯೂ ಇಲ್ಲದ ಈ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು ಸುಮಾರು 337 ಅಮೆರಿಕನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 29,300 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ವೆಚ್ಚದಲ್ಲಿ ಒಂದು ರಾತ್ರಿಯ ವಾಸ್ತವ್ಯಕ್ಕೆ ಅಗತ್ಯವಿರುವ ಆಹಾರ ಹಾಗೂ ಇತರ ಸೌಲಭ್ಯಗಳೂ ಒಳಗೊಂಡಿರುತ್ತವೆ. ಈ ಅನನ್ಯ ಹೋಟೆಲ್ ಅನ್ನು ಸ್ವಿಟ್ಜರ್‌ಲ್ಯಾಂಡ್‌ನ ಇಬ್ಬರು ಕಲಾವಿದರಾದ ಫ್ರಾಂಕ್ ಮತ್ತು ರಿಕ್ಲಿನ್ ವಿನ್ಯಾಸಗೊಳಿಸಿದ್ದು, ಅವರ ವಿಭಿನ್ನ ಹಾಗೂ ಧೈರ್ಯಶಾಲಿ ಕಲ್ಪನೆ ಇಂದು ವಿಶ್ವದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಿನದಿಂದ ದಿನಕ್ಕೆ ಇದರ ಜನಪ್ರಿಯತೆ ಹೆಚ್ಚುತ್ತಿದ್ದು, ಪ್ರಕೃತಿಯೊಂದಿಗೆ ಒಂದಾಗುವ ಅಪರೂಪದ ಅನುಭವವನ್ನು ಹುಡುಕುವವರಿಗೆ ಇದು ಕನಸಿನ ತಾಣವಾಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:44 pm, Fri, 9 January 26

Source link

ಐಪಿಎಸ್ ಅಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ: ಫೇಕ್​​ ಅಕೌಂಟ್​​ನಿಂದ ಹಣಕ್ಕೆ ಡಿಮ್ಯಾಂಡ್​ – Kannada News | Online Fraud Alert: Fake Account Demands Money in IPS Officer Hakke’s Name

ಐಪಿಎಸ್ ಅಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ

ಬೆಂಗಳೂರು, ಜನವರಿ 09: ಇತ್ತೀಚೆಗೆ ಆನ್​​ಲೈನ್​​ ವಂಚನೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಜನ ಸಾಮಾನ್ಯರು ಮಾತ್ರವಲ್ಲದೆ ಗಣ್ಯರು, ಅಧಿಕಾರಿಗಳ ಸಾಮಾಜಿಕ ಜಾಲತಾಣಗಳ ಅಕೌಂಟ್​​ ಮತ್ತು ವಾಟ್ಯಾಪ್​​ಗಳನ್ನೂ ಹ್ಯಾಕ್​​ ಮಾಡಿ ಹಣ ಪೀಕುವವರ ಸಂಖ್ಯೆ ಹೆಚ್ಚುತ್ತಿದೆ. ಇವುಗಳ ನಡುವೆ ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ ಹೆಸರಿನಲ್ಲಿಯೇ ವಂಚನೆಗೆ ಯತ್ನ ನಡೆಸಿರೋದು ಬೆಳಕಿಗೆ ಬಂದಿದೆ.

ವಾಟ್ಸಾಪ್​ನಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿರುವ ಅಕ್ಷಯ್ ಅವರ ಫೋಟೋ, ಹೆಸರು ಬಳಸಿಕೊಂಡು ವಂಚಕರು ಹಣ ಕೇಳುತ್ತಿದ್ದು, ಬೇರೆ ನಂಬರ್​ನಿಂದ ಅಕೌಂಟ್ ರಚಿಸಿರೋದು ಗೊತ್ತಾಗಿದೆ. ಹಣ ನೀಡುವಂತೆ IPS ಅಧಿಕಾರಿ ಸ್ನೇಹಿತರಿಗೆ ಮೆಸೇಜ್ ಮಾಡಿದ್ದು, ವಿಷಯವನ್ನು ಸ್ನೇಹಿತರು ಡಿಸಿಪಿ ಅಕ್ಷಯ್ ಗಮನಕ್ಕೆ ತಂದಿದ್ದಾರೆ. ಈಗಾಗಲೇ 3-4 ಸ್ನೇಹಿತರಿಗೆ ವಂಚಕರು ಮೆಸೇಜ್ ಕಳುಹಿಸಿದ್ದು, ವಂಚಕರ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಅಕ್ಷಯ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ವ್ಯವಹಾರದ ವೇಳೆ ವಂಚನೆಯಿಂದ ತಪ್ಪಿಸಿಕೊಳ್ಳುವ ಕ್ರಮಗಳಿವು

ವಂಚಕರ ಮೆಸೇಜ್​​ನಲ್ಲಿ ಏನಿದೆ?

ತುರ್ತಾಗಿ ಒಂದು ಪ್ರಾಸ್ಪೆಕ್ಟ್‌ ಖಾತೆಗೆ ಹಣ ಜಮಾ ಮಾಡಬೇಕಿದ್ದು, ನನ್ನ ಆನ್‌ಲೈನ್ ಬ್ಯಾಂಕ್ ವರ್ಗಾವಣೆಯಲ್ಲಿ ಸಮಸ್ಯೆ ಎದುರಾಗಿದೆ. ಅಲ್ಲದೆ ಪ್ರಸ್ತುತ ನಾನು ಒಂದು ಸಭೆಯಲ್ಲಿ ಭಾಗವಹಿಸಬೇಕಿರುವ ಕಾರಣ ನೀವು ಹಣ ವರ್ಗಾಯಿಸಲು ಸಾಧ್ಯವೇ? ಹಾಗಿದ್ದರೆ ನಾನು ಮುಂದಿನ ವಿವರಗಳನ್ನು ನೀಡುತ್ತೇನೆ. ನೀವು ನೀಡಿದ ಹಣವನ್ನು ದಿನದ ಅಂತ್ಯದೊಳಗೆ ನಾನು ನಿಮಗೆ ಮರುಪಾವತಿಸುತ್ತೇನೆ ಎಂಬ ಸಂದೇಶವನ್ನು ವಂಚಕರು ಕಳುಹಿಸಿದ್ದಾರೆ. ವಂಚನೆ ಯತ್ನ ವಿಷಯವನ್ನು ಸ್ವತಃ ಅಧಿಕಾರಿಯೇ ಹಂಚಿಕೊಂಡಿದ್ದು, ವಾಟ್ಸ್ಯಾಪ್​​ನ ನಕಲಿ ಖಾತೆಯಿಂದ ಕೆಲ ನನ್ನ ಪರಿಚಿತರಿಗೆ ಹಣ ಕೇಳಿ ಸಂದೇಶ ಬಂದಿದೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಭಾಸ್ ಫ್ಯಾನ್ಸ್ ಹುಚ್ಚಾಟ; ‘ದಿ ರಾಜಾ ಸಾಬ್’ ನೋಡಲು ಚಿತ್ರಮಂದಿರಕ್ಕೆ ಮೊಸಳೆ ತಂದ ಅಭಿಮಾನಿ – Kannada News | Prabhas fans bring crocodile to theatre to enjoy The Raja Saab movie scene

ಬಹುನಿರೀಕ್ಷಿತ ‘ದಿ ರಾಜಾ ಸಾಬ್’ (The Raja Saab) ಸಿನಿಮಾ ಬಿಡುಗಡೆ ಆಗಿದೆ. ಪ್ರಭಾಸ್ ಅಭಿಮಾನಿಗಳು ಈ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಇದು ಹಾರರ್ ಸಿನಿಮಾ. ಪ್ರಭಾಸ್ (Prabhas) ಅವರು ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡಿರುವುದರಿಂದ ಹೈಪ್ ಹೆಚ್ಚಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕೆಲವರು ಅತಿರೇಕವಾಗಿ ವರ್ತಿಸಿದ್ದಾರೆ. ಕೆಲವು ಅಭಿಮಾನಿಗಳು ಚಿತ್ರಮಂದಿರಕ್ಕೆ ಮೊಸಳೆ ತಂದಿದ್ದಾರೆ! ಮೊಸಳೆ (Crocodile) ಎಂದರೆ ನಿಜವಾದ ಮೊಸಳೆ ಅಲ್ಲ. ಬದಲಿಗೆ ಮೊಸಳೆಯ ಪ್ರತಿಕೃತಿಯನ್ನು ತರಲಾಗಿದೆ.

‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಪ್ರಭಾಸ್ ಅವರು ಮೊಸಳೆಯ ಜೊತೆ ಫೈಟ್ ಮಾಡುವ ದೃಶ್ಯ ಇದೆ. ಅದನ್ನು ಚಿತ್ರಮಂದಿರದಲ್ಲಿ ಜನರು ಎಂಜಾಯ್ ಮಾಡುತ್ತಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ಟ್ರೇಲರ್​​ನಲ್ಲಿ ಕೂಡ ಮೊಸಳೆ ಫೈಟ್ ಹೈಲೈಟ್ ಆಗಿತ್ತು. ಆ ದೃಶ್ಯವನ್ನು ಚಿತ್ರಮಂದಿರದಲ್ಲಿ ಮರುಸೃಷ್ಟಿ ಮಾಡಲು ಅಭಿಮಾನಿಗಳು ನಕಲಿ ಮೊಸಳೆಯನ್ನು ಹೊತ್ತುಕೊಂಡು ಚಿತ್ರಮಂದಿರಕ್ಕೆ ಬಂದಿದ್ದಾರೆ.

ಚಿತ್ರಮಂದಿರದಲ್ಲಿ ಪ್ರಭಾಸ್ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ಮೊಸಳೆಯನ್ನು ಹೊತ್ತುಕೊಂಡು ಪ್ರಭಾಸ್ ಅವರಿಗೆ ಜೈಕಾರ ಹಾಕಲಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಪ್ರಭಾಸ್ ಬಗ್ಗೆ ಅಭಿಮಾನಿಗಳಿಗೆ ಇರುವ ಕ್ರೇಜ್ ಎಂಥದ್ದು ಎಂಬುದಕ್ಕೆ ಇದೇ ಸಾಕ್ಷಿ. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ವೈರಲ್ ಆಗಬೇಕು ಎಂಬ ಉದ್ದೇಶದಿಂದಲೇ ಈ ರೀತಿ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ.

ನೂರಾರು ಕೋಟಿ ರೂಪಾಯಿ ಬಜೆಟ್​​ನಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ನಿರ್ಮಾಣ ಆಗಿದೆ. ಸಂಕ್ರಾಂತಿ ಪ್ರಯುಕ್ತ ಇಂದು (ಜನವರಿ 9) ಈ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ತೆರೆಕಂಡಿದೆ. ಅತ್ತ, ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ಸಿಗದೇ ಬಿಡುಗಡೆ ರದ್ದಾಗಿದೆ. ಅದರಿಂದಾಗಿ ‘ದಿ ರಾಜಾ ಸಾಬ್’ ಸಿನಿಮಾಗೆ ಪೈಪೋಟಿ ಕಡಿಮೆ ಆಗಿದೆ.

ಇದನ್ನೂ ಓದಿ: ‘ದಿ ರಾಜಾ ಸಾಬ್’ ಪ್ರೀಮಿಯರ್ ಶೋ: ಚಿತ್ರಮಂದಿರದಲ್ಲಿ ಪ್ರಭಾಸ್ ಫ್ಯಾನ್ಸ್ ಗಲಾಟೆ

ಮಾರುತಿ ಅವರು ‘ದಿ ರಾಜಾ ಸಾಬ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಜೊತೆ ಸಂಜಯ್ ದತ್, ಬೋಮನ್ ಇರಾನಿ, ನಿಧಿ ಅಗರ್​ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ದಿನ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಆದರೆ ಮೊದಲ ದಿನ ಸಿನಿಮಾ ನೋಡಿದವರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಸ್ತೆ ಅಪಘಾತ ತಡೆಯಲು ಹೊಸ ತಂತ್ರಜ್ಞಾನ ಪರಿಚಯಿಸಿದ ಕೇಂದ್ರ: 2026ಕ್ಕೆ ಎಲ್ಲ ವಾಹನಗಳಿಗೆ ಅಳವಡಿಕೆ – Kannada News | India V2V Tech: Gadkari’s 2026 Vision for Safer Roads

ಭಾರತದಾದ್ಯಂತ ಅಪಘಾತಗಳನ್ನು ತಪ್ಪಿಸಲು ಹೊಸ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ವಾಹನದಿಂದ ವಾಹನಕ್ಕೆ (V2V) ಸಂವಹನ ವ್ಯವಸ್ಥೆಗಳನ್ನು (V2V Tech Revolution) ಪರಿಚಯಿಸುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೂತನ ಕ್ರಮವನ್ನು ತಂದಿದೆ. ಈ ಯೋಜನೆ 2026 ರ ವೇಳೆಗೆ ಇದನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. V2V ತಂತ್ರಜ್ಞಾನವು ರಸ್ತೆಗಳಲ್ಲಿ ವಾಹನಗಳ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಸಂವಹನವು ಮೊಬೈಲ್ ನೆಟ್‌ವರ್ಕ್‌ಗಳು ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ, ಬದಲಾಗಿ, ವಾಹನಗಳು ಸ್ಥಳೀಯವಾಗಿ ಅಲ್ಪ-ಶ್ರೇಣಿಯ ವೈರ್‌ಲೆಸ್ ಸಿಗ್ನಲ್‌ಗಳನ್ನು ಬಳಸಿಕೊಂಡು ಸಂವಹನ ನಡೆಸುತ್ತವೆ. ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಸಹ ಈ ವ್ಯವಸ್ಥೆಯು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಭಿವೃದ್ಧಿಪಡಿಸುತ್ತಿರುವ ಚೌಕಟ್ಟಿನ ಅಡಿಯಲ್ಲಿ, ವಾಹನಗಳಿಗೆ ಮೀಸಲಾದ ಹಾರ್ಡ್‌ವೇರ್ ಮಾಡ್ಯೂಲ್ ಅಳವಡಿಸಲಾಗುವುದು. ಇದು ಹತ್ತಿರದ ಸಂಚಾರದೊಂದಿಗೆ ಅಲ್ಪ-ಶ್ರೇಣಿಯ ಸಂವಹನ ನಡೆಸುತ್ತದೆ. ಇದು ವಾಹನಗಳು ವ್ಯಾಪ್ತಿಯಲ್ಲಿರುವವರೆಗೆ ನೈಜವಾಗಿ ಕಾರ್ಯನಿರ್ವಹಿಸುತ್ತದೆ. ಇದರ ವಿನಿಮಯವಾಗುವ ಡೇಟಾ ಸೀಮಿತವಾಗಿರುತ್ತದೆ. ಇದು ಮುಂದೆ ಇರುವ ಅಪಾಯಕಾರಿ ಪರಿಸ್ಥಿತಿಯನ್ನು ಗುರುತಿಸುತ್ತದೆ. ಉದಾಹರಣೆಗೆ, ಮುಂದಿರುವ ವಾಹನವು ವೇಗವಾಗಿ ಬರುತ್ತಿದ್ದರೆ, ಅದನ್ನು ನಿಧಾನವಾಗಿಸುವಂತೆ ಸೂಚಿಸುತ್ತದೆ. ಒಂದು ವೇಳೆ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದರೆ ಅದನ್ನು ತಡೆಯುವುದಿಲ್ಲ. ಆದರೆ ಮೊದಲೇ ಈ ಬಗ್ಗೆ ಸೂಚನೆಯನ್ನು ನೀಡುತ್ತದೆ.

ಸಚಿವಾಲಯದ ದೃಷ್ಟಿಕೋನದ ಪ್ರಕಾರ, V2Vಯು ವಾಹನಗಳಿಗೆ ಮುಖ್ಯವಾಗಿರುತ್ತದೆ. ಹಲವು ಅಪಾಯಗಳನ್ನು ತಡೆಯುತ್ತದೆ. ಬ್ರೇಕ್​​ ಫೇಲ್, ವೇಗವಾಗಿ ಬರುವುದು, ಇತರ ಅಪಾಯಕಾರಿ ವಿಚಾರಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ. ಈ ವ್ಯವಸ್ಥೆಗೆ ತಾಂತ್ರಿಕ ಮಾನದಂಡಗಳು ಮತ್ತು ಸಂವಹನ ಪ್ರೋಟೋಕಾಲ್‌ಗಳನ್ನು ಅಂತಿಮಗೊಳಿಸುವ ಉದ್ದೇಶದಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ವಾಹನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ತಕ್ಷಣದಲ್ಲಿ ಈ ನಿಯಮ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೇಶಾದ್ಯಂತ ಈ ಬಗ್ಗೆ ಕಾರ್ಯಚರಣೆ ಹಾಗೂ ಅಭಿಯಾನವನ್ನು ನಡೆಸಲಾಗುವುದು ಎಂದು ಸಚಿವಾಲಯ ಹೇಳಿದೆ. ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ವಿಶ್ವಾಸಾರ್ಹ ಕಾರ್ಯಾಚರಣೆ ಮಾಡುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಸಂಚಾರ ಉಲ್ಲಂಘನೆ ಗುರುತಿಸಲು ಹೆಲ್ಮೆಟ್​​ನ್ನು ಟ್ರಾಫಿಕ್ ಪೊಲೀಸ್ ಸಾಧನವಾಗಿ ಪರಿವರ್ತಿಸಿದ ಟೆಕ್ಕಿ

ಇನ್ನು ಇದನ್ನು ವಾಹನದಲ್ಲಿ ಅಳವಡಿಸಲು ಆಗುವ ವೆಚ್ಚದ ಬಗ್ಗೆ ನಿಖರವಾಗಿ ತಿಳಿಸಿಲ್ಲ. ಆದರೆ ಹೆಚ್ಚುವರಿ ಹಾರ್ಡ್‌ವೇರ್ ಪ್ರತಿ ವಾಹನಕ್ಕೆ ಕೆಲವು ಸಾವಿರ ರೂಪಾಯಿ ಆಗಬಹುದು ಎಂದು ಹೇಳಲಾಗಿದೆ. ಈ ವ್ಯವಸ್ಥೆಯು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳಂತಹ ಅಸ್ತಿತ್ವದಲ್ಲಿರುವ ಸುರಕ್ಷತಾ ತಂತ್ರಜ್ಞಾನಗಳ ಜೊತೆಗೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಈಗಾಗಲೇ ಹಲವು ವಾಹಳಲ್ಲಿ ಕ್ಯಾಮರ ಹಾಗೂ ಇತರ ಎಚ್ಚರಿಕೆ ಧ್ವನಿವರ್ಧಕಗಳನ್ನು ಬಳಸುವ ಬದಲು ಈ ತಂತ್ರಜ್ಞಾನವನ್ನು ಬಳಸುವುದು ಉತ್ತಮ ಎಂದು ಹೇಳಲಾಗಿದೆ. ಪ್ರತಿ ವರ್ಷವೂ ರಸ್ತೆ ಅಪಘಾತಗಳು ಹೆಚ್ಚುತ್ತ ಇದೆ . ಇದನ್ನು ತಡೆಯಲು ಸರ್ಕಾರದ ದೃಷ್ಟಿಕೋನದಿಂದ, V2V ಸಂವಹನವು ಸಾಧನ ತರಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಂದ್ಯದ ವೇಳೆ ಕುಸಿದು ಬಿದ್ದು 38 ವರ್ಷದ ಭಾರತೀಯ ಕ್ರಿಕೆಟಿಗ ನಿಧನ

Source link

‘ಜನ ನಾಯಗನ್’ಗೆ ಮತ್ತೆ ಶಾಕ್: ಬೆಳಿಗ್ಗೆ ನೀಡಿದ್ದ ಆದೇಶ ಮಧ್ಯಾಹ್ನಕ್ಕೆ ತಡೆ – Kannada News | Court temporarily stays single judge’s order directing UA Certificate to Jana Nayagan movie

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸಂಕಷ್ಟಗಳ ಸರಮಾಲೆ ಮುಗಿಯುತ್ತಲೇ ಇಲ್ಲ. ಇಂದು (ಜನವರಿ 09)ಕ್ಕೆ ಬಿಡುಗಡೆ ಆಗಬೇಕಿದ್ದ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನಿರಾಕರಿಸಿ, ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಿತ್ತು. ಇದಕ್ಕೆ ಆಕ್ಷೇಪಿಸಿ, ‘ಜನ ನಾಯಗನ್’ ಸಿನಿಮಾದ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆದು ಇಂದು (ಜನವರಿ 09) ಬೆಳಿಗ್ಗೆ ಮದ್ರಾಸ್ ಹೈಕೋರ್ಟ್​​ನ ಏಕಸದಸ್ಯ ಪೀಠ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಸಿಬಿಎಫ್​​ಸಿಗೆ ಆದೇಶಿಸಿತ್ತು, ಆದರೆ ಈಗ ಮಧ್ಯಾಹ್ನದ ವೇಳೆಗೆ ಸ್ವತಃ ಮದ್ರಾಸ್ ಹೈಕೋರ್ಟ್, ತನ್ನದೇ ಆದೇಶಕ್ಕೆ ತಡೆ ನೀಡಿದ್ದು, ಪ್ರಮಾಣ ಪತ್ರ ನೀಡುವಿಕೆ ತಾತ್ಕಾಲಿಕವಾಗಿ ಬೇಡ ಎಂದಿದೆ.

‘ತಮಿಳಗ ಮಕ್ಕಳ್ ಕಚ್ಚಿ’ ರಾಜಕೀಯ ಪಕ್ಷದ ಸಂಸ್ಥಾಪಕರೂ ಆಗಿರುವ ನಟ ವಿಜಯ್ ನಟಿಸಿರುವ ‘ಜನ ನಾಯಗನ್’ ಸಿನಿಮಾನಲ್ಲಿ ಸಾಕಷ್ಟು ರಾಜಕೀಯ ಅಂಶಗಳಿದ್ದು, ಇದೇ ಕಾರಣಕ್ಕೆ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿದ್ದು, ಇದು ರಾಜಕೀಯ ನಡೆ ಎನ್ನಲಾಗುತ್ತಿದೆ. ಆದರೆ ನ್ಯಾಯಾಲಯವು ಮಧ್ಯ ಪ್ರವೇಶಿಸಿ, ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಮಾಡಿತ್ತು. ಆದರೆ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮತ್ತೆ ಮರು ಆದೇಶ ಹೊರಡಿಸಿ, ಪ್ರಮಾಣ ಪತ್ರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಇದೆಲ್ಲ ಪ್ರಕ್ರಿಯೆಗಳು ವಿಜಯ್ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ವಿಜಯ್ ವಿರುದ್ಧ ರಾಜಕೀಯ ಕುತಂತ್ರದ ಭಾಗವಾಗಿ ಇದೆಲ್ಲ ನಡೆಯುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದ್ರಾಸ್​​ ಹೈಕೋರ್ಟ್​​ನ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲಾಗಿದ್ದು, ‘ಸಿನಿಮಾದ ನಿರ್ಮಾಪಕರು, ಸಿನಿಮಾ ಬಿಡುಗಡೆಯ ಕಾರಣ ನೀಡಿ ನ್ಯಾಯಾಲಯದ ಮೇಲೆ ಒತ್ತಡ ಹೇರಿದ್ದರು ಹಾಗಾಗಿ ಪ್ರಕರಣ ಸೂಕ್ತ ವಿಚಾರಣೆ ನಡೆದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೀಗ ಪ್ರಕರಣದ ಮುಂದಿನ ವಿಚಾರಣೆಯನ್ನು ಇದೇ ತಿಂಗಳು 21ಕ್ಕೆ ಮುಂದೂಡಿದೆ. ಆ ಮೂಲಕ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಮತ್ತೆ ಅನಿಶ್ಚತತೆಗೆ ಒಳಗಾಗಿದೆ.

ವಿಜಯ್ ವಿರುದ್ಧ ರಾ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:06 pm, Fri, 9 January 26

Source link