ಕೇರಳದ ವಿರುದ್ಧ ಸಿಡಿದೆದ್ದ ಸಿಎಂ ಸಿದ್ದರಾಮಯ್ಯ: ಪಿಣರಾಯ್ ವಿಜಯನ್ಗೆ ಖಡಕ್ ಸಂದೇಶ – Kannada News | Karnataka CM Siddaramaiah backs Kasaragod Kannadigas urged Pinarayi and Kerala govt to Withdraw Malayalam language bill 2025
‘ಮಲಯಾಳ ಭಾಷಾ ಮಸೂದೆ 2025’: ಕಾಸರಗೋಡು ಕನ್ನಡಿಗರ ಪರ ನಿಂತ ಸಿದ್ದರಾಮಯ್ಯ ಬೆಂಗಳೂರು, ಜನವರಿ 9: ಕೇರಳ (Kerala) ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ‘ಮಲಯಾಳ ಭಾಷಾ ಮಸೂದೆ 2025’ರಿಂದ (Malayalam language bill 2025) ಕಾಸರಗೋಡಿನ ಕನ್ನಡಿಗರಿಗೆ ತೀವ್ರ ಸಮಸ್ಯೆಯಾಗಲಿದ್ದು, ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕೇರಳ ಸರ್ಕಾರವನ್ನು ಹಾಗೂ ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಸುದೀರ್ಘ ಸಂದೇಶ ಪ್ರಕಟಿಸಿರುವ ಸಿದ್ದರಾಮಯ್ಯ, ಒಂದು ವೇಳೆ ಕಾಸರಗೋಡು ಕನ್ನಡಿಗರ ಹಿತ…