ರಷ್ಯಾ ನಿಷೇಧ ಮಸೂದೆಯ ಅಸ್ತ್ರ ಹಿಡಿದ ಅಮೆರಿಕ ಅಧ್ಯಕ್ಷ; ಭಾರತ ಮತ್ತಿತರ ದೇಶಗಳ ಮೇಲೆ ಶೇ. 500 ಟ್ಯಾರಿಫ್ಗೆ ಟ್ರಂಪ್ ಸಜ್ಜು – Kannada News | Russian sanctions bill to give power for US President to impose 500pc tariffs on India and other countries
ವಾಷಿಂಗ್ಟನ್, ಜನವರಿ 8: ಅಮೆರಿಕ ಅಧ್ಯಕ್ಷರು ರಷ್ಯಾವನ್ನು ಹತ್ತಿಕ್ಕಲು ಹೊಸ ಪ್ರಬಲ ಅಸ್ತ್ರಕ್ಕೆ ಸಜ್ಜಾಗಿದ್ದಾರೆ. ಸರ್ವಪಕ್ಷಗಳ ಸಮ್ಮತಿಯ ಗ್ರಹಾಂ ಬ್ಲೂಮೆಂಥಲ್ ಸ್ಯಾಂಕ್ಷನ್ಸ್ ಬಿಲ್ಗೆ (Graham Blumenthal sanctions bill) ಅನುಮೋದನೆ ಪಡೆಯಲು ನಿಂತಿದ್ದಾರೆ. ರಷ್ಯಾವನ್ನು ಪೂರ್ಣವಾಗಿ ನಿಷೇಧಿಸಲು ಅನುವು ಮಾಡಿಕೊಡುವ ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದಿದ್ದೇ ಆದಲ್ಲಿ ಭಾರತ ಮತ್ತಿತರ ಕೆಲ ದೇಶಗಳು ಅಮೆರಿಕವನ್ನು ಪೂರ್ಣವಾಗಿ ಎದಿರುಹಾಕಿಕೊಳ್ಳಬೇಕಾಗುತ್ತದೆ. ರಿಪಬ್ಲಿಕನ್ ಸಂಸದರಾದ ಲಿಂಡ್ಸೇ ಗ್ರಹಾಂ ರೂಪಿಸಿರುವ ಈ ಮಸೂದೆಯು ಅಮೆರಿಕ ಅಧ್ಯಕ್ಷರಿಗೆ ಕೆಲ ವಿಶೇಷಾಧಿಕಾರ ಒದಗಿಸುತ್ತದೆ. ರಷ್ಯಾದ…