Category Archives: Blog

Your blog category

Video: ಮುಂಬೈನಲ್ಲಿ ಪಾದಚಾರಿಗಳ ಮೇಲೆ ಹರಿದ ಬೆಸ್ಟ್​ ಬಸ್, ನಾಲ್ವರು ಸಾವು, 9 ಮಂದಿಗೆ ಗಾಯ – Kannada News | BEST Bus Ploughs Into Crowd in Bhandup, Four Killed

ಮುಂಬೈ, ಡಿಸೆಂಬರ್ 30: ಮುಂಬೈನ ಭಾಂಡಪ್ ಪ್ರದೇಶದಲ್ಲಿ ಬೆಸ್ಟ್​ ಬಸ್ ಪಾದಚಾರಿಗಳ ಮೇಲೆ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. 9ಮಂದಿ ಗಾಯಗೊಂಡಿದ್ದಾರೆ. ಜನನಿಬಿಡ ಸ್ಟೇಷನ್ ರಸ್ತೆಯಲ್ಲಿ ಬೆಸ್ಟ್ ಬಸ್ ಹಿಮ್ಮುಖವಾಗಿ ಚಲಿಸುವಾಗ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಜನರು ಕೆಲಸದಿಂದ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಜನದಟ್ಟಣೆಯ ಪ್ರದೇಶದಲ್ಲಿ ಭೀತಿ ಉಂಟಾಗಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today 30 December: ಇಂದು ಈ ರಾಶಿಯವರಿಗೆ ಶತ್ರುಗಳು ಮಿತ್ರರಾಗುವ ಯೋಗ – Kannada News | Daily Horoscope for 30 December 2025: Dr. Basavaraj Gurujis Predictions for Zodiac Signs

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 30, ಮಂಗಳವಾರದ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ವೈಕುಂಠ ಏಕಾದಶಿ, ಮುಕ್ಕೋಟಿ ಏಕಾದಶಿ ಮತ್ತು ಮೋಕ್ಷದ ಏಕಾದಶಿ ಎಂಬ ಮಹಾಪರ್ವ ದಿನವಾಗಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಶ್ರೀ ವಿಷ್ಣುವಿನ ಉತ್ತರ ದ್ವಾರ ದರ್ಶನದಿಂದ ಪುಣ್ಯವನ್ನು ಗಳಿಸುವ ಮತ್ತು ಪಾಪಗಳನ್ನು ನಾಶಪಡಿಸಿಕೊಳ್ಳುವ ವಿಶೇಷ ಅವಕಾಶ ಈ ದಿನವಿದೆ.

ಇಂದು ರವಿ ಧನುಷ್ ರಾಶಿಯಲ್ಲಿ, ಚಂದ್ರ ಮೇಷ ರಾಶಿಯಲ್ಲಿ ಭರಣಿ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾನೆ. ಡಾ. ಬಸವರಾಜ ಗುರೂಜಿ ಅವರು ಪ್ರತಿಯೊಂದು ರಾಶಿಚಕ್ರ ಚಿಹ್ನೆಗಳಿಗೂ ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಸಂಬಂಧಗಳು, ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ವಿಶೇಷ ಮಂತ್ರಗಳ ಕುರಿತು ಮಾಹಿತಿ ನೀಡಿದ್ದಾರೆ. ಮೇಷ ರಾಶಿಗೆ ಆರು ಗ್ರಹಗಳ ಶುಭಫಲ, ವೃಷಭ ರಾಶಿಗೆ ಸಂಗಾತಿಯಿಂದ ಲಾಭ, ಮಿಥುನ ರಾಶಿಗೆ ಅನಿರೀಕ್ಷಿತ ಧನಯೋಗ, ಕರ್ಕ ರಾಶಿಗೆ ಆರ್ಥಿಕ ಯೋಗ, ಸಿಂಹ ರಾಶಿಗೆ ವೃತ್ತಿಯಲ್ಲಿ ಬಡ್ತಿ, ಕನ್ಯಾ ರಾಶಿಗೆ ಹಿರಿಯರ ಸಹಕಾರ, ತುಲಾ ರಾಶಿಗೆ ಸಾಲ ವಸೂಲಿ, ವೃಶ್ಚಿಕ ರಾಶಿಗೆ ಮಾತಿನಲ್ಲಿ ಅದೃಷ್ಟ, ಧನುಷ್ ರಾಶಿಗೆ ಶತ್ರು ಮಿತ್ರರಾಗುವ ಯೋಗ, ಮಕರ ರಾಶಿಗೆ ಮಕ್ಕಳಿಂದ ಶುಭ, ಕುಂಭ ರಾಶಿಗೆ ತಂದೆ ತಾಯಿ ಆಶೀರ್ವಾದ ಮತ್ತು ಮೀನ ರಾಶಿಗೆ ಆರ್ಥಿಕ ಲಾಭವಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

Source link

ಸೋಮವಾರವೂ ‘ಮಾರ್ಕ್’, ‘45’ ಅಬ್ಬರದ ಕಲೆಕ್ಷನ್; ‘ಡೆವಿಲ್’ ಕಥೆ ಏನು? – Kannada News | Mark, 45 Box Office Collection Devil’s Collection Dips After Christmas Releases

ಸೋಮವಾರವೂ ‘ಮಾರ್ಕ್’, ‘45’ ಅಬ್ಬರ; ಡೆವಿಲ್ ಕಥೆ ಏನು?

ಸುದೀಪ್ ಅಭಿನಯದ ‘ಮಾರ್ಕ್’ (Mark Movie) ಹಾಗೂ ಮಲ್ಟಿ ಸ್ಟಾರರ್ ಸಿನಿಮಾ ‘45’ ಕ್ರಿಸ್​ಮಸ್ ಪ್ರಯುಕ್ತ ಡಿಸೆಂಬರ್ 25ರಂದು ರಿಲೀಸ್ ಆದವು. ಎರಡೂ ಸಿನಿಮಾಗಳು ಪಾಸಿಟಿವ್ ವಿಮರ್ಶೆ ಪಡೆದಿವೆ. ಈ ಚಿತ್ರಗಳು ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಎರಡೂ ಚಿತ್ರಗಳು ಸೋಮವಾರವೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಎರಡೂ ಚಿತ್ರಗಳ ಅಬ್ಬರದ ಮಧ್ಯೆ ‘ಡೆವಿಲ್’ ಚಿತ್ರದ ಕಥೆ ಏನಾಗಿದೆ? ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

‘ಮಾರ್ಕ್’​ ಗಳಿಕೆ

‘ಮಾರ್ಕ್’ ಸಿನಿಮಾ ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ತಂಡದವರೇ ಹೇಳಿಕೊಂಡಿದ್ದಾರೆ. ಈ ಚಿತ್ರ ಮೊದಲ ದಿನ 15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು ಎನ್ನಲಾಗಿದೆ. ಈ ಚಿತ್ರ ಸೋಮವಾರವೂ ಕೋಟಿಗಳಲ್ಲಿ ಗಳಿಕೆ ಮಾಡಿದೆ. ಸೋಮವರಾದ ಕಲೆಕ್ಷನ್ ಸುಮಾರು ಒಂದೂವರೆ ಕೋಟಿ ರೂಪಾಯಿ ಗಳಿಸಿದೆ ಎಂದು sacnilk ವರದಿ ಮಾಡಿದೆ. ಚಿತ್ರತಂಡ ನೀಡಿದ ನಾಲ್ಕು ದಿನಗಳ ಕಲೆಕ್ಷನ್ ಹಾಗೂ ಸೋಮವಾರದ sacnilk ವರದಿ ಸೇರಿದರೆ ಸಿನಿಮಾದ ಗಳಿಕೆ ಸುಮಾರು 37 ಕೋಟಿ ರೂಪಾಯಿ ಆಗಲಿದೆ. ಇದು ನಿಜಕ್ಕೂ ದೊಡ್ಡ ಗಳಿಕೆಯೇ ಸರಿ.

45 ಗಳಿಕೆ

ಇನ್ನು, 45 ಸಿನಿಮಾ ಕೂಡ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಚಿತ್ರತಂಡದವರು ಸಿನಿಮಾದ ಗಳಿಕೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, sacnilk ವರದಿ ಪ್ರಕಾರ ಈ ಚಿತ್ರ ಈವರೆಗೆ ಸುಮಾರು 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಸೋಮವಾರ ಈ ಚಿತ್ರ ಕೋಟಿಗಳಲ್ಲಿ ವ್ಯವಹಾರ ಮಾಡಿದೆ.

ಇದನ್ನೂ ಓದಿ: ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಮಾರ್ಕ್’; ದಾಖಲೆ ನಿರ್ಮಾಣ

ಡೆವಿಲ್ ಕಲೆಕ್ಷನ್

ಇನ್ನು, ಈ ಎರಡೂ ಚಿತ್ರಗಳ ಅಬ್ಬರದ ಮಧ್ಯೆ ‘ಡೆವಿಲ್’ ಕಲೆಕ್ಷನ್ ಡಲ್ ಆಗಿದೆ. ಭಾನುವಾರ ಈ ಚಿತ್ರ 21 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಈಗ ಸೋಮವಾರ ಸಿನಿಮಾದ ಕಲೆಕ್ಷನ್ 7 ಲಕ್ಷ ರೂಪಾಯಿಗೆ ಕುಸಿದಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಮತ್ತಷ್ಟು ಕುಗ್ಗುವ ಸಾಧ್ಯತೆ ಇದೆ. ಈ ಚಿತ್ರದ ಒಟ್ಟಾರೆ ಗಳಿಕೆ 34 ಕೋಟಿ ರೂಪಾಯಿ ಆಗಿದೆ (sacnilk ವರದಿ ಪ್ರಕಾರ) ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು: ಪಿಜಿಯಲ್ಲಿ ಸಿಲಿಂಡರ್ ಸ್ಫೋಟ, ನಿಜಕ್ಕೂ ಆಗಿದ್ದೇನು? ಪಿಜಿಯಲ್ಲಿ ಇದ್ದವರು ಹೇಳೋದೇನು ನೋಡಿ

ಬೆಂಗಳೂರು, ಡಿಸೆಂಬರ್ 30: ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯ ಪಿಜಿಯೊಂದರಲ್ಲಿ ಸೋಮವಾರ ಸಿಲಿಂಡರ್ ಸ್ಫೋಟಗೊಂಡು ಅರವಿಂದ್ (23) ಎಂಬ ಯುವಕ ಮೃತಪಟ್ಟಿದ್ದಾರೆ. ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಮೂರು ಮಂದಿ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಪಿಜಿಯಲ್ಲಿ ವಾಸವಿದ್ದವರೊಬ್ಬರು ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ಘಟನೆಗೆ ಅನಿಲ ಸೋರಿಕೆಯೇ ಕಾರಣವೆಂದು ಶಂಕಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಸ್ಥಳಕ್ಕೆ ಬಂದಿದ್ದ ನಿವಾಸಿಗಳು ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದಾರೆ. ಸಿಲಿಂಡರ್ ಸ್ಫೋಟದ ಪರಿಣಾಮವಾಗಿ ಕಟ್ಟಡದಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಸುಮಾರು 40-50 ಪಿಜಿ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಅವರಿಗೆ ತಾತ್ಕಾಲಿಕವಾಗಿ ಬೇರೆಡೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧುಮೇಹ ರೋಗಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯೇ? ನೀವು ತಿಳಿಯಲೇಬೇಕಾದ ಮಾಹಿತಿ ಇದು – Kannada News | Diabetes & Heart Attack Risk: What Experts Say

ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿವೆ. ಇದಕ್ಕೆ ಕಾರಣಗಳು ಹಲವು ಆದರೆ ಬದಲಾಗುತ್ತಿರುವ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆ ಇವೆಲ್ಲವೂ ಕೂಡ ಈ ರೀತಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣವಾಗಬಹುದು. ಮಧುಮೇಹ ಕ್ರಮೇಣ ದೇಹದ ಅನೇಕ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವು ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಿಶ್ವ ಹೃದಯ ಒಕ್ಕೂಟದ ವರದಿಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ, ಮಧುಮೇಹದಿಂದ ಬಳಲುತ್ತಿರುವವರಲ್ಲಿ ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಪ್ರಕರಣಗಳಲ್ಲಿ ತ್ವರಿತ ಏರಿಕೆ ಕಂಡುಬಂದಿದೆ, ಇದು ಕಳವಳಕಾರಿ ವಿಷಯವಾಗಿದ್ದು ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೆಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾದರೆ ಮಧುಮೇಹ ಮತ್ತು ಹೃದ್ರೋಗಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ಹೇಗೆ, ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗಲು ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚುತ್ತಿರುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಮಧುಮೇಹ ರೋಗಿಗಳಲ್ಲಿ ದೀರ್ಘಕಾಲದವರೆಗೆ ಅಧಿಕ ರಕ್ತದ ಸಕ್ಕರೆಯು ದೇಹದಲ್ಲಿನ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಇದು ಹೃದಯಕ್ಕೆ ರಕ್ತವನ್ನು ಸಾಗಿಸುವ ಅಪಧಮನಿಗಳನ್ನು ದುರ್ಬಲಗೊಳಿಸಬಹುದು ಅಥವಾ ಕಿರಿದಾಗಿಸಬಹುದು, ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ. ಜೊತೆಗೆ ಮಧುಮೇಹವು ಹೆಚ್ಚಾಗಿ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳೊಂದಿಗೆ ಸಂಬಂಧಿಸಿದ್ದು ಇದು ಹೃದಯಾಘಾತದ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಮಧುಮೇಹವು ದೇಹದಲ್ಲಿ ಉರಿಯೂತ ಮತ್ತು ಕೊಬ್ಬಿನ ಶೇಖರಣೆಯನ್ನು ವೇಗಗೊಳಿಸುವುದರಿಂದ, ಇದು ಅಪಧಮನಿಗಳನ್ನು ಗಟ್ಟಿಯಾಗಿಸುತ್ತದೆ. ಅದಲ್ಲದೆ ಅನೇಕ ಸಂದರ್ಭಗಳಲ್ಲಿ, ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಸಾಮಾನ್ಯ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ, ಇದು ಸಕಾಲಿಕ ಚಿಕಿತ್ಸೆಯಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ. ಈ ಕಾರಣಗಳಿಗಾಗಿ, ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚು.

ಲಕ್ಷಣಗಳು ಹೇಗಿರುತ್ತವೆ?

ಮಧುಮೇಹ ರೋಗಿಗಳಲ್ಲಿ, ಹೃದಯಾಘಾತದ ಲಕ್ಷಣಗಳು ಸಾಮಾನ್ಯ ವ್ಯಕ್ತಿಗಳಿಗಿಂತ ಭಿನ್ನವಾಗಿರುತ್ತವೆ. ತೀವ್ರವಾದ ಎದೆ ನೋವು, ಒತ್ತಡ, ಸುಡುವ ಸಂವೇದನೆ ಅಥವಾ ಅಸ್ವಸ್ಥತೆ ಕಂಡುಬರಬಹುದು. ಕೆಲವರಲ್ಲಿ ಉಸಿರಾಟದ ತೊಂದರೆ, ತೀವ್ರ ಆಯಾಸ, ತಲೆತಿರುಗುವಿಕೆ ಅಥವಾ ಬೆವರುವುದು ಸಹ ಕಂಡುಬರಬಹುದು. ಇನ್ನು ಕೆಲವರಲ್ಲಿ ದವಡೆ, ಕುತ್ತಿಗೆ, ಭುಜ ಅಥವಾ ಎಡಗೈಯಲ್ಲಿ ನೋವು ಕೂಡ ಕಂಡುಬರಬಹುದು. ಅನೇಕ ಸಂದರ್ಭಗಳಲ್ಲಿ, ವಾಕರಿಕೆ, ವಾಂತಿ ಅಥವಾ ಅಸ್ವಸ್ಥತೆಯಂತಹ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತವೆ. ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಮಧುಮೇಹ ಬರುವ ಮುನ್ನ ದೇಹದಲ್ಲಿ ಕಾಣಿಸಿಕೊಳ್ಳುವ 5 ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

ತಡೆಗಟ್ಟುವುದು ಹೇಗೆ?

  • ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ.
  • ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.
  • ನಿಯಮಿತವಾಗಿ ವ್ಯಾಯಾಮ ಮಾಡಿ.
  • ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಮೇಲ್ವಿಚಾರಣೆ ಮಾಡಿ.
  • ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಜೊತೆಗೆ ಚೆನ್ನಾಗಿ ನಿದ್ರೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ? ವಿಶ್ವಾಸದಲ್ಲಿ ಡಿಕೆಶಿ ಆಪ್ತ ಶಾಸಕರು – Kannada News | 200 Precent DK Shivakumar Will be a Next CM Says Ramanagar Congress MLA Iqbal Hussain

ರಾಮನಗರ, (ಡಿಸೆಂಬರ್ 29): ಕಾಂಗ್ರೆಸ್ ಮನೆಯಲ್ಲಿನ ಸಿಎಂ ಕುರ್ಚಿ ಕಾಳಗಕ್ಕೆ ಸದ್ಯ ಜನವರಿ 15ರವರೆಗೆ ಅಲ್ಪವಿರಾಮ ಬಿದ್ದಿದೆ. ಆದ್ರೆ ಪಟ್ಟದ ಪಗಡೆಯಾಟೆ ಮಾತ್ರ ಕಂಡು ಕಾಣದಂತೆ ಒಳಗೊಳಗೆ ನಡೀತಾನೆ ಇದೆ. ಈ ಪೈಕಿ ಸಿಎಂ ಸಿದ್ದರಾಮಯ್ಯ (Siddaramaiah) ಬಣ ಉರುಳಿಸಿರುವ ಅಹಿಂದ ಶಕ್ತಿ ಪ್ರದರ್ಶನವೂ ಒಂದು. ಸಿದ್ದು ತವರು ಮೈಸೂರು ಅಹಿಂದ ಸಮಾವೇಶಕ್ಕೆ ಸಜ್ಜಾಗ್ತಿದೆ. ಇದರ ನಡುವೆ ಜನವರಿ 6 ಅಥವಾ 9ಕ್ಕೆ ಡಿಕೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಶರಣರನ್ನು ಮುಂದಿಟ್ಟು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಮಾತನಾಡಿರುವ ಕೈ ಶಾಸಕ ಇಕ್ಬಾಲ್ ಹುಸೇನ್, ಜನವರಿ 6 ಅಥವಾ 9ಕ್ಕೆ ಡಿಕೆ ಅಧಿಕಾರ ಹಿಡಿಯುತ್ತಾರೆ. 200 ಪರ್ಸೆಂಟ್​​​ ಈ ಎರಡು ಡೇಟ್​​​ನಲ್ಲಿ ಅಧಿಕಾರ ಸಿಗಲಿದೆ. ಈಗಲು ಸಹ ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ನನಗೆ ವಿಶ್ವಾಸವಿದೆ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ. ಶರಣರು ಹೇಳುವ ಮಾತು ಸತ್ಯವಾಗುತ್ತದೆ. ಅಧಿಕಾರ ಹಂಚಿಕೆ ಬಗ್ಗೆ ನಮ್ಮ ನಾಯಕರು ಹೇಳಿದ್ದಾರೆ ಅಲ್ವಾ. ಹಾಗಾಗಿ ನನಗೆ ಈ ಬಗ್ಗೆ ನಂಬಿಕೆ ಇದೆ.​​ ಭಗವಂತ ನಮ್ಮ ಬೇಡಿಕೆ ಈಡೇರಿಸುತ್ತಾನೆ ಎಂದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 30ರ ದಿನಭವಿಷ್ಯ – Kannada News | Janam Sankhya Astrology: Dec 30th Fortune by Birth Number

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 30ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಇತರರನ್ನು ಮೆಚ್ಚಿಸುವುದಕ್ಕೆ ಬಹಳ ಸಮಯ ಹೋಗಲಿದೆ. ಉದ್ಯೋಗ ಮಾಡುವ ಸ್ಥಳದಲ್ಲಿಯೇ ಇರಬಹುದು ಅಥವಾ ವೃತ್ತಿಪರರಾಗಿದ್ದಲ್ಲಿ ಕ್ಲೈಂಟ್ ಗಳನ್ನು ಮೆಚ್ಚಿಸುವ ಪ್ರಯತ್ನ ಇರಬಹುದು. ಯಾವುದೇ ರೀತಿಯಲ್ಲೂ ಫಲವನ್ನು ನೀಡುವುದಿಲ್ಲ. ಸಿಗರೇಟ್ ಸೇದುವ ಚಟ ಇರುವವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ವಿಚಾರವನ್ನು ನಿರ್ಲಕ್ಷ್ಯ ಮಾಡದಂತೆ ಕೂಡಲೇ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಲು ಆದ್ಯತೆ ನೀಡಿ. ಸಂಬಂಧಿಗಳಿಗೆ ತಾತ್ಕಾಲಿಕ ಅವಧಿಗೆ ಎಂದು ನೀಡಿದ ಸಾಲವನ್ನು ವಾಪಸ್ ಪಡೆಯುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಆ ವ್ಯವಹಾರದ ಕಾರಣಕ್ಕೆ ಸಂಬಂಧಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಚ್ಚರಿಕೆಯನ್ನು ವಹಿಸಿ. ವಿವಿಧ ತಳಿಯ ನಾಯಿಗಳ ಸಾಕಣೆ ಹಾಗೂ ಅವುಗಳ ಮಾರಾಟದ ಮೂಲಕ ಆದಾಯವನ್ನು ಪಡೆಯುತ್ತಾ ಇರುವವರಿಗೆ ತಪ್ಪಾದ ಮಾಹಿತಿಯನ್ನು ನೀಡಿ, ಕೆಲವರು ದಾರಿ ತಪ್ಪಿಸುತ್ತಾರೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಆರಂಭದಿಂದ ಕೊನೆ ಹಂತದ ತನಕ ಶ್ರಮ ಹಾಕಿ ಮಾಡಿದ ಕೆಲಸದ ಶ್ರೇಯಸ್ಸು ಬೇರೆಯವರಿಗೆ ದೊರೆಯುವಂತೆ ಆಗಲಿದೆ. ಯಾವುದೇ ಮುಖ್ಯ ಕೆಲಸ ಇದ್ದಲ್ಲಿ ಸಾಮಾನ್ಯಕ್ಕೆ ನೀವು ತೆರಳುವ ವೇಳೆಗಿಂತ ಮುಂಚಿತವಾಗಿ ಅಲ್ಲಿರುವಂತೆ ಯೋಜನೆ ರೂಪಿಸಿಕೊಳ್ಳಿ. ನೀವು ಮಾಡಿದ ಕೆಲಸ- ಕಾರ್ಯಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಹಿಂಜರಿಕೆ ಮಾಡಬೇಡಿ. ಈ ಹಿಂದೆ ನಡೆದಂಥ ಕೆಲವು ಬಿಡಿ ಘಟನೆಗಳನ್ನು ಒಟ್ಟು ಮಾಡಿಕೊಂಡು, ಸೋದರ ಸಂಬಂಧಿಗಳ ಜೊತೆಗೆ ಜಗಳ- ಕಲಹಕ್ಕೆ ಮುಂದಾಗುವ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಇದರಿಂದ ಮನಸ್ಸು ಇನ್ನಷ್ಟು ಕಹಿಯಾಗುತ್ತದೆ ವಿನಾ ಏನೂ ಫಲಿತಾಂಶ ಸಿಗುವುದಿಲ್ಲ ಎಂಬುದು ಗಮನದಲ್ಲಿ ಇರಲಿ. ವಾಸ್ತು ಹೇಳುವಂಥ ವೃತ್ತಿಯಲ್ಲಿ ಇರುವವರಿಗೆ ಆದಾಯದಲ್ಲಿ ಏರಿಕೆ ಆಗುವ ಯೋಗ ಇದೆ. ನಿಮ್ಮಲ್ಲಿ ಕೆಲವರು ಗ್ರಂಥ ರಚನೆ ಶುರು ಮಾಡುವ ಕುರಿತು ಚಿಂತನೆ ನಡೆಸುತ್ತೀರಿ, ಗ್ರಂಥದ ರಚನೆಯನ್ನೇ ಆರಂಭಿಸುವ ಸಾಧ್ಯತೆಯೂ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ವಿವಿಧ ಸ್ಪರ್ಧೆಗಳಲ್ಲಿ ಭಾಗೀ ಆಗಿ, ಅದರಲ್ಲಿ ಜಯ ಗಳಿಸುವಂಥ ದಿನ ಇದಾಗಿರುತ್ತದೆ. ನಿಮ್ಮ ಅಂದಾಜಿನಂತೆಯೇ ಕೆಲಸ ಮಾಡುವ ಸ್ಥಳದಲ್ಲಿ ಬದಲಾವಣೆ- ಬೆಳವಣಿಗೆಗಳು ಆಗಲಿವೆ. ಮೇಲ್ನೋಟಕ್ಕೆ ಬಹಳ ಕಠಿಣ ಎನಿಸಿದ್ದ ಕೆಲವು ಅವಕಾಶಗಳು ನಿಮಗೆ ಸಾಧಕವಾಗಿ ಪರಿಣಮಿಸಲಿವೆ. ಪ್ರತಿಷ್ಠಿತ ಸಂಸ್ಥೆಗಳು ಯೋಜನೆಗಳು ಅಥವಾ ಅಧ್ಯಯನ ವರದಿಗಳಿಗಾಗಿ ನೀಡುವ ಹಣಕಾಸಿನ ಅನುದಾನ, ಅಂದರೆ ಫೆಲೋಷಿಪ್ ಗಳು ನಿಮ್ಮಲ್ಲಿ ಕೆಲವರಿಗೆ ದೊರೆಯಬಹುದು. ಅಥವಾ ಆ ಬಗ್ಗೆ ನಿಮ್ಮ ಆಪ್ತರು ಸುಳಿವು ನೀಡಲಿದ್ದಾರೆ. ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ರೆಫರೆನ್ಸ್ ಮೂಲಕವಾಗಿ ಸೂಕ್ತ ಸಂಬಂಧ ದೊರೆಯುವ ಯೋಗ ಇದೆ. ಕೋರ್ಟ್- ಕಚೇರಿಗಳಲ್ಲಿ ವ್ಯಾಜ್ಯಗಳು ನಡೆಯುತ್ತಾ ಇದ್ದಲ್ಲಿ ಅವುಗಳನ್ನು ಮಾತು-ಕತೆ ಮೂಲಕವಾಗಿ ಬಗೆಹರಿಸಿಕೊಳ್ಳುವುದಕ್ಕೆ ಬೇಕಾದಂಥ ವೇದಿಕೆ ನಿಮಗೆ ದೊರೆಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಪಾರ್ಟನರ್ ಷಿಪ್ ನಲ್ಲಿ ಮಾಡಿದಂಥ ವ್ಯವಹಾರಗಳು ಒಳ್ಳೆ ಲಾಭವನ್ನು ಹಾಗೂ ದೀರ್ಘಾವಧಿಗೂ ಆದಾಯ ತರುವಂಥ ಮಾರ್ಗವನ್ನು ಸಹ ತೆರೆದಿಡಲಿದೆ. ನಿಮಗೆ ದೊರೆಯುವಂಥ ಆಫರ್ ಗಳನ್ನು ಮುಕ್ತ ಮನಸ್ಸಿನಿಂದ ನೋಡುವುದು ಬಹಳ ಮುಖ್ಯವಾಗುತ್ತದೆ. ಈ ಹಿಂದಿನ ಅನುಭವಗಳ ಆಧಾರದಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಏಕೆಂದರೆ ಈ ದಿನ ನಿಮಗೆ ಮ್ಯಾಜಿಕ್ ಅನಿಸುವ ರೀತಿಯಲ್ಲಿ ಕೆಲವು ಘಟನೆಗಳು ನಡೆಯುತ್ತವೆ. ಪ್ರೇಮಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡುವ, ಮದುವೆ ಮಾಡಿಕೊಳ್ಳುವ ಇರಾದೆಯನ್ನು ತಿಳಿಸುವ ತೀರ್ಮಾನವನ್ನು ಮಾಡಲಿದ್ದೀರಿ. ಧಾರ್ಮಿಕವಾಗಿ ಪ್ರಾಶಸ್ತ್ಯ ಇರುವಂಥ ಕೆಲವು ಸ್ಥಳಗಳಿಗೆ ಹೋಗಿಬರುವಂಥ ಯೋಗ ನಿಮ್ಮ ಪಾಲಿಗೆ ಇದೆ. ಪ್ರಭಾವಿ ಹುದ್ದೆಯಲ್ಲಿ ಇರುವವರು ಈ ಹಿಂದೆ ನಿಮಗೆ ನೆರವಾಗಿದ್ದವರಿಗೆ ದೊಡ್ಡ ಮಟ್ಟದ ಸಹಾಯ ಮಾಡಿಕೊಡಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಏನು ಬೇಕೋ ಅದನ್ನು ಬಾಯಿ ಬಿಟ್ಟು ಕೇಳಿ ಪಡೆದುಕೊಳ್ಳುವ ಮನಸ್ಥಿತಿಯಲ್ಲಿ ಇರುತ್ತೀರಿ. ನಿಮ್ಮನ್ನು ತುಂಬ ಮುಖ್ಯ ಕೆಲಸದ ಮೇಲೆ ದೂರದ ಊರು ಅಥವಾ ವಿದೇಶಕ್ಕೆ ಕಳುಹಿಸುವ ಸಾಧ್ಯತೆ ಇದೆ. ಮೇಲಧಿಕಾರಿಗಳು ಈ ಬಗ್ಗೆ ನಿಮಗೆ ಸುಳಿವು ಬಿಟ್ಟುಕೊಡಬಹುದು. ಆದಾಯ ತೆರಿಗೆ ರೀಫಂಡ್ ಗೆ ಅಪ್ಲೈ ಮಾಡಿ, ಅದಕ್ಕಾಗಿ ಕಾಯುತ್ತಾ ಇರುವವರ ಪೈಕಿ ಕೆಲವರಿಗೆ ಆ ಬಗ್ಗೆ ಮಾಹಿತಿ ದೊರೆಯುವ ಯೋಗ ಇದೆ. ಸರ್ಕಾರದ ಕೆಲಸಗಳು ಯಾವುದಾದರೂ ಆಗಬೇಕಿದ್ದು, ಕೊನೆ ಹಂತದಲ್ಲಿ ಇದೆ ಎಂಬಂಥದ್ದು ನಾನಾ ಕಾರಣಗಳಿಗೆ ಅಲ್ಲಿಯೇ ನಿಂತುಬಿಡುವ ಸಾಧ್ಯತೆ ಇದೆ. ಹೊಸ ನಿಯಮಗಳು ಅಂತಲೋ ಅಥವಾ ನೀವು ಹಾಕಿದಂಥ ಅರ್ಜಿಯಲ್ಲಿ ಸಮಸ್ಯೆ ಇದೆ ಎಂಬ ಸಬೂಬು ನೀಡಿಯೋ ಹಾಗೇ ತಡೆಯಾಗಿ ಉಳಿದುಬಿಡಬಹುದು. ಒಂದು ವೇಳೆ ಹೀಗೆ ಆದಲ್ಲಿ ನಯವಾಗಿ ಕಾರ್ಯ ಮುಗಿಸಿಕೊಳ್ಳುವ ಕಡೆಗೆ ಗಮನವನ್ನು ನೀಡುವುದು ಮುಖ್ಯ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಇತರರಿಗೆ ಯಾವುದೇ ರೀತಿಯಲ್ಲೂ ರಿಯಾಯಿತಿ ತೋರಿಸುವುದಕ್ಕೋ ವಿನಾಯಿತಿ ನೀಡುವುದಕ್ಕೋ ನೀವು ಸಿದ್ಧರಿರುವುದಿಲ್ಲ. ಮೊದಲ ಬಾರಿಗೆ ಎಂಬಂತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಲಾಭದ ರುಚಿ ನೋಡುವ ಯೋಗ ಇದೆ. ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಾ ಹಾಗೂ ಅದೇ ಆದಾಯದ ಮೂಲ ಸಹ ಆಗಿರುವವರು ಹೊಸದಾಗಿ ಹೂಡಿಕೆ ಮಾಡಲಿದ್ದೀರಿ. ಉದಾಹರಣೆಗೆ ಲ್ಯಾಪ್ ಟಾಪ್, ಕೆಲವು ಸಾಫ್ಟ್ ವೇರ್ ಗಳು ಮತ್ತಿತರ ಪರಿಕರಗಳ ಖರೀದಿಗಾಗಿ ಹಣವನ್ನು ಮೀಸಲಿಡಲಿದ್ದೀರಿ. ಸಂಗಾತಿಯ ಆರೋಗ್ಯ ಪರಿಸ್ಥಿತಿ ನಿಮ್ಮಲ್ಲಿ ಕೆಲವರನ್ನು ಚಿಂತೆಗೆ ಗುರಿ ಮಾಡಲಿದೆ. ನಿಮ್ಮದೇ ನಿರ್ಲಕ್ಷ್ಯದಿಂದ ಇಂಥದ್ದೊಂದು ಸ್ಥಿತಿಗೆ ತಲುಪಿತು ಎಂಬ ಅಪರಾಧಿ ಪ್ರಜ್ಞೆಯೊಂದು ವಿಪರೀತ ಕಾಡಲಿದೆ. ಭಾರದ ವಸ್ತುಗಳನ್ನು ಎತ್ತುವಾಗ ಜಾಗ್ರತೆ ವಹಿಸಿ. ಏಕೆಂದರೆ, ಸಣ್ಣ ಪ್ರಮಾಣದ ಅಜಾಗರೂಕತೆಯಿಂದ ದೊಡ್ಡ ಮಟ್ಟದ ತೊಂದರೆಗಳು ಅನುಭವಿಸುವಂತೆ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನೀವು ನೀಡಿದಂಥ ಸಮಯ, ತೋರಿದಂಥ ಕಾಳಜಿ ಇತರರಿಗೆ ಅದು ಮುಖ್ಯ ಎಂದೆನಿಸುತ್ತಿಲ್ಲ ಎಂಬ ಭಾವನೆ ಕಾಡಲಿದೆ. ಸಂಗಾತಿಯ ಆದಾಯದಲ್ಲಿ ಸ್ಥಿರತೆ ಇಲ್ಲದಂತಾಗಬಹುದು ಎಂಬ ಸೂಚನೆ ನಿಮಗೆ ಆತಂಕವನ್ನು ತರಲಿದೆ. ನಿಮ್ಮ ಧ್ವನಿಯಲ್ಲಿನ ಬದಲಾವಣೆ ಕಾರಣಕ್ಕೆ ನೀವಾಡುವ ಮಾತು- ಪದಗಳ ಬಳಕೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇದೆ. ಇವರಿಗೇನು ನಾನು ಸಮಜಾಯಿಷಿ ಕೊಡುವುದು ಎಂಬ ಧೋರಣೆ ಬೇಡ. ಅದರಲ್ಲೂ ನಿಮ್ಮ ಮನಸ್ಸಿಗೆ ಹತ್ತಿರವಾದ ಸ್ನೇಹಿತರನ್ನು ಬೇಸರ ಉಳಿಯದಂತೆ ನೋಡಿಕೊಳ್ಳಿ. ನಿಮ್ಮಲ್ಲಿ ಕೆಲವರು ಅಪರೂಪದ ಸ್ಥಳವೊಂದಕ್ಕೆ ತೆರಳಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಚಿತ್ರಕಲೆ- ಅಭಿನಯ ಇಂಥವುಗಳಿಗೆ ಸಂಬಂಧಪಟ್ಟಂತೆ ತರಬೇತಿ ತೆಗೆದುಕೊಳ್ಳಲು ಸಂಸ್ಥೆಯೊಂದಕ್ಕೆ ಸೇರ್ಪಡೆ ಆಗುವುದಕ್ಕೆ ಅವಕಾಶ ಸಿಗಲಿದೆ. ಕ್ಯಾಟರಿಂಗ್ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ತಿಂಗಳಲ್ಲಿ ಈ ರಾಶಿಯವರಿಗೆ ಶುಭ

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವು ಇಷ್ಟು ಸಮಯ ಆಸಕ್ತಿಯಿಂದ ಮುನ್ನಡೆಸಿಕೊಂಡು ಬಂದ ಪ್ರಾಜೆಕ್ಟ್ ವೊಂದರಿಂದ ದೂರ ಉಳಿಯಬೇಕಾದ ಸನ್ನಿವೇಶ ಎದುರಾಗಲಿದೆ. ಅಥವಾ ನಿಮಗೆ ಬೇರೆ ಜವಾಬ್ದಾರಿ ವಹಿಸಿ, ಈಗ ನಿರ್ವಹಣೆ ಮಾಡುತ್ತಿರುವ ಪ್ರಾಜೆಕ್ಟ್ ನಲ್ಲಿ ತೊಡಗಿಕೊಳ್ಳಲು- ಸಮಯ ನೀಡುವುದಕ್ಕೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿಮಗೆ ಎದುರಾಗಲಿದೆ. ಧಾರವಾಹಿಗಳಲ್ಲಿ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ನೀವು ಈ ಹಿಂದೆ ಕೆಲಸ ಮಾಡಿದ್ದಿರಿ, ಅದರ ಬಾಕಿ ಬರಬೇಕಿದ್ದಲ್ಲಿ ಸ್ನೇಹಿತರೊಬ್ಬರ ನೆರವಿನಿಂದ ವಸೂಲಿ ಮಾಡಲು ಸಾಧ್ಯವಿದೆ. ಅಥವಾ ಇಂಥ ದಿನ ನಿಮಗೆ ನೀಡಬೇಕಾದ ಬಾಕಿ ಮೊತ್ತವನ್ನು ವಾಪಸ್ ನೀಡುತ್ತೇನೆ ಎಂದು ಸಂಬಂಧಪಟ್ಟವರು ಮಾತನ್ನಾದರೂ ನೀಡಬಹುದು. ವ್ಯವಹಾರದ ಕಾರಣಕ್ಕೆ ಬ್ಯಾಂಕ್ ಅಥವಾ ಖಾಸಗಿ ಲೇವಾದೇವಿ ಮಾಡುವವರಿಂದ ಸಾಲ ಪಡೆದುಕೊಳ್ಳಬೇಕಾದ ಅನಿವಾರ್ಯ ನಿಮಗೆ ಎದುರಾಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮಗೆ ನೀವೇ ಏನೇನೋ ಊಹೆ ಮಾಡಿಕೊಂಡು, ಗಾಬರಿ ಆಗುತ್ತೀರಿ. ನೆನಪಿನಲ್ಲಿಡಿ, ವಾಸ್ತವ ಏನಿದೆಯೋ ಹಾಗೂ ಏನಾಗಿದೆಯೋ ಅದನ್ನು ಮಾತ್ರ ಆಲೋಚಿಸಿ. ಡ್ರೈ ಕ್ಲೀನಿಂಗ್ ಸಲುವಾಗಿ ಈ ದಿನ ಹೆಚ್ಚಿನ ವೆಚ್ಚ ಮಾಡುವಂತೆ ಆಗಲಿದೆ. ಮನೆಯಲ್ಲಿನ ಕರ್ಟನ್ ಗಳು, ಬಟ್ಟೆ- ಬರೆಗಳು ಹೀಗೆ ಅವುಗಳ ಸ್ವಚ್ಛತೆಗೆ ಹಣವನ್ನು ಖರ್ಚು ಮಾಡಲಿದ್ದೀರಿ. ಸಾಧ್ಯವಾದಷ್ಟೂ ಪಾಸಿಟಿವ್ ಆದ ಆಲೋಚನೆ- ಚಿಂತನೆ ಮಾಡುವುದಕ್ಕೆ ಆದ್ಯತೆ ಕೊಡಿ. ಇಬ್ಬರು ಮಾಡಬೇಕಾದ ಕೆಲಸ ಒಬ್ಬರೇ ಮುಗಿಸಿ ಕೊಡಬೇಕಾದ ಪರಿಸ್ಥಿತಿ ನಿಮ್ಮಲ್ಲಿ ಕೆಲವರಿಗೆ ಬರಲಿದೆ. ಆ ಕಾರಣಕ್ಕೆ ಸಿಟ್ಟು, ಒತ್ತಡ, ಬೇಸರ ಇವೆಲ್ಲ ಕಾಡಬಹುದು. ಆದರೆ ಇದನ್ನು ಕುಟುಂಬ ಸದಸ್ಯರ ಮೇಲೋ ಅಥವಾ ಸ್ನೇಹಿತರ ಮೇಲೋ ತೋರಿಸಿಕೊಳ್ಳಬೇಡಿ. ಹತ್ತಿ ಬೆಳೆಯುವ ಕೃಷಿಕರಿಗೆ ಆದಾಯ ಮೂಲಗಳು ಜಾಸ್ತಿ ಆಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಯಲ್ಲೂ ಸಹ ತೊಡಗಿಕೊಳ್ಳಬಹುದು.

ಲೇಖನ- ಎನ್‌.ಕೆ.ಸ್ವಾತಿ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಾನವಿ ಕೇಸ್​​: ಕೋರ್ಟ್​​ ಮೆಟ್ಟಿಲೇರಿದ ಸೂರಜ್​​ ಕುಟುಂಬ; ಕಾರಣ ಇಲ್ಲಿದೆ – Kannada News | Ganavi Case: Suraj Family Moves Court for Bail Amid Suicide and Harassment Claims

ಬೆಂಗಳೂರು, ಡಿಸೆಂಬರ್​​ 29: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಗಾನವಿ ಪತಿ ಸೂರಜ್​​ ಸಹೋದರ ಮತ್ತು ತಾಯಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿದಾರರಾದ ಸಂಜಯ್ ಮತ್ತು ಜಯಂತಿ ಪರ ವಕೀಲೆ ಡಾ.ವಂದನಾ ಪಿ.ಎಲ್ ಮನವಿ ಸಲ್ಲಿಸಿದ್ದಾರೆ.

ವರನ ಕಡೆಯಿಂದಲೇ 60 ಲಕ್ಷ ವೆಚ್ಚ ಮಾಡಿ ಮದುವೆ ಮಾಡಲಾಗಿತ್ತು. ಆರಂಭದ ಹೊಂದಾಣಿಕೆ ಕೊರತೆಯಿಂದಾಗಿ ದೈಹಿಕ ಸಂಬಂಧವಿರಲಿಲ್ಲ. ಡಿ.22ಕ್ಕೆ ತವರು ಮನೆಗೆ ತೆರಳಿದ್ದ ಗಾನವಿ ಡಿ.25ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಗೆ ಸೂರಜ್​​ ಮನೆಯವರಿಂದ ಯಾವುದೇ ಕಿರುಕುಳವಾಗಿಲ್ಲ. ಮಾನಸಿಕ ವೈದ್ಯರೊಂದಿಗೆ ಸೂರಜ್ ಸಮಾಲೋಚನೆ ನಡೆಸಲಾಗಿದೆ. ಯಾವುದೇ ಮಾನಸಿಕ, ವೈದ್ಯಕೀಯ ಕಾರಣಗಳಿಲ್ಲ. ಹೀಗಿದ್ದರೂ ಅವರ ಕುಟುಂಬದ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ಅಪಮಾನ, ನಿಂದನೆ ತಡೆಯದೇ ಸೂರಜ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರ್ಟ್​​ಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಗಾನವಿ-ಸೂರಜ್ ಪ್ರಕರಣ; ಹನಿಮೂನ್‌ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ನಿನ್ನೆಯಷ್ಟೇ ಹೊಸ ಟ್ವಿಸ್ಟ್​​ ಸಿಕ್ಕಿತ್ತು. ಗಾನವಿ ಈ ಹಿಂದೆ ಹರ್ಷ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು. ಆತನನ್ನೆ ಮದುವೆಯಾಗ್ಬೇಕು ಎಂದು ನಿರ್ಧರಿಸಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಗಾನವಿ ಸೂರಜ್​​ನ ಮದುವೆಯಾಗಿದ್ದಳು. ಶ್ರೀಲಂಕಾಗೆ ಹನಿಮೂನ್​​ಗೆ ಹೋದಾಗ ಹರ್ಷ ಜೊತೆಗಿನ ಪ್ರೀತಿ ವಿಚಾರವನ್ನು ಆಕೆಯೇ ಸೂರಜ್​​ಗೆ ತಿಳಿಸಿದ್ದಳು. ಹೀಗಾಗಿಯೇ ಹನಿಮೂನ್​​ಗೆ ತೆರಳಿದ್ದ ಅವರು ಅರ್ಧಕ್ಕೇ ಬೆಂಗಳೂರಿಗೆ ಹಿಂದಿರುಗಿದ್ದರು. ನಂತರ ತವರಿಗೆ ತೆರಳಿದ್ದ ಆಕೆ ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ ಆರೋಪವನ್ನು ನಮ್ಮ ಕುಟುಂಬದ ವಿರುದ್ಧ ಹೊರಿಸಲಾಗಿದೆ ಎಂದು ಸೂರಜ್​​ ಭಾವ ರಾಜ್​​ಕುಮಾರ್​​ ವಿದ್ಯಾರಣ್ಯಪುರ ಪೊಲೀಸ್​​ ಠಾಣೆಗೆ ದೂರು ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಹುಷಾರ್: ಸಹಾಯ ಮಾಡುವ ನೆಪದಲ್ಲಿ ಹೀಗಾ ಮಾಡೋದು? – Kannada News | Haveri: Woman Robbed of 29g Gold Chain After Asking for a Ride

ಹಾವೇರಿ, ಡಿಸೆಂಬರ್​ 29: ಡ್ರಾಪ್​ ಕೇಳಿದ್ದ ಮಹಿಳೆಯ ಮೂರು ಲಕ್ಷ ಮೌಲ್ಯದ ಚಿನ್ನದ ಸರವನ್ನು (Chain Snatching) ಖದೀಮ ಎಗರಿಸಿದ ಘಟನೆ ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿರ್ಲಾಪುರ ಕ್ರಾಸ್​​​ ಬಳಿ ನಡೆದಿದೆ. ರತ್ನಾ ಬಣಕಾರ್​​ ಸರ ಕಳೆದುಕೊಂಡ ಮಹಿಳೆ. 29 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಖದೀಮ ಪರಾರಿಯಾಗಿದ್ದಾನೆ. ಕಾಗಿನೆಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ರತ್ನಾ ಬಣಕಾರ್​​ ಅವರು ಬೈಕ್​​ಗೆ ಕೈ ಮಾಡಿ ಕುಮ್ಮೂರು ಕ್ರಾಸ್​ನಿಂದ ಗುಮ್ಮನಹಳ್ಳಿವರೆಗೆ ಡ್ರಾಪ್ ಕೇಳಿದ್ದಾರೆ. ಬೈಕ್ ಸವಾರ ಹತ್ತಿಸಿಕೊಂಡಿದ್ದಾನೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿಪಲಾಪುರ ಕ್ರಾಸ್​​ ಬಳಿ ನಮ್ಮ ಸಂಬಂಧಿಕರು ಬರುತ್ತಿದ್ದಾನೆ ಅಂತಾ ರತ್ನಾ ಅವರನ್ನು ಇಳಿಸಿದ್ದಾನೆ. ಈ ವೇಳೆ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಖದೀಮ ಪರಾರಿ ಆಗಿದ್ದಾನೆ.

ಬೆಂಗಳೂರಿನಲ್ಲಿ ಸರಣಿ ಕಳ್ಳತನ

ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹುಳಿಮಾವು 80 ಅಡಿ ರಸ್ತೆಯ ಪ್ಯಾರಮೌಂಟ್ ಅಪಾರ್ಟ್ಮೆಂಟ್ ಮುಂಭಾಗದ ಮಳಿಗೆಗಳಲ್ಲಿ ಸರಣಿ ಕಳ್ಳತನ ನಡೆದಿದೆ. ತಾರಸಿ ಶೀಟ್ ಮುರಿದು ಒಳ ನುಗ್ಗಿರುವ ಕಳ್ಳ ಮೊದಲು ಎಸ್​.ಎಸ್ ಲಿಕ್ಕರ್ ಶಾಪ್​ನಲ್ಲಿ 3 ಸಾವಿರ ನಗದು ಮದ್ಯದ ಬಾಟಲಿ ಕದ್ದಿದ್ದಾರೆ.

ಇದನ್ನೂ ಓದಿ: ಗೋಲ್ಡ್ ಇಟ್ಟಿಲ್ಲ, ಲೋನ್ ಪಡೆದಿಲ್ಲ: ಮತ್ತೊಂದು ಕೆನರಾ ಬ್ಯಾಂಕಿನಿಂದ ಮಹಾ ಮೋಸ

ಕರ್ನಾಟಕ ಪ್ಲೈವುಡ್ ಮತ್ತು ಹಾರ್ಡ್ ವೇರ್ ಶಾಪ್​​ನಲ್ಲಿ 50 ಸಾವಿರ ನಗದು ಎಗರಿಸಿದ್ದಾರೆ. ಪಕ್ಕದ ಆಟೋಮೊಬೈಲ್ ಶಾಪ್​​ನಲ್ಲಿ ಹತ್ತು ಸಾವಿರ ನಗದು ಕಳವು ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಸೋಮವಾರ ಬೆಳಗ್ಗೆ ಸಿಬ್ಬಂದಿಗಳು ಮಳಿಗೆ ಬಳಿ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬಾರ್ ಮೇಲ್ವಿಚಾರಣೆ ತೆಗೆದು ಕಳ್ಳ ಒಳಗೆ ಎಂಟ್ರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಸರಣಿ ಕಳ್ಳತನ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊಟ್ಟ ಮಾತು ತಪ್ಪಿದ್ರಾ ಸಚಿವರು? ಗೃಹಲಕ್ಷ್ಮೀ ಹಣ ಖಾತೆಗೆ ಬೀಳುವುದು ಯಾವಾಗ? ಇಲ್ಲಿದೆ ಸಹಾಯವಾಣಿ – Kannada News | Karnataka government lapse delays Gruha Lakshmi scheme instalments, here Is Helpline For Money

ಬೆಂಗಳೂರು, (ಡಿಸೆಂಬರ್ 29): ರಾಜ್ಯ ಸರ್ಕಾರ(Karnataka Congress Government)  ಅತ್ಯಂತ ಜನಪ್ರಿಯ ‘ಗೃಹಲಕ್ಷ್ಮಿ’ ಯೋಜನೆಯ (gruhalakshmi scheme) ಬಾಕಿ ಕಂತಿನ ಹಣಕ್ಕಾಗಿ ಮಹಿಳೆಯರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳಿಗೆ ಇದೀಗ ತಾಂತ್ರಿಕ ವಿಘ್ನಗಳು ಎದುರಾಗಿದ್ದು, ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಗ್ರಹಣ ಹಿಡಿದಂತಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದ ಡೆಡ್​ಲೈನ್ ಮುಗಿದು ಇವತ್ತಿಗೆ ಎರಡು ದಿನಗಳಾಗಿವೆ. ಆದ್ರೆ ಗೃಹಲಕ್ಷ್ಮೀಯರ ಅಕೌಂಟ್​​ಗಳಿಗೆ ಇನ್ನೂ ಹಣ ಬಂದಿಲ್ಲ. ಸಚಿವೆಯ ತವರು ಜಿಲ್ಲೆಯಲ್ಲೇ ಮಹಿಳೆಯರು ರೊಚ್ಚಿಗೆದ್ದಿದ್ದಾರೆ.

ತಡವಾಗುತ್ತಿರುವುದಕ್ಕೆ ಗೃಹಲಕ್ಷ್ಮಿಯರು ಆಕ್ರೋಶ

ಬೆಳಗಾವಿ ಸೇರಿದಂತೆ ಕರ್ನಾಟಕದ ಗೃಹಲಕ್ಷ್ಮೀ ಯೋಜನೆಯ ಈ ಬಗ್ಗೆ ಕಿಡಿಕಾರಿದ ಮಹಿಳೆಯರು, ಫೆಬ್ರವರಿ, ಮಾರ್ಚ್ ತಿಂಗಳ ಹಣ ಕೂಡ ಹಾಕಿಲ್ಲ. ಕೆಲವರಿಗೆ 19ನೇ ಕಂತಿನ ಹಣವನ್ನ ಕೊಟ್ಟಿದ್ದಾರೆ. ಕೆಲವರಿಗೆ 22ನೇ ಕಂತಿನ ಹಣ ಮಾತ್ರ ಬಂದಿದೆ. ಕೊಡುವುದಾದ್ರೆ ಎಲ್ಲರಿಗೂ ಸಮಾನವಾಗಿ ಕೊಡಿ ಎಂದು ಆಕ್ರೋಶಗೊಂಡಿದ್ದು,ಸರ್ಕಾರವು ಆದಷ್ಟು ಬೇಗ ಬಾಕಿ ಕಂತುಗಳನ್ನು ಬಿಡುಗಡೆ ಮಾಡಿ ಹೊಸ ವರ್ಷದ ಕೊಡುಗೆ ನೀಡಲಿ ಎಂಬುದು ಲಕ್ಷಾಂತರ ಗೃಹಲಕ್ಷ್ಮಿಯರ ಒತ್ತಾಯವಾಗಿದೆ.

ಇದನ್ನೂ ನೋಡಿ: ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್ ​ ಲಕ್ಷ್ಮೀ ಬರ್ತಾಳೆ

5500 ಕೋಟಿ ರೂಪಾಯಿ ಬಾಕಿ

ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸುಮಾರು 5500 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತದ ಹಣ ಫಲಾನುಭವಿಗಳಿಗೆ ಇನ್ನೂ ಪಾವತಿಯಾಗಿಲ್ಲ. ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿಯೂ ಈ ಬಗ್ಗೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಸದನ ಮುಗಿದು ವಾರ ಕಳೆದರೂ ಹಣ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು-ನಾಳೆ ಎಂದು ಹೇಳುತ್ತಾ ಕಾಲ ತಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಸರ್ಕಾರವು ಬಾಕಿ ಹಣವನ್ನು ಪಾವತಿಸಲು ಶತಪ್ರಯತ್ನ ನಡೆಸುತ್ತಿದೆ. ಆದರೆ, ಬೃಹತ್ ಮೊತ್ತದ ಹಣದ ಹರಿವು ಮತ್ತು ತಾಂತ್ರಿಕ ಕಾರಣಗಳಿಂದಾಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದಾಗಿ ಪ್ರತಿ ತಿಂಗಳು 2000 ರೂಪಾಯಿ ನಂಬಿಕೊಂಡಿದ್ದ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಹಣಕ್ಕಾಗಿ ದಾರಿ ಕಾಯುವಂತಾಗಿದೆ.

ಪರಿಹಾರಕ್ಕೆ ಬಂತು ‘181’ ಸಹಾಯವಾಣಿ

ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಎಂದು ಮಹಿಳೆಯರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇದೀಗ ‘181’ ಸಹಾಯವಾಣಿಯನ್ನು ಆರಂಭಿಸಿದೆ. ಹೀಗಾಗಿ ಇನ್ಮುಂದೆ ಹಣ ಜಮೆಯಾಗದ ಬಗ್ಗೆ ಮಹಿಳೆಯರು ಕಚೇರಿಗೆ ಹೋಗಬೇಕಿಲ್ಲ. 181 ಕ್ಕೆ ಕರೆ ಮಾಡಿದರೆ, ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ತಾಲೂಕಿನ ಮಾಹಿತಿ ಪಡೆದು ಸಮಸ್ಯೆಗೆ ಇರುವ ಕಾರಣ ಮತ್ತು ಪರಿಹಾರದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಘೋಷಿಸಲಾದ ಗೃಹಲಕ್ಷ್ಮೀ ಗ್ಯಾರಂಟಿಗೆ ಹಲವು ಬಾರಿ ಗ್ರಹಣ ಬಡಿದಿದೆ. ಇದೀಗ ಮತ್ತೆ ಹಲವು ತಿಂಗಳ ಹಣವನ್ನೂ ನೀಡಿಲ್ಲ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link