Category Archives: Blog

Your blog category

Bengaluru Power Cut: ಬೆಂಗಳೂರಿನಲ್ಲಿ 17 ದಿನ ವಿದ್ಯುತ್ ವ್ಯತ್ಯಯ; ಯಾವಾಗ ಮತ್ತು ಎಲ್ಲೆಲ್ಲಿ? – Kannada News | Bengaluru Power Cut: 17 Day Scheduled Power Outage in the City; Check Dates, Timings, and Affected Areas

ಬೆಂಗಳೂರು, ಜನವರಿ 02: 220/66/11 ಕೆ.ವಿ ಇಪಿಐಪಿ ಸ್ಟೇಷನ್​ನಲ್ಲಿ 31.5 ಎಂವಿಎ ಶಕ್ತಿ ಪರಿವರ್ತಕ 3ರ ರಿಟ್ರೋಫಿಲ್ಲಿಂಗ್ ನಿರ್ವಹಣಾ ಕೆಲಸ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ 17 ದಿನ ವಿದ್ಯುತ್ ವ್ಯತ್ಯಯ (power outage) ಉಂಟಾಗಲಿದೆ. ಜನವರಿ 03ರಿಂದ ಜನವರಿ 19ರ ವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (bescom) ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಎಲ್​​ ಆ್ಯಂಡ್​ ಟಿ, ಆರ್​​ಎಂಝೆಡ್​ ನೆಕ್ಸ್ಟ್, ರಾಗಿಹಳ್ಳಿ, ಸಿದ್ದಾಪುರ ಗೇಟ್, ಇಪಿಐಪಿ ಲೇಔಟ್, ಟಿಸಿಎಸ್ ಸಾಫ್ಟ್​ವೇರ್, ಎಸ್​ಜೆಆರ್ ಟೆಕ್​ಪಾರ್ಕ್, ಎಂ.ಎಸ್.ವಿಎಸ್ಎನ್ಎಲ್ ಫೀಡರ್, ರಿಲಯನ್ಸ್(ಬಿಗ್ ಬಜಾರ್), ಓರಿಯಂಟಲ್ ಹೋಟೆಲ್, ಏರ್​​​ಟೆಲ್​, ಬುಷ್ರಾ ಟೆಕ್​ಪಾರ್ಕ್, ಗೋಪಾಲನ್ ಎಂಟರ್ ಪ್ರೈಸಸ್, ಸದಾ ಟೆಕ್​ಪಾರ್ಕ್, ಕ್ವಾಲ್ಕಾಮ್, ಕ್ವಾಲ್ಕಾಮ್-2, ಜಿಇ ಬಿಇ ಕಂಪನಿ, ಬಾಗ್ಮನೆ ನೀಯಾನ್ ಬ್ಲಾಕ್, ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕರಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Viral: ಪವರ್ ಕಟ್ ನೆಪ ಹೇಳಿ ಕಚೇರಿ ಕೆಲಸದಿಂದ ತಪ್ಪಿಸಿಕೊಂಡ ಉದ್ಯೋಗಿಯನ್ನು ತರಾಟೆಗೆ ತೆಗೆದುಕೊಂಡ ಮ್ಯಾನೇಜರ್

ಸುಮಾರು 17 ದಿನ ವಿದ್ಯುತ್ ವ್ಯತ್ಯಯ ಹಿನ್ನೆಲೆ ವಿದ್ಯುತ್ ಬಾಧಿತ ಪ್ರದೇಶಗಳಲ್ಲಿ ನಿವಾಸಿಗಳು, ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಜೊತೆಗೆ ವರ್ಕ್ ಫ್ರಮ್ ಹೋಮ್​​ ಮಾಡುವವರು, ಸಣ್ಣ ವ್ಯವಹಾರ ಸೇರಿದಂತೆ ವಿದ್ಯುತ್ ಉಪಕರಣಗಳನ್ನು ಅವಲಂಬಿಸಿರುವ ಜನರು ಮುಂಜಾಗ್ರತವಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಥವಾ ತಮ್ಮ ದಿನವನ್ನು ಅದಕ್ಕೆ ಅನುಗುಣವಾಗಿ ಯೋಜಿಸುವಂತೆ ಬೆಸ್ಕಾಂ ಕೋರಿದೆ.

ಬೆಂಗಳೂರಿನಲ್ಲಿ ಇಂದು ವಿದ್ಯುತ್ ಕಡಿತ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಗತ್ಯ ನಿರ್ವಹಣೆ ಮತ್ತು ನವೀಕರಣ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಇಂದು ಅಂದರೆ ಜನವರಿ 2 ರಂದು ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೋಡಿಹಳ್ಳಿ, ಮಂಜುನಾಥ ನಗರ, ಕಲ್ಕೆರೆ, ಇರಲಗೆರೆ, ಶಾಂತನಹಳ್ಳಿ, ಕೋಟನಾಯಕನಹಳ್ಳಿ, ವಾಟರ್ಸಪ್ಪೆ, ರಾಮೇನಹಳ್ಳಿ, ಆಚಾರ್ಪಾಳ್ಯ, ಬಂಡಿಹಳ್ಳಿ, ಗಾಂಧಿನಗರ, ಆದಿನಾಯಕನಹಳ್ಳಿ ಪೂರಕಗಳಿಗೆ ವಿದ್ಯುತ್​​ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: ಫುಟ್​ಪಾತ್ ಮೇಲೆಯೇ ಟ್ರಾನ್ಸ್​ಫಾರ್ಮರ್​​ಗಳ ಸ್ಥಾಪನೆ; ಜನರ ಜೀವದ ಜೊತೆ ಆಟ ಆಡುತ್ತಿದೆಯಾ ಬೆಸ್ಕಾಂ?

ತುರ್ತು ನಿರ್ವಹಣಾ ಕಾರ್ಯ ಪೂರ್ಣಗೊಳ್ಳುವವರೆಗೆ ಅಂದರೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ಒಂದೇ ವೇಳೆ ಕೆಲಸವು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮುಗಿದರೆ ವಿದ್ಯುತ್​ ಸರಬರಾಜು ಮೊದಲೇ ಪುನಃಸ್ಥಾಪನೆಯಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೊಸ ವರ್ಷದಂದು ಬಾಕ್ಸ್ ಆಫೀಸ್​ನಲ್ಲಿ ಕೋಟಿ ಕೋಟಿ ಬಾಚಿದ ‘ಮಾರ್ಕ್’ ಸಿನಿಮಾ – Kannada News | Mark Movie Box Office Collection : Huge Collection on New Year’s Day

ಸುದೀಪ್ ನಟನೆಯ (Kichcha Sudeep)‘ಮಾರ್ಕ್’ ಸಿನಿಮಾ ಹೊಸ ವರ್ಷದಂದು ಒಳ್ಳೆಯ ರೀತಿಯ ಆರಂಭ ಕಂಡಿದೆ. ಮೊದಲ ನಾಲ್ಕು ದಿನ ಅಬ್ಬರಿಸಿದ್ದ ಈ ಚಿತ್ರ ನಂತರವೂ ಉತ್ತಮ ಕಲೆಕ್ಷನ್ ಮಾಡಿತ್ತು. ಹೊಸ ವರ್ಷದ ರಜೆ ಚಿತ್ರಕ್ಕೆ ಸಹಕಾರಿ ಆಗಿದೆ. ಜನವರಿ 1ರಂದು ಸಿನಿಮಾ ಕೋಟಿ ಕೋಟಿ ರೂಪಾಯಿ ಬಾಚಿಕೊಂಡಿದೆ.ಇದು ಕಿಚ್ಚನ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಈ ವೀಕೆಂಡ್ ಕೂಡ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

‘ಮಾರ್ಕ್’ ಸಿನಿಮಾ ರಿಲೀಸ್ ಆಗಿದ್ದು ಡಿಸೆಂಬರ್ 25ರಂದು. ಈ ಚಿತ್ರ ತೆರೆಗೆ ಬಂದು 9 ದಿನ ಕಳೆದಿದೆ. ಈ ಸಿನಿಮಾ ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ತಂಡ ಹೇಳಿಕೊಂಡಿದೆ. ನಂತರದ ಕಲೆಕ್ಷನ್ ಕೂಡ ಸೇರಿದರೆ ಸಿನಿಮಾದ ಗಳಿಕೆ 50 ಕೋಟಿ ರೂಪಾಯಿ ದಾಟಿರಬಹುದು ಎಂದು ಹೇಳಲಾಗುತ್ತಾ ಇದೆ.

ಜನವರಿ ಒಂದರಂದು ಮಾರ್ಕ್ ಸಿನಿಮಾ ಸುಮಾರು 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಹೇಳಿದೆ. ಈ ಮೂಲಕ ಹೊಸ ವರ್ಷವನ್ನು ದೊಡ್ಡ ಗಳಿಕೆಯೊಂದಿಗೆ ಆರಂಭಿಸಿದಂತೆ ಆಗಿದೆ. ಸಿನಿಮಾ ಇಂದು ಸಾಧಾರಣ ಕಲೆಕ್ಷನ್ ಮಾಡಿದರೂ ವೀಕೆಂಡ್​​ನಲ್ಲಿ (ಜನವರಿ 3 ಹಾಗೂ ಜನವರಿ 4) ಸಿನಿಮಾ ಅಬ್ಬರದ ಗಳಿಕೆ ಮಾಡುವ ನಿರೀಕ್ಷೆ ಇದೆ.

ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿರುವ ಬಗ್ಗೆ ‘ಸುಪ್ರಿಯಾ ಪಿಕ್ಚರ್ ಸ್ಟುಡಿಯೋ’ ಘೋಷಣೆ ಮಾಡಿದೆ. ‘ಮೊದಲ ವಾರದ ಬ್ಲಾಕ್‌ಬಸ್ಟರ್ ಗಳಿಕೆ ನಂತರ, ಮಾರ್ಕ್ ತನ್ನ ಓಟವನ್ನು ಮುಂದುವರೆಸಿದೆ. ಅಭಿಮಾನಿಗಳು, ಪ್ರೇಕ್ಷಕರು, ಯುವಕರು ಮತ್ತು ಕುಟುಂಬಗಳಿಂದ ಭಾರಿ ಪ್ರಶಂಸೆಯನ್ನು ಗಳಿಸುತ್ತಿದೆ’ ಎಂದು ಸುಪ್ರಿಯಾ ಪಿಕ್ಚರ್ ಸ್ಟುಡಿಯೋ ಟ್ವೀಟ್ ಮಾಡಿದೆ.

ಇದನ್ನೂ ಓದಿ: ‘ಮಾರ್ಕ್’ ವೀಕ್ಷಿಸುವಾಗ ಕಿಚ್ಚನ ಎದುರೇ ಗಿಲ್ಲಿ ಗೆಲ್ಲಬೇಕು ಎಂದ ಫ್ಯಾನ್ಸ್; ಸುದೀಪ್ ರಿಯಾಕ್ಷನ್ ಏನು?

‘ಮಾರ್ಕ್’ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸುದೀಪ್ ಜೊತೆ ಯೋಗಿ ಬಾಬು, ನವೀನ್ ಚಂದ್ರ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ನಾಯಕಿಯರಿಲ್ಲ. ‘ಮ್ಯಾಕ್ಸ್’ ಶೈಲಿಯಲ್ಲೇ ಸಿನಿಮಾ ಮೂಡಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಅವರಿಗೊಂದು ನ್ಯಾಯ, ನನಗೊಂದು ನ್ಯಾಯ’; ನಿವೃತ್ತಿ ಘೋಷಿಸಿ ಸಿಡಿದ ಉಸ್ಮಾನ್ ಖವಾಜಾ – Kannada News | Usman Khawaja Retires: Australian Cricketer Blasts ‘Racial Abuse’ Allegations

ಹೊಸ ವರ್ಷದ ಮೊದಲ ದಿನವೇ ಕ್ರಿಕೆಟ್ ಲೋಕಕ್ಕೆ ದಿಗ್ಗಜ ಆಟಗಾರನೊಬ್ಬ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ (Usman Khawaja) ನಿವೃತ್ತಿ ಘೋಷಿಸಿದ್ದಾರೆ. ವಾಸ್ತವವಾಗಿ ಖವಾಜಾ ನಿವೃತ್ತಿಯ ಬಗ್ಗೆ ಬಹಳ ದಿನಗಳಿಂದಲೂ ವರದಿಗಳು ಹರಿದಾಡುತ್ತಿದ್ದವು. ಅದರಂತೆ ಈಗ ಖವಾಜಾ ಕ್ರಿಕೆಟ್​ ಬದುಕಿನಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆಶಸ್ ಸರಣಿಯ (Ashes series) ನಡುವೆ ಖವಾಜಾ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರ ಜೊತೆಗೆ ಮಾಜಿನ ಕ್ರಿಕೆಟಿಗರ ವಿರುದ್ಧ ಗಡುಗಿರುವ ಖವಾಜಾ ಜನಾಂಗೀಯ ನಿಂದನೆಯಂತಯ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಆಶಸ್ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಜನವರಿ 4 ರ ಭಾನುವಾರದಂದು ಸಿಡ್ನಿಯಲ್ಲಿ ಪ್ರಾರಂಭವಾಗಲಿದೆ. ಈ ಟೆಸ್ಟ್ ಆರಂಭಕ್ಕೆ ಇನ್ನು 2 ದಿನ ಬಾಕಿ ಇರುವಾಗ ಈ ನಿರ್ಧಾರ ಪ್ರಕಟಿಸಿರುವ ಖವಾಜಾ, ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. 2011 ರಲ್ಲಿ ಖವಾಜಾ ಯಾವ ಸ್ಥಳದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರೋ ಅದೇ ಸ್ಥಳದಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸುತ್ತಿದ್ದಾರೆ.

ಗಂಭೀರ ಆರೋಪ ಮಾಡಿದ ಖವಾಜಾ

ನಿವೃತ್ತಿ ಘೋಷಣೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖವಾಜಾ, ಆಸ್ಟ್ರೇಲಿಯಾದ ಮಾಧ್ಯಮ ಮತ್ತು ಮಾಜಿ ಕ್ರಿಕೆಟಿಗರ ವಿರುದ್ಧ ವಾಗ್ದಾಳಿ ನಡೆಸಿದರು. ‘ನನ್ನ ಇಡೀ ವೃತ್ತಿಜೀವನದಂತೆಯೇ, ಈ ಸರಣಿಯ ಸಮಯದಲ್ಲಿಯೂ ನಾನು ಜನಾಂಗೀಯ ನಿಂದನೆಗೆ ಒಳಗಾಗಬೇಕಾಯಿತು. ನನಗೆ ಬೆನ್ನು ನೋವು ಇತ್ತು (ಪರ್ತ್ ಟೆಸ್ಟ್ ಸಮಯದಲ್ಲಿ), ಅದು ನನ್ನ ನಿಯಂತ್ರಣಕ್ಕೆ ಮೀರಿತ್ತು. ಆದರೆ ಮಾಧ್ಯಮ ಮತ್ತು ಮಾಜಿ ಕ್ರಿಕೆಟಿಗರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರು. ಟೆಸ್ಟ್ ಸರಣಿಗೆ ತಯಾರಿ ನಡೆಸುವುದನ್ನು ಬಿಟ್ಟು ಗಾಲ್ಫ್ ಆಡಲು ಹೋಗಿ ಗಾಯಗೊಂಡಿದ್ದಾರೆ ಎಂದು ನನ್ನ ಮೇಲೆ ಆರೋಪ ಹೊರಿಸಿದರು. ಇದು ಒಂದೆರಡು ದಿನದ ಕಥೆಯಾಗಿದ್ದರೆ ಸರಿ ಎನ್ನಬಹುದಿತ್ತು. ಆದರೆ ಟೆಸ್ಟ್ ಪಂದ್ಯ ಮುಗಿಯುವವೆಗೂ ನನ್ನ ಮೇಲೆ ವಾಗ್ದಾಳಿ ನಡೆಸಿದರು.

ಆದರೆ ನನ್ನಂತೆಯೇ ಟೆಸ್ಟ್‌ನ ಹಿಂದಿನ ದಿನ ಗಾಲ್ಫ್ ಆಡಿದ ಮತ್ತು ಗಾಯಗೊಂಡ ಹಲವಾರು ಆಟಗಾರರಿದ್ದಾರೆ. ಆದರೆ ಅವರ ಬಗ್ಗೆ ಯಾರೂ ಏನನ್ನೂ ಮಾತನಾಡುವುದಿಲ್ಲ. ಪಂದ್ಯದ ಹಿಂದಿನ ರಾತ್ರಿ 15 ಬಿಯರ್ ಕುಡಿದು ಗಾಯಗೊಂಡ ಆಟಗಾರರೂ ಇದ್ದಾರೆ. ಆದರೆ ಅವರ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಎತ್ತಲಾಗಿಲ್ಲ. ಆದರೆ ನಾನು ಗಾಯಗೊಂಡಾಗ ಮಾತ್ರ ನನ್ನ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ ಎಂದು ಖವಾಜಾ ಆರೋಪಗಳ ಸುರಿಮಳೆಗೈದು ವಿದಾಯ ಹೇಳಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದು ಏನು?

ವಾಸ್ತವವಾಗಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ, ಫೀಲ್ಡಿಂಗ್ ಮಾಡುವಾಗ ಬೆನ್ನು ನೋವಿನಿಂದಾಗಿ ಖವಾಜಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯಕ್ಕೂ ಮೊದಲು ಅವರು ಗಾಲ್ಫ್ ಆಡಿದ್ದು ಮತ್ತು ಪಂದ್ಯಕ್ಕೆ ಸರಿಯಾಗಿ ತಯಾರಿ ನಡೆಸದೆ ಇರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದ ಮಾಜಿ ಕ್ರಿಕೆಟಿಗರು, ‘ಖವಾಜಾ ತಂಡಕ್ಕೆ ಬದ್ಧರಾಗಿಲ್ಲ, ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ, ಅವರು ಗಾಲ್ಫ್ ಆಡುತ್ತಾರೆ, ಅವರು ಸ್ವಾರ್ಥಿ, ಅವರು ಸಾಕಷ್ಟು ಅಭ್ಯಾಸ ಮಾಡುವುದಿಲ್ಲ, ಸೋಮಾರಿ ಎಂದು ದೂರಿದ್ದರು.

ಅಂತರರಾಷ್ಟ್ರೀಯ ವೃತ್ತಿಜೀವನ ಹೇಗಿತ್ತು?

ಖವಾಜಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, 39 ವರ್ಷದ ಪಾಕಿಸ್ತಾನಿ ಮೂಲದ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಸಿಡ್ನಿ ಟೆಸ್ಟ್‌ಗೆ ಮೊದಲು ಆಸ್ಟ್ರೇಲಿಯಾ ಪರ 87 ಪಂದ್ಯಗಳಲ್ಲಿ 157 ಇನ್ನಿಂಗ್ಸ್‌ಗಳಲ್ಲಿ 43 ಸರಾಸರಿಯಲ್ಲಿ 6206 ರನ್ ಗಳಿಸಿದ್ದರು. ಇದರಲ್ಲಿ 16 ಶತಕಗಳು ಮತ್ತು 28 ಅರ್ಧಶತಕಗಳು ಸೇರಿವೆ. 40 ಏಕದಿನ ಪಂದ್ಯಗಳಲ್ಲಿ, ಅವರು 2 ಶತಕಗಳು ಮತ್ತು 12 ಅರ್ಧಶತಕಗಳು ಸೇರಿದಂತೆ 1554 ರನ್ ಕಲೆಹಾಕಿದ್ದಾರೆ. ಅದೇ ರೀತಿ, ಅವರು 9 ಟಿ20ಪಂದ್ಯಗಳಲ್ಲಿ 241 ರನ್ ಬಾರಿಸಿದ್ದರು. ಪ್ರಸ್ತುತ ಆಶಸ್ ಸರಣಿಯಲ್ಲಿ ಆಡಿದ 5 ಇನ್ನಿಂಗ್ಸ್‌ಗಳಲ್ಲಿ 30.60 ಸರಾಸರಿಯಲ್ಲಿ 153 ರನ್‌ ಮಾತ್ರ ಕಲೆಹಾಕಿದ್ದು, ಇದರಲ್ಲಿ ಒಂದು ಅರ್ಧಶತಕವೂ ಸೇರಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:08 pm, Fri, 2 January 26

Source link

Optical Illusion: ನಿಮ್ಮದು ಹದ್ದಿನ ಕಣ್ಣೇ, ಈ ಚಿತ್ರದಲ್ಲಿ ಅಡಗಿರುವ ಆಮೆಗಳನ್ನು ಗುರುತಿಸಿ – Kannada News | Optical Illusion: Can you find the hidden tortoises in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ನಂತಹ (optical illusion) ಚಿತ್ರಗಳು ಒಂದು ಕ್ಷಣ ನಿಮ್ಮ ಕಣ್ಣನ್ನೇ ಮೋಸಗೊಳಿಸುತ್ತವೆ. ಹೀಗಾಗಿ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಒಗಟು ಬಿಡಿಸಲು ಸಾಧ್ಯವಾಗಲ್ಲ. ಹೆಚ್ಚಿನವರು ಇಂತಹ ಒಗಟು ಬಿಡಿಸುವಾಗ ಸೋಲುತ್ತಾರೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ಸರಳವಾಗಿ ಕಂಡರೂ ಕಠಿಣವಾಗಿದೆ. ಈ ಪ್ರಕೃತಿ ನಡುವೆ ಎಷ್ಟು ಆಮೆಗಳಿವೆ ಎಂದು ಹೇಳಬೇಕು. ಈ ಒಗಟು ಬಿಡಿಸಲು ಇರುವ ಸಮಯಾವಕಾಶ 25 ಸೆಕೆಂಡುಗಳು ಮಾತ್ರ. ಹೀಗಾಗಿ ನಿಮ್ಮ ಬುದ್ಧಿವಂತಿಕೆಗೆ ಇಲ್ಲಿದೆ ಒಂದು ಚಾಲೆಂಜ್.

ಈ ಚಿತ್ರವು ಏನು ಹೇಳುತ್ತದೆ?

ಮೆದುಳಿಗೆ ಕಸರತ್ತು ನೀಡುವ ಆಟಗಳು ಮತ್ತು ಸಂಕೀರ್ಣ ಒಗಟುಗಳನ್ನು ಪರಿಹರಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರವು ಅಷ್ಟೇ ಕಠಿಣ ಸವಾಲಿನದ್ದಾಗಿದೆ. ನೀವಿಲ್ಲಿ ಸುಂದರವಾದ ಪ್ರಕೃತಿ ದೃಶ್ಯವನ್ನು ಕಾಣಬಹುದು. ನಿಮ್ಮ ಕಣ್ಣಿಗೆ ಒಂದು ದೊಡ್ಡ ಆಮೆ ಕಾಣಿಸುತ್ತಿರಬಹುದು. ಆದರೆ ಆ ಫೋಟೋದಲ್ಲಿ ಇನ್ನಷ್ಟು ಆಮೆಗಳಿವೆ. ನೀವು ಇಲ್ಲಿ ಒಟ್ಟು ಎಷ್ಟು ಆಮೆಗಳಿವೆ ಎಂದು ಕಂಡುಹಿಡಿಯಬೇಕು. ಕಣ್ಣು ಅಗಲಿಸಿ ಪ್ರತಿಯೊಂದು ಮೂಲೆಯನ್ನು ಪರೀಕ್ಷಿಸಿ ನಿಖರವಾದ ಉತ್ತರ ಹೇಳಲು ಪ್ರಯತ್ನಿಸಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಮೊಲವನ್ನು ಕಂಡುಹಿಡಿಯಬಲ್ಲಿರಾ

ನಿಮ್ಮ ಕಣ್ಣಿಗೆ ಕಂಡ ಆಮೆಗಳೆಷ್ಟು?

ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣಿಗೆ ಕಾಣುವುದು ಒಂದು, ಆದರೆ ಅದರಲ್ಲಿ ಅಡಗಿರುವುದು ಇನ್ನೊಂದು ಆಗಿರುತ್ತದೆ. ನೀವು ಎಷ್ಟೇ ಹುಡುಕಿದರೂ ಚಿತ್ರದಲ್ಲಿರುವ ಆಮೆಗಳೆಷ್ಟು ಎನ್ನುವುದನ್ನು ಹೇಳಲು ಸಾಧ್ಯವಾಗುತ್ತಿಲ್ಲವೇ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಒಟ್ಟು 8 ಆಮೆಗಳಿವೆ. ಈ ಕೆಳಗಿನ ಚಿತ್ರದಲ್ಲಿ ಆಮೆಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಸ್ತಿಗಾಗಿ ನಿವೃತ್ತ ವಾಯುಪಡೆ ಅಧಿಕಾರಿಯನ್ನು ಕೊಂದ ಪುತ್ರರು – Kannada News | Retired Airman Killed, Sons Orchestrated Murder for Property

ಘಾಜಿಯಾಬಾದ್, ಜ.2: ನಿವೃತ್ತ ಭಾರತೀಯ ವಾಯುಪಡೆಯ (ಐಎಎಫ್) ಸಿಬ್ಬಂದಿಯೊಬ್ಬರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​​ನ (Ghaziabad) ಬಾಗ್‌ಪತ್ ಜಿಲ್ಲೆಯಲ್ಲಿ ನಡೆದಿದೆ. ಸ್ವಂತ ಮಕ್ಕಳೇ ಈ ಕೊಲೆಯನ್ನು ಮಾಡಿಸಿದ್ದಾರೆ ಎಂದು ಹೇಳಲಾಗಿದೆ. ಕೊಲೆ ಮಾಡಿದ ಐದು ದಿನದ ನಂತರ ಈ ವಿಚಾರ ತಿಳಿದಿದೆ. ಆಸ್ತಿಗಾಗಿ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಡಿಸೆಂಬರ್ 26 ರಂದು ಭಾರತೀಯ ವಾಯುಪಡೆಯ ನಿವೃತ್ತ ಸಿಬ್ಬಂದಿ ಯೋಗೇಶ್ ಕುಮಾರ್ ತಮ್ಮ ನಿವಾಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್​​​ ವರದಿಯಲ್ಲಿ ಹೇಳಲಾಗಿದೆ.

ಯೋಗೇಶ್ ಕುಮಾರ್ ಅವರ ಪುತ್​ರರು ತಂದೆಯ ಕೊಲೆಗೆ ಸುಪಾರಿ ನೀಡಿದರು ಎಂದು ಹೇಳಲಾಗಿದೆ. ಯೋಗೇಶ್ ಕುಮಾರ್ ಮನೆಗೆ ಬರುತ್ತಿದ್ದ ವೇಳೆ ಬೈಕ್​​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಎರಡು ಗುಂಡು ಹಾರಿಸಿ, ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಅವರ ಮಕ್ಕಳೇ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(1) ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ಲೋಣಿಯ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸಿದ್ಧಾರ್ಥ ಗೌತಮ್ ತಿಳಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಯೋಗೇಶ್ ತನ್ನ ಪುತ್ರರಾದ ನಿತೇಶ್ ಮತ್ತು ಗುಡ್ಡು ಮನೆಯನ್ನು ಮಾರಾಟ ಮಾಡಲು ಒತ್ತಾಯಿಸುತ್ತಿದ್ದನೆಂದು ಈ ಹಿಂದೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರು ಎಂಬ ವಿಚಾರ ಬಹಿರಂಗವಾಗಿದೆ. ಆಸ್ತಿಯ ವಿವಾದಕ್ಕೆ ಅವರನ್ನು ಕೊಲೆ ಮಾಡಿಸಿರಬಹುದು ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ. ಪೊಲೀಸರು ಹೇಳುವಂತೆ ಪುತ್ರರು ತಮ್ಮ ನೆರೆಮನೆಯ ಅರವಿಂದ್ ಕುಮಾರ್ (32) ಎಂಬಾತಿಗೆ ತಂದೆಯನ್ನು ಕೊಲೆ ಮಾಡಲು 5 ಲಕ್ಷ ರೂ. ನೀಡಿದರು. ಅರವಿಂದ್ ಕುಮಾರ್ ತನ್ನ ಸೋದರ ಮಾವ ನವೀನ್ ಜೊತೆಗೆ ಸೇರಿ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಹೊಸ ರೂಲ್ಸ್​: ಫ್ರಿಡ್ಜ್, ಟಿವಿ ಖರೀದಿಸುವ ಮುನ್ನ ಸ್ಟಾರ್ ಲೇಬಲ್ ಕಡ್ಡಾಯವಾಗಿ​​ ಗಮನಿಸಲೇಬೇಕು

ವಾಯುಪಡೆಯ ನಿವೃತ್ತ ಸಿಬ್ಬಂದಿ ಯೋಗೇಶ್ ಕುಮಾರ್ ಅವರಿಗೆ ಅವರ ಮಕ್ಕಳೇ ಮನೆ ಖಾಲಿ ಮಾಡುವಂತೆ ಅನೇಕ ಬಾರಿ ಬೆದರಿಕೆ ಹಾಕಿದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ವಿಚಾರಣೆಯ ಸಮಯದಲ್ಲಿ, ಅರವಿಂದ್ ಮತ್ತು ನವೀನ್, ಯೋಗೇಶ್ ಮೇಲೆ ಎರಡು ಗುಂಡು ಹಾರಿಸಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾರೆ ಎಂದು ಎಸಿಪಿ ಸಿದ್ಧಾರ್ಥ ಗೌತಮ್ ಹೇಳಿದ್ದಾರೆ. ಬುಧವಾರ ಸಂಜೆ ಅರವಿಂದ್ ಅವರನ್ನು ಬಂಧಿಸಿ ಗುರುವಾರ ಗಾಜಿಯಾಬಾದ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತು. ಅರವಿಂದ್ ಬಳಿಯಿಂದ ಪೊಲೀಸರು .315 ಬೋರ್ ಕಂಟ್ರಿ ನಿರ್ಮಿತ ಪಿಸ್ತೂಲ್, ಲೈವ್ ಕಾರ್ಟ್ರಿಡ್ಜ್‌ಗಳು, ಬಳಸಿದ ಕಾರ್ಟ್ರಿಡ್ಜ್‌ಗಳು, ಕೊಲೆಗೆ ಬಳಸಲಾದ ಕಬ್ಬಿಣದ ಪೈಪ್ ಮತ್ತು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಅರವಿಂದ್ ಕೊಲೆ, ಶಸ್ತ್ರಾಸ್ತ್ರ ಕಾಯ್ದೆ, ದರೋಡೆಕೋರ ಕಾಯ್ದೆ ಮತ್ತು ವಂಚನೆಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ದೀರ್ಘ ಅಪರಾಧ ಇತಿಹಾಸವನ್ನು ಹೊಂದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೃದ್ಧಾಶ್ರಮ ಸೇರಿದ್ದ ವ್ಯಕ್ತಿಯನ್ನ ಮರಳಿ ಕುಟುಂಬಕ್ಕೆ ಸೇರಿಸಿದ ಇನ್ಸ್ಟಾಗ್ರಾಮ್​​ ಪೋಸ್ಟ್​​! – Kannada News | Instagram Post Unites Lost Elderly Man with Family in Chamarajanagar

ಚಾಮರಾಜನಗರ, ಜನವರಿ 02: ಇತ್ತೀಚೆಗೆ ಸೈಬರ್ ಬೆದರಿಕೆ, ನಕಲಿ ಸುದ್ದಿ ಹರಡುವಿಕೆಯಂತಕ ಪ್ರಕರಣಗಳಿಂದಲೇ ಸುದ್ದಿಯಾಗುತ್ತಿರುವ ಸಾಮಾಜಿಕ ಜಾಲತಾಣವೇ ವೃದ್ಧರೋರ್ವರ ಪಾಲಿಗೆ ಬದುಕಿನ ಆಶಾಕಿರಣವೆಂಬಂತೆ ಸಹಾಯ ಮಾಡಿದೆ. ದೂರದ ಮಧ್ಯಪ್ರದೇಶದಿಂದ ಕೆಲಸಕ್ಕಾಗಿ ಚಾಮರಾಜನಗರಕ್ಕೆ ಬಂದಿದ್ದ ವ್ಯಕ್ತಿ ಅಚಾನಕ್ಕಾಗಿ ಜೊತೆಗಾರರ ಸಂಪರ್ಕ ಕಳೆದುಕೊಂಡಿದ್ದರು. ಭಾಷೆ ಬರದೆ, ಊರಿನ ವಿಳಾಸ ಗೊತ್ತಿರದೆ ಸಂಕಷ್ಟಕ್ಕೆ ಸಿಲುಕಿದ್ದ ಇವರನ್ನ ಇನ್ಸ್ಟಾಗ್ರಾಮ್​​ನಒಂದೇ ಒಂದು​​ ಪೋಸ್ಟ್​​ ಮರಳಿ ಮನೆಗೆ ಸೇರಿಸಿದೆ.

ಹೌದು, ಕೆಲಸ ಅರಸಿಕೊಂಡು ಉತ್ತರ ಭಾರತದ ರಾಜ್ಯಗಳ ಜನರು ಕರ್ನಾಟಕ್ಕೆ ಬರೋದು ಇತ್ತೀಚೆಗೆ ಮಾಮೂಲು. ಅದರಂತೆಯೇ ಚಾಮರಾಜನಗರ ಜಿಲ್ಲೆಯ ಯಳಂದೂರಿಗೆ ಮಧ್ಯಪ್ರದೇಶದಿಂದ ಕೆಲ ಕುಟುಂಬಗಳು ಬಂದಿದ್ದವು. ಇವರ ಜೊತೆಗೆ ಪ್ರೀತಂ ಸಿಂಗ್ ಎಂಬ 60 ವರ್ಷದ ವೃದ್ಧ ವ್ಯಕ್ತಿ ಕೂಡ ಬಂದಿದ್ದರು. ಈ ನಡುವೆ ಅದೇಗೋ ಅಚಾನಕ್ಕಾಗಿ ಪ್ರೀತಂ ಅವರಿಗೆ ಗ್ರಾಮದವರ ಸಂಪರ್ಕ ಕಡಿತವಾಗಿದೆ. ಮನೆಯವರ ಫೋನ್​ ನಂಬರ್ ಕೂಡ ಇಲ್ಲದೆ, ವಿಳಾಸ ತಿಳಿಯದೆ, ಕನಿಷ್ಠ ಇಲ್ಲಿನ ಭಾಷೆಯೂ ಬರದೆ ಪ್ರೀತಂ ಸಿಂಗ್​​ ಪರದಾಟ ನಡೆಸುತ್ತಿದ್ದರು. ಹೀಗಾಗಿ ಇವರನ್ನು ಯಳಂದೂರು ಪೊಲೀಸರು ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ಸೇರಿಸಿದ್ದರು.

ಇದನ್ನೂ ಓದಿ: ಕನ್ಯಾಕುಮಾರಿ ಟು ಕಾಶ್ಮೀರಕ್ಕೆ ಯುವತಿಯ ಬೈಕ್ ರೈಡ್! ವಯಸ್ಸಾದ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸದಿರಲು ಮನವಿ

ಆ ಬೆನ್ನಲ್ಲೇ ಪ್ರೀತಂ ಸಿಂಗ್​ರ ಕುಟುಂಬದ ಪತ್ತೆಗೆ ಪ್ರಯತ್ನ ಆರಂಭವಾಗಿದ್ದು, ವೃದ್ಧಾಶ್ರಮದ ಸಿಬ್ಬಂದಿ ಇನ್ಸ್ಟಾಗ್ರಾಮ್​​ನ ಹಲವು ಗ್ರೂಪ್​​ಗಳಿಗೆ ಇವರ ಬಗ್ಗೆ ವಿಡಿಯೋ ಹಾಕಿದ್ದರು. ಅದರಂತೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಗ್ರೂಪ್​​ ಒಂದಕ್ಕೂ ಅದನ್ನು ಶೇರ್​​ ಮಾಡಿದ್ದರು. ಈ ವಿಡಿಯೋ ಪ್ರೀತಂ ಸಿಂಗ್​​ ಅವರ ಕುಟುಂಬಸ್ಥರಿಗೂ ತಲುಪಿದ್ದು, ವೃದ್ಧಾಶ್ರಮದಲ್ಲಿ ತಂದೆ ಇರುವಿಕೆ ಗೊತ್ತಾಗಿ ಅವರ ಪುತ್ರ ರಾಜೇಶ್ ಸಿಂಗ್ ಚಾಮರಾಜನಗರಕ್ಕೆ ಬಂದಿದ್ದಾರೆ. ಆ ಮೂಲಕ ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ವೃದ್ಧ ಮತ್ತೆ ಕುಟುಂಬ ಸೇರಲು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್​​ ನೆರವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಳ್ಳಾರಿಯಲ್ಲಿ ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ – Kannada News | Congress Worker Shot Dead in Ballari, CM Siddaramaiah Reacts for the First Time, Here’s What He Said

ಬಳ್ಳಾರಿ, ಜನವರಿ 2: ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ನಡೆದ ಬ್ಯಾನರ್ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಗುಂಡೇಟಿಗೆ ಬಲಿಯಾದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಘಟನೆಯಲ್ಲಿ ಬಳಕೆಯಾದ ಬುಲೆಟ್‌ನ ಮೂಲದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ ಎಂದುನ ಅವರು ಹೇಳಿದ್ದಾರೆ. “ಯಾರ ಗನ್‌ನಿಂದ ಬುಲೆಟ್ ಬಂದಿದೆ ಎಂಬುದು ಗೊತ್ತಾಗಬೇಕು. ಅದು ಬಿಜೆಪಿ ಅವರ ಗನ್‌ನಿಂದ ಬಂದಿದೆಯಾ? ಇಲ್ಲ ಕಾಂಗ್ರೆಸ್‌ನವರ ಗನ್‌ನಿಂದ ಬಂದಿದೆಯಾ?” ಎಂದು ಪತ್ತೆಹಚ್ಚಬೇಕಿದೆ ಎಂದು ಸಿಎಂ ಹೇಳಿದ್ದಾರೆ.

ಬಳ್ಳಾರಿ ಪೊಲೀಸ್ ವರಿಷ್ಠರು ಖಾಸಗಿ ಬುಲೆಟ್ ಎಂದು ಮಾಹಿತಿ ನೀಡಿದ್ದಾರೆ. ಸತೀಶ್ ರೆಡ್ಡಿ ಅವರು ತಮ್ಮ ಭದ್ರತೆಗಾಗಿ ಗನ್ ಇಟ್ಟುಕೊಂಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ರಾಜಶೇಖರ್ ರೆಡ್ಡಿ ಅವರಿಗೆ ತಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ರಾಜಶೇಖರ್ ರೆಡ್ಡಿ ಅವರ ಸಾವಿಗೆ ಕಾರಣವಾದ ಬುಲೆಟ್ ಮತ್ತು ಗನ್‌ನ ಮೂಲದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂರು ಮಕ್ಕಳ ತಾಯಿ ಜತೆ ಲವ್ವಿಡವ್ವಿ: ರಾತ್ರಿ ಭೇಟಿಗೆ ಹೋಗಿದ್ದಾಗ ನಡೀತು ಮಾರಣಾಂತಿಕ ಹಲ್ಲೆ – Kannada News | Love Affair with Mother of Three Turns Violent: Man Brutally Assaulted While Heading for Night Meet in Chikkodi, Belagavi

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಕ್ಷಯ್

ಬೆಳಗಾವಿ, ಜನವರಿ 2: ಮೂರು ಮಕ್ಕಳ ತಾಯಿ ಜತೆ ನಾಲ್ಕು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಯುವಕನ ಮೇಲೆ ಮಹಿಳೆಯ ಪತಿ ಹಾಗೂ ಆತನ ಸಹೋರ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. ಕರೋಶಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಕ್ಸಂಬಾ ಪಟ್ಟಣದ ಅಕ್ಷಯ ಕಲ್ಲಟಗಿ ಎಂಬ ಯುವಕ ನಾಲ್ಕು ವರ್ಷಗಳಿಂದ ವಿವಾಹಿತ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದುತ್ತಿದ್ದ ಆರೋಪ ಅಕ್ಷಯ ಮೇಲೆ ಇದೆ.

ರಾತ್ರಿ ಬಾ ಎಂದು ಕರೆದಿದ್ದ ಮಹಿಳೆ: ನಂಬಿ ಹೋದವನಿಗೆ ಬಿತ್ತು ಗೂಸಾ

ರಾತ್ರಿ ಭೇಟಿಯಾಗಲು ಬಾ ಎಂದು ಅಕ್ಷಯ್​ಗೆ ಮಹಿಳೆಯೇ ಕರೆ ಮಾಡಿ ಹೇಳಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಅದರಂತೆ ಅಕ್ಷಯ್ ಆಕೆಯ ಭೇಟಿಯಾಗಲು ತೆರಳಿದ್ದಾರೆ. ಈ ವೇಳೆ, ಅಕ್ಷಯನನ್ನು ದಾರಿ ಮಧ್ಯೆ ತಡೆದ ಮಹಿಳೆಯ ಗಂಡ ಹಾಗೂ ಆಕೆಯ ಸಹೋದರ ಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಿಗ್ಗಾಮುಗ್ಗಾ ಹಲ್ಲೆ ನಡೆದಿದ್ದರಿಂದ ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಇದನ್ನೂ ಓದಿ: ಹಿಂಡಲಗಾ ಜೈಲಿನ ಒಳಗೆ ಮೊಬೈಲ್, ಡ್ರಗ್ಸ್! ಸಿಬ್ಬಂದಿಯೇ ಅಕ್ರಮದಲ್ಲಿ ಶಾಮೀಲು?

ತೀವ್ರವಾಗಿ ಗಾಯಗೊಂಡ ಅಕ್ಷಯನನ್ನು ತಕ್ಷಣ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಂದಿಗೆ ರೀಮೇಕ್ ಆಗುತ್ತಿದೆ ವಿಜಯ್-ರಶ್ಮಿಕಾ ಸಿನಿಮಾ: ನಟರು ಯಾರು? – Kannada News | Vijay Rashmika’s Dear comrade movie remake in Hindi

ಪ್ಯಾನ್ ಇಂಡಿಯಾ (Pan India) ಸಿನಿಮಾಗಳು ಬಂದ ಮೇಲೆ ರೀಮೇಕ್ ಸಂಸ್ಕೃತಿ ಬಹಳ ಕಡಿಮೆ ಆಗಿದೆ. ಮೊದಲೆಲ್ಲ ದಕ್ಷಿಣದಲ್ಲಿ ಹಿಟ್ ಆದ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ ಕೋಟಿಗಳಲ್ಲಿ ಬಾಚಿಕೊಳ್ಳುತ್ತಿದ್ದರು ಅಲ್ಲಿಯ ನಿರ್ದೇಶಕರು. ಹಿಂದಿಯಲ್ಲಿ ಹಿಟ್ ಆದ ಸಿನಿಮಾಗಳು ದಕ್ಷಿಣದ ಭಾಷೆಗೂ ಬರುತ್ತಿದ್ದವು. ಈಗದು ಕಡಿಮೆ ಆಗಿದೆ. ಆದರೆ ಈಗ ತುಸು ಹಳೆಯ ದಕ್ಷಿಣದ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಅದರಲ್ಲೂ ನಿರ್ಮಾಪಕ ಕರಣ್ ಜೋಹರ್ ಒಂದರ ಹಿಂದೊಂದು ಇಂಥಹಾ ಸಾಹಸ ಮಾಡುತ್ತಿದ್ದಾರೆ. ಇದೀಗ ತೆಲುಗಿನ ಸಾಧಾರಣ ಹಿಟ್ ಸಿನಿಮಾ ಒಂದನ್ನು ಹಿಂದಿಯಲ್ಲಿ ಮರು ನಿರ್ಮಾಣ ಮಾಡಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ನಟಿಸಿದ್ದ ಎರಡನೇ ಸಿನಿಮಾ ‘ಡಿಯರ್ ಕಾಮ್ರೆಡ್’. ಈ ಸಿನಿಮಾ 2019 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಚೆನ್ನಾಗಿಯೇ ಇತ್ತಾದರೂ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಗೆಲುವು ಕಾಣಲಿಲ್ಲ. ಆಗಿನ ಕಾಲಕ್ಕೆ ಈ ಸಿನಿಮಾ 33 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ ಸಿನಿಮಾದ ವಿಷಯ, ಕೆಲವು ದೃಶ್ಯಗಳು ಬಹಳ ಪರಿಣಾಮಕಾರಿಯಾಗಿತ್ತು. ಇಂದಿಗೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಕೆಲ ದೃಶ್ಯಗಳು ಹರಿದಾಡುತ್ತಿರುತ್ತವೆ. ಇದೀಗ ಈ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ.

ಕರಣ್ ಜೋಹರ್ ಅವರು ‘ಡಿಯರ್ ಕಾಮ್ರೆಡ್’ ಸಿನಿಮಾದ ರೀಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಅವರೇ ಹಿಂದಿಯಲ್ಲಿ ಸಿನಿಮಾವನ್ನು ಮರು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಪಾತ್ರದಲ್ಲಿ ಯುವ ನಟ ಸಿದ್ಧಾಂತ್ ಚತುರ್ವೇಧಿ ನಟಿಸುತ್ತಿದ್ದಾರೆ. ನಾಯಕಿಯಾಗಿ ನಟಿಸುತ್ತಿರುವುದು ಪ್ರತಿಭಾ ರಂತಾ. ಸೂಪರ್ ಹಿಟ್ ಸಿನಿಮಾ ‘ಲಾಪತಾ ಲೇಡೀಸ್​’ನಲ್ಲಿ ಪ್ರತಿಭಾ ಅವರು ಫುಷ್ಪಾ ರಾಣಿ ಪಾತ್ರದಲ್ಲಿ ನಟಿಸಿದ್ದರು. ಇದು ಅವರ ಮೂರನೇ ಸಿನಿಮಾ ಆಗಿರಲಿದೆ.

ಇದನ್ನೂ ಓದಿ:ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಯಾವಾಗ? ಎಲ್ಲಿ?

‘ಡಿಯರ್ ಕಾಮ್ರೆಡ್’ ಸಿನಿಮಾ, ಕ್ರಿಕೆಟ್ ಆಟಗಾರ್ತಿ ಹಾಗೂ ಆಕೆಯ ಬಾಯ್​ಫ್ರೆಂಡ್ ಕುರಿತ ಕತೆಯನ್ನು ಒಳಗೊಂಡಿದೆ. ಲೈಂಗಿಕ ದೌರ್ಜನ್ಯದ ವಿರುದ್ಧ ಬಾಯ್​​ಫ್ರೆಂಡ್ ಜೊತೆಗೂಡಿ ಕ್ರಿಕೆಟ್ ಆಟಗಾರ್ತಿ ಹೋರಾಡುವ ಕತೆಯನ್ನು ‘ಡಿಯರ್ ಕಾಮ್ರೆಡ್’ ಒಳಗೊಂಡಿತ್ತು. ಹಿಂದಿಯಲ್ಲಿ ಇದೀಗ ಇದೇ ಸಿನಿಮಾವನ್ನು ಕೆಲ ಬದಲಾವಣೆಗಳೊಂದಿಗೆ ತೆರೆಗೆ ತರಲಾಗುತ್ತದೆಯಂತೆ.

ಕೆಲ ತಿಂಗಳ ಹಿಂದೆ ಆಗಸ್ಟ್ ನಲ್ಲಿ ಕರಣ್ ಜೋಹರ್ ನಿರ್ಮಾಣದ ‘ದಡಕ್ 2’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾ ತಮಿಳಿನ ‘ಪರಿಯೇರುಮ್ ಪೆರುಮಾಳ್’ ಸಿನಿಮಾದ ರೀಮೇಕ್ ಆಗಿತ್ತು. ಆ ಸಿನಿಮಾನಲ್ಲಿಯೂ ಸಿದ್ಧಾಂತ್ ಚತುರ್ವೇಧಿ ನಾಯಕನಾಗಿ ನಟಿಸಿದ್ದರು. ಇದೀಗ ಸಿದ್ಧಾಂತ್ ಮತ್ತೊಂದು ರೀಮೇಕ್​​ನಲ್ಲಿ ನಟಿಸಲು ಮುಂದಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Iran Protests: ‘ಮುಲ್ಲಾಗಳೇ ದೇಶಬಿಟ್ಟು ತೊಲಗಿ’- ಇರಾನ್​ನಲ್ಲಿ ಜನಘೋಷ; ತೀವ್ರ ಪ್ರತಿಭಟನೆಯಲ್ಲಿ 7 ಬಲಿ – Kannada News | Iran sees massive protests across the country, people show anger on Mullahs

ಟೆಹರಾನ್, ಜನವರಿ 2: ಇರಾನ್ ದೇಶದಲ್ಲಿ ಸರ್ಕಾರದ ವಿರುದ್ಧ ಜನಾಕ್ರೋಶ (Iran people protest) ಹೆಚ್ಚುತ್ತಿದೆ. ಭಾನುವಾರ ಶುರುವಾದ ಪ್ರತಿಭಟನೆಗಳಲ್ಲಿ ಬಲಿಯಾದವರ ಸಂಖ್ಯೆ ಏಳು ದಾಟಿದೆ. ಆರ್ಥಿಕ ಸಂಕಷ್ಟ ಮತ್ತು ಹಣದುಬ್ಬರದಿಂದ ಜರ್ಝರಿತವಾಗಿರುವ ದೇಶದ ಈ ಹೀನಾಯ ಸ್ಥಿತಿಗೆ ಸರ್ಕಾರವನ್ನು ಹೊಣೆಯಾಗಿಸಿ, ಇರಾನ್​ನಲ್ಲಿ ಜನರು ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತೀವ್ರಗೊಳ್ಳುತ್ತಿದೆ.

ಹತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಇರಾನ್​ನ ವರ್ತಕರು, ಅಂಗಡಿ ಮಾಲೀಕರೂ ಕೂಡ ಜೊತೆಯಾಗಿದ್ಧಾರೆ. ಅನೇಕ ನಗರಗಳಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಬಂದ್ ಮಾಡಿವೆ.

ಮುಲ್ಲಾಗಳು ದೇಶ ಬಿಟ್ಟು ಹೋಗುವವರೆಗೂ ಉದ್ದಾರ ಆಗಲ್ಲ…

ಇರಾನ್​ನ ಹಲವು ನಗರಗಳಲ್ಲಿ ಜನರು ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹಲವೆಡೆ ಇಸ್ಲಾಮಿಕ್ ರಿಪಬ್ಲಿಕ್​ನ ಧ್ವಜಗಳನ್ನು ಸುಡಲಾಗುತ್ತಿದೆ. ‘ಮುಲ್ಲಾ ಮರೆಯಾಗುವವರೆಗೂ ಈ ನೆಲ ಮುಕ್ತವಾಗುವುದಿಲ್ಲ’ ಎನ್ನುವಂತಹ ಘೋಷವಾಕ್ಯಗಳು ಕೇಳಿಬರುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ: ದೇಶದ್ರೋಹ ಆರೋಪಿ ಉಮರ್ ಖಾಲೀದ್​ಗೆ ನ್ಯೂಯಾರ್ಕ್ ಮೇಯರ್ ಕಾಳಜಿ ಪತ್ರ; 8 ಅಮೆರಿಕನ್ ಜನಪ್ರತಿನಿಧಿಗಳಿಂದಲೂ ಬೆಂಬಲ

‘ಮುಲ್ಲಾಗಳು ಇರಾನ್​ನಿಂದ ತೊಲಗಬೇಕು’; ‘ನಿರಂಕುಶ ಪ್ರಭುತ್ವಕ್ಕೆ ಸಾವಾಗಲಿ’ ಎಂಬಿತ್ಯಾದಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗುತ್ತಿದ್ದಾರೆ ಎಂದು ಪತ್ರಕರ್ತೆ ಮಸಿಹ್ ಅಲಿನೇಜಾದ್ ಅವರು ಟ್ವೀಟ್ ಮಾಡಿದ್ದಾರೆ. ಈಕೆಯ ಪ್ರಕಾರ, ಜನರು ತಮ್ಮ ದೇಶ ಇಸ್ಲಾಮಿಕ್ ರಿಪಬ್ಲಿಕ್ ಆಗಿ ಉಳಿಯಬಾರದು ಎಂದು ಬಯಸುತ್ತಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿ ಇರಾನ್

ಪರಮಾಣು ಶಸ್ತ್ರ ವಿಚಾರವಾಗಿ ಅಮೆರಿಕ ದೇಶವು ಇರಾನ್ ಮೇಲೆ ಕಟ್ಟುನಿಟ್ಟಾದ ಆರ್ಥಿಕ ನಿಷೇಧ ಹಾಕಿದೆ. ದೀರ್ಘಕಾಲದಿಂದ ನಿಷೇಧ ಇರುವ ಕಾರಣ ಇರಾನ್ ದೇಶದ ಆರ್ಥಿಕತೆ ಬಹಳ ಹೀನಾಯ ಪರಿಸ್ಥಿತಿಯಲ್ಲಿದೆ. ಇಲ್ಲಿ ಬೆಲೆ ಏರಿಕೆ ಅಥವಾ ಹಣದುಬ್ಬರ ಶೇ. 52ರಷ್ಟಿದೆ. ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ.

ಇದನ್ನೂ ಓದಿ: ಸ್ವಿಜರ್ಲೆಂಡ್​ ಬಾರ್​​ನಲ್ಲಿ ಬೆಂಕಿ ಅವಘಡ; ಸಾವಿನ ಸಂಖ್ಯೆ 40ಕ್ಕೆ ಏರಿಕೆ

ಇರಾನ್​ನ ರಿಯಾಲ್ ಕರೆನ್ಸಿ ತೀರಾ ಮೌಲ್ಯ ಕಳೆದುಕೊಂಡಿದೆ. ಒಂದು ಡಾಲರ್​ಗೆ 14 ಲಕ್ಷ ರಿಯಾಲ್ ಬೆಲೆ ಇದೆ. ಒಂದು ರುಪಾಯಿಗೆ ಸುಮಾರು 14,000 ರಿಯಾಲ್ ಆಗಬಹುದು. ಈ ಕಾರಣಕ್ಕೂ ಇರಾನ್​ನಲ್ಲಿ ಹಣದುಬ್ಬರ ಬಹಳ ಉಚ್ಚ ಮಟ್ಟದಲ್ಲಿದೆ. ಇರಾನ್​ನಲ್ಲಿ ಅಡಳಿತ ವಿರೋಧಿ ಅಲೆ ಏಳಲು ಇವು ಪ್ರಮುಖ ಕಾರಣಗಳಾಗಿವೆ. ಹಾಗೆಯೇ, ಇರಾನ್​ನಲ್ಲಿ ಇಸ್ಲಾಮ್ ಮೂಲಭೂತವಾದದ ವಿರುದ್ಧವೂ ಜನರು ಬಂಡಾಯ ಏಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link