Category Archives: Blog

Your blog category

ಕೊನೆಯ ಸಿನಿಮಾ: ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಿದ ವಿಜಯ್ – Kannada News | Thalapathy Vijay emotional speech at Jana Nayagan movie event

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆ (ಡಿಸೆಂಬರ್ 27) ಮಲೇಷ್ಯಾನಲ್ಲಿ ಬಲು ಅದ್ಧೂರಿಯಾಗಿ ನಡೆದಿದೆ. ರಾಜಕೀಯ ಪಕ್ಷ ಸ್ಥಾಪಿಸಿರುವ ವಿಜಯ್ ಅವರು, ‘ಜನ ನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮವೂ ಸಹ ಒಂದು ರೀತಿ ವಿಜಯ್ ಅವರಿಗೆ ಚಿತ್ರರಂಗದಿಂದ ವಿದಾಯ ಕೊಡುವಂತೆಯೇ ಇತ್ತು. ತಮಿಳಿನ ಖ್ಯಾತ ಯುವ ನಿರ್ದೇಶಕರುಗಳಾದ ಅಟ್ಲಿ, ಲೋಕೇಶ್ ಕನಗರಾಜ್ ಇನ್ನೂ ಕೆಲವರು ಕಾರ್ಯಕ್ರಮದಲ್ಲಿ ಹಾಜರಿದ್ದು, ವಿಜಯ್ ಅವರನ್ನು ಕೊಂಡಾಡಿದರು. ಕೊನೆಯಲ್ಲಿ ವಿಜಯ್ ಸಹ ತುಸು ಭಾವುಕವಾಗಿಯೇ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.

‘ಜನ ನಾಯಗನ್ ನನ್ನ ಕೊನೆಯ ಸಿನಿಮಾ, ಇದನ್ನು ಹೇಳುವುದೇ ನನಗೆ ಸ್ವಲ್ಪ ಕಷ್ಟವಾಗುತ್ತಿದೆ. ಆದರೆ ಬೇರೆ ಆಯ್ಕೆ ಇಲ್ಲ’ ಎಂದಿದ್ದಾರೆ ವಿಜಯ್. ‘ಅಭಿಮಾನಿಗಳು ಕೇಳುತ್ತಿದ್ದಾರೆ, ನೀವೇಕೆ ಸಿನಿಮಾ ಬಿಟ್ಟು ಹೋಗುತ್ತಿದ್ದೀರಿ ಎಂದು, ನಾನು ಬೀಚ್ ಬದಿ ಸಣ್ಣ ಮನೆ ಕಟ್ಟಿಕೊಳ್ಳೋಣ ಎಂದುಕೊಂಡೆ, ಆದರೆ ಅಭಿಮಾನಿಗಳು ದೊಡ್ಡ ಕೋಟೆಯನ್ನೇ ಕಟ್ಟಿಕೊಟ್ಟಿದ್ದೀರಿ. ನಾನು ನಟನೆಗೆ ಬಂದಾಗಿನಿಂದ ಈಗಿನ ವರೆಗೂ ಅಭಿಮಾನಿಗಳು ನನ್ನ ಜೊತೆಗೆ ಇದ್ದೀರಿ, ನನಗೆ ಬೆಂಬಲಿಸಿದ್ದೀರಿ, ನನಗೆ ಬೇಕಾದ ಎಲ್ಲವನ್ನೂ ನೀಡಿದ್ದೀರಿ, ಆದರೆ ಮುಂದಿನ ನನ್ನ ಜೀವನದ 30 ವರ್ಷಗಳನ್ನು ನಾನು ಅಭಿಮಾನಿಗಳಿಗಾಗಿ ಕಳೆಯಬೇಕು ಎಂದುಕೊಂಡಿದ್ದೀನಿ’ ಎಂದರು ವಿಜಯ್.

‘ನನಗಾಗಿ ತಮ್ಮ ಎಲ್ಲವನ್ನೂ ಕೊಟ್ಟಿರುವ ಅಭಿಮಾನಿಗಳಿಗಾಗಿ ನಾನು ನನ್ನ ಪ್ರೀತಿಯ ಸಿನಿಮಾವನ್ನು ಬಿಟ್ಟುಕೊಡುತ್ತಿದ್ದೀನಿ. ಈ ವಿಜಯ್ ಕೇವಲ ಒಳ್ಳೆಯದು ಹೇಳಲು ಬಂದವನಲ್ಲ. ಒಳ್ಳೆಯತನವನ್ನು ಸ್ಥಾಪಿಸಲು ಬಂದವ. ಇದು ನನ್ನ ಕೊನೆಯ ಸಿನಿಮಾ ಆಗಿರಬಹುದು, ಆದರೆ ಇದರ ಅಂತ್ಯದ ಬಳಿಕ ಹೊಸ ಅಧ್ಯಾಯವೇ ಆರಂಭ ಆಗಲಿದೆ’ ಎಂದಿದ್ದಾರೆ ದಳಪತಿ ವಿಜಯ್.

ಇದನ್ನೂ ಓದಿ:‘ಜನ ನಾಯಗನ್ ಬಳಿಕ ಸಿನಿಮಾ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್

‘ಜನ ನಾಯಗನ್’ ಸಿನಿಮಾ ತಂಡದ ಬಗ್ಗೆ ಮಾತನಾಡಿರುವ ವಿಜಯ್, ‘ಅನಿರುದ್ಧ್ ರವಿಚಂದ್ರನ್ ‘ಮ್ಯೂಸಿಕ್ ಡಿಪಾರ್ಟ್​​ಮೆಂಟ್ ಸ್ಟೋರ್’ ಅವರು ಎಂದಿಗೂ ನಿರಾಶೆ ಮಾಡಿದ್ದೇ ಇಲ್ಲ. ಇನ್ನು ನಿರ್ದೇಶಕ ಎಚ್ ವಿನೋದ್, ಕಮರ್ಶಿಯಲ್ ಸಿನಿಮಾನಲ್ಲಿಯೂ ಸಂದೇಶ ನೀಡುತ್ತಾರೆ’ ಎಂದಿದ್ದಾರೆ. ಸಿನಿಮಾದ ನಾಯಕಿ ಪೂಜಾ ಬಗ್ಗೆ ಮಾತನಾಡಿ, ‘ಪೂಜಾ ತಮಿಳು ಚಿತ್ರರಂಗದ ಮೋನಿಕಾ ಬೆಳ್ಳುಚಿ, ಅವರ ನಟನೆ, ಡ್ಯಾನ್ಸು, ಅಂದಕ್ಕೆ ಸರಿಸಾಟಿ ಇಲ್ಲ’ ಎಂದಿದ್ದಾರೆ. ಇನ್ನೊಬ್ಬ ನಟಿ ಮಮಿತಾ ಬಗ್ಗೆ ಮಾತನಾಡಿ, ‘ಮಮಿತಾ ಡ್ಯೂಡ್ ಮೂಲಕ ಯುವಕರನ್ನು ಚಿತ್ರಮಂದಿರಕ್ಕೆ ಸೆಳೆದಿದ್ದರು, ಈಗ ಈ ಸಿನಿಮಾ ಮೂಲಕ ಕುಟುಂಬವನ್ನು ಸೆಳೆಯಲಿದ್ದಾರೆ. ಇನ್ನು ಪ್ರಕಾಶ್ ರೈ ಹಾಗೂ ನನ್ನ ಕಾಂಬಿನೇಷನ್ ದಶಕಗಳಿಂದಲೂ ಚೆನ್ನಾಗಿದೆ. ಒಳ್ಳೆಯ ಗೆಳೆಯರಿಗಿಂತಲೂ ಒಳ್ಳೆಯ ಎದುರಾಳಿಗಳು ಬಹಳ ಮುಖ್ಯ’ ಎಂದಿದ್ದಾರೆ.

ಮಲೇಷ್ಯಾ ಬಗ್ಗೆಯೂ ಮಾತನಾಡಿದ ವಿಜಯ್, ‘ಮಲೇಷ್ಯಾ, ತಮಿಳು ಚಿತ್ರರಂಗದ ಪಾಲಿಗೆ ಬಹಳ ಮುಖ್ಯವಾದ ಮಾರುಕಟ್ಟೆ ಆಗಿದೆ. ಮಲೇಷ್ಯಾ ಎಂದೊಡನೆ, ನನ್ನ ಗೆಳೆಯ ಅಜಿತ್ ನಟಿಸಿರುವ ‘ಬಿಲ್ಲಾ’, ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ನೆನಪಾಗುತ್ತವೆ. ನನ್ನ ಕೊನೆಯ ಸಿನಿಮಾದ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ನನ್ನ ಪಾಲಿಗೆ ವಿಶೇಷವಾದುದು’ ಎಂದಿದ್ದಾರೆ.

‘ಶೀಘ್ರವೇ ಅಭಿಮಾನಿಗಳ ಮುಂದೆ ಸಿನಿಮಾ ಬರಲಿದೆ. ಈ ಬಾರಿ ಒಂಟಿಯಾಗಿ ಬರಲಿದ್ದೇವಾ? ಜಂಟಿಯಾಗಿ ಬರಲಿದ್ದೇವ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆ ಕುತೂಹಲ ಹಾಗೆಯೇ ಇರಲಿ ಎಂದಿರುವ ವಿಜಯ್, ಇಷ್ಟು ವರ್ಷ ಒಂಟಿಯಾಗಿಯೇ ಹೋರಾಡಿದ್ದೇವೆ’ ಎಂದೂ ಸಹ ಹೇಳಿದ್ದಾರೆ. ‘ಜನ ನಾಯಗನ್’ ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಂಚ ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ ಕನ್ನಡದ ‘ಕರಿಕಾಡ’ ಸಿನಿಮಾ – Kannada News | Karikaada Kannada movie releasing on 6 February 2025 in 5 languages

ಟೀಸರ್ ಮೂಲಕ ‘ಕರಿಕಾಡ’ ಸಿನಿಮಾ (Karikada Movie) ಗಮನ ಸೆಳೆದಿದೆ. ಈಗ ಈ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. 2026ರ ಫೆಬ್ರವರಿ 6ಕ್ಕೆ ಸಿನಿಮಾ ತೆರೆಕಾಣಿಸಲು ಚಿತ್ರತಂಡ ರೆಡಿಯಾಗಿದೆ. ಪಂಚಭಾಷೆಯಲ್ಲಿ ಬಿಡುಗಡೆ ಆಗಲಿದೆ. ಇದೊಂದು ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಟೀಸರ್ ನೋಡಿದ ಬಳಿಕ ಪ್ರೇಕ್ಷಕರಿಗೆ ಈ ಸಿನಿಮಾ ಮೇಲೆ ಭರವಸೆ ಹುಟ್ಟಿದೆ. ಆ್ಯಕ್ಷನ್, ಲವ್ ಸ್ಟೋರಿ, ಅದ್ದೂರಿ ಮೇಕಿಂಗ್, ಪ್ರತಿಭಾವಂತ ಕಲಾವಿದರ ಬಳಗ, ಹಿನ್ನೆಲೆ ಸಂಗೀತ ಸೇರಿದಂತೆ ಹಲವು ಅಂಶಗಳು ‘ಕರಿಕಾಡ’ (Karikada) ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ.

‘ಕರಿಕಾಡ’ ಸಿನಿಮಾದಲ್ಲಿ ಕಾಡ ನಟರಾಜ್ ಅವರು ಹೀರೋ ಆಗಿ ಅಭಿನಯಿಸಿದ್ದಾರೆ. ಬಲರಾಜವಾಡಿ, ಯಶ್ ಶೆಟ್ಟಿ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ನಿರೀಕ್ಷಾ ಶೆಟ್ಟಿ ಅವರು ನಾಯಕಿಯಾಗಿದ್ದಾರೆ. ಮಂಜು ಸ್ವಾಮಿ, ದಿವಾಕರ್, ಗೋವಿಂದೇ ಗೌಡ, ಕಾಮಿಡಿ ಕಿಲಾಡಿ ಸೂರ್ಯ, ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಕರಿಸುಬ್ಬು, ಚಂದ್ರಪ್ರಭ , ಗಿರಿ, ಆರ್ಯನ್, ರಿದ್ಧಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

‘ರಿದ್ಧಿ ಎಂಟರ್ಟೈನ್ಮೆಂಟ್ಸ್’ ಮೂಲಕ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ಅವರು ನಿರ್ಮಾಣ ಮಾಡಿದ್ದಾರೆ. ಸ್ನೇಹಿತರಾದ ರವಿಕುಮಾರ್ ಎಸ್.ಆರ್. ಕೂಡ ನಿರ್ಮಾಣದ ಸಾಥ್ ನೀಡಿದ್ದಾರೆ. ಈ ಸಿನಿಮಾವನ್ನ ಗಿಲ್ಲಿ ವೆಂಕಟೇಶ್ ಅವರು ನಿರ್ದೇಶಿಸಿದ್ದಾರೆ. ಕಾಡ ನಟರಾಜ ಅವರೇ ಕಥೆ ಬರೆದಿದ್ದಾರೆ. ಅತೀಶಯ್ ಜೈನ್ ಮತ್ತು ಶಶಾಂಕ್ ಶೇಷಾಗಿರಿ ಅವರು ಸಂಗೀತ ನೀಡಿದ್ದಾರೆ.

ಶಶಾಂಕ್ ಶೇಷಾಗರಿ ಅವರು ಹಾಡುಗಳಿಗೆ ಸಂಗೀತ ನೀಡುವುದರ ಜೊತೆ ಹಿನ್ನಲೆ ಸಂಗೀತ ಕೂಡ ನೀಡಿದ್ದಾರೆ. ಜೀವನ್ ಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ. ದೀಪಕ್ ಸಿ.ಎಸ್. ಅವರ ಸಂಕಲನ ಈ ಸಿನಿಮಾಗಿದೆ. ‘ಕರಿಕಾಡ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ಬಳಿಕ ಪರಭಾಷೆ ಮಂದಿ ಕೂಡ ಈ ಚಿತ್ರದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ: ಎಲಿಜಬೆತ್ ಪಾತ್ರದಲ್ಲಿ ಹುಮಾ ಖುರೇಷಿ; ಫಸ್ಟ್ ಲುಕ್ ರಿಲೀಸ್

ಕನ್ನಡದ ಪ್ರತಿಭೆಗಳು ಮಾಡಿರುವ ಈ ಸಿನಿಮಾವನ್ನು ನೋಡಿ ಬಾಲಿವುಡ್ ಫಿಲ್ಮ್ ಟ್ರೇಡರ್ಸ್ ಹಿಂದಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಫೆಬ್ರವರಿ 6ರಂದು ಸಿನಿಮಾ ಬಿಡುಗಡೆ ಆಗಲಿದೆ. ವಿಶ್ವಾದ್ಯಂತ 1200ಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಗೆ ಮಾಡುವ ತಯಾರಿ ನಡೆಯುತ್ತಿದೆ. ಕರ್ನಾಟಕದ ಜೊತೆ ಹಿಂದಿ ಮಾರ್ಕೆಟ್​ನಲ್ಲಿ ಅದ್ದೂರಿಯಾಗಿ ರಿಲೀಸ್ ಮಾಡಲು ಚಿತ್ರತಂಡದ ಪ್ಲ್ಯಾನ್ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳಗಾವಿ ಉತ್ಸವದಲ್ಲಿ ಡಾಲಿ ಮಾಸ್ ಡೈಲಾಗ್; ಅಭಿಮಾನಿಗಳ ಖುಷಿ ನೋಡಿ.. – Kannada News | Kannada actor Daali Dhananjaya speech in Belagavi Utsava

ನಟ ಡಾಲಿ ಧನಂಜಯ್ ಅವರು ಬೆಳಗಾವಿ ಉತ್ಸವಕ್ಕೆ (Belagavi Utsava) ತೆರಳಿದ್ದಾರೆ. ಅವರು ವೇದಿಕೆಯಲ್ಲಿ ಮಾತನಾಡಿದ ವಿಡಿಯೋ ಇಲ್ಲಿದೆ. ಸಿನಿಮಾದ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ‘ಈ ಜನಸಾಗರ ನೋಡಿ ಬಹಳ ಖುಷಿ ಆಯಿತು. ಪ್ರತಿ ಬಾರಿ ಇಲ್ಲಿಗೆ ಬಂದಿದ್ದೇನೆ. ಆದರೆ ಈ ಬಾರಿ ಸೇರಿದ್ದಷ್ಟು ಜನರನ್ನು ನಾನು ನೋಡಿಲ್ಲ. ಬಹಳ ಚೆನ್ನಾಗಿ ಆಯೋಜನೆ ಮಾಡಿದ್ದಾರೆ. ಎಲ್ಲರೂ ಸೇರಿ ಪ್ರೀತಿಯಿಂದ ಮಾಡಿದಾಗ ಎಷ್ಟು ಖುಷಿಯಿಂದ ಜನರು ಸೇರುತ್ತಾರೆ ಎಂಬುದಕ್ಕೆ ಬೆಸ್ಟ್ ಉದಾಹರಣೆ ಇದು. ಬೆಳಗಾವಿಯಲ್ಲಿ ಕನ್ನಡದ ಉತ್ಸವಕ್ಕೆ ಇಷ್ಟು ಜನರು ಸೇರಿರುವುದು ಬಹಳ ಖುಷಿ’ ಎಂದು ಡಾಲಿ ಧನಂಜಯ (Daali Dhananjaya) ಅವರು ಹೇಳಿದರು. ಅಲ್ಲದೇ ‘ಸುಬ್ಬಿ ಅಂಕಲ್​​ನ ಹೊಡಿತೀನಿ ಸುಬ್ಬಿ’ ಎನ್ನುವ ಡೈಲಾಗ್ ಹೇಳಿದಾಗ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿಕ್ಕೋಡಿ: ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ! – Kannada News | Raibag Horror: Grandfather Makes Minor Drink Alcohol

ಚಿಕ್ಕೋಡಿ, ಡಿಸೆಂಬರ್​​ 28: ಮದ್ಯ ಸೇವಿಸಲು ಬಾರ್​​​ಗೆ ಸ್ನೇಹಿತರು,ಸಂಬಂಧಿಕರನ್ನು ಕರೆದುಕೊಂಡು ಹೋಗೋದನ್ನ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ ಬೆಳಗಾವಿಯಲ್ಲೊಬ್ಬ ಪಾಪಿ ಅಜ್ಜ ಮೊಮ್ಮಗನ ಬಾರ್​​ಗೆ ಕರೆದುಕೊಂಡು ಹೋಗಿದ್ದಲ್ಲದೆ ಆತನಿಗೆ ಎಣ್ಣೆ ಕುಡಿಸಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಾರ್​​ ಒಂದರಲ್ಲಿ ಘಟನೆ ನಡೆದಿದ್ದು, ಅಲ್ಲಿದ್ದವರ ವಿರೋಧದ ನಡುವೆಯೂ ಅಜ್ಜ ಚಿಕ್ಕ ಹುಡುಗನಿಗೆ ಕುಡಿಯಲು ಮದ್ಯ ನೀಡಿದ್ದಾನೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದೆಲ್ಲೆಡೆ ಚಳಿಯ ಅಬ್ಬರ, ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ – Kannada News | Bengaluru temperature:Dry weather all over karnataka, misty weather in bengaluru

ರಾಜ್ಯದೆಲ್ಲೆಡೆ ಚಳಿಯ ಅಬ್ಬರ, ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ

ಬೆಂಗಳೂರು, ಡಿಸೆಂಬರ್ 28: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶೀತದಲೆಯ ಪ್ರಭಾವ ಹೆಚ್ಚಿದ್ದು, ಕಳೆದ ಹಲವು ತಿಂಗಳಿಂದ ಎಲ್ಲೆಡೆ ಒಣ ಹವೆಯ (Weather Forecast) ವಾತಾವರಣವಿದೆ. ಇಂದೂ ಸಹ ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯ ದಟ್ಟ ಮಂಜು ಕಾಣಿಸಿಕೊಲ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಮಂಜು

ಇಂದು ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಎಲ್ಲೆಲ್ಲಿ ಒಣ ಹವೆ

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್ – Kannada News | Laura Harris equals fastest fifty record in women’s T20s

ಮಹಿಳಾ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಲಾರಾ ಹ್ಯಾರಿಸ್ ಪಾಲಾಗಿದೆ. ನ್ಯೂಝಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ ಮಹಿಳಾ ಟಿ20 ಟೂರ್ನಿಯಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಲಾರಾ ಈ ದಾಖಲೆ ಬರೆದಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಮೇರಿ ಕೆಲ್ಲಿ ಹೆಸರಿನಲ್ಲಿತ್ತು. 2022 ರಲ್ಲಿ ಗ್ಲೌಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲಿ ವಾರ್ವಿಕ್‌ಷೈರ್ ಪರ ಕಣಕ್ಕಿಳಿದಿದ್ದ ಕೇವಲ 15 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಸರಿಗಟ್ಟುವ ಮೂಲಕ ಆಸ್ಟ್ರೇಲಿಯನ್ ಆಟಗಾರ್ತಿ ಲಾರಾ ಹ್ಯಾರಿಸ್ ಅಗ್ರಸ್ಥಾನಕ್ಕೇರಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಯಾಂಟರ್ಬರಿ ಮಹಿಳಾ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 145 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಒಟಾಗೊ ಮಹಿಳಾ ತಂಡದ ಪರ 17 ಎಸೆತಗಳನ್ನು ಎದುರಿಸಿದ ಲಾರಾ ಹ್ಯಾರಿಸ್ 4 ಭರ್ಜರಿ ಸಿಕ್ಸರ್ ಹಾಗೂ 6 ಫೋರ್​ಗಳೊಂದಿಗೆ 52 ರನ್ ಸಿಡಿಸಿದರು.

ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಮೂಲಕ ಒಟಾಗೊ ಮಹಿಳಾ ತಂಡ 14.5 ಓವರ್​ಗಳಲ್ಲಿ 146 ರನ್ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

 

Source link

Video: ಬೆಂಗಳೂರು ಜೀವನ ಇಷ್ಟೊಂದು ದುಬಾರಿ ಏಕೆ? ಎಂದು ಪ್ರಶ್ನಿಸಿದ ಮಹಿಳೆ – Kannada News | Woman says life in Bengaluru is difficult, video goes viral

ಬೆಂಗಳೂರು, ಡಿಸೆಂಬರ್ 28: ಈಗಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಕೂಡ ಕಡಿಮೆಯೇ. ತಿಂಗಳ ಪ್ರಾರಂಭದಲ್ಲಿ ಕೈ ತುಂಬಾ ಸಂಬಳ ಬಂದ್ರೂ ತಿಂಗಳ ಕೊನೆಯಲ್ಲಿ ಕೈಯಲ್ಲಿದ್ದ ದುಡ್ಡೆಲ್ಲಾ ಖಾಲಿ. ಅದಲ್ಲದೇ ಅಲ್ಪ ಸ್ವಲ್ಪ ಸಂಬಳದಲ್ಲಿ ದಿನನಿತ್ಯ ವೆಚ್ಚಗಳನ್ನು ತೂಗಿಸಿಕೊಂಡು ಹೋಗುವುದು ಹೇಳುವಷ್ಟು ಸುಲಭವಲ್ಲ. ಎಲ್ಲಾ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿದೆ. ಬೆಂಗಳೂರಿನಲ್ಲಿ (Bengaluru) 500 ರೂ 50ಕ್ಕೆ ಸಮಾನ ಎಂದೇನಿಸುತ್ತಿದೆ ಎಂದು ಮಹಿಳೆಯೊಬ್ಬರು ಹೇಳಿದ್ದು, ಖರ್ಚು ವೆಚ್ಚಗಳು ಹೆಚ್ಚಾಗುತ್ತಿದೆ ಎಂದಿರುವ ವಿಡಿಯೋ ಚರ್ಚೆಗೆ ಕಾರಣವಾಗಿದೆ.

ದೀಪಾ ಗುಪ್ತಾ (its.me.dipaaa) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ದೀಪಾ ಗುಪ್ತಾ ಎಂಬ ಮಹಿಳೆ ಬೆಂಗಳೂರಿನಲ್ಲಿ ಹಣ ಎಷ್ಟು ಬೇಗನೆ ಖಾಲಿಯಾಗುತ್ತದೆ. ಸಣ್ಣ ಪ್ರವಾಸಗಳು ಸಹ ದುಬಾರಿಯಾಗಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ 500 ರೂ 50 ರೂಪಾಯಿಗಳಂತೆ ಭಾಸವಾಗುವುದು ಏಕೆ. ನಾನು 500 ರೂಪಾಯಿಗಳನ್ನು ಖರ್ಚು ಮಾಡುತ್ತೇನೆ. ನಾನು 50 ರೂಪಾಯಿ ಖರ್ಚು ಮಾಡುತ್ತಿರುವಂತೆ ಭಾಸವಾಗುತ್ತದೆ. ನೀವು ಮನೆಯಿಂದ ಹೊರಗಡೆ ಹೊರಟರೆ ನಿಮ್ಮ ಕೈಯಲ್ಲಿರುವ  500 ರೂ ಯಾವುದಕ್ಕೂ ಸಾಕಾಗಲ್ಲ. ನೀವು 50 ರೂಪಾಯಿಗೆ ತಿನ್ನುತ್ತಿದ್ದೀರಿ ಎಂದು ನೀವು ಭಾವಿಸುತ್ತೀರಿ, ಆದರೆ ನೀವು ನಿಜವಾಗಿಯೂ ಖರ್ಚು ಮಾಡುತ್ತಿರುವುದು 500 ರೂಪಾಯಿಗಳನ್ನು. ಈ ನಗರ ಯಾಕೆ ಇಷ್ಟೊಂದು ದುಬಾರಿ ಎಂದು ಮಹಿಳೆ ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ದೆಹಲಿಗಿಂತ ಬೆಂಗಳೂರು ಬೆಸ್ಟ್, ಈ ನಗರವನ್ನೇ ರಾಷ್ಟ್ರ ರಾಜಧಾನಿ ಮಾಡಿ ಎಂದ ಯುವತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನನಗೂ ಹೀಗೆ ಅನಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದು ನನಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಇಸ್ಲಾಮಿಕ್ ವಿದ್ವಾಂಸ ಮುಫ್ತಿ – Kannada News | Islamic Scholor Mufti Shamail Nadwi Questions Court Authority Over Shariah in Fresh Remarks

ಇಸ್ಲಾಮಾಬಾದ್, ಡಿಸೆಂಬರ್ 28: ಅಲ್ಲಾನ ನಿರ್ಧಾರವೇ ಅಂತಿಮ ಎಂದು ಇಸ್ಲಾಮಿಕ್ ವಿದ್ವಾಂಸ ಮುಫ್ತಿ ಶಮೈಲ್ ನಡ್ವಿ ಹೇಳಿದ್ದಾರೆ. ನಮ್ಮ ತಾಯ್ನಾಡು ಧರ್ಮಕ್ಕಿಂತ ಪವಿತ್ರ, ಜಾತ್ಯತೀತ ವ್ಯವಸ್ಥೆಯನ್ನು ನಮಗಿಂತ ಪವಿತ್ರವೆಂದು ನಾವು ಭಾವಿಸಿದ್ದೇವೆ. ಬೇರೆ ನ್ಯಾಯಾಲಯವು ಯಾವುದೇ ನಿರ್ಧಾರ ತೆಗೆದುಕೊಂಡರೂ,ಮ ಶರಿಯಾ ವಿರುದ್ಧ ಆದೇಶ ನೀಡಿದರೂ ಅದನ್ನು ಅನುಮತಿಸಲಾಗುವುದಿಲ್ಲ, ಅಲ್ಲಾನ ನಿರ್ಧಾರವೇ ಅಂತಿ ಎಂದು ಆತ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಪಾಕಿಸ್ತಾನ್ ತಂಡದಿಂದ ಮತ್ತೆ ಹೊರಬಿದ್ದ ಬಾಬರ್ ಆಝಂ – Kannada News | Pakistan announced T20I squad for series against sri lanka

ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಬಾಬರ್​ ಆಝಂ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಂದರೆ ಕಳೆದೊಂದು ವರ್ಷದಿಂದ ಪಾಕ್ ಟಿ20 ತಂಡದಿಂದ ಹೊರಗುಳಿದಿದ್ದ ಬಾಬರ್ ಆಝಂ ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಮೂಲಕ ಕಂಬ್ಯಾಕ್ ಮಾಡಿದ್ದರು. ಇದೀಗ ಟಿ20 ವಿಶ್ವಕಪ್​ಗೂ ಮುನ್ನ ನಡೆಯಲಿರುವ ಸರಣಿಯಿಂದ ಬಾಬರ್ ಆಝಂ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಇತ್ತ ಬಾಬರ್ ಆಝಂ ಅವರನ್ನು ತಂಡದಿಂದ ಹೊರಗಿಡಲು ಮುಖ್ಯ ಕಾರಣ ಅವರು ಬಿಗ್ ಬ್ಯಾಷ್ ಲೀಗ್ ಆಡುತ್ತಿರುವುದು ಎನ್ನಲಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಬಿಎಲ್​ನಲ್ಲಿ ಬಾಬರ್ ಸಿಡ್ನಿ ಸಿಕ್ಸರ್ ಪರ ಕಣಕ್ಕಿಳಿಯುತ್ತಿದ್ದು, ಹೀಗಾಗಿ ಅವರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎಂದು ಹೇಳಲಾಗಿದೆ.

ಆದರೆ ಅದೇ ಬಿಗ್ ಬ್ಯಾಷ್ ಲೀಗ್​ನಲ್ಲಿ ಕಣಕ್ಕಿಳಿಯುತ್ತಿದ್ದ ಶಾದಾಬ್ ಖಾನ್ ಪಾಕಿಸ್ತಾನ್ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿಯೇ ಪಾಕ್ ಟಿ20 ತಂಡದಿಂದ ಬಾಬರ್ ಆಝಂ ಮತ್ತೆ ಹೊರಬಿದ್ದರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಪಾಕಿಸ್ತಾನ್-ಶ್ರೀಲಂಕಾ ಸರಣಿ ಯಾವಾಗ ಶುರು?

ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಜನವರಿ 7 ರಿಂದ ಶುರುವಾಗಲಿದೆ. ಈ ಸರಣಿಯ ಎಲ್ಲಾ ಮೂರು ಟಿ20 ಪಂದ್ಯಗಳು ದಂಬುಲ್ಲಾದಲ್ಲಿ ನಡೆಯಲಿವೆ . ಮೊದಲ ಪಂದ್ಯ ಜನವರಿ 7 ರಂದು, ಎರಡನೇ ಪಂದ್ಯ ಜನವರಿ 9 ರಂದು ಮತ್ತು ಮೂರನೇ ಪಂದ್ಯ ಜನವರಿ 11 ರಂದು ನಡೆಯಲಿದೆ. ಈ ಸರಣಿಯ ಬಳಿಕ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್​ಗೆ ಸಜ್ಜಾಗಲಿದೆ. 

ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ಪಾಕಿಸ್ತಾನ್ ತಂಡವು ಭಾರತ, ನಮೀಬಿಯಾ , ನೆದರ್‌ಲೆಂಡ್ಸ್​ ಮತ್ತು ಯುನೈಟೆಡ್ ಸ್ಟೇಟ್ಸ್ ಅಮೆರಿಕ ಂಡಗಳನ್ನು ಎದುರಿಸಲಿದೆ. ಇದೀಗ ಪಾಕ್ ತಂಡದಲ್ಲಿ ಸ್ಥಾನ ಪಡೆದಿರುವ ಬಹುತೇಕ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲೂ ಕಾಣಿಸಿಕೊಳ್ಳುವುದು ಖಚಿತ.

ಇದನ್ನೂ ಓದಿ: ಅಬ್ಬರ ಸಿಡಿಲಬ್ಬರ… ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಕೀರನ್ ಪೊಲಾರ್ಡ್

ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ದುಲ್ ಸಮದ್ , ಅಬ್ರಾರ್ ಅಹ್ಮದ್ , ಫಹೀಮ್ ಅಶ್ರಫ್ , ಫಖರ್ ಝಮಾನ್ , ಖ್ವಾಜಾ ನಫೆ, ಮೊಹಮ್ಮದ್ ನವಾಝ್ , ಮೊಹಮ್ಮದ್ ಸಲ್ಮಾನ್ ಮಿರ್ಝ, ಮೊಹಮ್ಮದ್ ವಾಸಿಂ ಜೂನಿಯರ್ , ನಸೀಮ್ ಶಾ, ಸಾಹಿಬ್​ಝಾದ ಫರ್ಹಾನ್ , ಉಸ್ಮಾನ್ ತಾರಿಖ್, ಸೈಮ್ ಅಯೂಬ್ , ಶಾದಾಬ್ ಖಾನ್, ಉಸ್ಮಾನ್ ಖಾನ್.

Published On – 1:18 pm, Sun, 28 December 25

Source link

ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ – Kannada News | Muslim Family Fosters Interfaith Harmony by Serving Ayyappa Devotees in Kavital

ರಾಯಚೂರು, ಡಿಸೆಂಬರ್ 28: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿ ಕರೀಂ ಸಾಬ್ ಕುಟುಂಬ ಕೋಮು ಸೌಹಾರ್ದತೆಗೆ ಮಾದರಿಯಾಗಿದೆ. ಈ ಮುಸ್ಲಿಂ ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡುತ್ತಿದ್ದು, ಮಾಲಾಧಾರಿಗಳ ವಿಧಿವಿಧಾನ ಮತ್ತು ಸಂಪ್ರದಾಯದಂತೆ ಭೋಜನವನ್ನು ಸಿದ್ಧಪಡಿಸಲಾಗುತ್ತಿದೆ. ಕರೀಂ ಸಾಬ್ ಕುಟುಂಬವು ಯಾವುದೇ ಧರ್ಮದ ಕಾರ್ಯಕ್ರಮವಿರಲಿ, ಅದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವುದಾಗಿ ತಿಳಿಸಿದೆ. ಸುಮಾರು 35ಕ್ಕೂ ಹೆಚ್ಚು ಮಾಲಾಧಾರಿಗಳು ಈ ಭೋಜನ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದು, ಇವರ ಸೇವೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link