Category Archives: Blog

Your blog category

Rakkasapuradhol Review: ರಾಜ್ ಬಿ. ಶೆಟ್ಟಿ ಅಭಿಮಾನಿಗಳಿಗೆ ‘ರಕ್ಕಸಪುರದೋಳ್’ ಮನರಂಜನೆಯ ಪ್ಯಾಕೇಜ್ – Kannada News | Rakkasapuradhol Movie Review: Raj B Shetty new film is a complete entertainer package

‘ರಕ್ಕಸಪುರದೋಳ್’ (Rakkasapuradhol) ಎಂಬ ಶೀರ್ಷಿಕೆ ಕೇಳಿದರೆ ಇದು ಕ್ರೈಂ ಥ್ರಿಲ್ಲರ್ ಕಥೆ ಎಂಬುದು ತಿಳಿಯುತ್ತದೆ. ಆದರೆ ಅಷ್ಟು ಮಾತ್ರವಲ್ಲ, ಈ ಕಥೆಯೊಳಗೆ ಇನ್ನೂ ಹಲವು ಅಂಶಗಳು ಇವೆ. ರಾಜ್ ಬಿ. ಶೆಟ್ಟಿ (Raj B Shetty) ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಗೆ ರವಿ ಸಾರಂಗ ಆ್ಯಕ್ಷನ್-ಕಟ್ ಹೇಳಿದ್ದಾರೆ. ರವಿವರ್ಮಾ ನಿರ್ಮಾಣದ ಈ ಸಿನಿಮಾ ಫೆ.6ರಂದು ಬಿಡುಗಡೆ ಆಗಿದ್ದು, ಗಟ್ಟಿಯಾದ ಕಥೆ ಮತ್ತು ಉತ್ತಮವಾದ ಮೇಕಿಂಗ್​​ನಿಂದ ಗಮನ ಸೆಳೆಯುತ್ತಿದೆ. ‘ರಕ್ಕಸಪುರದೋಳ್’ ಚಿತ್ರದ ವಿಮರ್ಶೆ (Rakkasapuradhol Review) ಇಲ್ಲಿದೆ..

ರಾಜ್ ಬಿ. ಶೆಟ್ಟಿ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಾರೆ. ಎಲ್ಲ ರೀತಿಯ ಪ್ರಯೋಗಕ್ಕೂ ಅವರು ಒಗ್ಗಿಕೊಳ್ಳುತ್ತಾರೆ. ‘ರಕ್ಕಸಪುರದೋಳ್’ ಸಿನಿಮಾದಲ್ಲಿ ಅವರು ಪೊಲೀಸ್ ಇನ್ಸ್​ಪೆಕ್ಟರ್ ಪಾತ್ರ ಮಾಡಿದ್ದಾರೆ. ಈ ಪೊಲೀಸ್ ಪಾತ್ರ ಸ್ವಲ್ಪ ಡಿಫರೆಂಟ್ ಆಗಿದೆ. ಮಾನಸಿಕ ಸಮಸ್ಯೆ ಹೊಂದಿರುವ ಆತನನ್ನು ರಕ್ಕಸಪುರ ಎಂಬ ಊರಿಗೆ ಕಳಿಸಲಾಗುತ್ತದೆ. ಆತ ಕಾಲಿಟ್ಟ ನಂತರವೇ ಆ ಊರಿನಲ್ಲಿ ಸರಣಿ ಕೊಲೆ ಸಂಭವಿಸುತ್ತವೆ.

ಆ ಸಾವುಗಳಿಗೂ, ಕಥಾನಾಯಕನಿಗೂ ಏನಾದರೂ ಸಂಬಂಧ ಇದೆಯಾ ಎಂಬ ಅನುಮಾನ ಆರಂಭದಲ್ಲೇ ಮೂಡುತ್ತದೆ. ನಂತರ ಅನುಮಾನದ ದೃಷ್ಟಿ ಬೇರೆ ಬೇರೆ ಪಾತ್ರಗಳ ಮೇಲೆ ಬೀಳುತ್ತದೆ. ಇದರ ನಡುವೆ ದೆವ್ವ ಭೂತದ ಕಾಟ ಕೂಡ ಶುರುವಾಗತ್ತದೆ. ಈ ಕೊಲೆಗಳಿಗೆ ಕಾರಣ ಆಗಿರುವುದು ಮನುಷ್ಯನಾ ಅಥವಾ ದೆವ್ವನಾ ಎಂಬ ಪ್ರಶ್ನೆ ಮೂಡುತ್ತದೆ. ಪ್ರೇಕ್ಷಕರು ಪ್ರತಿ ದೃಶ್ಯವನ್ನೂ ಭಾರಿ ಕುತೂಹಲದಿಂದ ನೋಡುವಂತಾಗುತ್ತದೆ. ಕೊಲೆಗಳ ರಹಸ್ಯ ಏನು ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

‘ರಕ್ಕಸಪುರದೋಳ್’ ಸಿನಿಮಾದಲ್ಲಿ ಟ್ವಿಸ್ಟ್​​ಗಳಿಗೆ ಬರವೇ ಇಲ್ಲ. ಪ್ರತಿ ಹಂತದಲ್ಲೂ ಒಂದೊಂದು ಟ್ವಿಸ್ಟ್ ಎದುರಾಗುತ್ತದೆ. ಅದರಲ್ಲೂ, ದ್ವಿತೀಯಾರ್ಧದಲ್ಲಿ ಪ್ರೇಕ್ಷಕರು ಊಹಿಸದ ಅನೇಕ ಸಂಗತಿಗಳು ಎದುರಾಗುತ್ತವೆ. ಮೂಢನಂಬಿಕೆ ಮತ್ತು ವಿಜ್ಞಾನದ ವಿಚಾರಗಳನ್ನು ಕಥೆಯಲ್ಲಿ ಹೇಳಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಕಾಮಿಡಿ ಮುಂತಾದ ಅಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಅಚ್ಚುಕಟ್ಟಾದ ಸಿನಿಮಾ ಮಾಡಲಾಗಿದೆ.

ನಿರ್ದೇಶಕ ರವಿ ಸಾರಂಗ ಅವರು ಗಟ್ಟಿಯಾದ ಕಥೆ ಮತ್ತು ಬಿಗಿಯಾದ ಚಿತ್ರಕಥೆಯನ್ನು ಹೆಣೆದುಕೊಳ್ಳುವ ಮೂಲಕ ಮೊದಲ ಹಂತದಲ್ಲೇ ಗೆದ್ದಿದ್ದಾರೆ. ಅದನ್ನು ಅಷ್ಟೇ ಉತ್ತಮವಾಗಿ ತೆರೆಗೆ ತರಲಾಗಿದೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಅವರ ಸಂಗೀತದಿಂದಾಗಿ ಸಿನಿಮಾಗೆ ದೊಡ್ಡ ಬಲ ಬಂದಂತೆ ಆಗಿದೆ. ಹಿನ್ನೆಲೆ ಸಂಗೀತದಲ್ಲಿ ಅರ್ಜುನ್ ಜನ್ಯ ಹೆಚ್ಚು ಇಷ್ಟ ಆಗುತ್ತಾರೆ.

ಈ ಚಿತ್ರದಲ್ಲಿ ಹಲವು ಪಾತ್ರಗಳಿವೆ ಎಲ್ಲ ಪಾತ್ರಗಳಿಗೆ ಸ್ಕೋಪ್ ಇದೆ. ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಬಿ. ಸುರೇಶ, ಜಹಾಂಗೀರ್, ಅನಿರುದ್ಧ್ ಭಟ್, ಗೋಪಾಲ್ ದೇಶಪಾಂಡೆ ಮುಂತಾದವರು ಮಾಡಿರುವ ಪಾತ್ರಗಳು ಗಮನ ಸೆಳೆದಿವೆ. ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ಕುತೂಹಲದಲ್ಲೇ ಇಡೀ ಸಿನಿಮಾ ನೋಡಿಸಿಕೊಳ್ಳುತ್ತದೆ. ರಾಜ್ ಬಿ. ಶೆಟ್ಟಿ ಅವರ ವೃತ್ತಿಜೀವನದಲ್ಲಿ ಇದೊಂದು ಡಿಫರೆಂಟ್ ಸಿನಿಮಾವಾಗಿ ನಿಲ್ಲುತ್ತದೆ.

ಇದನ್ನೂ ಓದಿ: ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ

ವಿಶೇಷ ಏನೆಂದರೆ, ‘ರಕ್ಕಸಪುರದೋಳ್’ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಲಾಗಿದೆ. ಹತ್ತಾರು ಪಾತ್ರಗಳ ಹಿಂದೆಯೂ ಸಾಕಷ್ಟು ಕಥೆ ಇದೆ. ಆ ಎಲ್ಲ ವಿಷಯಗಳನ್ನು ಪ್ರೇಕ್ಷಕರ ಎದುರು ತೆರೆದಿಡಲು ತೆಗೆದುಕೊಂಡಿರುವ ಸಮಯ ಕೇವಲ 2 ಗಂಟೆ 7 ನಿಮಿಷ! ಅಂದರೆ, ಅಷ್ಟು ಅಚ್ಚುಕಟ್ಟಾಗಿ, ಚುಟುಕಾಗಿ, ಮನಮುಟ್ಟುವಂತೆ ನಿರೂಪಣೆ ಮಾಡಲಾಗಿದೆ. ಅನೇಕ ಟ್ವಿಸ್ಟ್​​ಗಳು ಇದ್ದರೂ ಕೂಡ ಪ್ರೇಕ್ಷಕರಿಗೆ ಗೊಂದಲ ಮೂಡದಂತೆ ವಿವರಿಸಲಾಗಿದೆ. ಅದು ಈ ಸಿನಿಮಾದ ಶಕ್ತಿ ಆಗಿದೆ.

ಒಂದೇ ಸಿನಿಮಾದಲ್ಲಿ ಹಾರರ್, ಮರ್ಡರ್ ಮಿಸ್ಟರಿ, ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್, ಆ್ಯಕ್ಷನ್ ಎಲ್ಲವೂ ಬೇಕು ಎಂಬ ಪ್ರೇಕ್ಷಕರಿಗೆ ‘ರಕ್ಕಸಪುರದೋಳ್’ ಚಿತ್ರ ಒಂದು ಉತ್ತಮ ಆಯ್ಕೆ. ರಾಜ್ ಬಿ. ಶೆಟ್ಟಿ ಅವರ ಅಭಿಮಾನಿಗಳಿಗೆ ಈ ಚಿತ್ರ ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗಿರುವ ವ್ಯತ್ಯಾಸವೇನು? ಇದನ್ನು ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್ – Kannada News | Migraine Symptoms vs Normal Headache

ತಲೆನೋವನ್ನು (Headache) ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಅನುಭವಿಸಿರುತ್ತಾರೆ. ಇದೊಂದು ಸಾಮಾನ್ಯ ಸಮಸ್ಯೆ. ಈ ರೀತಿ ಆಗಾಗ, ಬರುವ ತಲೆನೋವು ಬಹಳ ಸಾಮಾನ್ಯ ಎಂದು ಅಂದುಕೊಳ್ಳುತ್ತಾರೆ. ಅದಕ್ಕಾಗಿಯೇ ನೋವು ನಿವಾರಕ ಮಾತ್ರೆ ತೆಗೆದುಕೊಂಡು ಅಥವಾ ಸ್ವಲ್ಪ ವಿಶ್ರಾಂತಿ ಪಡೆದು ಅದನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ತಲೆನೋವು ಪದೇ ಪದೇ ಬಂದಾಗ, ತುಂಬಾ ತೀವ್ರವಾಗಿದ್ದರೆ ಅಥವಾ ದಿನನಿತ್ಯದ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದಾಗ ಈ ನೋವನ್ನು ಹಗುರವಾಗಿ ಪರಿಗಣಿಸುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಈ ರೀತಿಯ ನೋವು ಮೈಗ್ರೇನ್‌ನ (Migraine) ಒಂದು ರೂಪವೂ ಆಗಿರಬಹುದು. ಹಾಗಾದರೆ ಮೈಗ್ರೇನ್ ಮತ್ತು ಸಾಧಾರಣ ತಲೆನೋವಿಗೂ ಇರುವ ವ್ಯತ್ಯಾಸವೇನು, ಈ ರೀತಿ ಸಮಸ್ಯೆ ಕಂಡುಬರುವುದಕ್ಕೆ ಕಾರಣಗಳೇನು, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗಿರುವ ವ್ಯತ್ಯಾಸ?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಡಾ. ಎಲ್.ಎಚ್. ​​ಘೋಟೇಕರ್ ಹೇಳುವ ಪ್ರಕಾರ, ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗಿರುವ ದೊಡ್ಡ ವ್ಯತ್ಯಾಸವೆಂದರೆ ನೋವಿನ ಸ್ವರೂಪ ಮತ್ತು ಪರಿಣಾಮ. ಸಾಮಾನ್ಯ ತಲೆನೋವು ಸಾಮಾನ್ಯವಾಗಿ ಸೌಮ್ಯವಾಗಿದ್ದು ತಲೆ ಅಥವಾ ಹಣೆಯ ಮೇಲೆ ಒತ್ತಡವಾದಂತೆ ಅನಿಸುತ್ತದೆ. ಇದು ಆಯಾಸ, ಒತ್ತಡ, ನಿದ್ರೆಯ ಕೊರತೆ ಅಥವಾ ದೀರ್ಘಕಾಲದ ಸ್ಕ್ರೀನ್ ಸಮಯದಿಂದ ಉಂಟಾಗಬಹುದು. ಮತ್ತೊಂದೆಡೆ, ಮೈಗ್ರೇನ್ ನೋವು ಹೆಚ್ಚಾಗಿ ತೀಕ್ಷ್ಣವಾಗಿರುತ್ತದೆ ಮತ್ತು ತಲೆಯ ಒಂದು ಬದಿಯಲ್ಲಿ ನೋವಿರುತ್ತದೆ. ಮೈಗ್ರೇನ್ ತಲೆನೋವಿನ ಜೊತೆಗೆ ವಾಂತಿ, ವಾಕರಿಕೆಯನ್ನು ಉಂಟುಮಾಡಬಹುದು. ಅದಲ್ಲದೆ ಈ ನೋವು ಹಲವಾರು ದಿನಗಳವರೆಗೆ ಇರುತ್ತದೆ, ಆದರೆ ಸಾಮಾನ್ಯ ತಲೆನೋವನ್ನು ವಿಶ್ರಾಂತಿ ಅಥವಾ ಔಷಧಿಗಳಿಂದ ನಿವಾರಿಸಬಹುದು, ಮೈಗ್ರೇನ್‌ಗೆ ವಿಶೇಷ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳು ಬೇಕಾಗುತ್ತವೆ. ಅದಕ್ಕಾಗಿಯೇ ಎರಡರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಮೈಗ್ರೇನ್ ತಡೆಗಟ್ಟಲು ಸಲಹೆಗಳು:

ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮೈಗ್ರೇನ್ ತಡೆಗಟ್ಟಬಹುದು. ಪ್ರತಿನಿತ್ಯ ಸರಿಯಾಗಿ ನಿದ್ರೆ ಮಾಡುವ ಮೂಲಕ ಸರಿಯಾದ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಪ್ರಕಾಶಮಾನವಾದ ಬೆಳಕು, ಜೋರಾಗಿ ಬರುವ ಶಬ್ದ ಮತ್ತು ಅತಿಯಾಗಿ ಮೊಬೈಲ್ ಅಥವಾ ಟಿವಿ ನೋಡುವುದನ್ನು ಕಡಿಮೆ ಮಾಡಿ. ಹೆಚ್ಚಿನ ಒತ್ತಡ ಮೈಗ್ರೇನ್‌ ಹೆಚ್ಚಿಸುತ್ತದೆ, ಹಾಗಾಗಿ ಯೋಗ, ಧ್ಯಾನ ಮತ್ತು ಆಳವಾದ ಉಸಿರಾಟವನ್ನು ಅಭ್ಯಾಸ ಮಾಡಿ. ಅದೆಲ್ಲದರ ಜೊತೆಗೆ ದೀರ್ಘಕಾಲ ಹಸಿವಿನಿಂದ ಇರಬೇಡಿ. ಸಮತೋಲಿತ ಆಹಾರ ಸೇವನೆ ಮಾಡಿ. ಕೆಫೀನ್, ಕರಿದ ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ಅಗತ್ಯವಿದ್ದರೆ ವೈದ್ಯರು ಸೂಚಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳಿ.

ಇದನ್ನೂ ಓದಿ: ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ಮಾಡಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು ಎಚ್ಚರ!

ತಲೆನೋವನ್ನು ತಡೆಯಲು ಸಲಹೆಗಳು:

ಸಾಮಾನ್ಯ ತಲೆನೋವನ್ನು ತಡೆಗಟ್ಟಲು, ದೈನಂದಿನ ಅಭ್ಯಾಸಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಜೊತೆಗೆ ನಿರ್ಜಲೀಕರಣವು ತಲೆನೋವಿಗೆ ಕಾರಣವಾಗುವುದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ದೀರ್ಘಕಾಲ ನೋಡುವುದನ್ನು ತಪ್ಪಿಸಿ ಮತ್ತು ಕಣ್ಣುಗಳಿಗೆ ನಿಯಮಿತವಾಗಿ ವಿಶ್ರಾಂತಿ ನೀಡಿ. ಒತ್ತಡವನ್ನು ಕಡಿಮೆ ಮಾಡಿ ಮತ್ತು ಲಘು ವ್ಯಾಯಾಮ ಮಾಡಿ. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ ಮತ್ತು ಕುತ್ತಿಗೆ, ಭುಜಗಳ ಮೇಲೆ ಹೆಚ್ಚು ಒತ್ತಡ ಹೇರುವುದನ್ನು ತಪ್ಪಿಸಿ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವುದನ್ನು ಮತ್ತು ಸರಿಯಾಗಿ ನಿದ್ರೆ ಮಾಡುವುದರಿಂದ ತಲೆನೋವನ್ನು ತಡೆಯಬಹುದು. ತಲೆನೋವು ಆಗಾಗ ಬರುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’: ತೆಲುಗು ರಾಜ್ಯಗಳ ವಿತರಣೆ ಹಕ್ಕು ಮಾರಾಟ: ಬೃಹತ್ ಮೊತ್ತ ಕೊಟ್ಟ ದಿಲ್ ರಾಜು – Kannada News | Toxic movie distribution rights of Andhra and Telangana sold for record price

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾ ಬಿಡುಗಡೆ ಮುಂದಿನ ತಿಂಗಳು ಆಗಲಿದ್ದು, ಸಿನಿಮಾಕ್ಕೆ ಅದ್ಯಾವ ಪರಿ ಬೇಡಿಕೆ ಇದೆಯೆಂದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ದಾಖಲೆಗಳನ್ನು ಬರೆಯುತ್ತಿದೆ, ಪ್ಯಾನ್-ಇಂಡಿಯಾ ಸಿನಿಮಾಗಳ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇದೀಗ ಸಿನಿಮಾದ ವಿತರಣೆ ಹಕ್ಕು ಮಾರಾಟದಲ್ಲಿ ಚಿತ್ರತಂಡ ತೊಡಗಿಕೊಂಡಿದ್ದು, ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ವಿತರಣೆ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ.

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಮತ್ತು ವಿತರಕ ದಿಲ್ ರಾಜು ಅವರ ಒಡೆತನದ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ (SVC) ‘ಟಾಕ್ಸಿಕ್’ ಚಿತ್ರದ ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿತರಣಾ ಹಕ್ಕನ್ನು ಖರೀದಿ ಮಾಡಿದ್ದು, ಬರೋಬ್ಬರಿ ₹120 ಕೋಟಿ (advance on commission basis) ಮುಂಗಡ ನೀಡಿ ಖರೀದಿ ಮಾಡಿದೆ. ಇದು ಕಮಿಷನ್ ಆಧಾರದಲ್ಲಿ ಆಗಿರುವ ಒಪ್ಪಂದ ಎನ್ನಲಾಗುತ್ತಿದ್ದು, ತೆಲುಗು ಅಲ್ಲದ ಸಿನಿಮಾವೊಂದು ಆಂಧ್ರ-ತೆಲಂಗಾಣದಲ್ಲಿ ಪಡೆದ ಅತಿ ದೊಡ್ಡ ಮೊತ್ತ ಇದಾಗಿದೆ. ತಮಿಳಿನ ಸಿನಿಮಾಗಳ ವಿತರಣೆ ಹಕ್ಕುಗಳು ಸಹ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದಿಲ್ಲ.

‘ಟಾಕ್ಸಿಕ್’ ಸಿನಿಮಾದ ವಿತರಣೆ ಹಕ್ಕು ಪಡೆಯಲು ತೆಲುಗಿನ ಕೆಲವು ದೊಡ್ಡ ವಿತರಣಾ ಸಂಸ್ಥೆಗಳ ನಡುವೆ ಪೈಪೋಟಿ ನಡೆದು ಅಂತಿಮವಾಗಿ ದಿಲ್ ರಾಜು ಅವರ ಸಂಸ್ಥೆಯು ಈ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ದಿಲ್ ರಾಜು, ‘”ಕೆಜಿಎಫ್ 2’ ಬಳಿಕ ಯಶ್ ಅವರ ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ನಾಲ್ಕು ವರ್ಷಗಳಿಂದ ಕಾಯುತ್ತಿದ್ದಾರೆ. ‘ಟಾಕ್ಸಿಕ್’ ಮೇಲಿರುವ ನಿರೀಕ್ಷೆಗಳು ಅಪಾರ. ‘ಟಾಕ್ಸಿಕ್’ ಸಿನಿಮಾವನ್ನು ವಿತರಣೆ ಮಾಡಲು ನಾವು ಉತ್ಸುಕರಾಗಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ: ಟಾಕ್ಸಿಕ್ ಪ್ರಚಾರದಲ್ಲಿ ವಿಳಂಬ ಏಕೆ? ಯಶ್ ಮಾಡುತ್ತಿರುವ ಯೋಜನೆಯೇನು?

ಗೀತು ಮೋಹನ್ ದಾಸ್ ಮತ್ತು ಯಶ್ ಜಂಟಿಯಾಗಿ ಬರೆದಿರುವ ‘ಟಾಕ್ಸಿಕ್’ ಸಿನಿಮಾಕ್ಕೆ ಗೀತು ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾದಲ್ಲಿ ಅಂತರಾಷ್ಟ್ರೀಯ ಮಟ್ಟದ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ ಛಾಯಾಗ್ರಹಣವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಮಾಡಿದ್ದಾರೆ. ಸಂಗೀತವನ್ನು ರವಿ ಬಸ್ರೂರು ನೀಡಿದ್ದಾರೆ. ಸಂಕಲನ ಜವಾಬ್ದಾರಿಯನ್ನು ಉಜ್ವಲ್ ಕುಲಕರ್ಣಿ ನಿರ್ವಹಿಸಿದ್ದಾರೆ. ಸಾಹಸ ನಿರ್ದೇಶನ ಮಾಡಿರುವುದು ಹಾಲಿವುಡ್‌ನ ಜೆಜೆ ಪೆರ್ರಿ ಅವರ ಜೊತೆಗೆ ಅನ್ಬರಿವ್ ಮತ್ತು ಕೆಚಾ ಖಂಪಾಕ್ಡಿ ಸಹ ಇದ್ದಾರೆ.

ಇನ್ನು ಈ ಸಿನಿಮಾನಲ್ಲಿ ಹಲವು ಟಾಪ್ ನಾಯಕಿಯರು ಒಟ್ಟಿಗೆ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಕೆಲವು ಜನಪ್ರಿಯ ವಿದೇಶಿ ನಟ-ನಟಿಯರು ಸಹ ಈ ಸಿನಿಮಾನಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯ ಜೊತೆಗೆ ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾವನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲೀಷ್​​ನಲ್ಲಿ ಚಿತ್ರೀಕರಣ ಮಾಡಲಾಗಿರುವುದು ವಿಶೇಷ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:59 pm, Fri, 6 February 26

Source link

Video: ಕಳೆದು ಹೋದ ಸಮಯದ ಬಗ್ಗೆ ಚಿಂತೆ ಬೇಡ, ಭವಿಷ್ಯದ ಬಗ್ಗೆ ಗಮನಕೊಡಿ: ಮೋದಿ – Kannada News | Pariksha Pe Charcha, I Have Still Got 25 Years to Go, PM Modi Jokes After Birthday Call

ನವದೆಹಲಿ, ಫೆಬ್ರವರಿ 06: ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೋದಿ ಹಳೆಯ ಕೆಲವು ವಿಚಾರಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ 75ನೇ ಜನ್ಮ ದಿನದಂದು ಅವರಿಗೆ ಅಭಿನಂದನೆ ಸಲ್ಲಿಸಲು ಕರೆ ಮಾಡಿದಾಗ ತಾವು ಇನ್ನೂ 25 ವರ್ಷಗಳು ಬಾಕಿ ಇವೆಯಲ್ಲ ಎಂದು ಹೇಳಿದ್ದಾಗಿ ನೆನಪಿಸಿಕೊಂಡರು. ಕಳೆದು ಹೋದ ಸಮಯದ ಬಗ್ಗೆ ಚಿಂತೆ ಬೇಡ, ಭವಿಷ್ಯದ ಬಗ್ಗೆ ಗಮನಕೊಡಿ ಎಂದು ಮಕ್ಕಳಲ್ಲಿ ಹೇಳಿದ್ದಾರೆ. ಶಿಕ್ಷಣವು ಹೊರೆಯಾಗಬಾರದು ಮತ್ತು ಪ್ರತಿಯೊಬ್ಬರೂ ಅದರಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮನರಂಜನೆಗಾಗಿ ಗೇಮಿಂಗ್‌ನಲ್ಲಿ ಸಮಯ ವ್ಯರ್ಥ ಮಾಡದಂತೆ ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದಳಪತಿ ವಿಜಯ್​​ಗೆ ಮತ್ತೊಂದು ಶಾಕ್; ಕಟ್ಟಬೇಕಿದೆ ಒಂದೂವರೆ ಕೊಟಿ ರೂ. ದಂಡ – Kannada News | Thalapathy Vijay Tax Evasion: Madras HC Upholds one and half crore Penalty

ದಳಪತಿ ವಿಜಯ್ (Vijay) ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಇನ್ನೂ ರಿಲೀಸ್ ಭಾಗ್ಯ ಸಿಕ್ಕಿಲ್ಲ. ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣಕ್ಕೆ ಆದ ತೊಂದರೆಯಿಂದ ಅವರ ಚಿತ್ರ ಬಿಡುಗಡೆ ಭಾಗ್ಯ ಕಾಣುತ್ತಿಲ್ಲ. ಹೀಗಿರುವಾಗೇ ಅವರಿಗೆ ಮದ್ರಾಸ್ ಹೈಕೋರ್ಟ್​​ನಿಂದ ದೊಡ್ಡ ಶಾಕ್ ಒಂದು ಎದುರಾಗಿದೆ. ಆಸ್ತಿ ಬಹಿರಂಗಪಡಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ಹೇರಿದ್ದ ಒಂದೂವರೆ ಕೋಟಿ ರೂಪಾಯಿ ದಂಡದ ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಹೇಳಿದೆ.

2015-16ನೇ ಆರ್ಥಿಕ ಸಾಲಿನಲ್ಲಿ ವಿಜಯ್ ಮನೆ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ಈ ವೇಳೆ ಅವರು 15 ಕೋಟಿ ರೂಪಾಯಿ ಆದಾಯವನ್ನು ತೋರಿಸದೆ, ತೆರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಅವರಿಗೆ ಒಂದೂವರೆ ಕೋಟಿ ರೂಪಾಯಿ ದಂಡ ವಿಧಿಸಿತ್ತು.

ದಳಪತಿ ವಿಜಯ್ ಅವರು 2022ರಲ್ಲಿ ಈ ನೋಟಿಸ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವರ್ಷ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಸೆಂದಿಲ್ ಕುಮಾರ್ ರಾಮಮೂರ್ತಿ ಅವರು ಶುಕ್ರವಾರ (ಫೆಬ್ರವರಿ 6) ತೀರ್ಪು ನೀಡಿದ್ದಾರೆ. ಇದು ವಿಜಯ್ ವಿರುದ್ಧದ ತೀರ್ಪಾಗಿದೆ. ವಿಜಯ್​​ಗೆ ರಿಲೀಫ್ ನೀಡಲು ಸಾಧ್ಯವಿಲ್ಲ ಎಂದಿದೆ.

ಇದನ್ನೂ ಓದಿ: ಕನ್ನಡದ ನಿರ್ಮಾಪಕನ ಬಗ್ಗೆ ಮರುಕ ವ್ಯಕ್ತಪಡಿಸಿದ ದಳಪತಿ ವಿಜಯ್

‘ತೆರಿಗೆ ಅಧಿಕಾರಿಗಳು ಹೊರಡಿಸಿದ ಶೋಕಾಸ್ ನೋಟಿಸ್ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 263ರ ಅಡಿಯಲ್ಲಿ ನಿಗದಿಪಡಿಸಿದ ಸಮಯದ ಮಿತಿಯೊಳಗೆ ಇದೆ . ಅದರ ಜಾರಿಯಲ್ಲಿ ಯಾವುದೇ ತಪ್ಪಾಗಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅರ್ಜಿಯನ್ನು ತಿರಸ್ಕರಿಸುವ ವೇಳೆ ‘ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ’ಯಲ್ಲಿ ಇದನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ನೀಡಿದೆ.

ಸಿಕ್ಕಿತ್ತು 15 ಕೋಟಿ

ವಿಜಯ್ ಮನೆಯ ಮೇಲೆ ದಾಳಿ ಮಾಡಿದಾಗ ವಿಜಯ್ ಅವರು 15 ಕೋಟಿ ಹಣದ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕೆ ತೆರಿಗೆ ಪಾವತಿಸದ ಕಾರಣ ಈ ದಂಡ ವಿಧಿಸಲಾಗಿತ್ತು. ಅವರು ದಂಡ ಪಾವತಿ ಮಾಡುತ್ತಾರಾ ಅಥವಾ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಈ ಆದೇಶವನ್ನು ಪ್ರಶ್ನಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಎಎಪಿ ನಾಯಕನ ಮೇಲೆ ಗುಂಡಿನ ದಾಳಿ, ಹಾಡಹಗಲೇ ನಡೆಯಿತು ಕೊಲೆ

ಚಂಡೀಗಢ, ಫೆಬ್ರವರಿ 06: ಪಂಜಾಬ್‌ನ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಲಕ್ಕಿ ಒಬೆರಾಯ್ ಅವರನ್ನು ಶುಕ್ರವಾರ ಬೆಳಗ್ಗೆ ಜಲಂಧರ್‌ನ ಮಾಡೆಲ್ ಟೌನ್ ಪ್ರದೇಶದ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಅವರ ಹತ್ಯೆಗೆ ಕಾರಣವಾದ ಕ್ಷಣಗಳನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ವೀಡಿಯೊದಲ್ಲಿ ಕಪ್ಪು ಹೂಡಿ ಮತ್ತು ಮಾಸ್ಕ್​ ಧರಿಸಿದ್ದ ವ್ಯಕ್ತಿಯೊಬ್ಬ ಒಬೆರಾಯ್ ಅವರ ವಾಹನದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು, ಹತ್ತಿರದಿಂದ ಅನೇಕ ಗುಂಡು ಹಾರಿಸಿ, ನಂತರ ಸ್ಥಳದಿಂದ ಪಲಾಯನ ಮಾಡುತ್ತಿರುವುದನ್ನು ಕಾಣಬಹುದು. ಸಿಸಿಟಿವಿ ದೃಶ್ಯಾವಳಿಯಲ್ಲಿ ಗುಂಡು ಹಾರಿಸುವ ಮೊದಲು ಶೂಟರ್ ಶಾಂತವಾಗಿ ವಾಹನಗಳ ಬಳಿಗೆ ಬರುತ್ತಿರುವುದು ಕಂಡುಬರುತ್ತದೆ. ದಾಳಿಕೋರನು ತಲೆಯ ಮೇಲೆ ಕಪ್ಪು ಬಣ್ಣದ ಹೂಡಿ ಧರಿಸಿ ಮುಖವನ್ನು ಮರೆಮಾಚುವ ಮಾಸ್ಕ್​ ಧರಿಸಿ ದಾಳಿಕೋರನನ್ನು ನೋಡಬಹುದಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

U19 World Cup: ಫೈನಲ್​ನಲ್ಲಿ ಸಿಡಿಲಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ – Kannada News | Vaibhav Suryavanshi: Youngest to Smash Fastest U19 World Cup Century at 14!

ವೈಭವ್ ಸೂರ್ಯವಂಶಿ.. ವಯಸ್ಸು ಕೇವಲ 14 ವರ್ಷವಾಗಿದ್ದರೂ, ನನ್ನಲ್ಲಿರುವ ಪ್ರತಿಭೆ ಸಾಗರದಷ್ಟು ಆಳವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಕಳೆದ ಐಪಿಎಲ್​ನಲ್ಲಿ ಘಟಾನುಘಟಿ ಬೌಲರ್​ಗಳನ್ನೇ ಬೆಂಡೆತ್ತಿ ಸ್ಫೋಟಕ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ವಿಶ್ವಕಪ್​ನಲ್ಲೂ ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಹರಾರೆಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 55 ಎಸೆತಗಳಲ್ಲಿ ಈ ಟೂರ್ನಿಯ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ವೈಭವ್ ಅಂಡರ್ 19 ವಿಶ್ವಕಪ್​ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

Source link

ಸೇನೆಗೆ ಡ್ರೋನ್ ಪೂರೈಸುವ ಸಂಸ್ಥೆಗೆ ಕರ್ನಾಟಕ ಪೊಲೀಸರ ಕಿರುಕುಳ; ಹೈಕೋರ್ಟ್​ ಗರಂ! – Kannada News | Karnataka HC Slams Police for Harassing Bengaluru Drone Firm; Seeks Explanation

ಸೇನೆಗೆ ಡ್ರೋನ್ ಪೂರೈಸುವ ಸಂಸ್ಥೆಗೆ ಕರ್ನಾಟಕ ಪೊಲೀಸರ ಕಿರುಕುಳ

ಬೆಂಗಳೂರು, ಫೆಬ್ರುವರಿ 06: ಸೇನೆಗೆ ಡ್ರೋನ್ ಪೂರೈಸುವ ಬೆಂಗಳೂರಿನ ನ್ಯೂ ಸ್ಪೇಸ್ ರಿಸರ್ಚ್ ಟೆಕ್ ಸಂಸ್ಥೆಗೆ ಪೊಲೀಸರಿಂದ ಕಿರುಕುಳ ನೀಡಲಾಗಿದೆ ಎಂದು ಆರೋಪದ ಸಂಬಂಧ ಪ್ರಕರಣ ಕೋರ್ಟ್​ ಮೆಟ್ಟಿಲೇರಿದ್ದು, ಇದಕ್ಕೆ ಹೈಕೋರ್ಟ್​, ಪೊಲೀಸರಿಂದ ವಿವರಣೆ ಕೇಳಿದೆ. ಡ್ರೋನ್ ಮಾದರಿಯ ಪರೀಕ್ಷಾ ಹಾರಾಟದ ವಿಷಯದಲ್ಲಿ ಸಂಸ್ಥೆಯನ್ನು ಸತಾಯಿಸಿದ್ದ  ಕಾರಣ ಸಂಸ್ಥೆ ಕರ್ನಾಟಕ ಹೈಕೋರ್ಟ್‌ನಲ್ಲಿ (High Court) ರಿಟ್ ಅರ್ಜಿ ಸಲ್ಲಿಸಿತ್ತು. ಈ ವಿಚಾರವಾಗಿ ನ್ಯಾ. ನಾಗಪ್ರಸನ್ನ ಅವರ ಪೀಠ,  ಸರಿಯಾದ ವಿವರಣೆ ನೀಡದೇ ಇದ್ದಲ್ಲಿ ಪೊಲೀಸರ ವಿರುದ್ಧ ಕ್ರಮ  ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ.

ಎಫ್‌ಐಆರ್ ಪ್ರತಿಯನ್ನೂ ಸಂಸ್ಥೆಗೆ ನೀಡಿಲ್ಲ!

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಡ್ರೋನ್ ಮಾದರಿಯ ಪರೀಕ್ಷಾ ಹಾರಾಟ ನಡೆಸುವ ವೇಳೆ, ಡ್ರೋನ್ ಕಂಪೌಂಡ್ ದಾಟಿ ಬೇರೆ ಸ್ಥಳಕ್ಕೆ ಇಳಿದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಆದರೆ ಎಫ್‌ಐಆರ್ ಪ್ರತಿಯನ್ನು ನೀಡದೇ, ಅಕ್ರಮ ಪ್ರವೇಶ ಪ್ರಕರಣ ದಾಖಲಿಸಿ ಸಂಸ್ಥೆಯ ಎಂಡಿಯನ್ನು ಠಾಣೆಗೆ ಕರೆಸಿಕೊಂಡಿದ್ದರು. ಅದಲ್ಲದೆ ಎಂಡಿ ಬಳಿ ಲಾಭ–ನಷ್ಟ ಹಾಗೂ ವ್ಯವಹಾರದ ವಿವರಗಳ ಬಗ್ಗೆ ಪ್ರಶ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

6 ಗಂಟೆಗಳ ಕಾಲ ಸಂಸ್ಥೆಯ ಅಧಿಕಾರಿಗಳನ್ನು ಠಾಣೆಯಲ್ಲಿ ಕೂರಿಸಿದ್ದ ಪೊಲೀಸರು

ಪರೀಕ್ಷಾ ಹಾರಾಟಕ್ಕೆ ಡಿಜಿಸಿಎ ಅನುಮತಿ ತೋರಿಸಿದರೂ ಕಿರುಕುಳ ನೀಡಲಾಗಿದ್ದು, ಸುಮಾರು 6 ಗಂಟೆಗಳ ಕಾಲ ಸಂಸ್ಥೆಯ ಅಧಿಕಾರಿಗಳನ್ನು ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಡ್ರೋನ್ ಕಂಪೆನಿ ಪರ ವಕೀಲ ಅಂಗದ್ ಕಾಮತ್ ವಾದ ಮಂಡಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ಅವರಿಂದ ಪ್ರಮಾಣಪತ್ರದ ಮೂಲಕ ವಿವರಣೆ ನೀಡುವಂತೆ ಸೂಚಿಸಿದೆ. ವಿವರಣೆ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Pariksha Pe Charcha 2026: ತಂತ್ರಜ್ಞಾನ ಶಾಪ ಎಂದು ಭಾವಿಸುವ ಬದಲು “ವರದಾನ” ಎಂದು ಸ್ವೀಕರಿಸಿ – Kannada News | Pariksha Pe Charcha 2026: Modi Urges Students to be Responsible Citizens, Embrace Tech

ದೆಹಲಿ, ಫೆ. 6: ಪ್ರಧಾನಿ ನರೇಂದ್ರ ಮೋದಿ ಅವರು ‘ಪರೀಕ್ಷಾ ಪೇ ಚರ್ಚಾ’ (Pariksha Pe Charcha 2026) ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ, ಕೇವಲ ಪರೀಕ್ಷೆ ಮಾತ್ರವಲ್ಲದೆ ಸುಸ್ಥಿರ ಭವಿಷ್ಯದ ನಿರ್ಮಾಣದ ಬಗ್ಗೆಯೂ ಮಹತ್ವದ ಕರೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು “ಜವಾಬ್ದಾರಿಯುತ ನಾಗರಿಕರು” ಆಗುವಂತೆ ಕರೆ ನೀಡಿದರು. ‘ವಿಕಸಿತ ಭಾರತ’ದ ಗುರಿಯನ್ನು ತಲುಪಲು ಸ್ವಚ್ಛತೆ (Cleanliness) ಮೂಲಭೂತ ಅವಶ್ಯಕತೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ಕೇವಲ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರವಲ್ಲದೆ, ಸಮಾಜದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಬೇಕು ಎಂದು ಆಶಿಸಿದರು. ತಂತ್ರಜ್ಞಾನವನ್ನು ಶಾಪ ಎಂದು ಭಾವಿಸುವ ಬದಲು ಅದನ್ನು “ವರದಾನ” ಎಂದು ಸ್ವೀಕರಿಸಬೇಕು ಎಂದು ಮೋದಿ ಹೇಳಿದರು. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದಿಂದ ದೂರವಿರುವುದು ಸಾಧ್ಯವಿಲ್ಲ, ಬದಲಿಗೆ ಅದನ್ನು ನಮ್ಮ ಬೆಳವಣಿಗೆಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಕಲೆ ನಮಗೆ ತಿಳಿದಿರಬೇಕು ಎಂದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀವು ಫೇಮಸ್ ಆಗಲು ನ್ಯಾಯಾಂಗವನ್ನು ವೇದಿಕೆಯಾಗಿ ಬಳಸುತ್ತಿದ್ದೀರಿ: ಜನ್​ ಸುರಾಜ್​ ಪಕ್ಷಕ್ಕೆ ಸುಪ್ರೀಂ ತರಾಟೆ – Kannada News | SC Rejects Jan Suraaj Plea on Bihar Elections, Calls Out Judiciary Misuse for Popularity

ನವದೆಹಲಿ, ಫೆಬ್ರವರಿ 06: ಬಿಹಾರ ವಿಧಾನಸಭಾ ಚುನಾವಣೆಯನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್(Jan Suraaj) ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂಕೋರ್ಟ್​ ಶುಕ್ರವಾರ ನಿರಾಕರಿಸಿದೆ. ಚುನಾವಣಾ ಫಲಿತಾಂಶಗಳನ್ನು ರದ್ದುಗೊಳಿಸಿ ಹೊಸ ಚುನಾವಣೆಗೆ ಆದೇಶಿಸುವ ಕೋರಿಕೆಯ ಕುರಿತು ಯಾವುದೇ ನಿರ್ದೇಶನ ನೀಡಲು ಸಿಜೆಐ ಸೂರ್ಯಕಾಂತ್ ಮತ್ತು ನ್ಯಾ. ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ನಿರಾಕರಿಸಿದೆ.

ನಿಮ್ಮ ರಾಜಕೀಯ ಪಕ್ಷ ಎಷ್ಟು ಮತಗಳನ್ನು ಪಡೆದುಕೊಂಡಿತ್ತು, ಜನರು ನಿಮ್ಮನ್ನು ತಿರಸ್ಕರಿಸುತ್ತಾರೆ ನಂತರ ನೀವು ಜನಪ್ರಿಯತೆ ಪಡೆಯಲು ನ್ಯಾಯಾಂಗ ವೇದಿಕೆ ಬಳಸುತ್ತೀರಿ ಎಂದು ಹೇಳಿದ್ದಾರೆ. ರಾಜಕೀಯ ಪಕ್ಷದ ಒತ್ತಾಯದ ಮೇರೆಗೆ ನಾವು ಇಡೀ ರಾಜ್ಯಕ್ಕೆ ಸರ್ವವ್ಯಾಪಿ ನಿರ್ದೇಶನ ನೀಡಲು ಸಾಧ್ಯವಿಲ್ಲ, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ 10,000 ರೂ.ಗಳನ್ನು ವರ್ಗಾಯಿಸುವ ಮೂಲಕ ಬಿಹಾರ ಸರ್ಕಾರ ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದೆ ಎಂದು ಆರೋಪಿಸಿ ಜನ್ ಸುರಾಜ್ ಪಕ್ಷ (ಜೆಎಸ್‌ಪಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಯೋಜನೆಯು ಮಹಿಳೆಯರಿಗೆ ಸ್ವ-ಉದ್ಯೋಗ ಮತ್ತು ಸಣ್ಣ ವ್ಯವಹಾರಳನ್ನು ಉತ್ತೇಜಿಸಲು 10 ಸಾವಿರ ರೂ.ಗಳ ಆರಂಭಿಕ ಆರ್ಥಿಕ ಅನುದಾನವನ್ನು ಒದಗಿಸುತ್ತದೆ. ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯವು ಚುನಾವಣೆಯ ಮುನ್ನಾದಿನ 15,600 ಕೋಟಿ ರೂ.ಗಳನ್ನು ವಿತರಿಸಿದೆ. ಸಂವಿಧಾನದ 324ನೇ ವಿಧಿ ಮತ್ತು ಜನಪ್ರಾಥಿನಿಧ್ಯ ಕಾಯ್ದೆಯ ಸೆಕ್ಷನ್ 123ರ ಉಲ್ಲಂಘನೆಯಾಗಿ ಮತದಾರರ ಮೇಲೆ ಪ್ರಭಾವ ಬೀರಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಮತ್ತಷ್ಟು ಓದಿ: ಬಿಹಾರದಲ್ಲಿ ಅಂತಿಮ ಹಂತದ ಚುನಾವಣೆ, ಜನ್ ಸುರಾಜ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

ಈ ವಿಷಯ ಕುರಿತು ರಿಟ್ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಪೀಠ ಹೇಳಿದೆ.243 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 202 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡರೆ ಇಂಡಿ ಒಕ್ಕೂಟ 35 ಸ್ಥಾನಗಳನ್ನು ಗಳಿಸಿತ್ತು. ಜನ್ ಸುರಾಜ್ ಪಕ್ಷವು ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಯಿತು, ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:25 pm, Fri, 6 February 26

Source link