ಸರಗಳ್ಳರ ಹಾವಳಿಗೆ ಮಹಿಳೆಯ ಕಿವಿ ಕಟ್; ಹೊಲಿಗೆ ಹಾಕಿದ ವೈದ್ಯರು: ಆಗಿದ್ದೇನು? – Kannada News | Vijayapura Chain Snatching: Woman Ear Severed, Gold Stolen
ವಿಜಯಪುರ, ಡಿಸೆಂಬರ್ 27: ವಿಜಯಪುರ ನಗರದಲ್ಲಿ ಸರಗಳ್ಳರ (Chain Snatching) ಹಾವಳಿ ಮುಂದುವರಿದಿದೆ. ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಮಹಿಳೆ (woman) ಮೇಲೆ ಹಲ್ಲೆ ಮಾಡಿ ಇಬ್ಬರು ಮುಸುಕುಧಾರಿಗಳು ಮಾಂಗಲ್ಯ ಸರ ಹಾಗೂ ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿರುವಂತಹ ಘಟನೆ ವಿಜಯಪುರ ನಗರದ ದಿವಟಗೇರಿ ಗಲ್ಲಿಯಲ್ಲಿ ಶುಕ್ರವಾರ ನಡೆದಿದೆ. ಕಲಾವತಿ ಗಾಯಕವಾಡ್(45) ಹಲ್ಲೆಗೊಳಗಾದ ಮಹಿಳೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ನಡೆದದ್ದೇನು? ಕಲಾವತಿ ಗಾಯ್ಕವಾಡ್ ಹಾಲು ತರಲು ಅಂಗಡಿಗೆ ತೆರಳುತ್ತಿದ್ದರು. ಈ…