‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು? – Kannada News | Sudeep said he and his team removed 9000 piracy links of Mark movie
ಸುದೀಪ್ ನಟನೆಯ ‘ಮಾರ್ಕ್’ (Mark) ಸಿನಿಮಾ ಎರಡು ದಿನದ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾರಣ ಇಂದು (ಡಿಸೆಂಬರ್ 27) ‘ಮಾರ್ಕ್’ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ, ‘ಮಾರ್ಕ್’ ಸಿನಿಮಾ ಗೆಲುವಿಗೆ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸಿತು. ಸುದ್ದಿಗೋಷ್ಠಿಯಲ್ಲಿ ಸಿನಿಮಾಕ್ಕೆ ಕಾಡಿದ ಪೈರಸಿ ಸಮಸ್ಯೆ ಬಗ್ಗೆ ನಟ ಸುದೀಪ್ ಮಾತನಾಡಿದರು. ಕೆಲವೇ ಗಂಟೆಗಳಲ್ಲಿ ತಮ್ಮ ಚಿತ್ರತಂಡ ಎಷ್ಟು ಪೈರಸಿ ಲಿಂಕ್ಗಳನ್ನು ತೆಗೆದು ಹಾಕಿದೆ ಎಂಬುದರ ಮಾಹಿತಿಯನ್ನು…