Category Archives: Blog

Your blog category

VHT 2025-26: 77 ರನ್ ಬಾರಿಸಿದ ಕೊಹ್ಲಿಗೆ 10000 ರೂ. ಬಹುಮಾನ ನೀಡಿದ ಬಿಸಿಸಿಐ – Kannada News | Virat Kohli’s Vijay Hazare Blitz: Century, 77 Runs and Rs 10K Prize Controversy

ಬಿಸಿಸಿಐ (BCCI) ಆದೇಶದಂತೆ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಎರಡು ಪಂದ್ಯಗಳನ್ನಾಡಿದ ಕಿಂಗ್ ಕೊಹ್ಲಿ, ಆಡಿದ ಎರಡರಲ್ಲೂ ಅಮೋಘ ಪ್ರದರ್ಶನ ನೀಡಿದರು. ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ (Virat Kohli), ಎರಡನೇ ಪಂದ್ಯದಲ್ಲಿ 77 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಕೊಹ್ಲಿಯ ಈ ಅರ್ಧಶತಕದ ನೆರವಿನಿಂದ ಡೆಲ್ಲಿ ತಂಡ ಗುಜರಾತ್ ವಿರುದ್ಧದ ಈ ಪಂದ್ಯವನ್ನು 7 ರನ್​ಗಳಿಂದ ಗೆದ್ದುಕೊಂಡಿದಲ್ಲದೆ, ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು. ಈ ಪಂದ್ಯದೊಂದಿಗೆ ಕೊಹ್ಲಿ ಟೂರ್ನಿಯಲ್ಲಿ ಆಡುವುದು ಕೂಡ ಅಂತ್ಯವಾಗಿದೆ. ವಾಸ್ತವವಾಗಿ ಬಿಸಿಸಿಐ, ಟೀಂ ಇಂಡಿಯಾ ಆಟಗಾರರು ಕನಿಷ್ಠ 2 ಪಂದ್ಯಗಳಲ್ಲಾದರೂ ದೇಶಿ ಟೂರ್ನಿಯಲ್ಲಿ ಆಡಬೇಕು ಎಂಬ ಆದೇಶ ಹೊರಡಿಸಿತ್ತು. ಆ ಪ್ರಕಾರ ಕೊಹ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಇದು ಒಂದೆಡೆಯಾದರೆ, ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳ ಸಹಿತ 77 ರನ್ ಬಾರಿಸಿದರು. ಕೊಹ್ಲಿಯ ಈ ಇನ್ನಿಂಗ್ಸ್‌ನಿಂದಾಗಿ ದೆಹಲಿ ತಂಡವು 50 ಓವರ್‌ಗಳಲ್ಲಿ 254 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಗುರಿ ಬೆನ್ನಟ್ಟಿದ ಗುಜರಾತ್ 247 ರನ್‌ ಕಲೆಹಾಕಲಷ್ಟೇ ಶಕ್ತವಾಗಿ 7 ರನ್​ಗಳ ಜಯ ದಾಖಲಿಸಿತು. ತಮ್ಮ ಅರ್ಧಶತಕದ ಇನ್ನಿಂಗ್ಸ್​ನಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಹೀಗಾಗಿ ಕೊಹ್ಲಿಗೆ ಪ್ರಶಸ್ತಿ ರೂಪದಲ್ಲಿ 10000 ರೂ. ಬಹುಮಾನವೂ ಸಿಕ್ಕಿತು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕೊಹ್ಲಿ

ಈ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ಅವರಿಗೆ 10,000 ರೂಪಾಯಿಗಳ ಚೆಕ್ ನೀಡಲಾಯಿತು. ಡಿಡಿಸಿಎ ವಿರಾಟ್ ಅವರ ಈ ಫೋಟೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಅಭಿಮಾನಿಗಳು ಬಿಸಿಸಿಐ ಅನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದ್ದಾರೆ. ವಾಸ್ತವವಾಗಿ ತಾನು ಕುಡಿಯುವ ನೀರಿಗಾಗಿ ಒಂದು ದಿನಕ್ಕೆ ಸಾವಿರಾರು ರೂ. ಖರ್ಚು ಮಾಡುವ ಕೊಹ್ಲಿಗೆ ಬಿಸಿಸಿಐ 10 ಸಾವಿರ ರೂ. ನೀಡಿರುವುದು ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ. ಅಲ್ಲದೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಇಷ್ಟು ಕಡಿಮೆ ಮೊತ್ತದ ಬಹುಮಾನವನ್ನು ನಿಗದಿಪಡಿಸಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಆದರೆ ವಿಜಯ್ ಹಜಾರೆ ಟ್ರೋಫಿ ಲೀಗ್ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲುವ ಆಟಗಾರರಿಗೆ 10,000 ರೂಪಾಯಿಗಳನ್ನು ನೀಡಲಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಎರಡೂ ಪಂದ್ಯಗಳಲ್ಲಿ ಮಿಂಚಿದ ವಿರಾಟ್

ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ ಮಿಂಚಿದ್ದ ವಿರಾಟ್ ಕೊಹ್ಲಿ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ 131 ರನ್ ಬಾರಿಸಿದ್ದರು. ಆ ನಂತರ ಗುಜರಾತ್ ವಿರುದ್ಧದ ಪಂದ್ಯದಲ್ಲಿ 77 ರನ್ ಸಿಡಿಸಿದರು. ಎರಡು ಪಂದ್ಯಗಳಲ್ಲಿ 100 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 208 ರನ್ ಕಲೆಹಾಕಿದ ಕೊಹ್ಲಿ, ವಿಜಯ್ ಹಜಾರೆ ಟ್ರೋಫಿಯಲ್ಲಿ 1,000 ರನ್​ಗಳನ್ನು ಪೂರೈಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:11 pm, Fri, 26 December 25

Source link

ವನ್ಯಜೀವಿ ಸಫಾರಿ ಬಂದ್​​ ಎಫೆಕ್ಟ್​​: ಕೋಟಿ ಕೋಟಿ ಆದಾಯ ನಷ್ಟ; KETRA ಆತಂಕ – Kannada News | KETRA Urges Tourism Minister to Reopen Wildlife Safaris

ಬೆಂಗಳೂರು, ಡಿಸೆಂಬರ್​​ 27: ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ಸಫಾರಿಗಳ ಪುನರಾರಂಭಕ್ಕೆ ಒತ್ತಾಯಿಸಿ ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಷನ್ (KETRA) ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆದಿದೆ. ಸಫಾರಿ ಸ್ಥಗಿತವಾಗಿರುವುದರಿಂದ ಉಂಟಾಗುತ್ತಿರುವ ಆರ್ಥಿಕ ಹಾನಿ ಮತ್ತು ಉದ್ಯೋಗ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು, ಅಗತ್ಯವಿರುವ ಹೆಚ್ಚುವರಿ ಸುರಕ್ಷತಾ ಕ್ರಮಗಳೊಂದಿಗೆ ಸಫಾರಿಯನ್ನ ಮತ್ತೆ ಆರಂಭಿಸಬೇಕೆಂದು ಆಗ್ರಹಿಸಿದೆ.

ಮನವಿ ಪತ್ರದಲ್ಲಿ ಏನಿದೆ?

ನವೆಂಬರ್‌ನಿಂದ ರಾಜ್ಯದಲ್ಲಿ ವನ್ಯಜೀವಿ ಸಫಾರಿಗಳನ್ನು ಸ್ಥಗಿತಗೊಳಿಸಿರುವುದರಿಂದ ಹಲವು ರೀತಿಯ ಸಮಸ್ಯೆಗಳು ಉದ್ಭವಿಸಿವೆ. ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಇರುವ ಪ್ರವಾಸೋದ್ಯಮದ ಉಚ್ಚ ಕಾಲಾವಧಿಯಲ್ಲಿ ಈ ಕ್ಷೇತ್ರವು ಕೋವಿಡ್-19 ಸಂದರ್ಭ ಉಂಟಾಗಿದ್ದ ಸ್ಥಿತಿಯನ್ನೇ ಅನುಭವಿಸುತ್ತಿದೆ. ಇದು  ಕ್ಷೇತ್ರದ ಅಸ್ತಿತ್ವವನ್ನೇ ಅಪಾಯಕ್ಕೆ ತಳ್ಳಿದೆ. ಪ್ರಸ್ತುತವಾಗಿ ಸಫಾರಿ ಸ್ಥಗಿತಕ್ಕೆ ನೀಡಲಾಗುತ್ತಿರುವ ಕಾರಣಗಳು ವೈಜ್ಞಾನಿಕ ಅಥವಾ ಪ್ರಾಯೋಗಿಕವಾಗಿಲ್ಲ. ಸಫಾರಿಗೂ ಹುಲಿಗಳ ದಾಳಿಗೆ ಹಲವರು ಬಲಿಯಾಗಿರುವುದಕ್ಕೂ ಸಂಬಂಧ ಇಲ್ಲ. ಘಟನಾ ಸ್ಥಳಗಳಿಂದ ನಾಗರಹೊಳೆ ಸಫಾರಿ ವಲಯ ಪ್ರತ್ಯೇಕವಾಗಿದ್ದರೆ, ಬಂಡೀಪುರ ಸುಮಾರು 50-100 ಕಿ.ಮೀ. ದೂರದಲ್ಲಿದೆ.

ಇದನ್ನೂ ಓದಿ: ಸಫಾರಿ ವೇಳೆ ಕಾಣಿಸಿಕೊಂಡ‌ ಭಾರಿ ಗಾತ್ರದ ಹುಲಿ

ಸಫಾರಿಗಳ ಸ್ಥಗಿತದಿಂದಾಗಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳ  ದೈನಂದಿನ ಆದಾಯದಲ್ಲಿ ಭಾರಿ ನಷ್ಟ ಉಂಟಾಗಿದೆ. ಜಂಗಲ್ ಲಾಡ್ಜಸ್ ಆ್ಯಂಡ್​​ ರೆಸಾರ್ಟ್ಸ್ ದಿನಕ್ಕೆ ಅಂದಾಜು 30 ಲಕ್ಷ ನಷ್ಟ ಅನುಭವಿಸುತ್ತಿದೆ. ಅರಣ್ಯ ಇಲಾಖೆಗೆ ದಿನಕ್ಕೆ ಸಫಾರಿ ಶುಲ್ಕ ರೂಪದಲ್ಲಿ ಬರುತ್ತಿದ್ದ ಅಂದಾಜು 30 ಲಕ್ಷ ಆದಾಯ ನಿಂತಿದೆ. ರಾಜ್ಯದ ಖಜಾನೆಗೆ ದಿನಕ್ಕೆ ಅಂದಾಜು 60-70 ಲಕ್ಷ ಜಿಎಸ್​ಟಿ ಹಣ ಖೋತಾ ಆಗುತ್ತಿದ್ದು, ಒಟ್ಟು ಮೂರು ಕೋಟಿ ರೂ.ಗಳಿಗಿಂತ ಹೆಚ್ಚಿನ ಆದಾಯದ ಮೇಲೆ ಪರಿಣಾಮ ಉಂಟಾಗಿದೆ.

ಸಂಕಷ್ಟದಲ್ಲಿ 4 ಸಾವಿರ ಉದ್ಯೋಗಿಗಳ ಜೀವನ

ಸಫಾರಿ ಕ್ಷೇತ್ರವು ಸುಮಾರು 8,000 ಜನರಿಗೆ ಉದ್ಯೋಗ ಒದಗಿಸುತ್ತಿದ್ದು, ಇವರಲ್ಲಿ ಶೇ. 80ರಷ್ಟು ಜನರು ಅರಣ್ಯ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆದಿವಾಸಿ ಸಮುದಾಯಗಳಿಗೆ ಸೇರಿದವರು. ಸಫಾರಿ ಬಂದ್​​ ಆಗಿರುವ ಕಾರಣ ಮುಂದಿನ 30 ದಿನಗಳಲ್ಲಿ 1,200–1,500 ದಿನಗೂಲಿ ಮತ್ತು ಒಪ್ಪಂದ ಆಧಾರಿತ ಉದ್ಯೋಗಗಳು ನಷ್ಟವಾಗುವ ಸಾಧ್ಯತೆ ಇದೆ. ಇದು ಹೀಗೆ ಮುಂದುವರಿದರೆ ನಿಯಮಿತ ಸಿಬ್ಬಂದಿಯನ್ನು ಒಳಗೊಂಡಂತೆ ಸುಮಾರು 4,000 ಜನರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ.

ವನ್ಯಜೀವಿ ಪ್ರವಾಸೋದ್ಯಮ ದಕ್ಷಿಣ ಭಾರತದ  ಮೂಲಸ್ತಂಭ. ಹೀಗಿರುವಾಗ ಅಂತರಾಷ್ಟ್ರೀಯ ಪ್ರವಾಸೋದ್ಯಮ ಸಂಯೋಜಕರು ಈಗಾಗಲೇ ವಿದೇಶಿ ಪ್ರವಾಸಿಗರನ್ನು ಕರ್ನಾಟಕ ಬಿಟ್ಟು ಬೇರೆಡೆಗೆ ಕರೆದೊಯ್ಯಲು ಆರಂಭಿಸಿದ್ದಾರೆ. ಈ ರೀತಿಯ ಪ್ರವಾಸಗಳು ಸಾಮಾನ್ಯವಾಗಿ 3–6 ತಿಂಗಳು ಮುಂಚಿತವಾಗಿ ಯೋಜಿಸಲಾಗುತ್ತವೆ. ಆದರೆ ಹಠಾತ್ ಆಗಿ ಅವು ರದ್ದಾದಾಗ ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ವಿಮರ್ಶೆಗಳಿಗೆ ಒಳಗಾಗಿ, ಕರ್ನಾಟಕದ ಹೆಸರಿಗೆ ಚ್ಯುತಿ ಬರಲಿದೆ ಎಂದು  KETRA ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟಿಕೆಟ್ ದರದಲ್ಲಿ ಏಕರೂಪತೆ ತರಲು ಮುಂದಾದ ಆಂಧ್ರ ಸರ್ಕಾರ – Kannada News | Andhra Pradesh government to bring uniformity in movie ticket price

ಸಿನಿಮಾ (Cinema) ಟಿಕೆಟ್ ದರಗಳ ಬಗ್ಗೆ ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ಚರ್ಚೆ ಜೋರಿದೆ. ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರವನ್ನು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು, ಆದರೆ ನ್ಯಾಯಾಲಯ ಅದಕ್ಕೆ ತಡೆ ನೀಡಿದೆ. ಇದೀಗ ನೆರೆಯ ಆಂಧ್ರ ಪ್ರದೇಶದಲ್ಲಿ ಇದೇ ಕೂಗು ಕೇಳಿ ಬರುತ್ತಿದೆ. ಹೊಸ ಸಿನಿಮಾಗಳು ಬಿಡುಗಡೆ ಆದಾಗಲೆಲ್ಲ ಸಿನಿಮಾ ಟಿಕೆಟ್ ದರಗಳನ್ನು ಏರಿಸಲಾಗುತ್ತಿತ್ತು, ಇದರಿಂದ ಜನ ಬೇಸತ್ತು ಹೋಗಿದ್ದರು. ಇದಕ್ಕೆಲ್ಲ ಅಂತ್ಯ ಹಾಡಲು ಆಂಧ್ರ ಸರ್ಕಾರ ಮುಂದಾಗಿದೆ.

ಆಂಧ್ರ ಮತ್ತು ತೆಲಂಗಾಣಗಳಲ್ಲಿ ಟಿಕೆಟ್ ದರಗಳು ತುಸು ಕಡಿಮೆಯೇ ಇವೆ. ಆದರೆ ಪ್ರತಿ ಬಾರಿ ದೊಡ್ಡ ಬಜೆಟ್​ನ ಸಿನಿಮಾಗಳು ಬಿಡುಗಡೆ ಆಗುವ ಸಮಯದಲ್ಲೆಲ್ಲ ಟಿಕೆಟ್ ದರಗಳನ್ನು ಐದು ದಿನ, ಒಂದು ವಾರ ಹೀಗೆ ಹೆಚ್ಚಿಸಲಾಗುತ್ತದೆ. ಇದಕ್ಕೆ ಸಿನಿಮಾ ತಂಡಗಳು ಸರ್ಕಾರದ ಬಳಿ ಅರ್ಜಿ ಹಾಕಿ ಅನುಮತಿಯನ್ನು ಪಡೆದುಕೊಳ್ಳುತ್ತವೆ. ಆದರೆ ಪ್ರತಿ ಬಾರಿ ಹೀಗೆ ಟಿಕೆಟ್ ದರ ಏರಿಕೆ ಮಾಡಿದಾಗಲೂ ಸಿನಿಮಾ ಪ್ರೇಮಿಗಳು ಟೀಕೆ ಮಾಡುತ್ತಿದ್ದರು. ಇದೇ ಕಾರಣಕ್ಕೆ ಇದಕ್ಕೆ ಅಂತ್ಯ ಹಾಡಲು ಆಂಧ್ರ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ:ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ಶಿವಣ್ಣ, ರಜನಿಕಾಂತ್: ಬಾಯ್ಬಿಟ್ಟ ಸ್ಟಾರ್ ನಟ

ಆಂಧ್ರ ಪ್ರದೇಶದ ಸಿನಿಮಾಟೊಗ್ರಫಿ ಸಚಿವ ಕಂಡುಲ ದುರ್ಗೇಶ್ ಈ ಬಗ್ಗೆ ಮಾತನಾಡಿದ್ದು, ‘ಏಕರೂಪ ಟಿಕೆಟ್ ದರವನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿವೆ. ಟಿಕೆಟ್ ದರಗಳು ಸಿನಿಮಾ ರಂಗ ಹಾಗೂ ಪ್ರೇಕ್ಷಕರ ಇಬ್ಬರಿಗೂ ಅನುಕೂಲಕರವಾಗಿ ಇರುವಂತೆ ನೋಡಿಕೊಳ್ಳಲಾಗುತ್ತದೆ’ ಎಂದಿದ್ದಾರೆ. ಸಿನಿಮಾಟೊಗ್ರಫಿ ಸಚಿವರು ಈಗಾಗಲೇ ಕೆಲವು ಪ್ರಮುಖ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ತೆಲುಗು ಚಿತ್ರರಂಗದ ಕೆಲ ಪ್ರಮುಖರು ಸಹ ಭಾಗವಹಿಸಿದ್ದರು.

ಪದೇ ಪದೇ ಟಿಕೆಟ್ ದರ ಹೆಚ್ಚಳದ ಬಗ್ಗೆ ಸಿನಿಮಾ ಪ್ರೇಮಿಗಳು ಮಾತ್ರವಲ್ಲ ಕೆಲ ಸಿನಿಮಾ ಮಂದಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಟಿಕೆಟ್ ದರ ಹೆಚ್ಚಳದಿಂದ ಸಣ್ಣ ಸಿನಿಮಾಗಳಿಗೆ ಭಾರಿ ಹಾನಿ ಆಗುತ್ತಿದೆ. ಜನ ಹಣವನ್ನು ದೊಡ್ಡ ಸಿನಿಮಾಗಳಿಗೆ ಖರ್ಚು ಮಾಡಿ, ಸಣ್ಣ ಸಿನಿಮಾಗಳು ಬಂದಾಗ ನಿರ್ಲಕ್ಷ್ಯ ತೋರುತ್ತಿದ್ದಾರೆ ಅಲ್ಲದೆ, ಈ ರೀತಿ ಕೆಲವು ಸಿನಿಮಾಗಳಿಗೆ ಮಾತ್ರವೇ ಟಿಕೆಟ್ ದರ ಹೆಚ್ಚಿಸುವುದು, ಬೇರೆ ಸಿನಿಮಾ ತಂಡಗಳಿಗೆ ಮಾಡುವ ಅನ್ಯಾಯದಂತೆ ತೋರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಇದೀಗ ಸರ್ಕಾರ, ಇದಕ್ಕೊಂದು ಅಂತ್ಯ ಹಾಡಲು ಮುಂದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷದ ಪಾರ್ಟಿ ರೂಲ್ಸ್ ಬಗ್ಗೆ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್ – Kannada News | Bengaluru Police Commissioner Seemant Kumar Singh Talks about New Year Celebration In the City

ಬೆಂಗಳೂರು, (ಡಿಸೆಂಬರ್ 26): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹೊಸ ವರ್ಷ (New Year 2026) ಸ್ವಾಗತಿಸಲು ಜನತೆ ಸಜ್ಜಾಗುತ್ತಿದ್ದಂತೆ, ಇತ್ತ ಪೊಲೀಸ್ ಇಲಾಖೆಯೂ (Police Department)  ಹೈ ಅಲರ್ಟ್‌ ಆಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ತಡೆಗಟ್ಟಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ನಗರದಾದ್ಯಂತ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸೇರಿದಂತೆ ಎಲ್ಲಾ ಠಾಣೆಗಳ ಪೊಲೀಸರು ರೌಂಡ್​ಸ್​ ಹಾಕುತ್ತಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಾಚರಣೆ: ಹೋಟೆಲ್, ಬಾರ್-ಪಬ್‌ ಎಷ್ಟು ಗಂಟೆ ತನಕ ಓಪನ್? ಕಮಿಷನರ್ ಕೊಟ್ಟ 30 ಸೂಚನೆಗಳು

ಇನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಹೋಟೆಲ್, ಬಾರ್ ಹಾಗೂ ಪಂಬ್ ಮಾಲೀಕರ ಜತೆ ಸಭೆ ಮಾಡಿದ್ದು, ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪಬ್ ಬಾರ್​​ಗಳಲ್ಲಿ ಗ್ರಾಹಕ ಜೊತೆ ಹೇಗೆ ಇರಬೇಕು? ಎಷ್ಟು ಗಂಟೆವರೆಗೂ ಪಬ್ ಬಾರ್ ಓಪನ್ ಇರ್ಬೇಕು ಅಂತೆಲ್ಲಾ ಕೆಲ ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಈ ಬಗ್ಗೆ ಕಮಿನಷರ್ ಮಾತನಾಡಿದ್ದು, ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

VHT 2025-26: ಸತತ 5ನೇ ಶತಕ ಸಿಡಿಸಿದ ಸಿಎಸ್​ಕೆ ಕೈಬಿಟ್ಟ ಆಟಗಾರ – Kannada News | Dhruv Shorey’s Record: 5 Consecutive Centuries in Vijay Hazare Trophy!

ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ಎರಡನೇ ಪಂದ್ಯ ಇಂದು ನಡೆಯಿತು. ಮೊದಲ ಪಂದ್ಯದಂದು ಮೊದಲ ದಿನವೇ ಬರೋಬ್ಬರಿ 21 ಶತಕಗಳು ದಾಖಲಾಗಿದ್ದವು. ಇದೀಗ ಎರಡನೇ ದಿನದಲ್ಲೂ ಹಲವು ಆಟಗಾರರು ಶತಕದ ಸಾಧನೆ ಮಾಡಿದರು. ಅವರಲ್ಲಿ ಒಬ್ಬರು ಧ್ರುವ್ ಶೋರೆ. ಈ ಟೂರ್ನಿಯಲ್ಲಿ ವಿದರ್ಭ ತಂಡದ ಪರ ಆಡುತ್ತಿರುವ ಧ್ರುವ್ ಶೋರೆ (Dhruv Shorey) ರಾಜ್‌ಕೋಟ್‌ನಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 77 ಎಸೆತಗಳಲ್ಲಿ ಅಜೇಯ 109 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಶೋರೆ ಶತಕದ ನೆರವಿನಿಂದ ವಿದರ್ಭ, ಹೈದರಾಬಾದ್ ತಂಡವನ್ನು 89 ರನ್‌ಗಳಿಂದ ಸೋಲಿಸಿದರೆ, ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಧ್ರುವ್ ಶೋರೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಈ ಅಜೇಯ ಶತಕದೊಂದಿಗೆ ಧ್ರುವ್ ಶೋರೆ ಏಕದಿನ ಕ್ರಿಕೆಟ್‌ನಲ್ಲಿ ಸತತ ಐದನೇ ಶತಕ ಬಾರಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಧ್ರುವ್ ಶೋರೆ ಪರಾಕ್ರಮ

ಕಳೆದ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಯ ಕೊನೆಯ ಮೂರು ಪಂದ್ಯಗಳಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದ ಶೋರೆ, ಇದೀಗ ಈ ಆವೃತ್ತಿಯ ಮೊದಲ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದಾರೆ. ಶೋರೆ ಕಳೆದ ಐದು ಇನ್ನಿಂಗ್ಸ್​ಗಳಲ್ಲಿ ಕ್ರಮವಾಗಿ 110, 114, 118, 136, ಮತ್ತು 109 ರನ್​ಗಳ ಇನ್ನಿಂಗ್ಸ್‌ ಆಡಿದ್ದಾರೆ. ಈ ಮೂಲಕ ಸತತ ಐದು ಏಕದಿನ ಶತಕಗಳನ್ನು ಸಿಡಿಸಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ. ಶೋರೆಗಿಂತ ಮೊದಲು ತಮಿಳುನಾಡಿನ ಬ್ಯಾಟ್ಸ್‌ಮನ್ ನಾರಾಯಣ್ ಜಗದೀಶನ್ 2022-23ರ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ್ದರು. ಸತತ ಐದು ಶತಕಗಳೊಂದಿಗೆ ಧ್ರುವ್ ಶೋರೆ, ಕುಮಾರ್ ಸಂಗಕ್ಕಾರ, ಅಲ್ವಿರೊ ಪೀಟರ್ಸನ್, ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರನ್ನು ಹಿಂದಿಕ್ಕಿದ್ದಾರೆ. ಮುಂದಿನ ಪಂದ್ಯದಲ್ಲಿ ಶೋರೆ ಮತ್ತೊಂದು ಶತಕ ಗಳಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ಸತತ ಆರು ಶತಕಗಳನ್ನು ಗಳಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಸೃಷ್ಟಿಸಲಿದ್ದಾರೆ.

ಕೇವಲ 2 ಪಂದ್ಯಗಳಲ್ಲಿ ಅವಕಾಶ ನೀಡಿದ್ದ ಸಿಎಸ್​ಕೆ

2018 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಧ್ರುವ್ ಶೋರೆ ಅವರನ್ನು ಸಿಎಸ್​ಕೆ ಖರೀದಿ ಮಾಡಿತ್ತು. ಆದರೆ ಆ ಆವೃತ್ತಿಯಲ್ಲಿ ಅವರಿಗೆ ಕೇವಲ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತು. ಮುಂದಿನ ಆವೃತ್ತಿಯಲ್ಲೂ ಕೇವಲ ಒಂದು ಪಂದ್ಯವನ್ನು ಆಡಿದ್ದ ಧ್ರುವ್ ಶೋರೆ ಅವರನ್ನು ಆ ನಂತರ ಸಿಎಸ್‌ಕೆ ತಂಡದಿಂದ ಬಿಡುಗಡೆ ಮಾಡಿತ್ತು. ಆ ಬಳಿಕ ಯಾವ ತಂಡವೂ ಧ್ರುವ್ ಶೋರೆ ಅವರನ್ನು ಖರೀದಿಸಿ ಆಡುವ ಅವಕಾಶ ಮಾಡಿಕೊಟ್ಟಿಲ್ಲ.

ಆದಾಗ್ಯೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿರುವ ಧ್ರುವ್ ಶೋರೆ ಏಳು ಶತಕಗಳು ಸೇರಿದಂತೆ 2,848 ರನ್ ಗಳಿಸಿದ್ದಾರೆ. ಹಾಗೆಯೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 15 ಶತಕಗಳನ್ನು ಬಾರಿಸಿರುವ ಶೋರೆ, ಸುಮಾರು 5,500 ರನ್‌ಗಳನ್ನು ಕಲೆಹಾಕಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿಯೂ ತಮ್ಮ ಛಾಪೂ ಮೂಡಿಸಿರುವ ಅವರು 1,236 ರನ್‌ ಸಿಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿರಿಯಾನಿಯೊಂದಿಗೆ ತಿರುಪರನಕುಂದ್ರಂ ಬೆಟ್ಟ ಹತ್ತಲು ಯತ್ನಿಸಿದ ಮುಸ್ಲಿಮರು; ಪೊಲೀಸರಿಂದ ತಡೆ – Kannada News | Police Stopped 60 Kerala Muslims for Attempting to Visit Thiruparankundram Hill With Biryani

ತಿರುಪರನಕುಂದ್ರಂ, ಡಿಸೆಂಬರ್ 26: ಬಿರಿಯಾನಿಯೊಂದಿಗೆ ದರ್ಗಾಕ್ಕೆ ಭೇಟಿ ನೀಡಲು ತಿರುಪರನಕುಂದ್ರಂ ಬೆಟ್ಟವನ್ನು ಹತ್ತಲು ಪ್ರಯತ್ನಿಸುತ್ತಿದ್ದ ಕೇರಳದ (Kerala) 60ಕ್ಕೂ ಹೆಚ್ಚು ಮುಸ್ಲಿಮರನ್ನು ಪೊಲೀಸರು ತಡೆದಿದ್ದಾರೆ. ಬೆಟ್ಟದ ಮೇಲೆ ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ ಎಂಬ ಕಾರಣಕ್ಕೆ ಮುಸ್ಲಿಮರನ್ನು ತಡೆಯಲಾಗಿದೆ. ಇದು ಆ ಪ್ರದೇಶದಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು.

ತಿರುಪರನಕುಂದ್ರಂ ಬೆಟ್ಟದ ಸಿಕಂದರ್ ದರ್ಗಾದಲ್ಲಿ ಜನವರಿ 6, 2026ರಂದು ಚಂದನಕುಡು ಕಂದೂರಿ ಉತ್ಸವ ನಡೆಯಲಿದೆ. ಇದರ ನಂತರ, ಡಿಸೆಂಬರ್ 21, 2025ರಂದು ಧ್ವಜಾರೋಹಣದೊಂದಿಗೆ ಚಂದನಕುಡು ಉತ್ಸವ ಪ್ರಾರಂಭವಾಯಿತು. ಈ ವೇಳೆ ಮುಸ್ಲಿಮರು ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಅಲ್ಲಿ ಮಾಂಸ ತಿನ್ನುವುದನ್ನು ನಿಷೇಧಿಸಲಾಗಿರುವುದರಿಂದ ಪೊಲೀಸರು ಸರಿಯಾದ ತಪಾಸಣೆ ಮಾಡಿ ಅಲ್ಲಿಗೆ ಬರುವ ಮುಸ್ಲಿಮರಿಗೆ ಅವಕಾಶ ನೀಡುತ್ತಾರೆ. ಇಂದು ಬಿರಿಯಾನಿಯೊಂದಿಗೆ ಬಂದ ಕೇರಳದ ಮುಸ್ಲಿಮರನ್ನು ತಡೆದು ನಿಲ್ಲಿಸಲಾಗಿದೆ.

ಇದನ್ನೂ ಓದಿ: ಒಂದೇ ಬೈಕ್‌ನಲ್ಲಿ 5 ಜನ ಸವಾರಿ! 31 ಸಾವಿರ ರೂ. ದಂಡ ಹಾಕಿದ ಪೊಲೀಸರು

ತಿರುಪರನಕುಂದ್ರಂ ಬೆಟ್ಟದಲ್ಲಿ ದೀಪ ಹಚ್ಚುವ ವಿವಾದದ ನಡುವೆ, ಭಕ್ತರು ಬೆಟ್ಟಕ್ಕೆ ಹೋಗುವುದನ್ನು ನಿಷೇಧಿಸಲಾಯಿತು. ಡಿಸೆಂಬರ್ 21ರಂದು ತಿರುಪರಂಕುಂದ್ರಂ ಬೆಟ್ಟದ ದರ್ಗಾದಲ್ಲಿ ಧ್ವಜಾರೋಹಣದೊಂದಿಗೆ ಸಂದನಕೂಡು ಉತ್ಸವ ಪ್ರಾರಂಭವಾಯಿತು. ಇದರ ನಂತರ, ಅಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ತಮಿಳುನಾಡು ಮತ್ತು ಕೇರಳದಿಂದ ಪ್ರತಿದಿನ ನೂರಾರು ಭಕ್ತರು ಬೆಟ್ಟದ ಮೇಲಿನ ದರ್ಗಾಕ್ಕೆ ಭೇಟಿ ನೀಡುತ್ತಿದ್ದಾರೆ.

ತಿರುಪರನಕುಂದ್ರಂ ಬೆಟ್ಟದಲ್ಲಿ ಮಾಂಸಾಹಾರ ಸೇವಿಸುವುದನ್ನು ನಿಷೇಧಿಸಲಾಗಿದೆ. ಆದರೂ ಕೇರಳದ ಪಾಲಕ್ಕಾಡ್ ಪ್ರದೇಶದ ಒಂದು ಕುಟುಂಬ ಸೇರಿದಂತೆ 60 ಜನರು ಇಂದು ಸಿಕಂದರ್ ದರ್ಗಾಕ್ಕೆ ಭೇಟಿ ನೀಡಲು ತಿರುಪರನಕುಂದ್ರಂಗೆ ಬಂದಿದ್ದರು. ಅವರು ಬಿರಿಯಾನಿಯೊಂದಿಗೆ ಬಂದ ಕಾರಣ ಅವರನ್ನು ಪೊಲೀಸರು ತಡೆದರು. ಮಾಂಸಾಹಾರ ಸೇವಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿ ಪೊಲೀಸರು ಅವರನ್ನು ಹೋಗದಂತೆ ನಿಷೇಧಿಸಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ದಂಪತಿ , ರೈಲ್ವೆ ಹಳಿಯಲ್ಲಿ ಇಬ್ಬರು ಪುತ್ರರು ಶವವಾಗಿ ಪತ್ತೆ

ಜನವರಿ 6ರಂದು ತಿರುಪರನಕುಂದ್ರಂ ಬೆಟ್ಟದ ಸಿಕಂದರ್ ದರ್ಗಾದಲ್ಲಿ ಶ್ರೀಗಂಧ ಮತ್ತು ಕಂದೂರಿ ಉತ್ಸವ ನಡೆಯಲಿದೆ. ಈ ಕಂದೂರಿ ಉತ್ಸವವನ್ನು ನಿಷೇಧಿಸುವಂತೆ ಕೋರಿ ಹೈಕೋರ್ಟ್‌ನ ಮಧುರೈ ಶಾಖೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ನಿಷೇಧ ಹೇರದೆ ವಿಚಾರಣೆಯನ್ನು ಜನವರಿಗೆ ಮುಂದೂಡಿತು. ಅಲ್ಲಿಯವರೆಗೆ ಭಕ್ತರು ತಿರುಪರನಕುಂದ್ರಂ ಬೆಟ್ಟಕ್ಕೆ ಭೇಟಿ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ.

ತಿರುಪರನಕುಂದ್ರಂ ದರ್ಗಾ ಬಳಿಯ ಕಲ್ಲಿನ ಕಂಬದ ಮೇಲೆ ಮಾತ್ರ ದೀಪ ಹಚ್ಚಬೇಕೆಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇದಕ್ಕೆ ಸಂಬಂಧಿಸಿದ ಪ್ರಕರಣವು ಹೈಕೋರ್ಟ್‌ನ ಮಧುರೈ ಶಾಖೆಯಲ್ಲಿ ಬಾಕಿ ಇದೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಲ್ಲೇಖಿಸಿ ತಮಿಳುನಾಡು ಸರ್ಕಾರ ಇದಕ್ಕೆ ಅನುಮತಿ ನೀಡಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ.. – Kannada News | 45 Kannada Movie producer Ramesh Reddy talks about Box Office Collection and Piracy

ರಾಜ್​ ಬಿ. ಶೆಟ್ಟಿ, ಉಪೇಂದ್ರ, ಶಿವರಾಜ್​​ಕುಮಾರ್ ಅಭಿನಯದ ‘45’ ಸಿನಿಮಾ (45 Kannada Movie) ರಿಲೀಸ್ ಆಗಿದೆ. ಈ ಚಿತ್ರದ ಕಲೆಕ್ಷನ್ ಎಷ್ಟು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಅಲ್ಲದೇ, ಈ ಸಿನಿಮಾದ ಪೈರಸಿ ಆಗಿರುವುದು ಬೇಸರದ ಸಂಗತಿ. ಈ ಬಗ್ಗೆ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಕಲೆಕ್ಷನ್ ಸೂಪರ್ ಆಗಿದೆ. ಅದರ ಬಗ್ಗೆ ನನಗೆ ಖುಷಿ ಇದೆ. ನಾನು ಖಂಡಿತಾ ಸೇಫ್ ಆಗುತ್ತೇನೆ. ನಿನ್ನೆ ಒಂದು ಶೋ ಕೂಡ ಖಾಲಿ ಇಲ್ಲ. ಎಲ್ಲದೂ ಹೌಸ್​ಫುಲ್ ಆಗಿದೆ. ಬುಕ್​ ಮೈ ಶೋ ನೋಡಿ. ಸಿನಿಮಾದಲ್ಲಿ ಒಳ್ಳೆಯ ಕಂಟೆಂಟ್ ಇದೆ. ಸಿನಿಮಾವನ್ನು ಫ್ಯಾಮಿಲಿ ಆಡಿಯನ್ಸ್ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಿರುವಾಗ ನನ್ನ ಮೊಬೈಲ್​​ಗೆ ಪೈರಸಿಯ 4-5 ಲಿಂಕ್ ಬಂದರೆ ಹೇಗೆ ಆಗುತ್ತದೆ ಅಂತ ನೀವೇ ಹೇಳಿ. 3 ವರ್ಷದ ಶ್ರಮ ನಮ್ಮದು. ಒಂದು ಸಿನಿಮಾಗೆ ಈ ರೀತಿ ಪೈರಸಿ (Piracy) ಮಾಡುವುದು ತಪ್ಪು. ಈ ರೀತಿ ಪೈರಸಿ ಮಾಡಿದರೆ ದೇವರೇ ನೋಡಿಕೊಳ್ಳುತ್ತಾರೆ’ ಎಂದು ರಮೇಶ್ ರೆಡ್ಡಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮನೆಗೆ ಬರ್ತಾನೆಂದು ಮಗನ ದಾರಿ ಕಾಯುತ್ತಿದ್ದ ತಾಯಿಗೆ ಬರಸಿಡಿಲು: 10 ದಿನದ ಬಳಿಕ ಪುತ್ರ ಶವವಾಗಿ ಪತ್ತೆ – Kannada News | Devanahalli: Missing Student Found Dead, Family Suspects Murder Linked to Love Affair

ದೇವನಹಳ್ಳಿ, ಡಿಸೆಂಬರ್​ 26: ಆತನದು ಹದಿಹರಿಯದ ವಯಸ್ಸು. ಈಗಷ್ಟೇ ಕಾಲೇಜು ಮೆಟ್ಟಿಲೇರಿದ್ದ. ಪ್ರಥಮ ಪಿಯುಸಿ ಓದುತ್ತಾ, ಜಾಲಿಯಾಗೆ ಊರ ತುಂಬಾ ಓಡಾಡುತ್ತಿದ್ದ. ಡಿಸೆಂಬರ್​ 15ರಂದು ಮನೆಯಿಂದ ಸ್ನೇಹಿತನ ಬೈಕ್ ತೆಗೆದುಕೊಂಡು ಹೋದವನು 10 ದಿನಗಳ ಬಳಿಕ ರಸ್ತೆ ಮೋರಿಯಲ್ಲಿ ಶವವಾಗಿ (Deadbody) ಪತ್ತೆಯಾಗಿದ್ದಾನೆ. ಪ್ರೀತಿ (Love) ವಿಚಾರಕ್ಕೆ ಯುವತಿ ಕಡೆಯವರಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಯುವಕನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದುಕೊಂಡಿದೆ.

ನಡೆದದ್ದೇನು?

ಅಂದಹಾಗೆ ರಸ್ತೆ ಬದಿಯ ಮೋರಿಯಲ್ಲಿ ಬಿದ್ದು ದುರಂತ ಅಂತ್ಯ ಕಂಡಿರುವ ದುರ್ದೈವಿಯ ಹೆಸರು ನಿಶಾಂಕ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ನಿವಾಸಿ ನಿಶಾಂಕ್, ಡಿ. 15ರಂದು ಪಕ್ಕದ ಮನೆಯವನ ಬಳಿ ಎನ್ಎಸ್ ಪಲ್ಸರ್ ಬೈಕ್ ಪಡೆದು ಒಂದು ರೌಂಡ್ ಅಂತ ಹೊರಟ್ಟಿದ್ದ. ಆದರೆ ಬೆಳಗ್ಗೆ ಮನೆಯಿಂದ ಹೊರಗಡೆ ಹೋದ ನಿಶಾಂಕ್, ಸುಮಾರು ಗಂಟೆಯಾದರು ವಾಪಸ್ ಬಂದಿಲ್ಲ. ಹೀಗಾಗಿ ಎಲ್ಲೆಡೆ ಹುಡುಕಾಡಿದ ಕುಟುಂಬಸ್ಥರು ಕೊನೆಗೆ ಪೊಲೀಸ್ ಠಾಣೆಗೆ ಮಗನ ನಾಪತ್ತೆ ಬಗ್ಗೆ ದೂರು ನೀಡಿ ಕಾದು ಕುಳಿತಿದ್ದರು.

ಇದನ್ನೂ ಓದಿ: ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಕೃತ್ಯ; ನರ್ಸ್‌ಗಳು ಬಟ್ಟೆ ಬದಲಿಸುವ ವಿಡಿಯೋ ಮಾಡುತ್ತಿದ್ದ ಸೈಕೋ ಅಂದರ್!

ಎಷ್ಟು ಹುಡುಕಾಡಿದರು ಮನೆಯಿಂದ ಹೊರಗಡೆ ಹೋಗಿದ್ದ ಯುವಕ ವಾಪಸ್ ಬಂದಿಲ್ಲ. ಇಂದು ಬೆಳಗ್ಗೆ ಊರ ಆಚೆ ಶವವಾಗಿ ಪತ್ತೆಯಾಗಿದ್ದಾನೆ. ದೊಡ್ಡಬಳ್ಳಾಫುರ ಚಿಕ್ಕಬಳ್ಳಾಫುರ ರಸ್ತೆಯ ಕಾಲುವೆಯ ಮೋರಿಯಲ್ಲಿ ಬೈಕ್ ಸಮೇತ ಯುವಕನ ಮೃತದೇಹ ಕಂಡುಬಂದಿದೆ. ಮೃತದೇಹ ಕಂಡ ಸ್ಥಳಿಯರು ತಕ್ಷಣ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಹಪಾಠಿ ಜೊತೆ ಚಿಗುರೊಡೆದಿದ್ದ ಪ್ರೀತಿ

ಪ್ರಥಮ ಪಿಯುಸಿ ಓದುತ್ತಿದ್ದ ನಿಶಾಂಕ್​ ನಿತ್ಯ ಬಸ್​ನಲ್ಲಿ ಚಿಕ್ಕಬಳ್ಳಾಪುರಕ್ಕೆ ಕಾಲೇಜಿಗೆ ಹೋಗಿ ಬರುತ್ತಿದ್ದ. ಊರಿನಲ್ಲಿ ಜಾಲಿಯಾಗಿ ಓಡಾಡಿಕೊಂಡಿದ್ದ. ಜೊತೆಗೆ ಇತ್ತೀಚೆಗೆ ಕಾಲೇಜಿಗೆ ಹೋಗುತ್ತಿದ್ದ ಸಹಪಾಠಿ ಜೊತೆ ನಿಶಾಂಕ್​ಗೆ ಪ್ರೀತಿ ಚಿಗುರೊಡೆದಿದ್ದು, ಕಾಲೇಜು ಬಳಿ ಹುಡುಗಿ ಕಡೆಯವರು ವಾರ್ನಿಂಗ್ ನೀಡಿದ್ದರು ಎನ್ನಲಾಗಿದೆ.

ಅಲ್ಲದೆ ನಿಶಾಂಕ್ ನಾಪತ್ತೆಯಾದ ಹಿಂದಿನ ದಿನ ಹುಡುಗಿ ಜೊತೆಯಾಗಿರುವ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಾಕಿ ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಸಹ ಕೋರಿದ್ದನಂತೆ. ಹೀಗಾಗಿ ಹುಡುಗಿ ಮನೆ ಕಡೆಯವರೆ ನಮ್ಮ ಹುಡುಗನನ್ನ ಕೊಲೆ ಮಾಡಿರಬಹುದು ಅಂತ ಮೃತನ ಮನೆಯವರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ನಾಪತ್ತೆಯಾದ 10 ದಿನಗಳ ಬಳಿಕ ನಿಶಾಂಕ್ ನನ್ನ ಕೊಲೆ ಮಾಡಿ ತಂದು ಮೋರಿ ಕೆಳಗಡೆ ಬಿಸಾಡಿದ್ದು, ಇದು ಅಪಘಾತವಲ್ಲ ಕೊಲೆ ಅಂತ ನಿಶಾಂಕ್ ಮನೆಯವರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೆಲಮಂಗಲ: ಮದುವೆಯಾಗಿ ತಿಂಗಳು ಕಳೆಯುವುದರೊಳಗೆ ನಿಗೂಢವಾಗಿ ನವ ವಿವಾಹಿತೆ ಸಾವು

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಫುರ ಗ್ರಾಮಾಂತರ ಪೊಲೀಸರು ಮತ್ತು ಸೊಕೋ ಟೀಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ ಮೃತನ ಪೋಷಕರ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದು, ವಿದ್ಯಾರ್ಥಿಯದ್ದು ಆಕಸ್ಮಿಕ ಸಾವೋ ಅಥವಾ ಕೊಲೆಯೋ ಎನ್ನುವುದನ್ನು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

VHT 2025-26: ಕೇವಲ ಬೌಂಡರಿಗಳಿಂದಲೇ ಅರ್ಧಶತಕ ಚಚ್ಚಿದ ವಿರಾಟ್ ಕೊಹ್ಲಿ

Source link

Vaibhav Suryavanshi: ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ – Kannada News | Bal Puraskar for Vaibhav Suryavanshi: 14 Year Old Cricket Star’s Record Journey

ಕೇವಲ 14 ವರ್ಷ ವಯಸ್ಸಿನಲ್ಲೇ ಕ್ರಿಕೆಟ್‌ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ ತಮ್ಮ ವೃತ್ತಿಜೀವನದ ಆರಂಭದ ಹಂತದಲ್ಲೇ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಕಿರಿಯನೆಂಬ ದಾಖಲೆಯಿಂದ ಹಿಡಿದು, ಇಂಗ್ಲೆಂಡ್‌, ಆಸ್ಟ್ರೇಲಿಯಾದಲ್ಲೂ ವೈಭವ್ ಆರ್ಭಟ ಜೋರಿತ್ತು. ಸಿಕ್ಕ ಅವಕಾಶಗಳನ್ನು ಎರಡು ಕೈಗಳಿಂದ ಬಾಚಿಕೊಂಡಿರುವ ವೈಭವ್​ಗೆ ಇದೀಗ ಭಾರತ ಸರ್ಕಾರದಿಂದಲೂ ಮನ್ನಣೆ ಸಿಕ್ಕಿದೆ. ವೈಭವ್ ಸೂರ್ಯವಂಶಿ ಅವರಿಗೆ ದೇಶದ ಅತ್ಯುನ್ನತ ಮಕ್ಕಳ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಿದ್ದಾರೆ.

ವಾಸ್ತವವಾಗಿ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡದ ಪರ ಕಣಕ್ಕಿಳಿಯುತ್ತಿರುವ ವೈಭವ್ ಮೊದಲ ಪಂದ್ಯದಲ್ಲೇ 190 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಹೀಗಾಗಿ ಇಂದು ನಡೆದ ಎರಡನೇ ಪಂದ್ಯದಲ್ಲೂ ವೈಭವ್ ಆರ್ಭಟ ನೋಡಲು ಎಲ್ಲರೂ ಕಾದಿದ್ದರು. ಆದರೆ ಇಂದಿನ ಪಂದ್ಯದಲ್ಲಿ ವೈಭವ್ ಆಡಿರಲಿಲ್ಲ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರತಿ ವರ್ಷದಂತೆ, ಈ ವರ್ಷವೂ ದೇಶಾದ್ಯಂತದ ಅನೇಕ ಯುವಕರು ಮತ್ತು ಮಕ್ಕಳನ್ನು ಅವರ ಸಾಧನೆಗಳಿಗಾಗಿ, ಕೆಲವರು ಅವರ ಧೈರ್ಯಕ್ಕಾಗಿ, ಇತರರು ಕ್ರೀಡೆ, ಸಂಗೀತ ಅಥವಾ ವಿಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಗೌರವಿಸಲಾಯಿತು.

ಅದರಂತೆ ಬಿಹಾರದ ಸಮಷ್ಟಿಪುರದ ವೈಭವ್ ಅವರಿಗೆ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಐಪಿಎಲ್‌ನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಮತ್ತು ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಸಾಧನೆಗಾಗಿ ರಾಷ್ಟ್ರಪತಿ ಮುರ್ಮು ವೈಭವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link