Category Archives: Blog

Your blog category

Yearly Horoscope 2026: 2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ – Kannada News | Libra Yearly Horoscope 2026: Astrological Predictions by Dr. Basavaraj Guruji

2026ರ ತುಲಾ ರಾಶಿಯ ವರ್ಷ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ವಿಶ್ಲೇಷಿಸಿದ್ದಾರೆ. ಈ ರಾಶಿಯಲ್ಲಿ ಚಿತ್ತಾ ನಕ್ಷತ್ರದ 3 ಮತ್ತು 4ನೇ ಪಾದ, ಸ್ವಾತಿ ನಕ್ಷತ್ರದ 4ನೇ ಪಾದ, ವಿಶಾಖ ನಕ್ಷತ್ರದ 1, 2, ಮತ್ತು 3ನೇ ಪಾದಗಳು ಸೇರಿವೆ. ಜೂನ್ 2ರ ವರೆಗೆ ಗುರುಬಲ ಇದ್ದು, ನಂತರ ಗುರು ಭಾಗ್ಯ ಸ್ಥಾನದಿಂದ ಕರ್ಮ ಸ್ಥಾನಕ್ಕೆ (9ರಿಂದ 10ನೇ ಮನೆಗೆ) ಸಂಚಾರ ಮಾಡಲಿದೆ. ಶನಿ ಗ್ರಹ 6ನೇ ಮನೆಯಲ್ಲಿ, ರಾಹು 5ರಿಂದ 4ಕ್ಕೆ, ಕೇತು 11ರಿಂದ 10ಕ್ಕೆ ಸಂಚರಿಸಲಿವೆ.

ವೃತ್ತಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಶುಭ ಫಲಗಳು ಹೆಚ್ಚಾಗಲಿದ್ದು, ಕಲಾವಿದರು, ಸಾಹಿತಿಗಳು, ಪತ್ರಕರ್ತರು, ಸಿನಿಮಾ ನಟರು, ಶಿಕ್ಷಕರು, ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಪ್ರಗತಿ ನಿರೀಕ್ಷಿಸಲಾಗಿದೆ. ಮನೆ ಕಟ್ಟುವ, ಸೈಟ್ ವಿವಾದ ಬಗೆಹರಿಯುವ ಯೋಗವಿದೆ. ಉನ್ನತ ಶಿಕ್ಷಣ, ದೂರದ ಪ್ರಯಾಣ ಹಾಗೂ ಉತ್ತಮ ಜನಸಂಪರ್ಕ ಸಾಧ್ಯ. ಮಹಿಳೆಯರಿಗೆ ಹಣದ ಹರಿವು ಹೆಚ್ಚಾಗಿ, ತಂದೆ-ತಾಯಿಗಳ ಬೆಂಬಲ ಮತ್ತು ಪತಿ/ಸ್ವಂತ ಉದ್ಯೋಗದಲ್ಲಿ ಬಡ್ತಿ ಯೋಗವಿದೆ.

ಹಣಕಾಸಿನ ಹೂಡಿಕೆ ವಿಚಾರದಲ್ಲಿ ಜಾಗ್ರತೆ ಅಗತ್ಯ. ದುಶ್ಚಟಗಳಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆತುರದ ನಿರ್ಧಾರಗಳು, ಕೋಪತಾಪಗಳಿಂದ ದೂರವಿರಿ. ವಾಹನ ಚಾಲನೆಯಲ್ಲಿ ಎರಡನೇ ಅರ್ಧಭಾಗದಲ್ಲಿ ಎಚ್ಚರಿಕೆ ವಹಿಸಬೇಕು. ದುಂದುವೆಚ್ಚ, ಶೇರ್ ಮಾರ್ಕೆಟ್‌ನಲ್ಲಿನ ಅತಿಯಾದ ಹೂಡಿಕೆಗಳಿಂದ ದೂರವಿರಲು ಸೂಚಿಸಲಾಗಿದೆ. ಮಕ್ಕಳ ಕಡೆಗೆ ಹೆಚ್ಚು ಗಮನ ನೀಡಬೇಕು. ದೇವಿ ಆರಾಧನೆ, ಗೋ ಸೇವೆ ಹಾಗೂ ಅನಾಥರಿಗೆ ಸಹಾಯ ಮಾಡುವುದು ಉತ್ತಮ ಪರಿಹಾರೋಪಾಯಗಳಾಗಿವೆ. ಗುಲಾಬಿ, ಕಪ್ಪು ಬಣ್ಣಗಳು, 6 ಮತ್ತು 2 ಅದೃಷ್ಟ ಸಂಖ್ಯೆಗಳು, ಪೂರ್ವ ಮತ್ತು ದಕ್ಷಿಣ ದಿಕ್ಕು ಪ್ರಯಾಣಕ್ಕೆ ಶುಭ. ಲಕ್ಷ್ಮೀನಾರಸಿಂಹ ಮಂತ್ರ ಕೇಳುವುದು ಮತ್ತು ದರ್ಶನ ಮಾಡುವುದು ಶುಭ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್

ಧನುಷ್ ಅವರ ಪತ್ನಿ ಸಂಜನಾ ಬಗ್ಗೆ ಅವರ ತಾಯಿ ಮಾತನಾಡಿದ್ದಾರೆ. ಸಂಬಂಧಿಯನ್ನೇ
ಧನುಷ್​​ಗೆ ತರಲಾಯಿತು. ಧನುಷ್ ಎಂಗೇಜ್​​ಮೆಂಟ್ ವಿಷಯವನ್ನು ಧನುಷ್ ತಾಯಿ ವಿವರಿಸಿದ್ದಾರೆ. ‘ಸಂಜನಾ ನಾಮಕರಣಕ್ಕೆ ಧನುಷ್​​ ಕೈಯಿಂದ ಉಂಗುರ ಹಾಕಿಸಲಾಗಿತ್ತು. ಆಗಲೇ ಎಂಗೇಜ್​​ಮೆಂಟ್ ನಡೆದಿತ್ತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಟ್ರೋ ವಿಸ್ತರಣೆಗೆ 40,000 ಕೋಟಿ ರೂ! ಬೆಂಗಳೂರು ಆಚೆಗೂ ಅಭಿವೃದ್ಧಿಗೆ ಡಿಕೆಶಿ ಮನವಿ – Kannada News | DCM DK Shivakumar Pushes for Bengaluru Metro Expansion and River Interlinking with Central Government

ದೆಹಲಿ, ಡಿಸೆಂಬರ್ 24: ಬೆಂಗಳೂರು ಮೆಟ್ರೋ ಯೋಜನೆಗಳ ಪ್ರಗತಿ ಹಾಗೂ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದು, ಈ ಎರಡನೇ ಹಂತದ ಮೆಟ್ರೋ ಯೋಜನೆಗೆ 15 ವರ್ಷಗಳ ಹಿಂದೆ 26,000 ಕೋಟಿ ರೂ. ವೆಚ್ಚ ಅಂದಾಜು ಮಾಡಲಾಗಿದ್ದರೂ, ಈಗ ಅದು 40,000 ಕೋಟಿಗ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಭೂಸ್ವಾಧೀನ ವೆಚ್ಚ 2,250 ಕೋಟಿಯಿಂದ 5,195 ಕೋಟಿ ರೂ.ಗೆ ಹಾಗೂ ಸಿವಿಲ್ ಕಾಮಗಾರಿಗಳ ವೆಚ್ಚ 12,000 ಕೋಟಿಯಿಂದ 16,000 ಕೋಟಿ ರೂ.ಗೆ ಹೆಚ್ಚಳವಾಗಿದೆ. ಡಿಸೆಂಬರ್ 26ರೊಳಗೆ ಈ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.

ಇದಲ್ಲದೆ, ಮೂರನೇ ಹಂತದ 3ಎ ಯೋಜನೆಯಡಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿಲೋಮೀಟರ್ ಉದ್ದದ 28 ನಿಲ್ದಾಣಗಳ ಮಾರ್ಗಕ್ಕೆ 28,405 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಬೆಂಗಳೂರು, ಬಿಡದಿ, ಮೈಸೂರು, ಕನಕಪುರ, ನೆಲಮಂಗಲ, ತುಮಕೂರು, ಏರ್ಪೋರ್ಟ್, ಚಿಕ್ಕಬಳ್ಳಾಪುರ, ಹೊಸಕೋಟೆ ಮತ್ತು ಕೋಲಾರದಂತಹ ಪಟ್ಟಣಗಳಿಗೆ ಆರ್ಆರ್‌ಟಿಎಸ್ ಡಿಪಿಆರ್ ಸಿದ್ಧಪಡಿಸಲು ಮನವಿ ಮಾಡಲಾಗಿದೆ. ಈ ಯೋಜನೆಗಳು ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಿ, ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೇರಳ: ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಆಟೋ ನಿಲ್ಲಿಸಿ ಹೋದ ಚಾಲಕ, ವಂದೇ ಭಾರತ್ ರೈಲು ಡಿಕ್ಕಿ – Kannada News | Drunk Auto Driver Leaves Vehicle on Tracks, Vande Bharat Train Collides in Kerala

ತಿರುವನಂತಪುರ, ಡಿಸೆಂಬರ್ 24: ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಆಟೋವನ್ನು ರೈಲ್ವೆ ಹಳಿ ಮೇಲೆ ನಿಲ್ಲಿಸಿದ್ದ ಪರಿಣಾಮ ವಂದೇ ಭಾರತ್(Vande Bharat) ರೈಲು ಡಿಕ್ಕಿ ಹೊಡೆದಿರುವ ಘಟನೆ ಕೇರಳದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಕೇರಳದ ತಿರುವನಂತಪುರಂ ಜಿಲ್ಲೆಯ ಅಕತುಮುರಿ ನಿಲ್ದಾಣದ ಬಳಿ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಲೋಕೊ ಪೈಲಟ್ ರೈಲ್ವೆ ಹಳಿ ಮೇಲೆ ಆಟೋ ನಿಂತಿರುವುದನ್ನು ಕಂಡು ಬ್ರೇಕ್ ಹಾಕಿದ್ದಾರೆ. ಆದರೂ ರೈಲಿನ ಮುಂಭಾಗ ಆಟೋಗೆ ತಾಗಿದೆ.

ಕಾಸರಗೋಡಿನಿಂದ ತಿರುವನಂತಪುರಕ್ಕೆ ಚಲಿಸುತ್ತಿದ್ದ ರೈಲು ರಾತ್ರಿ 10.10 ರ ಸುಮಾರಿಗೆ ವರ್ಕಲಾ-ಕಡಕ್ಕಾವೂರು ವಿಭಾಗದ ಅಕತುಮುರಿಗೆ ಸಮೀಪಿಸುತ್ತಿದ್ದಾಗ, ಲೋಕೋ ಪೈಲಟ್ ವಾಹನವೊಂದು ರೈಲು ಹಳಿ ಮೇಲೆ ಇರುವುದನ್ನು ಕಂಡಿದ್ದಾರೆ. ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ, ಎಂಜಿನಿಯರಿಂಗ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ನೋಡಿದಾಗ ಆಟೋದೊಳಗೆ ಯಾರೂ ಇರಲಿಲ್ಲ.

ಚಾಲಕನ ನಿಯಂತ್ರಣ ತಪ್ಪಿ ಎರಡನೇ ಪ್ಲಾಟ್‌ಫಾರ್ಮ್‌ಗೆ ಡಿಕ್ಕಿ ಹೊಡೆದ ನಂತರ ಆಟೋರಿಕ್ಷಾ ಹಳಿಗೆ ಉರುಳಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಆರ್‌ಪಿಎಫ್ ಪೊಲೀಸರು ಆಟೋರಿಕ್ಷಾ ಚಾಲಕ ಸುಧಿಯನ್ನು ವಶಕ್ಕೆ ಪಡೆದರು. ಆ ಸಮಯದಲ್ಲಿ ಆತ ಮದ್ಯದ ಅಮಲಿನಲ್ಲಿದ್ದನೆಂದು ಶಂಕಿಸಲಾಗಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ.

ಮತ್ತಷ್ಟು ಓದಿ:Vande Bharat Pilot: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪೈಲಟ್‌ ಸಂಬಳ ಎಷ್ಟು? ಆಯ್ಕೆ ಪ್ರಕ್ರಿಯೆ ಮತ್ತು ಜವಾಬ್ದಾರಿ ತಿಳಿಯಿರಿ

ಹಳಿ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ನಂತರ, ವಂದೇ ಭಾರತ್ ಎಕ್ಸ್‌ಪ್ರೆಸ್ ರಾತ್ರಿ 11.15 ಕ್ಕೆ ತನ್ನ ಪ್ರಯಾಣವನ್ನು ಪುನರಾರಂಭಿಸಿತು. ವಿಳಂಬದ ಹೊರತಾಗಿಯೂ, ರೈಲು ರಾತ್ರಿ 11.50 ಕ್ಕೆ ತಿರುವನಂತಪುರಂ ಸೆಂಟ್ರಲ್ ತಲುಪಿತು. ಪ್ರಯಾಣಿಕರು, ರೈಲ್ವೆ ಸಿಬ್ಬಂದಿ ಅಥವಾ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಆ ವಿಭಾಗದಲ್ಲಿ ರೈಲು ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಸಾಮಾನ್ಯಗೊಳಿಸಲಾಯಿತು. ಲೋಕೋ ಪೈಲಟ್‌ನ ಸಕಾಲಿಕ ಕ್ರಮವು ದೊಡ್ಡ ಅಪಘಾತವನ್ನು ತಪ್ಪಿಸಲು ಸಹಾಯ ಮಾಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲಾಗಿಲ್ಲ, ಆದರೆ ಹಿಂದಿನ ಸರ್ಕಾರವು ಮದ್ಯಪಾನವನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ನೀತಿಯನ್ನು ಜಾರಿಗೆ ತಂದಿತ್ತು, ಇದರಲ್ಲಿ ಬಾರ್‌ಗಳನ್ನು ಮುಚ್ಚುವುದು ಮತ್ತು 5-ಸ್ಟಾರ್ ಹೋಟೆಲ್‌ಗಳಿಗೆ ಮಾತ್ರ ಮಾರಾಟವನ್ನು ಸೀಮಿತಗೊಳಿಸುವುದು ಸೇರಿತ್ತು.2014ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯವನ್ನು ದಶಕದಲ್ಲಿ ಮದ್ಯ-ಮುಕ್ತ ಮಾಡಲು ಯೋಜಿಸಿತ್ತು.

700ಕ್ಕೂ ಹೆಚ್ಚು ಬಾರ್‌ಗಳನ್ನು ಮುಚ್ಚಲಾಯಿತು ಮತ್ತು 5-ಸ್ಟಾರ್ ಹೋಟೆಲ್‌ಗಳಿಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಯಿತು. ಇದರಿಂದಾಗಿ ಪ್ರವಾಸೋದ್ಯಮ ಮತ್ತು ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಮತ್ತು ಸುಪ್ರೀಂ ಕೋರ್ಟ್ ಸಹ ಈ ನಿರ್ಧಾರದ ಬಗ್ಗೆ ಪ್ರಶ್ನಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ, ಹೆಬ್ಬುಲಿ ಕಂಡು ಭೀತಿಯಲ್ಲಿ ಗ್ರಾಮಸ್ಥರು – Kannada News | Tiger Population Rises in Chamarajanagar: Frequent Sightings in Bandipur, BRT and MM Hills Forests Trigger Fear

ಚಾಮರಾಜನಗರ, ಡಿಸೆಂಬರ್ 24: ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ಸಂತತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಅರಣ್ಯ ಇಲಾಖೆ ಗಮನಕ್ಕೆ ಬಂದಿದೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್, ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದ್ದು, ದಿನಕ್ಕೊಂದು ಕಡೆ ವ್ಯಾಘ್ರಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯ ಮೂಡಿಸುತ್ತಿವೆ. ಇತ್ತೀಚೆಗೆ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ನ ಕೆ.ಗುಡಿ ಸಮೀಪ ಬೃಹತ್ ಗಂಡು ಹುಲಿ ಪ್ರತ್ಯಕ್ಷವಾಗಿದ್ದು, ತನ್ನ ವ್ಯಾಪ್ತಿಯಲ್ಲಿ ಮತ್ತೊಂದು ಹುಲಿ ಓಡಾಟ ನಡೆಸಿದ್ದೇನೋ ಎಂಬ ಅನುಮಾನದಿಂದ ಮರಗಳ ಎಲೆ, ಕೊಂಬೆಗಳ ಬಳಿ ತೆರಳಿ ವಾಸನೆ ಪರಿಶೀಲಿಸುತ್ತಿರುವ ದೃಶ್ಯ ಕಂಡುಬಂದಿದೆ. ಈ ವೇಳೆ ಹುಲಿಯ ಓಡಾಟದ ದೃಶ್ಯವನ್ನು ವಾಹನ ಸವಾರರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ವಿಡಿಯೋದಲ್ಲಿ ಕ್ಯಾಮರಾವನ್ನು ಗಮನಿಸಿದ ಬೃಹತ್ ವ್ಯಾಘ್ರ ಗರ್ಜಿಸಿರುವುದು ಸ್ಪಷ್ಟವಾಗಿ ಕಾಣಿಸಿದೆ. ಇದರಿಂದ ಭಯಗೊಂಡ ವಾಹನ ಸವಾರ ಅಲ್ಲಿಂದ ತಕ್ಷಣ ಕಾಲ್ಕಿತ್ತಿದ್ದಾರೆ. ಈ ಬೃಹದಾಕಾರದ ಹುಲಿ ಓಡಾಟದ ವಿಡಿಯೋ ‘ಟಿವಿ9’ಗೆ ಲಭ್ಯವಾಗಿದೆ.

ಅರಣ್ಯ ತಜ್ಞರ ಪ್ರಕಾರ, ಒಂದು ಗಂಡು ಹುಲಿ ಸರಾಸರಿ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ತನ್ನ ಪ್ರಭುತ್ವ ಗುರುತು ಮಾಡಿಕೊಂಡಿರುತ್ತದೆ. ಆ ಪ್ರದೇಶಕ್ಕೆ ಮತ್ತೊಂದು ಗಂಡು ಹುಲಿ ಪ್ರವೇಶಿಸಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಹೆಣ್ಣು ಹುಲಿಗಳನ್ನು ತನ್ನ ವ್ಯಾಪ್ತಿಗೆ ಬಿಟ್ಟುಕೊಳ್ಳುವುದು ಗಂಡು ಹುಲಿಗಳ ಸಹಜ ಗುಣಲಕ್ಷಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘45’ ಸಿನಿಮಾ ವಿಮರ್ಶೆ; ಅರ್ಜುನ್ ಜನ್ಯ ಮ್ಯಾಜಿಕ್​​ನಲ್ಲಿ ‘ಶಿವ’ತಾಂಡವ; – Kannada News | 45 Film Review: Raj B Shetty, Upendra and Shivrajkumar Shine in Arjun Janya’s Directorial Debut

ಅರ್ಜುನ್ ಜನ್ಯ ಅವರು ಇಷ್ಟು ವರ್ಷಗಳ ಕಾಲ ಮ್ಯೂಸಿಕ್ ಲೋಕದಲ್ಲಿ ಗಮನ ಸೆಳೆದವರು. ಅವರು ಈಗ ‘45’ ಸಿನಿಮಾನ ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರ ಎಂದರೆ ದೊಡ್ಡ ಚಾಲೆಂಜ್ ಇರುತ್ತದೆ. ಈ ಚಾಲೆಂಜ್ ಮಧ್ಯೆ ಅರ್ಜುನ್ ಅವರು ಮಲ್ಟಿ ಸ್ಟಾರರ್ ಸಿನಿಮಾ ಹಾಗೂ ಬಿಗ್ ಬಜೆಟ್​ನ ಆಯ್ಕೆ ಮಾಡಿಕೊಂಡಿದ್ದಾರೆ. ಗ್ರಾಫಿಕ್ಸ್ ಕೆಲಸ ಕೂಡ ಬಹುವಾಗಿರೋ ‘45’ ಚಿತ್ರದ ವಿಮರ್ಶೆ ಇಲ್ಲಿದೆ.

ವಿನಯ್ (ರಾಜ್ ಬಿ ಶೆಟ್ಟಿ) ಓರ್ವ ಸಾಮಾನ್ಯ ಐಟಿ ಉದ್ಯೋಗಿ. ನಿತ್ಯ ಕಚೇರಿ ಹೋಗಿ ಬರುವ ಕಾಯಕ ಅವನದ್ದು. ತಾಯಿ ಹಾಗೂ ಪ್ರೀತಿಸಿದಾಕೆ ಆತನ ಪ್ರಪಂಚ. ಈ ಪ್ರಪಂಚದ ಒಳಗೆ ರಾಯಪ್ಪ (ಉಪೇಂದ್ರ) ಹಾಗೂ ಶಿವಪ್ಪನ (ಶಿವರಾಜ್​​ಕುಮಾರ್) ಆಗಮನ ಆಗುತ್ತದೆ. ಒಂದು ಕನಸಿನಿಂದ ಜೀವನ ಕಲಸು ಮೇಲೋಗರ ಆಗುತ್ತದೆ. ನಿಜ ಯಾವುದು-ಸುಳ್ಯಾವುದು ಎಂದು ಅರ್ಥೈಸಿಕೊಳ್ಳಲು ಆತ ವಿಫಲನಾಗುತ್ತಾನೆ. ಅಲ್ಲಿಂದ ಆತನ ಒದ್ದಾಟ ಶುರು. 45 ದಿನಗಳ ಆಟ ಕೂಡ ಶುರುವಾಗುತ್ತದೆ. ಅಲ್ಲಿ ರಾಯಪ್ಪ-ಶಿವಪ್ಪ ಹೇಗೆ ಬರುತ್ತಾರೆ? ಏಕೆ ಬರುತ್ತಾರೆ ಎಂದೆಲ್ಲ ಹೇಳುತ್ತಾ ಹೋದರೆ ಸಿನಿಮಾದ ಸ್ವಾದ ಉಳಿದುಕೊಳ್ಳುವುದಿಲ್ಲ. ಅದನ್ನು ಥಿಯೇಟರ್​​ನಲ್ಲಿ ನೋಡಿಯೇ ಆನಂದಿಸಬೇಕು.

ಅರ್ಜುನ್ ಜನ್ಯಗೆ ಫುಲ್ ಮಾರ್ಕ್ಸ್

ಈವರೆಗೆ ಎಲ್ಲರೂ ಅರ್ಜುನ್ ಜನ್ಯ ಅವರನ್ನು ಮ್ಯೂಸಿಕ್ ಡೈರೆಕ್ಟರ್ ಆಗಿ ಮಾತ್ರ ನೋಡಿದ್ದಾರೆ. ಅದ್ಭುತ ಮೆಲೋಡಿ ಹಾಡುಗಳನ್ನು ಅವರು ಚಿತ್ರರಂಗಕ್ಕೆ ನೀಡಿದ್ದಾರೆ. ತಮ್ಮಲ್ಲೊಬ್ಬ ಒಳ್ಳೆಯ ನಿರ್ದೇಶಕ ಇದ್ದಾನೆ ಎಂಬುದನ್ನು ‘45’ ಸಿನಿಮಾ ಮೂಲಕ ತೋರಿಸಿದ್ದಾರೆ. ಈ ಸಿನಿಮಾ ನೋಡಿದರೆ ಅರ್ಜುನ್ ಅವರು ಅದೆಷ್ಟೋ ವರ್ಷಗಳಿಂದ ತಮ್ಮಲ್ಲಿರುವ ನಿರ್ದೇಶಕನ ಪೋಷಿಸುತ್ತಾ ಬರುತ್ತಿದ್ದರೇನೋ ಎಂದನಿಸಿಬಿಡುತ್ತದೆ.

ಸಾವಿನ ಬಳಿಕದ ಮುಂದೇನು?

‘ಸಾವಿನ ಬಳಿಕ ಮುಂದೇನು?’ ಈ ರೀತಿಯ ಪ್ರಶ್ನೆ ಎಲ್ಲರಿಗೂ ಇರುತ್ತದೆ. ಇದಕ್ಕೆ ಅದರದ್ದೇ ಆದ ಉತ್ತರಗಳು ಸಿಗುತ್ತವೆ. ‘ಗರುಡ ಪುರಾಣ’ದ ಪ್ರತಿ ಪುಟ ತಿರುವು ಹಾಕಿದಾಗಲೂ ಹೊಸದೊಂದು ವಿಷಯ, ಜೀವನದ ಮತ್ತೊಂದು ರೂಪ ಗೊತ್ತಾಗುತ್ತದೆ. ಈ ವಿಷಯಗಳು ಸಿನಿಮಾದಲ್ಲೂ ಟ್ರಾವೆಲ್ ಆಗುತ್ತವೆ. ಗರುಡ ಪುರಾಣವನ್ನು ಸಿನಿಮಾ ಕಥೆಗೆ ಬ್ಲೆಂಡ್ ಮಾಡಿದ ಅರ್ಜುನ್ ಜನ್ಯ ಸ್ಟೈಲ್ ಇಷ್ಟ ಆಗುತ್ತದೆ.

ಇಲ್ಲಿ ಅರ್ಜುನ್ ಜನ್ಯ ಅವರು ಮತ್ತೊಂದು ತಂತ್ರಗಾರಿಕೆಯ ಬಗ್ಗೆ ಮಾತನಾಡಲೇಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಈ ಮೊದಲಿನ ಕಲ್ಟ್ ಸಿನಿಮಾಗಳ ದೃಶ್ಯಗಳನ್ನು ರೀ ಕ್ರಿಯೇಟ್ ಮಾಡಿದ್ದಾರೆ. ಹೊಂದಿಕೆ ಆಗೋ ಹಳೆಯ ಹಾಡುಗಳು ದೃಶ್ಯದ ಸ್ವಾದ ಹೆಚ್ಚಿಸಿವೆ. ಗ್ರಾಫಿಕ್ಸ್ ವಿಷಯದಲ್ಲಿ ಎಲ್ಲಿಯೂ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಸುಧಾರಾಣಿಯ ಪಾತ್ರದ ಅವಶ್ಯಕತೆ ಇರಲಿಲ್ಲ ಎಂದನಿಸದೇ ಇರದು.

ಉಪ್ಪಿ vs ರಾಜ್

ಮಧ್ಯಮ ವರ್ಗದ ವ್ಯಕ್ತಿಯಾಗಿ ವಿನಯ್​​ನ ಒದ್ದಾಟ, ಭಾವನಾತ್ಮಕವಾಗಿ ಸೆಳೆದುಕೊಳ್ಳುವ ರೀತಿ ಇಷ್ಟ ಆಗುತ್ತದೆ. ಆತನ ಅಸಹಾಯಕತೆ ನೋವು ತರಿಸುತ್ತದೆ. ಅವರು ನಟನೆಯಲ್ಲಿ ಹೆಚ್ಚು ಅಂಕ ಪಡೆಯುತ್ತಾರೆ. ಅವರ ಈ ಹಿಂದಿನ ಸಿನಿಮಾಗಳ ಪಾತ್ರಗಳು ಇಲ್ಲಿ ಬಂದು ಹೋಗುತ್ತವೆ. ಇನ್ನು ರಾಯಪ್ಪನ ಪಾತ್ರದಲ್ಲಿ ಉಪ್ಪಿ ತಮ್ಮ ಖದರ ತೋರಿಸಿದ್ದಾರೆ. ಸಿಗಾರ್ ಸೇದುವ ಸ್ಟೈಲ್, ಹೇರ್ ಸ್ಟೈಲ್, ಭಿನ್ನ ಉಡುಗೆ, ಚಿತ್ರ-ವಿಚಿತ್ರ ವಾಹನಗಳು ಅವರ ಮ್ಯಾನರಿಸಂಗೆ ಹೊಸ ಖದರ್ ನೀಡಿದೆ. ಕಣ್ಣಿನ ಮೂಲಕವೇ ಅವರು ಮಾತನಾಡುತ್ತಾರೆ. ಕೆಲ ದೃಶ್ಯಗಳಲ್ಲಿ ರಾಕ್ಷಸನ ರೀತಿ ಕಾಣಿಸುತ್ತಾರೆ. ಸಿನಿಮಾ ಉದ್ದಕ್ಕೂ ಉಪ್ಪಿ vs ರಾಜ್ ಎಂಬಂತಾಗುತ್ತದೆ.

ಶಿವಣ್ಣನ ಮೇಲುಗೈ

ಶಿವರಾಜ್​​ಕುಮಾರ್ ಶಿವಪ್ಪ ಪಾತ್ರ ಸಿನಿಮಾ ಮೆರಗು ಹೆಚ್ಚಿಸಿದೆ. ಅವರು ಇಡೀ ಚಿತ್ರಕ್ಕೆ ಬೇರೆಯದೇ ತೂಕ ಕೊಡುತ್ತಾರೆ. ಲೇಟ್​ ಆಗಿ ಎಂಟ್ರಿ ಕೊಟ್ಟರೂ ಪ್ರೇಕ್ಷಕರ ಮನಸ್ಸಿನಲ್ಲಿ ಹಾಗೆಯೇ ಆವರಿಸಿಕೊಂಡು ಬಿಡುತ್ತಾರೆ ಅವರು. ಶಿವಣ್ಣ ತಮ್ಮ ನಟನೆ ಮೂಲಕ ಒಂದು ಹೆಜ್ಜೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಇದು ಅವರ ಹೆಚ್ಚುಗಾರಿಕೆ. ಅವರು ಚಿತ್ರದಲ್ಲಿ ವಿವಿಧ ಅವತಾರದಲ್ಲಿ ಕಾಣಿಸಿಕೊಳ್ಳುವುದರಿಂದ ಫ್ಯಾನ್ಸ್​​ಗೆ ಹಬ್ಬ ಫಿಕ್ಸ್. ಅದರಲ್ಲೂ ಕೊನೆಯಲ್ಲಿ ಬರೋ ಶಿವತಾಂಡವ ಹೊಸ ಗುಂಗು ಹತ್ತಿಸುತ್ತದೆ.

ಲಾರಿಯಲ್ಲಿ ಬೈಕ್ ಚೇಸಿಂಗ್ ದೃಶ್ಯ, ಮಾರುಕಟ್ಟೆ ಮೇಲಿನ ದಾಳಿ ಹಾಗೂ ಸಿನಿಮಾದ ಕೊನೆಯ 45 ನಿಮಿಷ ಮನರಂಜನೆಯ ರಸದೌತಣ ಬಡಿಸುತ್ತದೆ. ಸಿನಿಮಾದ ಬಿಜಿಎಂ ಅಲ್ಲಿ ಅರ್ಜುನ್ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ಈ ಚಿತ್ರದಲ್ಲಿ ಲಾಜಿಕ್​​ಗೆ ಜಾಗವಿಲ್ಲ. ಇಲ್ಲಿ ಎಲ್ಲವೂ ಅರ್ಜುನ್ ಜನ್ಯ ಮ್ಯಾಜಿಕ್ ಮಾತ್ರ. ಕೆಲವೊಂದು ಡಾಟ್​​​ಗಳನ್ನು ಕೂಡಿಸದೇ ಸಿನಿಮಾ ನೋಡಿದರೆ ಇಷ್ಟ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪ್ಲಿಕೇಶನ್‌ಗಳಲ್ಲಿ ಉಚಿತ ಚಲನಚಿತ್ರ ವೀಕ್ಷಿಸುವ ಅಭ್ಯಾಸ ಇದೆಯಾ? ಈಗಲೇ ನಿಲ್ಲಿಸಿ – Kannada News | PikaShow Warning: Free Movies Risk Data Breach, Cyber Attacks and Legal Action

ಇಂದಿನ ಜನರಿಗೆ ಎಲ್ಲವೂ ಫ್ರೀ.. ಫ್ರೀ ಇರಬೇಕು. ಎಲ್ಲಿ ಉಚಿತ ಇರುತ್ತದೆ ಅಲ್ಲಿ ಜನ ಮೊದಲು, ಆದರೆ ಈ ಫ್ರೀಯಿಂದ ದೊಡ್ಡ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಈ ಯುವಕರು ಹೆಚ್ಚು ಅಪಾಯಕ್ಕೆ ಸಿಲುಕಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿದೆ. ಇಂದಿನ ಯುವಕರಿಗೆ ಮೂವಿ ನೋಡುವ ಹುಚ್ಚು ಹೆಚ್ಚು. ಹೊಸ ಹೊಸ ಸಿನಿಮಾ (free movie apps) ಬಂದರೆ ಅದನ್ನು ಥಿಯೇಟರ್​​ಗಿಂತ ಮೊಬೈಲ್​ನಲ್ಲಿ ನೋಡುವವರೇ ಹೆಚ್ಚು. ಅದಕ್ಕಾಗಿ ಬೇರೆ ಬೇರೆ ಅಪ್ಲಿಕೇಶನ್‌ ಡೌನ್​​ ಲೋಡ್​​ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ವರದಿಗಳ ಪ್ರಕಾರ, ಅನೇಕ ಮೊಬೈಲ್ ಬಳಕೆದಾರರು ಉಚಿತವಾಗಿ ಚಲನಚಿತ್ರಗಳನ್ನು ವೀಕ್ಷಿಸಲು ಪಿಕಾಶೋನಂತಹ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಇದರಿಂದ ವೈಯಕ್ತಿಕ ಡೇಟಾಗಳು ಶೇರ್​​ ಆಗುತ್ತದೆ ಎಂಬ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ.

ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ದೋಸ್ತ್ I4C ಎಂಬ ಸಂಸ್ಥೆಯು ಉಚಿತ ಚಲನಚಿತ್ರಗಳನ್ನು ನೋಡುವ ಆ್ಯಪ್​​​​​ಗಳು ಅಪಾಯಕಾರಿ ಮತ್ತು ನಿಮ್ಮನ್ನು ಕಾನೂನು ತೊಂದರೆಗೆ ಸಿಲುಕಿಸಬಹುದು ಎಂದು ಎಚ್ಚರಿಸಿದೆ.ಈ ಬಗ್ಗೆ ಸೈಬರ್ ದೋಸ್ತ್ I4C ಎಕ್ಸ್‌ನಲ್ಲಿ ಹೀಗೆ ಪೋಸ್ಟ್ ಮಾಡಿದೆ. ಉಚಿತ ಚಲನಚಿತ್ರಗಳ ಕುರಿತು ಮಾಹಿತಿ ಮತ್ತು ಭದ್ರತೆ ಸಂಬಂಧಿಸಿದ ಒಂದು ಪ್ರಕಟನೆಯನ್ನು ನೀಡಿದೆ. ಅಪರಿಚಿತ ಅಪ್ಲಿಕೇಶನ್ ಅಥವಾ ಗೊತ್ತಿಲ್ಲದ ಅಪ್ಲಿಕೇಶನ್​​ಗಳಲ್ಲಿ ಪೈರೇಟೆಡ್ ಕಂಟೆಂಟ್‌ನ ವಿವರಗಳು ಮತ್ತು ಸೈಬರ್ ಅಪಾಯಗಳು ಮತ್ತು ಕಾನೂನು ತೊಂದರೆಗಳು ಇವೆ. ಉಚಿತ ಚಲನಚಿತ್ರಗಳ ದುರಾಸೆಯಿಂದ ನಿಮ್ಮ ಡೇಟಾ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ದೂಡಬೇಡಿ. ಅಪರಿಚಿತ ಅಪ್ಲಿಕೇಶನ್‌ಗಳಿಂದ ಪೈರೇಟೆಡ್ ವಿಷಯವನ್ನು ವೀಕ್ಷಿಸುವುದರಿಂದ ನಿಮ್ಮನ್ನು ಸೈಬರ್ ಅಪಾಯ ಮತ್ತು ಕಾನೂನು ತೊಂದರೆಗೆ ಸಿಲುಕಿಸಬಹುದು.

ಇದನ್ನೂ ಓದಿ:ನಿಮಗೂ ಗೂಗಲ್, ಯೂಟ್ಯೂಬ್ ಪೇಜ್ ಲೋಡ್ ಆಗುತ್ತಿಲ್ಲವೇ?

ಈ ಅಪ್ಲಿಕೇಶನ್‌ಗಳು ಸುರಕ್ಷಿತವಲ್ಲ:

ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೈಬರ್ ದೋಸ್ತ್, ಪಿಕಾಶೋ ಅಪ್ಲಿಕೇಶನ್‌ನಂತಹ ಪೈರೇಟೆಡ್ ಚಲನಚಿತ್ರಗಳನ್ನು ಒದಗಿಸುವ ಅಪ್ಲಿಕೇಶನ್‌ಗಳು ಸುರಕ್ಷಿತವಾಗಿಲ್ಲ ಎಂದು ಹೇಳಿದೆ. ಲಕ್ಷಾಂತರ ಬಳಕೆದಾರರು ಅದನ್ನು ಬಳಸುವ ಮೂಲಕ ತಮ್ಮ ಡೇಟಾವನ್ನು ಅಪಾಯಕ್ಕೆ ಸಿಲುಕಿಕೊಳ್ಳುತ್ತುದ್ದಾರೆ ಎಂದು ಹೇಳಿದೆ. ಉಚಿತ ಚಲನಚಿತ್ರಗಳನ್ನು ಒದಗಿಸುವ ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್​​ಲೋಡ್​ ಮಾಡಿದ ನಂತರ ನಿಮ್ಮ ಸಾಧನದಲ್ಲಿ ಮಾಲ್‌ವೇರ್ ಮತ್ತು ಸ್ಪೈವೇರ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಸಾಧ್ಯತೆಗಳು ಇದೆ ಎಂದು ಸೈಬರ್ ದೋಸ್ತ್ I4C ಹೇಳಿದೆ. ಇದನ್ನು ಇನ್ಸ್ಟಾಲ್​​ ಮಾಡಿದ ನಂತರ ಲಾಗಿನ್ ಐಡಿಗಳು ಮತ್ತು ಪಾಸ್‌ವರ್ಡ್‌ಗಳು ಸೇರಿದಂತೆ ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಪ್ರವೇಶಿಸಬಹುದು ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ. ಇದರ ಜತೆಗೆ ಸರ್ಕಾರ ಕೂಡ ನಕಲಿ ಚಲನಚಿತ್ರಗಳ ಅಪ್ಲಿಕೇಶನ್​​ಗಳನ್ನು ಡೌನ್​​​ಲೋಡ್​​ ಮಾಡಿಕೊಂಡರೆ ಕಾನೂನು ಕ್ರಮತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

​​

Published On – 12:49 pm, Wed, 24 December 25

Source link

Video: ಅಂತರ ಕಾಯ್ದುಕೊಳ್ಳಿ, ಇಎಂಐ ಬಾಕಿ ಇದೆ; ಕಾರಿನ ಹಿಂಬದಿಯ ಬರಹ ವೈರಲ್ – Kannada News | Keep your distance, EMI is pending; Man warns other motorists

ಮಂಗಳೂರು, ಡಿಸೆಂಬರ್ 24: ಆಟೋ, ಬೈಕ್ (bike) ಸೇರಿದಂತೆ ಕಾರಿನ ಹಿಂಭಾಗದಲ್ಲಿ ಪ್ರೀತಿ ಪಾತ್ರದ ಹೆಸರು, ಕೆಲವರು ತಂದೆ ತಾಯಿಯ ಆಶೀರ್ವಾದ, ಕೈಕೊಟ್ಟ ಪ್ರೇಮಿಯ ನೆನಪಿನಲ್ಲಿ ಕೆಲ ಸಾಲುಗಳನ್ನು ಬರೆದಿರುವುದನ್ನು ನೋಡಿರುತ್ತಿರುತ್ತೀರಿ. ಇಂತಹ ಸಾಲುಗಳನ್ನು ನೋಡಿದಾಗ ತುಟಿಯಂಚಿನಲ್ಲಿ ಸದ್ದಿಲ್ಲದೇ ನಗು ಮೂಡುತ್ತದೆ. ಇದೀಗ ಇಂತಹದ್ದೇ ಕಾರಿನ ಹಿಂಭಾಗದಲ್ಲಿ ಬರೆದ ಸಾಲುಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಮಂಗಳೂರಿನ (Manglore) ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಚಲಿಸುತ್ತಿರುವ ಮಾರುತಿ ಸುಜುಕಿ ಆಲ್ಟೋ ಕಾರ್‌ನ ಹಿಂಭಾಗದಲ್ಲಿ ಬರೆದ ಸಾಲುಗಳು ಉಳಿದ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಂತಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ ಕ್ರಿಡಿಬಲ್ ಮಂಗಳೂರು (incrediblemangloree) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಿಂಬದಿ ವಾಹನ ಸವಾರರು ಮಾರುತಿ ಸುಜುಕಿ ಆಲ್ಟೋ ಕಾರಿನ ಹಿಂಭಾಗದಲ್ಲಿ ಬರೆಯಲಾದ ಸಾಲುಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಕಾರಿನ ಹಿಂಭಾಗದಲ್ಲಿ ಅಂತರ ಕಾಯ್ದುಕೊಳ್ಳಿ…ಇಎಂಐ ಬಾಕಿ ಇದೆ ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ದೇವ್ರು ಕಣ್ಬಿಟ್ರೆ ಆನಂದ, ಮನುಷ್ಯ ಕಣ್ಬಟ್ರೆ ಗೋವಿಂದ; ಆಟೋ ಹಿಂಬದಿ ಬರೆದ ಸಾಲುಗಳು ವೈರಲ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪಾಪ ಈ ವಾಹನಕ್ಕೆ ಗುದ್ದುವ ಮುನ್ನ ಜೋಕೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ತನ್ನ ಕಾರಿಗೆ ಏನಾದರೂ ಸಮಸ್ಯೆಯಾದಲ್ಲಿ ಸಾಲಕ್ಕೆ ನೀವೇ ಹೊಣೆಗಾರರು ಎಂಬಂತಿದೆ ಈ ಸಾಲು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ವ್ಯಕ್ತಿಯ ನೋವು ಕಾರಿನ ಹಿಂಭಾಗದ ಬರಹವೇ ಹೇಳುತ್ತಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತು ಇದೆ ಗೊತ್ತೇ? – Kannada News | Lokayukta Raids Close Aide of Karnataka Minister Zameer Ahmed Khan Over Disproportionate Assets Allegations

ಬೆಂಗಳೂರು, ಡಿಸೆಂಬರ್ 24: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ನಿವಾಸ ಸೇರಿದಂತೆ ಹತ್ತು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಈ ದಾಳಿ ನಡೆದಿದೆ. ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಹೆಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಸರ್ದಾರ್ ಸರ್ಫರಾಜ್ ಖಾನ್ ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಯಾಗಿದ್ದು, ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆ 50ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ದಾಳಿಯನ್ನು ನಡೆಸಿದ್ದಾರೆ. ಎಲ್ಲಾ 10 ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಆಸ್ತಿ ವಿವರಗಳ ಸಂಗ್ರಹ ಕಾರ್ಯ ಮುಂದುವರೆದಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Money Plant Vastu: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ – Kannada News | Money Plant Vastu: Place a Coin for Wealth and Prosperity Tips

ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಅನ್ನು ಅತ್ಯಂತ ಶುಭ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದನ್ನು ಸಂಪತ್ತನ್ನು ಆಕರ್ಷಿಸುವ ಸಸ್ಯ ಎಂದೂ ಹೇಳಲಾಗುತ್ತದೆ. ಮನಿ ಪ್ಲಾಂಟ್ ಗಿಡದ ಬುಡದಲ್ಲಿ ಒಂದು ರೂಪಾಯಿ ಅಥವಾ ಯಾವುದೇ ನಾಣ್ಯವನ್ನು ಇಡುವುದರಿಂದ ಅದರ ಸಕಾರಾತ್ಮಕ ಪರಿಣಾಮಗಳು ಹಲವು ಪಟ್ಟು ಹೆಚ್ಚಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರವು ತಿಳಿಸುತ್ತದೆ.

ಮನಿ ಪ್ಲಾಂಟ್‌ನ ಬುಡದಲ್ಲಿ ನಾಣ್ಯವನ್ನು ಹೂತಿಟ್ಟರೆ, ಅದು ಹಣದ ಆಕರ್ಷಣೆಯನ್ನು ವೇಗಗೊಳಿಸುತ್ತದೆ ಎಂಬ ನಂಬಿಕೆಯಿದೆ. ನಾಣ್ಯವು ಸ್ವತಃ ಸಂಪತ್ತಿನ ಸಂಕೇತವಾಗಿದ್ದು, ಮನಿ ಪ್ಲಾಂಟ್ ಜೊತೆಗೆ ಅದರ ಸಂಬಂಧವು ಹಣದ ಹರಿವಿಗೆ ಹೊಸ ಅವಕಾಶಗಳು ಮತ್ತು ಮಾರ್ಗಗಳನ್ನು ತೆರೆಯುತ್ತದೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯದ ಪ್ರಕಾರ, ಮನಿ ಪ್ಲಾಂಟ್ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದ ಸಸ್ಯವಾಗಿದೆ. ಈ ಗಿಡದ ಬುಡದಲ್ಲಿ ನಾಣ್ಯವನ್ನು ಇಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ವ್ಯಕ್ತಿಗೆ ದೊರೆಯುತ್ತದೆ ಎಂದು ನಂಬಲಾಗುತ್ತದೆ. ಇದರ ಪರಿಣಾಮವಾಗಿ ಮನೆಯಲ್ಲಿ ಸಂಪತ್ತು, ಸಮೃದ್ಧಿ ಮತ್ತು ಧನಸಂಪಾದನೆಯಲ್ಲಿ ಸ್ಥಿರತೆ ಇರುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಯಾವುದೇ ವ್ಯಕ್ತಿ ಸಾಲದ ಹೊರೆಯಿಂದ ಬಳಲುತ್ತಿದ್ದರೆ ಅಥವಾ ನಿರಂತರ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮನಿ ಪ್ಲಾಂಟ್‌ನಲ್ಲಿ ನಾಣ್ಯವನ್ನು ಇಡುವುದು ಉಪಯುಕ್ತ ಪರಿಹಾರವೆಂದು ಪರಿಗಣಿಸಲಾಗುತ್ತದೆ. ಈ ವಾಸ್ತು ಪರಿಹಾರವು ಆರ್ಥಿಕ ಸಂಕಷ್ಟಗಳು ಮತ್ತು ಸಾಲ ಸಮಸ್ಯೆಗಳನ್ನು ಕ್ರಮೇಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಮನಿ ಪ್ಲಾಂಟ್ ಉತ್ತಮವಾಗಿ ಬೆಳೆದಂತೆ, ಮನೆಯ ಆದಾಯವೂ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಗಿಡದ ಬುಡದಲ್ಲಿ ನಾಣ್ಯವನ್ನು ಇಡುವುದರಿಂದ ವೃತ್ತಿ, ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ವೇಗವಾದ ಪ್ರಗತಿ ಮತ್ತು ಯಶಸ್ಸು ದೊರೆಯುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link