W,W,W,0,W,W.. ಒಂದೇ ಓವರ್‌ನಲ್ಲಿ 5 ವಿಕೆಟ್ ಉರುಳಿಸಿದ 28 ವರ್ಷದ ವೇಗಿ – Kannada News | Gede Priandana’s T20I Record: Five Wickets in One Over and Hat trick
ಅಂತರರಾಷ್ಟ್ರೀಯ ಟಿ20 (International T20) ಕ್ರಿಕೆಟ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವುದು ಪ್ರತಿಯೊಬ್ಬ ಬೌಲರ್‌ನ ಕನಸಾಗಿರುತ್ತದೆ. ಏಕೆಂದರೆ ನಾಲ್ಕು ಓವರ್‌ಗಳಲ್ಲಿ ಈ ಸಾಧನೆ ಮಾಡುವುದು ಅತ್ಯಂತ ಕಷ್ಟಕರ. ಹೀಗಿರುವಾಗ ಒಂದೇ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆಯುವುದು ಚುಟುಕು ಕ್ರಿಕೆಟ್‌ನಲ್ಲಿ ಕಂಡುಬರುವುದು ತೀರ ವಿರಳ. ಅಂತಹದರಲ್ಲಿ ಇಂಡೋನೇಷ್ಯಾದ 28 ವರ್ಷದ ಬಲಗೈ ವೇಗದ ಬೌಲರ್ ಗೆಡೆ ಪ್ರಿಯಂದನ (Gede Priandana) ಒಂದೇ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ…