Category Archives: Blog

Your blog category

Chanakya Niti: ಸಾಲ ತೆಗೆದುಕೊಳ್ಳುವ, ನೀಡುವ ಮೊದಲು ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಿ – Kannada News | Chanakya Niti: Follow these tips from Chanakya before taking a loan

 

ಆಚಾರ್ಯ ಚಾಣಕ್ಯರು (Acharya Chanakya)  ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಹಣಕಾಸು, ಆರ್ಥಿಕ ವಿಷಯಗಳ ಬಗ್ಗೆಯೂ ಸಾಕಷ್ಟು ವಿಚಾರಗಳ ಹೇಳಿಕೊಟ್ಟಿದ್ದಾರೆ.  ಹೌದು ಹಣಕ್ಕೆ ಸಂಬಂಧಿಸಿದ ಯೋಜನೆಗಳು ಹೇಗಿರಬೇಕು? ಹಣವನ್ನು ಎಲ್ಲಿ ಖರ್ಚು ಮಾಡಬೇಕು? ಹಣವನ್ನು ಎಲ್ಲಿ ಖರ್ಚು ಮಾಡಬಾರದು? ಹಣವನ್ನು ಹೇಗೆ ಉಳಿಸುವುದು? ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಸಾಲ ತೆಗೆದುಕೊಳ್ಳುವಾಗ ಮತ್ತು ಸಾಲ ಕೊಡುವಾಗ ಒಂದಷ್ಟು ವಿಚಾರಗಳ ಬಗ್ಗೆ ಮೊದಲೇ ತಿಳಿದುಕೊಳ್ಳಬೇಕು ಎಂದಿದ್ದಾರೆ. ಅದೇನೆಂಬುದರ ಸಂಪೂರ್ಣ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಸಾಲ ತೆಗೆದುಕೊಳ್ಳುವ ಮುನ್ನ ಯೋಚಿಸಿ:

ಸಾಲ ತೆಗೆದುಕೊಳ್ಳುವ ಮೊದಲು, ನಿಮ್ಮ ಅಗತ್ಯತೆಗಳು ಮತ್ತು ಸಾಮರ್ಥ್ಯಗಳನ್ನು ನಿರ್ಣಯಿಸುವುದು ಬಹಳ ಮುಖ್ಯ. ನಿಜವಾಗಿಯೂ ಸಾಲದ ಅಗತ್ಯವಿರುವವರು ಮತ್ತು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಸಾಮರ್ಥ್ಯವಿರುವವರು ಮಾತ್ರ ಸಾಲವನ್ನು ತೆಗೆದುಕೊಳ್ಳಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಅತಿಯಾದ ಖರ್ಚು ಅಥವಾ ತೆಗೆದುಕೊಂಡ ಸಾಲವನ್ನು ತೀರಿಸದೆ ಇರುವುದು ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು. ಇದಲ್ಲದೆ, ಸಾಲವನ್ನು ತೆಗೆದುಕೊಳ್ಳುವ ಮೊದಲು ಸಾಲದ ಮೂಲವನ್ನು ಪರಿಗಣಿಸುವುದು ಮುಖ್ಯ. ವಿಶ್ವಾಸಾರ್ಹ ಮೂಲಗಳಿಂದ ಸಾಲವನ್ನು ತೆಗೆದುಕೊಳ್ಳಬೇಕು. ಬ್ಯಾಂಕ್, ಹಣಕಾಸು ಸಂಸ್ಥೆ ಅಥವಾ ವಿಶ್ವಾಸಾರ್ಹ ಸ್ನೇಹಿತರಿಂದ ಸಾಲ ಪಡೆಯುವುದು ಯಾವಾಗಲೂ ಸುರಕ್ಷಿತವಾಗಿದೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಜೀವನದಲ್ಲಿ ಹಣದ ಕೊರತೆ ಬರಬಾರದೆಂದರೆ ವಿಚಾರಗಳನ್ನು ಅನುಸರಿಸಿ

ಸಾಲ ನೀಡುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು:

ಹಣವನ್ನು ಸಾಲ ನೀಡುವ ಮೊದಲು, ಆ ವ್ಯಕ್ತಿಯು ವಿಶ್ವಾಸಾರ್ಹ ವ್ಯಕ್ತಿಯೇ ಮತ್ತು ಸಾಲವನ್ನು ಮರು ಪಾವತಿಸಲು ಸಮರ್ಥನೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಚಾಣಕ್ಯ ಹೇಳುತ್ತಾರೆ. ಹಣವನ್ನು ಸಾಲವಾಗಿ ನೀಡುವಾಗ  ಆತುರಪಡಬಾರದು, ಭಾವನೆಗಳಿಗೆ ಬಲಿಯಾಗಬಾರದು ಬದಲಿಗೆ ಯೋಚಿಸಬೇಕು ಮತ್ತು ವಿಶ್ವಾಸಾರ್ಹ ವ್ಯಕ್ತಿಗೆ ಮಾತ್ರ ಸಾಲವನ್ನು ನೀಡಬೇಕು. ಸರಿಯಾದ ಯೋಜನೆಗಳಿಲ್ಲದೆ ಯಾರಿಗಾದರೂ ಹಣವನ್ನು ಸಾಲವಾಗಿ ನೀಡುವುದು ಸಂಬಂಧಗಳು ಹಾಳಾಗಲು ಮತ್ತು ಮತ್ತು ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು. ಇದಲ್ಲದೆ ನೀವು ನೀಡಿದ  ಸಾಲಕ್ಕೆ ಲಿಖಿತ ದಾಖಲೆಗಳನ್ನು ಹೊಂದಿಸಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ  ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

google-site-verification: google357e77c267c33613.html

W,W,W,0,W,W.. ಒಂದೇ ಓವರ್​ನಲ್ಲಿ 5 ವಿಕೆಟ್ ಉರುಳಿಸಿದ 28 ವರ್ಷದ ವೇಗಿ – Kannada News | Gede Priandana’s T20I Record: Five Wickets in One Over and Hat trick

ಅಂತರರಾಷ್ಟ್ರೀಯ ಟಿ20 (International T20) ಕ್ರಿಕೆಟ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವುದು ಪ್ರತಿಯೊಬ್ಬ ಬೌಲರ್‌ನ ಕನಸಾಗಿರುತ್ತದೆ. ಏಕೆಂದರೆ ನಾಲ್ಕು ಓವರ್‌ಗಳಲ್ಲಿ ಈ ಸಾಧನೆ ಮಾಡುವುದು ಅತ್ಯಂತ ಕಷ್ಟಕರ. ಹೀಗಿರುವಾಗ ಒಂದೇ ಓವರ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆಯುವುದು ಚುಟುಕು ಕ್ರಿಕೆಟ್​ನಲ್ಲಿ ಕಂಡುಬರುವುದು ತೀರ ವಿರಳ. ಅಂತಹದರಲ್ಲಿ ಇಂಡೋನೇಷ್ಯಾದ 28 ವರ್ಷದ ಬಲಗೈ ವೇಗದ ಬೌಲರ್ ಗೆಡೆ ಪ್ರಿಯಂದನ (Gede Priandana) ಒಂದೇ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ, ಇದರಲ್ಲಿ ಹ್ಯಾಟ್ರಿಕ್ ಕೂಡ ಸೇರಿದೆ.

ಒಂದೇ ಓವರ್‌ನಲ್ಲಿ 5 ವಿಕೆಟ್‌

ಇಂಡೋನೇಷ್ಯಾ ಪ್ರಸ್ತುತ ಕಾಂಬೋಡಿಯಾ ವಿರುದ್ಧ ಎಂಟು ಪಂದ್ಯಗಳ ಟಿ20ಐ ಸರಣಿಯನ್ನು ಆಡುತ್ತಿದೆ. ಡಿಸೆಂಬರ್ 23 ರಂದು ಬಾಲಿಯಲ್ಲಿ ನಡೆದ ಈ ಸರಣಿಯ ಮೊದಲ ಟಿ20ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕಾಂಬೋಡಿಯಾ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಇಂಡೋನೇಷ್ಯಾ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತು. ತಂಡದ ಪರ ಧರ್ಮ ಕೆಸ್ಮಾ 110 ರನ್‌ಗಳ ಇನ್ನಿಂಗ್ಸ್‌ ಆಡಿದರು. ಇದರಲ್ಲಿ ಎಂಟು ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳು ಸೇರಿದ್ದವು.

ಹ್ಯಾಟ್ರಿಕ್ ಜೊತೆಗೆ 5 ವಿಕೆಟ್

ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಕಾಂಬೋಡಿಯಾ 16 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರಮುಖ ಕಾರಣ ಗೆಡೆ ಪ್ರಿಯಂದನ ಅವರ ಮಾರಕ ಬೌಲಿಂಗ್. ಗೆಡೆ ಪ್ರಿಯಂದನ ಒಂದೇ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಕಾಂಬೋಡಿಯಾ ತಂಡವನ್ನು ಕಾಡಿದರು. ಈ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 168 ರನ್‌ಗಳನ್ನು ಬೆನ್ನಟ್ಟಿದ ಕಾಂಬೋಡಿಯಾ 15 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 106 ರನ್ ಗಳಿಸಿತ್ತು. ಹೀಗಾಗಿ ಪಂದ್ಯವು ನಿರ್ಣಾಯಕ ಹಂತದಲ್ಲಿತ್ತು. ನಂತರ ದಾಳಿಗಿಳಿದ ಪ್ರಿಯಂದನ ತಮ್ಮ ಮೊದಲ ಓವರ್‌ನಲ್ಲಿಯೇ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಮೂರು ಎಸೆತಗಳಲ್ಲಿ ಸತತ ವಿಕೆಟ್‌ಗಳನ್ನು ಪಡೆದು ಹ್ಯಾಟ್ರಿಕ್ ಪೂರ್ಣಗೊಳಿಸಿದರು. ನಂತರ 4ನೇ ಎಸೆತದಲ್ಲಿ ಯಾವುದೇ ರನ್ ಆಗಲಿ ಅಥವಾ ವಿಕೆಟ್ ಆಗಲಿ ಬರಲಿಲ್ಲ. ಆದರೆ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳು ಔಟ್ ಆದರು. ಹೀಗಾಗಿ ಕಾಂಬೋಡಿಯಾದ ಇನ್ನಿಂಗ್ಸ್ 107 ಕ್ಕೆ ಅಂತ್ಯವಾಯಿತು. ಅಂತಿಮವಾಗಿ ಇಂಡೋನೇಷ್ಯಾ ಪಂದ್ಯವನ್ನು 60 ರನ್‌ಗಳಿಂದ ಗೆದ್ದುಕೊಂಡಿತು.

ಆರ್​ಸಿಬಿ ಸೇರಿದಂತೆ ಈ 3 ಐಪಿಎಲ್ ತಂಡಗಳ ಆಟಗಾರರಿಗಿಲ್ಲ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ

ಟಿ20 ಕ್ರಿಕೆಟ್‌ನಲ್ಲಿ ಮೂರನೇ ಬಾರಿಗೆ

ಟಿ20 ಕ್ರಿಕೆಟ್‌ನಲ್ಲಿ (ದೇಶೀಯ ಮಟ್ಟದಲ್ಲಿ) ಈ ಹಿಂದೆ ಎರಡು ಬಾರಿ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಘಟನೆಗಳು ನಡೆದಿವೆ. ಬಾಂಗ್ಲಾದೇಶದ ಅಲ್-ಅಮೀನ್ ಹೊಸೇನ್ 2013-14ರ ವಿಕ್ಟರಿ ಡೇ ಟಿ20 ಕಪ್‌ನಲ್ಲಿ ಈ ಸಾಧನೆ ಮಾಡಿದ್ದರು. ಹಾಗೆಯೇ ಕನ್ನಡಿಗ ಅಭಿಮನ್ಯು ಮಿಥುನ್ 2019-20ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ್ದರು. ಆದರೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮೊದಲ ಬಾರಿಗೆ ಸಂಭವಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಯುರ್ವೇದ ಬಳಸಿ, ದುಬಾರಿ ಚಿಕಿತ್ಸೆಗೆ ಮುಕ್ತಿ ಕೊಡಿ; ಕೈಗೆಟುಕುವ ಬೆಲೆಗೆ ಆನ್​ಲೈನ್​ನಲ್ಲೇ ಪತಂಜಲಿ ಔಷಧಗಳು – Kannada News | Patanjali Ayurveda offers far less expensive medicines in its online platform

ಮೊದಲು ಅನಾರೋಗ್ಯ ಮತ್ತು ನಂತರ ಅದನ್ನು ಸರಿಪಡಿಸಲೆಂದು ಪ್ರತಿ ತಿಂಗಳು ದುಬಾರಿ ಅಲೋಪತಿ ಔಷಧಿಗಳು ನಮ್ಮ ಇಡೀ ಬಜೆಟ್ ಅನ್ನು ಹಾಳುಮಾಡುತ್ತವೆ. ಈ ವೆಚ್ಚದ ಹೊರೆಯನ್ನು ಹೇಗೆ ಕಡಿಮೆ ಮಾಡುವುದು? ಅನಾರೋಗ್ಯ ಉದ್ಭವಿಸಿದರೆ ಅದಕ್ಕೆ ಚಿಕಿತ್ಸೆಯಂತೂ ಬೇಕೇ ಬೇಕು. ದುಬಾರಿ ಔಷಧಗಳ ದಾರಿಗೆ ಹೋಗದೆ ಆಯುರ್ವೇದ ಪರ್ಯಾಯಗಳನ್ನು (Ayurvedic medicines) ಜನರು ಈಗ ಹುಡುಕತೊಡಗಿದ್ದಾರೆ. ಇವರ ಹುಡುಕಾಟಕ್ಕೆ ಸುಲಭ ಆಯ್ಕೆ ಪತಂಜಲಿ. ಸರಳವಾಗಿ ಹೇಳುವುದಾದರೆ, ಪತಂಜಲಿಯ (Patanjali) ಕಡಿಮೆ ಬೆಲೆಯ ಆಯುರ್ವೇದ ಔಷಧಗಳು ಜನರ ಬಜೆಟ್ ಮತ್ತು ಆರೋಗ್ಯ ಎರಡನ್ನೂ ‘ಫಿಟ್ ಅಂಡ್ ಫೈನ್’ ಆಗಿಡಲು ಸಹಾಯ ಮಾಡುತ್ತಿವೆ.

ಪತಂಜಲಿ ಆಯುರ್ವೇದಿಕ್ ಔಷಧಗಳು

ಪತಂಜಲಿಯು ಆಯುರ್ವೇದ ಆಧಾರಿತ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳನ್ನು ತಯಾರಿಸುತ್ತದೆ. ಇವು ಅಲೋಪತಿ ಔಷಧಿಗಳಿಗಿಂತ ಅಗ್ಗವಾಗಿದ್ದು, ರೋಗಗಳನ್ನು ಗುಣಪಡಿಸುವಲ್ಲಿಯೂ ಪರಿಣಾಮಕಾರಿಯಾಗಿದೆ. ಆಯುರ್ವೇದ ಔಷಧದ ಪ್ರಯೋಜನವೆಂದರೆ ಅದು ರೋಗಲಕ್ಷಣಗಳನ್ನು ನಿಗ್ರಹಿಸುವುದಷ್ಟೇ ಅಲ್ಲ, ದೇಹದಲ್ಲಿ ದೀರ್ಘಕಾಲೀನ ಸಮತೋಲನವನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ.

ಇದನ್ನೂ ಓದಿ: ಷೇರುಪೆಟೆಯಲ್ಲಿ ಪತಂಜಲಿ ಫುಡ್ಸ್; ಹೂಡಿಕೆದಾರರಿಗೆ 3,900 ಕೋಟಿ ರೂ ಗಳಿಕೆ

ಪತಂಜಲಿ ಸ್ಟೋರ್​ನಲ್ಲಿ ವೈದ್ಯರು

ನೀವು ಆಯುರ್ವೇದ ಔಷಧಿ ಖರೀದಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಬಯಸಿದರೆ, ಪತಂಜಲಿ ಸ್ಟೋರ್​ಗಳಲ್ಲೇ ವೈದ್ಯರು ಲಭ್ಯರಿರುತ್ತಾರೆ. ಅವರಿಗೆ ನೀವು ನಿಮ್ಮ ರೋಗದ ಬಗ್ಗೆ ಹೇಳಬಹುದು. ವೈದ್ಯರ ಸಲಹೆಯ ಮೇರೆಗೆ ಆಯುರ್ವೇದ ಔಷಧಿ ಸೇವನೆ ಪ್ರಾರಂಭಿಸಬಹುದು.

ಪತಂಜಲಿ ಆಯುರ್ವೇದ ಔಷಧ ಆನ್​ಲೈನ್​ನಲ್ಲೂ ಲಭ್ಯ

ಪತಂಜಲಿ ಆಯುರ್ವೇದ ಔಷಧಿಯನ್ನು ಆರ್ಡರ್ ಮಾಡಲು, ನೀವು ಮೊದಲು ಪತಂಜಲಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು (www.patanjaliayurved.net/). ನಂತರ, ಮೇಲ್ಭಾಗದಲ್ಲಿರುವ ಮೆಡಿಸಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Photo: patanjaliayurved.net

ನಂತರ, ನೀವು ವಿವಿಧ ಕಾಯಿಲೆಗಳಿಗೆ ವಿವಿಧ ಔಷಧಿಗಳು ನಮೂದಾಗಿರುವುದನ್ನು ನೋಡುತ್ತೀರಿ. ನಿಮಗೆ ಬೇಕಾದ ಔಷಧಿಯ ಹೆಸರಿನ ಮೇಲೆ ಕ್ಲಿಕ್ ಮಾಡಿ. ಎಷ್ಟು ಬೇಕೆಂದು ಪ್ರಮಾಣವನ್ನು ಆಯ್ಕೆ ಮಾಡಿ, ನಿಮ್ಮ ವಿಳಾಸವನ್ನು ನಮೂದಿಸಿ ಮತ್ತು ಪಾವತಿ ಮಾಡಿ. ಈ ರೀತಿಯಾಗಿ, ನೀವು ನಿಮ್ಮ ಮನೆಯಿಂದಲೇ ಸುಲಭವಾಗಿ ಆರ್ಡರ್ ಮಾಡಬಹುದು. ಆ ಔಷಧಗಳನ್ನು ನಿಮ್ಮ ವಿಳಾಸಕ್ಕೆ ತಲುಪಿಸಲಾಗುತ್ತದೆ.

Photo: patanjaliayurved.net

ಇದನ್ನೂ ಓದಿ: ಡೇಂಜರ್ ಮಾಲಿನ್ಯ, ಎಲ್ಲೆಲ್ಲೂ ಶೀತ, ಉಸಿರಾಟದ ತೊಂದರೆ; ಇಗೋ ಇಲ್ಲಿದೆ ಆಯುರ್ವೇದ ಪರಿಹಾರ

ಜನರ ಬಜೆಟ್ ಇತಿಮಿತಿಯನ್ನೂ ಸಹ ಎಚ್ಚರಿಕೆಯಿಂದ ಪರಿಗಣಿಸಲಾಗಿದೆ. ಅದಕ್ಕಾಗಿಯೇ ಔಷಧಗಳು ಕಡಿಮೆ ಬೆಲೆ ಮಾತ್ರವಲ್ಲ, ಹೆಚ್ಚುವರಿ ರಿಯಾಯಿತಿ ಕೂಡ ಹೊಂದಿವೆ. ಉದಾಹರಣೆಗೆ, ದಿವ್ಯ ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್ (Divya Madhunashini Vati Extra Power), ದಿವ್ಯ ಇಮ್ಯುನೊಗ್ರಿಟ್ (Divya Immunogrit) ಮತ್ತು ದಿವ್ಯ ಮೆಮೊರಿಗ್ರಿಟ್ (Divya Memorygrit) ಸೇರಿದಂತೆ ಇತರ ಉತ್ಪನ್ನಗಳ ಮೇಲೆ 4.13% ವರೆಗೆ ರಿಯಾಯಿತಿಗಳು ಲಭ್ಯವಿದೆ. ಅಂದರೆ ಹೆಚ್ಚುವರಿ ಉಳಿತಾಯಕ್ಕೆ ಉತ್ತಮ ಅವಕಾಶವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್ – Kannada News | Hubballi honor Killing Case: Mother condition also serious Says manya Husband vivekananda

ಹುಬ್ಬಳ್ಳಿ, (ಡಿಸೆಂಬರ್ 23): ಹುಬ್ಬಳ್ಳಿಯಲ್ಲಿ (Hubballi) ಪ್ರೀತಿಸಿ ಅಂತರ್ಜಾತಿ ಯುವಕನ ಜೊತೆ ವಿವಾಹವಾಗಿದ್ದ ಮಗಳನ್ನೇ ತಂದೆಯೇ ಬರ್ಬರ ಕೊಲೆ  (Hubballi Honor Killing) ಮಾಡಿದ್ದ ಪ್ರಕರಣ ಬೆಚ್ಚಿಬೀಳಿಸಿದೆ. ವಿರೋಧದ ನಡುವೆಯೂ ದಲಿತ ಯುವಕನೊಂದಿಗೆ ಮದುವೆಯಾಗಿದ್ದಕ್ಕೆ ಕೆರಳಿದ್ದ ತಂದೆ, ಡಿಸೆಂಬರ್ 21ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಎಂದು ಯೋಚಿಸದೇ ಮಗಳು ಮಾನ್ಯಗಳನ್ನ ಕೊಚ್ಚಿ ಕೊಂದಿದ್ದಾನೆ. ಅಂತರ್ಜಾತಿಯಾಗಿದ್ದರೂ ಸಹ ಮಾನ್ಯಳ ಪತಿ ವಿವೇಕಾನಂದ ಕುಟುಂಬದವರು ಚೆನ್ನಾಗಿ ನೋಡಿಕೊಂಡಿದ್ದರು. ಆದರೂ ಸಹ ತಂದೆ ಮಗಳನ್ನು ಬಲಿ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರೀತಿ ಮುಂದೆ ಜಾತಿ ಗೆದ್ದಿದೆ.

ಇದೀಗ ಮಾನ್ಯಗಳ ಜೊತೆ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನೂ ಕಳೆದುಕೊಂಡು ಪತಿ ವಿವೇಕಾನಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾನೆ. ಇನ್ನೊಂದೆಡೆ  ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿವೇಕಾನಂದನ ತಾಯಿ ಸಹ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದು. ಚಿಕಿತ್ಸೆಗೆ ಹಣವಿಲ್ಲದೆ ಕುಟುಂಬ ಕಂಗಾಲಾಗಿದೆ. ಈ ಬಗ್ಗೆ ವಿವೇಕಾನಂದ ಕಣ್ಣೀರಿಡುತ್ತಲೇ ನೋವು ಹಂಚಿಕೊಂಡಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!

ಭೋಪಾಲ್, ಡಿಸೆಂಬರ್ 23: ಮಧ್ಯಪ್ರದೇಶದ ರಾಯ್‌ಗಾಂವ್ ಕ್ಷೇತ್ರದಲ್ಲಿ ನಡೆದ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದ ಸಚಿವೆ ಪ್ರತಿಮಾ ಬಾಗ್ರಿ ಅವರಿಗೆ ಆಘಾತ ಕಾದಿತ್ತು. ಹೊಸದಾಗಿ ನವೀಕರಿಸಿದ ಡಾಂಬರು ರಸ್ತೆ ಮೇಲೆ ಕಾಲಿಡುತ್ತಿದ್ದಂತೆ ಆ ಡಾಂಬರು ಅವರ ಚಪ್ಪಲಿಯ ಜೊತೆಗೇ ಕಿತ್ತು ಬಂದಿತು. ಇದರಿಂದ ಕೋಪಗೊಂಡ ಸಚಿವೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಕಾಲಿನ ಕೆಳಗೆ ಡಾಂಬರು ಕಿತ್ತು ಬರುತ್ತಿರುವ ಈ ಘಟನೆಯ ವಿಡಿಯೋ ವೈರಲ್ (Viral Video) ಆಗಿದೆ. ಈ ಕಾಮಗಾರಿ ಮಾಡಿದ ಗುತ್ತಿಗೆದಾರರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಲು ಮತ್ತು ಜವಾಬ್ದಾರಿಯುತ ಸಂಸ್ಥೆಯ ವಿರುದ್ಧ ಕಠಿಣ ದಂಡ ವಿಧಿಸಲು ಸಿವೆ ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು-ಮಡಗಾಂವ್‌ ನಡುವೆ ವಂದೇ ಭಾರತ್​​ ರೈಲು ಆರಂಭಕ್ಕೆ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಮನವಿ – Kannada News | Union Minister H.D. Kumaraswamy Writes to Railway Minister for Bengaluru–Madgaon Vande Bharat Express

ವಂದೇ ಭಾರತ್​​ ರೈಲು ಆರಂಭಕ್ಕೆ ಹೆಚ್​​ಡಿಕೆ ಮನವಿ

ಬೆಂಗಳೂರು, ಡಿಸೆಂಬರ್​​ 23: ಬೆಂಗಳೂರು-ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಸಂಚಾರ ಆರಂಭಿಸುವಂತೆ ಆಗ್ರಹಿಸಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ಗೆ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಹಾಸನ, ಮಂಗಳೂರು, ಉಡುಪಿ, ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ಗೆ ರೈಲು ಸಂಚಾರ ಆರಂಭಿಸಿದಲ್ಲಿ ಪ್ರವಾಸೋದ್ಯಮ, ಆರ್ಥಿಕ, ಕೈಗಾರಿಕೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್​​ಡಿಕೆ ಬರೆದ ಪತ್ರದಲ್ಲೇನಿದೆ?

ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳ ಮಾರ್ಗವಾಗಿ ಗೋವಾ ಸಂಪರ್ಕಿಸುವ ಉತ್ತಮ ಹೈ-ಸ್ಪೀಡ್ ರೈಲು ಸಂಚಾರಕ್ಕೆ ಸಾರ್ವಜನಿಕ ವಲಯದಿಂದ ಬೇಡಿಕೆ ಇದೆ. ಘಾಟ್ ವಿಭಾಗದಲ್ಲಿ ವಿದ್ಯುತೀಕರಣ ಪೂರ್ಣಗೊಂಡ ನಂತರ, ಈ ಮಾರ್ಗವು ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಿದ್ಧವಾಗಲಿದೆ. ಹೀಗಾಗಿ ಹಾಸನ, ಮಂಗಳೂರ ಜಂಕ್ಷನ್, ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಸಂಚರಿಸುವ ಬೆಂಗಳೂರು ಮತ್ತು ಮಡಗಾಂವ್‌​​ (ಗೋವಾ) ಸಂಪರ್ಕಿಸುವ ವಂದೇ ಭಾರತ ಎಕ್ಸ್‌ಪ್ರೆಸ್ ಸೇವೆಯನ್ನು ಆರಂಭಿಸುವಂತೆ ಮನವಿ ಮಾಡುತ್ತೇನೆ. ಈ ಮಾರ್ಗವು ಪ್ರವಾಸಿ, ಯಾತ್ರಿಕ, ಶೈಕ್ಷಣಿಕ ಮತ್ತು ವೃತ್ತಿಪರ ಪ್ರಯಾಣಿಕರನ್ನು ಒಳಗೊಂಡಿದೆ ಎಂದು ಹೆಚ್​​ಡಿಕೆ ತಿಳಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್​ ಟ್ರೈನ್​ ಏನೇಲ್ಲ ವಿಶೇಷತೆ ಹೊಂದಿದೆ ನೋಡಿ

‘ಕರಾವಳಿ ಭಾಗಕ್ಕೆ ದೊಡ್ಡ ಶಕ್ತಿಯಾಗಲಿದೆ’

ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿಯೂ ಮಾಹಿತಿ ಹಂಚಿಕೊಂಡಿರುವ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ವಂದೇ ಭಾರತ್ ರೈಲು ಕಲ್ಪನೆ ಭಾರತೀಯ ರೈಲ್ವೆಯಲ್ಲಿ ಪರಿವರ್ತನಾತ್ಮಕ ಕ್ರಾಂತಿಯನ್ನೇ ಉಂಟು ಮಾಡಿದೆ. ಬೆಂಗಳೂರು ಮತ್ತು ನಡುವಿನ ವಂದೇ ಭಾರತ್ ರೈಲು ರಾಜ್ಯಕ್ಕೆ, ಅದರಲ್ಲಿಯೂ ಕರಾವಳಿ ಭಾಗಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂಬುದು ನನ್ನ ವಿಶ್ವಾಸ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:35 pm, Tue, 23 December 25

Source link

ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ: ಉತ್ತರ ನೀಡಿದ ಕಿಚ್ಚ ಸುದೀಪ್ – Kannada News | Mark Movie actor Kichcha Sudeep interview about Darshan fans controversy

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ‘ಮಾರ್ಕ್’ ಚಿತ್ರದ (Mark Kannada Movie) ಪ್ರೀ-ರಿಲೀಸ್ ಇವೆಂಟ್ ನಡೆಯಿತು. ಆ ವೇದಿಕೆಯಲ್ಲಿ ಸುದೀಪ್ ಅವರು ಮಾತನಾಡಿದ ನಂತರ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದರು. ‘ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ’ ಎಂದು ಸುದೀಪ್ ಹೇಳಿದ್ದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿದೆ. ತಾವು ಮಾತನಾಡಿದ್ದು ಪೈರಸಿ ಬಗ್ಗೆ ಎಂದು ಸುದೀಪ್ (Kichcha Sudeep) ಹೇಳಿದ್ದಾರೆ. ಹಾಗಾದ್ರೆ ಆ ವೇದಿಕೆಯಲ್ಲಿ ಪೈರಸಿ ಎಂಬ ಪದವನ್ನು ಸುದೀಪ್ ಯಾಕೆ ಬಳಸಲಿಲ್ಲ ಎಂಬ ಪ್ರಶ್ನೆ ಕೂಡ ಉದ್ಘವ ಆಗಿದೆ. ಆ ಎಲ್ಲ ವಿಷಯಗಳಿಗೆ ಸುದೀಪ್ ಅವರು ಈ ಸಂದರ್ಶನದಲ್ಲಿ (Kichcha Sudeep Interview) ಉತ್ತರ ನೀಡಿದ್ದಾರೆ.

ಪೈರಸಿ ಪದ ಬಳಸಿಲ್ಲ ಯಾಕೆ?

‘ನಾನು ಆ ವೇದಿಕೆಯಲ್ಲಿ ಪೈರಸಿ ಎಂಬ ಪದ ಬಳಕೆ ಮಾಡಿಲ್ಲ. ಹಾಗಾದರೆ ಇಡೀ ಚಿತ್ರರಂಗ ರಿಯಾಕ್ಟ್ ಮಾಡಬೇಕಿತ್ತಲ್ಲ. ಮೊದಲು ‘45’ ಚಿತ್ರತಂಡದವರು ರಿಯಾಕ್ಟ್ ಮಾಡಬೇಕಿತ್ತು. ಉಪ್ಪಿ ಸರ್, ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ, ಗಣೇಶ್, ರಿಷಬ್ ಶೆಟ್ಟಿ, ಯಶ್ ಮುಂತಾದವರೆಲ್ಲ ರಿಯಾಕ್ಟ್ ಮಾಡಬೇಕಿತ್ತು. ನಾನು ಹೇಳಿಕೆ ನೀಡಿದೆ. ಎಲ್ಲಿಂದ ಸೌಂಡು ಬರುತ್ತದೆ ಅಂತ ನೋಡಿದೆ. ಚಿತ್ರರಂಗದಲ್ಲಿ ಒಂದು ಲಕ್ಷ ಜನರು ಇದ್ದಾರೆ. ಯಾರೂ ನಮ್ಮ ಮಾತಿಗೆ ಪ್ರತಿಕ್ರಿಯೆ ನೀಡಿಲ್ಲ. ಪ್ರತಿಕ್ರಿಯೆ ನೀಡಿದವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬಾರದು. ಅಲ್ಲಿ ಮಾತನಾಡಿದ ನನಗೆ ಘನತೆ ಇಲ್ಲವಾ? 30 ವರ್ಷದಿಂದ ಜನರು ನನ್ನನ್ನು ನೋಡಿಲ್ಲವೇ? ಯಾವತ್ತಾದರೂ ನಾನು ತಪ್ಪಾದ ಹೇಳಿಕೆ ನೀಡಿದ್ದೇನಾ? ಯಾವುದಾದರೂ ಕಲಾವಿದರ ಬಗ್ಗೆ ತಪ್ಪಾಗಿ ಮಾತನಾಡಿದ್ದೇನಾ?’

ಆ ರೀತಿ ಮಾತಾಡಿದ್ದಕ್ಕೆ ಕಾರಣ?

‘ಅಂದು ನಾನು ಅಲ್ಲಿ ಮಾತನಾಡುವುದಕ್ಕೂ ಮುನ್ನ ನನಗೆ ಒಂದು ಫೋನ್ ಕರೆ ಬಂದಿತ್ತು. ದುಡ್ಡಿಗಾಗಿ ನಿಮ್ಮ ಸಿನಿಮಾವನ್ನು ಪೈರಸಿ ಮಾಡುತ್ತಿಲ್ಲ. ನಿಮ್ಮ ಸಿನಿಮಾವನ್ನು ಹಾಳು ಮಾಡಬೇಕು ಎಂಬ ಕಾರಣಕ್ಕೆ ಪೈರಸಿ ಮಾಡಲಿದ್ದಾರೆ ಎಂಬ ಮಾಹಿತಿ ಬಂತು. ಅದರ ವಿರುದ್ಧ ನಾನು ನಿಂತುಕೊಳ್ಳದೇ ಮತ್ತೆ ಯಾರು ಬರಬೇಕು? ಅಂದು ನಾನು ನನ್ನ ಸಂಭ್ರಮವನ್ನು ನಿಲ್ಲಿಸಿ, ಆ ಮಾತನ್ನು ಹೇಳಿದೆ ಎಂದರೆ ಅರ್ಥ ಮಾಡಿಕೊಳ್ಳಿ. ಯಾರು ಕೇಳಿಸಿಕೊಳ್ಳುತ್ತಿದ್ದಾರೋ ಅವರಿಗೆ ನಾನು ಆ ಮಾತನ್ನು ಹೇಳಬೇಕಿತ್ತು. ಅವರಿಗೆ ಅರ್ಥ ಆಗಿದೆ.’

ಆ ಮಾತು ಹೇಳಿದ್ದು ಯಾರಿಗೆ?

‘ಪ್ರಭುದ್ಧತೆ ಇಲ್ಲದೇ ಆವೇಷದಲ್ಲಿ ಏನೇನೋ ಮಾತಾಡುವವನು ನಾನಾಗಿದ್ದರೆ ಈಗಾಗಲೇ ಅನೇಕ ವಿವಾದಗಳಲ್ಲಿ ಸಿಕ್ಕಿಕೊಳ್ಳಬೇಕಿತ್ತು. ಬೇರೆಯವರ ಸಿನಿಮಾದಲ್ಲಿ ತಲೆ ಹಾಕುವ ಉದ್ದೇಶ ನನಗೆ ಇಲ್ಲ. ಇಂಥವರಿಗೆ ಹೇಳಿದ್ದು ಅಂತ ನಾನು ಹೇಳಿಲ್ಲ. ಅಷ್ಟು ಜನ ಕಲಾವಿದರು ಇದ್ದಾರೆ. ಎಲ್ಲರಿಗೂ ಸುದೀಪ್ ಗೊತ್ತು. ಅವರು ಯಾರೂ ಕೂಡ ಪ್ರತಿಕ್ರಿಯಿಸಿಲ್ಲ. ಯಾಕೆ ಪ್ರತಿಕ್ರಿಯಿಸಿಲ್ಲ ಎಂಬುದು ಅವರಿಗೆ ಗೊತ್ತು. ಬೇರೆ ಯಾರದ್ದೂ ಮಾತಿಗೆ ನಾನು ಯಾಕೆ ಪ್ರತಿಕ್ರಿಯೆ ನೀಡಬೇಕು? ನನ್ನ ಹೆಸರು ಹೇಳಿ ಮಾತನಾಡಿದರೆ ನಾನು ಪ್ರತಿಕ್ರಿಯೆ ಕೊಡುತ್ತೇನೆ.

‘ನಮ್ಮ ಸಿನಿಮಾ ಕಾಪಾಡಿಕೊಳ್ಳುವುದು ನಮಗೆ ಮುಖ್ಯ. ನನಗೆ ಅಹಂ ಇಲ್ಲ. ಅದರ ಅವಶ್ಯಕತೆ ನನಗೆ ಇಲ್ಲ. ಸಿನಿಮಾ ಬಿಟ್ಟು ಬೇರೆ ವಿಚಾರಗಳ ಬಗ್ಗೆ ನಾನು ಕೇರ್ ಮಾಡಲ್ಲ. ನನ್ನದು ಸಿಂಪಲ್ ಜೀವನ. ದರ್ಶನ್ ಬಗ್ಗೆ ನೀವು ಬಂದು ಕೇಳಿದಾಗ ನಾನು ಇಂದಿನ ತನಕ ಕೆಟ್ಟದಾಗಿ ಮಾತನಾಡಿಲ್ಲ. ನಾನು ಯಾಕೆ ಯಾರಿಗಾದರೂ ಕೆಟ್ಟದ್ದು ಬಯಸಬೇಕು? ನನ್ನ ಸಿನಿಮಾವನ್ನು ಅದರ ಪಾಡಿಗೆ ಬಿಟ್ಟುಬಿಡಬಹುದಲ್ಲ. ಯಾರು ಮಾಡುತ್ತಿದ್ದಾರೋ ಅವರಿಗೆ ಹೇಳಿದ್ದೇನೆ. ಅದು ಅವರಿಗೆ ತಲುಪಿದೆ. ಅವರನ್ನು ನಾನು ಬಿಡಲ್ಲ.’

ಇದನ್ನೂ ಓದಿ: ಯುದ್ಧಕ್ಕೆ ಸಿದ್ಧ: ಸುದೀಪ್ ಮಾತಿನ ನಿಜವಾದ ಅರ್ಥ ಏನು? ವಿವರಿಸಿದ ಕಿಚ್ಚನ ಆಪ್ತ ರಾಜು ಗೌಡ

ಪೈರಸಿ ವಿರುದ್ಧ ನಿಮ್ಮ ಯುದ್ಧ ಹೇಗೆ?

‘ವಿವಾದ ಮಾಡಲು ನಾನು ಇಲ್ಲಿ ಬಂದಿಲ್ಲ. ನನಗೆ ಆಗಿರುವ ನೋವನ್ನು ಊಹಿಸಿಕೊಳ್ಳಿ. ಪೈರಸಿ ವಿರುದ್ಧ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಈಗ ಹೇಳಲ್ಲ. ಪ್ರಯತ್ನ ಮಾಡುತ್ತಿದ್ದೇನೆ. ಯಶಸ್ವಿ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ. ಯಶಸ್ವಿಯಾದರೆ ಪೈರಸಿ ಜಾಲವನ್ನು ಶೇಕಡ 80ರಷ್ಟು ಅಂತ್ಯಗೊಳಿಸುತ್ತೇವೆ. ಅದಕ್ಕಾಗಿ ಸರ್ಕಾರದಿಂದ ದೊಡ್ಡ ದೊಡ್ಡ ವ್ಯಕ್ತಿಗಳ ಸಹಾಯ ಕೇಳಿದ್ದೇವೆ. ಪ್ರತಿಯೊಬ್ಬರೂ ಅದಕ್ಕೆ ಸಹಕಾರ ಕೊಟ್ಟಿದ್ದಾರೆ.’

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿವಿ9 ವರದಿ ಇಂಪ್ಯಾಕ್ಟ್: ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು – Kannada News | Koppal: TV9 Report Impact; Police Constable Suspended for Bringing Bundle of Papers from Complainant

ಕೊಪ್ಪಳ, ಡಿಸೆಂಬರ್​ 23: ದೂರುದಾರರಿಂದ ಠಾಣೆಗೆ ಪೇಪರ್ ಬಂಡಲ್ ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಕನಕಗರಿ ಪೊಲೀಸ್ ಠಾಣೆ ಪಿಸಿ ಪರಶುರಾಮ್​​​ರನ್ನು ಅಮಾನತುಗೊಳಿಸಲಾಗಿದೆ. ಟಿವಿ9 ವರದಿ ಹಿನ್ನೆಲೆಯಲ್ಲಿ ಎಸ್​ಪಿ ರಾಮ್​ ಅರಸಿದ್ದಿ ಕ್ರಮಕೈಗೊಂಡಿದ್ದಾರೆ.  ಪರಶುರಾಮ್ ದೂರುದಾರರ ಬಳಿ ಜೆರಾಕ್ಸ್ ಪೇಪರ್ ತರಿಸಿದ್ದರು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೀಕ್ಷಿತ್ ಶೆಟ್ಟಿ ವೇಗಕ್ಕೆ ಬ್ರೇಕ್ ಇಲ್ಲ, ಮತ್ತೊಂದು ಬಿಗ್ ಬಜೆಟ್ ತೆಲುಗು ಸಿನಿಮಾನಲ್ಲಿ ನಟನೆ – Kannada News | Deekshit Shetty to act along with Dulquer Salman and Pooja Hegde

ದೀಕ್ಷಿತ್ ಶೆಟ್ಟಿ(Deekshit Shetty), ತಮ್ಮ ಪ್ರತಿಭೆಯಿಂದ, ಸರಳತೆಯಿಂದ, ಕೆಲಸದ ಮೇಲಿನ ಶ್ರದ್ಧೆಯಿಂದ ಪರಭಾಷೆ ಚಿತ್ರರಂಗದಲ್ಲಿ ಅವಕಾಶ ಮೇಲೆ ಅವಕಾಶಗಳನ್ನು ಪಡೆಯುತ್ತಿರುವ ಕನ್ನಡದ ನಟ. ಕನ್ನಡದ ‘ದಿಯಾ’ ಸಿನಿಮಾ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟ ದೀಕ್ಷಿತ್ ಶೆಟ್ಟಿ ಸ್ವಪ್ರತಿಭೆಯಿಂದ ಸಫಲತೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಏರುತ್ತಾ ಹೋಗುತ್ತಿದ್ದಾರೆ. ಸ್ಟಾರ್ ನಟ ನಾನಿ, ಕೀರ್ತಿ ಸುರೇಶ್ ಜೊತೆಗೆ ‘ದಸರಾ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದೀಕ್ಷಿತ್ ಶೆಟ್ಟಿ, ‘ದಿ ಗರ್ಲ್​​ಫ್ರೆಂಡ್’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿದರು. ಇದೀಗ ಮತ್ತೊಂದು ದೊಡ್ಡ ಸಿನಿಮಾನಲ್ಲಿ ಅವಕಾಶ ಬಾಚಿಕೊಂಡಿದ್ದಾರೆ.

ದುಲ್ಕರ್ ಸಲ್ಮಾನ್ ನಟಿಸುತ್ತಿರುವ ಇನ್ನೂ ಹೆಸರಿಡದ ಹೊಸ ಸಿನಿಮಾನಲ್ಲಿ ದೀಕ್ಷಿತ್ ಶೆಟ್ಟಿಗೆ ಪ್ರಮುಖ ಪಾತ್ರವೊಂದು ದೊರೆತಿದೆ. ಸಿನಿಮಾನಲ್ಲಿ ದುಲ್ಕರ್ ಸಲ್ಮಾನ್ ಅವರಿಗೆ ಎದುರು ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದು, ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪ್ರಾರಂಭವಾಗಿದೆ. ಈ ಸಿನಿಮಾನಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ಅವರಿಗೆ ಪ್ರಮುಖ ಪಾತ್ರವೊಂದು ನೀಡಲಾಗಿದೆ. ಈ ಹಿಂದೆ ‘ದಸರಾ’, ‘ದಿ ಗರ್ಲ್​ಫ್ರೆಂಡ್’, ಇನ್ನೂ ಹಲವು ಸಿನಿಮಾಗಳ ಮೂಲಕ ತಮ್ಮ ಪ್ರತಿಭೆ ಸಾರಿರುವ ದೀಕ್ಷಿತ್ ಶೆಟ್ಟಿಗೆ ಮತ್ತೊಂದು ಸುವರ್ಣಾವಕಾಶ ದೊರೆತಿದೆ.

ಇದನ್ನೂ ಓದಿ:ಬೃಂದಾ ಆಚಾರ್ಯ ಮತ್ತು ನಟ ದೀಕ್ಷಿತ್ ಶೆಟ್ಟಿ ಸಖತ್ ಡ್ಯಾನ್ಸ್: ವಿಡಿಯೋ

ದೀಕ್ಷಿತ್ ಶೆಟ್ಟಿ ಹಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ‘ದಿಯಾ’ದಿಂದ ನಟನೆ ಆರಂಭಿಸಿದ ದೀಕ್ಷಿತ್, ‘ಕೆಟಿಎಂ’, ಸಖತ್ ಸದ್ದು ಮಾಡಿದ ‘ಬ್ಲಿಂಕ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ದೀಕ್ಷಿತ್ ನಟನೆಯ ಹಾಸ್ಯ ಪ್ರಧಾನ ಸಿನಿಮಾ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಹ ಬಿಡುಗಡೆ ಆಗಿ ಗಮನ ಸೆಳೆಯಿತು. ಇವುಗಳ ಜೊತೆಗೆ ಪ್ರಸ್ತುತ ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’, ‘ಸ್ಟ್ರಾಬೆರ್ರಿ’ ಸಿನಿಮಾಗಳಲ್ಲಿ ದೀಕ್ಷಿತ್ ನಟಿಸುತ್ತಿದ್ದಾರೆ. ತೆಲುಗಿನ ‘ಕಿಂಗ್ ಜಾಕ್ ಕ್ವೀನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ ‘ಒಪ್ಪೀಸ್’ ಸಿನಿಮಾನಲ್ಲೂ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಇದೀಗ ದುಲ್ಕರ್ ಸಲ್ಮಾನ್ ಅವರ ಹೊಸ ಸಿನಿಮಾ ಸಹ ದೀಕ್ಷಿತ್​​ಗೆ ದೊರೆತಿದೆ.

ದೀಕ್ಷಿತ್ ಶೆಟ್ಟಿ ಅವರು ಈ ಹಿಂದೆ ಟಿವಿ9ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದಂತೆ. ಅವರಿಗೆ ಸಿಗುತ್ತಿರುವ ಎಲ್ಲ ಅವಕಾಶಗಳು ಯಾರೋ ಒಬ್ಬರು ರೆಫರ್ ಮಾಡಿ, ಅಂದರೆ ಇವರ ಕೆಲಸ ನೋಡಿದವರು, ಮೆಚ್ಚಿ ಮತ್ತೊಂದು ಸಿನಿಮಾಕ್ಕೆ ತೆಗೆದುಕೊಳ್ಳುತ್ತಾರಂತೆ. ದೀಕ್ಷಿತ್ ಅವರಿಗೆ ಕೆಲಸದ ಮೇಲಿರುವ ಶ್ರದ್ಧೆ, ಶೂಟಿಂಗ್​​ ಸ್ಥಳದಲ್ಲಿ ತೋರುವ ಶಿಸ್ತು, ತನ್ಮಯತೆಯ ಕಾರಣಕ್ಕೆ ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತಿವೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್

ದಾವಣಗೆರೆ, ಡಿಸೆಂಬರ್​​ 23: ಅಕ್ರಮವಾಗಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ದಾವಣಗೆರೆ ರಿಯಲ್ ಎಸ್ಟೇಟ್ ಉದ್ಯಮಿ‌ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಮತ್ತು‌ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ ಶಾಮನೂರ ವೇದಮೂರ್ತಿ(53) ಬಂಧಿತ ವ್ಯಕ್ತಿ. ಬಂಧಿತರಿಂದ ಅಂದಾಜು 10 ಲಕ್ಷ ರೂ ಮೌಲ್ಯದ 90 ಗ್ರಾಂ ಎಂ.ಡಿ.ಎಂ.ಎ ಹಾಗೂ 200 ಗ್ರಾಂ ಓಪಿಯಂ ಎಂಬ ಮಾದಕ ವಸ್ತು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡಿದ ಒಂದು ಲಕ್ಷ ರೂ. ನಗದು ಹಣ ಸೇರಿದಂತೆ 11 ಲಕ್ಷ ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link