Category Archives: Blog

Your blog category

ವೈಯಲೆಂಟ್ ಅವತಾರದಲ್ಲಿ ವಿಜಯ್ ದೇವರಕೊಂಡ, ವಾವ್ ಎಂದ ರಶ್ಮಿಕಾ – Kannada News | Vijay Deverakonda starts another movie, Rashmika sends best wishes

ವಿಜಯ್ ದೇವರಕೊಂಡ (Vijay Deverakonda) ತೆಲುಗು ಚಿತ್ರರಂಗದ ಸ್ಟಾರ್ ನಟ. ಆದರೆ ಕಳೆದ ಕೆಲ ವರ್ಷಗಳಿಂದಲೂ ಗೆಲುವು ಅವರಿಂದ ಬಲು ದೂರವೇ ಉಳಿದಿದೆ. ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರಾದರೂ ಗೆಲುವು ಎಂಬುದು ಅವರ ಪಾಲಿಗೆ ಮರೀಚಿಕೆಯೇ ಆಗಿದೆ. ರೊಮ್ಯಾಂಟಿಕ್, ಆಕ್ಷನ್, ಕೌಟುಂಬಿಕ, ಹಾರರ್, ಕಾಮಿಡಿ ಸಿನಿಮಾ ಹೀಗೆ ಹಲವು ಜಾನರ್​​ನ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಕಳೆದ ಕೆಲ ವರ್ಷಗಳಲ್ಲಿ ನಟಿಸಿದ್ದಾರೆ. ಆದರೆ ಯಾವೊಂದು ಸಿನಿಮಾ ಸಹ ಗೆದ್ದಿಲ್ಲ. ಇದೀಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಪ್ರತಿ ಬಾರಿಯಂತೆ ರಶ್ಮಿಕಾ, ಈ ಬಾರಿಯೂ ತಮ್ಮ ಭಾವಿ ಪತಿಗೆ ಶುಭಾಶಯ ತಿಳಿಸಿದ್ದಾರೆ.

ಇತ್ತೀಚೆಗೆ ಅತಿಯಾದ ವೈಯಲೆನ್ಸ್ ಎಂಬುದು ಸಿನಿಮಾಗಳಲ್ಲಿ ಟ್ರೆಂಡ್ ಆಗಿಬಿಟ್ಟಿದೆ. ಅತಿಯಾದ ಹಿಂಸಾತ್ಮಕ ದೃಶ್ಯಗಳುಳ್ಳ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಸಖತ್ ಹಿಟ್ ಆಗುತ್ತಿವೆ. ‘ಅನಿಮಲ್’, ‘ಮಾರ್ಕೊ’ ಇತ್ತೀಚೆಗೆ ಬಿಡುಗಡೆ ಆದ ‘ಧುರಂಧರ್’ ಇಂಥಹಾ ಸಿನಿಮಾಗಳಲ್ಲಿ ಕೆಲವು. ಇದೀಗ ವಿಜಯ್ ದೇವರೊಕಂಡ ಸಹ ಅದೇ ಫಾರ್ಮುಲಾ ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದು, ಅತ್ಯಂತ ವೈಯಲೆಂಟ್ ಸಿನಿಮಾನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ವಿಜಯ್ ದೇವರಕೊಂಡ, ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್ ಇಂದು (ಡಿಸೆಂಬರ್ 23) ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ರಕ್ತವನ್ನು ಮೈಗೆಲ್ಲ ಮೆತ್ತಿಕೊಂಡು ಬರಿಮೈಯಲ್ಲಿ ಕಾಣಿಸಿಕೊಂಡಿದ್ದಾರೆ ವಿಜಯ್ ದೇವರಕೊಂಡ. ಕೈಯಲ್ಲಿ ರಕ್ತ ಮೆತ್ತಿದ ಕತ್ತಿಯೊಂದನ್ನು ಹಿಡಿದು ಅದನ್ನು ಎದುರಾಳಿ ಗುಂಪಿನ ಕಡೆ ಬೀಸುತ್ತಿದ್ದಾರೆ. ಮೀಸೆ ಬಿಟ್ಟುಕೊಂಡು, ತುಸು ಕೂದಲು ಬಿಟ್ಟು 80ರ ದಶಕದ ವಿಲನ್​​ಗಳ ರೀತಿ ಕಾಣುತ್ತಿದ್ದಾರೆ ನಟ ವಿಜಯ್ ದೇವರಕೊಂಡ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಜೈಪುರದಲ್ಲಿ?

ಸಿನಿಮಾದ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ‘ಲೆಟ್ಸ್ ಗೋ…’ ಎಂದು ಉತ್ಸಾಹ ವ್ಯಕ್ತಪಡಿಸಿದ್ದಾರೆ. ‘ರೌಡಿ ಜನಾರ್ಧನ್’ ಸಿನಿಮಾವನ್ನು ತೆಲುಗಿನ ನಿರ್ದೇಶಕ ರವಿ ಕಿರಣ್ ಕೊಲ್ಲ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ‘ಅಶೋಕವನಂ ಲೊ ಅರ್ಜುನ ಕನ್ಯಾಣಂ’, ‘ರಾಜಾವಾರು, ರಾಣಿಗಾರು’, ‘ಲವ್ ಮ್ಯಾರೇಜ್’ ಅಂಥಹಾ ಹಾಸ್ಯಮಯ ಪ್ರೇಮಕತೆಗಳನ್ನು ನಿರ್ದೇಶನ ಮಾಡಿದ್ದ ರವಿ ಕಿರಣ್ ಅವರು ಇದೀಗ ಪಕ್ಕಾ ಆಕ್ಷನ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ವಿಜಯ್ ದೇವರಕೊಂಡ ನಟನೆಯ ‘ಗೀತಾ ಗೋವಿಂದಂ’ ಸಿನಿಮಾದ ಬಳಿಕ ಅವರು ನಟಿಸಿದ ಯಾವೊಂದು ಸಿನಿಮಾ ಸಹ ಹಿಟ್ ಆಗಿಲ್ಲ. ‘ಡಿಯರ್ ಕಾಮ್ರೆಡ್’ ಸಾಧಾರಣ ಹಿಟ್ ಆಗಿದ್ದು ಬಿಟ್ಟರೆ, ‘ಲೈಗರ್’, ‘ಖುಷಿ’, ‘ಟ್ಯಾಕ್ಸಿವಾಲ’, ‘ವರ್ಲ್ಡ್ ಫೇಮಸ್ ಲವ್ವರ್’, ‘ದಿ ಫ್ಯಾಮಿಲಿ ಸ್ಟಾರ್’ ಇನ್ನೂ ಕೆಲವು ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸೋತಿವೆ. ಇತ್ತೀಚೆಗೆ ಬಂದ ‘ಕಿಂಗ್ಡಮ್’ ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ. ಇದೀಗ ‘ರೌಡಿ ಜನಾರ್ಧನ್’ ಸಿನಿಮಾ ಆದರೂ ಗೆಲ್ಲುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಆಟಗಾರರ ವಿರುದ್ಧ ಐಸಿಸಿಗೆ ದೂರು ನೀಡಲು ಮುಂದಾದ ಪಾಕ್ ಕ್ರಿಕೆಟ್ ಮಂಡಳಿ – Kannada News | U19 Asia Cup: PCB Files ICC Complaint Against India Over Player Conduct

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ 2025 ರ ಫೈನಲ್​ನಲ್ಲಿ ಟೀಂ ಇಂಡಿಯಾವನ್ನು ಮಣಿಸಿದ್ದ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟ್ರೋಫಿ ಗೆದ್ದ ಖುಷಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಬಿಸಿಸಿಐ ಹಾಗೂ ಟೀಂ ಇಂಡಿಯಾ ಆಟಗಾರರ ವಿರುದ್ಧ ಐಸಿಸಿಗೆ ದೂರು ನೀಡಲು ಮುಂದಾಗಿದೆ. ವಾಸ್ತವವಾಗಿ ಉಭಯ ತಂಡಗಳ ನಡುವಿನ ಪಂದ್ಯದ ಸಮಯದಲ್ಲಿ ಮತ್ತು ನಂತರ ಉಭಯ ತಂಡಗಳ ಆಟಗಾರರ ವರ್ತನೆ ಸಾಕಷ್ಟು ಸುದ್ದಿ ಮಾಡಿತ್ತು. ಎರಡೂ ತಂಡಗಳ ಆಟಗಾರರು ಮೈದಾನದಲ್ಲಿಯೇ ವಾಗ್ವಾದ ನಡೆಸಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ವಿಚಾರದ ಬಗ್ಗೆ ಐಸಿಸಿ ಬಳಿ ದೂರು ನೀಡಲು ಮುಂದಾಗಿದೆ.

ಐಸಿಸಿಗೆ ದೂರು ನೀಡಲು ಮುಂದಾದ ಪಿಸಿಬಿ

ವಾಸ್ತವವಾಗಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ಏಷ್ಯಾಕಪ್ ಸಮಯದಲ್ಲೂ ಉಭಯ ತಂಡಗಳ ನಡುವೆ ಪಂದ್ಯ ನಡೆದಿದ್ದಾಗ ಸಾಕಷ್ಟು ವಿವಾದಗಳು ಸೃಷ್ಟಿಯಾಗಿದ್ದವು. ಪಂದ್ಯದ ಮೊದಲು ಮತ್ತು ನಂತರ ಎರಡೂ ತಂಡಗಳ ಆಟಗಾರರು ಕೈಕುಲುಕಿರಲಿಲ್ಲ. ಹಾಗೆಯೇ ಫೈನಲ್ ಗೆದ್ದಿದ್ದ ಟೀಂ ಇಂಡಿಯಾ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಪಡೆಯಲು ನಿರಾಕರಿಸಿತ್ತು. ಇದು ಕೂಡ ದೊಡ್ಡ ವಿವಾದವಾಗಿತ್ತು. ಇದರ ಪರಿಣಾಮವಾಗಿ ಟೀಂ ಇಂಡಿಯಾಗೆ ಇದುವರೆಗೂ ಟ್ರೋಫಿ ಸಿಕ್ಕಿಲ್ಲ.

ಇದೆಲ್ಲದರ ನಡುವೆ ಅಂಡರ್ 19 ಏಷ್ಯಾಕಪ್​ನಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅದೇ ಘಟನೆ ಮರುಕಳಿಸಿದೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಬಹಿರಂಗವಾಗಿಯೇ ವಾಗ್ವಾದ ನಡೆಸಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಭಾರತೀಯ ಯುವ ಆಟಗಾರರು ಫೈನಲ್ ಪಂದ್ಯದ ವೇಳೆ ಪಾಕಿಸ್ತಾನಿ ಆಟಗಾರರನ್ನು ಕೆರಳುವಂತೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ, ನಖ್ವಿ ಅವರು ಈ ವಿಷಯವನ್ನು ಐಸಿಸಿಗೆ ಔಪಚಾರಿಕವಾಗಿ ವರದಿ ಮಾಡುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದರು. ಹಾಗೆಯೇ ಪಾಕಿಸ್ತಾನ ತಂಡದ ಮಾರ್ಗದರ್ಶಕ ಮತ್ತು ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಕೂಡ ಭಾರತೀಯ ಆಟಗಾರರ ವರ್ತನೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ಇದು ಆಟದ ಮನೋಭಾವಕ್ಕೆ ವಿರುದ್ಧವಾಗಿದೆ. ಕ್ರಿಕೆಟ್ ಅನ್ನು ಯಾವಾಗಲೂ ಗೌರವ ಮತ್ತು ಕ್ರೀಡಾ ಮನೋಭಾವದಿಂದ ಆಡಬೇಕು ಎಂದಿದ್ದರು. ಇದೀಗ ಪಾಕಿಸ್ತಾನವು ಈ ಬಗ್ಗೆ ಔಪಚಾರಿಕ ದೂರು ದಾಖಲಿಸಿದರೆ, ಐಸಿಸಿ ಮ್ಯಾಚ್ ರೆಫರಿಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತದೆ.

ವೈಭವ್-ಆಯುಷ್ ವಾಗ್ವಾದ

ಫೈನಲ್ ಪಂದ್ಯದ ಸಮಯದಲ್ಲಿ, ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಪಾಕಿಸ್ತಾನಿ ಆಟಗಾರರೊಂದಿಗೆ ವಾಗ್ವಾದ ನಡೆಸಿದ್ದರು. ಆಯುಷ್ ಮ್ಹಾತ್ರೆ ಅವರನ್ನು ಪಾಕಿಸ್ತಾನಿ ವೇಗಿ ಅಲಿ ರಜಾ ಔಟ್ ಮಾಡಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಇದರಿಂದ ಕೆರಳಿದ್ದ ಆಯುಷ್‌ ಹಾಗೂ ಅಲಿ ನಡುವೆ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರ ನಂತರ ವೈಭವ್ ಸೂರ್ಯವಂಶಿ ವಿಕೆಟ್ ಪಡೆದಿದ್ದ ಅಲಿ ಮತ್ತೆ ಆಕ್ರಮಣಕಾರಿ ಆಚರಣೆ ನಡೆಸಿದ್ದರು. ಇದು ಕೂಡ ವೈಭವ್ ಸೂರ್ಯವಂಶಿಯನ್ನು ಕೆರಳುವಂತೆ ಮಾಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಗುಡ್​ನ್ಯೂಸ್: ಋತುಚಕ್ರದ ರಜೆಗೆ ಇಲಾಖೆ ಗ್ರೀನ್​ಸಿಗ್ನಲ್ – Kannada News | Good News for Women Employees of Transport Corporations: Department Gives Green Signal for Menstrual Leave

ಬೆಂಗಳೂರು, ಡಿಸೆಂಬರ್​​ 23: ಕೆಎಸ್‌ಆರ್‌ಟಿಸಿ (KSRTC) ಸೇರಿದಂತೆ ನಾಲ್ಕು ರಾಜ್ಯ ಸಾರಿಗೆ ನಿಗಮಗಳ ಮಹಿಳಾ ನೌಕರರಿಗೆ ಋತುಚಕ್ರದ ರಜೆ (Menstrual Leave) ನೀಡಲು ಸಾರಿಗೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿ 1ರಿಂದ ಮಹಿಳಾ ಡ್ರೈವರ್, ಕಂಡಕ್ಟರ್ ಸೇರಿ ಮಹಿಳಾ ಸಿಬ್ಬಂದಿ ಋತುಚಕ್ರದ ರಜೆ ಪಡೆಯಬಹುದಾಗಿದೆ. ಕೆಎಸ್ಆರ್​​ಟಿಸಿ, ಬಿಎಂಟಿಸಿ, ಎನ್​​​​ಡಬ್ಲೂಕೆಆರ್​​ಟಿಸಿ ಮತ್ತು ಕೆಕೆಆರ್​ಟಿಸಿ ಎಂಡಿ ಅಕ್ರಂ ಪಾಷ ಈ ಬಗ್ಗೆ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಆ ಮೂಲಕ ನಾಲ್ಕು ನಿಗಮದ ಮಹಿಳಾ ನೌಕರರಿಗೆ ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಗುಡ್ ನ್ಯೂಸ್​​ ಸಿಕ್ಕಿದೆ.

ಆದೇಶದಲ್ಲೇನಿದೆ?

ಕರ್ನಾಟಕ ಸರ್ಕಾರವು ಮಹಿಳಾ ನೌಕರರ ಮನೋಸ್ಥೆರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯ ಸೌಲಭ್ಯವನ್ನು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೂ ಕಲ್ಪಿಸಿ ಷರತ್ತು ಮತ್ತು ನಿಬಂಧನೆಗೊಳಪಟ್ಟು ರಜೆ ಮಂಜೂರು ಮಾಡಲು ಆದೇಶಿಸಿದೆ.

ಇದನ್ನೂ ಓದಿ: ಋತುಚಕ್ರ ರಜೆ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಗೆ ತಾತ್ಕಾಲಿಕ ಮಾರ್ಪಾಡು ಮಾಡಿದ ಹೈಕೋರ್ಟ್

ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ 01 ಜನವರಿ 2026ರಿಂದ ಜಾರಿಗೆ ಬರುತ್ತಿದ್ದು, ಪ್ರತಿ ತಿಂಗಳು ಒಂದು ದಿನದಂತೆ ಋತುಚಕ್ರ ರಜೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಷರತ್ತುಗಳೇನು?

  • ಋತುಚಕ್ರ ಹೊಂದಿರುವ 18 ರಿಂದ 52 ವಯಸ್ಸಿನ ನಿಗಮದ ಮಹಿಳಾ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
  • ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆ ಮಂಜೂರು ಮಾಡಬಹುದು. ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅಗತ್ಯವಿಲ್ಲ.
  • ಈ ರಜೆಯನ್ನು ರಜೆ ಅಥವಾ ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು.
  • ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸಬಾರದು. ಸದರಿ ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು ಹಾಗೂ ಮುಂದಿನ ತಿಂಗಳಿಗೆ ಅವಕಾಶವಿರುವುದಿಲ್ಲ. ಸಂಬಂಧಪಟ್ಟವರೆಲ್ಲರೂ ಆದೇಶಕ್ಕೆ ತಕ್ಕಂತೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಉನ್ನಾವ್ ಅತ್ಯಾಚಾರ ಪ್ರಕರಣ; ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್​​ಗೆ ಬಿಗ್ ರಿಲೀಫ್ – Kannada News | Unnao rape case Delhi High Court suspends jail sentence of Expelled BJP MLA Kuldeep Sengar

ನವದೆಹಲಿ, ಡಿಸೆಂಬರ್ 23: 2017ರ ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ (Kuldeep Singh Sengar) ಅವರ ಶಿಕ್ಷೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ದೆಹಲಿ ವಿಚಾರಣಾ ನ್ಯಾಯಾಲಯವು ಡಿಸೆಂಬರ್ 2019ರಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 5 (ಸಿ) ಮತ್ತು 6ರ ಅಡಿಯಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕುಲದೀಪ್ ಸೆಂಗಾರ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡಿ ವಿಚಾರಣೆ ನಡೆಸಿತ್ತು.

ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿದೆ. ನ್ಯಾಯಮೂರ್ತಿಗಳಾದ ಸುಬ್ರಮಣಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ನ್ಯಾಯಪೀಠವು ಕುಲದೀಪ್ ಸೆಂಗಾರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಅದೇ ಮೊತ್ತದ 3 ಶ್ಯೂರಿಟಿಗಳೊಂದಿಗೆ 15 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಅನ್ನು ಸಲ್ಲಿಸುವಂತೆ ನಿರ್ದೇಶಿಸಿತು.

ಇದನ್ನೂ ಓದಿ: ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಕುಲದೀಪ್ ಸೆಂಗಾರ್​ಗೆ ಮಧ್ಯಂತರ ಜಾಮೀನು

ಕುಲದೀಪ್ ಸಿಂಗ್ ಸೆಂಗಾರ್ ಅವರು ಅತ್ಯಾಚಾರಕ್ಕೊಳಗಾದ ಬಾಲಕಿಯ ಮನೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಾಡಬಾರದು ಮತ್ತು ಆಕೆ ಅಥವಾ ಆಕೆಯ ತಾಯಿಗೆ ಬೆದರಿಕೆ ಹಾಕಬಾರದು ಎಂದು ಹೈಕೋರ್ಟ್ ಸೆಂಗಾರ್‌ಗೆ ಸೂಚಿಸಿದೆ. “ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದು ಮಾಡಲಾಗುವುದು” ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಅತ್ಯಾಚಾರ ಪ್ರಕರಣದಲ್ಲಿ ಕುಲದೀಪ್ ಸೆಂಗಾರ್ ಅವರ ಅಪರಾಧ ಸಾಬೀತು ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ಮುಗಿಯುವವರೆಗೆ ಅವರ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ. ಅತ್ಯಾಚಾರ ಪ್ರಕರಣದಲ್ಲಿ ಡಿಸೆಂಬರ್ 2019ರ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಅವರು ಪ್ರಶ್ನಿಸಿದ್ದರು.

ಇದನ್ನೂ ಓದಿ:  ಮಂಗಳೂರು: ಜೇನುಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ; ಆರೋಪಿ ಅಂದರ್

2017ರಲ್ಲಿ ಕುಲದೀಪ್ ಸೆಂಗಾರ್ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದರು. ಆಗಸ್ಟ್ 1, 2019ರಂದು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಅತ್ಯಾಚಾರ ಪ್ರಕರಣ ಮತ್ತು ಸಂಬಂಧಿತ ಇತರ ಪ್ರಕರಣಗಳನ್ನು ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯದಿಂದ ದೆಹಲಿಗೆ ವರ್ಗಾಯಿಸಲಾಗಿತ್ತು. ಆ ಬಾಲಕಿಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ತನ್ನ ಶಿಕ್ಷೆಯ ವಿರುದ್ಧ ಕುಲದೀಪ್ ಸೆಂಗಾರ್ ಅವರ ಮೇಲ್ಮನವಿಯೂ ಬಾಕಿ ಇದೆ. ಅದರಲ್ಲಿ ಅವರು ಈಗಾಗಲೇ ಸಾಕಷ್ಟು ಸಮಯವನ್ನು ಜೈಲಿನಲ್ಲಿ ಕಳೆದಿರುವುದರಿಂದ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿದ್ದಾರೆ. ಕಸ್ಟಡಿ ಸಾವಿನ ಪ್ರಕರಣದಲ್ಲಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಕೈ ಕಾಲು ಮರಗಟ್ಟುವಿಕೆಗೆ ನರದ ಸಮಸ್ಯೆ ಕಾರಣವೇ; ಈ ಬಗ್ಗೆ ತಜ್ಞರು ಏನನ್ನುತ್ತಾರೆ – Kannada News | Hands & Feet Numbness: Causes & Solutions for Cold Sensitivity

ಚಳಿಗಾಲದಲ್ಲಿ (Winter), ಅನೇಕರ ಕೈ, ಕಾಲು ಮರಗಟ್ಟುತ್ತದೆ (Hands & Feet Numbness). ಈ ರೀತಿಯಾಗುವುದು ಚಳಿಗೋ ಅಥವಾ ನರ (Nerve) ಸಮಸ್ಯೆಯ ಆರಂಭಿಕ ಲಕ್ಷಣವೋ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಚಳಿ ಹೆಚ್ಚಾದಂತೆ, ಕೈಕಾಲುಗಳು ತಣ್ಣಗಾಗುವುದು, ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆ ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಅದರಲ್ಲಿಯೂ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಈ ರೀತಿಯಾಗುತ್ತದೆ. ಆದರೆ ಕೆಲವರು ಇದನ್ನು ಚಳಿಯಿಂದ ಆಗುತ್ತದೆ ಎಂದು ತಿಳಿದುಕೊಂಡು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಆರೋಗ್ಯ ತಜ್ಞರು ಇದು ನರ ಸಂಬಂಧಿತ ಸಮಸ್ಯೆಯ ಆರಂಭಿಕ ಲಕ್ಷಣವಾಗಿರಬಹುದು ಎನ್ನುತ್ತಾರೆ. ಹಾಗಾದರೆ ಇದನ್ನು ಕಂಡು ಹಿಡಿಯುವುದು ಹೇಗೆ, ಈ ಸಮಸ್ಯೆಯನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಕೈಕಾಲುಗಳು ಮರಗಟ್ಟುವುದಕ್ಕೆ ಕಾರಣವೇನು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ. ಸುಭಾಷ್ ಗಿರಿ ಅವರ ಪ್ರಕಾರ, ಚಳಿಗಾಲದಲ್ಲಿ ಕೈಕಾಲುಗಳು ಮರಗಟ್ಟುವುದು ದೇಹದ ಸಾಮಾನ್ಯ ಪ್ರಕ್ರಿಯೆ. ಹೃದಯ ಮತ್ತು ಮೆದುಳಿನಂತಹ ಅಗತ್ಯ ಅಂಗಗಳನ್ನು ರಕ್ಷಿಸಲು ದೇಹವು ಕೈಕಾಲುಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಕೈ ಬೆರಳು ಮತ್ತು ಪಾದಗಳು ಜುಮ್ಮೆನಿಸುತ್ತದೆ ಕೆಲವರಲ್ಲಿ ಮರಗಟ್ಟಿದ ಅನುಭವವಾಗುತ್ತದೆ. ಇಂತಹ ಸಮಯದಲ್ಲಿ ಕೈಕಾಲುಗಳನ್ನು ಬೆಚ್ಚಗಾಗಿಸುವ ಮೂಲಕ, ಕೈಗವಸುಗಳನ್ನು ಧರಿಸುವ ಮೂಲಕ ಅಥವಾ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆದರೆ ಈ ರೀತಿ ಪದೇ ಪದೇ ಆಗುತ್ತಿದ್ದರೆ ಅಥವಾ ಚಳಿ ಇಲ್ಲದ ಸಮಯದಲ್ಲಿ ಕಂಡುಬಂದರೆ ಇದು ನರ ಸಮಸ್ಯೆಯ ಆರಂಭಿಕ ಲಕ್ಷಣವಾಗಿರಬಹುದು. ಇದರ ಜೊತೆಗೆ, ಸುಡುವ ಸಂವೇದನೆ, ನೋವು, ದೌರ್ಬಲ್ಯ ಅಥವಾ ನಡೆಯಲು ಅಥವಾ ವಸ್ತುಗಳನ್ನು ಹಿಡಿದಿಡಲು ತೊಂದರೆಯಾಗುವುದು ನರ ಸಂಬಂಧಿತ ಸಮಸ್ಯೆಯನ್ನು ಸೂಚಿಸುತ್ತದೆ. ವಿಟಮಿನ್ ಬಿ 12 ಕೊರತೆ, ಮಧುಮೇಹ, ಒಂದೇ ಸ್ಥಾನದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಅಥವಾ ನರಗಳ ಮೇಲಿನ ಒತ್ತಡವು ಕೂಡ ಇದಕ್ಕೆ ಕಾರಣಗಳಾಗಿರಬಹುದು. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಚಳಿಗಾಲದಲ್ಲಿ ಇತರರಿಗಿಂತ ತುಸು ಹೆಚ್ಚೆ ನಿಮ್ಗೆ ಚಳಿಯಾಗುತ್ತಾ? ಇದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ

ಕೈಕಾಲುಗಳು ಮರಗಟ್ಟುವುದನ್ನು ತಡೆಯಲು ಸಲಹೆ:

  • ಕೈ ಮತ್ತು ಪಾದಗಳನ್ನು ಚೆಚ್ಚಗಿಟ್ಟುಕೊಳ್ಳಿ.
  • ಆಗಾಗ ಕೈ ಮತ್ತು ಪಾದಗಳನ್ನು ಉಗುರು ಬೆಚ್ಚಗಿನ ನೀರಿನಿಂದ ಬೆಚ್ಚಗಾಗಿಸಿ.
  • ಚಳಿ ಅಥವಾ ಗಾಳಿ ಹೆಚ್ಚಾಗಿ ಕಂಡುಬರುವ ಜಾಗದಲ್ಲಿ ಹೆಚ್ಚುಹೊತ್ತು ಇರುವುದನ್ನು ತಪ್ಪಿಸಿ.
  • ಸಮತೋಲಿತ ಆಹಾರವನ್ನು ಸೇವಿಸಿ, ವಿಶೇಷವಾಗಿ ವಿಟಮಿನ್ ಬಿ 12 ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಿ.
  • ಲಘು ವ್ಯಾಯಾಮ ಮತ್ತು ಸ್ಟ್ರೆಚಿಂಗ್ ಮಾಡಿ.
  • ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ರಿಸಮಸ್ ರಜೆಗೆ ಮಗಳ ಜೊತೆ ವಿದೇಶಕ್ಕೆ ಹಾರಿದ ಐಶ್ವರ್ಯಾ-ಅಭಿಷೇಕ್ ದಂಪತಿ – Kannada News | Aishwarya Abhishek Christmas Vacation with Aaradhya: Rumors Silenced

ಬಾಲಿವುಡ್‌ನಲ್ಲಿ (Bollywood) ಬಚ್ಚನ್ ಕುಟುಂಬ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಬಚ್ಚನ್ ಕುಟುಂಬದ ಮಗ ಮತ್ತು ಸೊಸೆ ಅಭಿಷೇಕ್-ಐಶ್ವರ್ಯ ಅವರ ಸಂಬಂಧದ ಬಗ್ಗೆ ವಿವಿಧ ವದಂತಿಗಳು ಹರಡುತ್ತಿರುತ್ತವೆ. ಆದಾಗ್ಯೂ, ಕೆಲವು ದಿನಗಳ ಹಿಂದೆ, ಅಭಿಷೇಕ್ ) ಸಂದರ್ಶನವೊಂದನ್ನು ನೀಡಿ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದರು, ಅಸಮಾಧಾನ ಮತ್ತು ವಿಚ್ಛೇದನವಿದೆ ಎಂದು ಹೇಳಿದರು. ಅದರ ನಂತರ, ಅಭಿಷೇಕ್-ಐಶ್ವರ್ಯ ಮಾತ್ರವಲ್ಲದೆ ಬಿಗ್ ಬಿ ಕೂಡ ಆರಾಧ್ಯ ಅವರ ಶಾಲಾ ಕಾರ್ಯಕ್ರಮಕ್ಕೆ ಬಂದಿದ್ದರು. ಈಗ ಇವರು ಮಗಳ ಜೊತೆ ವಿದೇಶಕ್ಕೆ ಹಾರಿದ್ದಾರೆ.

ಈಗ ಅಭಿಷೇಕ್ ಮತ್ತು ಐಶ್ವರ್ಯ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಪ್ರೀತಿಯ ಮಗಳು ಆರಾಧ್ಯ ಅವರೊಂದಿಗೆ ಇದ್ದರು. ಈ ಮೂವರೂ ಕ್ರಿಸ್‌ಮಸ್ ರಜೆಗಾಗಿ ವಿದೇಶಕ್ಕೆ ಹಾರಿದ್ದಾರೆ. ಇತ್ತೀಚೆಗೆ ಈ ಮೂವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರ ವೀಡಿಯೊ ವೈರಲ್ ಆಗಿದ್ದು, ಜನರು ಅದರ ಬಗ್ಗೆ ವಿವಿಧ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅನೇಕರು ಅವರ ಕಪ್ಪು ಉಡುಪಿನ ಬಗ್ಗೆಯೂ ಪ್ರಶ್ನಿಸಿದ್ದಾರೆ, ಆದರೆ ಕೆಲವರು ಜಯಾ ಆಂಟಿ (ಜಯ ಬಚ್ಚನ್) ಎಲ್ಲಿದ್ದಾರೆ ಎಂದು ಕೇಳಿದ್ದಾರೆ. ಅಭಿಷೇಕ್-ಐಶ್ವರ್ಯ ಅವರ ವೀಡಿಯೊ ವೈರಲ್ ಆಗಿದೆ.

ಇದನ್ನೂ ಓದಿ:ಬಾಲಿವುಡ್​ಗೆ ಹೊರಟ ಮತ್ತೊಬ್ಬ ಕನ್ನಡದ ನಿರ್ದೇಶಕ

ಕಳೆದ ಎರಡು ವರ್ಷಗಳಿಂದ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಅವರ ವಿಚ್ಛೇದನದ ವದಂತಿಗಳು ಹಬ್ಬಿದ್ದವು. ದಂಪತಿಗಳು ಬೇರೆಯಾಗುತ್ತಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತಿದ್ದವು. ಆದರೆ ಕಳೆದ ವರ್ಷ ಮತ್ತು ಈ ವರ್ಷ ಐಶ್ವರ್ಯಾ ಹಾಗೂ ಅಭಿಷೇಕ್ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದೆ.

ಐಶ್ವರ್ಯಾ ರೈ ಅವರು ಇತ್ತೀಚೆಗೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಅತ್ತ ಅಭಿಷೇಕ್ ಅವರು ಒಪ್ಪಿಕೊಳ್ಳುತ್ತಿರುವ ಸಿನಿಮಾ ಯಶಸ್ಸು ಕಾಣುತ್ತಿಲ್ಲ. ‘ಕಿಂಗ್’ ಸಿನಿಮಾದಲ್ಲಿ ಅಭಿಷೇಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ – Kannada News | Bigg Boss Kannada 12: Dhanush family arrives at Bigg Boss house

ಬಿಗ್​ಬಾಸ್ ಕನ್ನಡದಲ್ಲಿ (Bigg Boss) ಈ ವಾರ ಫ್ಯಾಮಿಲಿ ವಾರವಾಗಿದೆ. ಬಿಗ್​​ಬಾಸ್ ಸ್ಪರ್ಧಿಗಳ ಮನೆ ಮಂದಿ ಒಬ್ಬೊಬ್ಬರಾಗಿ ಬಿಗ್​ಬಾಸ್ ಮನೆಗೆ ಬರುತ್ತಿದ್ದಾರೆ. ರಾಶಿಕಾ ಅವರ ತಾಯಿ, ಸಹೋದರ ಬಂದ ಬೆನ್ನಲ್ಲೆ ಇದೀಗ ಧನುಶ್ ಅವರ ಕುಟುಂಬದವರೂ ಸಹ ಬಂದಿದ್ದಾರೆ. ಆದರೆ ಧನುಶ್​​ ಅವರನ್ನು ಬಿಗ್​​ಬಾಸ್ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಧನುಶ್ ಅವರ ತಾಯಿ ಹಾಗೂ ಪತ್ನಿ ಇಬ್ಬರನ್ನೂ ಕರೆಸಿದ ಬಿಗ್​​ಬಾಸ್ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಒಳಗೆ ಕಳುಹಿಸುವುದಾಗಿ ಹೇಳಿದ್ದಾರೆ. ಈ ಆಯ್ಕೆ ಕೇಳಿ ಸ್ವತಃ ಧನುಶ್ ಕಣ್ಣೀರು ಹಾಕಿದ್ದಾರೆ. ಧನುಶ್ ಅವರಿಗೆ ಬಂದ ಪರಿಸ್ಥಿತಿ ಕಂಡು ಇಡೀ ಮನೆ ಕಣ್ಣೀರು ಹಾಕಿದೆ. ವಿಡಿಯೋ ನೋಡಿ..

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಬಾಂಗ್ಲಾದಲ್ಲಿ ಹಿಂದೂಗಳ ಹಿಂಸಾಚಾರ; ಕೆಕೆಆರ್ ತಂಡಕ್ಕೆ ಭಾರತೀಯರಿಂದ ಹಿಡಿಶಾಪ

Source link

ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ವಿವೇಕಾನಂದ ಕುಟುಂಬ ಕಂಗಾಲು – Kannada News | Hubballi Incident: Dalit Leaders Demand Justice and Payment of Hospital Bills for Maanya Family

ಹುಬ್ಬಳ್ಳಿ, ಡಿಸೆಂಬರ್​ 23: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ತಂದೆಯಿಂದಲೇ ಮಗಳ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 2 ದಿನ ಕಳೆದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕುಟುಂಬ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸಂತ್ರಸ್ತ ಕುಟುಂಬವು ಆಸ್ಪತ್ರೆ ಬಿಲ್ ಪಾವತಿಸಲು ಪರದಾಡುವಂತ್ತಾಗಿದೆ. ಡಿಸಿ ಸೇರಿದಂತೆ ಅಧಿಕಾರಿಗಳು ಕುಟುಂಬಕ್ಕೆ ನೆರವು ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪ ಕೇಳಿಬಂದಿದೆ. ಸರ್ಕಾರವೇ ಆಸ್ಪತ್ರೆ ಬಿಲ್ ಭರಿಸಬೇಕು ಎಂದು ಆಗ್ರಹಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

VBL Deal: 1,118 ಕೋಟಿ ರೂಗೆ ಸೌತ್ ಆಫ್ರಿಕಾದ ಟ್ವಿಜ್ಜಾ ಖರೀದಿಸಲಿರುವ ಭಾರತದ ವರುಣ್ ಬೆವರೇಜಸ್ – Kannada News | Varun Beverages to acquire Twizza, a beverage firm in South Africa for over 1,118 crore of enterprise value

ನವದೆಹಲಿ, ಡಿಸೆಂಬರ್ 23: ಭಾರತದ ವರುಣ್ ಬೆವರೇಜಸ್ ಲಿಮಿಟೆಡ್ ಸಂಸ್ಥೆಯು ಸೌತ್ ಆಫ್ರಿಕಾ ಮೂಲದ ಟ್ವಿಜ್ಜಾ ಎನ್ನುವ ಕಂಪನಿಯನ್ನು ಪೂರ್ಣವಾಗಿ ಖರೀದಿಸಲಿದೆ. ಈ ವಿಷಯವನ್ನು ಸ್ವತಃ ವರುಣ್ ಬೆವರೇಜಸ್ ಸಂಸ್ಥೆಯೇ ಬಹಿರಂಗಪಡಿಸಿದೆ. ಸೌತ್ ಅಫ್ರಿಕಾದಲ್ಲಿರುವ ತನ್ನ ಅಂಗಸಂಸ್ಥೆಯಾದ ಬೆವ್​ಕೋ (ದಿ ಬೆವರೇಜಸ್ ಕಂಪನಿ ಪ್ರಾಪ್ರಿಯೇಟರಿ ಲಿ) ಮೂಲಕ ಟ್ವಿಜ್ಜಾವನ್ನು ಖರೀದಿಸುತ್ತಿರುವುದಾಗಿ ಹೇಳಿದೆ. ವರದಿ ಪ್ರಕರ 1,118.7 ಕೋಟಿ ರೂ ಬೆಲೆಗೆ (ಎಂಟರ್​ಪ್ರೈಸ್ ಮೌಲ್ಯ) ಖರೀದಿಸಲು ಡೀಲ್ ನಡೆದಿದೆ ಎನ್ನಲಾಗಿದೆ.

ವರುಣ್ ಬೆವರೇಜಸ್ ಸಂಸ್ಥೆಯು ಪೆಪ್ಸಿಕೋದ ಅತಿದೊಡ್ಡ ಫ್ರಾಂಚೈಸಿ ಬಾಟ್ಲರ್ ಕಂಪನಿ ಎನಿಸಿದೆ. ಟ್ವಿಜ್ಜಾ ಕಂಪನಿಯು ಅದರದ್ದೇ ಬ್ರ್ಯಾಂಡ್​ನ ಪಾನೀಯಗಳನ್ನು ತಯಾರಿಸಿ ವಿತರಿಸುವ ಬ್ಯುಸಿನೆಸ್ ಹೊಂದಿದೆ. ಸೌತ್ ಆಫ್ರಿಕಾದ ಕೇಪ್​ಟೌನ್, ಕ್ವೀನ್ಸ್​ಟೌನ್ ಮತ್ತು ಮಿಟಲ್​ಬರ್ಗ್​ನಲ್ಲಿ ಮೂರು ಉತ್ಪಾದನಾ ಘಟಕಗಳನ್ನು ಹೊಂದಿದೆ. ಇಲ್ಲಿ ಒಟ್ಟು 100 ಮಿಲಿಯನ್ ಕೇಸ್​​ಗಳ ಉತ್ಪಾದನೆ ಒಂದು ವರ್ಷದಲ್ಲಿ ಆಗುತ್ತದೆ ಎನ್ನಲಾಗಿದೆ. ಈ ಕಂಪನಿಯು ಕಳೆದ ಹಣಕಾಸು ವರ್ಷದಲ್ಲಿ ನಡೆಸಿದ ಒಟ್ಟು ವಹಿವಾಟು ಮೌಲ್ಯ 901 ಕೋಟಿ ರೂ ಎಂದು ತಿಳಿದುಬಂದಿದೆ.

ಇದನ್ನೂ ಓದಿ: WhatsApp vs Govt: ತಿಂಗಳಿಗೆ ಕೋಟಿ ನಂಬರ್ಸ್ ನಿಷೇಧಿಸಿದರೂ ಸರ್ಕಾರಕ್ಕೆ ಗುಟ್ಟು ಬಿಟ್ಟುಕೊಡದ ವಾಟ್ಸಾಪ್

2026ರ ಜೂನ್ 30ರೊಳಗೆ ಈ ಖರೀದಿ ಪೂರ್ಣಗೊಳ್ಳಬಹುದು ಎಂದು ವರುಣ್ ಬೆವರೇಜಸ್ ಸಂಸ್ಥೆಯು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಿದೆ. ಟ್ವಿಜ್ಜಾವನ್ನು ಖರೀದಿಸಲು ಬಳಸಿದ ದಿ ಬೆವರೇಜ್ ಕಂಪನಿಯು ವರುಣ್ ಬೆವರೇಜಸ್​ನ ಪಾಲಾಗಿದ್ದು 2024ರಲ್ಲಿ. ಆ ಡೀಲ್​ನಿಂದಾಗಿ ವಿಬಿಎಲ್ ಅಥವಾ ವರುಣ್ ಬೆವರೇಜಸ್ ಲಿಮಿಟೆಡ್ ಕಂಪನಿಯು ಸೌತ್ ಆಫ್ರಿಕಾ, ಲೆಸೋತೋ, ಇಸ್ವಾಟಿನಿ ಮೊದಲಾದೆಡೆ ತನ್ನ ಉಪಸ್ಥಿತಿ ಹೆಚ್ಚಿಸಿಕೊಳ್ಳಲು ಸಹಾಯವಾಗಿದೆ. ನಮೀಬಿಯಾ, ಬೋಟ್ಸ್​ವಾನ, ಮೊಜಾಂಬಿಕ್ ಮತ್ತು ಮಡಗಾಸ್ಕರ್​ನಲ್ಲೂ ಇದಕ್ಕೆ ಉಪಸ್ಥಿತಿ ಹೆಚ್ಚಿದಂತಾಗಿದೆ.

ಪೆಪ್ಸಿಕೋ ವಿತರಣೆಯ ಬ್ಯುಸಿನೆಸ್ ಅನ್ನು ಆಫ್ರಿಕಾದ ಹೆಚ್ಚಿನ ದೇಶಗಳಲ್ಲಿ ನೆಲೆಗೊಳಿಸಲು ವಿಬಿಎಲ್ ಯಶಸ್ವಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link