Category Archives: Blog

Your blog category

ಗ್ರೇಟರ್ ಬೆಂಗಳೂರು ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು – Kannada News | Greater Bengaluru Authority Employees Calls For Strike Against GBA Special Commissioner Munish Moudgil Alleging Harassment

ಬೆಂಗಳೂರು, (ಡಿಸೆಂಬರ್ 23): ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ (Munish Moudgil)​ ವಿರುದ್ಧ ನೌಕರರು ಹಾಗೂ ಅಧಿಕಾರಿಗಳ ಪಿತ್ತ ನೆತ್ತಿಗೇರಿದ್ದು, ಕಿರುಕುಳ ಹಾಗೂ ದುರುದ್ದೇಶಪೂರ್ವಕವಾಗಿ ಅಧಿಕಾರಿಗಳನ್ನು ಅಮಾನತು ಮಾಡುವ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ ಎಂದು GBA ನೌಕರರು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. GBA ದಕ್ಷಿಣ ವಲಯ ಉಪ ಆಯುಕ್ತ ಡಿ.ಕೆ.ಬಾಬು ಮತ್ತು ಕಂದಾಯ ಅಧಿಕಾರಿ ಶ್ರೀಮತಿ ವರಲಕ್ಷ್ಮಿ ರವರನ್ನು ಕಾನೂನು ಬಾಹಿರವಾಗಿ ಅಮಾನತ್ತು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನ ಖಂಡಿಸಿ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತುರ್ತು ಸಭೆ ಮತ್ತು ಮೇಣದ ದೀಪ ಹಚ್ಚುವ ಮೂಲಕ ಮೌನ ಪ್ರತಿಭಟನೆ ನಡೆಸಲಾಯಿತು. ಒಂದು ವೇಳೆ ನಮ್ಮ ಆಗ್ರಹಕ್ಕೆ GBA ಮಣಿಯದೇ ಇದ್ದರೆ ಹೋರಾಟ ತೀವ್ರಗೊಳಿಸಲು ಸಂಘ ನಿರ್ಧರಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಳ್ಳಂ ಬೆಳಿಗ್ಗೆ ಬಿರಿಯಾನಿ ತಿನ್ನಲು ಹೋದವರಿಗೆ ಭರ್ಜರಿ ಶಾಕ್​​: ಕಾಲೇಜು ವಿದ್ಯಾರ್ಥಿಗಳ ಅಡ್ಡಗಟ್ಟಿ ದರೋಡೆ – Kannada News | Gang Robs Students Returning After Eating Hoskote Biryani

ಬೆಂಗಳೂರು, ಡಿಸೆಂಬರ್​​ 23: ಹೊಸಕೋಟೆ ಬಿರಿಯಾನಿ ತಿನ್ನಲು ತೆರಳಿದ್ದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳನ್ನ ದರೋಡೆ ಮಾಡಿದ್ದಲ್ಲದೆ, ಒತ್ತೆಯಾಳಾಗಿ ಇಟ್ಟುಕೊಂಡು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿದ್ಯಾರ್ಥಿಗಳ ಸ್ನೇಹಿತರಿಂದಲೂ ಹಣ ಪೀಕಿದ ದುಷ್ಕರ್ಮಿಗಳು

ಬಾಗಲೂರು ವ್ಯಾಪ್ತಿಯ ಪ್ರತಿಷ್ಟಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿಗಳು ಎರಡು ಪ್ರತ್ಯೇಕ ಬೈಕ್‌ಗಳಲ್ಲಿ ಭಾನುವಾರ ಮುಂಜಾನೆ ಹೊಸಕೋಟೆ ಬಿರಿಯಾನಿ ತಿನ್ನಲು ತೆರಳಿದ್ದರು. ಬಿರಿಯಾನಿ ತಿಂದು ವಾಪಾಸ್‌ ಬರುವಾಗ ಆರು ಗಂಟೆ ಸುಮಾರಿಗೆ ಮೇಡಹಳ್ಳಿ ಬಳಿ ಆರೇಳು ಮಂಂದಿ ದುಷ್ಕರ್ಮಿಗಳು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ್ದಾರೆ. ಬಳಿಕ ವಿದ್ಯಾರ್ಥಿಗಳ ಎರಡು ಬೈಕ್‌ಗಳನ್ನು ಕಸಿದುಕೊಂಡು, ಮೊಬೈಲ್‌ಗಳನ್ನು ಕಿತ್ತಿಟ್ಟುಕೊಂಡು ಸುಲಿಗೆ ಮಾಡಿದ್ದಾರೆ. ವಿದ್ಯಾರ್ಥಿಗಳ ಮೊಬೈಲ್‌ನಲ್ಲಿದ್ದ 1,800 ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ಯುಪಿಐ ಮುಖಾಂತರ ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೆ, ವಿದ್ಯಾರ್ಥಿಗಳನ್ನು ಸುಮಾರು 1 ಗಂಟೆ ಕಾಲ ಒತ್ತೆಯಾಳಗಿಸಿ ಇಟ್ಟುಕೊಂಡಿದ್ದಾರೆ. ಅವರ ಸ್ನೇಹಿತರಿಗೂ ಕರೆ ಮಾಡಿಸಿ ಹಣ ಪೀಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರೇಯಸಿ ಮದ್ವೆ ಮಂಟಪಕ್ಕೆ ಬರುವಷ್ಟರಲ್ಲೇ ಬೇರೊಂದು ಯುವತಿಗೆ ತಾಳಿಕಟ್ಟಿದ್ದ ಪ್ರಿಯಕರ ಅರೆಸ್ಟ್

ಘಟನೆ ಬೆನ್ನಲ್ಲೇ ಎಚ್ಚೆತ್ತ ವಿದ್ಯಾರ್ಥಿಗಳ ಸ್ನೇಹಿತರು ಬಾಗಲೂರು ಪೊಲೀಸ್‌ ಠಾಣೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಖಾಕಿ ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಬರ್ತಿದಂತೆ ವಿದ್ಯಾರ್ಥಿಗಳನ್ನು ಬಿಟ್ಟು ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಕೆ.ಜಿ. ಹಳ್ಳಿಯ ಅರ್ಫಾತ್‌ ಅಹಮದ್‌ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಗಳು ನೀಡಿದ ದೂರಿನ ಅನ್ವಯ ಆವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕ್ರಿಸ್ಮಸ್‌, ನ್ಯೂ ಇಯರ್‌ಗೆ ಟ್ರಿಪ್‌ ಹೋಗೋ ಪ್ಲಾನ್‌ ಇದ್ಯಾ? ಹಾಗಿದ್ರೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ – Kannada News | If you are planning a trip during Christmas and New Year do not visit these places

ಕ್ರಿಸ್ಮಸ್‌ (Christmas), ನ್ಯೂ ಇಯರ್‌ ಹಾಲಿಡೇ ಸಂದರ್ಭದಲ್ಲಿ ಹೆಚ್ಚಿನವರು ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಎಲ್ಲಾದ್ರೂ ಟ್ರಿಪ್‌ ಹೋಗ್ತಾರೆ.  ಹೌದು ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಂಡು ಕ್ರಿಸ್ಮಸ್‌ ಸಂಭ್ರಮವನ್ನು ಸವಿಯಲು, ನ್ಯೂ ಇಯರ್‌ ಪಾರ್ಟಿ ಎಂಜಾಯ್‌ ಮಾಡಲು ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಟ್ರಿಪ್‌ ಹೋಗ್ತಾರೆ. ಇದೇ ರೀತಿ ನೀವು ಕೂಡ ಈ ಬಾರಿ ಟ್ರಿಪ್‌ ಪ್ಲಾನ್‌ ಮಾಡಿದ್ದೀರಾ? ಹಾಗಿದ್ರೆ ನಿಮ್ಮ ಈ ಪ್ರವಾಸವನ್ನು ಸ್ಮರಣೀಯವಾಗಿರಿಸಲು, ಜನಸಂದಣಿ, ಟ್ರಾಫಿಕ್‌ ಜಾಮ್‌ ಇತ್ಯಾದಿ ಕಿರಿಕಿರಿಯನ್ನು ಹಾಗೂ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸಲು ಬಯಸಿದರೆ ಈ ಕೆಲವು ಸ್ಥಳಗಳಿಗೆ ಈ ಸಮಯದಲ್ಲಿ ಭೇಟಿ ನೀಡಲೇಬೇಡಿ. ಆ ಟೂರಿಸ್ಟ್‌ ಪ್ಲೇಸ್‌ ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕ್ರಿಸ್‌ಮಸ್ ಮತ್ತು ಹೊಸ ವರ್ಷದಂದು ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ:

ಶಿಮ್ಲಾ ಮತ್ತು ಮನಾಲಿ: ಹೆಚ್ಚಿನ ಜನರು ಹೊಸ ವರ್ಷವನ್ನು ಆಚರಿಸಲು ಶಿಮ್ಲಾ ಮತ್ತು ಮನಾಲಿಗೆ ಹೋಗುತ್ತಾರೆ, ಆದರೆ ಈ ಸಮಯದಲ್ಲಿ ಈ ಗಿರಿಧಾಮಗಳಿಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಈ ಸಮಯದಲ್ಲಿ ಹಿಮರಾಶಿಯ ಸೌಂದರ್ಯವನ್ನು ಸವಿಯಲು ಸಾಕಷ್ಟು ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡ್ತಾರೆ. ಪ್ರವಾಸಿಗರು ಹೆಚ್ಚಾದಂತೆ ಟ್ರಾಫಿಕ್‌ ಜಾಮ್‌, ಜನಸಂದಣಿ ಸಹ ಹೆಚ್ಚಾಗುತ್ತದೆ.  ಇದಲ್ಲದೆ, ಹೋಟೆಲ್‌ಗಳು ಹೆಚ್ಚಾಗಿ ಸಂಪೂರ್ಣವಾಗಿ ಬುಕ್ ಆಗಿರುತ್ತವೆ. ಜೊತೆಗೆ ಹೋಟೆಲ್‌ ಬೆಲೆಗಳೂ ಬೆಲೆ ದುಬಾರಿಯಾಗಿರುತ್ತದೆ.

ನೈನಿತಾಲ್ ಮತ್ತು ಮಸ್ಸೂರಿ: ಉತ್ತರಖಂಡದ ಫೇಮಸ್‌ ಪ್ರವಾಸಿ ತಾಣಗಳೆಂದರೆ ಅದು ನೈನಿತಾಲ್‌ ಮತ್ತು ಮಸ್ಸೂರಿ. ಕ್ರಿಸ್‌ಮಸ್‌ ರಜೆಯನ್ನು ಆನಂದಿಸಲು ಪ್ರವಾಸಿಗಳು ಈ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ನೀವು ಸಹ  ಹೊಸ ವರ್ಷವನ್ನು ಆಚರಿಸಲು ನೈನಿತಾಲ್ ಅಥವಾ ಮಸ್ಸೂರಿಗೆ ಪ್ರವಾಸವನ್ನು ಯೋಜಿಸುತ್ತಿದ್ದರೆ, ಅದನ್ನು ರದ್ದುಗೊಳಿಸಿ. ಈ ಗಿರಿಧಾಮಗಳು ತುಂಬಾ ಚಿಕ್ಕದಾಗಿದ್ದು, ಜನಸಂದಣಿಯ ಕಾರಣದಿಂದ ಕಿರಿಕಿರಿ ಉಂಟಾಗಬಹುದು. ಇದು ನಿಮ್ಮ ಪ್ರವಾಸದ ಖುಷಿಯನ್ನೇ ಹಾಳುಮಾಡಬಹುದು.

ಇದನ್ನೂ ಓದಿ: ಕ್ರಿಸ್ಮಸ್‌ ಹಬ್ಬಕ್ಕೆ ಮನೆಯಲ್ಲೇ ಬಲು ಸುಲಭವಾಗಿ ತಯಾರಿಸಿ ಆರೋಗ್ಯಕರ ಡ್ರೈಫ್ರೂಟ್‌ ಕೇಕ್‌

ಜೈಪುರ ಮತ್ತು ಉದಯಪುರ: ನೀವು ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ರಾಜಸ್ಥಾನದ ಜೈಪುರ ಮತ್ತು ಉದಯಪುರಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಈ ಪ್ಲಾನ್‌ ಕ್ಯಾನ್ಸಲ್‌ ಮಾಡಿ. ಏಕೆಂದರೆ ಈ ಸಮಯದಲ್ಲಿ ಇಲ್ಲಿನ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಬೆಲೆಗಳು ದುಬಾರಿಯಾಗಿರುತ್ತವೆ. ಇದರಿಂದ ನಿಮ್ಮ ಜೇಬಿಗೆ ಕತ್ತರಿ ಬೀಳಬಹುದು.

ಗೋವಾ:  ಕ್ರಿಸ್ಮಸ್‌ ಮತ್ತು ಹೊಸ ವರ್ಷವನ್ನು ಸಂಭ್ರಮಿಸಲು ಹೆಚ್ಚಿನ ಜನರು ಗೋವಾ ಟ್ರಿಪ್‌ ಪ್ಲಾನ್‌ ಮಾಡ್ತಾರೆ. ಆದ್ರೆ ಈ ಪೀಕ್‌ ಸಮಯದಲ್ಲಿ ಈ ಸ್ಥಳಕ್ಕೆ ಹೋಗುವುದನ್ನು ಆದಷ್ಟು ತಪ್ಪಿಸಿ. ಏಕೆಂದರೆ ಈ ಟೈಮ್‌ನಲ್ಲಿ ಗೋವಾದಲ್ಲಿ ಹೋಟೆಲ್ ಮತ್ತು ಟ್ಯಾಕ್ಸಿ ದರಗಳು ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತವೆ. ಜನಸಂದಣಿಯೂ ಸಾಕಷ್ಟು ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ministry of Finance Jobs: ಭಾರತ ಸರ್ಕಾರದ ಹಣಕಾಸು ಸಚಿವಾಲಯದಲ್ಲಿ ಉದ್ಯೋಗವಕಾಶ; 18 ಲಕ್ಷ ರೂ. ವಾರ್ಷಿಕ ವೇತನ – Kannada News | Ministry of Finance Jobs: DEA Recruits Young Professionals and Consultants

ಭಾರತ ಸರ್ಕಾರದ ಹಣಕಾಸು ಸಚಿವಾಲಯದೊಂದಿಗೆ ಕೆಲಸ ಮಾಡಲು ನೀವು ಬಯಸಿದರೆ, ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ (DEA) ಯುವ ವೃತ್ತಿಪರರು ಮತ್ತು ಸಲಹೆಗಾರರನ್ನು ಹುಡುಕುತ್ತಿದೆ. ಹಣಕಾಸು ಸಚಿವಾಲಯವು ಈ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. DEA ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ 1.5 ಲಕ್ಷ ರೂ. ವೇತನವನ್ನು ಪಡೆಯುತ್ತಾರೆ. ಅಂದರೆ ಹಣಕಾಸು ಸಚಿವಾಲಯದಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 18 ಲಕ್ಷ ರೂ. ವೇತನ ಪ್ಯಾಕೇಜ್ ಸಿಗಲಿದೆ.

57 ಹುದ್ದೆಗಳಿಗೆ ನೇಮಕಾತಿ:

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ (DEA) ಒಟ್ಟು 57 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮೂಲಸೌಕರ್ಯ, ಹಣಕಾಸು ಮಾರುಕಟ್ಟೆಗಳು, ಬಜೆಟ್ ಮತ್ತು ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳು ಸೇರಿದಂತೆ ವಿವಿಧ ವಿಭಾಗಗಳಿಗೆ DEA ಅರ್ಜಿಗಳನ್ನು ಆಹ್ವಾನಿಸಿದೆ. ಎಲ್ಲಾ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಲಾಗುವುದು, ಆರಂಭಿಕ ನೇಮಕಾತಿಗಳು ಒಂದು ವರ್ಷದವರೆಗೆ, ಐದು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. ವಾಸ್ತವವಾಗಿ, DEA ನಲ್ಲಿ ಒಟ್ಟು ಅಧಿಕಾರಾವಧಿಯು ಐದು ವರ್ಷಗಳನ್ನು ಮೀರಬಾರದು.

4 ವಿಭಾಗಗಳಲ್ಲಿ ನೇಮಕಾತಿ, ಯಾರು ಅರ್ಜಿ ಸಲ್ಲಿಸಬಹುದು?

ಯುವ ವೃತ್ತಿಪರರು:

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ (DEA) ಯುವ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. 30 ವರ್ಷಕ್ಕಿಂತ ಮೇಲ್ಪಟ್ಟ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರು. ಆದಾಗ್ಯೂ, ಅಭ್ಯರ್ಥಿಗಳು ಅರ್ಥಶಾಸ್ತ್ರ, ಹಣಕಾಸು ಅಥವಾ ಐಟಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ MBA (ಹಣಕಾಸು)/LLM ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 70,000 ರೂ. ವೇತನ ದೊರೆಯುತ್ತದೆ.

ಸಲಹೆಗಾರರು:

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ (DEA) ಸಲಹೆಗಾರರನ್ನು ಹುಡುಕುತ್ತಿದೆ. 3 ರಿಂದ 5 ವರ್ಷಗಳ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 100,000 ರೂ. ವೇತನ ದೊರೆಯುತ್ತದೆ.

ಹಿರಿಯ ಸಲಹೆಗಾರರು:

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ (DEA), ಹಿರಿಯ ಸಲಹೆಗಾರರ ​​ಹುದ್ದೆಗೆ 5 ರಿಂದ 9 ವರ್ಷಗಳ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅನುಭವಕ್ಕೆ ಅರ್ಥಶಾಸ್ತ್ರ, ಹಣಕಾಸು ಅಥವಾ IT ಯಲ್ಲಿ ಸ್ನಾತಕೋತ್ತರ ಪದವಿ ಅಥವಾ MBA (ಹಣಕಾಸು)/LLM ಅಗತ್ಯವಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 120,000 ರೂ. ವೇತನ ದೊರೆಯುತ್ತದೆ.

ವಿಶೇಷ ನಿಯೋಜನೆ ಸಲಹೆಗಾರರು:

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ (DEA) ನಿರ್ದಿಷ್ಟ ಯೋಜನೆಗಳಿಗೆ ವಿಶೇಷ ನಿಯೋಜನೆ ಸಲಹೆಗಾರರಿಗೆ ಹುದ್ದೆಗಳನ್ನು ಕಾಯ್ದಿರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 150,000 ರೂ. ವೇತನವನ್ನು ಪಡೆಯುತ್ತಾರೆ.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಕ್ರೆಡಿಟ್ ಆಫೀಸರ್ ಹುದ್ದೆಗೆ ನೇಮಕಾತಿ

ಆಯ್ಕೆ ಹೇಗೆ ನಡೆಯುತ್ತದೆ?

ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ (DEA) ನೇಮಕಾತಿಗಾಗಿ ಅರ್ಜಿಗಳು ಡಿಸೆಂಬರ್ 27 ರಂದು ಸಂಜೆ 5 ಗಂಟೆಯವರೆಗೆ ತೆರೆದಿರುತ್ತವೆ. ಅಧಿಕೃತ ಪೋರ್ಟಲ್ mofapp.nic.in/cadre/ ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯ ಕುರಿತು ಹೇಳುವುದಾದರೆ, ಸಂಬಂಧಪಟ್ಟ ವಿಭಾಗಗಳು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿದ ನಂತರ, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂವಾದ ಅಥವಾ ಸಂದರ್ಶನಕ್ಕೆ ಕರೆಯಲಾಗುವುದು. ವಿವರವಾದ ಮಾರ್ಗಸೂಚಿಗಳು ಮತ್ತು ನಿಯಮಗಳಿಗಾಗಿ, ಅಧಿಕೃತ DEA ವೆಬ್‌ಸೈಟ್ (dea.gov.in/offerings-vacancies) ಗೆ ಭೇಟಿ ನೀಡಬಹುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಯಸಿ ಮದ್ವೆ ಮಂಟಪಕ್ಕೆ ಬರುವಷ್ಟರಲ್ಲೇ ಬೇರೊಂದು ಯುವತಿಗೆ ತಾಳಿಕಟ್ಟಿದ್ದ ಪ್ರಿಯಕರ ಅರೆಸ್ಟ್ – Kannada News | Man Arrested For Cheating His Girlfriend And Marrying Other Woman In Chikkamagaluru

ಚಿಕ್ಕಮಗಳೂರು, (ಡಿಸೆಂಬರ್ 23): ಪ್ರೇಯಸಿಗೆ ವಂಚಿಸಿ ಬೇರೆ ಯುವತಿ ಜತೆ ಮದುವೆಯಾಗಿದ್ದ ಶರತ್​ ಎನ್ನುವಾತನ್ನು ಪೊಲೀಸರು ಬಂಧಿಸಿದ್ದು, ಸದ್ಯ ಕೋರ್ಟ್​ ನವವಿವಾಹಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಚಿಕ್ಕಮಗಳೂರಿನ (Chikkamagaluru) ಶರತ್ ಎನ್ನುವಾತ ಯುವತಿಯನ್ನು ಪ್ರೀತಿಸಿದ್ದ. ಅಲ್ಲದೇ ಮದುವೆಯಾಗುವುದಾಗಿ ಆಕೆಯನ್ನು ಲೈಂಗಿಕವಾಗಿ ಸಹ ಬಳಿಸಿಕೊಂಡಿದ್ದ. ಆದ್ರೆ, ಏಕಾಏಕಿ ಶರತ್ ಇದೇ ಡಿಸೆಂಬರ್ 14ರಂದು ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣಮಂಟಪದಲ್ಲಿ ಬೇರೊಂದು ಯುವತಿ ಜತೆ ಮದುವೆಯಾಗಿದ್ದ. ಪ್ರಿಯಕರನ ಮದುವೆ ವಿಚಾರ ತಿಳಿಯುತ್ತಿದ್ದಂತೆಯೇ ಪ್ರೇಯಸಿ ಮದುವೆ ಮಂಟಪಕ್ಕೆ ಬಂದು ವಿರೋಧ ವ್ಯಕ್ತಪಡಿಸಿದ್ದಳು. ಆದ್ರೆ, ಯುವತಿ ವಿರೋಧದ ನಡುವೆಯೂ ಶರತ್, ಮನೆಯವರು ನೋಡಿದ್ದ ಯುವತಿ ಕುತ್ತಿಗೆಗೆ ತಾಳಿ ಕಟ್ಟಿಬಿಟ್ಟಿದ್ದ.

ಇದರಿಂದ ಕಂಗಾಲಾದ ಯುವತಿ, ಪ್ರಿಯಕರ ಶರತ್ ಸೇರಿದಂತೆ 7 ಜನರ ವಿರುದ್ಧ ಹಲ್ಲೆ ಆರೋಪ ದೂರು ದಾಖಲಿಸಿದ್ದಳು. ಈ ದೂರಿನ ಮೇರೆಗೆ ಚಿಕ್ಕಮಗಳೂರಿನ ಡಿಸಿಆರ್​ಇ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ನಿನ್ನೆ (ಡಿಸೆಂಬರ್ 22) ರಾತ್ರಿ ನವವಿವಾಹಿತ ಶರತ್​​ನನ್ನು ಬಂಧಿಸಿ ಕೋರ್ಟ್​​ಗೆ ಹಾಜರುಪಡಿಸಿದ್ದು,ಇದೀಗ ಕೋರ್ಟ್ ಶರತ್​​ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರೇಯಿಸಿ ಜೊತೆ ಸುತ್ತಾಡಿ ತೀಟೆ ತೀರಿಸಿಕೊಂಡು ಮೋಸ ಮಾಡಿದ್ದ ಶರತ್ ಇದೀಗ ಜೈಲು ಪಾಲಾಗಿದ್ದಾನೆ.

ಇದನ್ನೂ ನೋಡಿ: ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

Source link

ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ: ಬೆಂಗಳೂರು ಬಳಿಕ ಮಂಗಳೂರು ಜೈಲು ಪರಿಶೀಲನೆ – Kannada News | DGP Alok Kumar’s First Inspection In Mangaluru Central Jail Bengaluru

ಮಂಗಳೂರು, ಡಿಸೆಂಬರ್ 23: ಇತ್ತೀಚೆಗೆ ಪರಪ್ಪನ ಅಗ್ರಹಾರ, ಕಾರವಾರ ಜೈಲು ಸೇರಿದಂತೆ ಬಳ್ಳಾರಿಯಲ್ಲಿಯೂ ಹಲವು ಅಕ್ರಮಗಳು ನಡೆದಿದದ್ದವು. ಕೈದಿಗಳ ಬಳಿ ಮೊಬೈಲ್ ಫೋನ್​ಗಳು ಸಿಕ್ಕಿದ್ದಲ್ಲದೆ, ಜಗಳ, ರಂಪಾಟಗಳೂ ನಡೆದಿದದ್ದವು. ಈ ಎಲ್ಲದರ ನಡುವೆ ಕಾರಾಗೃಹದ ಭದ್ರತೆ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಕಾರಾಗೃಹ ಡಿಜಿಪಿಯಾದ ಬಳಿಕ ಅಲೋಕ್ ಕುಮಾರ್ ಅವರಿಗೆ ಮಂಗಳೂರು ಜೈಲಿಗೆ ಇದು ಮೊದಲ ಭೇಟಿಯಾಗಿದೆ. ಮಂಗಳೂರು ನಗರದ ಪಿವಿಎಸ್ ಪ್ರದೇಶದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಆಗಮಿಸಿದ ಡಿಜಿಪಿ ಗೌರವ ವಂದನೆ ಸ್ವೀಕರಿಸಿದ ನಂತರ ಜೈಲಿನೊಳಗೆ ತೆರಳಿ ಪರಿಶೀಲನೆ ನಡೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

WhatsApp vs Govt: ತಿಂಗಳಿಗೆ ಕೋಟಿ ನಂಬರ್ಸ್ ನಿಷೇಧಿಸಿದರೂ ಸರ್ಕಾರಕ್ಕೆ ಗುಟ್ಟು ಬಿಟ್ಟುಕೊಡದ ವಾಟ್ಸಾಪ್ – Kannada News | WhatsApp ban 1 crore numbers in a month, but refusing to share details bothers government

ನವದೆಹಲಿ, ಡಿಸೆಂಬರ್ 23: ವಿಶ್ವದ ನಂಬರ್ ಒನ್ ಮೆಸೇಜಿಂಗ್ ಆ್ಯಪ್ ಎನಿಸಿರುವ ವಾಟ್ಸಾಪ್ (WhatsApp) ಭಾರತದಲ್ಲಿ ಈ ವರ್ಷ ಪ್ರತೀ ತಿಂಗಳು ಹತ್ತಿರಹತ್ತಿರ ಒಂದು ಕೋಟಿ ನಂಬರ್​ಗಳನ್ನು ಬ್ಲಾಕ್ ಮಾಡಿದೆ ಅಥವಾ ನಿಷೇಧಿಸಿದೆ. ಇಷ್ಟು ಪ್ರಮಾಣದಲ್ಲಿ ನಂಬರ್​ಗಳನ್ನು ನಿಷೇಧಿಸುತ್ತಿದ್ದೀರಲ್ಲ, ಯಾಕಾಗಿ ಬ್ಯಾನ್ ಮಾಡುತ್ತಿದ್ದೀರಿ ಎಂದು ಹೇಳಿದರೆ ಕಾನೂನು ಸುವ್ಯವಸ್ಥೆಗೂ ಸಹಾಯವಾಗುತ್ತದೆ ಎಂದು ಸರ್ಕಾರ ಬಾರಿ ಬಾರಿ ವಿನಂತಿಸುತ್ತಿದೆ. ಆದರೂ ಕೂಡ ವಾಟ್ಸಾಪ್ ತನ್ನ ಡಾಟಾ ಗುಟ್ಟು ಬಿಟ್ಟುಕೊಡುತ್ತಿಲ್ಲ. ಇದು ಸರ್ಕಾರಕ್ಕೆ ಇರಿಸು ಮುರುಸು ತರುತ್ತಿದೆ.

ದೇಶದಲ್ಲಿ ಜರುಗುತ್ತಿರುವ ಬಹಳಷ್ಟು ಸೈಬರ್ ಕ್ರೈಮ್​ಗಳಲ್ಲಿ ಕ್ರಿಮಿನಲ್​ಗಳು ವಾಟ್ಸಾಪ್ ಅನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಎಂಡ್ ಟು ಎಂಡ್ ಎನ್​ಕ್ರಿಪ್ಟ್ (End to End encryption) ಆಗಿರುವುದರಿಂದ ಕಳ್ಳಕಾಕರ ರಹಸ್ಯ ಆಟಕ್ಕೂ ಅನುಕೂಲವಾಗಿದೆ. ಹೊಸ ಸಿಮ್ ಪಡೆದು ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್​ನಂತಹ ಮೆಸೇಜಿಂಗ್ ಆ್ಯಪ್​ಗಳಲ್ಲಿ ನೀವು ಅಕೌಂಟ್ ತೆರೆದರೆ ಸಾಕು. ಸಿಮ್ ಇಲ್ಲದಿದ್ದರೂ ಈ ಆ್ಯಪ್​ಗಳು ಕೆಲಸ ಮಾಡುತ್ತವೆ. ಸಿಮ್ ಇಲ್ಲದೆಯೂ ಮೆಸೇಜ್ ಸ್ವೀಕರಿಸಬಹುದು. ಹೀಗಾಗಿ, ಈ ಒಟಿಟಿ ಆ್ಯಪ್​ಗಳನ್ನು ಕ್ರಿಮಿನಲ್​ಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿದೆ.

ಇದನ್ನೂ ಓದಿ: ಒಂದು ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು? ಕಾರ್ಪೊರೇಟ್ ಲೋಕಕ್ಕೆ ಮಾದರಿಯಾದ ಡಿಆರ್​ಡಿಒ

ವಾಟ್ಸಾಪ್​ನಿಂದ ಸರ್ಕಾರ ವೈಯಕ್ತಿಕ ಮಾಹಿತಿ ಕೇಳುತ್ತಿಲ್ಲ…

ವಾಟ್ಸಾಪ್ ಒಂದು ತಿಂಗಳಲ್ಲಿ ನೂರಲ್ಲ, ಸಾವಿರ ಅಲ್ಲ, ಲಕ್ಷವೂ ಅಲ್ಲ, ಬರೋಬ್ಬರಿ ಒಂದು ಕೋಟಿಯಷ್ಟು ನಂಬರ್​ಗಳನ್ನು ಬ್ಯಾನ್ ಮಾಡುತ್ತಿದೆ. ಇದು ಸಾಧಾರಣ ಸಂಖ್ಯೆಯಲ್ಲ. ತನ್ನ ತಿಂಗಳ ವರದಿಯಲ್ಲಿ ವಾಟ್ಸಾಪ್ ಕೇವಲ ಸಂಖ್ಯೆಯನ್ನು ಮಾತ್ರ ಪ್ರಕಟಿಸುತ್ತದೆ. ಯಾಕಾಗಿ ನಿಷೇಧಿಸಲಾಗಿದೆ ಎನ್ನುವುದನ್ನು ತಿಳಿಸುವುದಿಲ್ಲ.

ಸರ್ಕಾರ ಕೇಳಿಕೊಳ್ಳುತ್ತಿರುವುದು ಇಷ್ಟೇ, ನೀವು ಯಾಕಾಗಿ ಅಷ್ಟು ನಂಬರ್​ಗಳನ್ನು ನಿಷೇಧಿಸುತ್ತಿದ್ದೀರಿ ಎಂದು. ಸ್ಕ್ಯಾಮ್ ಮಾಡಿದ ಕಾರಣಕ್ಕೆ ನಿಷೇಧಿಸಿದ್ದರೆ, ಅಂಥ ಮೊಬೈಲ್ ನಂಬರ್​ಗಳನ್ನು ತಮಗೆ ಕೊಟ್ಟರೆ, ಕ್ರಿಮಿನಲ್​ಗಳ ಮುಂದಿನ ಆಟಗಳನ್ನು ತಡೆಯಲು ಸಾಧ್ಯ ಎಂಬುದು ಸರ್ಕಾರದ ಮನವಿ. ತಮಗೆ ನಿಷೇಧಿತವಾದ ಆ ನಂಬರ್​ ಕೊಟ್ಟರೆ ಸಾಕು, ಅವರ ಹೆಸರು ಇತ್ಯಾದಿ ಯಾವುದೂ ಬೇಡ. ಮುಂದಿನದು ತಾವು ನೋಡಿಕೊಳ್ಳುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ವಾಟ್ಸಾಪ್ ಮಾತ್ರ ತನ್ನ ಡಾಟಾ ಸೆಕ್ಯೂರಿಟಿ ನೀತಿಯ ಕಾರಣವೊಡ್ಡಿ ಈ ಮಾಹಿತಿ ಬಹಿರಂಗಪಡಿಸದಿರಲು ನಿರ್ಧರಿಸಿದೆ.

ವಾಟ್ಸಾಪ್​ನ ಈ ನೀತಿಯಲ್ಲೂ ಒಂದು ಅರ್ಥ ಇದೆ. ಬೇರೆ ಬೇರೆ ದೇಶಗಳಲ್ಲಿ ವೈಯಕ್ತಿಕ ಡಾಟಾ ಸೆಕ್ಯೂರಿಟಿ ಬಗ್ಗೆ ಕಠಿಣ ನಿಯಮಾವಳಿಗಳಿವೆ. ವೈಯಕ್ತಿಕ ಡಾಟಾವನ್ನು ಹಂಚಿಕೊಂಡಿದ್ದು ಗೊತ್ತಾದರೆ ಒಂದು ದೇಶದಲ್ಲಿ ವಾಟ್ಸಾಪ್ ಮೇಲೆ ಕಾನೂನು ಮೊಕದ್ದಮೆ ಹಾಕಲಾಗಬಹುದು.

ಇದನ್ನೂ ಓದಿ: ನ್ಯೂಜಿಲೆಂಡ್ ಜೊತೆಗೂ ಟ್ರೇಡ್ ಡೀಲ್ ಮುಗಿಸಿದ ಭಾರತ; ಈ ವರ್ಷದಲ್ಲೇ ಭಾರತಕ್ಕಿದು 3ನೇ ಎಫ್​ಟಿಎ

ಸರ್ಕಾರ ಈ ಮೊಬೈಲ್ ನಂಬರ್ ಸಿಕ್ಕರೆ ಏನು ಮಾಡುತ್ತೆ?

ಸ್ಕ್ಯಾಮರ್ ಶಂಕೆಯಲ್ಲಿ ನಿಷೇಧಿತವಾದ ನಂಬರ್ ಸಿಕ್ಕರೆ ಸರ್ಕಾರವು ಆ ನಂಬರ್​ನ ಸಿಮ್ ಅನ್ನು ಎಲ್ಲಿ ಖರೀದಿಸಲಾಗಿತ್ತು, ಯಾವ ದಾಖಲೆಗಳನ್ನು ನೀಡಿ ಪಡೆಯಲಾಗಿತ್ತು, ಆ ದಾಖಲೆಗಳು ನಕಲಿಯಾ ಅಸಲಿಯಾ ಎಂಬಿತ್ಯಾದಿ ಮಾಹಿತಿಯನ್ನು ಹೆಕ್ಕಿ ತೆಗೆಯಲು ಸಾಧ್ಯವಾಗಬಹುದು. ದಾಖಲೆಗಳು ನಕಲಿ ಎಂದಾದರೆ ಆ ನಂಬರ್ ಅನ್ನು ಅಪರಾಧ ಎಸಗಲೆಂದೇ ಪಡೆದಿರುವುದು ಬಹುತೇಕ ಖಚಿತ ಎಂಬಂತಾಗುತ್ತದೆ. ಸರ್ಕಾರ ಕೂಡ ಅಂಥ ನಂಬರ್​ಗಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ದಂಪತಿ ರೈಲಿನಿಂದ ಹಾರುವ ಮುನ್ನ ಇಬ್ಬರ ನಡುವೆ ರೈಲಿನಲ್ಲಿ ಏನಾಗಿತ್ತು ನೋಡಿ – Kannada News | Unexpected Scene on Moving Train After Young Man’s Actions Draw Attention

ಆಂಧ್ರಪ್ರದೇಶ, ಡಿಸೆಂಬರ್ 23: ದಂಪತಿ ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ರೈಲಿನಿಂದ ಹಾರುವ ಮುನ್ನ ದಂಪತಿ ನಡುವೆ ಜಗಳವಾಗಿತ್ತು, ಪತಿ ಆಕೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಮನವೊಲಿಸಲು ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ. ದಂಪತಿ ಮದುವೆಯಾಗಿ ಕೇವಲ ಎರಡು ತಿಂಗಳಾಗಿತ್ತು.

ಎಷ್ಟೇ ಆತ ಪತ್ನಿಯ ಮನವೊಲಿಸಲು ಪ್ರಯತ್ನಿಸಿದರೂ ಪತ್ನಿ ಒಪ್ಪಲು ತಯಾರಿರಲಿಲ್ಲ ಇದಾದ ಸ್ವಲ್ಪ ಹೊತ್ತಲ್ಲೇ ಇಬ್ಬರೂ ಸಾವನ್ನಪ್ಪಿದ್ದಾರೆ. ಯಾದಗಿರಿಗುಟ್ಟ ವಿಭಾಗದ ಬಂಗಾಳಿ ರೈಲು ನಿಲ್ದಾಣದ ಮೂಲಕ ಹಾದುಹೋಗುವಾಗ ದಂಪತಿಗಳು ರೈಲಿನ ಮೆಟ್ಟಿಲುಗಳ ಬಳಿ ನಿಂತಿದ್ದಾಗ ರೈಲಿನಿಂದ ಬಿದ್ದಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ಅದು ಅಪಘಾತವೋ ಆತ್ಮಹತ್ಯೆಯೋ ಎಂಬ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉಡುಪಿ ಬೀಚ್​ನಲ್ಲಿ ಪವಾಡ! ಕಡಲಲ್ಲಿ ತೇಲಿಬಂತೇ ಕೃಷ್ಣನ ವಿಗ್ರಹ? ಅಸಲಿಯತ್ತು ಇಲ್ಲಿದೆ – Kannada News | Malpe Beach Viral Idol: Debunking Krishna Miracle, Unveiling Jaya Vijaya Truth

ಉಡುಪಿ, ಡಿ.23: ಕೆಲವೊಂದನ್ನು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎಂಬ ಮಾತಿದೆ. ನೋಡಿದ ತಕ್ಷಣ ಅದನ್ನು ನಿರ್ಧಾರಿಸುವುದಲ್ಲ. ಅದರ ಬಗ್ಗೆ ವಿಚಾರ ಮಾಡಬೇಕು. ಅದರಲ್ಲೂ ಈ ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ವಿಷಯಗಳನ್ನು ನಂಬಬಾರದು. ಕೆಲವೊಂದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಯಾಕೆಂದರೆ ಅದರಲ್ಲಿ ಎಲ್ಲವೂ ಸತ್ಯವಾಗಿರುವುದಿಲ್ಲ. ಇದೀಗ ಇಲ್ಲೊಂದು ಅಂತಹದೇ ಘಟನೆಯೊಂದು ನಡೆದಿದೆ.  ಇತ್ತೀಚಿಗೆ ಉಡುಪಿಗೆ ಸಂಬಂಧಿಸಿದ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿತ್ತು. ಆದರೆ ಈ ವೈರಲ್​​ ಆಗಿರುವ ವಿಡಿಯೋದಲ್ಲಿರುವ ಸತ್ಯವೇ ಬೇರೆ. ಅಷ್ಟಕ್ಕೂ ವೈರಲ್​​​ ಆಗಿರುವ ವಿಡಿಯೋ ಯಾವುದು? ಅದರಲ್ಲಿ ಇರುವ ನಿಜವಾದ ಅಂಶವೇನು? ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೋಡಿ. ಉಡುಪಿಯ ಮಲ್ಪೆ ( Udupi Malpe Beach) ಕಡಲ ತೀರದಲ್ಲಿ ಇತ್ತಿಚಿಗೆ ವಿಗ್ರಹವೊಂದು ತೇಲಿ ಬಂದಿತ್ತು. ಇದು ದೇವರ ಪವಾಡ ಎಂದು ಜನ ನಂಬಿದ್ದರು. ಆದರೆ ಇದರ ಹಿಂದೆ ಇರುವ ಅಸಲಿ ಸತ್ಯ ಬೇರೆಯೇ.

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್​​ ಆಗಿರುವ ಈ ವಿಡಿಯೋದಲ್ಲಿ ಉಡುಪಿಯ ಮಲ್ಪೆ ಬೀಚ್​​ನಲ್ಲಿ ಕೃಷ್ಣನ ವಿಗ್ರಹವೊಂದು ತೇಲಿ ಬಂದಿದೆ. ಇದು ಕೃಷ್ಣನ ಪವಾಡ ಎಂದು ನಂಬಿದ್ದರು. ಸೋಶಿಯಲ್​​ ಮೀಡಿಯಾದಲ್ಲಿ ಇಸ್ಕಾನ್ ಭಕ್ತರು ಮಲ್ಪೆ ಬೀಚ್​​​ನಲ್ಲಿ ಕೃಷ್ಣನ ವಿಗ್ರಹ ಹಿಡಿದು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ಕೃಷ್ಣನ ಮಹಿಮೆ ಎಂದು ಹೇಳಿದ್ದರು. ಈ ಹಿಂದೆಯೂ ಕೂಡ ಇಂತಹ ಪವಾಡ ನಡೆದಿದೆ. ಇದೀಗ ಮತ್ತೆ ಇದು ಮರುಕಳಿಸಿದೆ ಎಂದು ಹೇಳಿದ್ದರು.  ಈ ವಿಗ್ರಹವನ್ನು ನೋಡಲು 18 ಬಸ್ ಗಳಲ್ಲಿ ಮಲ್ಪೆ ಬೀಚ್​​ಗೆ ಬಂದಿದ್ದರು. ಅವರು ಈ  ಕಪ್ಪು ವಿಗ್ರಹವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಇದು ಕಲಿಯುಗದಲ್ಲಿ ನಡೆದ ಪವಾಡ ಎಂದು ಹೇಳಿದ್ದಾರೆ. ಆದರೆ ಇದರ ಹಿಂದೆ ಬೇರೆಯೇ ಕಥೆ ಇದೆ. ನಿಜಕ್ಕೂ ಇದು ಯಾವುದರ ವಿಗ್ರಹ, ಅದು ಕಡಲಿನಲ್ಲಿ ಪತ್ತೆಯಾಗಿದ್ದು ಹೇಗೆ? ಎಂಬುದಕ್ಕೆ ಇಲ್ಲಿದೆ ಉತ್ತರ.

ಇದನ್ನೂ ಓದಿ: ಕೊಲ್ಲೂರು ದೇಗುಲ ಹೆಸರಲ್ಲಿ ನಕಲಿ ವೆಬ್​ಸೈಟ್ ತೆರೆದು ವಂಚಿಸ್ತಿದ್ದವ ಅರೆಸ್ಟ್: ಆಸಾಮಿಯ ತಂತ್ರಗಾರಿಕೆಗೆ ಪೊಲೀಸರೇ ದಂಗು!

ವಿಡಿಯೋ ಇಲ್ಲಿದೆ ನೋಡಿ:

ವಾಸ್ತವಾಂಶ ಏನು?:

ಕಡಲಲ್ಲಿ ತೇಲಿ ಬಂದಿರುವುದು ಕೃಷ್ಣನ ವಿಗ್ರಹ ಅಲ್ಲ ಎಂದು ಹೇಳಲಾಗಿದೆ. ಇದು ಜಯ- ವಿಜಯ ವಿಗ್ರಹ ಎಂದು ಹೇಳಲಾಗಿದೆ. ದೇವಾಲಯದ ಗರ್ಭಗುಡಿಯ ಮುಂದೆ ಇರುವ ದ್ವಾರಪಾಲಕರು ಜಯ ವಿಜಯರ ವಿಗ್ರಹ ಎಂದು ಇದೀಗ ಸತ್ಯಾಂಶ ಹೊರಬಂದಿದೆ. ಹಿಂದೂ ಸಂಪ್ರಾದಾಯದ ಪ್ರಕಾರ ಒಂದು ವಿಗ್ರಹ ಭಗ್ನಗೊಂಡ ನಂತರ ಅದನ್ನು ಸಮುದ್ರಕ್ಕೆ ಹಾಕುತ್ತಾರೆ. ಇದೀಗ ಇಲ್ಲಿ ನಡೆದಿರುವುದು ಕೂಡ ಅದೇ, ಭಗ್ನಗೊಂಡ ವಿಗ್ರಹವನ್ನು ಸಮುದ್ರಕ್ಕೆ ಹಾಕಿದ್ದಾರೆ. ಅದು ತೇಲಿ ಬಂದು ಉಡುಪಿಯ ಮಲ್ಪೆ ಬೀಚ್​​​ನಲ್ಲಿ ಪತ್ತೆಯಾಗಿದೆ. ಈ ಜಯ ವಿಜಯರ ವಿಗ್ರಹವನ್ನೇ ಕೃಷ್ಣನ ವಿಗ್ರಹವೆಂದು ಭಾವಿಸಿ ತೆಗೆದುಕೊಂಡು ಹೋಗಿದ್ದಾರೆ. ಇದು ಯಾವುದೇ ಪರಂಪರಾಗತ ಪ್ರಾಚೀನ ಶೈಲಿಯ ವಿಗ್ರಹ ಅಲ್ಲ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:39 pm, Tue, 23 December 25

Source link

ಹೊಸ ವರ್ಷಾಚರಣೆ ಪಾರ್ಟಿಗಳಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ, ಹೈಕೋರ್ಟ್​​ ಸೂಚನೆ – Kannada News | Chennai HC: No Kids in New Year Parties Serving Alcohol

ಚೆನ್ನೈ, ಡಿಸೆಂಬರ್ 23: ಹೊಸ ವರ್ಷ(New Year) ಆಚರಣೆಯ ಪಾರ್ಟಿಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತಿಲ್ಲ ಎಂದು ಚೆನ್ನೈ ಹೈಕೋರ್ಟ್​ ಮಹತ್ವದ ಸೂಚನೆ ನೀಡಿದೆ. ಹೊಸ ವರ್ಷಾಚರಣೆ ಸಂದರ್ಭಗಳಲ್ಲಿ ಸ್ಟಾರ್ ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳು ಸೇರಿದಂತೆ ಮಕ್ಕಳನ್ನು ಮದ್ಯ ಸೇವಿಸುವ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ ಎಂಬ ದೂರು ಬಂದರೆ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಾಮಾನ್ಯವಾಗಿ ಹೊಸ ವರ್ಷಾಚರಣೆಯ ಸಮಯದಲ್ಲಿ, ಚೆನ್ನೈ ಮರೀನಾ ಬೀಚ್‌ನಲ್ಲಿರುವ ಸ್ಟಾರ್ ಹೋಟೆಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಇವುಗಳಿಗೆ ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಾರೆ, ವಿಶೇಷವಾಗಿ ಬೀಚ್ ಪ್ರದೇಶಗಳಲ್ಲಿ, ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗುತ್ತದೆ ಮತ್ತು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

ಸಾರ್ವಜನಿಕರು ತಮ್ಮ ಕುಟುಂಬಗಳೊಂದಿಗೆ ಆಚರಿಸುವುದು ವಾಡಿಕೆಯಾಗಿದ್ದು, ಈ ಆಚರಣೆಗಳ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ವಿವಿಧ ನಿರ್ಬಂಧಗಳನ್ನು ವಿಧಿಸುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಚಲಾಯಿಸಬಾರದು, ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸಬಾರದು ಮತ್ತು ಕೆಲವು ಪ್ರದೇಶಗಳಿಗೆ ಹೋಗಬಾರದು ಮುಂತಾದ ವಿವಿಧ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.

ಮತ್ತಷ್ಟು ಓದಿ: ಹೊಸ ವರ್ಷಾಚರಣೆ: ಗೋವಾ ದುರಂತ ಬೆನ್ನಲ್ಲೇ ಬೆಂಗಳೂರಿನ ಪಬ್, ಹೋಟೆಲ್, ರೆಸ್ಟೋರೆಂಟ್​ಗಳಿಗೆ ಸ್ಟ್ರಿಕ್ಟ್ ರೂಲ್ಸ್

ಹೊಸ ವರ್ಷದ ಮುನ್ನಾದಿನದಂದು ಮಕ್ಕಳನ್ನು ಕರೆತರಬೇಡಿ
ಕಳೆದ ವರ್ಷ ಡಿಸೆಂಬರ್ 31 ರಂದು ಎಗ್ಮೋರ್‌ನ ಖಾಸಗಿ ಸ್ಟಾರ್ ಹೋಟೆಲ್‌ನಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಕ್ಕಳನ್ನು ಮದ್ಯಪಾನ ಮಾಡಲು ಒಂದು ಸ್ಥಳಕ್ಕೆ ಕರೆತರಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕಾಯ್ದೆ ಕಾನೂನುಬದ್ಧವಾಗಿ ತಪ್ಪು ಮತ್ತು ಬಾಲ ನ್ಯಾಯ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ ಮತ್ತು ಇದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರ ಜೀವನವನ್ನು ನಾಶಪಡಿಸುತ್ತದೆ ಎಂದು ದುಃಖ ವ್ಯಕ್ತಪಡಿಸಿದರು.

ಮಕ್ಕಳಿಗೆ ಮದ್ಯಪಾನ ಮಾಡುವ ಪ್ರದೇಶದಲ್ಲಿ ಪಾರ್ಟಿ ಮಾಡಲು ಅವಕಾಶ ನೀಡಿದ ಸ್ಟಾರ್ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಹೊಸ ವರ್ಷ ಸಮೀಪಿಸುತ್ತಿದ್ದಂತೆ ಮದ್ಯಪಾನ ಮಾಡುವ ಪ್ರದೇಶಗಳಲ್ಲಿನ ಸ್ಟಾರ್ ಹೋಟೆಲ್‌ಗಳಲ್ಲಿ ನಡೆಯುವ ಹೊಸ ವರ್ಷದ ಆಚರಣೆಯಲ್ಲಿ ಮಕ್ಕಳು ಭಾಗವಹಿಸದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಆದೇಶಿಸಬೇಕೆಂದು ಅವರು ವಿನಂತಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಂ.ಎಂ. ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ಮುರುಗನ್ ಅವರ ಪೀಠ, ಮುಂಬರುವ ಹೊಸ ವರ್ಷಾಚರಣೆಯ ಸಮಯದಲ್ಲಿ ಮಕ್ಕಳನ್ನು ಸ್ಟಾರ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವಿಸುವ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ ಎಂಬ ದೂರುಗಳು ಬಂದರೆ, ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಿ ಅಧಿಕಾರಿಗಳಿಗೆ ಆದೇಶಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link