ಆಸ್ಟ್ರೇಲಿಯಾದಲ್ಲಿ ಆಸೀಸ್ ಪಡೆಯನ್ನು ಬಗ್ಗು ಬಡಿಯುವಲ್ಲಿ ಕೊನೆಗೂ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ. ಅದು ಕೂಡ ಕೇವಲ 479 ಎಸೆತಗಳಲ್ಲಿ ಕಟ್ಟಿ ಹಾಕುವ ಮೂಲಕ ಎಂಬುದು ವಿಶೇಷ. ಅಂದರೆ ಎರಡೂ ಇನಿಂಗ್ಸ್ಗಳ ಮೂಲ ಆಸ್ಟ್ರೇಲಿಯಾ ಬ್ಯಾಟರ್ಗಳು ಎದುರಿಸಿದ್ದು ಕೇವಲ 479 ಎಸೆತಗಳನ್ನು ಮಾತ್ರ.
Your blog category
ಆಸ್ಟ್ರೇಲಿಯಾದಲ್ಲಿ ಆಸೀಸ್ ಪಡೆಯನ್ನು ಬಗ್ಗು ಬಡಿಯುವಲ್ಲಿ ಕೊನೆಗೂ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ. ಅದು ಕೂಡ ಕೇವಲ 479 ಎಸೆತಗಳಲ್ಲಿ ಕಟ್ಟಿ ಹಾಕುವ ಮೂಲಕ ಎಂಬುದು ವಿಶೇಷ. ಅಂದರೆ ಎರಡೂ ಇನಿಂಗ್ಸ್ಗಳ ಮೂಲ ಆಸ್ಟ್ರೇಲಿಯಾ ಬ್ಯಾಟರ್ಗಳು ಎದುರಿಸಿದ್ದು ಕೇವಲ 479 ಎಸೆತಗಳನ್ನು ಮಾತ್ರ.
ಡಾ. ಬಸವರಾಜ ಗುರೂಜಿಯವರ ಪ್ರಕಾರ, ಕುಂಭ ರಾಶಿಯವರಿಗೆ 2026ರ ವರ್ಷವು ಮಿಶ್ರ ಫಲಗಳನ್ನು ತರಲಿದೆ. ಶನಿಯು ದ್ವಿತೀಯ ಮನೆಯಲ್ಲಿ ಮತ್ತು ಗುರುವು ಪಂಚಮದಿಂದ ಷಷ್ಠ ಸ್ಥಾನಕ್ಕೆ ಸಂಚರಿಸಲಿದೆ. ಇದು ಸಾಡೇ ಸಾತಿಯ ಅಂತಿಮ ಘಟ್ಟವಾಗಿದ್ದು, ಇದನ್ನು ಕಡೆಯ ಪರೀಕ್ಷೆ ಎಂದು ವಿವರಿಸಲಾಗಿದೆ. ಆದರೂ, ಕುಂಭ ರಾಶಿಯವರು ಮಾನಸಿಕವಾಗಿ ದೃಢವಾಗಿರುತ್ತಾರೆ ಮತ್ತು ತಾಳ್ಮೆಯಿಂದ ಕೆಲಸಗಳನ್ನು ಜಯಿಸುತ್ತಾರೆ.
ಆದಾಯದಲ್ಲಿ ಏರಿಕೆ, ಕೆಲಸದಲ್ಲಿ ಶುಭ ಮತ್ತು ವೃತ್ತಿ ವಿಸ್ತರಣೆಯ ಯೋಗವಿದೆ. ಮಕ್ಕಳಿಂದ ಶುಭ ಕಾರ್ಯಗಳು, ವಿವಾಹ ಯೋಗ ಮತ್ತು ರಾಜಕೀಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಆದರೆ, ಗುರು ಸಂಚಾರದಿಂದಾಗಿ ಕೆಲವು ಆರೋಗ್ಯ ಸಮಸ್ಯೆಗಳು ಮತ್ತು ಆಪ್ತರಿಂದ ನಂಬಿಕೆ ದ್ರೋಹದ ಸಾಧ್ಯತೆ ಇದೆ. ವೈಯಕ್ತಿಕ ವಿಷಯಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಸೂಕ್ತ. ಅಂತರರಾಷ್ಟ್ರೀಯ ಮನ್ನಣೆ, ಪ್ರಶಸ್ತಿ ಮತ್ತು ಗೌರವಕ್ಕೆ ಪಾತ್ರರಾಗುವ ಯೋಗವೂ ಇದೆ. ವಿದ್ಯಾರ್ಥಿಗಳು, ರೈತರು, ಡಾಕ್ಟರ್‌ಗಳು ಮತ್ತು ಮಹಿಳಾ ವೃತ್ತಿಪರರಿಗೆ ಈ ವರ್ಷ ಶುಭವಾಗಿದೆ. ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವುದು ಮತ್ತು ಬೆಟ್ಟಿಂಗ್‌ಗಳಿಂದ ದೂರವಿರುವುದು ಒಳಿತನ್ನು ತರುತ್ತದೆ. ಹಳದಿ ಮತ್ತು ನೀಲಿ ಬಣ್ಣಗಳು, ನಾಲ್ಕು ಮತ್ತು ಎಂಟು ಅದೃಷ್ಟ ಸಂಖ್ಯೆಗಳು ಹಾಗೂ ತಿರುಪತಿ ದರ್ಶನ ಮತ್ತು ಓಂ ಗೋವಿಂದಾಯ ನಮಃ ಜಪವು ಶುಭ ಫಲವನ್ನು ನೀಡುತ್ತದೆ.
ಬನಿಹಾಲ್, ಡಿ.27: ರಾಂಬನ್ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ವಕೀಲರೊಬ್ಬರ (CBI lawyer death) ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 35 ವರ್ಷದ ಸಿಬಿಐ ವಕೀಲರೊಬ್ಬರು ಸಾವನ್ನಪ್ಪಿದ್ದಾರೆ. ಬನಿಹಾಲ್ ಬಳಿ ವಕೀಲರ ಕಾರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಸಾವನ್ನಪ್ಪಿರುವ ವಕೀಲರನ್ನು ಶೇಖ್ ಆದಿಲ್ ನಬಿ ಎಂದು ಹೇಳಲಾಗಿದೆ. ಇವರು ಇತ್ತೀಚಿಗೆ ಕೇಂದ್ರ ತನಿಖಾ ದಳದಲ್ಲಿ ಪ್ರಾಸಿಕ್ಯೂಟಿಂಗ್ ಅಧಿಕಾರಿಯಾಗಿ ನೇಮಿಸಲಾಯಿತು.
ಇನ್ನು ಅಪಘಾತದಲ್ಲಿ ಆದಿಲ್ ಗಂಭೀರ ಗಾಯಗೊಂಡಿದ್ದರು, ಅವರನ್ನು ತಕ್ಷಣ ಬನಿಹಾಲ್‌ನ ಉಪ-ಜಿಲ್ಲಾ ಆಸ್ಪತ್ರೆಗೆ (SDH) ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ಫಲಿಸದ ಕಾರಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸುಮಾರು ಎರಡು ತಿಂಗಳ ಹಿಂದೆ ಚಂಡೀಗಢದ ಸಿಬಿಐನಲ್ಲಿ ನೇಮಕಗೊಂಡಿದ್ದ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಆದಿಲ್ ಶೇಖ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಹೊಸ ವರ್ಷಾಚರಣೆ: ಆಪರೇಷನ್ ಆಘಾಟ್ 3.0 ಅಡಿಯಲ್ಲಿ 500ಕ್ಕೂ ಹೆಚ್ಚು ಜನರ ಬಂಧನ
#DuaEMaghfirat : Advocate Sheikh Adil Nabi from Bijbehara, Anantnag, who had cleared the UPSC examination and recently joined as a Prosecuting Officer with the CBI, passed away following a tragic accident.
His untimely demise has left the legal fraternity in shock, with many… pic.twitter.com/15nrJ6eUi6— Nadeem Nadu (ندیم مختار) (@NadeemNadu3) December 26, 2025
ಡಿಕ್ಕಿ ಹೊಡೆದ ಮಹೀಂದ್ರಾ ಸ್ಕಾರ್ಪಿಯೋ ಚಾಲಕ ಮೊಹಮ್ಮದ್ ಶಫಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದಿಲ್ ಅವರು ಇತ್ತೀಚೆಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಚಂಡೀಗಢದ ಉನ್ನತ ತನಿಖಾ ಸಂಸ್ಥೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದರು. ಇದೀಗ ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
28-12-2025ರಿಂದ 03-01-2026ರವರಗೆ ಉದ್ಯೋಗದಲ್ಲಿ ಹಲವು ಬದಲಾವಣೆ ಹಾಗೂ ಎಚ್ಚರಿಕೆ ಎಲ್ಲವೂ ಬರಲಿದ್ದು, ಅದಕ್ಕೂ ಮೊದಲೇ ಸಿದ್ಧತೆಯಲ್ಲಿದ್ದರೆ ಒಳ್ಳೆಯದು. ಉದ್ಯೋಗದಲ್ಲಿ ಅನ್ಯರ ಹಸ್ತಕ್ಷೇಪವೂ ಆಗಲಿದೆ. ಎದುರಿಸುವ ಚಾಕಚಕ್ಯತೆ ಇರಲಿ. ಬುದ್ಧಿ ಮನಸ್ಸುಗಳು ದೃಢವಾಗಿದ್ದರೆ ಎಂತಹ ಆಟವನ್ನೂ ಗೆಲ್ಲಬಹುದು. ಸೋತರೂ ಗೆಲುವಿನಂತೆ ಬಿಗಬಹುದು.
ಡಿಸೆಂಬರ್ ಕೊನೆಯ ವಾರ ಮಂಗಳ ಮತ್ತು ಗುರು ಪ್ರಭಾವದಿಂದ ಉದ್ಯೋಗದಲ್ಲಿ ಚಟುವಟಿಕೆ ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿ ಅಥವಾ ಹುದ್ದೆ ಬದಲಾವಣೆ ಸಾಧ್ಯ. ಅವಿರತ ಶ್ರಮಕ್ಕೆ ಫಲ ಸಿಗುತ್ತದೆ. ನಿರುದ್ಯೋಗಿಗಳಿಗೆ ಸಂದರ್ಶನಕ್ಕೆ ಅವಕಾಶ. ಈ ವಾರದ ಆತುರದ ನಿರ್ಧಾರ ಅವನತಿಗೆ ಕಾರಣವಾಗಬಹುದು. ಸಹನೆ ಮತ್ತು ಯೋಜನೆ ಅಗತ್ಯ.
ಈ ವಾರ ನಿಮಗೆ ಶುಕ್ರ ಹಾಗೂ ಶನಿ ಪ್ರಭಾವದಿಂದ ಉದ್ಯೋಗದಲ್ಲಿ ಸ್ಥಿರತೆ ಇರುತ್ತದೆ. ಉನ್ನತಿಯೂ ನಿಧಾನವಾಗಿ ಬರಲಿದೆ. ಈ ವಾರದಲ್ಲಿ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಅಥವಾ ಒಪ್ಪಂದ ಕೆಲಸ ಸಿಗಬಹುದು. ಹಣಕಾಸು ವಿಚಾರದಲ್ಲಿ ಜಾಗ್ರತೆ ಇದ್ದಷ್ಟು ಸಾಲದು. ಸೋಮಾರಿತನ ಸ್ಥಾನ ಕುಸಿತಕ್ಕೆ ಕಾರಣವಾಗುವುದು.
ಮೂರನೇ ರಾಶಿಯವರಿಗೆ ಈ ವಾರ ಸಪ್ತಮದ ಬುಧನ ಅನುಗ್ರಹದಿಂದ ಬುದ್ಧಿಶಕ್ತಿ, ಸಂವಹನ ಕೌಶಲ್ಯದಿಂದ ಉದ್ಯೋಗದಲ್ಲಿ ಏರಿಕೆ ಸಾಧ್ಯ. ಹೊಸ ವಿಭಾಗಕ್ಕೆ ಸೇರಿಕೊಳ್ಳುವಿರಿ. ನಿರುದ್ಯೋಗಿಗಳಿಗೆ ಸಣ್ಣ ತರಬೇತಿ ಸಿಗಲಿದ್ದು, ಅನಂತರ ಅವಕಾಶ ಕಲ್ಪಿತವಾಗಲಿದೆ. ಮಾತಿನ ಅಜಾಗರೂಕತೆ ಅವನತಿಗೆ ಕಾರಣವಾಗಬಹುದು.
ಈ ರಾಶಿಯವರಿಗೆ ಕೊನೆಯ ವಾರ ಚಂದ್ರ, ಶನಿಯರ ಪ್ರಭಾವದಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಜೊತೆಗೆ ಕೆಲಸದ ಹೊಣೆಗಾರಿಕೆ ಹೆಚ್ಚಾದರೂ ಮೆಚ್ಚುಗೆ ಕಡಿಮೆ. ನಿರುದ್ಯೋಗಿಗಳಿಗೆ ವಿಳಂಬವಾಗಿ ಕೆಲಸಕ್ಕೆ ಕರೆ ಬರಲಿದೆ. ವಾರದಲ್ಲಿ ಸಹನೆ, ಶಿಸ್ತು ಇದ್ದರೆ ಸ್ಥಾನ ಉಳಿಯುತ್ತದೆ. ಈ ವಾರ ಭಾವನಾತ್ಮಕತೆಗೆ ಹೋಗದೇ ವಾಸ್ತವಿಕತೆಯಿಂದ ಇರಿ.
ಈ ವಾರ ಪಂಚಮದಲ್ಲಿರುವ ಸೂರ್ಯ ಬಲದಿಂದ ಅಧಿಕಾರ, ನಾಯಕತ್ವ ಅವಕಾಶಗಳು ಹೆಚ್ಚಾಗುತ್ತವೆ. ಗುರುವಿನ ದೃಷ್ಟಿಯು ತನ್ನ ರಾಶಿಯ ಮೇಲಿದ್ದು ಉನ್ನತ ಹುದ್ದೆ ಅಥವಾ ಗೌರವ ಬರುವ ಸಾಧ್ಯತೆ ಇದೆ. ನಿರುದ್ಯೋಗದ ಚಿಂತೆ ಇರುವವರಿಗೆ ಪ್ರಭಾವಿ ವ್ಯಕ್ತಿಗಳ ಸಹಾಯ. ಅಹಂಕಾರ ಮತ್ತು ಅಧಿಕಾರದ ದುರುಪಯೋಗದಿಂದ ಸ್ಥಾನದಿಂದ ಕುಸಿತ ಬರಬಹುದು.
ಆರನೇ ರಾಶಿಯವರಿಗೆ ಚತುರ್ಥದಲ್ಲಿರುವ ಬುಧ ಹಾಗೂ ಷಷ್ಠದ ರಾಹು ಪ್ರಭಾವದಿಂದ ತಾಂತ್ರಿಕ ಮತ್ತು ವಿಶ್ಲೇಷಣೆಯ ಕೆಲಸಗಳಲ್ಲಿ ಅಭಿವೃದ್ಧಿ ಇರಲಿದೆ. ಉದ್ಯೋಗ ಬದಲಾವಣೆ ಸಾಧ್ಯ. ಈ ವಾರ ಯಾರಿಗೋ ಬಂದ ಅವಕಾಶವನ್ನು ನಿರುದ್ಯೋಗಿಗಳು ಪಡೆಯುವರು. ನಿಮ್ಮ ಅತಿಯಾದ ವಿಮರ್ಶೆ ಮತ್ತು ಸಂಶಯದಿಂದ ಅವನತಿ ಸಂಭವಿಸಬಹುದು.
ರಾಶಿಯ ಅಧಿಪತಿಯಾದ ಶುಕ್ರನು ತೃತೀಯದಲ್ಲಿ ಇದ್ದು ಅವನ ಪ್ರಭಾವವಿದ್ದರೂ ನಿಮಗೆ ಉದ್ಯೋಗದಲ್ಲಿ ಸಮತೋಲನದಿಂದ ಇರಲು ಆಗದು. ನಿಧಾನ ಉನ್ನತಿಯಿಂದ ಗೌರವ ಉಳಿಯುತ್ತದೆ. ನಿರುದ್ಯೋಗಿಗಳಿಗೆ ಒಪ್ಪಂದ ಮೇಲೆ ಸಹಾಯಕ ಕೆಲಸ ಸಿಗಲಿದೆ. ಸಂಬಂಧದ ಗೊಂದಲ ಕೆಲಸದ ಮೇಲೆ ಪರಿಣಾಮ ಬೀರಿ ಸ್ಥಾನ ಕುಸಿತಕ್ಕೆ ಕಾರಣವಾಗಲಿದೆ.
ರಾಶಿಯ ಅಧಿಪತಿ ಮಂಗಳ, ಕೇತು ಪ್ರಭಾವದಿಂದ ಉದ್ಯೋಗದಲ್ಲಿ ತೀವ್ರ ಬದಲಾವಣೆ. ಸಮಸ್ಯೆಗಳು ಅಧಿಕವಿರುವ ಕ್ಷೇತ್ರದಲ್ಲಿ ಅವಕಾಶ. ನಿರುದ್ಯೋಗಿಗಳಿಗೆ ಶ್ರಮದ ಮಾನದಂಡದ ಮೇಲೆ ಸಂಪತ್ತು ಸಿಗಲಿದೆ. ಕೋಪ, ಹಠವನ್ನು ಸಹೋದ್ಯೋಗಿಗಳ ಜೊತೆ ಮಾಡುವಿರಿ. ಸಂಯಮದಿಂದ ನಡೆದುಕೊಳ್ಳಲಾಗದು.
ಒಂಭತ್ತನೇ ರಾಶಿಯವರಿಗೆ ಈ ವಾರ ಗುರುವಿನ ಅನುಗ್ರಹದಿಂದ ಉದ್ಯೋಗದಲ್ಲಿ ಮಾರ್ಗದರ್ಶನ ಹಾಗೂ ಪ್ರಗತಿಯ ವಿಶ್ವಾಸ ಎರಡೂ ಸಿಗಲಿದೆ. ಶಿಕ್ಷಣ, ಸಲಹೆ, ಕಾನೂನು ಕ್ಷೇತ್ರದಲ್ಲಿ ಇರುವವರಿಗೆ ಒತ್ತಡ. ಆದಾಯದ ಹೆಚ್ಳಕ್ಕೆ ಅವಕಾಶ. ನಿರುದ್ಯೋಗಿಗಳಿಗೆ ಶುಭ ಸುದ್ದಿ. ಸ್ಥಾನದಿಂದ ಚ್ಯುತನಾಗುವ ಭೀತಿ ಕಾಣಿಸುವುದು.
ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಈ ವಾರದ ಪ್ರೇಮ – ಪ್ರೀತಿ ಭವಿಷ್ಯ ತಿಳಿಯಿರಿ
ಈ ವಾರ ನಿಮಗೆ ಶನಿ ಪ್ರಭಾವದಿಂದ ಶ್ರಮ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಸ್ಥಾನ ಸ್ಥಿರವೆನ್ನುವ ಕನಸು ನಿಮ್ಮಲ್ಲಿರುವುದು. ಉನ್ನತಿಗೆ ಆತುರ ತಂದುಕೊಳ್ಳುವುದು ಬೇಡ. ನಿರುದ್ಯೋಗಿಗಳಿಗೆ ದೀರ್ಘ ಪ್ರಯತ್ನದ ಅನಂತರ ಕೊನೆಗೂ ನೆಮ್ಮದಿ. ನಿಯಮ ಉಲ್ಲಂಘನೆಯಿಂದ ನಿಮಗೇ ನಿರಾಶೆಯಾಗಲಿದೆ.
ಡಿಸಂಬರ್ ನ ಕೊನೆಯ ವಾರದಲ್ಲಿ ಶನಿ ಹಾಗೂ ಕುಜನ ಪ್ರಭಾವದಿಂದ ತಂತ್ರಜ್ಞಾನ, ಹೊಸ ಆಲೋಚನೆ ಹಾಗೂ ಪ್ರಯತ್ನಕ್ಕೆ ಅವಕಾಶ ಲಭ್ಯ. ಉದ್ಯೋಗವನ್ನು ಬೇರೆ ದೃಷ್ಟಿಕೋನದಿಂದ ಲಾಭಕರ. ನಿರುದ್ಯೋಗಿಗಳಿಗೆ ಮನೆಯಲ್ಲಿಯೇ ಕುಳಿತು ದುಡಿಯುವ ಅವಕಾಶ. ಆದಾಯದ ಬಗ್ಗೆ ಹೇಳಿಕೊಳ್ಳಲಾರಿರಿ.
ಗುರು ಮತ್ತು ಶನಿಯ ಪ್ರಾಬಲ್ಯದಿಂದ ಸೃಜನಾತ್ಮಕತೆ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಉನ್ನತಿ. ಉದ್ಯೋಗದಲ್ಲಿ ಮಾನಸಿಕ ತೃಪ್ತಿ. ಕ್ಲೇಶಕ್ಕೆ ಯಾವುದೇ ವಿಕಾರವಿರದು. ನಿರುದ್ಯೋಗಿಗಳಿಗೆ ಪ್ರಭಾವಿಗಳಿಂದ ಶಿಫಾರಸು ಮೂಲಕ ಕೆಲಸ. ಬೇರೆಯವರ ಮೇಲೆ ಇಡುವ ನಂಬಿಕೆಗಿಂತ ನಿಮ್ಮ ಮೇಲಿಟ್ಟರೆ ಒಳ್ಳೆಯದು.
– ಲೋಹಿತ ಹೆಬ್ಬಾರ್ – 8762924271 (what’s app only)
ಬೆಂಗಳೂರು, ಡಿಸೆಂಬರ್ 27: ಬೆಂಗಳೂರು ಉತ್ತರದ ಕೋಗಿಲು ಲೇಔಟ್ ಬಳಿ ನಡೆದ ಮನೆಗಳ ತೆರವು ಪ್ರಕರಣದ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ವಾಸ್ತವ ಅರಿಯದೆ ಪ್ರತಿಕ್ರಿಯಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಪಿಣರಾಯಿ ವಿಜಯನ್ ಅವರ ‘ಬುಲ್ಡೋಜರ್ ರಾಜ್’ ಎಕ್ಸ್ ಸಂದೇಶಕ್ಕೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಪಿಣರಾಯಿ ವಿಜಯನ್ ಹಿರಿಯ ನಾಯಕರು. ಆದರೆ ಸ್ಥಳೀಯ ವಿಚಾರಗಳನ್ನು, ಸತ್ಯ ಸಂಗತಿಯನ್ನು ತಿಳಿಯದೇ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕೋಗಿಲು ಲೇಔಟ್ ಬಳಿ ಕೆಲವು ಜನರು ಬಿಬಿಎಂಪಿಗೆ ಸೇರಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಜಾಗವನ್ನು ಕಸದ ವಿಲೇವಾರಿಗೆ ಮೀಸಲಿಟ್ಟ 5 ಎಕರೆ ಪ್ರದೇಶವಾಗಿದ್ದು, ಅಕ್ರಮ ಒತ್ತುವರಿಯನ್ನು ಕಾನೂನುಬದ್ಧವಾಗಿ ತೆರವುಗೊಳಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಯಾರನ್ನೂ ಮನೆ ಕಳೆದುಕೊಳ್ಳುವಂತೆ ಮಾಡಿಲ್ಲ. ಮನೆ ಕಳೆದುಕೊಂಡವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಹಂಚಿಕೆ ಮಾಡಲಾಗುತ್ತಿದೆ. ನಾವು ಬುಲ್ಡೋಜರ್ ರಾಜಕಾರಣವನ್ನು ಪಾಲಿಸುವುದಿಲ್ಲ. ಕಾನೂನುಬದ್ಧ ಪ್ರಕ್ರಿಯೆಯಲ್ಲೇ ತೆರವು ಕಾರ್ಯ ನಡೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ವಿಷಯವನ್ನು ನಮ್ಮ ಪಕ್ಷದ ನಾಯಕರಿಗೂ ತಿಳಿಸಲಾಗಿದೆ. ಇಲ್ಲಿನ ಸ್ಥಿತಿಗತಿಗಳನ್ನು ಅರಿಯದೇ ಆರೋಪ ಮಾಡುವುದು ಸರಿಯಲ್ಲ ಎಂದು ಪಿಣರಾಯಿ ವಿಜಯನ್ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಪ್ರತಿಕ್ರಿಯೆ ಮೂಡಿ ಬಂದಿರುವುದು ರಾಜಕೀಯ ಗಿಮಿಕ್ ಆಗಿರಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸರ್ಕಾರದ ಜಾಗದಲ್ಲಿ ಅಕ್ರಮ ಸ್ಲಂ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.
ಮನೆ ತೆರವು ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಡಿಕೆ ಶಿವಕುಮಾರ್ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ. ವರದಿಯಲ್ಲಿ ಕೋಗಿಲು ಲೇಔಟ್‌ನಲ್ಲಿ ಬಿಬಿಎಂಪಿಗೆ ಸೇರಿದ 5 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಈ ಅಕ್ರಮ ತೆರವು ಕಾನೂನುಬದ್ಧವಾಗಿ ನಡೆದಿದೆ. ಅಕ್ರಮವಾಗಿ ವಾಸಿಸುತ್ತಿದ್ದವರಲ್ಲಿ ಬಹುತೇಕರು ಅಲ್ಪಸಂಖ್ಯಾತ ಸಮುದಾಯದವರು ಎಂಬ ಮಾಹಿತಿಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಬೀದಿಗೆ ಹಾಕಿ ‘ಬುಲ್ಡೋಜರ್ ರಾಜ್’ ಕ್ರಮವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ ಎಂದು ಪಿಣರಾಯಿ ವಿಜಯನ್ ಎಕ್ಸ್ನಲ್ಲಿ ಬರೆದುಕೊಂಡಿದ್ದರು. ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ ಎಂದು ಅವರು ಉಲ್ಲೇಖಿಸಿದ್ದರು.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ
ಈ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 12:53 pm, Sat, 27 December 25
‘ಸಪ್ತ ಸಾಗರದಾಚೆ ಎಲ್ಲೊ’ (Sapta Sagaradache Ello) ಸಿನಿಮಾ ಮೂಲಕ ಭಾರಿ ಭರವಸೆ ಮೂಡಿರುವ ನಿರ್ದೇಶಕ ಹೇಮಂತ್ ರಾವ್ ಅವರು ಇದೀಗ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದ್ಬುತ ಪ್ರೇಮಕತೆ ನೀಡಿದ ಬಳಿಕ ಒಮ್ಮೆಲೆ ಜಾನರ್ ಬದಲಾಯಿಸಿರುವ ಹೇಮಂತ್ ರಾವ್, ಈಗ ಥ್ರಿಲ್ಲರ್ ಕತೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ಸಿನಿಮಾದ ಕೆಲವು ಪೊಸ್ಟರ್ಗಳು ಈಗಾಗಲೇ ಬಿಡುಗಡೆ ಆಗಿದ್ದು, ಪೋಸ್ಟರ್ ಮೂಲಕವೇ ಸಾಕಷ್ಟು ನಿರೀಕ್ಷೆಯನ್ನು ಸಿನಿಮಾ ಮೂಡಿಸಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾ ತಂಡಕ್ಕೆ ನಾಯಕಿಯ ಎಂಟ್ರಿ ಆಗಿದೆ.
‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾಕ್ಕೆ ನಾಯಕಿಯಾಗಿ ಪ್ರಿಯಾಂಕಾ ಮೋಹನ್ ಎಂಟ್ರಿ ನೀಡಿದ್ದಾರೆ. ನಿರ್ದೇಶಕ ಹೇಮಂತ್ ರಾವ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಮೋಹನ್ ಅವರ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಅವ್ಯವಸ್ಥೆಯ ನಡುವೆ ಹಾರುವ ಚಿಟ್ಟೆ’ ಎಂದು ನಟಿ ಪ್ರಿಯಾಂಕಾ ಪಾತ್ರವನ್ನು ಹೇಮಂತ್ ರಾವ್ ಬಣ್ಣಿಸಿದ್ದಾರೆ. ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್ನಲ್ಲಿ ಪ್ರಿಯಾಂಕಾ ಮೋಹನ್ ಬಲು ಸುಂದರವಾಗಿ ಕಾಣುತ್ತಿದ್ದಾರೆ. ಅವರ ಪೋಷಾಕು, ಸ್ಟೈಲ್ ಎಲ್ಲವೂ 80ರ ದಶಕದ ಯುವತಿಯನ್ನು ನೆನಪಿಸುತ್ತಿದೆ.
ಅಂದಹಾಗೆ ‘‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಕತೆ ನಡೆಯುವುದೇ 70-80ರ ದಶಕದಲ್ಲಿ. ಡಾಲಿ ಧನಂಜಯ್ ಹಾಗೂ ಶಿವಣ್ಣ ಅವರ ಪೋಸ್ಟರ್ಗಳು ಇದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಇದೀಗ ಪ್ರಿಯಾಂಕಾ ಮೋಹನ್ ಪೋಸ್ಟರ್ ಸಹ ಇದನ್ನೇ ಧ್ವನಿಸುತ್ತಿದೆ. ಸಿನಿಮಾನಲ್ಲಿ ಪ್ರಿಯಾಂಕಾ ಮೋಹನ್, ಡಾಲಿ ಧನಂಜಯ್ ಪಾತ್ರದ ಜೋಡಿ ಎಂದು ಊಹಿಸಬಹುದಾಗಿದೆ.
ಇದನ್ನೂ ಓದಿ:ಹೇಮಂತ್ ರಾವ್ ಸಿನಿಮಾನಲ್ಲಿ ಡಾಲಿ ಧನಂಜಯ್, ಭೈರವನ ಪಾಠ ಏನಾಯ್ತು?
ಪ್ರಿಯಾಂಕಾ ಮೋಹನ್ ಬೆಂಗಳೂರಿನ ಯುವತಿ. ಕನ್ನಡದ ‘ಒಂದು ಕಥೆ ಹೇಳ್ಲಾ’ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಬಳಿಕ ತೆಲುಗು ಮತ್ತು ತಮಿಳಿನಲ್ಲಿ ಸಾಕಷ್ಟು ಅವಕಾಶಗಳು ಅವರನ್ನು ಅರಸಿ ಬಂದವು. ನಾನಿ ಜೊತೆ ‘ನಾನಿಸ್ ಗ್ಯಾಂಗ್ ಲೀಡರ್’, ‘ಸರಿಪೋದಾ ಶನಿವಾರಂ’, ಧನುಶ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಪವನ್ ಕಲ್ಯಾಣ್ ಜೊತೆಗೆ ‘ಓಜಿ’ ಇನ್ನೂ ಹಲವಾರು ಪರಭಾಷೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ.
2019 ರಲ್ಲಿ ಕನ್ನಡ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಪ್ರಿಯಾಂಕಾ ಮರಳುತ್ತಿರುವುದು ‘ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಮೂಲಕವೇ. ಈ ನಡುವೆ ಅವರು ಯಾವ ಕನ್ನಡ ಸಿನಿಮಾನಲ್ಲಿಯೂ ನಟಿಸಿರಲಿಲ್ಲ. ಸಿನಿಮಾದ ಶೂಟಿಂಗ್ ಭರದಿಂದ ಸಾಗಿದ್ದು, ಸಿನಿಮಾದ ಬಿಡುಗಡೆ ದಿನಾಂಕವನ್ನು ಇನ್ನಷ್ಟೆ ಘೋಷಿಸಬೇಕಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 12:59 pm, Sat, 27 December 25
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಆರಂಭಕ್ಕೆ ಇನ್ನು ಉಳಿದಿರುವುದು ತಿಂಗಳುಗಳು ಮಾತ್ರ. ಆದರೆ ತಿಂಗಳುಗಳು ಉಳಿದಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಗಾಯಗೊಂಡಿರುವುದು ಇದೀಗ RCB ಫ್ರಾಂಚೈಸಿಯ ಚಿಂತೆಯನ್ನು ಹೆಚ್ಚಿಸಿದೆ.
ಆರ್ಸಿಬಿ ತಂಡದ ಪ್ರಮುಖ ಆಟಗಾರ ಟಿಮ್ ಡೇವಿಡ್ ಬಿಗ್ ಬ್ಯಾಷ್ ಲೀಗ್ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪರ್ತ್ನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ನ 12ನೇ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ಪರ ಕಣಕ್ಕಿಳಿದಿದ್ದ ಟಿಮ್ ಡೇವಿಡ್ ಬ್ಯಾಟಿಂಗ್ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ಈ ಗಾಯದ ಕಾರಣ ಟಿಮ್ ಡೇವಿಡ್ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್ಗೆ ಮರಳಿದ್ದಾರೆ.
ಪ್ರಸ್ತುತ ಮಾಹಿತಿ ಪ್ರಕಾರ ಟಿಮ್ ಡೇವಿಡ್ ಅವರ ಗಾಯವು ಗಂಭೀರವಾಗಿದ್ದು, ಹೀಗಾಗಿ ವೈದ್ಯರು ಅವರಿಗೆ ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಟಿಮ್ ಡೇವಿಡ್ ಮುಂಬರುವ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವುದು ಅನುಮಾನ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ.
ಟಿ20 ವಿಶ್ವಕಪ್ ಶುರುವಾಗುವುದು ಫೆಬ್ರವರಿ 7 ರಿಂದ. ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಿಂದ ಟಿಮ್ ಡೇವಿಡ್ ಹೊರಗುಳಿದರೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಕಾಣಿಸಿಕೊಳ್ಳುವುದು ಡೌಟ್. ಏಕೆಂದರೆ ಐಪಿಎಲ್ 2026 ಮಾರ್ಚ್ 26 ರಿಂದ ಆರಂಭವಾಗಲಿದೆ.
ಅತ್ತ ಟಿ20 ವಿಶ್ವಕಪ್ನಿಂದ ಟಿಮ್ ಡೇವಿಡ್ ಹೊರಗುಳಿದರೆ ಮಾರ್ಚ್ನಲ್ಲಿ ಆರಂಭವಾಗಲಿರುವ ಐಪಿಎಲ್ನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿ ಅವರು ಈ ಬಾರಿ ಐಪಿಎಲ್ ಆಡುತ್ತಾರಾ ಅಥವಾ ಇಲ್ಲವಾ ಎಂಬುದು ಖಚಿತವಾಗಲು ಮುಂಬರುವ ಟಿ20 ವಿಶ್ವಕಪ್ವರೆಗೆ ಕಾಯಲೇಬೇಕು.
ದೆಹಲಿ, ಡಿ.27: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi New Year Security) ಹೊಸ ವರ್ಷಾಚರಣೆಗೆ ಭದ್ರತೆ ಕುರಿತು ತಯಾರಿ ಮಾಡಿಕೊಳ್ಳುತ್ತಿರುವ ವೇಳೆ, ಮಹತ್ವದ ಕಾರ್ಯಚರಣೆಯೊಂದನ್ನು ದೆಹಲಿ ಪೊಲೀಸರು ನಡೆಸಿದ್ದಾರೆ. ರಾತ್ರಿಯಿಡೀ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ನೂರಾರು ಜನರನ್ನು ಬಂಧಿಸಿದ್ದಾರೆ. ಆಪರೇಷನ್ ಆಘಾಟ್ 3.0 ಅಡಿಯಲ್ಲಿ ದೆಹಲಿ ಆಗ್ನೇಯ ಜಿಲ್ಲೆಯ ಪೊಲೀಸರು ಸುಮಾರು ಎರಡು ಡಜನ್ ಅಕ್ರಮ ಶಸ್ತ್ರಾಸ್ತ್ರಗಳು, ಲಕ್ಷಾಂತರ ನಗದು, ಅಕ್ರಮ ಮದ್ಯ, ಮಾದಕ ವಸ್ತುಗಳು ಮತ್ತು ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನ್ಯೂ ಇಯರ್ ಸೆಲೆಬ್ರೇಷನ್ ಸಂದರ್ಭದಲ್ಲಿ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಸಮಯದಲ್ಲಿ ಅಪಾಯವನ್ನು ಅಥವಾ ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಸುವ ಅನುಮಾಸ್ಪದ ವ್ಯಕ್ತಿಗಳನ್ನು ಬಂಧನ ಮಾಡಲಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ 285 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆ, ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಮತ್ತು ಜೂಜಾಟ ಕಾಯ್ದೆಯ ನಿಬಂಧನೆಗಳು ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಈ ಬಂಧನಗಳನ್ನು ಮಾಡಲಾಗಿದೆ. ಇದಲ್ಲದೆ, ಇಲ್ಲಿಯವರೆಗೆ ಹೊಸ ವರ್ಷದ ಸಂದರ್ಭದಲ್ಲಿ ಅಪರಾಧ ಮುಕ್ತ ಆಚರಣೆ ನಡೆಸುವ ಉದ್ದೇಶದಿಂದ 504 ಜನರನ್ನು ಬಂಧಿಸಲಾಗಿದೆ.
Operation Aaghat 3.0 | Key Outcomes from the South-East District-
285 accused arrested under the Excise Act, NDPS Act & Gambling Act. 504 persons apprehended under preventive action. 116 Bad Characters (BCs) apprehended. 10 property offenders and five auto-lifters arrested.… pic.twitter.com/XVTHulCBPC— ANI (@ANI) December 27, 2025
ಪೊಲೀಸರು ಆರೋಪಿಗಳಿಂದ 21 ಅಕ್ರಮ ಶಸ್ತ್ರಾಸ್ತ್ರಗಳು, 27 ವಾಹನಗಳು, 12,000 ಕ್ಕೂ ಹೆಚ್ಚು ಮದ್ಯದ ಬಾಟಲಿಗಳು, ಸುಮಾರು 2.5 ಲಕ್ಷ ರೂ. ನಗದು ಮತ್ತು 7 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆಪರೇಷನ್ ಆಘಾಟ್ 3.0 ಅಡಿಯಲ್ಲಿ, ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಸುಮಾರು 116 ವ್ಯಕ್ತಿಗಳನ್ನು ಬಂಧಿಸಲಾಗಿದೆ. ವಾಹನ ಕಳ್ಳತನ ಜಾಲವನ್ನು ತಡೆಯುವ ನಿಟ್ಟಿನಲ್ಲೂ ಆಪರೇಷನ್ ಆಘಾಟ್ 3.0 ಮೂಲಕ ಕ್ರಮ ಕೈಗೊಳ್ಳಲಾಗಿದೆ. ನ್ಯೂ ಇಯರ್ ಪಾರ್ಟಿ ಸಮಯದಲ್ಲಿ ವಾಹನ ಸವಾರರು ಯಾವುದೇ ತೊಂದರೆ ಎದುರಿಸದಂತೆ ನೋಡಿಕೊಳ್ಳಲು ಐದು ಆಟೋ ಲಿಫ್ಟರ್‌ಗಳನ್ನು ಬಂಧಿಸಲಾಗಿದೆ. ದಾಳಿಯ ಸಮಯದಲ್ಲಿ 231 ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ
ಇನ್ನು ಪೊಲೀಸರು, 21 ದೇಶೀಯ ಪಿಸ್ತೂಲುಗಳು, 20 ಗನ್‌ಪೌಡರ್, 27 ಚಾಕುಗಳು ಸೇರಿದಂತೆ 12,000 ಕ್ಕೂ ಹೆಚ್ಚು ಅಕ್ರಮ ಮದ್ಯ ಮತ್ತು 6 ಕೆಜಿ ಗಾಂಜಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ.ಪೊಲೀಸರು ದಾಳಿಯ ಸಮಯದಲ್ಲಿ 2.3 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಸುಮಾರು 210 ಕದ್ದ ಅಥವಾ ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜಯನಗರ ಆಸ್ಪತ್ರೆಯಲ್ಲಿ ವೈದ್ಯರ ಭಾರೀ ಎಡವಟ್ಟು
ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನ (Bengaluru) ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಭಾರೀ ನಿರ್ಲಕ್ಷ್ಯ ಬೆಳಕಿಗೆ ಬಂದಿದ್ದು, ರಕ್ತಹೀನತೆ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರ ಸ್ಥಿತಿ ಗಂಭೀರವಾದ ಘಟನೆ ನಡೆದಿದೆ. ಪರಿಣಾಮ ರೋಗಿಯ ಆತೋಗ್ಯ ತೀವ್ರ ಹದಗೆಟ್ಟಿದೆ.ತಕ್ಷಣ ಅವರನ್ನು ಐಸಿಯುವಿಗೆ ಸ್ಥಳಾಂತರಿಸಿ ತುರ್ತು ಚಿಕಿತ್ಸೆ ನೀಡಲಾಗಿದ್ದು, ಈ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುನೀತ್ ಸೂರ್ಯ ಎಂಬ ರೋಗಿ ರಕ್ತಹೀನತೆ ಚಿಕಿತ್ಸೆ ಪಡೆಯಲು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು. ಅವರು ಓ ಪಾಸಿಟಿವ್ (O+) ರಕ್ತದ ಗುಂಪಿನವರಾಗಿದ್ದು, ಲ್ಯಾಬ್ ಟೆಕ್ನಿಷಿಯನ್ ನಿರ್ಲಕ್ಷ್ಯದಿಂದಾಗಿ ತಪ್ಪಾಗಿ ಎ ಪಾಸಿಟಿವ್ (A+) ರಕ್ತ ನೀಡಲಾಗಿದ್ದು, ಪುನೀತ್ ಸ್ಥಿತಿ ಗಂಭೀರವಾಗಿತ್ತು. ಐಸಿಯುವಿನಲ್ಲಿ ಮುಂದುವರಿದ ಚಿಕಿತ್ಸೆಯಿಂದ ಇದೀಗ ಅವರ ಆರೋಗ್ಯ ಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ. ಈ ಎಡವಟ್ಟಿಗೆ ಕಾರಣವಾದ ಲ್ಯಾಬ್ ಟೆಕ್ನಿಷಿಯನ್ ಉಮೇಶ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಮೇರೆಗೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
O+ ರಕ್ತದ ಗುಂಪಿನವರಿಗೆ A ರಕ್ತಕಣಗಳ ವಿರುದ್ಧ ಪ್ರತಿಕಾಯಗಳು (antibodies) ಇರುತ್ತವೆ. ಆದ್ದರಿಂದ A+ ರಕ್ತ ನೀಡಿದಾಗ ದೇಹದ ರೋಗನಿರೋಧಕ ವ್ಯವಸ್ಥೆ, ರೋಗಿಗೆ ನೀಡಿದ ರಕ್ತವನ್ನು ಪರಕೀಯವೆಂದು ಗುರುತಿಸಿ ತಕ್ಷಣ ದಾಳಿ ಮಾಡುತ್ತದೆ.ಇದರಿಂದ ರೋಗಿಯ ದೇಹದಲ್ಲಿ ಅಪಾಯಕಾರಿ ಪ್ರತಿಕ್ರಿಯೆ ಉಂಟಾಗಬಹುದು. ಇದರಿಂದಾಗಿ ಜ್ವರ, ಉಸಿರಾಟದ ತೊಂದರೆ, ಎದೆನೋವು, ರಕ್ತದೊತ್ತಡ ಕುಸಿತ, ಮೂತ್ರಪಿಂಡಗಳ ವೈಫಲ್ಯ ಹಾಗೂ ಕೆಲ ಸಂದರ್ಭಗಳಲ್ಲಿ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ.
ಹೀಗಾಗಿ ಪುನೀತ್ರೊಂದಿಗೆ ನಡೆದ ಘಟನೆಯ ಬಳಿಕ ಆಸ್ಪತ್ರೆ ಸಿಬ್ಬಂದಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ರೋಗಿಯ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪ್ರಕರಣದ ಬಗ್ಗೆ ಶೀಘ್ರದಲ್ಲೇ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಆಡಳಿತ ಭರವಸೆ ನೀಡಿದೆ.
ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 12:39 pm, Sat, 27 December 25
ಹಿಂದೂ ಧರ್ಮಗ್ರಂಥಗಳಲ್ಲಿ, ಶನಿ ದೇವರನ್ನು ಒಬ್ಬರ ಕರ್ಮಗಳಿಗೆ ಫಲ ಮತ್ತು ನ್ಯಾಯವನ್ನು ನೀಡುವ ದೇವರು ಎಂದು ಹೇಳಲಾಗುತ್ತದೆ. ಶನಿ ದೇವರು ಯಾರ ಮೇಲೆ ಆಶೀರ್ವಾದ ಮಾಡುತ್ತಾರೋ ಅವರು ಬಡವರಿಂದ ರಾಜರಾಗುತ್ತಾರೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಶನಿ ದೇವರು ಯಾರ ಮೇಲೆ ತನ್ನ ದುಷ್ಟ ದೃಷ್ಟಿಯನ್ನು ಬೀರುತ್ತಾರೋ ಅವರ ಜೀವನದಲ್ಲಿ ಬರೀ ಕಷ್ಟಗಳೇ ತುಂಬಿರುತ್ತವೆ. ಶನಿಯ ದುಷ್ಟ ದೃಷ್ಟಿ ಮಾನಸಿಕ ಒತ್ತಡ, ಕೆಲಸದಲ್ಲಿ ಅಡೆತಡೆಗಳು ಮತ್ತು ಹಠಾತ್ ನಷ್ಟಗಳಿಗೆ ಕಾರಣವಾಗುತ್ತದೆ.
ಹಿಂದೂ ಧರ್ಮಗ್ರಂಥಗಳಲ್ಲಿ, ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಈ ದಿನದಂದು ವಿಶೇಷ ಪ್ರಾರ್ಥನೆ ಮತ್ತು ಉಪವಾಸಗಳನ್ನು ಆಚರಿಸಲಾಗುತ್ತದೆ. ಶನಿ ದೇವರನ್ನು ಪೂಜಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಶನಿ ದೇವರ ದುಷ್ಟ ದೃಷ್ಟಿಯನ್ನು ದೂರವಿಡಲು, ಶನಿವಾರದಂದು ಪ್ರಾರ್ಥನೆಗಳ ಜೊತೆಗೆ ಕೆಲವು ವಿಶೇಷ ಕ್ರಮಗಳನ್ನು ಪಾಲಿಸುವುದು ಅಗತ್ಯ.
ಅರಳಿ ಮರದ ಪೂಜೆ:
ಹಿಂದೂ ಧರ್ಮದಲ್ಲಿ ಅಶ್ವತ್ಥ ಮರವನ್ನು ಅತ್ಯಂತ ಪೂಜ್ಯವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಶನಿವಾರ ಸೂರ್ಯೋದಯಕ್ಕೆ ಮೊದಲು ಅಶ್ವತ್ಥ ಮರವನ್ನು ಪೂಜಿಸುವುದರಿಂದ ಶನಿದೇವರು ಸಂತೋಷಪಡುತ್ತಾರೆ. ಶನಿವಾರದಂದು ಅಶ್ವತ್ಥ ಮರಕ್ಕೆ ನೀರು ಅರ್ಪಿಸಿ ಮತ್ತು ಎಣ್ಣೆ ದೀಪವನ್ನು ಬೆಳಗಿಸಿ. ಹಾಗೆ ಮಾಡುವುದರಿಂದ ಶನಿದೇವನ ಆಶೀರ್ವಾದ ಖಚಿತ.
ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ
ಶನಿವಾರದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡಿ. ಕಪ್ಪು ಎಳ್ಳು, ಕಪ್ಪು ಛತ್ರಿ, ಸಾಸಿವೆ ಎಣ್ಣೆ, ಕಪ್ಪು ಉದ್ದಿನ ಬೇಳೆ ಮತ್ತು ಪಾದರಕ್ಷೆಗಳನ್ನು ದಾನ ಮಾಡಿ. ಈ ವಸ್ತುಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ, ಆರ್ಥಿಕ ಯೋಗಕ್ಷೇಮ ಸುಧಾರಿಸುತ್ತದೆ ಮತ್ತು ಶನಿ ದೇವರ ಆಶೀರ್ವಾದ ಬೇಗನೆ ಸಿಗುತ್ತದೆ.
ಶನಿವಾರದಂದು ಶನಿ ಯಂತ್ರವನ್ನು ಪೂಜಿಸಬೇಕು. ಶನಿ ಯಂತ್ರವನ್ನು ಪೂಜಿಸುವುದರಿಂದ ಶನಿ ದೇವರ ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ. ಶನಿವಾರದಂದು ಮಾಂಸಾಹಾರ ಸೇವಿಸುವುದನ್ನು ತಪ್ಪಿಸಬೇಕು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ