Headlines

ಒಂದು ನಾಯಿಯಿಂದ ತಪ್ಪಿಸಿಕೊಳ್ಳಲು ಗೇಟ್ ಹಾರಿದವನಿಗೆ ಕಾದಿತ್ತು ಶಾಕ್! – Kannada News | Boy Jumps Gate To Escape from Stray Dog Chasing Him But shocked seeing 3 dogs inside watch video

ನವದೆಹಲಿ, ಫೆಬ್ರವರಿ 5: ಸೋಷಿಯಲ್ ಮೀಡಿಯಾದಲ್ಲಿ ದಿನವೂ ಅನೇಕ ವಿಡಿಯೋಗಳು, ರೀಲ್ಸ್​ಗಳು ವೈರಲ್ (Viral Video) ಆಗುತ್ತಲೇ ಇರುತ್ತವೆ. ಭಾರತದ ಕೆಲವು ಕಡೆ ಬೀದಿ ನಾಯಿಗಳ ಕಾಟ ಎಷ್ಟರ ಮಟ್ಟಿಗೆ ಇದೆ ಎಂದು ಹೊಸತಾಗಿ ಏನೂ ಹೇಳಬೇಕಾಗಿಲ್ಲ. ರಸ್ತೆಯಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಬೀದಿ ನಾಯಿ ಅಟ್ಟಿಸಿಕೊಂಡು ಬಂದಿತ್ತು. ಹೀಗಾಗಿ, ಆ ನಾಯಿಯಿಂದ ತನ್ನನ್ನು ಕಾಪಾಡಿಕೊಳ್ಳಲು ಬೇರೆ ದಾರಿ ಕಾಣದೆ ಆತ ಪಕ್ಕದಲ್ಲೇ ಇದ್ದ ಮನೆಯೊಂದರ ಗೇಟ್ ಹಾರಿ ಒಳಗೆ ಹೋಗಿದ್ದ. ಆದರೆ, ಆತನ ಅದೃಷ್ಟ ಕೆಟ್ಟಿತ್ತು. ಆ…

Read More

WPL 2026 Final: ಫೈನಲ್‌ನಲ್ಲಿ ಡೆಲ್ಲಿ ಮಣಿಸಿ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದ ಆರ್​ಸಿಬಿ – Kannada News | RCB Crowned WPL 2026 Champions! Thrilling Win Over Delhi Capitals in Vadodara Final

ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ 2026 ರ ಮಹಿಳಾ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ಗಳ ಬೃಹತ್ ರನ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಕೊನೆಯ ಓವರ್​ನಲ್ಲಿ ಗೆಲುವು ಸಾಧಿಸಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. Source link

Read More

WPL ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕ ಬಾರಿಸಿದ ಸ್ಮೃತಿ ಮಂಧಾನ – Kannada News | Smriti Mandhana’s Fastest WPL Fifty: RCB vs DC 2026 Final Highlights from Vadodara

ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ 2026 ರ ಮಹಿಳಾ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ಗಳ ಬೃಹತ್ ರನ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ ನಾಯಕಿ ಸ್ಮೃತಿ ಮಂಧಾನ ನಾಯಕತ್ವದ ಇನ್ನಿಂಗ್ಸ್ ಆಡುವ ಮೂಲಕ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್…

Read More

ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್​​ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – Kannada News | Congress Leader Rahil Sharif Caught With Hindu Married Woman in Chikkamagaluru, case Book Against 6 People

ಚಿಕ್ಕಮಗಳೂರು, (ಫೆಬ್ರವರಿ 05): ಚಿಕ್ಕಮಗಳೂರು (Chikkamagaluru) ನಗರದ ಗಾಂಧಿ ನಗರದಲ್ಲಿ ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್​​ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ ಸಿಕ್ಕಿದೆ. ಚಿಕ್ಕಮಗಳೂರು ಕಾಂಗ್ರೆಸ್ (Congress) ಮುಖಂಡ ರಾಹಿಲ್ ಷರೀಫ್, ಚಿಕ್ಕಮಗಳೂರು ನಗರದ ಗಾಂಧಿ ನಗರದ ಹಿಂದೂ ಮಹಿಳೆ ಜೊತೆ ಇರುವಾಗಲೇ ಸಿಕ್ಕಿಬಿದ್ದಿದ್ದು, ಮಹಿಳೆಯ ಪತಿ ಸ್ಥಳೀಯರ ಜೊತೆ ಸೇರಿಕೊಂಡು ರೆಡ್​ ಹ್ಯಾಂಡ್​​ ಆಗಿ ಹಿಡಿದು ರಾಹಿಲ್ ಷರೀಫನಿಗೆ ಥಳಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು,  ಯಾವಾಗ ಈ ವಿಡಿಯೋ ವೈರಲ್…

Read More

ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ಯಾರು? ಕೇಂದ್ರ ಸಚಿವರ ಭೇಟಿ ಬಳಿಕ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು – Kannada News | Bengaluru Metro Fare Hike: MP Tejaswi Surya spark on karnataka government

ಬೆಂಗಳೂರು, ಫೆಬ್ರವರಿ 05: ಏಕಾಏಕಿ ಮೆಟ್ರೋ ಟಿಕೆಟ್‌ ದರ ಹೆಚ್ಚಿಸಿ ಬಿಎಂಆರ್‌ಸಿಎಲ್‌ ಆದೇಶ ಹೊರಡಿಸಿದೆ. ಸೋಮವಾರದಿಂದ ದುಬಾರಿ ಸವಾರಿಗೆ ಸಜ್ಜಾಗಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ಮಾಡಿದ್ದಾರೆ. ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್​​ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಕೇವಲ 10 ತಿಂಗಳ ಹಿಂದೆಯೇ ಮೆಟ್ರೋ ದರವನ್ನು ಶೇ. 71ರಷ್ಟು ಹೆಚ್ಚಿಸಲಾಗಿತ್ತು. ಈ ಕಾರಣದಿಂದ ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ…

Read More

ಭಾರತ ಸೆಮೀಸ್ ಎದುರಾಳಿಯಾದ್ರೆ? ಪಾಕ್ ನಾಯಕ ನೀಡಿದ ಉತ್ತರವೇನು ನೋಡಿ – Kannada News | T20 World Cup 2026: Pakistan Boycotts India Match; Captain Agha Reveals Shocking Stance

2026 ರ ಟಿ20 ವಿಶ್ವಕಪ್‌ (T20 World Cup 2026) ಇನ್ನೇರಡು ದಿನಗಳಲ್ಲಿ ಆರಂಭವಾಗಲಿದೆ. ಆದಾಗ್ಯೂ ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದ ಪಂದ್ಯ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವೆ ಫೆಬ್ರವರಿ 15 ರಂದು ನಡೆಯಬೇಕಿತ್ತು. ಆದರೆ ಈ ಪಂದ್ಯ ರದ್ದಾಗಿದೆ. ಇದಕ್ಕೆ ಕಾರಣ ಪಾಕಿಸ್ತಾನ. ಟೀಂ ಇಂಡಿಯಾ ವಿರುದ್ಧದ ಈ ಪಂದ್ಯವನ್ನು ನಾವು ಬಹಿಷ್ಕರಿಸುತ್ತಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಹೇಳಿಕೆ ನೀಡಿದ್ದಾರೆ. ಇದರಿಂದ ಲೀಗ್ ಹಂತದಲ್ಲಿ ಉಭಯ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯ…

Read More

ಹಸಿವಿನಿಂದ ಅಳುತ್ತಿದ್ದ 5 ವರ್ಷದ ಮಗಳಿಗೆ ಹೆಂಡ ಕುಡಿಸಿ, ಕತ್ತು ಹಿಸುಕಿ ಕೊಂದ ಕುಡುಕ! – Kannada News | Punjab Drunk father Killed 5 Year Old Daughter After She Cried For Food

ಜಲಂಧರ್, ಫೆಬ್ರವರಿ 5: ಪಂಜಾಬ್‌ನ ಜಲಂಧರ್‌ನಲ್ಲಿ ತಂದೆಯೊಬ್ಬ ತನ್ನ ಐದು ವರ್ಷದ ಮಗಳು ಹಸಿವಿನಿಂದ ಅಳುತ್ತಿದ್ದ ಕಾರಣ ಆಕೆಯ ಬಾಯಿಗೆ ಆಲ್ಕೋಹಾಲ್ (Alcohol) ಹಾಕಿ, ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ಜಲಂಧರ್‌ನಲ್ಲಿ ವಾಸಿಸುತ್ತಿರುವ ಛತ್ತೀಸ್‌ಗಢ ಮೂಲದ ಆರೋಪಿ ಅರವಿಂದ್​​ನನ್ನು ಆತನ ನೆರೆಯ ಮನೆಯ ಹಿಮ್ಮತ್ ಕುಮಾರ್ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಅರವಿಂದ್ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ, ವಿಪರೀತ ಕುಡಿಯುತ್ತಿದ್ದ. 5 ವರ್ಷದ ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಅರವಿಂದ್ ತನ್ನ…

Read More

ಬಸ್ ಟಿಕೆಟ್ ದರ ಏರಿಕೆ ಆಗಿದ್ಯಾ? ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ ಕೆಎಸ್‌ಆರ್‌ಟಿಸಿ – Kannada News | KSRTC Clarifies No Bengaluru to Mysuru Bus Fare Hike

ಬೆಂಗಳೂರು, ಫೆಬ್ರವರಿ 05: ಪ್ರಯಾಣಿಕರ ವಿರೋಧದ ನಡುವೆಯೂ ನಮ್ಮ ಮೆಟ್ರೋ ಟಿಕೆಟ್‌ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಅಸ್ತು ಎಂದಿದೆ. ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಸದ್ಯ ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಿರುವಾಗ ಸರ್ಕಾರಿ ಬಸ್​​ಗಳ ಟಿಕೆಟ್ ದರ ಏರಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಸದ್ಯ ಈ ವಿಚಾರವಾಗಿ ಯಾವುದೇ ಟಿಕೆಟ್ ದರ ಏರಿಕೆ ಆಗಿಲ್ಲ ಎಂದು ಕೆಎಸ್ಆರ್​​ಟಿಸಿ ನಿಗಮ (KSRTC) ಸ್ಪಷ್ಟನೆ ನೀಡಿದೆ. ಪ್ರಕಟಣೆಯಲ್ಲಿ ಏನಿದೆ? ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣ…

Read More

ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಅಪ್ಪ; ಡಿಎನ್​ಎ ಪರೀಕ್ಷೆಯಲ್ಲಿ ಸತ್ಯ ಬಯಲು – Kannada News | Mumbai shcoking news; DNA test confirms father Raped and impregnated disabled daughter

ಮುಂಬೈ, ಫೆಬ್ರವರಿ 5: 9 ತಿಂಗಳ ತುಂಬು ಗರ್ಭಿಣಿಯಾದ (Pregnant) 20 ವರ್ಷದ ಯುವತಿ ಗರ್ಭಿಣಿಯಾಗಿದ್ದಳು. ಆದರೆ, ಆಕೆಗೆ ತನ್ನ ಮಗುವಿಗೆ ತಂದೆ ಯಾರೆಂದೇ ಗೊತ್ತಿರಲಿಲ್ಲ. ಏಕೆಂದರೆ, ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದಳು. ಹೀಗಾಗಿ, ತನ್ನ ಜೊತೆ ಯಾರು ಕೆಟ್ಟದಾಗಿ ವರ್ತಿಸಿದರು, ತನ್ನ ದೇಹದಲ್ಲಿ ಯಾವೆಲ್ಲ ಬದಲಾವಣೆಯಾಗುತ್ತಿದೆ, ತಾನು ತಾಯಿಯಾಗುತ್ತಿದ್ದೇನೆ ಎಂಬಿತ್ಯಾದಿ ಯಾವ ವಿಷಯವೂ ಆಕೆಗೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ, ಕಳೆದ 4 ತಿಂಗಳಿಂದ ಆಕೆಯ ಮೇಲೆ ಅತ್ಯಾಚಾರ ನಡೆಸಿದವನನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಲೇ ಇದ್ದರು. ಇದಕ್ಕೆ ಕೊನೆಯ ಆಯ್ಕೆಯೆಂಬಂತೆ…

Read More

ಐಪಿಎಲ್​ನಿಂದ ಹೊರಬಿದ್ದ ಮುಸ್ತಾಫಿಜುರ್​ಗೆ ಪಿಎಸ್​ಎಲ್​ಲ್ಲಿ ಬಂಪರ್ ಬೆಲೆ – Kannada News | Mustafizur Rahman: IPL Exit Controversy to PSL Mega Deal and Cricket Politics

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನು ಖಂಡಿಸಿ, ಬಿಸಿಸಿಐ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಿತ್ತು. ಆ ಬಳಿಕ ಕ್ರಿಕೆಟ್ ಲೋಕದಲ್ಲಿ ದೊಡ್ಡ ವಿವಾದವೊಂದು ಹುಟ್ಟಿಕೊಂಡಿತು. ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್​ನಿಂದ ತನ್ನ ತಂಡದ ಹೆಸರನ್ನು ಹಿಂತೆಗೆದುಕೊಂಡಿತು. ಇತ್ತ ಪಾಕಿಸ್ತಾನ, ಟೀಂ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿತ್ತು. Source link

Read More