Headlines

ಆಟೋ ಪ್ರಯಾಣಿಕರಿಗೆ ಬ್ಯಾಡ್​​ ನ್ಯೂಸ್​​: ಮೀಟರ್​ ದರ ಹೆಚ್ಚಳಕ್ಕೆ ಚಾಲಕ ಸಂಘಟನೆಗಳ ಮನವಿ – Kannada News | Bangalore Auto Fare Hike Looms: LPG Price Soars, Drivers Demand Rupees 50 Minimum

ಬೆಂಗಳೂರು, ಮೇ 07: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಆಟೋ ಎಲ್ಪಿಜಿ ದರ ನಿರಂತರವಾಗಿ ಏರಿಕೆ ಕಂಡಿದೆ. ಹೀಗಾಗಿ ಆಟೋ ಮೀಟರ್ ದರ ಏರಿಕೆ ಮಾಡುವಂತೆ ಆಗ್ರಹಿಸಿ ಆಟೋ ಚಾಲಕ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧಕ್ಕೂ ಮುನ್ನ ಒಂದು ಲೀಟರ್ ಆಟೋ ಎಲ್ಪಿಜಿ ದರ 56 ರೂ. ಇತ್ತು. ಬಳಿಕ ಅದು ಕಳೆದ ಒಂದು ವಾರದ ಹಿಂದೆ 90 ರೂ.ಗಳಿಗೆ ಏರಿತ್ತು. ಆದರೆ ಸದ್ಯ ಬೆಂಗಳೂರಲ್ಲಿ ಒಂದು ಲೀಟರ್ ಆಟೋ…

Read More

ಮದುವೆಗೆ ತೆರಳುತ್ತಿದ್ದಾಗ ಬಿರುಗಾಳಿಗೆ ಸಿಲುಕಿದ ಏಕನಾಥ್ ಶಿಂಧೆ ಅವರ ಹೆಲಿಕಾಪ್ಟರ್ – Kannada News | Maharashtra DCM Eknath Shindes helicopter caught in thunderstorm Forced To Turn Back

ಮುಂಬೈ, ಮೇ 7: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬಿರುಗಾಳಿಗೆ ಸಿಲುಕಿದೆ. ಮುಂಬೈನಲ್ಲಿ ದಿಢೀರ್ ಬಿರುಗಾಳಿ ಎಚ್ಚರಿಕೆಯ ನಂತರ ಹೆಲಿಕಾಪ್ಟರ್ ಹಿಂದಕ್ಕೆ ತಿರುಗಬೇಕಾಯಿತು. ಆದರೆ, ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಹೆಲಿಕಾಪ್ಟರ್​​ನ ಸುರಕ್ಷಿತ ಲ್ಯಾಂಡಿಂಗ್ ನಂತರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧಿಕೃತ ನಿವಾಸಕ್ಕೆ ತೆರಳಿದರು. ಥಾಣೆ ಗ್ರಾಮೀಣ ಪ್ರದೇಶದಲ್ಲಿ ಹಠಾತ್ ಬಿರುಗಾಳಿಯಿಂದಾಗಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೆಲಿಕಾಪ್ಟರ್ ಮಾರ್ಗ ಬದಲಾಯಿಸಲ್ಪಟ್ಟಿತು. ಮಹಾಲಕ್ಷ್ಮಿ ರೇಸ್‌ಕೋರ್ಸ್ ಹೆಲಿಪ್ಯಾಡ್‌ನಿಂದ ಏಕನಾಥ್ ಶಿಂಧೆ ಮಧ್ಯಾಹ್ನ 3.30ರ…

Read More

ಟಾಟಾ ಟ್ರಸ್ಟ್​ಗಳ ಮಂಡಳಿ ಸಭೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ – Kannada News | Tata Trusts Legal Battle: Bombay HC Rejects Plea to Halt Board Meetings

ಮುಂಬೈ, ಮೇ 7: ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಟ್ರಸ್ಟ್‌ನ ಆಡಳಿತ ಮಂಡಳಿಯ (Tata Trust Board) ನೇಮಕಾತಿ ಮತ್ತು ಅಧಿಕಾರಕ್ಕೆ ಸಂಬಂಧಿಸಿದಂತೆ ಕಾನೂನು ಸಮರ ಶುರುವಾಗಿದೆ. ಟ್ರಸ್ಟ್‌ನ ಕಾರ್ಯವೈಖರಿಯಲ್ಲಿನ ಕೆಲವು ಬದಲಾವಣೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಡೆಸುತ್ತಿದೆ. ಇದೇ ವೇಳೆ, ಟಾಟಾ ಟ್ರಸ್ಟ್ಸ್​ನ ಅಡಿಯಲ್ಲಿರುವ ಎರಡು ಪ್ರಮುಖ ಟ್ರಸ್ಟ್​ಗಳ ಮಂಡಳಿ ಸಭೆ ಮೇ 8ರಂದು ನಡೆಯಲಿದ್ದು, ಅದಕ್ಕೆ ತಡೆ ನೀಡಬೇಕೆಂದು ಪಿಐಎಲ್ ಮೂಲಕ ಮಾಡಲಾಗಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್…

Read More

ಕರ್ನಾಟಕ ಹವಾಮಾನ: 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಾಳೆ ಮಳೆ ಸಾಧ್ಯತೆ; ಹೇಗಿರಲಿದೆ ಬೆಂಗಳೂರು ವೆದರ್​​? – Kannada News | Karnataka Weather Update: Light to Moderate Rain Likely in Over 18 Districts on May 8

ಬೆಂಗಳೂರು, ಮೇ 07: ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಕೆಲವೆಡೆ ತೀವ್ರ ಬಿಸಿಯ ಹವಾಮಾನದ ನಡುವೆಯೂ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ನಾಳೆ ಸಣ್ಣ ಅಥವಾ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಭಾಗದ ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್​​, ವಿಜಯಪುರ ಮತ್ತು ಬಳ್ಳಾರಿಯಲ್ಲಿ ವಿಪರೀತ ಉಷ್ಣ ವಾತಾವರಣ ಇರಲಿದ್ದು, ಸುಮಾರು 42 ಡಿಗ್ರಿ ಸೆಲ್ಸಿಯಸ್​​ ವರೆಗೆ ತಾಪಮಾನ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್ಲೆಲ್ಲಿ ಮಳೆ? #ಮಳೆ #ಮುನ್ನೆಚ್ಚರಿಕೆ…

Read More

LSG vs RCB IPL 2026 Live Score: ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ – Kannada News | Lucknow Super Giants vs Royal Challengers Bengaluru B IPL 2026 Live Cricket Score LSG vs RCB Match on 7th May latest news in Kannada

07 May 2026 07:05 PM (IST) LSG vs RCB IPL 2026: ಆರ್​ಸಿಬಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಂ. ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಮಂಗೇಶ್ ಯಾದವ್, ವಿಕಿ ಓಸ್ಟ್ವಾಲ್ ಮತ್ತು ವೆಂಕಟೇಶ್ ಅಯ್ಯರ್. 07 May 2026 07:02 PM (IST) LSG vs…

Read More

ಪರಿಸರಸ್ನೇಹಿ ಯೋಜನೆಗಳಿಗೆ ಆಪಲ್ ಭರ್ಜರಿ ಹೂಡಿಕೆ; ಸ್ವಚ್ಛ ಇಂಧನ, ಪ್ಲಾಸ್ಟಿಕ್ ನಿವಾರಣೆ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಉಪಕ್ರಮಗಳ ಘೋಷಣೆ – Kannada News | Apple announces series of initiatives for 2030 carbon neutral goal, including Rs 100 cr renewable energy project

ನವದೆಹಲಿ, ಮೇ 7: ವಿಶ್ವದ ದೈತ್ಯ ತಂತ್ರಜ್ಞಾನ ಸಂಸ್ಥೆಯಾದ ಆಪಲ್ (Apple Inc), ಭಾರತದಲ್ಲಿ ಪರಿಸರ ಸ್ನೇಹಿ ಇಂಧನಕ್ಕಾಗಿ ದೊಡ್ಡ ಹೆಜ್ಜೆಯನ್ನಿಟ್ಟಿದೆ. ತನ್ನ ‘2030 ಕಾರ್ಬನ್ ನ್ಯೂಟ್ರಲ್’ (2030 Carbon Neutral) ಗುರಿಯನ್ನು ತಲುಪುವ ನಿಟ್ಟಿನಲ್ಲಿ ಭಾರತದ ಕ್ಲೀನ್ ಎನರ್ಜಿ (Clean Energy) ವಲಯದಲ್ಲಿ 100 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಆಪಲ್ ಘೋಷಿಸಿದೆ. ಇದೂ ಒಳಗೊಂಡಂತೆ ವಿವಿಧ ಪರಿಸರ ಉಪಕ್ರಮಗಳನ್ನು ಆ್ಯಪಲ್ ಕಂಪನಿ ಕೈಗೊಳ್ಳುತ್ತಿದೆ. 2030ರ ವೇಳೆಗೆ ತನ್ನ ಸಂಪೂರ್ಣ ಪೂರೈಕೆ ಸರಪಳಿ (Supply Chain)…

Read More

ಚಿಕ್ಕ ವಯಸ್ಸಿನಲ್ಲೇ ಶಾಸಕರಾದ ಸಮರ್ಥ್​ ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಎಂಟ್ರಿ – Kannada News | Davanagere South Newly Elected Congress MLA Samarth shamanur bows down Steps of vidhana soudha

ಬೆಂಗಳೂರು, (ಮೇ 07): ಅಜ್ಜ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ (Davanagere South) ವಿಧಾಸಭೆಗೆ ನಡೆದ ಉಪಚುನಾವಣೆಯಲ್ಲಿ ಮೊಮ್ಮಗ ಸಮರ್ಥ ಶಾಮನೂರು (Samarth Shamanur) ಗೆದ್ದು ಬೀಗಿದ್ದು, ಇದರೊಂದಿಗೆ ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಇನ್ನು ತಂದೆ ಮಲ್ಲಿಕಾರ್ಜುನ ರೀತಿ ಪುತ್ರ ಸಮರ್ಥ ಸಹ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್​​ಎಸ್​​ ಮಲ್ಲಿಕಾರ್ಜುನ ಅವರು 28ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು….

Read More

ಕಾರವಾರ: 140 ಟನ್ ತೂಕದ ವಿಕಿರಣ ರಕ್ಷಾ ಕವಚ ತರುತ್ತಿದ್ದ ವಾಹನ ಪಲ್ಟಿ; ವಿಡಿಯೋ ನೋಡಿ – Kannada News | Karwar: Truck Carrying 140 Tons of Radiation Protection Equipment Overturns; watch video

ಕಾರವಾರ, ಮೇ 07: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಟುಗಾ ಗ್ರಾಮದ ಬಳಿ ಕೈಗಾ ಅಣುಸ್ಥಾವರಕ್ಕೆ ಸಂಬಂಧಿಸಿದ ಸಲಕರಣೆ ಹೊತ್ತಿದ್ದ ಭಾರೀ ವಾಹನವೊಂದು ಪಲ್ಟಿಯಾಗಿದೆ. ಕೈಗಾ ಅಣುಸ್ಥಾವರದ 5 ಮತ್ತು 6ನೇ ಘಟಕಗಳಿಗಾಗಿ ಸೂರತ್‌ನಿಂದ ತರಲಾಗುತ್ತಿದ್ದ ಸುಮಾರು 140 ಟನ್ ತೂಕದ ವಿಕಿರಣ ರಕ್ಷಾ ಕವಚ ಹೊತ್ತಿದ್ದ ವಾಹನವೇ ಅಪಘಾತಕ್ಕೆ ಈಡಾಗಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಕೈಗಾ ಅಣುಸ್ಥಾವರದ ವಿಸ್ತರಣಾ ಕಾಮಗಾರಿಗಾಗಿ ಅತ್ಯಗತ್ಯವಾಗಿದ್ದ ಈ ವಿಕಿರಣ ರಕ್ಷಾ ಕವಚವನ್ನು ಸೂರತ್‌ನಿಂದ ರಸ್ತೆಯ ಮೂಲಕ ಅತ್ಯಂತ…

Read More

ಉಡುಪಿಯಲ್ಲಿ ಅಬ್ಬರಿಸಿದ ವರುಣ: ಮಣಿಪಾಲ ರಸ್ತೆಯಲ್ಲಿ ನೀರು ನಿಂತು ಸವಾರರ ಪರದಾಟ – Kannada News | Heavy Rains Lash Udupi After Heatwave; Waterlogging on Manipal Road Disrupts Commuters

ಉಡುಪಿ, ಮೇ 07: ಬಿಸಿಲಿನ ತಾಪಕ್ಕೆ ತೀವ್ರವಾಗಿ ತತ್ತರಿಸಿದ್ದ ಪೊಡವಿಗೊಡೆಯನ ನಾಡು ಉಡುಪಿಯ ಜನಕ್ಕೆ ವರುಣ ತಂಪೆರೆದಿದ್ದಾನೆ. ಮುಂಜಾನೆಯಿಂದಲೆ ಜಿಲ್ಲೆಯ ಹಲವು ಕಡೆ ಮಳೆಯಾಗಿದ್ದು, ಏಕಾಏಕಿ ಸುರಿದ ಮಳೆಗೆ ವಾಹನ ಸವಾರರು ಪರದಾಟ ನಡೆಸಿರುವ ಪ್ರಸಂಗ ನಡೆದಿದೆ. ಉಡುಪಿ ನಗರದಲ್ಲಿಯೂ ಉತ್ತಮ ಮಳೆಯಾದ ಪರಿಣಾಮ ಮಣಿಪಾಲ ರಸ್ತೆಯ ಕೆಲವೆಡೆ ರಸ್ತೆಯಲ್ಲಿಯೇ ಹಳ್ಳದ ರೀತಿ ನೀರು ಹರಿದಿರುವ ದೃಶ್ಯಗಳು ಕಂಡುಬಂದಿವೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

ಹೆಲ್ದಿ ಅಂತ ಸೇವಿಸುವ ಆಹಾರ ನಿಜವಾಗಿಯೂ ಆರೋಗ್ಯ ಕಾಪಾಡುತ್ತಾ? ಯಾವ ಉತ್ಪನ್ನ ಹೆಚ್ಚು ಅಪಾಯಕಾರಿ? – Kannada News | Hidden Sugar and Additives: What Market ‘Health’ Foods Don’t Tell You

ಇತ್ತೀಚಿನ ದಿನಗಳಲ್ಲಿ ಹೆಲ್ದಿ (Healthy), ಲೋ ಫ್ಯಾಟ್, ಶುಗರ ಫ್ರೀ (Sugar free) ಎಂಬ ಹೆಸರಿನಲ್ಲಿ ಹಲವಾರು ಆಹಾರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಜನರು ಇವುಗಳನ್ನು ನಂಬಿಕೊಂಡು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ ಅವುಗಳ ಸೇವನೆ ನಿಜವಾಗಿಯೂ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ, ಇವು ಎಷ್ಟು ಆರೋಗ್ಯಕರ ಎಂಬುದನ್ನು ಗಮನಿಸುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಈ ಎಲ್ಲಾ ಉತ್ಪನ್ನಗಳು ನಿಜವಾಗಿಯೂ ಆರೋಗ್ಯಕರವಾಗಿರುವುದಿಲ್ಲ. ಹಾಗಾದರೆ ಇದನ್ನು ಕಂಡುಹಿಡಿಯುವುದು ಹೇಗೆ, ಯಾವ ಉತ್ಪನ್ನ…

Read More