ಪ್ರವಾಹದಂತೆ ಉಕ್ಕುತ್ತಿದೆ ಇಲಾನ್ ಮಸ್ಕ್ ಶ್ರೀಮಂತಿಕೆ; 800 ಬಿಲಿಯನ್ ಡಾಲರ್ ಆಸ್ತಿವಂತನೆನಿಸಿದ ಮೊದಲ ಮನುಷ್ಯ – Kannada News | Elon Musk becomes first person in the world to have assets valued 800 billion USD
ನವದೆಹಲಿ, ಫೆಬ್ರುವರಿ 5: ಟೆಸ್ಲಾ, ಸ್ಪೇಸ್ಎಕ್ಸ್, ನ್ಯೂರಾಲಿಂಕ್ ಇತ್ಯಾದಿ ಸಂಸ್ಥೆಗಳ ಒಡೆಯರಾದ ಇಲಾನ್ ಮಸ್ಕ್ (Elon Musk) ಅವರ ವಿಶ್ವದ ನಂಬರ್ ಒನ್ ಶ್ರೀಮಂತನೆಂಬ ಬಿರುದು ಅಬಾಧಿತವಾಗಿ ಮುಂದುವರಿಯುವುದು ಖಚಿತವಾಗಿದೆ. ಅವರ ಆಸ್ತಿ ಮೌಲ್ಯ 800 ಬಿಲಿಯನ್ ಡಾಲರ್ ದಾಟಿದೆ. 800 ಬಿಲಿಯನ್ ಎಂದರೆ 72 ಲಕ್ಷ ಕೋಟಿ ರೂ. ಈ 800 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಜಗತ್ತಿನ ಮೊದಲ ವ್ಯಕ್ತಿ ಇಲಾನ್ ಮಸ್ಕ್. ಅವರದ್ದೇ ಮಾಲಕತ್ವದ ಸಂಸ್ಥೆಗಳಾದ ಸ್ಪೇಸ್ ಎಕ್ಸ್ ಮತ್ತು ಎಕ್ಸ್ಎಐ ವಿಲೀನ…