Headlines

ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ಶಂಕೆ: ದೇಗುಲದ ಸಿಬ್ಬಂದಿ ವಿರುದ್ಧವೇ ದೂರು ದಾಖಲು – Kannada News

ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ಶಂಕೆImage Credit source: Tv9 Kannada ಮಂಡ್ಯ, ಜೂನ್​​ 10: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ. ದೇಗುಲದ ಹುಂಡಿಯಲ್ಲಿದ್ದ ಚಿನ್ನ, ಬೆಳ್ಳಿ ಸೇರಿದಂತೆ ನಗದು ಕಳುವಾಗಿರುವ ಸಂಬಂಧ ದೇವಸ್ಥಾನದ ಇಒ ಶೀಲಾ ಮೇಲುಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದರನ್ವಯ ದೇವಸ್ಥಾನದ ಪಾರುಪತ್ತೆಗಾರ ಶ್ರೀಧರ್, ಅರ್ಚಕ ನಾರಾಯಣ ಭಟ್ಟ, ಪರಿಚಾರಕ ತಿರುವೆಂಗಡಚಾರ್ , ಕಾವಲುಗಾರರಾದ ಗಂಗಾಧರ್ ಮತ್ತು ಬಸವಾರಾಜ್​​ ವಿರುದ್ದ ಪ್ರಕರಣ ದಾಖಲಾಗಿದೆ. ರಹಸ್ಯ ಕ್ಯಾಮರಾವನ್ನೂ…

Read More

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿಯಾದ ಡಿಕೆ ಶಿವಕುಮಾರ್ – Kannada News

ದೆಹಲಿ, ಜೂ.10: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ದೆಹಲಿಯ ‘10 ಜನಪಥ್’ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಈ ದೆಹಲಿ ಭೇಟಿಯ ವೇಳೆ ಕೇವಲ ಸೋನಿಯಾ ಗಾಂಧಿ ಮಾತ್ರವಲ್ಲದೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ…

Read More

ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚಿನ ಲಾಭ ನೀಡುತ್ತಾ ಇಪಿಎಫ್? ಪಿಂಚಣಿ ಸ್ಕೀಮ್​ನಲ್ಲಿ ಹೆಚ್ಚಿನ ಜನರಿಗೆ ಗೊತ್ತಿಲ್ಲದ ಸಂಗತಿಯೊಂದಿದೆ – Kannada News

ಇಪಿಎಫ್ (EPF) ಎಂಬುದು ಉದ್ಯೋಗಿಗಳ ನಿವೃತ್ತಿ ಅಥವಾ ಭವಿಷ್ಯದ ಕಾಲದ ಸುರಕ್ಷತೆಗೆಂದು ರೂಪಿಸಲಾಗಿದೆ. ಇದರಲ್ಲಿ ಸಾಮಾನ್ಯ ಎಫ್​ಡಿಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಸರ್ಕಾರ ಒದಗಿಸುತ್ತದೆ. ಆದರೆ, ಇಪಿಎಫ್​ನಲ್ಲಿ ವಾರ್ಷಿಕವಾಗಿ ಶೇ. 8.25 ಮಾತ್ರವೇ ಬಡ್ಡಿ ಸಿಗುತ್ತದೆ. ಮ್ಯೂಚುವಲ್ ಫಂಡ್​ಗಳಲ್ಲಿ ಹೆಚ್ಚಿನ ರಿಟರ್ನ್ ಸಿಗುತ್ತದೆ. ಹೀಗಾಗಿ, ಇಪಿಎಫ್​ನಿಂದ ಹಣ ತೆಗೆದು ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ ಎಂದು ಕೆಲ ಹಣಕಾಸು ಪರಿಣಿತರು ಸಲಹೆ ನೀಡುವುದುಂಟು. ಆದರೆ, ಇಪಿಎಫ್​ನ ಉದ್ದೇಶ ಬೇರೆ, ಮ್ಯೂಚುವಲ್ ಫಂಡ್​ನ ಉದ್ದೇಶ ಬೇರೆ. ಎರಡೂ ಬೇರೆ ಬೇರೆ…

Read More

ಪಿಒಕೆಯಲ್ಲಿ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಪತನ; ಅಧಿಕಾರಿಗಳು ಸೇರಿದಂತೆ ಎಲ್ಲ ಸೈನಿಕರೂ ಸಜೀವದಹನ – Kannada News

ಇಸ್ಲಮಾಬಾದ್, ಜೂನ್ 10: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪಾಕಿಸ್ತಾನ ಸೇನೆಗೆ ಸೇರಿದ ಯುದ್ಧ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ. ಈ ದುರಂತದಲ್ಲಿ ಅದರಲ್ಲಿದ್ದ ಎಲ್ಲಾ ಸೈನಿಕರು ದುರ್ಮರಣಕ್ಕೀಡಾಗಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಆಯಕಟ್ಟಿನ ಪ್ರದೇಶವೊಂದರಲ್ಲಿ ಪಾಕಿಸ್ತಾನ ಸೇನೆಗೆ ಸೇರಿದ ಹೆಲಿಕಾಪ್ಟರ್ ಭೀಕರವಾಗಿ ಪತನಗೊಂಡಿದೆ. ಹೆಲಿಕಾಪ್ಟರ್ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿದ್ದು, ಬೆಂಕಿ ಹೊತ್ತಿಕೊಂಡ ಪರಿಣಾಮ ಅದರಲ್ಲಿದ್ದ ಉನ್ನತ ಮಿಲಿಟರಿ ಅಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಸೇನೆಯ…

Read More

ಚೊಚ್ಚಲ ಟೆಸ್ಟ್​ನಲ್ಲಿ ಮಿಂಚಿ ವಿದೇಶಿ ತಂಡವನ್ನು ಸೇರಿಕೊಂಡ ಮಾನವ್ ಸುತಾರ್

ಅಫ್ಘಾನಿಸ್ತಾನ ವಿರುದ್ಧದ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ತಮ್ಮ ಮಾಂತ್ರಿಕ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಈಗ ಇಂಗ್ಲಿಷ್ ಪಿಚ್‌ಗಳಲ್ಲಿ ತಮ್ಮ ಮ್ಯಾಜಿಕ್ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಈ 23 ವರ್ಷದ ಎಡಗೈ ಸ್ಪಿನ್ನರ್ ಇಂಗ್ಲೆಂಡ್‌ನ ಪ್ರಸಿದ್ಧ ಕೌಂಟಿ ಕ್ಲಬ್ 'ವಾರ್ವಿಕ್‌ಷೈರ್' ಪರ ಕೌಂಟಿ ಚಾಂಪಿಯನ್‌ಶಿಪ್‌ನ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ (PC-BCCI). ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುತ್ತಿರುವ ಮಾನವ್ ಸುತಾರ್ ಇತ್ತೀಚೆಗೆ, ನ್ಯೂ ಚಂಡೀಗಢದಲ್ಲಿ ನಡೆದ ಏಕೈಕ ಟೆಸ್ಟ್…

Read More

ಚೊಚ್ಚಲ ಟೆಸ್ಟ್​ನಲ್ಲಿ ಮಿಂಚಿ ವಿದೇಶಿ ತಂಡವನ್ನು ಸೇರಿಕೊಂಡ ಮಾನವ್ ಸುತಾರ್

ಅಫ್ಘಾನಿಸ್ತಾನ ವಿರುದ್ಧದ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ತಮ್ಮ ಮಾಂತ್ರಿಕ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಈಗ ಇಂಗ್ಲಿಷ್ ಪಿಚ್‌ಗಳಲ್ಲಿ ತಮ್ಮ ಮ್ಯಾಜಿಕ್ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಈ 23 ವರ್ಷದ ಎಡಗೈ ಸ್ಪಿನ್ನರ್ ಇಂಗ್ಲೆಂಡ್‌ನ ಪ್ರಸಿದ್ಧ ಕೌಂಟಿ ಕ್ಲಬ್ 'ವಾರ್ವಿಕ್‌ಷೈರ್' ಪರ ಕೌಂಟಿ ಚಾಂಪಿಯನ್‌ಶಿಪ್‌ನ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ (PC-BCCI). ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುತ್ತಿರುವ ಮಾನವ್ ಸುತಾರ್ ಇತ್ತೀಚೆಗೆ, ನ್ಯೂ ಚಂಡೀಗಢದಲ್ಲಿ ನಡೆದ ಏಕೈಕ ಟೆಸ್ಟ್…

Read More

36 ಸಾವಿರ ಕೋಟಿ ರೂ. ಲೂಟಿ ಆರೋಪ: ರಾಜ್ಯಪಾಲರಾಯ್ತು ಈಗ ಲೋಕಾಯುಕ್ತಕ್ಕೂ ಬಿಜೆಪಿ ದೂರು

ಬೆಂಗಳೂರು, (ಜೂನ್ 10): ಬೆಂಗಳೂರಿನ ಕಸದ ಟೆಂಡರ್​​​ನಲ್ಲಿ ಅಕ್ರಮವೆಸಗಲಾಗಿದೆ ಎಂದು ಆರೋಪಿಸಿ ಕರ್ನಾಟಕ ಬಿಜೆಪಿ ಆರೋಪ ಮಾಡಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯಪಾಲರಿಗೆ ದೂರು ನೀಡಿದ್ದು, ಸಿಬಿಐ ತನಿಗೆ ಮನವಿ ಮಾಡಿದೆ. ಇದರ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ಲೋಕಾಯುಕ್ತಕ್ಕೂ ದೂರು ನೀಡಿದೆ.  ​​ 36 ಸಾವಿರ ಕೋಟಿ ರೂಪಾಯಿಯ ಬೆಂಗಳೂರು ಕಸದ ಟೆಂಡರ್ ನಲ್ಲಿ ಬರೋಬ್ಬರಿ 10 ಸಾವಿರ ಕೋಟಿ ರೂ. ಕಿಕ್‌ಬ್ಯಾಕ್ ಪಡೆಯಲಾಗಿದೆ…

Read More

ಪವನ್​ ಕಲ್ಯಾಣ್​​ಗೆ ಇಷ್ಟವಾದ ಎರಡು ಹಿಂದಿ ಸಿನಿಮಾ ಇವು – Kannada News

ಪವನ್ ಕಲ್ಯಾಣ್ (Pawan Kalyan), ಸ್ಟಾರ್ ನಟರಾಗಿರುವ ಜೊತೆಗೆ ಆಂಧ್ರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ ಸಹ ಹೌದು. ಹಲವು ಪ್ರಮುಖ ಖಾತೆಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಇತ್ತೀಚೆಗೆ ನೆರೆ ತೆಲುಗು ರಾಜ್ಯವಾದ ತೆಲಂಗಾಣ ಸರ್ಕಾರ ಹಾಗೂ ಪವನ್ ಕಲ್ಯಾಣ್ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಏರ್ಪಟ್ಟಿವೆ. ಇದೀಗ ಡಿಸಿಎಂ ಆದ ಬಳಿಕ ಪವನ್ ಕಲ್ಯಾಣ್ ಅವರು ಮೊದಲ ಬಾರಿಗೆ ಪಾಡ್​​ಕಾಸ್ಟ್ ಒಂದರಲ್ಲಿ ಭಾಗಿ ಆಗಿದ್ದಾರೆ. ಎಎನ್​​ಐ ನಡೆಸಿದ ಪಾಡ್​​ಕಾಸ್ಟ್​​ನಲ್ಲಿ ಭಾಗವಹಿಸಿದ್ದ ಪವನ್ ಕಲ್ಯಾಣ್, ತಮ್ಮಿಷ್ಟದ ಎರಡು ಹಿಂದಿ ಸಿನಿಮಾಗಳನ್ನು…

Read More

ಜೂನ್​​ 12ರಂದು ಕೊಲ್ಲೂರಿಗೆ ತಮಿಳುನಾಡು ಸಿಎಂ ಭೇಟಿ: ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಲಿರುವ ವಿಜಯ್​​

ಉಡುಪಿ, ಜೂನ್​​ 10: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಜೂನ್​​ 12 (ಶುಕ್ರವಾರ) ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಕ್ಷೇತ್ರಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಶುಕ್ರವಾರ ಮಧ್ಯಾಹ್ನ ಉಡುಪಿಗೆ ಆಗಮಿಸಲಿರುವ ವಿಜಯ್ ಅವರು, ಮಧ್ಯಾಹ್ನ 3 ಗಂಟೆಗೆ ಬೈಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತಲುಪಲಿದ್ದಾರೆ. ದೇವಿಯ ದರ್ಶನ ಮತ್ತು ಪೂಜಾ ಕೈಂಕರ್ಯಗಳನ್ನು ಪೂರೈಸಿದ ನಂತರ, ಅಂದೇ ಸಂಜೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ವಾಪಸಾಗಲಿದ್ದಾರೆ. ಮತ್ತಷ್ಟು ವಿಡಿಯೋ…

Read More

ಕಾಂಗ್ರೆಸ್ ಜೊತೆ ವಿಲೀನವಾಗುತ್ತಾ ಟಿಎಂಸಿ? ಮಮತಾ ಬ್ಯಾನರ್ಜಿಗೆ ದೊಡ್ಡ ಹುದ್ದೆಯ ಆಫರ್

ನವದೆಹಲಿ, ಜೂನ್ 10: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ನಡುವಿನ ಬಂಡಾಯದಿಂದ ಮಮತಾ ಬ್ಯಾನರ್ಜಿ (Mamata Banerjee) ಪಕ್ಷವನ್ನು ಉಳಿಸಿಕೊಳ್ಳುವುದು ಹೇಗೆಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರದಿಂದ ದೂರ ಸರಿದಾಯಿತು, ಇದೀಗ ಪಕ್ಷವೂ ಕೈ ತಪ್ಪಿಹೋಗುತ್ತದೆಯೇ? ಎಂಬ ಆತಂಕದಲ್ಲಿ ದೀದಿ ಇದ್ದಾರೆ. ಇದರ ನಡುವೆ ದೆಹಲಿಯಲ್ಲಿ ‘ಕೈ’ ನಾಯಕರ ಜೊತೆ ಟಿಎಂಸಿ ನಾಯಕರ ಚರ್ಚೆ ನಡೆದಿದ್ದು, ನಿನ್ನೆ ಸೋನಿಯಾ ಗಾಂಧಿಯನ್ನು ಮಮತಾ ಬ್ಯಾನರ್ಜಿ ಭೇಟಿಯಾಗಿದ್ದರು. ಇಂದು ರಾಹುಲ್ ಗಾಂಧಿಯನ್ನು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಭೇಟಿಯಾಗಿದ್ದಾರೆ. ಈ ವೇಳೆ…

Read More