Category Archives: Blog

Your blog category

Video: ಇದೇನಿದು ವಿಚಿತ್ರ, ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ, ನಡೆದಿದ್ದೇನು?

ಗಾಜಿಯಾಬಾದ್, ಡಿಸೆಂಬರ್ 22: ಇದೇನಿದು ವಿಚಿತ್ರ, ಸಾಮಾನ್ಯವಾಗಿ ಯಾವುದೇ ಹುಡುಗಿಗೆ ಪ್ರೇಮ ನಿವೇದನೆ ಮಾಡುವಾಗ ಹುಡುಗರು ಉಂಗುರವನ್ನು ಹಿಡಿದು ಹೋಗುವುದನ್ನು ಕಂಡಿದ್ದೇವೆ. ಆದರೆ ಆತ ಸಿಂಧೂರ ಹಿಡಿದುಹೋಗಿದ್ದ. ಉತ್ತರ ಪ್ರದೇಶದ ಗಾಜಿಯಾಬಾದಿನಲ್ಲಿರುವ ಮಾಲ್​ನಲ್ಲಿ ಯುವಕ ಯುವತಿಯ ಎದುರು ಮಂಡಿಯೂರಿ ಕುಳಿತೇ ಬಿಟ್ಟ, ಆಕೆಯೂ ಪ್ರೀತಿಗೆ ಓಕೆ ಎಂದು ಉಂಗುರ ತೊಡಿಸುತ್ತಾನೆ ಎಂದು ಕೈ ಮುಂದೆ ಮಾಡಿದರೆ. ಆದರೆ ಸಿಂಧೂರವನ್ನು ಹಚ್ಚಿ ತಾಳಿ ಕಟ್ಟಿಯೇ ಬಿಟ್ಟ. ಆಕೆ ನೋಡ ನೋಡುತ್ತಿದ್ದಂತೆ ಮದುವೆಯೇ ನಡೆದುಹೋಗಿದೆ. ಆಕೆಗೆ ಇದು ಕನಸಾ ಅಥವಾ ನನಸೋ ಎಂಬ ವಾಸ್ತವಕ್ಕೆ ಬರುವ ಮುನ್ನವೇ ಎಲ್ಲ ನಡೆದು ಹೋಗಿತ್ತು.ಪಕ್ಕದಲ್ಲಿ ನಿಂತಿದ್ದ ಹಲವಾರು ಜನರು ತಮ್ಮ ಫೋನ್‌ಗಳಲ್ಲಿ ಈ ಕ್ಷಣವನ್ನು ರೆಕಾರ್ಡ್ ಮಾಡಿದ್ದಾರೆ. ಸಿಂಧೂರವನ್ನು ಹಚ್ಚಿದ ನಂತರ, ಇಬ್ಬರೂ ಪರಸ್ಪರ ಅಪ್ಪಿಕೊಳ್ಳುತ್ತಾರೆ, ಜನರು ಜೋರಾಗಿ ಚಪ್ಪಾಳೆ ತಟ್ಟುತ್ತಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್ – Kannada News | Bengaluru Foxconn iPhone unit’s fastest hiring, Indian IT job recruitment rises

ಬೆಂಗಳೂರು, ಡಿಸೆಂಬರ್ 22: ದೇವನಹಳ್ಳಿ ಸಮೀಪ ಫಾಕ್ಸ್​ಕಾನ್ ಸಂಸ್ಥೆ ನಿರ್ಮಿಸಿರುವ ಐಫೋನ್ ಫ್ಯಾಕ್ಟರಿಯಲ್ಲಿ (Foxconn’s iPhone assembly unit) ಭಾರೀ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ. ವರದಿಗಳ ಪ್ರಕಾರ, ಕೇವಲ ಎಂಟು ತಿಂಗಳಲ್ಲಿ ಇಲ್ಲಿಗೆ ಬರೋಬ್ಬರಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಯಾವುದೇ ಸಂಸ್ಥೆಯು, ಅಥವಾ ಯಾವುದೇ ಫ್ಯಾಕ್ಟರಿಯೂ ಇಷ್ಟು ವೇಗದಲ್ಲಿ ಇಷ್ಟು ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಂಡಿದ್ದೇ ಇಲ್ಲ.

ಐಫೋನ್ ಫ್ಯಾಕ್ಟರಿಯಲ್ಲಿ ಶೇ. 80 ಮಹಿಳೆಯರು

300 ಎಕರೆ ಜಾಗದಲ್ಲಿ ತೈವಾನ್ ಮೂಲದ ಫಾಕ್ಸ್​ಕಾನ್ ಕಂಪನಿ ನಿರ್ಮಿಸಿರುವ ವಿಶಾಲ ಫ್ಯಾಕ್ಟರಿಯಲ್ಲಿ ನೇಮಕವಾಗಿರವವರಲ್ಲಿ ಶೇ. 80ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಎಲ್ಲರೂ ಇನ್ನೂ ಕೂಡ ಎಂಟ್ರಿ ಏಜ್ ಲೆವೆಲ್​ನಲ್ಲಿದ್ದಾರೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಐಫೋನ್ ಫ್ಯಾಕ್ಟರಿಗೆ ನೇಮಕವಾಗಿರುವವರಲ್ಲಿ ಹೆಚ್ಚಿನವರು ಕೇವಲ 19-24 ವಯೋಮಾನದವರಾಗಿದ್ದು, ಬಹುತೇಕ ಎಲ್ಲರಿಗೂ ಇದೇ ಮೊದಲ ಕೆಲಸವಾಗಿದೆಯಂತೆ.

ಪಿಯುಸಿ, ಡಿಪ್ಲೊಮಾ ಮಾಡಿರುವ ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಂಡು, ಆರು ತಿಂಗಳ ಕಾಲ ತರಬೇತಿ ಕೊಟ್ಟು ಬಳಿಕ ಐಫೋನ್ ಪ್ರೊಡಕ್ಷನ್ ಯುನಿಟ್​ಗಳಿಗೆ ಸೇರಿಸಿಕೊಳ್ಳಲಾಗುತ್ತಿದೆಯಂತೆ. ಉದ್ಯೋಗಿಗಳಿಗೆಂದೇ ಒಂದು ಟೌನ್​ಶಿಪ್ ಕೂಡ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ

ಭಾರತದಲ್ಲಿ ಇದು ಫಾಕ್ಸ್​ಕಾನ್​ನ ಅತಿದೊಡ್ಡ ಘಟಕ

2024ರ ಏಪ್ರಿಲ್-ಮೇ ತಿಂಗಳಲ್ಲೇ ಇಲ್ಲಿ ಐಫೋನ್-16 ಮಾಡಲ್ ಫೋನ್​ಗಳ ಅಸೆಂಬ್ಲಿಂಗ್ ಶುರುವಾಗಿತ್ತು. ಇದೀಗ ಇಲ್ಲಿ ಐಫೋನ್-17 ಪ್ರೋ ಮ್ಯಾಕ್ಸ್ ಮಾಡಲ್ ಫೋನ್​ಗಳ ಅಸೆಂಬ್ಲಿಂಗ್ ನಡೆಯುತ್ತಿದೆ. ಈ 300 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಘಟಕ 50,000 ಮಂದಿಗೆ ಕೆಲಸ ಮಾಡುವಷ್ಟು ವಿಶಾಲವಾಗಿದೆ. ತಮಿಳುನಾಡಿನಲ್ಲಿರುವ ಐಫೋನ್ ಫ್ಯಾಕ್ಟರಿಗಿಂತಲೂ ಇದು ಬೃಹತ್ತಾಗಿದೆ.

ಐಟಿ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಹೈರಿಂಗ್

ಭಾರತದಲ್ಲಿ ಐಟಿ ವೃತ್ತಿಪರರಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ನೇಮಕಾತಿ ತೀವ್ರತರದಲ್ಲಿ ನಡೆಯುತ್ತಿದೆ. ಈ ವರ್ಷ (2025) 18 ಲಕ್ಷ ಐಟಿ ಹುದ್ದೆಗಳ ನೇಮಕಾತಿ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೇಡಿಕೆ ಶೇ. 16ರಷ್ಟು ಹೆಚ್ಚಿದೆ. ಆದರೆ, ಹೆಚ್ಚಿನ ನೇಮಕಾತಿಗಳು ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳಿಂದಲೇ ಆಗುತ್ತಿದೆ. ಇನ್ಫೋಸಿಸ್, ಟಿಸಿಎಸ್ ಇತ್ಯಾದಿ ಐಟಿ ಸರ್ವಿಸಸ್ ಕಂಪನಿಗಳಿಂದ ನೇಮಕಾತಿ ಮಂದವಾಗಿಯೇ ಇದೆ.

ಇದನ್ನೂ ಓದಿ: ಈ ವರ್ಷ ಸರ್ಕಾರಕ್ಕೆ ಸಿಕ್ಕಿದ ನಿವ್ವಳ ನೇರ ತೆರಿಗೆ ಸಂಗ್ರಹ 17 ಲಕ್ಷ ಕೋಟಿ ರೂ

ಉತ್ತರಪ್ರದೇಶದಲ್ಲಿ ಮುಂದಿನ ತಿಂಗಳೇ ಮೊದಲ ಸೆಮಿಕಂಡಕ್ಟರ್ ಘಟಕ

ಫಾಕ್ಸ್​ಕಾನ್ ಮತ್ತು ಎಚ್​ಸಿಎಲ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಸೆಮಿಕಂಡಕ್ಟರ್ ಘಟಕ ಮುಂದಿನ ತಿಂಗಳೇ (2026ರ ಜನವರಿ) ಲೋಕಾರ್ಪಣೆ ಆಗಬಹುದು. ಇದು ಉತ್ತರಪ್ರದೇಶ ರಾಜ್ಯಕ್ಕೆ ಸೇರಿದ, ಹಾಗೂ ದೆಹಲಿಗೆ ಸಮೀಪವೇ ಇರುವ ಗೌತಮ್ ಬುದ್ಧ ನಗರ್​ನ ಜೇವರ್ ಪ್ರದೇಶದ ಸೆಕ್ಟರ್ 28ರಲ್ಲಿ ನಿರ್ಮಾಣವಾಗಿದೆ. ಇಲ್ಲಿ ಡಿಸ್​ಪ್ಲೇ ಡ್ರೈವರ್ ಇಂಟಿಗ್ರೇಟೆಡ್ ಸರ್ಕ್ಯೂಟ್​ಗಳನ್ನು ತಯಾರಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಭೀಕರ ಬಸ್ ಅಪಘಾತ, 15 ಮಂದಿ ಸಾವು – Kannada News | Java Bus Accident: 15 Killed in Indonesia Toll Road Crash, Road Safety Concerns

ಇಂಡೋನೇಷ್ಯಾ, ಡಿಸೆಂಬರ್ 22: ಇಂಡೋನೇಷ್ಯಾದ ಜಾವಾ ದ್ವೀಪದ ಬಳಿ ಬಸ್ ಅಪಘಾತ(Accident)ಕ್ಕೀಡಾಗಿದ್ದು, 15 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. 34 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್, ಟೋಲ್ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು, ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದು, ನಂತರ ಉರುಳಿದೆ ಎಂದು ಇಂಡೋನೇಷ್ಯಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಅಂತರ-ಪ್ರಾಂತೀಯ ಬಸ್ ರಾಷ್ಟ್ರ ರಾಜಧಾನಿ ಜಕಾರ್ತಾದಿಂದ ದೇಶದ ಐತಿಹಾಸಿಕ ರಾಜ ನಗರಿ ಯೋಗ್ಯಕರ್ತಾಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು. ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಸೆಮರಾಂಗ್ ನಗರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬುಡಿಯೊನೊ ಹೇಳಿದರು.

ಇಂಡೋನೇಷ್ಯಾದಲ್ಲಿ ಸಾರಿಗೆ ಅಪಘಾತಗಳು ಸಾಮಾನ್ಯವಾಗಿದೆ, ಅಲ್ಲಿ ಅನೇಕ ವಾಹನಗಳು ಹಳೆಯದಾಗಿರುತ್ತವೆ ಮತ್ತು ಕಳಪೆ ನಿರ್ವಹಣೆಯನ್ನು ಹೊಂದಿವೆ ಮತ್ತು ಸಂಚಾರ ನಿಯಮಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಓದಿ: ನೋರಾ ಫತೇಹಿ ಕಾರು ಅಪಘಾತ: ಈಗ ಹೇಗಿದೆ ನಟಿಯ ಪರಿಸ್ಥಿತಿ?

2024 ರಲ್ಲಿ, ಈದ್ ಅಲ್-ಫಿತರ್ ಆಚರಿಸಲು ಪ್ರಯಾಣಿಕರು ಹೊರಟಿದ್ದಾಗ ಹೆದ್ದಾರಿಯಲ್ಲಿ ಕಾರು ಬಸ್ ಮತ್ತು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದು ಕನಿಷ್ಠ 12 ಜನರು ಸಾವನ್ನಪ್ಪಿದ್ದರು.

2019 ರಲ್ಲಿ, ಪಶ್ಚಿಮ ಸುಮಾತ್ರ ದ್ವೀಪದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ವಾಹನವು ಕಂದಕಕ್ಕೆ ಉರುಳಿ ಕನಿಷ್ಠ 35 ಜನರು ಸಾವನ್ನಪ್ಪಿದ್ದರು.
ಜಕಾರ್ತದಲ್ಲಿ ಕಚೇರಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 22 ಜನರು ಸಾವನ್ನಪ್ಪಿದ ಎರಡು ವಾರಗಳ ನಂತರ ಈ ಘಟನೆ ನಡೆದಿದೆ.

ಇಂಡೋನೇಷ್ಯಾದ ಕಟ್ಟಡದಲ್ಲಿ ಬೆಂಕಿಕೆಮಯೋರನ್ ಪ್ರದೇಶದ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಇತರ ಹಂತಗಳಿಗೆ ಹರಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ನೂರಾರು ಸಿಬ್ಬಂದಿ ಮತ್ತು 29 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು ಎಂದು ಕೇಂದ್ರ ಜಕಾರ್ತಾ ಪೊಲೀಸ್ ಮುಖ್ಯಸ್ಥ ಸುಸತ್ಯೊ ಪೂರ್ಣೊಮೊ ಕೊಂಡ್ರೊ ತಿಳಿಸಿದ್ದಾರೆ.

ಮೂರು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ನಂದಿಸಲಾಯಿತು. ಕಟ್ಟಡದಿಂದ ಕನಿಷ್ಠ 22 ಶವಗಳನ್ನು ಹೊರತೆಗೆದು ಪೂರ್ವ ಜಕಾರ್ತಾದ ಪೊಲೀಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಲಿಯಾದವರಲ್ಲಿ ಏಳು ಪುರುಷರು ಮತ್ತು 15 ಮಹಿಳೆಯರು ಸೇರಿದ್ದಾರೆ, ಅವರಲ್ಲಿ ಒಬ್ಬ ಗರ್ಭಿಣಿ ಮಹಿಳೆ ಕೂಡ ಸೇರಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಕನಿಷ್ಠ 19 ಸಿಲುಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸಿದ್ದರು, ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ ಅವರು ದುರ್ಬಲರಾಗಿದ್ದರು ಮತ್ತು ಆಘಾತಕ್ಕೊಳಗಾಗಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:17 am, Mon, 22 December 25

Source link

ಚಾಮರಾಜನಗರ: ಹುಲಿ ಕಾಟದಿಂದ ಸದ್ಯಕ್ಕಿಲ್ಲ ಮುಕ್ತಿ; ವ್ಯಾಘ್ರಗಳನ್ನು ಹಿಡಿಯಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ ಅರಣ್ಯ ಇಲಾಖೆ – Kannada News | Chamarajanagar Tiger Menace: Vet Shortage Halts Capture Operation in Biligiri Reserve

ವ್ಯಾಘ್ರಗಳನ್ನು ಹಿಡಿಯಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ ಇಲಾಖೆ

ಚಾಮರಾಜನಗರ, ಡಿಸೆಂಬರ್ 22: ಹಲವು ದಿನಗಳಿಂದ ಚಾಮರಾಜನಗರದಲ್ಲಿ (Chamarajanagar) ಹುಲಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಮುಂದೆ ಎಷ್ಟೇ ಗೋಗರೆದರೂ ಕೊನೆಗೆ ಪ್ರಯೋಜನವಾದಾಗ 5 ಹುಲಿಗಳಿಗೆ ವಿಷ ಹಾಕಿ ಕೊಲ್ಲಲಾಗಿತ್ತು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದೀಗ ಮತ್ತೊಮ್ಮೆ ನಂಜೆದೇವಪುರ ಬಳಿ 5 ಹುಲಿಗಳು ಕಾಣಿಸಿಕೊಂಡಿದ್ದು, ಹುಲಿಗಳ ಕಾಟಕ್ಕೆ ಬ್ರೇಕ್ ಬೀಳದಾಗಿದೆ. ಈ ಹಿನ್ನೆಲೆ ವ್ಯಾಘ್ರಗಳಿಗೆ ಬಲೆ ಬೀಸಲು ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಮುಂದಾಗಿದ್ದರೂ ಪಶು ವೈದ್ಯರ ಕೊರತೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಂಡಿದೆ.

ಇರೋದು ಇಬ್ಬರೇ ಪಶು ವೈದ್ಯರು

ಚಾಮರಾಜನಗರ ಜಿಲ್ಲೆಯ ನಂಜೆದೇವಪುರ ಗ್ರಾಮದ ಬಳಿ ಐದು ಹುಲಿಗಳು ಒಂದೇ ಸ್ಥಳದಲ್ಲಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಬಿಳಿಗಿರಿ ಟೈಗರ್ ರಿಸರ್ವ್ ವ್ಯಾಪ್ತಿಯ ಈ ಪ್ರದೇಶದಲ್ಲಿ ಹುಲಿಗಳ ಚಲನವಲನವನ್ನು ಅರಣ್ಯ ಇಲಾಖೆ ಈಗಾಗಲೇ ಲೋಕೇಷನ್ ಟ್ರ್ಯಾಕಿಂಗ್ ಮೂಲಕ ಗಮನಿಸುತ್ತಿದೆ. ಆದರೆ ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ಅರಣ್ಯ ಸಿಬ್ಬಂದಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೇವಲ ಇಬ್ಬರು ಪಶುವೈದ್ಯರು ಮಾತ್ರ ಲಭ್ಯವಿರುವುದರಿಂದ ಐದು ಹುಲಿಗಳಿಗೆ ಒಂದೇ ವೇಳೆ ಅರವಳಿಕೆ ಮದ್ದು ನೀಡುವುದು ಅಸಾಧ್ಯ ಎನ್ನಲಾಗುತ್ತಿದೆ. ಇಬ್ಬರು ವೈದ್ಯರು ಎರಡು ಹುಲಿಗಳಿಗೆ ಮಾತ್ರ ಅರವಳಿಕೆ ನೀಡಿದರೆ, ಗುಂಪಿನಲ್ಲಿ ಉಳಿದ ಹುಲಿಗಳು ಪ್ರತಿದಾಳಿ ಮಾಡುವ ಅಪಾಯ ಹೆಚ್ಚಿದ್ದು, ಅರಣ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರ ಜೀವಕ್ಕೆ ಭೀತಿ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಹುಲಿಗಳನ್ನು ಸೆರೆ ಹಿಡಿಯದೆ ಪಟಾಕಿ ಸದ್ದು ಮಾಡಿ ಹಾಗೂ ಎರಡು ಆನೆಗಳ ಸಹಾಯದಿಂದ ಕಾಡಿಗೆ ಓಡಿಸುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ.

ಇದನ್ನೂ ಓದಿ 5 ಹುಲಿಗಳ ಅಂತ್ಯಕ್ರಿಯೆ: ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು

ಹುಲಿ ಸೆರೆಹಿಡಿಯಲೇಬೇಕೆಂದು ಪಟ್ಟು ಹಿಡಿದ ಗ್ರಾಮಸ್ಥರು

ಆದರೆ ಗ್ರಾಮಸ್ಥರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಹುಲಿಗಳನ್ನು ಕಾಡಿಗೆ ಓಡಿಸದೇ ಸೆರೆ ಹಿಡಿಯಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬೇರೆ ಜಿಲ್ಲೆಗಳಿಂದ ಹೆಚ್ಚುವರಿ ಪಶುವೈದ್ಯರು ಮತ್ತು ಕನಿಷ್ಠ ಐದು ಆನೆಗಳನ್ನು ಕರೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ನಡುವೆ ಬಿಳಿಗಿರಿ ಟೈಗರ್ ರಿಸರ್ವ್‌ನ ಡಿಸಿಎಫ್ ಶ್ರೀಪತಿ ಕೇಂದ್ರ ಅರಣ್ಯ ಇಲಾಖೆಯೊಂದಿಗೆ ನಿರಂತರ ಸಭೆ ನಡೆಸುತ್ತಿದ್ದು, ಗ್ರಾಮಸ್ಥರಿಗೆ ತಮ್ಮ ಅಸಹಾಯಕತೆಯನ್ನು ವಿವರಿಸಿ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಐದು ಹುಲಿಗಳು ಒಟ್ಟಾಗಿ ಇರುವುದರಿಂದ ಕೂಂಬಿಂಗ್ ಕಾರ್ಯವೂ ಕಗ್ಗಂಟಾಗಿ ಪರಿಣಮಿಸಿದ್ದು, ಸೆರೆ ಕಾರ್ಯ ಹೇಗೆ ನಡೆಸುವುದು ಎಂಬುದರ ಬಗ್ಗೆ ಅರಣ್ಯ ಸಿಬ್ಬಂದಿ ತಲೆಕೆಡಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್ – Kannada News | Mohan Bhagwat Says India’s Hindu Identity Needs No Constitutional Sanction

ಮುಂಬೈ, ಡಿಸೆಂಬರ್ 22: ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದ್ದು, ಅದು ಸತ್ಯವಾಗಿರುವುದರಿಂದ ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಭಾನುವಾರ ಹೇಳಿದ್ದಾರೆ. ಜನರು ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಅವರ ಪೂರ್ವಜರ ವೈಭವವನ್ನು ಆಚರಿಸುವವರೆಗೆ ದೇಶವು ಹಿಂದೂ ರಾಷ್ಟ್ರವಾಗಿ ಉಳಿಯುತ್ತದೆ ಎಂದು ಅವರು ಒತ್ತಿ ಹೇಳಿದರು.

ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ಆದರೆ ಇದು ಎಂದಿನಿಂದ ನಡೆದುಕೊಂಡು ಬಂದಿದೆ ಎಂಬುದು ಯಾರಿಗಾದರೂ ತಿಳಿದಿದೆಯೇ? ಹಾಗಾದರೆ, ಅದಕ್ಕೆ ನಮಗೆ ಸಾಂವಿಧಾನಿಕ ಅನುಮೋದನೆ ಬೇಕೇ? ಹಿಂದೂಸ್ತಾನ ಒಂದು ಹಿಂದೂ ರಾಷ್ಟ್ರ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವ ವ್ಯಕ್ತಿಗಳು ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಹಿಂದುತ್ವದ ಸಿದ್ಧಾಂತದಲ್ಲಿ ಕಟ್ಟುನಿಟ್ಟಾಗಿ ನಂಬಿಕೆ ಇಡುವ ಆರ್‌ಎಸ್‌ಎಸ್, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಂಸತ್ತು ಕಾನೂನನ್ನು ತಿದ್ದುಪಡಿ ಮಾಡುತ್ತದೆಯೇ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.ಆರ್‌ಎಸ್‌ಎಸ್ ಯಾವುದೇ ಮುಸ್ಲಿಂ ವಿರೋಧಿ ಭಾವನೆಯನ್ನು ಹೊಂದಿರುವ ಸಂಘಟನೆಯಲ್ಲ ಎಂದು ಅವರು ಹೇಳಿದರು. ಆರ್‌ಎಸ್‌ಎಸ್ ಯಾವಾಗಲೂ ಪಾರದರ್ಶಕತೆಯಿಂದ ಕೆಲಸ ಮಾಡಿದೆ ಎಂದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಅಪ್ಪನೇ ಗರ್ಭಿಣಿ ಮಗಳನ್ನು ಕುರಿ ಕಡಿದಂಗೆ ಕಡಿದವ್ನೆ’: ಮರ್ಯಾದಾ ಹತ್ಯೆಯ ಭೀಕರತೆ ಬಿಚ್ಚಿಟ್ಟ ಯುವಕನ ದೊಡ್ಡಮ್ಮ – Kannada News | Dharwad Honour Killing Case: Victim’s Relative Reveals crime Details, Sparks Outrage

ಹುಬ್ಬಳ್ಳಿ, ಡಿಸೆಂಬರ್ 22: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಇಡೀ ಧಾರವಾಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ 7 ತಿಂಗಳ ಗರ್ಭಿಣಿಯಾಗಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿದ ಘಟನೆ ನಡೆದಿದೆ. ಘಟನೆಯ ಭೀಕರತೆಯನ್ನು ಯುವಕ ವಿವೇಕಾನಂದನ ದೊಡ್ಡಮ್ಮ ಜಯಶ್ರೀ ಬಹಿರಂಗಪಡಿಸಿದ್ದು, ಆ ಹುಡುಗಿಯನ್ನು ನಮ್ಮ ಹುಡುಗ ಮದುವೆಯಾಗಿದ್ದು ತಪ್ಪೇ? ನಮ್ಮ ಮಕ್ಕಳನ್ನು ಹೊಡೆದುಹಾಕಿದ್ದಾರೆ. ಮದುವೆಯಾಗಿ ತಿಂಗಳುಗಳೇ ಆಗಿದ್ದವು. ಹುಡುಗಿ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಕಣ್ಣೀರು ಹಾಕಿದ್ದಾರೆ. ಅವರು ‘‘ದೊಡ್ಡ ಜಾತಿ, ನಾವು ಸಣ್ಣ ಜಾತಿ’’ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಅವರು ಅಳಲುತೋಡಿಕೊಂಡಿದ್ದಾರೆ.

ಪ್ರಕರಣದ ಸಂಪೂರ್ಣ ವಿವರಗಳಿಗೆ ಓದಿ: ದಲಿತ ಯುವಕನ ಪ್ರೀತಿಸಿ ಮದುವೆಯಾಗಿದ್ದಕ್ಕೆ ಗರ್ಭಿಣಿ ಮಗಳ ಕ್ರೂರವಾಗಿ ಹತ್ಯೆಗೈದ ತಂದೆ: ಪೈಶಾಚಿಕ ಕೃತ್ಯಕ್ಕೆ ಬೆಚ್ಚಿಬಿದ್ದ ಧಾರವಾಡ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್ – Kannada News | ILT20: Desert Vipers have Qualified for Play off

ಯುಎಇನಲ್ಲಿ ನಡೆಯುತ್ತಿರುವ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಡೆಸರ್ಟ್ ವೈಪರ್ಸ್ ತಂಡ ಪ್ಲೇಆಫ್​ಗೇರಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಟೂರ್ನಿಯ 24ನೇ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ಹಾಗೂ ಡೆಸರ್ಟ್ ವೈಪರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಎಂಐ ಎಮಿರೇಟ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಸರ್ಟ್ ವೈಪರ್ಸ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಗುರಿಯನ್ನು ಬೆನ್ನತ್ತಿದ ಎಂಐ ಎಮಿರೇಟ್ಸ್ ತಂಡವು 17.3 ಓವರ್​ಗಳಲ್ಲಿ 128 ರನ್ ಬಾರಿಸಿ 4 ವಿಕೆಟ್​ಗಳ ಜಯ ಸಾಧಿಸಿದೆ.

ಈ ಸೋಲಿನ ಹೊರತಾಗಿಯೂ ಆಡಿದ 9 ಪಂದ್ಯಗಳಲ್ಲಿ 7 ಜಯ ಸಾಧಿಸಿರುವ ಡೆಸರ್ಟ್ ವೈಪರ್ಸ್ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸುವ ಮೂಲಕ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಇತ್ತ ಡೆಸರ್ಟ್ ವೈಪರ್ಸ್ ಪ್ಲೇಆಫ್​ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡರೆ, ಅತ್ತ ಶಾರ್ಜಾ ವಾರಿಯರ್ಸ್ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿದೆ.

ಡೆಸರ್ಟ್ ವೈಪರ್ಸ್ ಪ್ಲೇಯಿಂಗ್ 11:  ಫಖರ್ ಝಮಾನ್ , ಮ್ಯಾಕ್ಸ್ ಹೋಲ್ಡನ್ , ಹಸನ್ ನವಾಝ್ , ಜೇಸನ್ ರಾಯ್ , ಸ್ಯಾಮ್ ಕರನ್ , ಟಾಮ್ ಬ್ರೂಸ್ (ವಿಕೆಟ್ ಕೀಪರ್) ಡಾನ್ ಲಾರೆನ್ಸ್ , ಸಂಜಯ್ ಪಹಲ್ , ಮತಿಯುಲ್ಲಾ ಖಾನ್ , ಲಾಕಿ ಫರ್ಗುಸನ್ (ನಾಯಕ) , ಕೈಸ್ ಅಹ್ಮದ್ , ಡೇವಿಡ್ ಪೇನ್.

ಎಂಐ ಎಮಿರೇಟ್ಸ್ ಪ್ಲೇಯಿಂಗ್ 11: ಮುಹಮ್ಮದ್ ವಸೀಮ್ , ಟಾಮ್ ಬ್ಯಾಂಟನ್ , ಸಂಜಯ್ ಕೃಷ್ಣಮೂರ್ತಿ , ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರನ್ ಪೊಲಾರ್ಡ್ (ನಾಯಕ) , ರೊಮಾರಿಯೋ ಶೆಫರ್ಡ್ , ಶಕೀಬ್ ಅಲ್ ಹಸನ್ , ಕ್ರಿಸ್ ವೋಕ್ಸ್ ,
ಅರಬ್ ಗುಲ್ , ಅಲ್ಲಾಹ್ ಗಜನ್‌ಫರ್ , ಝಹೂರ್ ಖಾನ್ , ಜಾನಿ ಬೈರ್‌ಸ್ಟೋವ್.

Source link

ಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ ಮಹೋತ್ಸವ: ಯುಟಿ ಖಾದರ್ ಸೇರಿ ಅನ್ಯಧರ್ಮೀಯ ನಾಯಕರ ಆಹ್ವಾನಿಸಿದ್ದಕ್ಕೆ ಆಕ್ರೋಶ – Kannada News | Kukke Subrahmanya Kitu Shashti: Controversy Over Invitation to Leaders of Other Faiths including UT Khader

ಮಂಗಳೂರು, ಡಿಸೆಂಬರ್ 22: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಕಿರುಷಷ್ಠಿ ಮಹೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದೆ. ಆದರೆ, ಈ ಮಹೋತ್ಸವಕ್ಕೆ ಅನ್ಯಧರ್ಮೀಯ ನಾಯಕರನ್ನು ಆಹ್ವಾನಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕ್ಷೇತ್ರ ಸಂರಕ್ಷಣಾ ವೇದಿಕೆಯು ಇಂದು ಪ್ರತಿಭಟನೆ ನಡೆಸುತ್ತಿದ್ದು, ಅನ್ಯಧರ್ಮೀಯ ನಾಯಕರಿಗೆ ಕೊಟ್ಟಿರುವ ಆಹ್ವಾನಗಳನ್ನು ತಕ್ಷಣವೇ ವಾಪಸ್ ಪಡೆಯುವಂತೆ ಆಗ್ರಹಿಸಿದೆ. ಸ್ಪೀಕರ್ ಯು.ಟಿ. ಖಾದರ್, ಐವಾನ್ ಡಿಸೋಜ, ಬ್ಯಾ​ರಿ ಅಕಾಡೆಮಿ ಅಧ್ಯಕ್ಷ ಉಮರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಗಫೂರ್, ಕನಿಷ್ಠ ವೇತನ ಸಲಹಾ ಮಂಡಳಿಯ ಶಹೀದ್ ತೆಕ್ಕಿಲ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಜೋಕಿಮ್, ಮತ್ತು ಶಾರ್ಲೆಟ್ ಪಿಂಟೋ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಅನ್ಯಧರ್ಮೀಯರನ್ನು ಏಕೆ ಆಹ್ವಾನಿಸಬೇಕು ಎಂಬುದು ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ – Kannada News | Ashes thrashing Ashes series decided the earliest in terms of balls

ಟೆಸ್ಟ್ ಕ್ರಿಕೆಟ್​ನ ಮದಗಜಗಳ ಕಾಳಗದಲ್ಲಿ ಮತ್ತೊಮ್ಮೆ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿಯುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ. ಈ ಬಾರಿ ಕೇವಲ 4719 ಎಸೆತಗಳಲ್ಲಿ ಆಂಗ್ಲರನ್ನು ಕಟ್ಟಿಹಾಕಲಾಗಿದೆ. ಅಂದರೆ 4719 ಎಸೆತಗಳಲ್ಲೇ ಈ ಬಾರಿಯ ಆ್ಯಶಸ್ ಸರಣಿಯ ಫಲಿತಾಂಶ ಹೊರಬಿದ್ದಿದೆ.

ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ 8 ವಿಕೆಟ್​ಗಳ ಜಯ ಸಾಧಿಸಿದ್ದ ಆಸ್ಟ್ರೇಲಿಯಾ ತಂಡವು ಮೂರನೇ ಟೆಸ್ಟ್ ಪಂದ್ಯದಲ್ಲಿ 82 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ 3-0 ಅಂತರದಿಂದ ಆ್ಯಶಸ್ ಸರಣಿಯನ್ನು ವಶಪಡಿಸಿಕೊಂಡಿದೆ.

ಈ ಮೂರು ಪಂದ್ಯಗಳಲ್ಲಿ ಆಡಲಾದ ಒಟ್ಟು ಓವರ್​ಗಳ ಸಂಖ್ಯೆ 786.3, ಅಂದರೆ 4719 ಎಸೆತಗಳಲ್ಲಿ ಸರಣಿಯ ಫಲಿತಾಂಶ ನಿರ್ಧಾರವಾಗಿದೆ.

ಶತಮಾನದ ಇತಿಹಾಸ ಹೊಂದಿರುವ ಆ್ಯಶಸ್ 5 ಪಂದ್ಯಗಳ ಸರಣಿಯ ಫಲಿತಾಂಶ ಹೀಗೆ ಅತೀ ಕಡಿಮೆ ಓವರ್​ಗಳಲ್ಲಿ ನಿರ್ಧಾರವಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2001 ರಲ್ಲಿ 665.1 ಓವರ್​ಗಳಲ್ಲಿ ಮೂರು ಪಂದ್ಯಗಳು ಮುಗಿದಿತ್ತು.

ಇದೀಗ 786.3 ಓವರ್​ಗಳ ಮೂಲಕ ಆ್ಯಶಸ್ ಸರಣಿಯನ್ನು ಗೆದ್ದುಕೊಳ್ಳುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಆಸೀಸ್ ಪಡೆ ಮತ್ತೊಮ್ಮೆ ಪಾರುಪತ್ಯ ಮೆರೆದಿದ್ದಾರೆ.

 

Source link

ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ – Kannada News | Kichcha Sudeep convey thanks To Hubballi Fans In His Style

ಕಿಚ್ಚ ಸುದೀಪ್ ಅವರು ಶನಿವಾರ (ಡಿಸೆಂಬರ್ 20) ಹುಬ್ಬಳ್ಳಿಗೆ ತೆರಳಿದ್ದರು. ಈ ವೇಳೆ ‘ಮಾರ್ಕ್’ ಸಿನಿಮಾದ ಪ್ರೀರಿಲೀಸ್ ಇವೆಂಟ್ ನಡೆದಿದೆ. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕೊನೆಯಲ್ಲಿ ಸುದೀಪ್ ಅವರು ವಿಡಿಯೋ ಮಾಡಿ ಹುಬ್ಬಳ್ಳಿಯ ಜನತೆಗೆ ಧನ್ಯವಾದ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವತಃ ಸುದೀಪ್ ಅವರು ಇದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ತೋರಿದ ಪ್ರೀತಿಗೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link