Category Archives: Blog

Your blog category

ಟಿ20 ವಿಶ್ವಕಪ್​ನಲ್ಲಿ 10 ಹೊಸ ನಿಯಮಗಳು ಜಾರಿ! – Kannada News | New Rules in ICC T20 World Cup 2026

ಬಹುನಿರೀಕ್ಷಿತ ಟಿ20 ವಿಶ್ವಕಪ್​ಗೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 7 ರಿಂದ ಶುರುವಾಗಲಿರುವ 20 ತಂಡಗಳ ಚುಟಕು ಮಹಾ ಸಮರಕ್ಕೂ ಮುನ್ನವೇ ಐಸಿಸಿ ಕೆಲ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಮೂಲಕ ಪಂದ್ಯವನ್ನು ಮತ್ತಷ್ಟು ರೋಚಕ ಹಾಗೂ ನ್ಯಾಯಯುತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಜಾರಿಯಲ್ಲಿರುವ ಹೊಸ ನಿಯಮಗಳಾವುವು ಎಂದು ನೋಡುವುದಾದರೆ…

  1. ಸ್ಟಾಪ್ ಕ್ಲಾಕ್ ನಿಯಮ: ಓವರ್‌ಗಳ ನಡುವೆ ಕಡ್ಡಾಯ 60-ಸೆಕೆಂಡ್‌ಗಳ “ಸ್ಟಾಪ್ ಕ್ಲಾಕ್” ಈಗ ಜಾರಿಯಲ್ಲಿರಲಿದೆ. ಅಂದರೆ ಹಿಂದಿನ ಓವರ್ ಮುಗಿದ ಒಂದು ನಿಮಿಷದೊಳಗೆ ಫೀಲ್ಡಿಂಗ್ ತಂಡವು ಮುಂದಿನ ಓವರ್ ಎಸೆಯಲು ಸಿದ್ಧರಾಗಿರಬೇಕು.
  2. 5 ರನ್​ಗಳ ಪೆನಾಲ್ಟಿ: ಸ್ಟಾಪ್ ಕ್ಲಾಕ್ ನಿಯಮವನ್ನು ಉಲ್ಲಂಘಿಸಿದರೆ, ಪ್ರತಿ ಇನ್ನಿಂಗ್ಸ್‌ನಲ್ಲಿ ಎರಡು ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಆ ನಂತರದ ಉಲ್ಲಂಘನೆಗಳಿಗೆ ಪ್ರತಿ ಬಾರಿ 5 ರನ್‌ಗಳ ದಂಡ ವಿಧಿಸಲಾಗುತ್ತದೆ.
  3. ಬೌಂಡರಿ ಫೀಲ್ಡಿಂಗ್ ನಿಯಮ: ಬೌಂಡರಿಯ ಆಚೆ ಚೆಂಡನ್ನು ತಡೆಯಲು ಫೀಲ್ಡರ್‌ಗಳು ಮೈದಾನದ ಒಳಗಿನಿಂದ ಹಾರಿರಬೇಕು. ಅವರು ಚೆಂಡನ್ನು ಹಿಂದಕ್ಕೆ ತಳ್ಳಲು ಬೌಂಡರಿಯ ಹೊರಗಿನಿಂದ ಹಾರಿದರೆ, ಅದನ್ನು ಬೌಂಡರಿ ಎಂದು ಪರಿಗಣಿಸಲಾಗುತ್ತದೆ.
  4. ಶಾರ್ಟ್ ರನ್ ಪೆನಾಲ್ಟಿ: ಬ್ಯಾಟ್ಸ್​ಮನ್ ಉದ್ದೇಶಪೂರ್ವಕವಾಗಿ ಶಾರ್ಟ್ ರನ್ ಮಾಡಿದರೆ, ಬ್ಯಾಟಿಂಗ್ ತಂಡಕ್ಕೆ 5 ರನ್​ಗಳ ಪೆನಾಲ್ಟಿ ವಿಧಿಸಲಾಗುತ್ತದೆ. ಇದನ್ನು ಫೀಲ್ಡ್ ಅಂಪೈರ್ ನಿರ್ಧರಿಸಲಿದ್ದಾರೆ.
  5. ಬ್ಯಾಟರ್ ಆಯ್ಕೆ: ಉದ್ದೇಶಪೂರ್ವಕವಾಗಿ ಶಾರ್ಟ್ ರನ್ ಮಾಡಿ ಸ್ಟ್ರೈಕ್​ ನೀಡಲು ಯತ್ನಿಸಿದರೆ, ಅದನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಮುಂದಿನ ಎಸೆತಕ್ಕೆ ಯಾವ ಬ್ಯಾಟರ್ ಸ್ಟ್ರೈಕ್ ತೆಗೆದುಕೊಳ್ಳಬೇಕೆಂದು ಆಯ್ಕೆ ಮಾಡುವ ಹಕ್ಕು ಫೀಲ್ಡಿಂಗ್ ತಂಡದ ನಾಯಕನಿಗೆ ನೀಡಲಾಗುತ್ತದೆ.
  6. ಕನ್ಕ್ಯುಶನ್ ಬದಲಿ ಆಟಗಾರರು: ಸಮಾನ ಬದಲಿ ಆಟಗಾರರು ಪಾರದರ್ಶಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ತಂಡಗಳು ಈಗ ಐದು ನಿರ್ದಿಷ್ಟ ಬದಲಿ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. ಈ ಬದಲಿ ಆಟಗಾರರ ಪಟ್ಟಿಯಲ್ಲಿ ವಿಕೆಟ್ ಕೀಪರ್, ಬ್ಯಾಟರ್, ವೇಗದ ಬೌಲರ್, ಸ್ಪಿನ್ನರ್ ಮತ್ತು ಆಲ್-ರೌಂಡರ್ ಇರಲೇಬೇಕು. ಇವರಲ್ಲಿ ಆಯಾ ಆಟಗಾರರ ಪಾತ್ರದ ಬದಲಿಗೆ ಕನ್ಕ್ಯುಶನ್ ಬದಲಿ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ.
  7. ಡಿಆರ್‌ಎಸ್ (DRS) ಬದಲಾವಣೆ: ಡಿಆರ್​ಎಸ್ ರಿವ್ಯೂ ವೇಳೆ “ಅಂಪೈರ್ಸ್ ಕಾಲ್” (Umpire’s Call) ಬಂದರೆ ಇನ್ನು ಮುಂದೆ ರಿವ್ಯೂ ಕಳೆದುಕೊಳ್ಳುವುದಿಲ್ಲ. ಇದರ ಹೊರತಾಗಿ ಒಂದು ತಂಡಕ್ಕೆ ಇನಿಂಗ್ಸ್​ಗೆ 2 ಡಿಆರ್​ಎಸ್​ ಆಯ್ಕೆಗಳು ಮಾತ್ರ ಇರಲಿದೆ.
  8. ಬಾಲ್ ಸೆಟಲ್ಮೆಂಟ್ ನಿಯಮ: ಇನ್ನು ಮುಂದೆ ಚೆಂಡು ಬೌಲರ್ ಅಥವಾ ವಿಕೆಟ್ ಕೀಪರ್ ಅನ್ನು ತಲುಪಿದಾಗ ಮಾತ್ರ ಸೆಟಲ್ಡ್ ಎಂದು ಪರಿಗಣಿಸುವ ಅಗತ್ಯವಿಲ್ಲ. ಮೈದಾನದಲ್ಲಿ ಸ್ಥಿರವಾಗಿರುವ ಯಾವುದೇ ಫೀಲ್ಡರ್ ಅನ್ನು ತಲುಪಿದರೆ ಅಂಪೈರ್ ಚೆಂಡನ್ನು ಡೆಡ್ ಅಥವಾ ಸೆಟಲ್ಡ್ ಎಂದು ಪರಿಗಣಿಸಬಹುದು.
  9. ವಿಕೆಟ್ ಕೀಪಿಂಗ್ ನಿಯಮ ಬದಲಾವಣೆ: ಬೌಲರ್ ಚೆಂಡನ್ನು ಎಸೆಯುವ ಮುನ್ನ ವಿಕೆಟ್ ಕೀಪರ್​ನ ಕೈಗಳು ಸ್ಟಂಪ್‌ಗಳ ಮುಂದೆ ಇದ್ದರೆ, ಅದು ನೋ ಬಾಲ್ ಅಲ್ಲ. ಹಾಗೆಯೇ ಬೌಲರ್ ರನ್-ಅಪ್‌ನಲ್ಲಿದ್ದಾಗಲೂ ಕೀಪರ್‌ನ ಕೈಗವಸುಗಳು ಸ್ಟಂಪ್‌ಗಳ ಮುಂದೆ ಇದ್ದರೆ ಅದನ್ನೂ ಸಹ ನೋ-ಬಾಲ್ ಎಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ ಚೆಂಡನ್ನು ಬೌಲ್ ಮಾಡಿದ ನಂತರ, ಕೀಪರ್‌ನ ಕೈಗಳು ಸ್ಟಂಪ್‌ಗಳ ಹಿಂದೆ ಇರಬೇಕು. ಅಂದರೆ ಬೌಲರ್​ ಚೆಂಡನ್ನು ಎಸೆದ ಬಳಿಕ ವಿಕೆಟ್ ಕೀಪರ್​ನ ಗ್ಲೌಸ್ ಸ್ಟಂಪ್​ಗಳ ಮುಂದೆ ಇರಬಾರದು.
  10. ಸ್ಟಂಪ್ ಔಟ್ – ರನೌಟ್ ನಿಯಮ: ರನ್ ಔಟ್ ಅಥವಾ ಸ್ಟಂಪಿಂಗ್ ಸಮಯದಲ್ಲಿ ಫೀಲ್ಡರ್ ಅಥವಾ ಕೀಪರ್ ಚೆಂಡನ್ನು ಸಂಪೂರ್ಣವಾಗಿ ತಮ್ಮ ಕೈಯಲ್ಲಿ ಹೊಂದಿರಬೇಕು ಎಂದು ಎಂಸಿಸಿ ಸ್ಪಷ್ಟಪಡಿಸಿದೆ. ಅಂದರೆ ಕ್ಯಾಚ್ ಸಮಯದಲ್ಲಿ ಹೇಗೆ ಚೆಂಡು ಸಂಪೂರ್ಣವಾಗಿ ಆಟಗಾರನ ಕೈಯಲ್ಲಿರಬೇಕೋ, ಅದೇ ರೀತಿ ಇನ್ಮುಂದೆ ಸ್ಟಂಪಿಂಗ್ ಮತ್ತು ರನೌಟ್​ಗಳ ಸಮಯದ ವಿಕೆಟ್ ಕೀಪರ್ ಹಾಗೂ ಫೀಲ್ಡರ್​ ಚೆಂಡಿನ ಮೇಲೆ ನಿಯಂತ್ರಣ ಹೊಂದಿರಬೇಕು ಎಂದು ತಿಳಿಸಲಾಗಿದೆ.

Published On – 11:53 am, Thu, 5 February 26

Source link

ಸಿದ್ದರಾಮಯ್ಯ Vs ಡಿ.ಕೆ. ಶಿವಕುಮಾರ್​​: ಎಐಸಿಸಿ ನಾಯಕರ ಮೌನದ ಬಗ್ಗೆ ‘ಕೈ ‘ ಶಾಸಕರಲ್ಲೇ ಬೇಸರ! – Kannada News | Karnataka Congress Leadership Crisis: MLAs Blame High Command’s Silence, Fear Election Impact

ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಗೊಂದಲImage Credit source: Google

ಬೆಂಗಳೂರು, ಫೆಬ್ರವರಿ 05: ರಾಜ್ಯ ಕಾಂಗ್ರೆಸ್​​ನಲ್ಲಿ ಕಳೆದ ಕೆಲ ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಭುಗಲೇಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಮೌನದ ಬಗ್ಗೆ ಕಾಂಗ್ರೆಸ್​ ಶಾಸಕರು ಬೇಸರ ಹೊರಹಾಕಿದ್ದು, ನಾಯಕತ್ವ ಬದಲಾವಣೆ ಗೊಂದಲದಿಂದ ನಮ್ಮ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೆಲವೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ಹೀಗಿದ್ದರೂ ನಾಯಕತ್ವ ಬದಲಾವಣೆ ವಿಷಯವನ್ನು ಹೈಕಮಾಂಡ್ ಇತ್ಯರ್ಥಪಡಿಸದ ಕಾರಣ ಯಾರನ್ನು ನಂಬಿ ಚುನಾವಣೆ ಎದುರಿಸಬೇಕು ಎಂಬುದೇ ಕಾಂಗ್ರೆಸಿಗರ ಗೊಂದಲಕ್ಕೆ ಕಾರಣವಾಗಿದೆಯಂತೆ.

ಒಬ್ಬರ ಬಳಿ ಹೋದ್ರೆ ಮತ್ತೊಬ್ಬರಿಗೆ ಸಿಟ್ಟು

ಸಿಎಂ ಸಿದ್ದರಾಮಯ್ಯ ಬಳಿ ಅನುದಾನ ಕೇಳಲೆಂದು ತೆರಳಿದರೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರಿಗೆ ಬೇಸರವಾಗುತ್ತೆ. ಇತ್ತ ಡಿಸಿಎಂ ಮನೆಗೆ ತೆರಳಿದರೆ ಸಿಎಂಗೆ ಸಿಟ್ಟು ಬರುತ್ತೆ. ಹೀಗಿರುವಾಗ ನಾವು ಏನು ಮಾಡೋದು ಎಂದು ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರು ಪರಸ್ಪರ ಬೇಸರ ಹಂಚಿಕೊಂಡಿದ್ದಾರೆ. ಅಲ್ಲದೆ ಹಲವು ಬಾರಿ ಹಿರಿಯ ನಾಯಕರೇ ವಿಷಯ ಪ್ರಸ್ತಾಪಿಸದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೌನಕ್ಕೆ ಶರಣಾಗಿದ್ದಾರೆ. ಐಸಿಸಿ ನಾಯಕರ ಈ ಮೌನದಿಂದಲೇ ಉಂಟಾಗಿರುವ ಗೊಂದಲ ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ಕೆಲ ಶಾಸಕರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಬಿಜೆಪಿ, ಜೆಡಿಎಸ್ ಟಿಕೆಟ್ ಫೈಟ್! ನಿಖಿಲ್ ವಿರುದ್ಧ ಕೇಸರಿ ಪಡೆ ಬಹಿರಂಗ ವಾಗ್ದಾಳಿ

ಸ್ಥಳೀಯ ಸಂಸ್ಥೆಯ ಚುನಾವಣೆ ಮೇಲೆ ಪರಿಣಾಮದ ಆತಂಕ

ನಾಯಕತ್ವ ವಿಚಾರವಾಗಿ ಏನೇ ತೀರ್ಮಾನವಿದ್ದರೂ ಕರೆದು ಮಾತುಕತೆ ನಡೆಸುವುದು ಸೂಕ್ತ. ಗೊಂದಲ ಹೀಗೇ ಮುಂದುವರಿದರೆ ಅದು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಆಗಬಹುದು. ಹೀಗಾಗಿ ಎಲ್ಲ ಹಿರಿಯ ಸಚಿವರೂ ಗಾಢ ಮೌನ ಮುರಿಯುವಂತೆ ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಶಾಸಕರ ಸಭೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದ್ದು, ಖರ್ಗೆ ಮತ್ತು ವೇಣುಗೋಪಾಲ್​​ ಅವರ ಮೌನದ ಬಗ್ಗೆ ಸ್ವಪಕ್ಷ ಶಾಸಕರೇ ಬೇಸರ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್​​ನ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬರುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:48 am, Thu, 5 February 26

Source link

‘ಧುರಂಧರ್​ಗಿಂತ ಸೀಕ್ವೆಲ್ ಇನ್ನೂ ಪವರ್​​ಫುಲ್; ಸೂಚನೆ ಕೊಟ್ಟ ನಿರ್ದೇಶಕನ ಪತ್ನಿ ಯಾಮಿ ಗೌತಮ್

‘ಧುರಂಧರ್’ ಸಿನಿಮಾ ಯಶಸ್ಸು ಕಂಡ ಬಳಿಕ ‘ಧುರಂಧರ್ 2’ ಬಗ್ಗೆ ನಿರೀಕ್ಷೆ ಹುಟ್ಟಿದೆ. ಈ ಚಿತ್ರದಲ್ಲಿ ಏನು ತೋರಿಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ನಿರ್ದೇಶಕ ಆದಿತ್ಯ ಧಾರ್ ಪತ್ನಿ ಯಾಮಿ ಗೌತಮ್ ಈ ಬಗ್ಗೆ ಮಾತನಾಡಿದ್ದಾರೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಹೆಚ್ಚು ಪವರ್​​ಫುಲ್ ಆಗಿರಲಿದೆ ಎಂದಿದ್ದಾರೆ. 2026ಕ್ಕೆ ಒಂದೊಳ್ಳೆಯ ಚಿತ್ರ ಸಿಕ್ಕಂತೆ ಆಗುತ್ತದೆ ಎಂಬುದು ಅವರ ಅಭಿಪ್ರಾಯ. ಹಲವು ಅತಿಥಿ ಪಾತ್ರಗಳು ಕೂಡ ಸಿನಿಮಾದಲ್ಲಿ ಇರಲಿವೆಯಂತೆ. ಈ ಎಲ್ಲಾ ಕಾರಣದಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rate Today: ಚಿನ್ನ, ಬೆಳ್ಳಿ ಬೆಲೆ ಮತ್ತೆ ಕುಸಿತ; ಇಲ್ಲಿದೆ ದರಪಟ್ಟಿ – Kannada News | Gold Price Today on 5th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 5: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಕುಸಿತದ ಹಾದಿಗೆ ಬಂದಿವೆ. ನಿನ್ನೆ ಬುಧವಾರ ಬರೋಬ್ಬರಿ 700ಕ್ಕೂ ಹೆಚ್ಚು ರೂಗಳಷ್ಟು ಹೆಚ್ಚಿದ್ದ ಚಿನ್ನದ ಬೆಲೆ (Gold Rates) ಇವತ್ತು 460 ರೂ ತಗ್ಗಿದೆ. ಬೆಳ್ಳಿ ಬೆಲೆಯೂ 20 ರೂ ಕಡಿಮೆ ಆಗಿದೆ. ಇದರ ಬೆಲೆ ನಿನ್ನೆ ಒಂದೇ ದಿನ ಬರೋಬ್ಬರಿ 40 ರೂಗಳಷ್ಟು ಹೆಚ್ಚಿತ್ತು. ಈಗ ಮತ್ತೆ ಇಳಿಕೆ ಕಂಡಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,550 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,420 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 30,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 30,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 5ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,442 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,155 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,582 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,442 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,155 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,155 ರೂ
  • ಚೆನ್ನೈ: 14,320 ರೂ
  • ಮುಂಬೈ: 14,155 ರೂ
  • ದೆಹಲಿ: 14,170 ರೂ
  • ಕೋಲ್ಕತಾ: 14,155 ರೂ
  • ಕೇರಳ: 14,155 ರೂ
  • ಅಹ್ಮದಾಬಾದ್: 14,160 ರೂ
  • ಜೈಪುರ್: 14,170 ರೂ
  • ಲಕ್ನೋ: 14,170 ರೂ
  • ಭುವನೇಶ್ವರ್: 14,155 ರೂ

ಇದನ್ನೂ ಓದಿ: ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ; ಇಗೋ ಇಲ್ಲಿವೆ ಕಾರಣಗಳು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 615 ರಿಂಗಿಟ್ (14,084 ರುಪಾಯಿ)
  • ದುಬೈ: 549.50 ಡಿರಾಮ್ (13,527 ರುಪಾಯಿ)
  • ಅಮೆರಿಕ: 153.50 ಡಾಲರ್ (13,878 ರುಪಾಯಿ)
  • ಸಿಂಗಾಪುರ: 195.40 ಸಿಂಗಾಪುರ್ ಡಾಲರ್ (13,866 ರುಪಾಯಿ)
  • ಕತಾರ್: 554 ಕತಾರಿ ರಿಯಾಲ್ (13,742 ರೂ)
  • ಸೌದಿ ಅರೇಬಿಯಾ: 555 ಸೌದಿ ರಿಯಾಲ್ (13,381 ರುಪಾಯಿ)
  • ಓಮನ್: 58.20 ಒಮಾನಿ ರಿಯಾಲ್ (13,669 ರುಪಾಯಿ)
  • ಕುವೇತ್: 44.78 ಕುವೇತಿ ದಿನಾರ್ (13,248 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 300 ರೂ
  • ಚೆನ್ನೈ: 300 ರೂ
  • ಮುಂಬೈ: 300 ರೂ
  • ದೆಹಲಿ: 300 ರೂ
  • ಕೋಲ್ಕತಾ: 300 ರೂ
  • ಕೇರಳ: 300 ರೂ
  • ಅಹ್ಮದಾಬಾದ್: 300 ರೂ
  • ಜೈಪುರ್: 300 ರೂ
  • ಲಕ್ನೋ: 300 ರೂ
  • ಭುವನೇಶ್ವರ್: 300 ರೂ
  • ಪುಣೆ: 300

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿಂದ ಹೊರಬರ್ತಿದ್ದಂತೆಯೇ ಮತ್ತೆ ಬಾಲಬಿಚ್ಚಿದ ಖತರ್ನಾಕ್ ವಂಚಕ: ಅಮಿತ್ ಶಾ ಆಪ್ತನೆಂದು ಹೇಳಿಕೊಂಡು ಮತ್ತಷ್ಟು ವಂಚನೆ – Kannada News | Karnataka Fraud: Sujayendra Arrested Again for Impersonating Amit Shah Aide, Fake Docs

ಸುಜಯೇಂದ್ರನ ವಿರುದ್ಧ ಮತ್ತೊಂದು FIR Image Credit source: Tv9 kannada

ಬೆಂಗಳೂರು, ಫೆ.5: ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರ ಆಪ್ತ ಎಂದು ಹೇಳಿಕೊಂಡು ತಿರುಗುತ್ತಿದ್ದ ಖತರ್ನಾಕ್ ವಂಚಕ ಸುಜಯೇಂದ್ರ (Sujayendra) ಎಂಬಾತನ ವಿರುದ್ಧ ಈಗ ಮತ್ತೊಂದು ಎಫ್‌ಐಆರ್ (FIR) ದಾಖಲಾಗಿದೆ. ಅಧಿಕಾರ ಮತ್ತು ಪ್ರಭಾವವನ್ನು ದುರುಪಯೋಗಪಡಿಸಿಕೊಂಡು ಈತ ನಡೆಸುತ್ತಿದ್ದ ಹಗರಣಗಳು ಒಂದೊಂದಾಗಿ ಹೊರಬರುತ್ತಿವೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ರಾಜ್ಯಪಾಲರ ನಕಲಿ ಸಹಿ ಮತ್ತು ಲೋಕಭವನದ ಅಧಿಕೃತ ಲೆಟರ್ ಹೆಡ್ ಅನ್ನು ಬಳಸಿಕೊಂಡು ವಂಚನೆ ಎಸಗಿದ್ದಾನೆ ಎಂದು ಹೇಳಲಾಗಿದೆ.

2025ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದಿದ್ದ ಸುಜಯೇಂದ್ರ, ರಾಜ್ಯಪಾಲರೇ ಶಿಫಾರಸು ಮಾಡಿದ್ದಾರೆ ಎಂದು ನಂಬಿಸಿ ಒಬ್ಬ ವಿದ್ಯಾರ್ಥಿಗೆ ಸೀಟ್ ಮಂಜೂರು ಮಾಡುವಂತೆ ಸೂಚಿಸಿದ್ದ ಎಂದು ಹೇಳಲಾಗಿದೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ವೈದ್ಯರೊಬ್ಬರಿಗೆ ತಾನು ಕೇಂದ್ರದಲ್ಲಿ ಪ್ರಭಾವಿ ವ್ಯಕ್ತಿ ಎಂದು ನಂಬಿಸಿ ಸುಮಾರು 2.5 ಕೋಟಿ ರೂಪಾಯಿ ವಂಚಿಸಿದ್ದ. ಈ ಪ್ರಕರಣದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಈತನ ಮನೆಯ ಮೇಲೆ ದಾಳಿ ನಡೆಸಿದಾಗ ಕೇಂದ್ರ ಗೃಹ ಸಚಿವಾಲಯ ಮತ್ತು ಲೋಕಭವನದ ಹೆಸರಿನ ಹಲವು ನಕಲಿ ಲೆಟರ್ ಹೆಡ್‌ಗಳು ಮತ್ತು ನಕಲಿ ಸೀಲುಗಳು ಪತ್ತೆಯಾಗಿದ್ದವು.

ಈ ಹಿಂದೆ ವಂಚನೆ ಕೇಸ್‌ನಲ್ಲಿ ಜೈಲು ಸೇರಿದ್ದ ಈತ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ. ಹೊರಬಂದ ಬೆನ್ನಲ್ಲೇ ಈತನ ಹಳೆಯ ನಕಲಿ ಪತ್ರಗಳ ಹಗರಣ ಈಗ ಬಯಲಾಗಿದೆ. ಪ್ರಕರಣದ ತನಿಖೆಯನ್ನು ವಿಧಾನಸೌಧ ಠಾಣೆಯಿಂದ ಕೇಸನ್ನು ವಿಜಯನಗರ ಠಾಣೆಗೆ ವರ್ಗಾಯಿಸಲಾಗಿದೆ. ನಕಲಿ ಪತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಸುಜಯೇಂದ್ರನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ವರದಿ ಪ್ರಕಾರ, ಸುಜಯೇಂದ್ರನ ಮನೆಯಲ್ಲಿ ಪತ್ತೆಯಾಗಿರುವ ದಸ್ತಾವೇಜುಗಳು ಮತ್ತು ಆತನ ವಂಚನೆಯ ಜಾಲವನ್ನು ನೋಡಿದರೆ, ಈ ಹಗರಣದ ವ್ಯಾಪ್ತಿ ದೊಡ್ಡದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಪರಾಧ ಪ್ರಮಾಣ ಕಡಿಮೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್​​​

ಸುಜಯೇಂದ್ರನ ಮನೆಯಲ್ಲಿ ಕೇವಲ ವಿಟಿಯು ಮಾತ್ರವಲ್ಲದೆ, ರಾಜ್ಯದ ಇತರ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಬರೆದಿದ್ದಾರೆ ಎನ್ನಲಾದ ಹಲವು ನಕಲಿ ಶಿಫಾರಸು ಪತ್ರಗಳು ಪತ್ತೆಯಾಗಿವೆ. ಮೆಡಿಕಲ್, ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಸೀಟು ಕೊಡಿಸಲು ಇವುಗಳನ್ನು ಬಳಸಲಾಗಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಜಮ್ಮು-ಕಾಶ್ಮೀರದ ವೈದ್ಯರ ಪ್ರಕರಣ ಹೊರಬಂದ ಮೇಲೆ ಅನೇಕರು ದೂರು ನೀಡಲು ಮುಂದೆ ಬರುತ್ತಿದ್ದಾರೆ. ಕೇಂದ್ರ ಸಚಿವರ ಹೆಸರು ಬಳಸುತ್ತಿದ್ದರಿಂದ ಅನೇಕ ಪೋಷಕರು ನಂಬಿ ಲಕ್ಷ ಲಕ್ಷ ಹಣವನ್ನು ನೀಡಿದ್ದಾರೆ. ಇದರ ಜತೆಗೆ ಯಾವುದೇ ಪತ್ರವಿಲ್ಲದೆ ಸೀಟು ಮಂಜೂರು ಮಾಡುವುದು ಸುಲಭವಲ್ಲ. ಹಾಗಾಗಿ, ವಿಶ್ವವಿದ್ಯಾಲಯಗಳ ಅಥವಾ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಈತನಿಗೆ ಅರಿವಿದ್ದೋ ಅಥವಾ ಅರಿವಿಲ್ಲದೆಯೋ ಸಹಕರಿಸಿದ್ದಾರೆಯೇ? ನಕಲಿ ಪತ್ರಗಳನ್ನು ಪರಿಶೀಲಿಸದೆ ಸೀಟು ನೀಡಲಾಗಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಎಫ್‌ಐಆರ್​ನಲ್ಲಿ ಏನಿದೆ?

ಸುಜಯೇಂದ್ರ ಹೆಚ್.ಎನ್ ಎಂಬ ವ್ಯಕ್ತಿಯು ಮಾನ್ಯ ರಾಜ್ಯಪಾಲರ ಸಹಿಯನ್ನು ನಕಲಿ ಸಹಿ ಮಾಡಿ ರಾಜ್ಯಪಾಲರ ಕಾರ್ಯಾಲಯದ ಅಧಿಕೃತ ಪತ್ರದ ಆದೇಶವನ್ನು ಅನಧಿಕೃತವಾಗಿ ಬಳಸಿಕೊಂಡು ಜೂನ್ 2025 ರಲ್ಲಿ ವಿ.ಟಿ.ಯು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರವನ್ನು ಹೊರಡಿಸಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಧಿಕೃತ ಲೆಟರ್ ಹೆಡ್‌ನ ದುರುಪಯೋಗ ಮತ್ತು ನಕಲಿ ಸಹಿಯು ಗಂಭೀರ ಅಪರಾಧವಾಗಿದ್ದು, ಇದರಿಂದ ಕಾರ್ಯಾಲಯಕ್ಕೆ ಆಡಳಿತಾತ್ಮಕವಾಗಿ ಮತ್ತು ಕಾನೂನು ಬದ್ಧ ಹಾಗೂ ಪ್ರತಿಷ್ಠೆಗೆ ಹಾನಿ ಉಂಟು ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಹೇಳಿದ್ದಾರೆ. ಬಿ.ಎನ್.ಎಸ್ (BNS) ಸೆಕ್ಷನ್ 336(3), 336(4), ಮತ್ತು 340(2) ಅಡಿಯಲ್ಲಿ ದಾಖಲಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು – Kannada News | Chennai Central Express Derailment Reported Near Odisha’s Jakhapura

ಜಾಜ್​ಪುರ, ಫೆಬ್ರವರಿ 05: ಒಡಿಶಾದ ಜಾಜ್​ಪುರ ಜಿಲ್ಲೆಯ ಜಖಾಪುರ ರೈಲು ನಿಲ್ದಾಣದ ಬಳಿ ಚೆನ್ನೈ ಸೆಂಟ್ರಲ್ ಎಕ್ಸ್​ಪ್ರೆಸ್ ರೈಲು ಹಳಿ ತಪ್ಪಿದೆ. ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ರೈಲು ಭುವನೇಶ್ವರದಿಂದ ಕೋಲ್ಕತ್ತಾಗೆ ತೆರಳುತ್ತಿತ್ತು. ಮಾಧ್ಯಮ ವರದಿಗಳ ಪ್ರಕಾರ, ಭದ್ರಕ್‌ನಿಂದ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಅಧಿಕಾರಿಗಳು  ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಮತ್ತು ಬೋಗಿಗಳಿಗೂ ಅಷ್ಟಾಗಿ ಹಾನಿಯಾಗಿಲ್ಲ ಎಂದು ದೃಢಪಡಿಸಿದ್ದಾರೆ. ಘಟನೆಯ ನಂತರ ರೈಲು ಮಾರ್ಗದ ಹಾನಿಗೊಳಗಾದ ಭಾಗದಲ್ಲಿ ಮರುಸ್ಥಾಪನೆ ಕಾರ್ಯ ಪ್ರಾರಂಭವಾಯಿತು.

ಏತನ್ಮಧ್ಯೆ, ಹಳಿಗಳನ್ನು ತೆರವುಗೊಳಿಸಲು ಮತ್ತು ಸಾಧ್ಯವಾದಷ್ಟು ಬೇಗ ರೈಲು ಸೇವೆಗಳನ್ನು ಪುನರಾರಂಭಿಸಲು ಎಂಜಿನಿಯರಿಂಗ್ ತಂಡಗಳನ್ನು ನಿಯೋಜಿಸಲಾಗಿದೆ. ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.ಮಾರ್ಗದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಕ್ರಮಗಳನ್ನು ಪ್ರಾರಂಭಿಸಿದರು . ಹಳಿ ತಪ್ಪಲು ನಿಖರವಾದ ಕಾರಣ ಇನ್ನೂ ದೃಢೀಕರಿಸಲಾಗಿಲ್ಲ ಮತ್ತು ಮರು ಸ್ಥಾಪನೆ ಪ್ರಯತ್ನಗಳು ಮುಗಿದು ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ವಿವರವಾದ ತನಿಖೆಯನ್ನು ಮಾಡಲಾಗುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Viral: ಬೆಂಗಳೂರಿನಲ್ಲಿ ಬಾಡಿಗೆ ಮನೆ ತೋರಿಸಲು ದುಡ್ಡು ಕೇಳ್ತಾರೆ; ಮನೆ ಮಾಲೀಕನ ದುರಾಸೆ ಕಂಡು ಶಾಕ್ ಆದ ವ್ಯಕ್ತಿ – Kannada News | Bengaluru: Bengaluru landlord asks to pay one month’s rent if you go to see a rented house

ಬೆಂಗಳೂರು, ಫೆಬ್ರವರಿ 05: ಈಗಿನ ದುಬಾರಿ ದುನಿಯಾದಲ್ಲಿ ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರದಲ್ಲಿ ಬಾಡಿಗೆ ಮನೆಯಲ್ಲಿ ಇರುವುದು ಕಷ್ಟಕರ. ದುಡಿದ ಹಣವನ್ನೆಲ್ಲವೂ ಬಾಡಿಗೆ ಕಟ್ಟುವುದಕ್ಕೆ ಆಗುತ್ತದೆ. ಆದರೆ ಮನೆ ಮಾಲೀಕರು ತಿಂಗಳ ಬಾಡಿಗೆ ಸಾವಿರ ಅಲ್ಲ, ಲಕ್ಷ ರೂ ಹೇಳ್ತಾರೆ. ಆದರೆ ಬೆಂಗಳೂರಿನಲ್ಲಿ ಮನೆಯನ್ನು ಹುಡುಕುತ್ತಿರುವಾಗ ಎದುರಾದ ಅನಿರೀಕ್ಷಿತ ಘಟನೆಯ ಬಗ್ಗೆ ವಿವರಿಸಿದ್ದಾರೆ. ಮನೆ ಹೇಗಿದೆ ಎಂದು ನೋಡಲು ಒಂದು ತಿಂಗಳ ಬಾಡಿಗೆ ನೀಡಬೇಕೆಂದ ಮನೆ ಮಾಲೀಕರ ವಿಚಿತ್ರ ಬೇಡಿಕೆ ಕಂಡು ಶಾಕ್ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಯುವ ವೃತ್ತಿಪರರೊಬ್ಬರು ಬೆಂಗಳೂರಿನ ಮನೆ ಮಾಲೀಕರ ಆಸೆ ಬುರುಕುತನದ ಬಗ್ಗೆ ವಿವರಿಸಿದ್ದಾರೆ. ಫ್ಲಾಟ್ ನೋಡಲು ಒಂದು ತಿಂಗಳ ಬಾಡಿಗೆ ಕೇಳಿದೆ” ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ಘಟನೆ ಸುಮಾರು ಎರಡು ತಿಂಗಳ ಹಿಂದೆ ನಡೆದಿತ್ತು. ಬಹುಮಹಡಿ ಕಟ್ಟಡದ ಸುತ್ತಲೂ ನಡೆದುಕೊಂಡು ಹೋಗುತ್ತಿದ್ದಾಗ ಭದ್ರತಾ ಸಿಬ್ಬಂದಿ ಬಳಿ ಯಾವುದಾದರೂ ಫ್ಲಾಟ್‌ಗಳು ಖಾಲಿ ಇವೆಯೇ ಎಂದು ಕೇಳಿದೆ. ಭದ್ರತಾ ಸಿಬ್ಬಂದಿ ಒಂದು ಫ್ಲಾಟ್ ಖಾಲಿಯಿದೆ ಎಂದು ಹೇಳಿ ಮನೆಮಾಲೀಕರ ಫೋನ್ ನಂಬರ್ ಕೊಟ್ಟರು ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಮಾಲೀಕರಿಗೆ ಕರೆ ಮಾಡಿದ ಬಳಿಕ ಭದ್ರತಾ ಸಿಬ್ಬಂದಿ ಫ್ಲಾಟ್ ತೋರಿಸಿದರು. ಸಂಭಾಷಣೆಯ ಸಮಯದಲ್ಲಿ ಯಾವುದೇ ಶುಲ್ಕ, ಠೇವಣಿ ಅಥವಾ ವಿಶೇಷ ಶುಲ್ಕದ ಉಲ್ಲೇಖವಿರಲಿಲ್ಲ. ಆದರೆ ಸೆಕ್ಯೂರಿಟಿ ಗಾರ್ಡ್ ವಿಚಿತ್ರ ಬೇಡಿಕೆ ಇಟ್ಟರು. ಅಪಾರ್ಟ್ಮೆಂಟ್ ತೋರಿಸಲು ನಾನು ಒಂದು ತಿಂಗಳ ಬಾಡಿಗೆಯನ್ನು ಪಾವತಿಸಬೇಕೆಂದು ಭದ್ರತಾ ಸಿಬ್ಬಂದಿ ನನಗೆ ಹೇಳಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿರಲಿಲ್ಲ. ಇದು ದಲ್ಲಾಳಿ ಅಥವಾ ಯಾವುದೇ ಅಧಿಕೃತ ವ್ಯವಹಾರವಾಗಿರಲಿಲ್ಲ. ಬಾಗಿಲು ತೆರೆದು ಫ್ಲಾಟ್ ತೋರಿಸಲು ಹಣ ನೀಡಬೇಕೇ? ಎಂದು ಇಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ಗುರಂಗಾವ್‌ಗೆ ಸ್ಥಳಾಂತರಗೊಳ್ಳುವ ಹಿಂದಿನ ಕಾರಣ ವಿವರಿಸಿದ ವ್ಯಕ್ತಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇಲ್ಲಿಗೆ ದುಡ್ಡಿಗೆ ಮಾತ್ರ ಬೆಲೆ ಎಂದಿದ್ದಾರೆ. ಮತ್ತೊಬ್ಬರು, ಭಾರತದಲ್ಲಿ ಎಲ್ಲರೂ ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ನೈತಿಕವಾಗಿ ದಿವಾಳಿಯಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮನೆ ಮಾಲೀಕರು ಬಾಡಿಗೆ ಹೆಸರಿನಲ್ಲಿ ಜನರಿಂದ ಬೇಕಾಬಿಟ್ಟಿ ದುಡ್ಡು ವಸೂಲಿ ಮಾಡುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:11 am, Thu, 5 February 26

Source link

Daily Devotional: ಕುಂಕುಮ ಅಥವಾ ವಿಭೂತಿ ಹಚ್ಚುವಾಗ ಈ ತಪ್ಪು ಮಾಡಲೇಬೇಡಿ; ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Significance of Kumkum Application: A Guide to Finger Usage

ಕುಂಕುಮ ಮತ್ತು ವಿಭೂತಿ ಹಚ್ಚುವ ಸರಿಯಾದ ವಿಧಾನ

ದೇವಸ್ಥಾನದಿಂದ ತಂದ ಕುಂಕುಮ ಅಥವಾ ಅರ್ಚನೆ ಮಾಡಿದ ಕುಂಕುಮ ಇರಬಹುದು, ಈ ಪವಿತ್ರ ವಸ್ತುಗಳನ್ನು ಹಚ್ಚುವಾಗ ಯಾವ ಬೆರಳನ್ನು ಬಳಸಬೇಕು ಎಂಬುದು ಬಹಳ ಮುಖ್ಯ. ಸರಿಯಾದ ವಿಧಿ-ವಿಧಾನಗಳ ಮುಖೇನ ಕುಂಕುಮ ಹಚ್ಚಿದಾಗ ಬಾಂಧವ್ಯಗಳು ಉತ್ತಮಗೊಳ್ಳುತ್ತವೆ, ಅಹಂಕಾರ ಕಡಿಮೆಯಾಗುತ್ತದೆ, ಅದೃಷ್ಟ ಕೂಡಿಬರುತ್ತದೆ ಮತ್ತು ಶುಭ ಫಲಗಳು ದೊರೆಯುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಕುಂಕುಮವನ್ನು ಯಾವಾಗಲೂ ಬಲಗೈಯಿಂದಲೇ ಹಚ್ಚಬೇಕು. ನಮ್ಮ ಬಲಗೈಯಲ್ಲಿರುವ ಐದು ಬೆರಳುಗಳು ಒಂದೊಂದು ಗ್ರಹಕ್ಕೆ ಪ್ರತೀಕವಾಗಿವೆ. ಹೆಬ್ಬೆರಳು ಶುಕ್ರನಿಗೆ ಪ್ರತೀಕವಾದರೆ, ತೋರುಬೆರಳು ಗುರುವಿನ ಪ್ರತೀಕ, ಮಧ್ಯದ ಬೆರಳು ಶನಿಯ ಪ್ರತೀಕ, ಉಂಗುರದ ಬೆರಳು ರವಿಯ ಪ್ರತೀಕ ಮತ್ತು ಕಿರುಬೆರಳು ಬುಧನ ಸಂಕೇತವಾಗಿದೆ. ಈ ಗ್ರಹಗಳ ಪ್ರಭಾವಕ್ಕೆ ಅನುಗುಣವಾಗಿ, ನಿರ್ದಿಷ್ಟ ಬೆರಳಿನಿಂದ ಕುಂಕುಮ ಹಚ್ಚುವುದರಿಂದ ನಿರ್ದಿಷ್ಟ ಪ್ರಯೋಜನಗಳನ್ನು ಪಡೆಯಬಹುದು.

ಸ್ವತಃ ಕುಂಕುಮ ಅಥವಾ ವಿಭೂತಿ ಹಚ್ಚಿಕೊಳ್ಳುವ ವಿಧಾನ:

ನಾವು ಸ್ವತಃ ಕುಂಕುಮ ಅಥವಾ ವಿಭೂತಿಯನ್ನು ಹಚ್ಚಿಕೊಳ್ಳುವಾಗ ಮಧ್ಯದ ಬೆರಳನ್ನು ಬಳಸಬೇಕು. ಇದು ಶನಿಯ ಬೆರಳು ಎಂದು ಪರಿಗಣಿಸಲಾಗುತ್ತದೆ. ಈ ಬೆರಳಿನಿಂದ ಕುಂಕುಮ ಹಚ್ಚಿಕೊಂಡಾಗ ಶನಿಯ ಕಾಟ ಕಡಿಮೆಯಾಗುತ್ತದೆ, ಆಯಸ್ಸು ವೃದ್ಧಿಯಾಗುತ್ತದೆ, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಮತ್ತು ಆರ್ಥಿಕವಾಗಿ ಸಬಲತೆ ಸಿಗುತ್ತದೆ ಎಂದು ನಂಬಿಕೆ ಇದೆ. ಶನಿಯು ಆಯುಷ್ಕಾರಕನಾಗಿರುವುದರಿಂದ, ಈ ಅಭ್ಯಾಸವು ದೀರ್ಘಾಯುಷ್ಯ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತದೆ.

ಮುತ್ತೈದೆಯರು, ಹಿರಿಯರು, ಅತಿಥಿಗಳು ಮತ್ತು ಮಕ್ಕಳಿಗೆ ಕುಂಕುಮ ಹಚ್ಚುವ ವಿಧಾನ:

ಮನೆಗೆ ಬಂದ ಮುತ್ತೈದೆಯರಿಗೆ, ಹಿರಿಯರಿಗೆ, ಗುರುಗಳಿಗೆ ಅಥವಾ ಪುಟ್ಟ ಮಕ್ಕಳಿಗೆ ಕುಂಕುಮ ಹಚ್ಚುವಾಗ ಹೆಬ್ಬೆರಳನ್ನು ಬಳಸಬೇಕು. ಹೆಬ್ಬೆರಳಿನ ಮುಖೇನ ಕುಂಕುಮ ಹಚ್ಚುವುದರಿಂದ ಬಾಂಧವ್ಯಗಳು ಗಟ್ಟಿಯಾಗುತ್ತವೆ ಮತ್ತು ಪರಸ್ಪರ ಸಹಕಾರಾತ್ಮಕ ಪ್ರತಿಕ್ರಿಯೆ ಏರ್ಪಡುತ್ತದೆ. ಇದು ಗೌರವ ಮತ್ತು ಪ್ರೀತಿಯ ಸಂಕೇತವಾಗಿದೆ.

ದೇವತಾ ಚಿತ್ರಪಟಗಳು ಮತ್ತು ವಿಗ್ರಹಗಳಿಗೆ ಕುಂಕುಮ ಹಚ್ಚುವ ವಿಧಾನ:

ದೇವತಾ ಚಿತ್ರಪಟಗಳು, ವಿಗ್ರಹಗಳು ಅಥವಾ ಬಿಂಬಗಳಿಗೆ ಕುಂಕುಮ ಹಚ್ಚುವಾಗ ಉಂಗುರದ ಬೆರಳನ್ನು ಬಳಸಬೇಕು. ಇದನ್ನು ರವಿಯ ಬೆರಳು ಎಂದು ಕರೆಯಲಾಗುತ್ತದೆ. ಗಂಧ ಹಚ್ಚುವಾಗಲೂ ಇದೇ ಬೆರಳನ್ನು ಬಳಸಬಹುದು. ಆದರೆ, ಗಂಧ ಮತ್ತು ಕುಂಕುಮವನ್ನು ಹಚ್ಚುವಾಗ ಒಂದು ಮುಖ್ಯ ನಿಯಮ ಪಾಲಿಸಬೇಕು. ಮೊದಲು ಗಂಧ ಹಚ್ಚಿ, ನಂತರ ಕೈಯನ್ನು ಚೆನ್ನಾಗಿ ತೊಳೆದು ಅಥವಾ ಒರೆಸಿಕೊಂಡು ನಂತರ ಕುಂಕುಮ ಹಚ್ಚಬೇಕು. ಗಂಧದೊಂದಿಗೆ ಕುಂಕುಮವನ್ನು ಮಿಶ್ರಣ ಮಾಡಿ ಹಚ್ಚಬಾರದು. ರವಿಯ ಬೆರಳಿನಿಂದ ವಿಗ್ರಹಗಳು ಅಥವಾ ಚಿತ್ರಪಟಗಳನ್ನು ಸ್ಪರ್ಶಿಸಿದಾಗ ವಿಶೇಷವಾದ ಲಹರಿಗಳು ದೇಹದಲ್ಲಿ ಹರಿಯುತ್ತವೆ ಎಂದು ನಂಬಲಾಗಿದೆ. ಈ ಕ್ರಿಯೆಯನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಮಾಡಬಹುದು.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಪಿತೃದೇವತೆಗಳು ಮತ್ತು ದೈವಾಧೀನರಾದವರಿಗೆ ಕುಂಕುಮ ಅಥವಾ ವಿಭೂತಿ ಹಚ್ಚುವ ವಿಧಾನ:

ಮರಣ ಹೊಂದಿದವರು, ನಮಗೆ ಸಹಾಯ ಮಾಡಿದವರು ಅಥವಾ ನಮ್ಮ ಶರೀರಕ್ಕೆ ಕಾರಣರಾದ ಪಿತೃದೇವತೆಗಳು ಮತ್ತು ದೈವಾಧೀನರಾದವರಿಗೆ ಕುಂಕುಮ ಅಥವಾ ವಿಭೂತಿ ಹಚ್ಚುವಾಗ ತೋರುಬೆರಳನ್ನು ಬಳಸಬೇಕು. ಇದನ್ನು ಗುರುವಿನ ಬೆರಳು ಎಂದು ಪರಿಗಣಿಸಲಾಗುತ್ತದೆ. ತೋರುಬೆರಳಿನಿಂದ ಕುಂಕುಮ ಅಥವಾ ವಿಭೂತಿ ಹಚ್ಚುವುದರಿಂದ ಜೀವಂತವಾಗಿರುವವರೊಂದಿಗಿನ ಬಾಂಧವ್ಯಗಳು ಸುಧಾರಿಸುತ್ತವೆ ಮತ್ತು ದೈವಾಧೀನರಾದವರ ಪರಿಪೂರ್ಣ ಆಶೀರ್ವಾದ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ, ಸರ್ವವ್ಯಾಪಿಯಾದ ಭಗವಂತನ ಕೃಪೆಯೂ ಸಿಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs DC: ಫೈನಲ್​ನಲ್ಲಿ ಗೆಲ್ಲೋದು ಇವರಂತೆ… ಹೀಗೊಂದು ಲೆಕ್ಕಾಚಾರ – Kannada News | WPL 2026: Eliminator has always defeated the table topping team in the final

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ ಸೀಸನ್-4 ಕ್ಕೆ ಇಂದು (ಫೆ.5) ತೆರೆ ಬೀಳಲಿದೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ. ಈ ಮುಖಾಮುಖಿಯಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದೇ ಕುತೂಹಲ. ಈ ಕುತೂಹಲಕ್ಕೆ ಕಿಚ್ಚು ಹಚ್ಚುವಂತಹ ಲೆಕ್ಕಾಚಾರವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಅದೇನೆಂದರೆ ಎಲಿಮಿನೇಟರ್ ಪಂದ್ಯ ಗೆದ್ದವರೇ ಚಾಂಪಿಯನ್.

ವುಮೆನ್ಸ್ ಪ್ರೀಮಿಯರ್ ಲೀಗ್​ನ ಕಳೆದ ಮೂರು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಫೈನಲ್ ಪಂದ್ಯ ಗೆದ್ದಿರುವ ತಂಡ.

ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಬದಲಾಗಿ ಎಲಿಮಿನೇಟರ್ ಪಂದ್ಯ ಗೆದ್ದು ಬಂದಂತಹ ತಂಡಗಳವೇ ಚಾಂಪಿಯನ್ ಪಟ್ಟ ಅಲಂಕರಿಸಿದೆ.

  • 2023 ರಲ್ಲಿ ನಡೆದ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿತ್ತು. ಈ ವೇಳೆ ದ್ವಿತೀಯ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
  • 2024 ರ ವುಮೆನ್ಸ್ ಪ್ರೀಮಿಯರ್ ಲೀಗ್​ನ ಅಂಕ ಪಟ್ಟಿಯ ಟಾಪ್-3 ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಾಣಿಸಿಕೊಂಡಿತ್ತು. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್​ಗೇರಿದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್  ತಂಡಕ್ಕೆ ಸೋಲುಣಿಸಿ ಆರ್​ಸಿಬಿ ಫೈನಲ್​ಗೆ ಪ್ರವೇಶಿಸಿತ್ತು. ಅಷ್ಟೇ ಅಲ್ಲದೆ ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿ ಆರ್​ಸಿಬಿ ಪ್ರಶಸ್ತಿ ಗೆದ್ದುಕೊಂಡಿದ್ದರು.
  • 2025 ರ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದರೆ, ಮುಂಬೈ ಇಂಡಿಯನ್ಸ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಅದರಂತೆ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡಕ್ಕೆ ಸೋಲುಣಿಸಿ ಮುಂಬೈ ಇಂಡಿಯನ್ಸ್ ಫೈನಲ್​ಗೇರಿತ್ತು. ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್

ಅಂದರೆ ಕಳೆದ ಮೂರು ಸೀಸನ್​ಗಳಲ್ಲೂ ಎಲಿಮಿನೇಟರ್ ಪಂದ್ಯವಾಡಿದ ತಂಡವೇ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಬಾರಿ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದಿರುವುದು ಡೆಲ್ಲಿ ಕ್ಯಾಪಿಟಲ್ಸ್. ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಇದಾಗ್ಯೂ ಆರ್​ಸಿಬಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಈ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಲಿದ್ದಾರಾ ಕಾದು ನೋಡಬೇಕಿದೆ.

Source link

ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ: ಪತ್ನಿಯ ಹರಕೆ ಸಲ್ಲಿಸಲು ಪತಿಯ ಪ್ರೀತಿಯ ಆಸರೆ – Kannada News | Oxygen Cylinder Carried for Mayakka Devi Darshan: Husband’s Love Helps Ailing Wife Fulfil Vow at Chinchali Jatra

ಚಿಕ್ಕೋಡಿ, ಫೆಬ್ರವರಿ 5: ಅಚಲವಾದ ಶ್ರದ್ಧೆ, ಭಕ್ತಿ, ನಂಬಿಕೆ ಇದ್ದರೆ ಯಾವುದೂ ಅಡ್ಡಿಯಾಗಲ್ಲ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಮಾಯಕ್ಕಾ ದೇವಿ ಜಾತ್ರೆಯಲ್ಲಿ ಕಂಡು ಬಂದ ಅಪರೂಪದ ವಿದ್ಯಮಾನ ಸಾಕ್ಷಿಯಾಗಿದೆ. ತೀವ್ರ ಉಸಿರಾಟದ ತೊಂದರೆ ಇದ್ದರೂ ಪತ್ನಿಯ ಇಚ್ಛೆಯನ್ನು ನೆರವೇರಿಸಲು ಪತಿ ಆಕ್ಸಿಜನ್ ಸಿಲಿಂಡರ್ ಜೊತೆಗೇ ಬಂದು ದೇವಿಯ ದರ್ಶನ ಮಾಡಿಸಿದ್ದು ಭಕ್ತರ ಮನಸೂರೆಗೊಳ್ಳುವಂತೆ ಮಾಡಿದೆ.

ಭಾರತ ಹುಣ್ಣಿಮೆ ಪ್ರಯುಕ್ತ ನಡೆಯುತ್ತಿರುವ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಭಕ್ತಸಾಗರದ ನಡುವೆಯೇ ಮಹಾರಾಷ್ಟ್ರದ ಪಂಢರಪುರದಿಂದ ದಂಪತಿ ದರ್ಶನಕ್ಕೆ ಆಗಮಿಸಿದ್ದಾರೆ. ಪತ್ನಿಗೆ ಉಸಿರಾಟದ ತೊಂದರೆ ಇರುವ ಕಾರಣ, ಆಕ್ಸಿಜನ್ ಸಿಲಿಂಡರ್ ಕೈಯಲ್ಲಿ ಹಿಡಿದುಕೊಂಡೇ ಪತಿ ದೇವಸ್ಥಾನದವರೆಗೆ ಹೆಜ್ಜೆ ಹಾಕಿ ದೇವಿಯ ದರ್ಶನ ಮಾಡಿಸಿದ್ದಾರೆ.

ಅನಾರೋಗ್ಯವನ್ನೇ ಲೆಕ್ಕಿಸದೇ ದೇವಿಯ ದರ್ಶನ ಪಡೆದ ದಂಪತಿಯ ಭಕ್ತಿ ಸ್ಥಳೀಯರ ಮನಸೆಳೆದಿದೆ. ‘ನಾವು ಮಹಾರಾಷ್ಟ್ರದ ಪಂಢರಪುರದಿಂದ ಬಂದಿದ್ದೇವೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಮಾಯಕ್ಕಾ ದೇವಿ ದರ್ಶನಕ್ಕೆ ಬರುತ್ತಿದ್ದೇವೆ. ಈ ಬಾರಿ ಪತ್ನಿಯ ಆರೋಗ್ಯ ಸಮಸ್ಯೆ ಇದ್ದರೂ ದೇವಿಯ ಕೃಪೆಯಿಂದ ದರ್ಶನ ಚೆನ್ನಾಗಿ ಆಯಿತು’ ಎಂದು ಪತಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link