ಬೆಂಗಳೂರು: ಇಬ್ಬಲೂರು ಜಂಕ್ಷನ್ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್, ಟ್ರಾಫಿಕ್ಗೆ ಸಿಗಲಿದೆ ಮುಕ್ತಿ – Kannada News | New Flyover Planned at Ibbaluru Junction in Bengaluru to Ease Traffic Congestion; DPR Preparation Begins
ಬೆಂಗಳೂರು, ಫೆಬ್ರವರಿ 5: ಬೆಂಗಳೂರಿನ ಇಬ್ಬಲೂರು ಜಂಕ್ಷನ್ ವಾಹನ ಸವಾರರಿಗೆ ನಿತ್ಯ ತಲೆನೋವಾಗಿ ಪರಿಣಮಿಸಿದೆ. ಬೆಳ್ಳಂದೂರು, ಸರ್ಜಾಪುರ, ಎಚ್‌ಎಸ್‌ಆರ್ ಲೇಔಟ್ ಮತ್ತು ಕಾಡುಬೀಸನಹಳ್ಳಿಯಂತಹ ಪ್ರದೇಶಗಳಿಂದ ಬರುವ ವಾಹನಗಳು ಇದೇ ಜಂಕ್ಷನ್ ಮೂಲಕ ಹಾದು ಹೋಗುವುದರಿಂದ ಇಲ್ಲಿ ನಿರಂತರವಾಗಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಅಸ್ತಿತ್ವದಲ್ಲಿರುವ ಮೇಲ್ಸೇತುವೆ ಕಿರಿದಾಗಿದ್ದು, ವಾಹನಗಳ ದಟ್ಟಣೆಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು…