ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ, ವೆನೆಜುವೆಲಾದ ತೈಲ ಖರೀದಿ ಕುರಿತು ರಷ್ಯಾ ಮಾತು – Kannada News | After US Venezuela Outreach, Russia Reaffirms India’s Oil Independence
ಮಾಸ್ಕೋ, ಫೆಬ್ರವರಿ 05: ಭಾರತವು ಯಾವುದೇ ದೇಶದಿಂದ ಕಚ್ಚಾತೈಲವನ್ನು ಖರೀದಿಸಲು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಎಂದು ರಷ್ಯಾ(Russia) ಹೇಳಿದೆ. ರಷ್ಯಾ ಎಂದಿಗೂ ಭಾರತದ ಏಕೈಕ ಇಂಧನ ಪಾಲುದಾರನಾಗಿರಲಿಲ್ಲ ಮತ್ತು ತೈಲ ಖರೀದಿಯ ಮೂಲಗಳಲ್ಲಿನ ಬದಲಾವಣೆಯನ್ನು ಅಸಾಮಾನ್ಯವೆಂದು ಪರಿಗಣಿಸುವುದು ತಪ್ಪು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಪೆಸ್ಕೋವ್ ಮಾತನಾಡಿ, ಇತರ ಎಲ್ಲಾ ಅಂತಾರಾಷ್ಟ್ರೀಯ ಇಂಧನ ತಜ್ಞರಂತೆ, ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಏಕೈಕ ದೇಶ ರಷ್ಯಾ ಅಲ್ಲ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಭಾರತವು…