Category Archives: Blog

Your blog category

ದಿನ ಭವಿಷ್ಯ: ದಿನದ ಪಂಚಾಂಗ ಮತ್ತು ಸಂಕಷ್ಟಿ ಚತುರ್ಥಿಯ ಮಹತ್ವ – Kannada News | Days Panchangam and Sankashti Chaturthi Significance by Dr. Basavaraj Guruji

ಇಂದಿನ ದಿನಾಂಕ 05-02-2026 ಗುರುವಾರವಾಗಿದ್ದು, ಇಂದಿನ ದಿನಭವಿಷ್ಯ ಹೇಗಿದೆ ಎಂಬುದನ್ನು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಇದು ವಿಶ್ವಾ ವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಚತುರ್ಥಿ, ಉತ್ತರಾ ನಕ್ಷತ್ರ, ಸುಕರ್ಮ ಯೋಗ ಮತ್ತು ಬವಕರಣ ಇರುವ ದಿನ. ಈ ದಿನದ ರಾಹುಕಾಲ ಮಧ್ಯಾಹ್ನ 2:00 ಗಂಟೆಯಿಂದ 3:28 ನಿಮಿಷದ ತನಕ ಇರುತ್ತದೆ. ಹಾಗೆಯೇ, ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲವು ಮಧ್ಯಾಹ್ನ 12:33 ನಿಮಿಷದಿಂದ 1:59 ನಿಮಿಷದ ತನಕ ಸುಕರ್ಮ ಕಾಲ ರೂಪದಲ್ಲಿ ಇರುತ್ತದೆ. ಗುರುವಾರ ಗುರುಗಳ ಲಹರಿಗಳು ಇರತಕ್ಕಂತಹ ಅದ್ಭುತವಾದ ಮತ್ತು ವಿಶೇಷವಾದ ದಿನ ಇದಾಗಿದೆ. ಕೃಷ್ಣಪಕ್ಷದ ಚತುರ್ಥಿ ಇರುವುದರಿಂದ ಇದನ್ನು ಸಂಕಷ್ಟಿ ಚತುರ್ಥಿ ಎಂದು ಕರೆಯಲಾಗುತ್ತದೆ. ಶುಕ್ಲಪಕ್ಷದ ಚತುರ್ಥಿಯನ್ನು ವಿನಾಯಕಿ ಚತುರ್ಥಿ ಎಂದು ಕರೆಯುತ್ತಾರೆ. ಇಂದು ಸಂಕಷ್ಟ ಚತುರ್ಥಿ ಇರುವ ಕಾರಣ, ಬೆಳಗಿನ ಜಾವ ವಿನಾಯಕನ ಪೂಜೆ ಮಾಡಿ ಉಪವಾಸ ಆಚರಿಸಬೇಕು. ದಿನಪೂರ್ತಿ ವಿನಾಯಕನ ಆರಾಧನೆ ಮಾಡುವುದರಿಂದ ನಮ್ಮ ಸಂಕಲ್ಪಗಳು ಈಡೇರತಕ್ಕಂತಹ ಪರ್ವ ದಿನ ಇದಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಶತ್ರುಪಕ್ಷದಿಂದ ಆಹ್ವಾನ, ಅವ್ಯಕ್ತ ಭಯ – Kannada News | Horoscope 05 February 2026; Dina Rashi Bhavishya Today, Checkout the details here

ಮೇಷ ರಾಶಿ:

ನಿಮ್ಮ ವೃತ್ತಿ ಸ್ಥಳವು ಬದಲಾಗಬಹುದು. ಹೊಸದಾಗಿ ಉದ್ಯೋಗವನ್ನು ಮಾಡುವವರಿಗೆ ಆಯ್ಕೆಯಲ್ಲಿ ಗೊಂದಲವು ಕಾಣಿಸಿಕೊಂಡೀತು. ನಿಮ್ಮ ಪರೀಕ್ಷೆಯ ಕಾಲವೂ ಇದಾಗಲಿದೆ. ತಂದೆಯ ಸೇವೆಯನ್ನು ಮಾಡುವಿರಿ. ಶ್ರಮಕ್ಕೆ ಯೋಗ್ಯವಾದ ಫಲವನ್ನೇ ನಿರೀಕ್ಷಿಸಿ. ಇನ್ನೊಬ್ಬರ ಯೋಚನೆಯನ್ನು ಕದಿಯಬಹುದು. ಕೆಲವು ವಿಚಾರದಲ್ಲಿ ನೀವು ನಿಯಂತ್ರಣವನ್ನು ತಪ್ಪಬಹುದು. ಅಲ್ಪ ವಸ್ತುಗಳಿಂದ ಸಂತೋಷವಾಗಿ ಇರಲು ಬಯಸುವಿರಿ. ಹಳೆಯ ವಸ್ತುಗಳನ್ನು ಯಾರಿಗಾದರೂ ಕೊಡುವಿರಿ.

ವೃಷಭ ರಾಶಿ:

ಸಾವಧಾನತೆಯನ್ನು ನೀವು ರೂಢಿಸಿಕೊಳ್ಳಬೇಕಾದೀತು. ನಿಮ್ಮ ನಾಟಕೀಯ ಮನೋಭಾವವು ಇತರರಿಗೆ ಗೊತ್ತಾದೀತು. ಮಕ್ಕಳಿಗೆ ತಂದೆಯಿಂದ ಸಹಾಯವು ಸಿಗಬಹುದು. ಕಾರ್ಯಗಳು ಸಮಯಮಿತಿಯನ್ನು ಮೀರಿ ವಿಳಂಬವು ನಿಮಗೆ ಇಷ್ಟವಾಗದು. ಅನಾರೋಗ್ಯದಿಂದ ನೀವು ಗುಣಮುಖರಾದರೂ ಪೂರ್ಣ ಹೊರ ಬರಲು ಆಗದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಇಂದಿನ ಪ್ರಯಾಣವನ್ನು ಅನಿವಾರ್ಯವಾದರೆ ಮಾತ್ರ ಮಾಡಿ.‌

ಮಿಥುನ ರಾಶಿ:

ಸ್ಮರಣಶಕ್ತಿಯ ಕೊರತೆಯು ಅಧಿಕವಾಗಿ ಕಾಡಬಹುದು. ಸೌಂದರ್ಯದ ಬಗ್ಗೆ ಅತಿಯಾದ ಕಳಜಿ ಕಾಣಿಸುವುದು. ಧಾರ್ಮಿಕ ವಿಚಾರದ ಬಗ್ಗೆ ಹೆಚ್ಚು ಆಸಕ್ತಿ ಇರುವುದು. ಬಂಧುಗಳು ನಿಮ್ಮ ಬಗ್ಗೆ ಔದಾರ್ಯ ತೋರಿಸುವರು. ಸಹಾಯವೂ ಸಿಗಬಹುದು. ನಿಮ್ಮ ಸರಳತೆಯನ್ನು ಆಡಿಕೊಳ್ಳುವರು. ಯಾರನ್ನೂ ದೂಷಿಸುತ್ತ ಇರಬೇಡಿ.‌ ಇನ್ನೊಬ್ಬರಿಗೆ ಹಣವನ್ನು ಕೊಡುವಾಗ ವ್ಯಕ್ತಿತ್ವದ‌ ಬಗ್ಗೆ ಗಮನವಿರಲಿ. ಎಲ್ಲವೂ ನಿಮ್ಮ ಮೂಗಿನ‌ ನೇರಕ್ಕೆ ನಡೆಯಬೇಕು ಎನ್ನುವುದು ತಪ್ಪಾದೀತು.

ಕರ್ಕಾಟಕ ರಾಶಿ:

ನಿಮ್ಮ ಮಾತುಗಳಿಂದ ಅನರ್ಥವಾಗಬಹುದು. ಇಂದು ನಿಮಗೆ ಮಾತನಾಡುವ ಅವಕಾಶ ಸಿಕ್ಕರೆ ಮಿತವಾಗಿ ಆಡಬೇಕಾದೀತು. ಅವಶ್ಯಕವಿರುವಷ್ಟೇ ಆಹಾರವನ್ನು ಪಡೆಯುವಿರಿ. ಯಾರ ಸಹವಾಸವೂ ಬೇಡವೆನಿಸಬಹುದು. ಮೋಹದಲ್ಲಿ ನೀವು ಬೀಳುವಿರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ತಂತ್ರವನ್ನು ಕಂಡುಕೊಳ್ಳಿ. ನಿಮ್ಮ ಬಗ್ಗೆ ನಿಮ್ಮೆದುರೇ ಆಡಿಕೊಳ್ಳುವರು. ಸಿಟ್ಟು ಬಂದರೂ ನಿಯಂತ್ರಣ ಮಾಡಿಕೊಳ್ಳುವಿರಿ.

ಸಿಂಹ ರಾಶಿ:

ಸುಮ್ಮನೇ ಮೊಂಡು ವಾದಕ್ಕೆ ಇಳಿಯುವುದು ಬೇಡ. ಕಲಾವಿದರು ಹೆಚ್ಚಿನ ಅವಕಾಶಕ್ಕೆ ಪ್ರಯತ್ನ ಮಾಡುವರು. ನಿಮ್ಮದಲ್ಲದ ವಿಷಯವೂ ನಿಮ್ಮನ್ನು ಕಾಡುವುದು. ನಿಮ್ಮ ಜೊತೆ ವೃತ್ತಿಯನ್ನು ನಿರ್ವಹಿಸುವವರು ನಿಮ್ಮ ಮಾತನ್ನು ಸಹಿಸಲಾರರು. ಸಂಗಾತಿಯು ದೂರ ಪ್ರಯಾಣ ಹೋಗಲು ಆಹ್ವಾನಿಸಬಹುದು. ಯಾರ ಬಗ್ಗೆಯೂ ಸುಮ್ಮನೇ ಮಾತನಾಡುವುದು ಬೇಡ. ವಿವಾಹ ಜೀವನಕ್ಕೆ ಒಗ್ಗಿಕೊಳ್ಳುವಿರಿ. ಹೊಸ ವಸ್ತುವಿನ ಬಳಕೆಯಿಂದ ನಿಮಗೆ ಸಂತೋಷವು ಸಿಗುವುದು.

ಕನ್ಯಾ ರಾಶಿ:

ಇಂದು ಯಾರನ್ನೂ ನೋಯಿಸಲು ಮನಸ್ಸಾಗದು. ಸ್ತ್ರೀಯರಿಗೆ ಹೆಚ್ಚು ಅಭದ್ರತೆಯು ಕಾಣಿಸಿಕೊಳ್ಳಬಹುದು. ಇಂದು ಚರಾಸ್ತಿಯನ್ನೂ ನೀವೇ ಪಡೆಯುವ ಹುನ್ನಾರ ನಡೆಸಬಹುದು. ಧಾರ್ಮಿಕ ಆಚರಣೆಯನ್ನು ವಿವೇಚನಾರಹಿತವಾಗಿ ಮಾಡುವಿರಿ. ಕಪಟಿಯ ಪಟ್ಟವೂ ನಿಮಗೆ ಸಿಗಬಹುದು. ಸರ್ಕಾರಿ ಕಾರ್ಯದಲ್ಲಿ ವಿಳಂಬ. ಒರಟು ಸ್ವಭಾವವನ್ನು ನೀವು ಕಡಿಮೆ ಮಾಡಿಕೊಳ್ಳಿ. ಬೇಡವೆಂದು ಬಿಟ್ಟರೂ ಕೆಲಸವು ಮಾತ್ರ ನಿಮ್ಮನ್ನು ಬಿಡದು.

ತುಲಾ ರಾಶಿ:

ಉದ್ಯೋಗದಲ್ಲಿ ನಿಮಗೆ ಕೈಬಿಡುವರೆಂಬ ಭಯ ಕಾಡುವುದು. ಭೂಮಿಯ ಖರೀದಿಯಲ್ಲಿ ಗೊಂದಲವು ಹೆಚ್ಚಿರಬಹುದು. ನಿಮ್ಮ ಭಾವನೆಗಳನ್ನು ನೀವೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಪೂರ್ಣ ವಿಶ್ವಾಸ ಬರುವವರೆಗೆ ಆರ್ಥಿಕ ವ್ಯವಹಾರದಲ್ಲಿ ಮುಂದುವರಿಯುವುದು ಬೇಡ. ವೃತ್ತಿಯಲ್ಲಿ ಇಂದು ಆಡಿದ ಮಾತು ನಿಮ್ಮನ್ನು ವಿಚಲಿತಗೊಳಿಸಬಹುದು. ಇಂದಿನ ನಿಮ್ಮ ಕಾರ್ಯದಿಂದ ಮೆಚ್ಚುಗೆ ಸಿಗುವುದು. ಸಾಕಷ್ಟು ಕಿರಿಕಿರಿ ಇದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕರ್ತವ್ಯದಲ್ಲಿ ನೀವು ನಿರತರಾಗುವಿರಿ.

ವೃಶ್ಚಿಕ ರಾಶಿ:

ವಿವಾಹಕ್ಕೆ ಉಂಟಾದ ದೋಷಗಳನ್ನು ದೈವಜ್ಞರಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಬಗ್ಗೆ ಮಾಹಿತಿಯನ್ನು ಅನ್ಯರಿಂದ ಪಡೆದುಕೊಳ್ಳುವರು. ನಿಮಗೆ ಅಭದ್ರತೆಯು ಅತಿಯಾಗಿ ಕಾಡಬಹುದು. ವ್ಯಾಪಾರದಲ್ಲಿ ಮನೆಯವರ ತೊಡಗುವಿಕೆಯಿಂದ ಒತ್ತಡ ನಿವಾರಣೆಯಾಗುವುದು. ಹಿಂದೆ ಮುಂದೆ ಆಲೋಚಿಸದೇ ಧೈರ್ಯವನ್ನು ಮಾಡುವುದು ಬೇಡ. ಪ್ರಯಾಣದ ವಿಚಾರದಲ್ಲಿ ಇಂದು ಮನೆಯವರ ಮಾತಿನಂತೆ ನಡೆದುಕೊಳ್ಳಿ.

ಧನು ರಾಶಿ:

ನಿಮ್ಮ ಕೆಲಸಗಳೇ ಮಾತಾಡಿದರೆ ಶ್ರೇಯಸ್ಸು ಹೆಚ್ಚು. ಕುಟುಂಬದ ಅಸ್ಮಿತೆಯನ್ನು ಉಳಿಸಿಕೊಳ್ಳುವ ಬಗೆಯನ್ನು ಕಂಡುಕೊಳ್ಳಬೇಕಾದೀತು. ನೀವು ಸಾಧಿಸಲು ಶ್ರಮಿಸುತ್ತಿದ್ದಕ್ಕೆ ಫಲಿತಾಂಶವು ಯೋಗ್ಯವಾಗಿ ಲಭಿಸಲಿದೆ. ಅಹಿತಕರ ಸುದ್ದಿಯಿಂದ ವಿಚಲಿತರಾಗಬೇಕಿಲ್ಲ. ನಿಮಗೆ ಇಂದು ಕೈ ಹಾಕಿದ ಕಾರ್ಯದಲ್ಲಿ ಜಯದ ನಿರೀಕ್ಷೆ ಮಾಡಬಹುದು. ಸಂಪತ್ತಿನ ವಿಚಾರಕ್ಕೆ ಕುಟುಂಬ ಸಮರಾಂಗಣವಾದೀತು. ಸಹೋದರನ ಬೆಂಬಲವಿದ್ದರೂ ನಿಮಗೆ ಸ್ವಾಭಿಮಾನದಿಂದ ಹೊರಬರಲು ಆಗದು.

ಮಕರ ರಾಶಿ:

ನಾಯಕರಾದ ನಿಮ್ಮಿಂದ ಜನರು ಹೊಸತನವನ್ನು ನಿರೀಕ್ಷಿಸುವರು. ಇದರಿಂದ ನಿಮ್ಮ ಸಾಮಾಜಿಕ ಕಾರ್ಯಗಳ ಬಗ್ಗೆ ಸಮಾಧಾನವನ್ನು ಸ್ವತಃ ಪಡೆಯಲು ಸಾಧ್ಯ. ದೇವರಲ್ಲಿ ಭಕ್ತಿಯು ಅಧಿಕವಾದೀತು. ಮಕ್ಕಳಿಗೆ ಶಿಸ್ತನ್ನು ಹೇಳುವಿರಿ. ನಿಮ್ಮ ಮನಸ್ಸನ್ನು ಬಹಳ ವಿಚಲಿತವಾಗಿದ್ದು ಸ್ಥಿರತ್ವವನ್ನು ತಂದುಕೊಳ್ಳುವುದು ಕಷ್ಟವಾದೀತು. ನಿಕಟವರ್ತಿಗಳ ಸಂಕಟಕ್ಕೆ ಸ್ಪಂದಿಸುವ ಹೊಣೆಗಾರಿಕೆಯೂ ನಿಮ್ಮದೇ ಆಗಲಿದೆ. ನಿಮ್ಮ ಆಸ್ತಿಯನ್ನು ಇನ್ನೊಬ್ಬರು ಪಡೆಯಲು ಕಾನೂನು ರೀತಿಯಲ್ಲಿ ಹೋಗುವರು. ಮನೆಗೆ ದಂಪತಿಗಳನ್ನು ಕರೆದು ಸತ್ಕಾರ ಮಾಡಿ.

ಕುಂಭ ರಾಶಿ:

ನಿರುದ್ಯೋಗಿಗಳು ಉದ್ಯಮದ ಕಡೆಯಿಂದ ಉತ್ತರಕ್ಕಾಗಿ ಕಾಯುವಿರಿ. ಆರೋಗ್ಯದಲ್ಲಿ ಅಸಮಾಧಾನವು ಇರಲಿದೆ. ಮಾತಾನಾಡುವ ಭರದಲ್ಲಿ ಏನಾದರೂ ಹೇಳಬಹುದು. ಕೇವಲ ಬಾಯಿ ಮಾತಿನಲ್ಲಿ ವ್ಯವಹಾರವನ್ನು ಮಾಡಿ ಮುಂದುವರಿಸುವುದು ಬೇಡ. ಅವರಸದಲ್ಲಿ ಏನನ್ನೂ ಖರೀದಿ ಮಾಡುವುದು ಬೇಡ. ನಿಮ್ಮ ಸಲಹೆಯನ್ನು ಅಧಿಕಾರಿಗಳು ಸ್ವೀಕರಿಸದೇ ಇರಬಹುದು. ನೀವು ಇಂದು ಎಲ್ಲರ ಜೊತೆ ಅಲ್ಪವಾಗಿ ಮಾತನಾಡುವಿರಿ.

ಮೀನ ರಾಶಿ:

ನಿಮ್ಮ ನಿಯಮಗಳನ್ನು ಒಂದೊಂದಾಗಿಯೇ ಜಾರಿಗೆ ತರಲು ಪ್ರಯತ್ನಿಸಿದರೂ ಸಫಲತೆ ಕಾಣಬಹುದು. ಕೆಲವು ಕೆಟ್ಟ ಸುದ್ದಿಗಳು ಮನಸ್ಸಿನಲ್ಲಿ ಹತಾಶೆಯ ಸ್ಥಿತಿಯನ್ನು ಬಿಡಬಹುದು. ಇಂದಿನ ಖರ್ಚು ನಿಮ್ಮ ಜೇಬಿಗೆ ಭಾರವಾದೀತು. ಶತ್ರುಗಳ ತೊಂದರೆಯಿಂದ ನಿರ್ಮಾಣ ಕಾರ್ಯವು ನಿಧಾನವಾಗಲಿದೆ. ಕೆಲವು ಸಂಗತಿಗಳನ್ನು ಆಲೋಚಿಸಿದಷ್ಟೂ ಕ್ಲಿಷ್ಟವೆನಿಸಬಹುದು. ಅದರ ಬಗ್ಗೆ ಏನನ್ನೂ ಯೋಚಿಸುವುದು ಬೇಡ. ತಾನಾಗಿಯೇ ಉತ್ತರ ದೊರೆಯುವುದು.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಹಸ್ತಾ, ಯೋಗ : ಶೋಭನ, ಕರಣ : ವಣಿಜ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 24 pm, ಇಂದಿನ ಶುಭಾಶುಭ ಕಾಲ : ರಾಹು 14:05 – 15:31, ಯಮಗಂಡ ಕಾಲ 06:53 – 08:19, ಗುಳಿಕ ಕಾಲ 09:46 – 11:12

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 5ರ ದಿನಭವಿಷ್ಯ

ಮದುವೆಗಾಗಿ ಪ್ರಯತ್ನ ಮಾಡುತ್ತಾ ಇರುವವರು, ಅಥವಾ ಪ್ರಯತ್ನ ಮಾಡುವಾಗ ನಾನಾ ಕಾರಣಗಳಿಗೆ ಅಡೆತಡೆಗಳನ್ನು ಎದುರಿಸುತ್ತಾ ಇರುವವರು ಸ್ವಯಂವರ ಪಾರ್ವತಿ ಮಂತ್ರವನ್ನು ಹನ್ನೊಂದು ಬಾರಿ ಪಠಣ ಮಾಡಿ ಅಥವಾ ಶ್ರವಣ ಮಾಡಿ. ದಂಪತಿ ಅಥವಾ ಪ್ರೇಮಿಗಳ ಮಧ್ಯೆ ವಿರಸ ಏರ್ಪಟ್ಟಿದ್ದಲ್ಲಿ ಈ ದಿನ ಶಿರಡಿ ಸಾಯಿಬಾಬ ಮಂದಿರಕ್ಕೆ ತೆರಳಿ ದರ್ಶನ ಪಡೆಯಿರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಈ ದಿನ ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ವೃತ್ತಿಜೀವನದಲ್ಲಿ ತಿರುವು ಬರುವ ಸಾಧ್ಯತೆ ಇದೆ. ಮನೆಗೆ ಸಂಬಂಧಿಸಿದಂತೆ ಬಾಕಿ ಕೆಲಸಗಳನ್ನು ಪೂರ್ಣ ಮಾಡುವುದಕ್ಕೆ ಇದು ಉತ್ತಮ ದಿನ ಆಗಿರುತ್ತದೆ. ಸಮಾರಂಭ- ಗೆಟ್ ಟು ಗೆದರ್ ಗಳಿಗೆ ಸಂಬಂಧಿಕರಿಂದ ಆಹ್ವಾನ ಬರಬಹುದು. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗ್ರತೆ ಅವಶ್ಯ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಹೊಸ ಸಾಲ ತೆಗೆದುಕೊಳ್ಳುವ ನಿರ್ಧಾರ ಸಾಧ್ಯವಾದಷ್ಟೂ ಮಟ್ಟಿಗೆ ಬೇಡ. ಅನಿರೀಕ್ಷಿತವಾಗಿ ವಾಹನದ ರಿಪೇರಿ ಅಥವಾ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ಬರಬಹುದು. ಪ್ರೀತಿಯಲ್ಲಿ ಇರುವವರಿಗೆ ಜತೆಯಾಗಿ ಸಮಯ ಕಳೆಯುವಂಥ ಯೋಗ ಇದ್ದು, ಭವಿಷ್ಯದಲ್ಲಿನ ಯೋಜನೆಗಳ ಬಗ್ಗೆ ತುಂಬ ಗಹನವಾದ ಚರ್ಚೆಯನ್ನು ಮಾಡಲಿದ್ದೀರಿ. ಅದು ಆತ್ಮೀಯವಾದ ಸಂಭಾಷಣೆ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮಗೆ ಬಹಳ ದಿನಗಳಿಂದ ಬಾಕಿ ಉಳಿದುಹೋಗಿದ್ದ ಮಾಹಿತಿ ಅಥವಾ ಹಣ ನಿಮ್ಮ ಕಡೆ ಬರುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಆಲೋಚನೆಗೆ ಮಹತ್ವ ಸಿಗುತ್ತದೆ. ಮನೆ ಬದಲಾವಣೆ ಮಾಡಬೇಕು ಎಂದಿರುವವರು ಅಥವಾ ಮನೆಯ ಜಾಗಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತಾ ಇರುವವರಿಗೆ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆ ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 5ರ ದಿನಭವಿಷ್ಯ

ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರು, ಹೊಸದಾಗಿ ವ್ಯವಹಾರ- ವ್ಯಾಪಾರ ಶುರು ಮಾಡಿರುವವರು ಅಥವಾ ಶುರು ಮಾಡಬೇಕು ಎಂದಿರುವವರು ಸಿಟ್ರಿನ್ ಎಂಬ ರತ್ನದ ಉಂಗುರ ಧಾರಣೆ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಸವಾಲುಗಳನ್ನು ಎದುರಿಸುವ ಮಾರ್ಗೋಪಾಯ ಗೋಚರ ಆಗುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಯಾರನ್ನೋ ಸಮಾಧಾನ ಮಾಡಬೇಕು- ಮನವೊಲಿಸುವ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಹಣಕಾಸನ್ನು ವ್ಯರ್ಥವಾಗಿ ವೆಚ್ಚ ಮಾಡುವುದಕ್ಕೆ ಹೋಗಬೇಡಿ. ಕುಟುಂಬದಲ್ಲಿನ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಮನಸ್ಸಿಗೆ ತೃಪ್ತಿ- ಸಮಾಧಾನ ದೊರೆಯಲಿದೆ. ಸ್ನೇಹಿತರು ನೀಡುವ ಸಲಹೆಯನ್ನು ಅಳವಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡಿ. ಕತ್ತು–ಭುಜದ ನೋವು ಸಣ್ಣ ಪ್ರಮಾಣದಲ್ಲಿಯಾದರೂ ತೊಂದರೆ ಮಾಡಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನೀವು ದಿನವನ್ನು ಆರಂಭಿಸುವ ರೀತಿಯೇ ಉತ್ಸಾಹಭರಿತವಾಗಿ ಇರುತ್ತದೆ. ನಿಮ್ಮ ಮನಸ್ಸಿಗೆ ಅನಿಸಿದಂಥ ಕೆಲವು ಕೆಲಸಗಳನ್ನು ತಕ್ಷಣವೇ ಪೂರ್ಣ ಮಾಡುವುದಕ್ಕೆ ಆದ್ಯತೆಯನ್ನು ನೀಡಿ. ಆದರೆ ಮುಖ್ಯವಾದ ವಿಚಾರವೊಂದರ ಬಗ್ಗೆ ತಕ್ಷಣವೇ ನಿರ್ಧಾರ ಹೇಳಬೇಕು ಎಂಬ ಒತ್ತಡ ಹೇರಿದಲ್ಲಿ ಅದಕ್ಕಾಗಿ ಸಮಯವನ್ನು ಕೇಳಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮ್ಮ ಸಹೋದ್ಯೋಗಿಗಳ ಜೊತೆಗೆ ಸಣ್ಣ–ಪುಟ್ಟ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನವ ವಿವಾಹಿತರಾಗಿದ್ದಲ್ಲಿ ಸಂಗಾತಿಯೊಂದಿಗೆ ದೂರ ಪ್ರಯಾಣಕ್ಕೆ ತೆರಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ವಿದ್ಯಾರ್ಥಿಗಳು ಏನಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾ ಇದ್ದಲ್ಲಿ, ನೀವು ಮಾಡುವ ಪ್ರಯತ್ನಕ್ಕೆ ಒಳ್ಳೆಯ ಫಲಿತಾಂಶ ಸಿಗುವ ಸೂಚನೆ ದೊರೆಯುತ್ತದೆ. ಆರೋಗ್ಯದಲ್ಲಿ ಕೆಲವು ಏರುಪೇರು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ತಲೆಸುತ್ತು– ಕಣ್ಣಿನ ರೆಪ್ಪೆ ಭಾರವಾದಂತೆ ಆಗುವುದು ಈ ರೀತಿ ತೊಂದರೆ ಆಗಬಹುದು.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 5ರ ದಿನಭವಿಷ್ಯ

ಈ ದಿನ ನಿಮ್ಮಿಂದ ಸಾಧ್ಯವಾದಲ್ಲಿ ಕನಿಷ್ಠ ಹನ್ನೊಂದು ಬಾರಿ ಮೃತ್ಯುಂಜಯ ಮಂತ್ರವನ್ನು ಹೇಳಿಕೊಳ್ಳಿ. ಅದು ಸಾಧ್ಯವಾಗದಿದ್ದಲ್ಲಿ ಯೂಟ್ಯೂಬ್ ಅಥವಾ ಬೇರೆ ಯಾವುದಾದರೂ ಮಾಧ್ಯಮದ ಮೂಲಕ ಹನ್ನೊಂದು ಬಾರಿ ಮೃತ್ಯುಂಜಯ ಮಂತ್ರವನ್ನು ಕೇಳಿಸಿಕೊಳ್ಳಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಈ ದಿನ ನಿಧಾನವಾಗಿ ಶುರುವಾಯಿತು ಎಂದೆನಿಸಿದರೂ ಮಧ್ಯಾಹ್ನದಿಂದ ನಿಮ್ಮ ಚಟುವಟಿಕೆ ಹೆಚ್ಚಾಗುತ್ತದೆ. ಕೆಲಸದಲ್ಲಿನ ಒತ್ತಡ ಕಡಿಮೆಯಾಗಲಿದ್ದು, ಹೊಸ ಕೆಲಸ- ಕಾರ್ಯಗಳ ಕಡೆಗೆ ಗಮನ ನೀಡಲು ಅವಕಾಶ ದೊರೆಯಲಿದೆ. ಈಗಾಗಲೇ ಕೆಲಸ ಮಾಡಿಕೊಟ್ಟಿದ್ದೀರಿ, ಹಿಂದಿನ ಬಾಕಿ ಬಿಲ್‌ಗಳು ಉಳಿದುಹೋಗಿವೆ ಎಂದಾದಲ್ಲಿ ಅದರ ವಸೂಲಾತಿಗೆ ಏನು ಮಾಡಬೇಕು ಎಂಬ ಬಗ್ಗೆಯೇ ನಿಮ್ಮ ಗಮನ ನೀಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಇನ್ನು ನೀವು ಬೇರೆಯವರಿಗೆ ಕೊಡಬೇಕಾದ ಹಣ ಉಳಿದು ಹೋಗಿದ್ದಲ್ಲಿ ಸಮಯಕ್ಕೆ ಪಾವತಿಸುವುದು ಒಳ್ಳೆಯದು. ಕುಟುಂಬದಲ್ಲಿ ಮಕ್ಕಳ ವಿಚಾರವಾಗಿ ಸಂತಸದ ಸುದ್ದಿ ಬರುತ್ತದೆ. ಸಂಗಾತಿಗೆ ಜತೆಗೆ ಚಿಕ್ಕ- ಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯ ಉಂಟಾದರೂ ಸಂಜೆ ವೇಳೆಗೆ ಸರಿಯಾಗಲಿದೆ. ನಿಮ್ಮ ಹಳೆಯ ಸ್ನೇಹಿತರು ಮತ್ತೆ ಸಂಪರ್ಕಕ್ಕೆ ಬರಲಿದ್ದಾರೆ. ಗ್ಯಾಜೆಟ್‌ಗಳ ಖರೀದಿಸಬೇಕಿದ್ದಲ್ಲಿ ಆತುರ ಬೇಡ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಒಂದಲ್ಲಾ ಒಂದು ಕಾರಣಕ್ಕಾಗಿ ನೀವು ಮಾಡಬೇಕು ಎಂದುಕೊಂಡ ಕೆಲವು ಕೆಲಸಗಳು ವಿಳಂಬ ಆಗುವ ಸಾಧ್ಯತೆ ಇದೆ. ಹಾಗಂತ ಆತುರ ಮಾಡುವ ಅಗತ್ಯವಿಲ್ಲ. ಹಣಕಾಸು ವಿಷಯದಲ್ಲಿ ಎಲ್ಲರೂ ನೀಡುವ ಸಲಹೆಯನ್ನು ಪಾಲಿಸಬೇಕು ಎಂದೇನೂ ಇಲ್ಲ. ಒಂದು ವೇಳೆ ಅವು ಪ್ರಯೋಜನಕ್ಕೆ ಬಾರದು ಎಂದೆನಿಸಿದಲ್ಲಿ ಕೇಳಿಸಿಕೊಳ್ಳುವ ಅಗತ್ಯವೂ ಇಲ್ಲ.

ಲೇಖನ- ಸ್ವಾತಿ ಎನ್.ಕೆ.

 

Source link

ಮಹಿಳಾ ಸಂಸದರನ್ನು ಛೂ ಬಿಟ್ಟ ಕಾಂಗ್ರೆಸ್; ಇಂದು ಸಂಸತ್​​ನಲ್ಲಿ ಮೋದಿ ಭಾಷಣ ಮಾಡದಿರಲು ಕಾರಣವೇನು? – Kannada News | Congress Women MPs Surrounded PM Seat Why PM Modis Lok Sabha speech cancelled today

ನವದೆಹಲಿ, ಫೆಬ್ರವರಿ 4: ಇಂದು ಸಂಜೆ ಲೋಕಸಭಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾಷಣ ಮಾಡಬೇಕಿತ್ತು. ಆದರೆ, ಇನ್ನೇನು ಮೋದಿ ತಮ್ಮ ಮಾತು ಆರಂಭಿಸಬೇಕು ಎನ್ನುವಷ್ಟರಲ್ಲಿ ಸದನದಲ್ಲಿ ಇದ್ದಕ್ಕಿದ್ದಂತೆ ಗದ್ದಲ ಆರಂಭವಾಯಿತು. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಗಳ ಅಂಶಗಳನ್ನು ಉಲ್ಲೇಖಿಸಲು ಸದನದಲ್ಲಿ ಅವಕಾಶ ನೀಡದ ಕಾರಣದಿಂದ ವಿರೋಧ ಪಕ್ಷಗಳ ಸಂಸದರು ಗಲಾಟೆ ಆರಂಭಿಸಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ಮಹಿಳಾ ಸಂಸದರು ಪ್ರಧಾನಿ ಮೋದಿ ಕುಳಿತಿದ್ದ ಕುರ್ಚಿಯನ್ನು ಸುತ್ತುವರೆದರು.

ಇಂದು ಸಂಜೆ ಪ್ರಧಾನಿ ಮೋದಿ ಮಾತನಾಡುವ ಸ್ವಲ್ಪ ಮೊದಲು ವರ್ಷಾ ಗಾಯಕ್​ವಾಡ್ ಮತ್ತು ಜ್ಯೋತಿಮಣಿ ಸೇರಿದಂತೆ ವಿರೋಧ ಪಕ್ಷದ ಕೆಲವು ಮಹಿಳಾ ಸಂಸದರು ಪ್ರಧಾನಿ ಮೋದಿ ಅವರ ಕುರ್ಚಿಯ ಸುತ್ತ ಮುತ್ತಿಗೆ ಹಾಕಿದರು. ಬ್ಯಾನರ್​​ಗಳನ್ನು ಹಿಡಿದು ಬಾವಿಗಿಳಿದ ಮಹಿಳಾ ಸಂಸದರು ಗದ್ದಲ ಆರಂಭಿಸಿದರು. ನಿನ್ನೆ 8 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದಕ್ಕಾಗಿ ಅವರ ಪ್ರತಿಭಟನೆ ನಡೆಯಿತು. ಇದರಿಂದ ಪ್ರಧಾನಿ ಮೋದಿಯವರಿಗೆ ಭಾಷಣ ಮಾಡಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Parliament Session: ಇಂದು ಪ್ರಧಾನಿ ಮೋದಿ ಭಾಷಣ ರದ್ದು; ವಿಪಕ್ಷಗಳ ಪ್ರತಿಭಟನೆಯಿಂದ ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ

ಹೀಗಾಗಿ, ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಸಂಧ್ಯಾ ರೈ ಕಲಾಪವನ್ನು ನಾಳೆಗೆ ಮುಂದೂಡಿದರು. ಹಲವಾರು ಸಚಿವರು ಹೊರಹೋದ ನಂತರ ಮಹಿಳಾ ಸಂಸದರು ತಮ್ಮ ಮುತ್ತಿಗೆಯನ್ನು ಕೊನೆಗೊಳಿಸಿದರು. ಮಹಿಳಾ ಸಂಸೆಯರು ಮೊದಲೇ ಪ್ಲಾನ್ ಮಾಡಿ ಬೇಕೆಂದೇ ಪ್ರಧಾನಿ ಮೋದಿಯವರು ಭಾಷಣ ಮಾಡದಂತೆ ತಡೆದರು ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿಯೇ ಮಹಿಳಾ ಸಂಸದರನ್ನು ಛೂ ಬಿಟ್ಟಿದ್ದರು ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಮಹಿಳಾ ಸಂಸದರ ಮುತ್ತಿಗೆಯಿಂದಾಗಿ ಧನ್ಯವಾದ ನಿರ್ಣಯವನ್ನು ಲೋಕಸಭೆ ಇನ್ನೂ ಅಂಗೀಕರಿಸಿಲ್ಲ. ಸದನವನ್ನು ನಾಳೆಯವರೆಗೆ ಮುಂದೂಡಲಾಗಿದೆ. ಆದ್ದರಿಂದ ನಾಳೆ ಚರ್ಚೆ ಮುಂದುವರಿಯುವ ಸಾಧ್ಯತೆಯಿದೆ. ನಾಳೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ; ಭಾರೀ ಟ್ರಾಫಿಕ್ ಜಾಮ್

ಮುಂಬೈ, ಫೆಬ್ರವರಿ 4: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ನಿನ್ನೆ ಸಂಜೆ ಕೆಮಿಕಲ್ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದೆ. ಇದರಿಂದ ಇಂದು ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದು ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಯಿತು. ಅಪಘಾತದ (Accident) ನಂತರ, ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ ಪತ್ತೆಯಾಗಿದ್ದು, ತಕ್ಷಣದ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಬೇರೆ ವಾಹನಗಳನ್ನು ಆ ರಸ್ತೆಯಲ್ಲಿ ಹೋಗದಂತೆ ನಿರ್ಬಂಧಿಸಲಾಗಿತ್ತು.

ಎಕ್ಸ್‌ಪ್ರೆಸ್‌ವೇ ಪೊಲೀಸ್ ಮತ್ತು ಸ್ಥಳೀಯ ಆಡಳಿತದ ಸುಮಾರು 40 ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಧಾವಿಸಿ ಸೋರಿಕೆಯನ್ನು ತಡೆಗಟ್ಟಲು ಪ್ರಯತ್ನಗಳನ್ನು ಪ್ರಾರಂಭಿಸಿತು. ಆ ಟ್ಯಾಂಕರ್ ಪ್ರೊಪಿಲೀನ್ ಅನ್ನು ಹೊತ್ತೊಯ್ಯುತ್ತಿತ್ತು. ಇದು ಹೆಚ್ಚು ಸುಡುವ ರಾಸಾಯನಿಕವಾಗಿದ್ದು, ಸಣ್ಣ ಕಿಡಿ ಕೂಡ ದುರಂತ ಸ್ಫೋಟಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದರು. ಹೀಗಾಗಿಯೇ ಆ ಟ್ಯಾಂಕರ್ ತೆರವು ಕಾರ್ಯಾಚರಣೆ ತಡವಾಯಿತು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SA: ಅಭ್ಯಾಸ ಪಂದ್ಯದಲ್ಲಿ ಆಫ್ರಿಕಾ ಮಣಿಸಿದ ಟೀಂ ಇಂಡಿಯಾ – Kannada News | India Dominates South Africa in T20 World Cup Warm Up, Wins by 30 Runs

ನವಿ ಮುಂಬೈನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ಭಾರತ 30 ರನ್​ಗಳ ಅಮೋಘ ಜಯ ಸಾಧಿಸುವ ಮೂಲಕ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಬರೋಬ್ಬರಿ 241 ರನ್ ಕಲೆಹಾಕಿತು. ತಂಡದ ಪರ ಆಡಿದ ಎಲ್ಲಾ ಬ್ಯಾಟ್ಸ್‌ಮನ್​ಗಳು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ ಉತ್ತಮ ಹೋರಾಟ ನೀಡಿತ್ತಾದರೂ ಗುರಿ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆಫ್ರಿಕಾ ತಂಡ 210 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಭಾರತದ ಪರ ಅಭಿಷೇಕ್ ಶರ್ಮಾ ಜೊತೆ ಇಶಾನ್ ಕಿಶನ್ ಬ್ಯಾಟಿಂಗ್ ಆರಂಭಿಸಿದರು. ಈ ಆರಂಭಿಕ ಜೋಡಿ ಭಾರತಕ್ಕೆ ಉತ್ತಮ ಆರಂಭ ನೀಡಿ ಐದನೇ ಓವರ್‌ನಲ್ಲಿಯೇ 50 ರನ್‌ಗಳ ಗಡಿ ದಾಟಿಸಿದರು. ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಕಿಶನ್​ ಅವರ ಈ ಇನ್ನಿಂಗ್ಸ್​ನಲ್ಲಿ ಎರಡು ಬೌಂಡರಿ ಮತ್ತು ಏಳು ಸಿಕ್ಸರ್‌ಗಳು ಸೇರಿದ್ದವು.

ಅಭಿಷೇಕ್ ಶರ್ಮಾ ಕೂಡ 18 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 24 ರನ್ ಬಾರಿಸಿದರೆ, ತಿಲಕ್ ವರ್ಮಾ 19 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ನೆರವಿನಿಂದ 45 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ 16 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ನೆರವಿನಿಂದ 30 ರನ್ ಗಳಿಸಿದರೆ ರಿಂಕು ಸಿಂಗ್ 16 ರನ್ ಬಾರಿಸಿದರು.

ಹಾರ್ದಿಕ್ ಪಾಂಡ್ಯ 10 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 30 ರನ್ ಬಾರಿಸಿದರೆ, ಅಕ್ಷರ್ ಪಟೇಲ್ 23 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ ಅಜೇಯ 35 ರನ್ ಸಿಡಿಸಿದರು. ದಕ್ಷಿಣ ಆಫ್ರಿಕಾ ಪರ ಮಾರ್ಕೊ ಯಾನ್ಸೆನ್, ಕಾರ್ಬಿನ್ ಬಾಷ್, ಅನ್ರಿಚ್ ನೋಕಿಯಾ ಮತ್ತು ಕ್ವೆನಾ ಎಂಫಕಾ ತಲಾ ಒಂದು ವಿಕೆಟ್ ಪಡೆದರು.

Source link

ಪ್ರೇಮಿಗಳಿಗಾಗಿ ಮತ್ತೆ ರಿಲೀಸ್ ಆಗುತ್ತಿದೆ ಸಲ್ಮಾನ್ ಖಾನ್ ಸಿನಿಮಾ ‘ತೇರೆ ನಾಮ್’ – Kannada News | Salman Khan Bhumika Chawla starrer Tere Naam Rerelease on 27 February

ಫೆಬ್ರವರಿ ತಿಂಗಳು ಎಂದರೆ ಪ್ರೇಮಿಗಳಿಗೆ ಸಖತ್ ಸ್ಪಷಲ್. ವ್ಯಾಲೆಂಟೈನ್ಸ್ ಡೇ ಇರುವ ಕಾರಣ ಯುವ ಮನಸ್ಸುಗಳು ಪ್ರೀತಿಯ ಗುಂಗಿನಲ್ಲಿ ಇರುತ್ತವೆ. ಹಾಗಾಗಿ ಈ ತಿಂಗಳು ರೊಮ್ಯಾಂಟಿಕ್ ಸಿನಿಮಾ ನೋಡುವ ಪ್ರೇಕ್ಷಕರ ವರ್ಗ ಕೂಡ ದೊಡ್ಡದಿರುತ್ತದೆ. ಅಂಥ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ‘ತೇರೆ ನಾಮ್’ (Tere Naam) ಸಿನಿಮಾ ಮರು ಬಿಡುಗಡೆ ಆಗುತ್​ತಿದೆ. ಸಲ್ಮಾನ್ ಖಾನ್ (Salman Khan) ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಭೂಮಿಕಾ ಚಾವ್ಲಾ ನಟಿಸಿದ್ದಾರೆ. ಫೆಬ್ರವರಿ 27ರಂದು ಈ ಸಿನಿಮಾ ಮರು ಬಿಡುಗಡೆ ಆಗಲಿದೆ.

‘ತೇರೆ ನಾಮ್’ ಸಿನಿಮಾದಲ್ಲಿ ಕಾಡುವ ಒಂದು ಪ್ರೇಮ್ ಕಹಾನಿ ಇದೆ. ಈ ಚಿತ್ರಕ್ಕೆ ಸತೀಶ್ ಕೌಶಿಕ್ ಅವರು ನಿರ್ದೇಶನ ಮಾಡಿದ್ದಾರೆ. 2003ರ ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಆಗ ಪ್ರೇಕ್ಷಕರು ಬಹಳ ಮೆಚ್ಚಿಕೊಂಡಿದ್ದರು. ಈ ಚಿತ್ರದಿಂದ ಸಲ್ಮಾನ್ ಖಾನ್ ಅವರ ಖ್ಯಾತಿ ಹೆಚ್ಚಾಗಿತ್ತು. ಈಗ ಮತ್ತೆ ‘ತೇರೆ ನಾಮ್’ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡುವ ಅವಕಾಶ ಸಿಗುತ್ತಿದೆ.

ಅಭಿಮಾನಿಗಳು ‘ತೇರೆ ನಾಮ್’ ಸಿನಿಮಾವನ್ನು ಇಂದಿಗೂ ನೆನಪಿಸಿಕೊಳ್ಳವುದು ಸಲ್ಮಾನ್ ಖಾನ್ ಅವರ ನಟನೆ ಮತ್ತು ಹಿಮೇಶ್ ರೇಷಮಿಯಾ ಅವರ ಹಾಡುಗಳ ಕಾರಣದಿಂದ. ಸಲ್ಮಾನ್ ಖಾನ್ ಅವರ ವೃತ್ತಿಜೀವನದ ಅತ್ಯುತ್ತಮ ನಟನೆ ಈ ಸಿನಿಮಾದಲ್ಲಿದೆ ಎಂಬುದು ಫ್ಯಾನ್ಸ್ ಅಭಿಪ್ರಾಯ. ಅದೇ ರೀತಿ, ಹಿಮೇಶ್ ರೇಷಮಿಯಾ ಅವರು ಸಂಗೀತ ನೀಡಿದ ಹಾಡುಗಳು ಇಂದಿಗೂ ಎವರ್ಗ್ರೀನ್ ಆಗಿ ಉಳಿದುಕೊಂಡಿವೆ.

23 ವರ್ಷಗಳ ಬಳಿಕ ‘ತೇರೆ ನಾಮ್’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. 2003ರಲ್ಲಿ ರಿಲೀಸ್ ಆದಾಗ ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ಮಿಸ್ ಮಾಡಿಕೊಂಡವರು ಈಗ ಕಣ್ತುಂಬಿಕೊಳ್ಳುವ ಚಾನ್ಸ್ ಸಿಗುತ್ತಿದೆ. ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಇದರಿಂದ ಖುಷಿ ಆಗಿದೆ. ಹೊಸ ತಲೆಮಾರಿನ ಪ್ರೇಕ್ಷಕರಿಂದ ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದಲ್ಲಿ ಸಲ್ಮಾನ್ ಖಾನ್? ವೈರಲ್ ಆಗಿದೆ ಫೋಟೋ

ಇದು ತಮಿಳಿನ ‘ಸೇತು’ ಸಿನಿಮಾದ ರಿಮೇಕ್. ‘ಸೇತು’ ಚಿತ್ರ 1999ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ವಿಕ್ರಮ್ ಅವರು ಹೀರೋ ಆಗಿ ನಟಿಸಿದ್ದರು. ಬಳಿಕ 2001ರಲ್ಲಿ ಆ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ (ಹುಚ್ಚ) ಮಾಡಲಾಯಿತು. ಸುದೀಪ್ ಅವರು ಮುಖ್ಯ ಪಾತ್ರ ಮಾಡಿದ್ದರು. ಅವರ ನಟನೆಗೆ ಭಾರಿ ಮೆಚ್ಚುಗೆ ಸಿಕ್ಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪಾರ್ಟ್​ಮೆಂಟ್​ ಲಿಫ್ಟ್​ನೊಳಗೆ ಬಲೂನ್​ಗಳ ಸ್ಫೋಟ; ಕಂಗಾಲಾಗಿ ಓಡಿದ ನಿವಾಸಿಗಳು – Kannada News | Cluster of Gas filled balloons explodes in Mumbai apartment Lift watcho shocking video

ಮುಂಬೈ, ಫೆಬ್ರವರಿ 4: ಮುಂಬೈನ ಅಪಾರ್ಟ್​ಮೆಂಟ್​ನ ಲಿಫ್ಟ್‌ನಲ್ಲಿ ಗ್ಯಾಸ್ ತುಂಬಿದ ಬಲೂನ್‌ಗಳು ಸ್ಫೋಟಗೊಂಡಿದೆ. ಅದಾದ ಕೆಲವೇ ಕ್ಷಣದಲ್ಲಿ ಮೂವರು ಲಿಫ್ಟ್‌ನಿಂದ ಹೊರಗೆ ಓಡಿಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ನೋಡಬಹುದು. ಈ ಭಯಾನಕ ವೀಡಿಯೊ ವೈರಲ್ (Viral Video) ಆಗಿದೆ. ಆ ಬಲೂನ್ ಮಾರಾಟಗಾರನ ವಿರುದ್ಧ ಪ್ರಕರಣ ದಾಖಲಾಗಿದೆ. ಬಲೂನ್‌ಗಳನ್ನು ತುಂಬಲು ಅವನು ಯಾವ ರೀತಿಯ ಅನಿಲವನ್ನು ಬಳಸಿದ್ದಾನೆ ಎಂಬುದು ತಿಳಿದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link