Category Archives: Blog

Your blog category

Viral News: ಮಾತು ಬಿಟ್ಟಿದ್ದಕ್ಕೆ ಪ್ರಿಯಕರನನ್ನೇ ಕೊಂದ ಯುವತಿ! – Kannada News | 22 year old girl killed boyfriend after he ignored her

ಬಿಲಾಸ್ಪುರ, ಫೆಬ್ರವರಿ 4: ಅವರಿಬ್ಬರೂ ಕೆಲವು ವರ್ಷಗಳಿಂದ ಪ್ರೀತಿ (Love) ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಏನು ಸಮಸ್ಯೆಯಾಗಿತ್ತೋ ಗೊತ್ತಿಲ್ಲ; ಯುವಕ ತನ್ನ ಪ್ರೇಯಸಿಯ ನಂಬರ್ ಬ್ಲಾಕ್ ಮಾಡಿದ್ದ. ಆಕೆ ಯಾವ ನಂಬರ್​​ನಿಂದ ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ತಾನು ಪ್ರೀತಿಸುವ ಹುಡುಗ ತನ್ನೊಂದಿಗೆ ಮಾತು ಬಿಟ್ಟಿದ್ದರಿಂದ ತೀವ್ರ ಕೋಪಗೊಂಡಿದ್ದ 22 ವರ್ಷದ ಯುವತಿ ಆತನ ಜೀವವನ್ನೇ ತೆಗೆದಿದ್ದಾಳೆ. ಛತ್ತೀಸ್‌ಗಢದ ಬಿಲಾಸ್ಪುರ ನಗರದಲ್ಲಿ ಈ ಘಟನೆ ನಡೆದಿದೆ.

ಮಂಗಳವಾರ ಬೆಳಿಗ್ಗೆ 25 ವರ್ಷದ ಪ್ರಸಾದ್ ಸೂರ್ಯವಂಶಿ ಎಂಬುವವರ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಯುವತಿಯನ್ನು ಜಿಲ್ಲೆಯ ಸಿಪತ್ ಪ್ರದೇಶದ ಝಲ್ಮಲಾ ಗ್ರಾಮದ ರೋಶ್ನಿ ಸೂರ್ಯವಂಶಿ ಎಂದು ಗುರುತಿಸಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ರತನ್‌ಪುರ ಪ್ರದೇಶದ ಕರ್ರಾ ಗ್ರಾಮದ ನಿವಾಸಿಯಾದ ಪ್ರಸಾದ್ ಇಲ್ಲಿನ ಮಂಗ್ಲಾ ಚೌಕ್ ಬಳಿಯ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ. ಆತ ಶುಭಂ ವಿಹಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ಇತರ ಇಬ್ಬರೊಂದಿಗೆ ವಾಸಿಸುತ್ತಿದ್ದ.

ಇದನ್ನೂ ಓದಿ: ಒಬ್ಬಳ ಮೇಲೆ ಇಬ್ಬರಿಗೆ ಲವ್​: ನೇಪಾಳಿ ಯುವತಿಗಾಗಿ ನಡೆದ ಗಲಾಟೆಯಲ್ಲಿ ನಡೆದಿದ್ದು ರಕ್ತಪಾತ!

ಕೆಲವು ಸಮಯದ ಹಿಂದೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ರೋಶ್ನಿಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸ್ನೇಹ ಬೆಳೆಸಿದ್ದ. ಇಬ್ಬರೂ ಆಗಾಗ ಭೇಟಿಯಾಗಲು ಪ್ರಾರಂಭಿಸಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಮೊಳೆತಿತ್ತು. ಆದರೆ ಕೆಲವು ದಿನಗಳ ಹಿಂದೆ, ಪ್ರಸಾದ್ ರೋಶ್ನಿಯ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದ. ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಆಕೆಯ ಮೆಸೇಜ್​ಗೆ ಉತ್ತರ ನೀಡುತ್ತಿರಲಿಲ್ಲ.

ಇದನ್ನೂ ಓದಿ: ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಮಗಳನ್ನೇ ಕೊಂದ ಅಪ್ಪ!

ಅವನು ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ ರೋಶ್ನಿ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವನ ಮನೆಗೆ ಹೋದಳು. ನನ್ನ ನಂಬರ್ ಏಕೆ ಬ್ಲಾಕ್ ಮಾಡಿದ್ದೀಯ? ಎಂದು ಕೇಳಿದಾಗ ಇಬ್ಬರ ನಡುವೆ ಜಗಳವಾಯಿತು. ಈ ವೇಳೆ ಗಲಾಟೆ ನಡೆದಿದ್ದು, ತರಕಾರಿ ಕತ್ತರಿಸುವ ಚಾಕುವನ್ನು ತೆಗೆದುಕೊಂಡ ರೋಶ್ನಿ ಆತನ ಎದೆಗೆ ಇರಿದಿದ್ದಾಳೆ.

ಈ ಘಟನೆ ನಡೆದಾಗ ಪ್ರಸಾದ್ ಜೊತೆಗಿದ್ದ ರೂಮ್‌ಮೇಟ್‌ಗಳು ಕೂಡ ಅಲ್ಲಿದ್ದರು. ಆಸ್ಪತ್ರೆಗೆ ದಾಖಲಿಸುವ ಮೊದಲೇ ಆತ ಮೃತಪಟ್ಟಿದ್ದ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಆಧಾರದ ಮೇಲೆ ರೋಶ್ನಿಯನ್ನು ಬಂಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ – Kannada News | Karnataka Council Chairman Basavaraj Horatti Suspends BJP MLC CT Ravi

ಬೆಂಗಳೂರು, (ಫೆಬ್ರವರಿ 04): ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಈ ದಿನದ ಮಟ್ಟಿಗೆ ಬಿಜೆಪಿ ಸದಸ್ಯ ಸಿ.ಟಿ.ರವಿಯವರನ್ನು ಅಮಾನತು ಮಾಡಿದ್ದಾರೆ. ರಾತ್ರಿ 8 ಗಂಟೆಯೊಳಗೆ ಸಿ.ಟಿ.ರವಿ ಸದನಕ್ಕೆ ಕರೆತರುವಂತೆ ವಿಪಕ್ಷ ನಾಯಕರು, ಪರಿಷತ್​ನ ವಿಪಕ್ಷ ಮುಖ್ಯ ಸಚೇತಕರಿಗೆ ಹೇಳಿದ್ದೆ. ಆದ್ರೆ, ಬಿಜೆಪಿ ಸದಸ್ಯ ಸಿ.ಟಿ.ರವಿ ಸಭಾಪತಿ ಆದೇಶಕ್ಕೆ ಗೌರವ ನೀಡಿರುವುದಿಲ್ಲ. ಹೀಗಾಗಿ ಸಿ.ಟಿ.ರವಿಯನ್ನು ಈ ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಇದರಿಂದ ಪರಿಷತ್​​ ಸದಸ್ಯ ಸಿ.ಟಿ.ರವಿ ಬಂದರೆ ಹೊರಗೆ ನಿಲ್ಲಿಸಿ. ಯಾವ ಕಡೆಯಿಂದಲೂ ಅವರು ಒಳಗೆ ಬರತಕ್ಕದ್ದಲ್ಲ. ಎಲ್ಲಾ ಬಾಗಿಲಲ್ಲಿ ಇರುವವರಿಗೆ ಹೇಳಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಪರಿಷತ್​​ನ ಚೀಫ್ ಮಾರ್ಷಲ್​​ಗೆ ಖಡಕ್ ಸೂಚನೆ ನೀಡಿದ್ದಾರೆ.

ಮೋದಿಗೆ ದೇಶದ್ರೋಹಿ ಎಂದಿದ್ದ ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್ ಅವರಿಗೆ ಪಾಕಿಸ್ತಾನದ ನಾಲಿಗೆ ಎಂದು ಸಿಟಿ ರವಿಯವರು ಸದನದಲ್ಲೇ ಹೇಳಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಯ್ತು. ಕೂಡಲೇ ಸಿಟಿ ರವಿ ಕ್ಷಮೆಯಾಚನೆ ಮಾಡಬೇಕೆಂದು ಕಾಂಗ್ರೆಸ ಸದಸ್ಯರು ಪಟ್ಟು ಹಿಡಿದಿದ್ದರು. ಈ ಸಂಬಂಧ ಸಭಾಪತಿ ಹೊರಟ್ಟಿ ಕೂಡಲೇ ಸದನಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದರು. ಆದರೂ ಸಿಟಿ ರವಿ ಬರದಿದ್ದರಿಂದ ಸಭಾಪತಿ ಈ ಕ್ರಮಕೈಗೊಂಡಿದ್ದಾರೆ.

Source link

IND vs SA: 6,6,6,6,6,6,6.. ಅಫ್ರಿಕಾ ವಿರುದ್ಧ ಅಬ್ಬರಿಸಿದ ಇಶಾನ್ ಕಿಶನ್

Source link

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯ; ಮುಖ್ಯಮಂತ್ರಿಯಾಗಿ ಖೇಮ್‌ಚಂದ್ ಪ್ರಮಾಣವಚನ ಸ್ವೀಕಾರ – Kannada News | BJP leader Yumnam Khemchand Singh takes oath as Manipur Chief Minister after Presidents rule ends

ನವದೆಹಲಿ, ಫೆಬ್ರವರಿ 4: ಮಣಿಪುರದಲ್ಲಿ ಕೊನೆಗೂ ರಾಷ್ಟ್ರಪತಿ ಆಡಳಿತ ಅಂತ್ಯಗೊಂಡಿದೆ. 62 ವರ್ಷದ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರು ಜನಾಂಗೀಯ ಸಂಘರ್ಷ ಪೀಡಿತ ಈಶಾನ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಯುಮ್ನಮ್ ಖೇಮ್‌ಚಂದ್ ಅವರನ್ನು ಮಣಿಪುರದಲ್ಲಿ (Manipur) ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಮೈಟೈ ಸಮುದಾಯಕ್ಕೆ ಸೇರಿದ ಖೇಮ್‌ಚಂದ್ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಗೊಳಿಸಿದ ನಂತರ ಪ್ರಮಾಣವಚನ ಸ್ವೀಕರಿಸಿದರು.

ಯುಮ್ನಮ್ ಖೇಮ್‌ಚಂದ್ ಅವರ ಜೊತೆ ಇಬ್ಬರು ಉಪಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. ಒಬ್ಬರು ಕುಕಿ-ಜೋ ಸಮುದಾಯದ ಕುಕಿ-ಝೋ ಮತ್ತು ಇನ್ನೊಬ್ಬರು ನಾಗಾ ಸಮುದಾಯದ ಲೋಸಿ ದಿಖೋ.

ಇದಕ್ಕೂ ಮೊದಲು, ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರಪತಿ ದ್ರೌಪದಿ ಮುರ್ಮು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ ಎಂದು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಿತು. ಇದು ಮಣಿಪುರ ರಾಜ್ಯದಲ್ಲಿ ಹೊಸ ಚುನಾಯಿತ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿತು. 2025ರ ಫೆಬ್ರವರಿ 9ರಂದು ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದಾಗಿನಿಂದ ಸಿಎಂ ಹುದ್ದೆ ಖಾಲಿಯಾಗಿತ್ತು. ಮಣಿಪುರ ದೀರ್ಘಕಾಲದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದರಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. 1 ವರ್ಷದ ಬಳಿಕ ಇದೀಗ ನೂತನ ಸರ್ಕಾರ ರಚನೆಯಾಗಿದೆ.

ಇದನ್ನೂ ಓದಿ: ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಮ್ ಖೇಮ್ಚಂದ್ ಸಿಂಗ್ ಆಯ್ಕೆ

60 ಸದಸ್ಯರ ಮಣಿಪುರ ವಿಧಾನಸಭೆಯಲ್ಲಿ, ಬಿಜೆಪಿ ಪ್ರಸ್ತುತ 37 ಶಾಸಕರನ್ನು ಹೊಂದಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 32 ಅಭ್ಯರ್ಥಿಗಳು ಗೆದ್ದರು, ಜೆಡಿಯು 6 ಸ್ಥಾನಗಳನ್ನು ಗೆದ್ದಿತ್ತು. ಅವರಲ್ಲಿ 5 ಮಂದಿ ನಂತರ ಬಿಜೆಪಿಗೆ ಪಕ್ಷಾಂತರಗೊಂಡರು. ಇದಲ್ಲದೆ, ಸೇವೆ ಸಲ್ಲಿಸುತ್ತಿರುವ ಶಾಸಕರೊಬ್ಬರು ನಿಧನರಾದ ನಂತರ ಒಂದು ಸ್ಥಾನ ಖಾಲಿಯಾಯಿತು.

ಖೇಮ್‌ಚಂದ್ ಸಿಂಗ್ ಎರಡು ಬಾರಿ ಶಾಸಕರಾಗಿದ್ದು, 2017 ಮತ್ತು 2022ರಲ್ಲಿ ಸಿಂಗ್ಜಮೇಯಿ ವಿಧಾನಸಭಾ ಸ್ಥಾನದಿಂದ ಆಯ್ಕೆಯಾಗಿದ್ದಾರೆ. ಮಾರ್ಚ್ 2017ರಲ್ಲಿ ಅವರು ಮಣಿಪುರ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಅವರು 5 ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. 2022ರ ವಿಧಾನಸಭಾ ಚುನಾವಣೆಯ ನಂತರ ಅವರು ಬಿರೇನ್ ಸಿಂಗ್ ಸಂಪುಟದಲ್ಲಿ ಸಚಿವರಾದರು. ನಂತರ ರಾಷ್ಟ್ರಪತಿ ಆಳ್ವಿಕೆ ಹೇರುವವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್, ಪುರಸಭೆ ಆಡಳಿತ, ವಸತಿ ಅಭಿವೃದ್ಧಿ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಖಾತೆಗಳನ್ನು ನಿರ್ವಹಿಸಿದರು.

ಇದನ್ನೂ ಓದಿ: ಫೆಬ್ರವರಿ 7-8ರಂದು ಮಲೇಷ್ಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

“ಮಣಿಪುರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರಿಗೆ ಅಭಿನಂದನೆಗಳು. ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ನೆಮ್ಚಾ ಕಿಪ್ಗೆನ್ ಮತ್ತು ಲೋಸಿ ದಿಖೋ ಅವರನ್ನು ಮತ್ತು ಮಣಿಪುರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೊಂಥೌಜಮ್ ಗೋವಿಂದಾಸ್ ಸಿಂಗ್ ಮತ್ತು ಖುರೈಜಮ್ ಲೋಕೆನ್ ಸಿಂಗ್ ಅವರನ್ನು ನಾನು ಅಭಿನಂದಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:07 pm, Wed, 4 February 26

Source link

ಸಂಪಾಯಿತಲೇ ಪರಾಕ್: ಮೈಲಾರಲಿಂಗ ಕಾರ್ಣಿಕ ನುಡಿಯನ್ನ ಭಕ್ತರೇ ವಿಶ್ಲೇಷಣೆ ಮಾಡಲಿ ಎಂದ ಡಿಸಿ – Kannada News | Vijayangara: Mailara Lingeshwara Karnika: Sampayitale Parak; What did DC say

ಬಳ್ಳಾರಿ, ಫೆಬ್ರವರಿ 04: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ನುಡಿ ಹೊರಬಿದ್ದಿದೆ. ‘ಸಂಪಾಯಿತಲೇ ಪರಾಕ್’ ಎಂದು ಕಾರ್ಣಿಕ ಗೊರವಯ್ಯ ಭವಿಷ್ಯ ನುಡಿದಿದ್ದಾರೆ. ಸದ್ಯ ಈ ಕಾರ್ಣಿಕ ನುಡಿಯನ್ನು ರಾಜ್ಯ, ದೇಶದಲ್ಲಿ ಉತ್ತಮ ಮಳೆ-ಬೆಳೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಇನ್ನು ಈ ಬಗ್ಗೆ ವಿಜಯನಗರ ಡಿಸಿ ಕವಿತಾ ಮನ್ನೀಕೆರಿ ಮಾತನಾಡಿದ್ದು, ಕಾರ್ಣಿಕ ನುಡಿಯನ್ನು ಭಕ್ತರೇ ವಿಶ್ಲೇಷಣೆ ಮಾಡಲಿ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಈಗ ಕಾಲ ಬದಲಾಗಿದೆ: ‘ಜೋಗಿ’ ನಿರ್ಮಾಪಕರ ‘ಘಾರ್ಗಾ’ ಚಿತ್ರ ಬಿಡುಗಡೆಗೆ ರೆಡಿ – Kannada News | Jogi movie producer Ashwini Ram Prasad talks about new film Gharga

‘ಜೋಗಿ’ ಸಿನಿಮಾದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರು ಈಗ ‘ಘಾರ್ಗ’ (Gharga) ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ಶಶಿಧರ್ ಅವರು ನಿರ್ದೇಶನ ಮಾಡಿದ್ದಾರೆ. ‘ಎಲ್ಲ ಕಡೆಗಳಲ್ಲೂ ಜೋಗಿ ಸಿನಿಮಾಗೆ ಪ್ರಚಾರ ಮಾಡಿದ್ದೆ. ಎಲ್ಲ ಊರುಗಳಲ್ಲಿ ಪೋಸ್ಟರ್ ಹಾಕಿಸಿದ್ದೆ. ಈಗ ಆ ಟ್ರೆಂಡ್ ಇಲ್ಲ. ಎಲ್ಲವೂ ಡಿಜಿಟಲ್ ಆಗಿದೆ. ಈ ಸಿನಿಮಾದ ಕಥೆ ಕೇಳಿದಾಗಲೇ ನನಗೆ ಇಷ್ಟ ಆಯಿತು. ಕಂಟೆಂಟ್ ಏನೇ ಆದರೂ ಮೊಬೈಲ್ ಮೂಲಕ ಎಲ್ಲ ಕಡೆಗಳಲ್ಲಿ ವೈರಲ್ ಆಗುತ್ತದೆ. ನಿರ್ದೇಶಕರಿಗೆ ಮತ್ತು ಮಗನಿಗೆ ಅದರ ಎಲ್ಲ ಜವಾಬ್ದಾರಿ ಕೊಟ್ಟಿದ್ದೇನೆ. ಯೂಟ್ಯೂಬ್ ಮೂಲಕ ಚೆನ್ನಾಗಿ ಪ್ರಚಾರ ಆಗುತ್ತಿದೆ’ ಎಂದು ಅಶ್ವಿನಿ ರಾಮ್ ಪ್ರಸಾದ್ (Ashwini Ram Prasad) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

U19 World Cup: ದಾಖಲೆಯ ಗುರಿ ಬೆನ್ನಟ್ಟಿ ಸತತ 6ನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿದ ಭಾರತ – Kannada News | 19 World Cup 2026: India Dominates Afghanistan, Enters Final for 6th Time

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ (India U19 vs Afghanistan U19) ನಡುವಿನ 2026 ರ ಅಂಡರ್-19 ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ಯುವ ಪಡೆ ಅಫ್ಘಾನಿಸ್ತಾನ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಸತತ 6ನೇ ಬಾರಿಗೆ ಅಂಡರ್ 19 ವಿಶ್ವಕಪ್ ಫೈನಲ್​ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ಇಬ್ಬರ ಶತಕದ ನೆರವಿನಿಂದ 310 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ಇನ್ನು 53 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಇದರ ಜೊತೆಗೆ ಅಂಡರ್ 19 ವಿಶ್ವಕಪ್ ಸೆಮಿಫೈನಲ್​ನಲ್ಲಿ ಅತಿದೊಡ್ಡ ಗುರಿ ಬೆನ್ನಟ್ಟಿದ ದಾಖಲೆಯನ್ನು ಭಾರತ ತಂಡ ಬರೆಯಿತು.

Source link

ಜ್ಯೋತಿಷಿ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್‌-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು – Kannada News | Kamalakar bhat guruji And Suchitra And others judicial custody In Siddapur murder over affair dispute

ಶಿವಮೊಗ್ಗ/ಕಾರವಾರ, (ಫೆಬ್ರವರಿ 04): ನಿಮಗೆ ಸಾಡೇಸಾಥ್ ಆರಂಭವಾಗಿದೆ. ನಿಮಗೆ ಶನಿ ವಕ್ಕರಿಸಿದ್ದಾನೆ ಎಂದು ಜನರಿಗೆ ಜ್ಯೋತಿಷಿ ಹೇಳ್ತಿದ್ದ ಕಮಲಾಕರ್ ಭಟ್‌ನ ಭವಿಷ್ಯವೇ ತಲೆಕೆಳಗಾಗಿದೆ. ಕೊಲೆ ಕೇಸ್‌ನಲ್ಲಿ A3 ಕಮಲಾಕರ್ ಭಟ್ ಜೈಲುಪಾಲಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜೆಎಂಎಫ್‌ಸಿ ಕೋರ್ಟ್‌, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಇನ್ನು ಕಮಲಾಕರ್ ಭಟ್‌ ಹಾಗೂ ಸುಚಿತ್ರಾಳ ಅಕ್ರಮ ಸಂಬಂಧ ಬಗೆದಷ್ಟು ಬಯಲಾಗುತ್ತಿದೆ. ಜ್ಯೋತಿಷಿ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದ ಸುಚಿತ್ರಾ, ಬಳಿಕ ಪರ್ಮನೆಂಟ್ ಆಗಿ ಆತನ ಮನೆಯವಳಾಗಿಬಿಟ್ಟಿದ್ದಳು. ನಂತರ ಮನೆಯಲ್ಲಿ ಏನೆಲ್ಲಾ ನಡೆಯಿತಿತ್ತು ಎನ್ನುವುದನ್ನು ಸ್ವತಃ ಸುಚಿತ್ರಾಳ ಪುತ್ರಿ ಬಯಲು ಮಾಡಿದ್ದಾಳೆ.

ಕೆಲಸಕ್ಕೆಂದು ಸೇರಿ ಲಿವಿಂಗ್ ಟುಗೆದರ್

ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಇಬ್ಬರು ಬೆಂಗಳೂರಿನಲ್ಲಿ ಪರಿಚವಾಗಿದ್ದು, ಬಳಿಕ ಇವರ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದಳು. ನಂತರ ಸುಚಿತ್ರಾ ಹಾಗೂ ಕಮಲಾಕರ್ ಭಟ್ ನಡುವೆ ಲವ್ವಿಡವ್ವಿ ಶುರುವಾಗಿದ್ದು, ಜ್ಯೋತಿಷಿ ಸುಚಿತ್ರಾಳಿಗೆ ಶಿವಮೊಗ್ಗದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಟ್ಟಿದ್ದ ಹೀಗಾಗಿ ಸುಚಿತ್ರಾ 9 ತಿಂಗಳಿನಿಂದ ಶಿವಮೊಗ್ಗದ ಗುತ್ತೆಪ್ಪ ಕಾಲನಿಯ ಬಡಾವಣೆಯಲ್ಲಿ ಮನೆಯಲ್ಲಿ ಮಗಳೊದಿಗೆ ಕಮಲಾಕರ್ ಭಟ್ ಜೊತೆ ವಾಸವಾಗಿದ್ದಳು.

ಇದನ್ನೂ ಓದಿ: ಸ್ವಾಮೀಜಿ ಮಾತ್ರವಲ್ಲ ಹುಡುಗರ ಜೊತೆ ಪತ್ನಿ ಸಂಪರ್ಕ: ಹೆಂಡ್ತಿಯ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟ ಪತಿ

ಸುಚಿತ್ರಾಳ ಐಷರಾಮಿ ಜೀವನ

ಬಾಡಿಗೆ ಮನೆ ಪಕ್ಕದಲ್ಲಿ ಒಂದು ಕನಸು ಎನ್ನುವ ಸ್ವಾಮೀಜಿ ಕಚೇರಿ ಇತ್ತು. ಸ್ವಾಮೀಜಿ ಹೀಗೆ ಕಚೇರಿ ಮತ್ತು ಸುಚಿತ್ರಾ ಮನೆ ಎರಡನ್ನು ನಿರ್ವಹಣೆ ಮಾಡುತ್ತಿದ್ದ. ವಾರದಲ್ಲಿ ಮೂರ್ನಾಲ್ಕು ದಿನ ಜ್ಯೋತಿಷಿ ಸುಚಿತ್ರಾ ಜೊತೆಯಲ್ಲೇ ಇರುತ್ತದ್ದ. ಹೀಗಿರುವಾಗ ಸುಚಿತ್ರಾಳದ್ದು ಐಷಾರಾಮಿ ಜೀವನ ಶುರುವಾಗಿದ್ದು ಜ್ಯೋತಿಷಿಯ ಎರಡು ಕಾರ್ ಗಳನ್ನು ಸುಚಿತ್ರಾ ಬಳಕೆ ಮಾಡುತ್ತಿದ್ದಳು. ಇನ್ನು ಸುಚಿತ್ರಾ ಳಿಗೆ ಹರ್ಷ ಎನ್ನುವ ಕಾರು ಚಾಲಕನನ್ನು ಇಟ್ಟುಕೊಂಡಿದ್ದಳು.

ಜ್ಯೋತಿಷಿ-ತಾಯಿಯ ಮುಖವಾಡ ಕಳಚಿಟ್ಟ ಪುತ್ರಿ


ಇನ್ನು ಸುಚಿತ್ರಾಳ ಮಗಳು ಸುಮಾಶ್ರೀ ಟಿವಿ9 ಜತೆ ಮಾನಾಡಿದ್ದು, ತಾಯಿ ಹಾಗೂ ಗುರೂಜಿಯ ಮುಖವಾಡವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಕಳೆದ ಆರು ತಿಂಗಳಿಂದ ಶಿವಮೊಗ್ಗದಲ್ಲಿ ತಾಯಿ ಜೊತೆ ವಾಸವಾಗಿದ್ದು, ತಾಯಿ ಮತ್ತು ಕಮಲಾಕರ್ ಭಟ್ ಇಬ್ಬರು ಸೇರಿ ನನಗೆ ಜೀವ ಬೆದರಿಕೆ ಹಾಕುತ್ತಿದ್ದರು.ಮನೆ ಬಿಟ್ಟು ಹೋಗಲು ಇಬ್ಬರು ಬಲವಂತ ಮಾಡುತ್ತಿದ್ದರು. ಈ ಹಿನ್ನಲೆ ನಾನು ತಂದೆಗೆ ಮಾಹಿತಿ ನೀಡಿದೆ. ತಂದೆ ಊರಿಗೆ ಬರಲು ಸೂಚನೆ ನೀಡಿದರು. ಅದರಂತೆ ನಾನು ಸಿದ್ದಾಪುರಕ್ಕೆ ಹೋಗಿ ದೂರು ನೀಡಿರುವೆ. ನನ್ನ ತಂದೆ ಮತ್ತು ದೊಡ್ಡಪ್ಪ ಮೇಲೆ ಅಟ್ಯಾಕ್ ಮಾಡಿದ್ದು, ಘಟನೆಯಲ್ಲಿ ದೊಡ್ಡಪ್ಪ ಮೃತಪಟ್ಟಿದ್ದಾರೆ. ಗುರುಜಿ ಮತ್ತು ತಾಯಿಗೆ ಕಠಿಣ ಶಿಕ್ಷೆ ಆಗಬೇಕು ಎಂದಿದ್ದಾಳೆ.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ: ದೂರು ನೀಡಿದ್ದಕ್ಕೆ ಹಲ್ಲೆ; ಓರ್ವ ಸಾವು

ಸುಚಿತ್ರಾ ಸೇರಿ 7 ಆರೋಪಿಗಳಿಗೆ 8 ದಿನ ನ್ಯಾಯಾಂಗ ಬಂಧನ

ಜನರ ಭವಿಷ್ಯ ಹೇಳುತ್ತಾ ಬದುಕು ಕಟ್ಟಿಕೊಂಡಿದ್ದ ಉತ್ತರಕನ್ನಡ ಜಿಲ್ಲೆಯ ಕಮಲಾಕರ್ ಭಟ್‌, ಸುಚಿತ್ರಾ ಅನ್ನೋ ಈ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಇದನ್ನ ಪ್ರಶ್ನೆ ಮಾಡ್ತಿದ್ದಂತೆ ಮೊನ್ನೆ ದೊಡ್ಡ ರದ್ಧಾಂತವೇ ಆಗಿತ್ತು. ಶಿವಮೊಗ್ಗದಿಂದ ನಾಲ್ಕೈದು ಹುಡುಗರನ್ನ ಕರೆದುಕೊಂಡು ಸಿದ್ದಾಪುರಕ್ಕೆ ಹೋಗಿದ್ದ ಕಮಲಾಕರ, ಸುಚಿತ್ರಾ ಪತಿ ಮಹೇಶ್‌ ಮೇಲೆ ಮೇಲೆ ಅಟ್ಯಾಕ್ ಮಾಡಿಸಿದ್ದ. ಈ ವೇಳೆ ತಡೆಯಲು ಬಂದ ಮಹೇಶ್‌ ಸಹೋದರ ವಸಂತನಿಗೆ ಚಾಕು ಹಾಕಿ ಕೊಲೆ ಮಾಡಿದ್ರು. ಸೋಮವಾರ ರಾತ್ರಿಯೇ ಆರೋಪಿಗಳನ್ನ ವಶಕ್ಕೆ ಪಡೆದಿದ್ದ ಪೊಲೀಸರು ಇಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಜೆಎಂಎಫ್‌ಸಿ ಕೋರ್ಟ್‌ ಮುಂದೆ ಹಾಜರು ಪಡಿಸಿದ್ರು. ವಿಚಾರಣೆ ನಡೆಸಿದ ಕೋರ್ಟ್‌ ಕಮಲಾಕರ್‌ ಭಟ್‌, ಸುಚಿತ್ರಾ ಸೇರಿದಂತೆ 7 ಆರೋಪಿಗಳಿಗೆ 8 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫೆಬ್ರವರಿ 7-8ರಂದು ಮಲೇಷ್ಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ – Kannada News | PM Modi To Visit Malaysia On February 7 for bilateral talks and strategic Ties

ನವದೆಹಲಿ, ಫೆಬ್ರವರಿ 4: ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ವಾರದ ಕೊನೆಯಲ್ಲಿ ಮಲೇಷ್ಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಫೆಬ್ರವರಿ 7 ಹಾಗೂ 8ರಂದು ನಡೆಯಲಿರುವ ಈ ಭೇಟಿ ಪ್ರಧಾನಿ ಮೋದಿ ಅವರ ಮಲೇಷ್ಯಾಕ್ಕೆ ಮೂರನೇ ಭೇಟಿಯಾಗಿದೆ.

ಈ ಮೊದಲು ಆಗಸ್ಟ್ 2024ರಲ್ಲಿ ಭಾರತ-ಮಲೇಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ಗೆ ಏರಿಸಿದ ನಂತರ ಮಲೇಷ್ಯಾಕ್ಕೆ ಇದು ಪ್ರಧಾನಿ ಮೋದಿಯವರ ಮೊದಲ ಭೇಟಿಯಾಗಿದೆ. ಈ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ. ಹಾಗೇ, ಪ್ರಧಾನಿ ಮೋದಿ ಭಾರತೀಯ ಸಮುದಾಯದ ಸದಸ್ಯರು ಹಾಗೂ ಕೈಗಾರಿಕೆ, ವ್ಯಾಪಾರ ಪ್ರತಿನಿಧಿಗಳನ್ನು ಬೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ:

“ಭಾರತ ಮತ್ತು ಮಲೇಷ್ಯಾ ಐತಿಹಾಸಿಕ, ನಾಗರಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳ ಆಧಾರದ ಮೇಲೆ ದೀರ್ಘಕಾಲದ ಸ್ನೇಹ ಸಂಬಂಧಗಳನ್ನು ಹಂಚಿಕೊಂಡಿವೆ. ವಿಶ್ವದ ಮೂರನೇ ಅತಿದೊಡ್ಡ ದೇಶವಾದ ಮಲೇಷ್ಯಾದಲ್ಲಿ 2.9 ಮಿಲಿಯನ್ ಭಾರತೀಯ ವಲಸೆಗಾರರ ​​ಉಪಸ್ಥಿತಿಯಿಂದ ಈ ಸಂಬಂಧವು ಮತ್ತಷ್ಟು ಬಲಗೊಂಡಿದೆ” ಎಂದು ವಿದೇಶಾಂಗ ಸಚಿವಾಲಯದ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Parliament Session: ಇಂದು ಪ್ರಧಾನಿ ಮೋದಿ ಭಾಷಣ ರದ್ದು; ವಿಪಕ್ಷಗಳ ಪ್ರತಿಭಟನೆಯಿಂದ ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ

“ಭಾರತ ಹಾಗೂ ಮಲೇಷ್ಯಾ ಸಂಬಂಧವು ಬಹುಮುಖಿ ಮತ್ತು ಬೆಳೆಯುತ್ತಿದೆ. ಪ್ರಧಾನ ಮಂತ್ರಿ ಮೋದಿಯವರ ಮುಂಬರುವ ಭೇಟಿಯು ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ ಮತ್ತು ಕಡಲ ಸಹಕಾರದಿಂದ ಹಿಡಿದು ಡಿಜಿಟಲ್ ಮತ್ತು ಹಣಕಾಸು ತಂತ್ರಜ್ಞಾನ, ಇಂಧನ, ಆರೋಗ್ಯ ರಕ್ಷಣೆ, ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ ಮುಂತಾದ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸುತ್ತದೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನು ಜೀವನದ ಕೊನೆಕಾಲದಲ್ಲಿದ್ದೇನೆ, ಈ ವೃದ್ಧನ ಮನವಿಗೆ ಸ್ಪಂದಿಸಿ: ರಾಜ್ಯಸಭೆಯಲ್ಲಿ ಗದ್ಗದಿತರಾದ ದೇವೇಗೌಡ – Kannada News | Save Karnataka Farmers from Water Crisis: HD Deve Gowda Emotional spech in Rajya Sabha

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡImage Credit source: tv9 kannada

ಬೆಂಗಳೂರು, ಫೆಬ್ರವರಿ 04: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​​ಡಿ ದೇವೇಗೌಡರು (H. D. Deve Gowda) ಇಂದು ರಾಜ್ಯಸಭೆಯಲ್ಲಿ ಕರ್ನಾಟಕದ ಪರ ಧ್ವನಿ ಎತ್ತಿದರು. ರಾಜ್ಯದ ನೀರಾವರಿ ಬಗ್ಗೆ ಪ್ರಸ್ತಾಪಿಸಿದ ಅವರು, ಕರ್ನಾಟಕವನ್ನು ರಕ್ಷಿಸಿ. ನನ್ನ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ, ಅವರ ಹಿತ ಕಾಯಿರಿ. ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ ಎಂದು ಗದ್ಗದಿತರಾದರು. ಹೆಚ್​​ಡಿ ದೇವೇಗೌಡರ ಮಾತಿಗೆ ಇಡೀ ಸದನವೇ ಒಂದು ಕ್ಷಣ ಮೌನಕ್ಕೆ ಜಾರಿತ್ತು.

ರಾಜ್ಯಸಭೆಯಲ್ಲಿ ಕರ್ನಾಟಕದ ಬಗ್ಗೆ ಪ್ರಸ್ತಾಪಿಸಿದ ಹೆಚ್​​ಡಿಡಿ

ರಾಜ್ಯಸಭೆಯಲ್ಲಿ ಬುಧವಾರ ನಡೆದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್​​ಡಿ ದೇವೇಗೌಡರು, ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ರಾಜ್ಯದ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಆ ಎಲ್ಲಾ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಕರ್ನಾಟಕ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಕೇಂದ್ರ ಸರಕಾರವನ್ನು ಮನವಿ ಮಾಡಿಕೊಂಡರು.

ಇದನ್ನೂ ಓದಿ: ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗರ್- ಶಿವಲಿಂಗೇಗೌಡ

‘ನನ್ನ ರಾಜ್ಯಸಭಾ ಅವಧಿ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ನನ್ನ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಹಿತಕಾಯಿರಿ. ನಾವೆಲ್ಲರೂ ಮನುಷ್ಯರು, ಮಳೆ ಬಿದ್ದರೆ ನೀರು, ಇಲ್ಲವಾದರೆ ಇಲ್ಲ. ಈ ಸದನದ ಎಲ್ಲಾ ಸದಸ್ಯರು ಕರ್ನಾಟಕದ ರಕ್ಷಣೆ ಮಾಡಬೇಕು ಎಂಬುದಾಗಿ ನಾನು ಕೈ ಮುಗಿದು ಬೇಡುತ್ತೇನೆ’ ಎಂದರು.

‘ಕರ್ನಾಟಕ ನಿರಂತರವಾಗಿ ನೆರೆ ರಾಜ್ಯಗಳ ಜತೆ ನೀರಾವರಿ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ. ನಾನು ಕೂಡ ನೀರಿಗಾಗಿ 65 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈ ಸದನದಲ್ಲಿ ನಾನು ನ್ಯಾಯಮಂಡಳಿಗಳು ನೀಡಿರುವ ತೀರ್ಪುಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಕರ್ನಾಟಕ ರಾಜ್ಯಕ್ಕೆ ನೀರಿನದೇ ಬಹುದೊಡ್ಡ ಬಿಕ್ಕಟ್ಟಾಗಿದೆ. ಒಂದೆಡೆ ತಮಿಳುನಾಡು, ಮತ್ತೊಂದೆಡೆಯಲ್ಲಿ ಆಂಧ್ರ ಪ್ರದೇಶ, ಇನ್ನೊಂದು ಕಡೆಯಲ್ಲಿ ಗೋವಾದಿಂದ ತೊಂದರೆ ಎದುರಿಸುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ:

‘ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈ ಬಿಕ್ಕಟ್ಟಿಗೆ ಪರಿಹಾರ ನೀಡಬೇಕು. ನಾನು ನಿಮ್ಮ (ಎನ್‌ಡಿಎ) ಜತೆಯಲ್ಲಿಯೇ ಇರುತ್ತೇನೆ. ನನ್ನ ಮಗ ನಿಮ್ಮ ಸಂಪುಟದಲ್ಲಿ ಇದ್ದಾನೆ. ನಾವು ಮುಂದೆಯೂ ನಿಮ್ಮ ಜತೆಗೆ ಇರುತ್ತೇವೆ ಹಾಗೂ ಮೈತ್ರಿಕೂಟ ಬದಲಾವಣೆ ಮಾಡುವ ಯಾವ ಪ್ರಶ್ನೆಯೇ ಇಲ್ಲ. ರಾಜ್ಯದ ಜನರಿಗೆ ನ್ಯಾಯ ಒದಗಿಸಿ ಎಂಬುದಷ್ಟೇ ನನ್ನ ಏಕೈಕ ಮನವಿ’ ಎಂದು ಹೇಳಿದ್ದಾರೆ.

ಇದೇ ವೇಳೆ ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕ ಜತೆ ಯಶಸ್ವಿಯಾಗಿ ವ್ಯಾಪಾರ ಒಪ್ಪಂದ ಮಾಡಿಕೊಂಡ ಭಾರತದ ರಾಜತಾಂತ್ರಿಕ ಜಾಣ್ಮೆಯನ್ನು ಕೊಂಡಾಡಿದ ಹೆಚ್​​ಡಿ ದೇವೇಗೌಡರು, ಇದಕ್ಕೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿಯನ್ನ ಶ್ಲಾಘಿಸಿದರು. ಈ ಬಗ್ಗೆ ತಾವು ಪತ್ರ ಬರೆದಿರುವುದನ್ನು ಉಲ್ಲೇಖಿಸಿದರು.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ

ಇನ್ನು ಮೋದಿ ಅವರನ್ನು ವಿನಾಕಾರಣ ಟೀಕೆ ಮಾಡುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ‘ಆರ್ಥಿಕವಾಗಿ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಜನರ ಆದಾಯ ಹೆಚ್ಚಳವಾಗುತ್ತಿದೆ. ರೈತಪರವಾಗಿ ಈ ಸರ್ಕಾರ ಕೆಲಸ ಮಾಡುತ್ತಿದೆ. 2047ಕ್ಕೆ ಭಾರತವು ಮೋದಿ ಅವರ ನೇತೃತ್ವದಲ್ಲಿ ವಿಕಸಿತ ಭಾರತ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ’ವೆಂದು ಹೆಚ್​​ಡಿ ದೇವೇಗೌಡರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link