ಅಡುಗೆಯ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ – Kannada News | There are many health benefits of using Asafoetida in cooking
ಭಾರತೀಯರ ಅಡುಗೆ ಮನೆಗಳಲ್ಲಿ ಇಂಗು (Asafoetida) ಇದ್ದೇ ಇರುತ್ತದೆ. ಸಣ್ಣ ಬಗೆಯ ಮಸಾಲೆಯಾಗಿರುವ ಇಂಗು ಅಡುಗೆಗೆ ವಿಭಿನ್ನ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ. ಬೇಳೆ ಸಾರು, ರಸಂ, ಸಾಂಬಾರು ಸೇರಿದಂತೆ ಹೆಚ್ಚಿನ ತರಕಾರಿ ಪದಾರ್ಥಗಳಿಗೆ ಇಂಗು ಹಾಕಲಾಗುತ್ತದೆ. ಹೀಗೆ ಭಾರತೀಯ ಪಾಕಪದ್ಧತಿಯಲ್ಲಿ ಪ್ರಮುಖ ಪಾತ್ರವಹಿಸುವಂತಹ ಇಂಗಿಗೆ ಆಯುರ್ವೇದದಲ್ಲೂ ಮುಖ್ಯ ಸ್ಥಾನವಿದೆ. ಹೌದು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಇಂಗು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು…