Viral News: ಮಾತು ಬಿಟ್ಟಿದ್ದಕ್ಕೆ ಪ್ರಿಯಕರನನ್ನೇ ಕೊಂದ ಯುವತಿ! – Kannada News | 22 year old girl killed boyfriend after he ignored her
ಬಿಲಾಸ್ಪುರ, ಫೆಬ್ರವರಿ 4: ಅವರಿಬ್ಬರೂ ಕೆಲವು ವರ್ಷಗಳಿಂದ ಪ್ರೀತಿ (Love) ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಏನು ಸಮಸ್ಯೆಯಾಗಿತ್ತೋ ಗೊತ್ತಿಲ್ಲ; ಯುವಕ ತನ್ನ ಪ್ರೇಯಸಿಯ ನಂಬರ್ ಬ್ಲಾಕ್ ಮಾಡಿದ್ದ. ಆಕೆ ಯಾವ ನಂಬರ್ನಿಂದ ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ತಾನು ಪ್ರೀತಿಸುವ ಹುಡುಗ ತನ್ನೊಂದಿಗೆ ಮಾತು ಬಿಟ್ಟಿದ್ದರಿಂದ ತೀವ್ರ ಕೋಪಗೊಂಡಿದ್ದ 22 ವರ್ಷದ ಯುವತಿ ಆತನ ಜೀವವನ್ನೇ ತೆಗೆದಿದ್ದಾಳೆ. ಛತ್ತೀಸ್‌ಗಢದ ಬಿಲಾಸ್ಪುರ ನಗರದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಬೆಳಿಗ್ಗೆ 25 ವರ್ಷದ ಪ್ರಸಾದ್ ಸೂರ್ಯವಂಶಿ…