ಕೊನೆಯ ತ್ರೈಮಾಸಿಕದಲ್ಲಿ 7.1 ಬಿಲಿಯನ್ ಡಾಲರ್ ಹೆಚ್ಚುವರಿ; ಸರ್ವಿಸ್ ಸೆಕ್ಟರ್ ಮತ್ತು ರೆಮಿಟೆನ್ಸ್ನಿಂದ ಭರ್ಜರಿ ಕೊಡುಗೆ – Kannada News
ನವದೆಹಲಿ, ಜೂನ್ 9: ಕಳೆದ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ (2026ರ ಜನವರಿಯಿಂದ ಮಾರ್ಚ್) ಭಾರತ ಚಾಲ್ತಿ ಖಾತೆ ಹೆಚ್ಚುವರಿಯನ್ನು (ಕರೆಂಟ್ ಅಕೌಂಟ್ ಸರ್ಪ್ಲಸ್) ಸಾಧಿಸಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ನಾಲ್ಕನೇ ಕ್ವಾರ್ಟರ್ನಲ್ಲಿ ಕರೆಂಟ್ ಅಕೌಂಟ್ ಸರ್ಪ್ಲಸ್ 7.1 ಬಿಲಿಯನ್ ಡಾಲರ್ (ಸುಮಾರು 67,000 ಕೋಟಿ ರೂ) ದಾಖಲಾಗಿದೆ. ಸೇವಾ ವಲಯದ ಉತ್ತಮ ರಫ್ತು ಸಾಧಿಸಿರುವುದು ಮತ್ತು ವಿದೇಶಗಳಿಂದ ಸಾಕಷ್ಟು ಹಣದ ಹರಿವು (Remittances) ಬಂದಿರುವುದು ಚಾಲ್ತಿ ಖಾತೆ ಹೆಚ್ಚುವರಿ ಹೊಂದಲು ಸಾಧ್ಯವಾಗಿದೆ ಎಂದು…