Gold Rate: ಹಲವು ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಏರಿಕೆ; ಬೆಳ್ಳಿ ಸ್ಥಿರ – Kannada News
ನವದೆಹಲಿ, ಜೂನ್ 9: ಹಲವು ದಿನಗಳ ನಂತರ ಚಿನ್ನದ ಬೆಲೆ (Gold Rates) ಮೊದಲ ಬಾರಿಗೆ ಹೆಚ್ಚಳಗೊಂಡಿದೆ. ನಿನ್ನೆ 95 ರೂ ಕಡಿಮೆಗೊಂಡಿದ್ದ ಇದರ ಬೆಲೆ ಇವತ್ತು ಮಂಗಳವಾರ ಗ್ರಾಮ್ಗೆ 135 ರೂ ಏರಿದೆ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಅಲ್ಪ ಹೆಚ್ಚಳವಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಇವತ್ತು ಬದಲಾವಣೆಗೊಳ್ಳದೆ ಯಥಾಸ್ಥಿತಿಯಲ್ಲಿ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,40,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,53,160 ರುಪಾಯಿ…