Category Archives: Blog

Your blog category

ಮಂಗಳೂರಿನಲ್ಲಿ ಬೋಟ್ ಆಂಬ್ಯುಲೆನ್ಸ್ ಲೋಕಾರ್ಪಣೆ: 16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ, ಏನೆಲ್ಲಾ ಸೌಲಭ್ಯವಿದೆ ಗೊತ್ತಾ? – Kannada News | Mangaluru Fishermen Build Karnataka First Boat Ambulance for Coastal Emergency Rescue

ಮಂಗಳೂರು, ಫೆಬ್ರವರಿ 04: ನದಿ, ಕಡಲಿಗೆ ದೋಣಿ ಇಳಿಸಿ, ಅಬ್ಬರದ ತೆರೆಗಳ ನಡುವೆ ಸಾಗಿ ಬಲೆ ಬೀಸಿ ಮೀನು ಹಿಡಿಯುವ ಸಾಹಸ ಪ್ರವೃತ್ತಿ ಮೀನುಗಾರಿಕೆ (fishing). ತಮ್ಮ ಬದುಕಿಗಾಗಿ ಜೀವವನ್ನೇ ಒತ್ತೆಯಿಟ್ಟು ವೃತ್ತಿ ನಡೆಸುವ ಈ ಮೀನುಗಾರರನ್ನು ತುರ್ತು ಸಂದರ್ಭದಲ್ಲಿ ರಕ್ಷಣೆ ಮಾಡುವುದಕ್ಕೆ ಮೀನುಗಾರರೆ ಮಾದರಿ ಕಾರ್ಯವೊಂದನ್ನು ಮಾಡಿದ್ದಾರೆ. ಬೋಟ್ ಆಂಬ್ಯುಲೆನ್ಸ್ (Boat Ambulance) ನಿರ್ಮಾಣ ಮಾಡುವ ಮೂಲಕ ತಮ್ಮ ರಕ್ಷಣೆಗೆ ತಾವೇ ಮುಂದಾಗಿದ್ದಾರೆ.

ರಾಜ್ಯ ಕರಾವಳಿಯ 320 ಕಿ.ಮೀ. ವ್ಯಾಪ್ತಿಯಲ್ಲಿ 5 ಲಕ್ಷಕ್ಕೂ ಅಧಿಕ ಕುಟುಂಬಗಳು ಇಂದಿಗೂ ಮೀನುಗಾರಿಕೆ ವೃತ್ತಿಯನ್ನು‌ ಅವಲಂಬಿಸಿವೆ. ಸಾಕಷ್ಟು ಸವಾಲಿನ ಸನ್ನಿವೇಶವನ್ನು ಎದುರಿಸಬೇಕಾದ ಈ ವೃತ್ತಿಯಲ್ಲಿ ಯಾವಾಗ ಅವಘಡ ಸಂಭವಿಸುತ್ತೆ ಅಂತಾ ಊಹಿಸುವುದಕ್ಕೆ ಸಾಧ್ಯವಿಲ್ಲ. ಹವಾಮಾನ ವೈಪರೀತ್ಯ, ಏಕಾಏಕಿ ಸಮುದ್ರದಲ್ಲಿ ಏರುಪೇರು ಅಥವಾ ತಾಂತ್ರಿಕ ದೋಷಗಳಿಂದ ಸಮುದ್ರದಲ್ಲಿ ಬೋಟ್ ಪಲ್ಟಿಯಾಗಿ‌ ಈವರೆಗೆ ಸಾಕಷ್ಟು ಜೀವಗಳು ಬಲಿಯಾಗಿವೆ.

ಇದನ್ನೂ ಓದಿ: ಕರಾವಳಿಯಲ್ಲಿ ಮೊದಲ ಬೋಟ್ ಆಂಬ್ಯುಲೆನ್ಸ್, ತಮ್ಮ‌ ರಕ್ಷಣೆಗೆ ತಾವೇ ನಿರ್ಮಿಸಿಕೊಂಡ ಮೀನುಗಾರರು

ಈ ರೀತಿಯ ಅವಘಡ ಸಂಭವಿಸಿದಾಗ ಅಥವಾ ಮೀನುಗಾರಿಕೆ ನಡೆಸುವ ವೇಳೆ ಮೀನುಗಾರ‌‌ ಅನಾರೋಗ್ಯಕ್ಕೆ ತುತ್ತಾದರೆ, ಕ್ಷ್ರಿಪ್ರವಾಗಿ ಅವರ ರಕ್ಷಣೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರಾಜ್ಯ ಕರಾವಳಿಯಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಬೋಟ್ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಲಾಗಿದೆ. ಉಳ್ಳಾಲ ವಲಯದ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರ‌ ಸಂಘದವರು ಒಟ್ಟು ಸೇರಿ ಈ ಬೋಟ್ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದ್ದಾರೆ.

16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ

ಸರ್ಕಾರ ಈ ಹಿಂದೆ ಬೋಟ್ ಆಂಬ್ಯುಲೆನ್ಸ್ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರೂ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ನಿರಾಸೆಗೊಂಡ ಮೀನುಗಾರರು ಸರ್ಕಾರಕ್ಕೆ ಸೆಡ್ಡು ಹೊಡೆದು ತಮ್ಮ ಜೀವ ರಕ್ಷಣೆಗೆ ತಾವೇ ಮುಂದಾಗಿದ್ದು, ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿದ್ದಾರೆ. ಸುಮಾರು 16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಈ ಬೋಟ್ ಆಂಬ್ಯುಲೆನ್ಸ್ ದಾನಿಗಳ ಸಹಾಯದಿಂದ ಸಾಕಾರಗೊಂಡಿದೆ.

 

ತುರ್ತು ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಈ ಬೋಟ್‌ನಲ್ಲಿ ಅಳವಡಿಸಲಾಗಿದೆ. ಈ ಬೋಟ್‌ನಲ್ಲಿ 30 ಮಂದಿ ಪ್ರಯಾಣಿಸುವಷ್ಟು ಅವಕಾಶವಿದ್ದು, ಸಂಪೂರ್ಣವಾಗಿ ತುರ್ತು ಸಂದರ್ಭಗಳಲ್ಲಿ ಮೀನುಗಾರರ ಜೀವ ರಕ್ಷಣೆಗೆ ಬಳಸಲಾಗುತ್ತದೆ.

ಬೋಟ್ ಆಂಬ್ಯುಲೆನ್ಸ್​​ನಲ್ಲಿ ಏನೆಲ್ಲಾ ಸೌಲಭ್ಯ

ಉಳ್ಳಾಲ ಜೆಟ್ಟಿಯನ್ನು ಕೇಂದ್ರವಾಗಿರಿಸಿಕೊಂಡು ಬೋಟ್ ಆಂಬ್ಯುಲೆನ್ಸ್ ಕಾರ್ಯಾಚರಣೆ ನಡೆಯಲಿದೆ. ಇದಕ್ಕಾಗಿ ಚಾಲಕರನ್ನು ಒಳಗೊಂಡಂತೆ 15 ಜನರ ನುರಿತ ತಂಡ ಸಜ್ಜಾಗಿದೆ.‌ ಬೋಟ್‌ನಲ್ಲಿ ಸೈರನ್, ಎಮರ್ಜೆನ್ಸಿ ಕೆಂಪು ದೀಪ, ಸ್ಟ್ರೆಚರ್, ಆಮ್ಲಜನಕ ವ್ಯವಸ್ಥೆ, ವೈದ್ಯಕೀಯ ಉಪಕರಣಗಳು, ಪ್ರಥಮ ಚಿಕಿತ್ಸೆ ಕಿಟ್ ಹಾಗೂ ಲೈಫ್ ಜಾಕೆಟ್‌ಗಳಂತಹ ಸೌಲಭ್ಯಗಳಿವೆ. ಜೊತೆಗೆ ನುರಿತ ಆರೋಗ್ಯ ಸಿಬ್ಬಂದಿ ಇರಲಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾರ್ಖಾನೆಗೆ ಒಡಿಶಾ ಕಂಪನಿ ಹೆಸರು: ಸಿಡಿದೆದ್ದ ಮಂಗಳೂರಿಗರು

ಸರ್ಕಾರದ ನೆರವಿಗಾಗಿ ಕಾಯದೆ ಮೀನುಗಾರರೇ ಕೈಗೊಂಡ ಈ ಮಾನವೀಯ ಕಾರ್ಯ ಇದೀಗ ರಾಜ್ಯದ ಗಮನ ಸೆಳೆಯುತ್ತಿದೆ. ಈ ಮೂಲಕ ಕರಾವಳಿಯಲ್ಲಿ ಮೀನುಗಾರರ ಜೀವ ರಕ್ಷಣೆಯ ಭರವಸೆ ಮೂಡಿಸಿದೆ. ಮೀನುಗಾರರ ಈ ಕಾರ್ಯದಿಂದ ಸರ್ಕಾರ ಇನ್ನಾದರೂ ಪ್ರೇರಣೆ ಪಡೆಯಲಿ‌ ಎಂಬುದೇ ನಮ್ಮ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಂಗಾತಿಯಲ್ಲಿ ಈ ಬದಲಾವಣೆಗಳು ಕಂಡುಬಂದರೆ ನೀವು ಪ್ರೀತಿಯಲ್ಲಿ ಮೋಸ ಹೋಗ್ತಿದ್ದೀರಿ ಎಂದರ್ಥ – Kannada News | These changes in your partner can lead to a breakup

ಎಲ್ಲರ ಪ್ರೀತಿ ಸಕ್ಸಸ್‌ ಆಗೋದಿಲ್ಲ, ಕೆಲವೊಬ್ಬರು ಪದೇ ಪದೇ ಪ್ರೀತಿಯಲ್ಲಿ (love) ಮೋಸ ಹೋಗ್ತಾರೆ. ಜಗಳಗಳೇ ಬ್ರೇಕಪ್‌ಗೆ ಮೂಲ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದ್ರೆ ಇದ್ದಕ್ಕಿದ್ದಂತೆ ಬ್ರೇಕಪ್‌ ಆಗೋದಿಲ್ಲ, ಬ್ರೇಕಪ್‌ಗೂ ಸ್ವಲ್ಪ ಸಮಯ ಮುನ್ನ ಸಂಗಾತಿಯಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬರುತ್ತವೆ. ಈ ಬದಲಾವಣೆಗಳು ನಿಮ್ಮ ಸಂಗಾತಿಗೆ ನಿಮಗೆ ಮೋಸ ಮಾಡುತ್ತಿದ್ದಾರೆ ಎಂಬುದರ ಎಚ್ಚರಿಕೆಯ ಸಂಕೇತವಾಗಿದೆ. ಈ ಬದಲಾವಣೆ, ಎಚ್ಚರಿಕೆಯ ಸಂಕೇತವನ್ನು ನಿರ್ಲಕ್ಷಿಸಿದರೆ ಖಂಡಿತವಾಗಿಯೂ ಮುಂದೊಂದು ದಿನ ಪ್ರೇಮ ವೈಫಲ್ಯಕ್ಕೆ ಕಾರಣವಾಗಬಹುದು. ಹಾಗಿದ್ರೆ ಯಾವ ಬದಲಾವಣೆಗಳು ಬ್ರೇಕಪ್‌ನ ಸಂಕೇತ ಎಂಬುದನ್ನು ನೋಡೋಣ ಬನ್ನಿ.

ಸಂಗಾತಿಯಲ್ಲಿನ ಈ ಬದಲಾವಣೆಗಳು ಬ್ರೇಕಪ್‌ಗೆ ಕಾರಣವಾಗಬಹುದು‌:

  • ಸಂಗಾತಿ ಪ್ರೇಮ ಸಂಬಂಧದಿಂದ ದೂರ ಸರಿಯಲು ಪ್ರಾರಂಭಿಸಿದಾಗ, ನೀವು ಮೊದಲು ಗಮನಿಸುವುದು ಆಕೆ/ಆತ ಮಾತನಾಡುವ ವಿಧಾನದಲ್ಲಿನ ಬದಲಾವಣೆ. ಪ್ರೀತಿಯಿಂದ ಕೂಡಿದ್ದ ಸಂಭಾಷಣೆಗಳು ಕ್ರಮೇಣ ಔಪಚಾರಿಕವಾಗುತ್ತದೆ, ಪ್ರತಿಯೊಂದು ಸಂಭಾಷಣೆಯಲ್ಲೂ ಚುಚ್ಚು ಮಾತುಗಳಿರುತ್ತವೆ. ಈ ಬದಲಾವಣೆ ಖಂಡಿತವಾಗಿಯೂ ಬ್ರೇಕಪ್‌ಗೆ ಕಾರಣವಾಗುತ್ತದೆ.
  • ಮೊದಲೆಲ್ಲಾ ನಿಮ್ಮ ಬಳಿ ಗಂಟೆಗಟ್ಟಲೆ ಮಾತನಾಡುತ್ತಿದ್ದ ನಿಮ್ಮ ಪ್ರೇಮಿ ಇದ್ದಕ್ಕಿದ್ದಂತೆ ಮಾತನಾಡುವುದು ಕಡಿಮೆ ಮಾಡಿದರೆ ಅಥವಾ ನೀವು ಕರೆ ಮಾಡಿದಾಗಲೆಲ್ಲಾ ನಾನು ಬ್ಯುಸಿ ಇದ್ದೇನೆ, ಫೋನ್‌ನಲ್ಲಿ ಮಾತನಾಡಲು ಸಮಯವಿಲ್ಲ ಎಂದೆಲ್ಲಾ ಉಡಾಫೆಯ ಮಾತನಾಡಿದರೆ, ನಿಮ್ಮ ಪ್ರೇಮಿಗೆ ನಿಮ್ಮ ಮೇಲೆ ಪ್ರೀತಿ ಕಡಿಮೆಯಾಗುತ್ತಿದೆ ಎಂದರ್ಥ.
  • ವ್ಯಂಗ್ಯ, ಚುಚ್ಚುವ ಮಾತುಗಳು ಮತ್ತು ನಿಮ್ಮ ಭಾವನೆಗಳನ್ನು ಲಘುವಾಗಿ ಪರಿಗಣಿಸುವುದು ಇವೆಲ್ಲವೂ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಕಡಿಮೆಯಾಗಿದೆ ಎಂಬುದರ ಸಂಕೇತವಾಗಿದೆ.
  • ಸಮಯವಿಲ್ಲ, ಕೆಲಸ ಇದೆ ಹೀಗೆಲ್ಲಾ ಪದೇ ಪದೇ ನೆಪಗಳನ್ನು ಹೇಳಿ ನಿಮ್ಮಿಂದ ದೂರ ಸರಿಯಲು ಪ್ರಾಯಂಭಿಸಿದರೆ, ನಿಮಗೆ ಟೈಮ್‌ ಕೊಡುವುದನ್ನು ನಿಲ್ಲಿಸಿದರೆ ಖಂಡಿತವಾಗಿಯೂ ನಿಮ್ಮ ಸಂಗಾತಿಗೆ ಪ್ರೀತಿ ಕಡಿಮೆಯಾಗುತ್ತಿದೆ ಎಂದರ್ಥ. ನಿಮ್ಮಿಂದ ದೂರ ಸರಿಯುವ ಸಲುವಾಗಿಯೇ ಈ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ.  ಅದನ್ನು ಬಹಿರಂಗವಾಗಿ ಹೇಳುವುದಿಲ್ಲ.
  • ಪದೇ ಪದೇ ಸುಳ್ಳು ಹೇಳಲು ಪ್ರಾರಂಭಿಸುವುದು, ಜೀವನಶೈಲಿಯಲ್ಲಿನ ಬದಲಾವಣೆಗಳು, ವಿಷಯಗಳನ್ನು ನಿಮ್ಮಿಂದ ಮುಚ್ಚಿಡುವುದು ಇವೆಲ್ಲವೂ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಇಂಟರೆಸ್ಟ್‌ ಕಡಿಮೆಯಾಗಿದೆ ಎಂಬುದರ ಸೂಚನೆಯಾಗಿದೆ.
  • ಸಂಗಾತಿ ಎಲ್ಲದರ ಬಗ್ಗೆಯೂ ಅಸಡ್ಡೆ ತೋರಲು ಪ್ರಾರಂಭಿಸಿದಾ, ನಿಮ್ಮ ಮೇಲಿನ ಕಾಳಜಿ ಕಡಿಮೆಯಾಗುವುದು, ಸ್ವಾರ್ಥಿ ನಡವಳಿಕೆಗಳನ್ನು ಪ್ರದರ್ಶಿಸುವುದು ಈ ಎಲ್ಲಾ ನಡವಳಿಕೆಗಳು ಬ್ರೇಕಪ್‌ನ ಮುನ್ಸೂಚನೆಯಾಗಿದೆ. ಮುಂದೊಂದು ದಿನ ಈ ಬದಲಾವಣೆಗಳು ಬ್ರೇಕಪ್‌ಗೆ ಮೂಲ ಕಾರಣವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

100, 200, 500 ರೂ.ನಲ್ಲಿ ಈ ಮಾರ್ಕ್​ ಇರುವುದೇಕೆ ಗೊತ್ತಾ? ಇಲ್ಲಿದೆ ರಹಸ್ಯ ಮಾಹಿತಿ – Kannada News | RBI Currency Notes: Bleed Marks Guide for Blind Financial Inclusion by Design

ಡಿಜಿಟಲ್​​​ ಯುಗದಲ್ಲೂ ಭಾರತದಲ್ಲಿ ಇಂದಿಗೂ ನೋಟು ಬಳಕೆ ಮಾಡಲಾಗುತ್ತದೆ. ಆದರೆ ಈ ನೋಟುಗಳಲ್ಲಿ ಇರುವ ಕೆಲವೊಂದು ವಿಶೇಷ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲೇಬೇಕು. ಇಂದಿಗೂ ನೀರಿನಂತೆ ಖರ್ಚು ಮಾಡುವ ಅದೆಷ್ಟೋ ಜನರಿಗೆ ನೋಟುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಂದಿನ ದಿನಗಳಲ್ಲಿ ನಾವು ಯುಪಿಐ (UPI) ಮೂಲಕ ಹಣ ಪಾವತಿಸುವುದು ಹೆಚ್ಚಾಗಿರಬಹುದು, ಆದರೆ ನೂರಾರು ವರ್ಷಗಳಿಂದ ಚಲಾವಣೆಯಲ್ಲಿರುವ ನೋಟುಗಳ ವಿನ್ಯಾಸದ ಹಿಂದೆ ಒಂದು ವಿಶೇಷ ಉದ್ದೇಶವಿದೆ. ನೋಟುಗಳ ಅಂಚಿನಲ್ಲಿರುವ ಆ ಸಣ್ಣ ಕಪ್ಪು ಗೆರೆಗಳನ್ನು ‘ಬ್ಲೀಡ್ ಮಾರ್ಕ್ಸ್’ (Bleed Marks) ಎಂದು ಕರೆಯಲಾಗುತ್ತದೆ.

ಬ್ಲೀಡ್ ಮಾರ್ಕ್ಸ್ ಎಂದರೇನು?

ಈ ಗೆರೆಗಳನ್ನು ಮುಖ್ಯವಾಗಿ ದೃಷ್ಟಿಹೀನರಿಗಾಗಿ (Blind People) ವಿನ್ಯಾಸಗೊಳಿಸಲಾಗಿದೆ. ದೃಷ್ಟಿ ದೋಷವುಳ್ಳವರು ನೋಟನ್ನು ಕೈಯಿಂದ ಮುಟ್ಟಿದಾಗ (ಸ್ಪರ್ಶಿಸಿದಾಗ), ಆ ಗೆರೆಗಳ ಸಂಖ್ಯೆಯನ್ನು ಆಧರಿಸಿ ಅದು ಎಷ್ಟು ರೂಪಾಯಿಯ ನೋಟು ಎಂದು ಸುಲಭವಾಗಿ ಗುರುತಿಸಲು ಇದು ಸಹಾಯ ಮಾಡುತ್ತದೆ.

ಯಾವ ನೋಟಿನ ಮೇಲೆ ಎಷ್ಟು ಗೆರೆಗಳಿರುತ್ತವೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರತಿಯೊಂದು ನೋಟಿಗೆ ವಿಭಿನ್ನ ಸಂಖ್ಯೆಯ ಗೆರೆಗಳನ್ನು ನೀಡಿದೆ. 100 ರೂಪಾಯಿ ನೋಟು ರಡೂ ಅಂಚುಗಳಲ್ಲಿ ನಾಲ್ಕು (4) ಗೆರೆಗಳಿರುತ್ತವೆ. ಇವು ಸ್ವಲ್ಪ ಉಬ್ಬಿರುವುದರಿಂದ ಮುಟ್ಟಿದಾಗ ತಕ್ಷಣ ತಿಳಿಯುತ್ತದೆ. 200 ರೂಪಾಯಿ ನೋಟಿನಲ್ಲಿ ಇದರ ಎರಡೂ ಕಡೆ ನಾಲ್ಕು ಗೆರೆಗಳ ಜೊತೆಗೆ ಮಧ್ಯದಲ್ಲಿ ಎರಡು ಸಣ್ಣ ವೃತ್ತಾಕಾರದ (Circles) ಗುರುತುಗಳಿರುತ್ತವೆ. ಇದು 100 ಮತ್ತು 200ರ ನಡುವಿನ ವ್ಯತ್ಯಾಸ ತಿಳಿಯಲು ಸಹಾಯ ಮಾಡುತ್ತದೆ. 500 ರೂಪಾಯಿ ನೋಟಿನಲ್ಲಿ ಈ ನೋಟಿನ ಪ್ರತಿ ಬದಿಯಲ್ಲಿ ಐದು (5) ಗೆರೆಗಳಿರುತ್ತವೆ.

ಇದನ್ನೂ ಓದಿ: ಪುಣ್ಯಕೋಟಿ ಗೋವಿನ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ

ಆರ್ಥಿಕ ಸ್ವತಂತ್ರಕ್ಕಾಗಿ ಈ ವಿನ್ಯಾಸ

ಸಾಮಾನ್ಯ ಜನರಿಗೆ ಈ ಗೆರೆಗಳು ಕೇವಲ ವಿನ್ಯಾಸದಂತೆ ಕಂಡರೂ, ದೃಷ್ಟಿಹೀನರಿಗೆ ಇವು ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತವೆ. ಯಾರ ಸಹಾಯವೂ ಇಲ್ಲದೆ ತಾವು ನೀಡುತ್ತಿರುವ ಅಥವಾ ಪಡೆಯುತ್ತಿರುವ ಹಣ ಸರಿಯಾಗಿದೆಯೇ ಎಂದು ಅವರು ಖಚಿತಪಡಿಸಿಕೊಳ್ಳಬಹುದು. ನೋಟಿನ ಮೌಲ್ಯ ಹೆಚ್ಚಾದಂತೆ ಈ ಗೆರೆಗಳ ಸಂಖ್ಯೆ ಅಥವಾ ವಿನ್ಯಾಸವು ಬದಲಾಗುತ್ತಾ ಹೋಗುತ್ತದೆ.ಕೇವಲ ಗೆರೆಗಳಷ್ಟೇ ಅಲ್ಲದೆ, ನೋಟಿನ ಮೇಲಿರುವ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಮತ್ತು ಅಶೋಕ ಸ್ತಂಭದ ಚಿಹ್ನೆಯನ್ನು ಕೂಡ ಉಬ್ಬು ಮುದ್ರಣದ (Intaglio Printing) ಮೂಲಕ ಮುದ್ರಿಸಲಾಗುತ್ತದೆ, ಇದನ್ನು ಮುಟ್ಟಿ ನೋಡುವುದರಿಂದ ನೋಟು ಅಸಲಿಯೇ ಅಥವಾ ನಕಲಿಯೇ ಎಂದು ಕೂಡ ಪತ್ತೆಹಚ್ಚಬಹುದು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೂಟಿಂಗ್ ಸ್ಪರ್ಧೆ: 57ನೇ ವಯಸ್ಸಿನಲ್ಲಿ ಬೆಳ್ಳಿ ಪದಕ ಗೆದ್ದ ಪರಿಮಳಾ ಜಗ್ಗೇಶ್ – Kannada News | Jaggesh wife Parimala wins Silver medal in shooting competition

ನಟ ಜಗ್ಗೇಶ್ (Jaggesh) ಅವರ ಪತ್ನಿ ಪರಿಮಳಾ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರಿಗೆ 57 ವರ್ಷ ವಯಸ್ಸು. ‘ವಯಸ್ಸು ಕೇವಲ ಮನುಷ್ಯನ ಮನಸ್ಸಿನ ಮಿತಿಯಷ್ಟೇ ಹೊರತು ಸಾಧನೆಯ ಹಾದಿಗಲ್ಲ’ ಎಂಬುದನ್ನು ಅವರೀಗ ಸಾಬೀತುಪಡಿಸಿದ್ದಾರೆ ಆಹಾರ ತಜ್ಞೆಯೂ ಆಗಿರುವ ಪರಿಮಳಾ ಜಗ್ಗೇಶ್ (Parimala Jaggesh) ಅವರು ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇತ್ತೀಚೆಗೆ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ ನಡೆಯಿತು. ಅದರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ (KSRA) ವತಿಯಿಂದ ಬೆಂಗಳೂರಿನ ‘ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ (SAI) ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘3ನೇ ನಾಗರಾಜ ರಾವ್ ಜಗದಾಳೆ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್-2026’ರಲ್ಲಿ ಪರಿಮಳಾ ಜಗ್ಗೇಶ್ ಅವರು ಪಾಲ್ಗೊಂಡಿದ್ದರು. 10 ಮೀಟರ್ ಏರ್ ಪಿಸ್ತೂಲ್ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಅವರು ಸ್ಪರ್ಧಿಸಿದರು. ಮಾಸ್ಟರ್ ವಿಮೆನ್ ಇಂಡಿವಿಜುವಲ್ ವಿಭಾಗದಲ್ಲಿ 342-4x ಸ್ಕೋರ್ ಮಾಡುವ ಮೂಲಕ ಬೆಳ್ಳಿ ಪದಕ ಗೆದ್ದರು.

1994ರಿಂದಲೂ ಮಧುಮೇಹದಿಂದ (Type 2 Diabetes) ಪರಿಮಳಾ ಅವರು ಬಳಲುತ್ತಿದ್ದಾರೆ. ಅವರಿಗೆ ಕ್ರೀಡಾ ಕ್ಷೇತ್ರಕ್ಕೆ ಕಾಲಿಡುವುದು ಸುಲಭದ ಮಾತಾಗಿರಲಿಲ್ಲ. ಶೂಟಿಂಗ್ ಎನ್ನುವುದು ಏಕಾಗ್ರತೆ ಹಾಗೂ ದೈಹಿಕ ಸ್ಥಿರತೆ ಬೇಡುವ ಕ್ರೀಡೆ. ದೇಹದಲ್ಲಿ ಸಕ್ಕರೆ ಪ್ರಮಾಣ ಏರುಪೇರಾದಾಗ ಕೈಗಳು ನಡುಗುವ ಸಾಧ್ಯತೆ ಇರುತ್ತದೆ. ಇಂತಹ ದೈಹಿಕ ಸವಾಲನ್ನು ಗೆಲ್ಲಲು ಅವರು ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ ‘ರಿಕವರಿ ಪ್ಲಾನ್’ ರೂಪಿಸಿಕೊಂಡು ಅಭ್ಯಾಸ ಮಾಡಿದ್ದರು.

ಇದನ್ನೂ ಓದಿ: ಹಳೆಯ ದಿನಗಳ ನೆನೆಯುತ್ತಾ ಪತ್ನಿಯೊಟ್ಟಿಗೆ ರಾಯರ ದರ್ಶನಕ್ಕೆ ತೆರಳಿದ ಜಗ್ಗೇಶ್

ಪರಿಮಳಾ ಜಗ್ಗೇಶ್ ಅವರು ಈ ಸ್ಪರ್ಧೆಯಲ್ಲಿ ಗೆಲ್ಲಲು ಶಿಸ್ತಿನಿಂದ ತರಬೇತಿ ಪಡೆದುಕೊಂಡಿದ್ದರು. ಗೋಲ್ಡನ್ ಏಸ್ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಕೋಚ್ ಸಂತೋಷ್ ಬಿ.ಎನ್. ಅವರಿಂದ ಕೇವಲ ಕೆಲವೇ ತಿಂಗಳುಗಳ ಹಿಂದೆ ತರಬೇತಿ ಆರಂಭಿಸಿದ್ದರು. ಒಬ್ಬ ಉದ್ಯಮಿಯಾಗಿ ಸಂಸ್ಥೆಯ ಜವಾಬ್ದಾರಿ ಮತ್ತು ಕುಟುಂಬದ ನಿರ್ವಹಣೆಯ ನಡುವೆಯೂ, ಪ್ರತಿದಿನ ಬೆಳಗ್ಗೆ 4 ಗಂಟೆಗೆ ಎದ್ದು ಶೂಟಿಂಗ್ ರೇಂಜ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಅವರ ಈ ನಿರಂತರ ಪರಿಶ್ರಮದಿಂದ ಬೆಳ್ಳಿ ಪದಕ ಗೆಲ್ಲುವಂತಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ

ಅರುಣ್ ಸಾಗರ್ ಪ್ರಸಾದ್, ಸಾಯಿ ಕುಮಾರ್ (Sai Kumar) ಇನ್ನೂ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ‘ಘಾರ್ಗ’ ಸಿನಿಮಾದ ಟ್ರೈಲರ್ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ‘ಜೋಗಿ’ ಸಿನಿಮಾದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಅವರ ಪುತ್ರನೇ ಸಿನಿಮಾದ ನಾಯಕ. ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡಿನ ರೀಮಿಕ್ಸ್ ವರ್ಷನ್ ಬಳಸಿದ್ದು ಸಖತ್ ಚರ್ಚೆ ಆಗಿತ್ತು. ಇದೀಗ ಸಿನಿಮಾದ ನಿರ್ದೇಶಕ ಎಂ ಶಶಿಧರ್ ಈ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್​ – Kannada News | Traffic Cop Tara Kumari’s Bravery: Rescues Drowning Youths at Patna’s Digha Ghat

ಪಟ್ನಾದ ದೀಘಾ ಘಾಟ್ ಬಳಿ ಗಂಗಾ ನದಿಯಲ್ಲಿ ಇಬ್ಬರು ಯುವಕರು ಮುಳುಗುತ್ತಿದ್ದಾಗ ಮಹಿಳಾ ಟ್ರಾಫಿಕ್ ಪೊಲೀಸ್​​ ಧಾವಿಸಿ ಕಾಪಾಡಲು ಮುಂದಾಗಿದ್ದಾರೆ. ತಾರಾ ಕುಮಾರಿ ಎಂಬ ಪೊಲೀಸ್​​ ಅಧಿಕಾರಿಯ ಈ ಕೆಲಸಕ್ಕೆ ಎಲ್ಲ ಕಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಜನ ಹಿಂಜರಿಯುತ್ತಾರೆ, ಆದರೆ ತಾರಾ ಅವರು ತಾವು ಧರಿಸಿದ್ದ ಪೊಲೀಸ್ ಸಮವಸ್ತ್ರದಲ್ಲೇ ನದಿಗೆ ಹಾರಿ ಯುವಕರನ್ನು ರಕ್ಷಿಸಿದ್ದಾರೆ. ಅವರ ಈ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ನೋಡಿ ಅಲ್ಲಿದ್ದ ಜನರು ಬೆರಗಾದರು. ಪ್ರಾಣದ ಹಂಗು ತೊರೆದು ಅವರು ಮಾಡಿದ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026 Final Date and Time: ಆರ್​ಸಿಬಿ- ಡೆಲ್ಲಿ ನಡುವೆ ಫೈನಲ್ ಪಂದ್ಯ ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ಆರಂಭ? – Kannada News | RCB vs DC WPL Final 2026: Revenge or Repeat? All You Need to Know for the Mega Clash

2026 ರ ಮಹಿಳಾ ಪ್ರೀಮಿಯರ್ ಲೀಗ್ (Women’s Premier League)​ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs Delhi Capitals) ತಂಡ ಮುಖಾಮುಖಿಯಾಗಲಿವೆ. ಒಂದೆಡೆ ಆರ್​ಸಿಬಿ ಲೀಗ್ ಹಂತದಲ್ಲಿ 6 ಪಂದ್ಯಗಳನ್ನು ಗೆದ್ದು ನೇರವಾಗಿ ಫೈನಲ್​ಗೆ ಅರ್ಹತೆ ಪಡೆದಿದ್ದರೆ, ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಎಲಿಮಿನೇಟರ್​ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್​ಗೆ ಸೋಲುಣಿಸಿ ಸತತ ನಾಲ್ಕನೇ ಬಾರಿಗೆ ಫೈನಲ್​ಗೆ ಎಂಟ್ರಿಕೊಟ್ಟಿದೆ. ಡೆಲ್ಲಿ ತಂಡ 4 ಬಾರಿ ಫೈನಲ್​ ಆಡಿದರೂ ಇದುವರೆಗೆ ಟ್ರೋಪಿ ಎತ್ತಿಹಿಡಿಯಲು ಸಾಧ್ಯವಾಗಿಲ್ಲ. ಇತ್ತ 2024 ರ ಆವೃತ್ತಿಯಲ್ಲಿ ಫೈನಲ್​ಗೆ ಲಗ್ಗೆ ಇಟ್ಟಿದ್ದ ಆರ್​ಸಿಬಿ, ಇದೇ ಡೆಲ್ಲಿ ತಂಡವನ್ನು ಮಣಿಸಿ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಹೀಗಾಗಿ ಆರ್​ಸಿಬಿ ಅದೇ ಇತಿಹಾಸವನ್ನು ಮರುಕಳಿಸಲು ನೋಡುತ್ತಿದ್ದರೆ, ಇತ್ತ ಡೆಲ್ಲಿ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.

ಮಹಿಳಾ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯ ಯಾವಾಗ ನಡೆಯಲಿದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯ ಫೆಬ್ರವರಿ 5 ರ ಗುರುವಾರ ನಡೆಯಲಿದೆ.

ಮಹಿಳಾ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯ ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ.

ಮಹಿಳಾ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಮಹಿಳಾ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯದ ನೇರ ಪ್ರಸಾರ ವೀಕ್ಷಿಸುವುದು ಹೇಗೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದು.

WPL 2026: 8 ವಿಕೆಟ್​ಗಳಿಂದ ಗೆದ್ದು ನೇರವಾಗಿ ಫೈನಲ್​ಗೆ ಎಂಟ್ರಿಕೊಟ್ಟ ಆರ್​ಸಿಬಿ

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಸಯಾಲಿ ಸತ್‌ಘರೆ, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ ಹೇಮಲತಾ

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಲಿಜೆಲ್ ಲೀ, ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರಾಡ್ರಿಗಸ್(ನಾಯಕಿ), ಮರಿಜಾನ್ನೆ ಕಪ್, ಚಿನೆಲ್ಲೆ ಹೆನ್ರಿ, ನಿಕಿ ಪ್ರಸಾದ್, ಸ್ನೇಹ್ ರಾಣಾ, ಮಿನ್ನು ಮಣಿ, ಶ್ರೀ ಚರಣಿ, ನಂದನಿ ಶರ್ಮಾ, ಎಡ್ಲಾ ಸೃಜನಾ, ಪ್ರಗತಿ ಸಿಂಗ್, ಲೂಸಿ ಹ್ಯಾಮಿಲ್ಟನ್, ತಾನಿಯಾ ಭಾಟಿಯಾ, ಅಲಾನಾ ಕಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Parliament Session: ಇಂದು ಪ್ರಧಾನಿ ಮೋದಿ ಭಾಷಣ ರದ್ದು; ವಿಪಕ್ಷಗಳ ಪ್ರತಿಭಟನೆಯಿಂದ ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ – Kannada News | Parliament Budget Session No PM Modi Speech Today Lok Sabha adjourned till tomorrow

ನವದೆಹಲಿ, ಫೆಬ್ರವರಿ 4: ಲೋಕಸಭಾ ಅಧಿವೇಶನದಲ್ಲಿ (Parliament Budget Session) ಇಂದು ಸಂಜೆ 5 ಗಂಟೆಗೆ ಪ್ರಧಾನಮಂತ್ರಿಗಳು ಭಾಷಣ ಮಾಡಬೇಕಿತ್ತು. ಆದರೆ, ವಿರೋಧ ಪಕ್ಷಗಳ ಪ್ರತಿಭಟನೆಗಳು ಮತ್ತು ಗದ್ದಲದಿಂದಾಗಿ ಇಂದಿನ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ. ಹೀಗಾಗಿ, ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರಿಸಬೇಕಿದ್ದ ಪ್ರಧಾನಿ ನರೇಂದ್ರ ಮೋದಿಯವರ (PM Modi Speech) ಭಾಷಣ ಕೂಡ ನಾಳೆಗೆ ಮುಂದೂಡಲ್ಪಟ್ಟಿದೆ. ಬಜೆಟ್ ಅಧಿವೇಶನದಲ್ಲಿ 8 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದಕ್ಕಾಗಿ ವಿರೋಧ ಪಕ್ಷದ ಸದಸ್ಯರು ಭಾರೀ ಘೋಷಣೆಗಳನ್ನು ಕೂಗಿದ ನಂತರ ಇಂದು ಲೋಕಸಭೆ ಕಲಾಪವನ್ನು ಮುಂದೂಡಲಾಯಿತು.

ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯಕ್ಕೆ ತಮ್ಮ ಲೋಕಸಭಾ ಭಾಷಣಕ್ಕಾಗಿ ಪ್ರಧಾನಿ ಮೋದಿ ಸಂಸತ್ತಿಗೆ ಆಗಮಿಸಿದ್ದರು. ಆದರೆ ಬಿಜೆಪಿ ಸಂಸದರಾದ ಪಿಪಿ ಚೌಧರಿ ಮಾತನಾಡುತ್ತಿದ್ದಂತೆ ಸದನವನ್ನು ನಾಳೆಗೆ ಮುಂದೂಡಲಾಯಿತು. ಸರ್ಕಾರದ ಉನ್ನತ ಮೂಲಗಳ ಪ್ರಕಾರ, ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ಸಮಯದಲ್ಲಿ ಕಳೆದ 2 ದಿನಗಳಿಂದ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಚರ್ಚೆ ನಡೆಯಲಿಲ್ಲ.

ಕಾಂಗ್ರೆಸ್ ಸಂಸದರು ಸಂಸತ್ತಿನ ಮೆಟ್ಟಿಲುಗಳ ಮೇಲೆ ‘ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ’ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒಂದು ದಿನದ ಹಿಂದೆ ನೀಡಿದ ಹೇಳಿಕೆಗಳ ನಂತರ ಈ ಪ್ರತಿಭಟನೆ ನಡೆಯಿತು.

ಇದನ್ನೂ ಓದಿ: ದೇಶದ್ರೋಹಿ ಸ್ನೇಹಿತ; ಕೇಂದ್ರ ಸಚಿವ ರವನೀತ್ ಬಿಟ್ಟುಗೆ ರಾಹುಲ್ ಗಾಂಧಿ ಲೇವಡಿ, ಸಂಸತ್ ಹೊರಗೆ ವಾಗ್ವಾದ

ಲೋಕಸಭೆಯ ಸಂಸದರಾದ ಗುರ್ಜೀತ್ ಸಿಂಗ್ ಔಜ್ಲಾ, ಹಿಬಿ ಈಡನ್, ಡೀನ್ ಕುರಿಯಾಕೋಸ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಬಿ ಮಾಣಿಕ್ಕಂ ಟ್ಯಾಗೋರ್, ಡಾ. ಪ್ರಶಾಂತ್ ಯದೋರಾವ್ ಪಡೋಲೆ, ಚಾಮಲಾ ಕಿರಣ್ ಕುಮಾರ್ ರೆಡ್ಡಿ ಮತ್ತು ಎಸ್ ವೆಂಕಟೇಶನ್ ಅವರನ್ನು ಸದನದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಜೆಟ್ ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ. ಇದು ಪ್ರತಿಭಟನೆಗೆ ಕಾರಣವಾಯಿತು.

ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಮುಖಾಮುಖಿಯಿಂದಾಗಿ ನಿರಂತರ ಗದ್ದಲದ ನಡುವೆ ಇಂದು ಲೋಕಸಭೆ ಅಧಿವೇಶನವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಯಿತು. ಇಂದು ಬಜೆಟ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಪ್ರತಿಕ್ರಿಯಿಸಬೇಕಿತ್ತು. ಜನವರಿ 28ರಂದು ಬಜೆಟ್ ಅಧಿವೇಶನದ ಆರಂಭದಲ್ಲಿ ಎರಡೂ ಸದನಗಳ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ ಮಾಡಿಕೊಂಡ ವ್ಯಾಪಾರ ಒಪ್ಪಂದದ 7 ಹೈಲೈಟ್ಸ್ ಇಲ್ಲಿವೆ

ಸಂಸತ್ತಿನ ಎರಡೂ ಸದನಗಳು ಗುರುವಾರ “ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯ”ದ ಕುರಿತು ಚರ್ಚೆಯನ್ನು ಮುಂದುವರಿಸಲಿವೆ. ಚರ್ಚೆಗಾಗಿ ಸದನವು 18 ಗಂಟೆಗಳ ಸಮಯವನ್ನು ಮೀಸಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಉತ್ತರ ನೀಡುವ ನಿರೀಕ್ಷೆಯಿದೆ. ಬಜೆಟ್ ಅಧಿವೇಶನವು ಏಪ್ರಿಲ್ 2ರಂದು ಕೊನೆಗೊಳ್ಳಲಿದೆ. ಫೆಬ್ರವರಿ 13ರಂದು ಎರಡೂ ಸದನಗಳು ವಿರಾಮ ತೆಗೆದುಕೊಂಡು ಮಾರ್ಚ್ 9ರಂದು ಮತ್ತೆ ಸಭೆ ಸೇರಲಿದ್ದು, ಸ್ಥಾಯಿ ಸಮಿತಿಗಳು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಂದ ಅನುದಾನದ ಬೇಡಿಕೆಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಡುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಎಂಟಿಸಿ ಬಸ್ ಬಳಿಕ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್ – Kannada News | Scan Scam: In Bengaluru victoria hospital: Staff Swap QR Codes, Loot Money from patients

ಬೆಂಗಳೂರು, (ಫೆಬ್ರವರಿ 04): ಬಿಎಂಟಿಸಿ (BMTC) ಬಸ್​​ಗಳಲ್ಲಿ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಯುಪಿಐ ಸ್ಕ್ಯಾನರ್​​ಗಳನ್ನು ಹಾಕಿದೆ. ಆದ್ರೆ, ಕೆಲ ಕಂಡಕ್ಟರ್​​ಗಳು ಬಿಎಂಟಿಸಿ ಬಸ್​​​​ನಲ್ಲಿರುವ ಯುಪಿಐ ಸ್ಕ್ಯಾನರ್​​​ಗಳನ್ನು ಕಿತ್ತು, ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್​​​ಗಳನ್ನು (UPI Scanner) ನೀಡಿ, ತಮ್ಮ ಬ್ಯಾಂಕ್ ಅಕೌಂಟ್​​ಗೆ ಲಕ್ಷಾಂತರ ರೂಪಾಯಿ ಹಣ ಹಾಕಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಕೆಲ ಕಂಡಕ್ಟರ್​​ಗಳನ್ನು ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ (Bengaluru victoria hospital) ಸರದಿ. ಹೌದು…ಆಸ್ಪತ್ರೆಯ ಕೆಲ ಸಿಬ್ಬಂದಿ UPI ಮೂಲಕ 23 ಲಕ್ಷ ರೂಪಾಯಿ ದೋಚಿರುವುದು ಬೆಳಕಿಗೆ ಬಂದಿದೆ.

ರೋಗಿಗಳ ಅನುಕೂಲಕ್ಕಾಗಿ ಯುಪಿಐ ಸ್ಕ್ಯಾನ್​ಗೆ ಅವಕಾಶ ನೀಡಲಾಗಿತ್ತು. ಆದ್ರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಸ್ಪತ್ರೆ ಸಿಬ್ಬಂದಿ ವೈಯಕ್ತಿಕ QR ಸ್ಕ್ಯಾನರ್ ಅಳವಡಿಕೆ ಮಾಡಿ ತಮ್ಮ ಖಾತೆಗೆ ರೋಗಿಗಳ ಹಣ ಹಾಕಿಸಿಕೊಂಡಿದ್ದಾರೆ. ಲ್ಯಾಬ್, OPD, ಎಕ್ಸ್​ರೇ ವಿಭಾಗದಲ್ಲಿ ವೈಯಕ್ತಿಕ QR ಸ್ಕ್ಯಾನರ್ ಅಳವಡಿಕೆ ಮಾಡಿಕೊಂಡು 23 ಲಕ್ಷಕ್ಕೂ ಅಧಿಕ ಹಣ ಲೂಟಿ ಮಾಡಿದ್ದಾರೆ. ಬಳಿಕ ಯುಪಿಐ ಸ್ಕ್ಯಾನರ್ ವಿಚಾರದಲ್ಲಿ ಅನುಮಾನ ಬಂದ ಹಿನ್ನೆಲೆಯಲ್ಲಿ ಅಧೀಕ್ಷಕ ದೀಪಕ್ ಅವರು ಸಮಿತಿ ರಚಿಸಿ ತನಿಖೆ ನಡೆಸಿದಾಗ ಸಿಬ್ಬಂದಿಯ ಕಳ್ಳಾಟ ಬಯಲಿಗೆ ಬಂದಿದ್ದು, ಎಲ್ಲಾ ದಾಖೆಗಳನ್ನು ಸಂಗ್ರಹಿಸಿ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ತಮ್ಮದೇ ಯುಪಿಐ ಸ್ಕ್ಯಾನರ್ ನೀಡಿ ಹಣ ಜೇಬಿಗಿಳಿಸ್ತಾರೆ ಬಿಎಂಟಿಸಿ ಕೆಲ ಕಂಡಕ್ಟರ್​ಗಳು! ನಿಗಮಕ್ಕೆ ಲಕ್ಷಾಂತರ ರೂ. ನಷ್ಟ

Source link

ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಶಾಸಕ ಶಿವಲಿಂಗೇಗೌಡ – Kannada News | Congress MLA shivalingegowda Hits out at BJP Leaders In Assembly Session

ಬೆಂಗಳೂರು, (ಫೆಬ್ರವರಿ 04): ವಿಧಾನಸಭೆ ಕಲಾಪದಲ್ಲಿಂದು (Karnataka Assembly Session) ಅರಸಿಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (Congress MLA shivalingegowda )ಹಾಗೂ ಬಿಜೆಪಿ ಶಾಸಕರ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಈ ವೇಳೆ ದೇವೇಗೌಡ್ರಿಗೆ ಚೂರಿ ಹಾಕಿದ ಶಿವಲಿಂಗೇಗೌಡ ಅವರಿಗೆ ಧಿಕ್ಕಾರ, ಕಾಯಿ ಕಳ್ಳ, ಕೊಬ್ಬರಿ ಕಳ್ಳ ಎಂದು ಬಿಜೆಪಿ ಸದಸ್ಯರು ಕೂಗಾಡಿದ್ದು, ಇದು ವೈಯಕ್ತಿಕ ಆರೋಪ ಪ್ರತ್ಯಾರೋಪಕ್ಕೆ ತಿರುಗಿದೆ. ಚಿಂಚೋಳಿಯಲ್ಲಿ ನಿನ್ನ ಹೆಂಡತಿಯನ್ನು ತಹಶೀಲ್ದಾರ್ ಬಿಟ್ಟುಕೊಂಡು ಎಷ್ಟು ದುಡ್ಡು ಹೊಡೆದಿದ್ದೀಯಾ ಎಂದು ಗೊತ್ತಿದೆ. ನಿಮಗೆ ಮಾನ, ಮರ್ಯಾದೆ ಇದೆಯಾ ಎಂದು ಶಿವಲಿಂಗೇಗೌಡ್ರು, ಬಿಜೆಪಿ ಶಾಸಕ ಶರಣು ಸಲಗರ್ ಅವರಿಗೆ ವೈಯಕ್ತಿವಾಗಿ ಬೈದಿದ್ದಾರೆ. ಇದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಿವಲಿಂಗೇಗೌಡ್ರು ಕ್ಷಮೆ ಕೇಳಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಆದ್ರೆ, ಇದಕ್ಕೆ ಜಗ್ಗದ ಶಿವಲಿಂಗೇಗೌಡ, ನನಗೆ ವೈಯಕ್ತಿಕವಾಗಿ ಬೈದಿರುವುದಕ್ಕೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಇದಕ್ಕೆ ಇತರೆ ಕಾಂಗ್ರೆಸ್ ಸದಸ್ಯರು ಸಹ ಧ್ವನಿಗೂಡಿಸಿದರು. ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ಜೋರಾಯ್ತು.

ಇನ್ನು ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದ ಶಿವಲಿಂಗೇಗೌಡ, ನನಗೆ ಕಾಯಿ ಕಳ್ಳ, ಕೊಬ್ಬರಿ ಕಳ್ಳ ಎಂದು ಹೇಳಿದ್ದಾರೆ. ನಾನು ಕಳ್ಳತನ ಮಾಡಿದ್ದು ತೋರಿಸಿ. ನಾನು ಕದ್ದಿದ್ದು ನೀವು ತೋರಿಸಿದ್ರೆ ನಿಮ್ಮ ಮನೆಯಲ್ಲಿ ಜೀತ ಮಾಡುತ್ತೇನೆ. ನಾನು ಮಾತನಾಡಿದ್ದಕ್ಕೆ ಈಗಲೂ ಬದ್ಧನಾಗಿದ್ದೇನೆ. ನನಗೆ ಕಳ್ಳ ಅಂದ್ರೆ ಅವರಿಗೆ ಮುತ್ತು ಕೊಡಬೇಕಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸುತ್ತಲ್ಲೇ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡರು.

ಇದನ್ನೂ ನೋಡಿ: ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗರ್- ಶಿವಲಿಂಗೇಗೌಡ

Source link