Category Archives: Blog

Your blog category

ಸುಪ್ರೀತ್ ರೆಡ್ಡಿ ವಿರುದ್ಧ ದೂರು, ಪೊಲೀಸರ ಅತಿಥಿಯಾಗಲಿರುವ ‘ಕಾಟ್ರಾಜು’ – Kannada News

ತೆಲುಗು ಚಿತ್ರರಂಗದ (Tollywood) ಜನಪ್ರಿಯ ನಟ ಸುಪ್ರೀತ್ ರೆಡ್ಡಿ (‘ಛತ್ರಪತಿ’ ಸಿನಿಮಾದ ನಟ) ವಿವಾದಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲ್ಲೆ ಸೇರಿದಂತೆ ಇನ್ನೂ ಹಲವು ಆರೋಪಗಳಡಿ ದೂರು ದಾಖಲಾಗಿದೆ. ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಮಿಂಚುವ ಸುಪ್ರೀತ್ ರೆಡ್ಡಿ ನಿಜ ಜೀವನದಲ್ಲಿಯೂ ವಿಲನ್ ರೀತಿಯ ಕೃತ್ಯ ಮಾಡಿ, ಇದೀಗ ಪೊಲೀಸರಿಂದ ವಿಚಾರಣೆ ಎದುರಿಸಲಿದ್ದಾರೆ. ರಸ್ತೆಯಲ್ಲಿ ಕಾರನ್ನು ಅಡ್ಡಲಾಗಿ ನಿಲ್ಲಿಸಿದ್ದಾರೆಂಬ ಸಣ್ಣ ಕಾರಣಕ್ಕಾಗಿ ಅವರು ಕ್ಯಾಬ್ ಡ್ರೈವರ್ ಒಬ್ಬರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೇಡ್ಚಲ್ ಜಿಲ್ಲೆಯ ಕೀಸರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಾಗಾರಂನಲ್ಲಿ ಈ ಗಲಾಟೆ ನಡೆದಿದೆ. ಊಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶ್ರೀಹರಿ ಎಂಬ ವ್ಯಕ್ತಿ, ನಾಗಾರಂ ಚೌರಸ್ತಾ ಪ್ರದೇಶದಲ್ಲಿ ಒಂದು ಟ್ರಿಪ್ ಪೂರ್ಣಗೊಳಿಸಿ, ಮುಂದಿನ ಬುಕಿಂಗ್‌ಗಾಗಿ ತಮ್ಮ ಕ್ಯಾಬ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕಾಯುತ್ತಿದ್ದರು. ಅದೇ ಸಮಯದಲ್ಲಿ ನಟ ಸುಪ್ರೀತ್ ರೆಡ್ಡಿ ತಮ್ಮ ಫಾರ್ಚೂನರ್ ಕಾರಿನಲ್ಲಿ ಅದೇ ಮಾರ್ಗದಲ್ಲಿ ಬಂದಿದ್ದಾರೆ. ಆದರೆ, ಕ್ಯಾಬ್ ರಸ್ತೆಗೆ ಸ್ವಲ್ಪ ಅಡ್ಡಲಾಗಿದೆ ಎಂಬ ಕಾರಣಕ್ಕೆ ಸುಪ್ರೀತ್ ರೆಡ್ಡಿ ತೀವ್ರ ಆಕ್ರೋಶಗೊಂಡಿದ್ದಾರೆ. ತಕ್ಷಣವೇ ತಮ್ಮ ಕಾರಿನಿಂದ ಕೆಳಗಿಳಿದು, ಡ್ರೈವರ್ ಶ್ರೀಹರಿ ಬಳಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾರೆ. ಡ್ರೈವರ್ ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದರೂ ಕೇಳದ ನಟ, ರಸ್ತೆಯಲ್ಲಿ ಎಲ್ಲರೂ ನೋಡುತ್ತಿದ್ದಂತೆಯೇ ಶ್ರೀಹರಿ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಥಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಶೂಟಿಂಗ್ ಮಾಡುವಾಗಲೇ ನಟಿಯರು ಈ ಬಗ್ಗೆ ಮಾತನಾಡಬೇಕು; ಕಂಗನಾ ನೇರ ಮಾತು

ನಟನ ಕೈಯಿಂದ ಪೆಟ್ಟು ತಿಂದ ಕ್ಯಾಬ್ ಡ್ರೈವರ್ ಶ್ರೀಹರಿ ಘಟನಾ ಸ್ಥಳದಿಂದಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೀಸರ ಪೊಲೀಸರು ತಕ್ಷಣವೇ ಸ್ಪಂದಿಸಿ ಘಟನಾ ಸ್ಥಳಕ್ಕೆ ಆಗಮಿಸಿ ವಿವರಗಳನ್ನು ಸಂಗ್ರಹಿಸಿದ್ದಾರೆ. ತದನಂತರ ಸಂತ್ರಸ್ತನ ಲಿಖಿತ ದೂರಿನ ಮೇರೆಗೆ ಪೊಲೀಸರು ನಟ ಸುಪ್ರೀತ್ ರೆಡ್ಡಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಲಾಟೆ ನಡೆದ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಲಭ್ಯವಿರುವ ಆಧಾರಗಳ ಪ್ರಕಾರ ಸುಪ್ರೀತ್ ಅವರಿಗೆ ನೋಟಿಸ್ ಜಾರಿ ಮಾಡಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

2002 ರ ಸೂಪರ್ ಹಿಟ್ ಸಿನಿಮಾ ‘ಜಯಂ’ ಮೂಲಕ ನಟನೆ ಆರಂಭಿಸಿದ ಸುಪ್ರೀತ್ ರೆಡ್ಡಿ, ರಾಜಮೌಳಿ ನಿರ್ದೇಶಿಸಿ, ಪ್ರಭಾಸ್ ನಟಿಸಿದ್ದ ‘ಛತ್ರಪತಿ’ ಸಿನಿಮಾದ ‘ಕಾಟ್ರಾಜು’ ಪಾತ್ರದಿಂದ ದೊಡ್ಡ ಹೆಸರು ಗಳಿಸಿದ್ದರು. ಅದಕ್ಕೆ ಮುಂಚೆ ರಾಜಮೌಳಿ ನಿರ್ದೇಶನದ ‘ಸೈ’, ‘ಮರ್ಯಾದ ರಾಮಣ್ಣ’ ಸಿನಿಮಾಗಳಲ್ಲಿಯೂ ವಿಲನ್​​ ಆಗಿ ಸಖತ್ ಗಮನ ಸೆಳೆದಿದ್ದರು. ಪ್ರಭಾಸ್ ನಟನೆಯ ‘ಮಿರ್ಚಿ’, ಮಹೇಶ್ ಬಾಬು ನಟನೆಯ ‘ದೂಕುಡು’ ನಂತಹ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ಸುಪ್ರೀತ್ ರೆಡ್ಡಿ ನಟಿಸಿದ್ದಾರೆ. ತೆರೆಯ ಮೇಲೆ ತಮ್ಮ ಖಳನಾಯಕತ್ವದಿಂದ ಗಮನ ಸೆಳೆದಿದ್ದ ಈ ನಟ, ನಿಜ ಜೀವನದಲ್ಲಿ ಸಹ ವಿಲನ್ ರೀತಿಯ ಕೃತ್ಯದಿಂದ ಸುದ್ದಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ – Kannada News

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More

Source link

ರವೀಂದ್ರ ಜಡೇಜಾ ಖೇಲ್ ಖತಂ? ಅಜಿತ್ ಅಗರ್ಕರ್ ಹೇಳಿದ್ದೇನು? – Kannada News

ಟೀಮ್ ಇಂಡಿಯಾದಿಂದ ಅನುಭವಿ ಆಲ್​ರೌಂಡರ್ ರವೀಂದ್ರ ಜಡೇಜಾ ಅವರನ್ನು ಹೊರದಬ್ಬಲಾಗಿದೆಯಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಜಡೇಜಾ ಅವರನ್ನು ಎರಡು ಸರಣಿಗಳಿಂದ ಕೈ ಬಿಟ್ಟಿರುವುದು. ಅಂದರೆ ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳದ ಜಡೇಜಾ ಮುಂಬರುವ ಏಕದಿನ ಸರಣಿಯಲ್ಲೂ ಕಣಕ್ಕಿಳಿಯುವುದಿಲ್ಲ.

ಇದರ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ರವೀಂದ್ರ ಜಡೇಜಾ ಅವರ ಖೇಲ್ ಖತಂ ಆಗಿದೆಯಾ? ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಖುದ್ದು ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಉತ್ತರ ನೀಡಿದ್ದಾರೆ.

“ರವೀಂದ್ರ ಜಡೇಜಾ ಅವರಿಗೆ ಟೆಸ್ಟ್ ಪಂದ್ಯದ ವೇಳೆ ಕೇವಲ ವಿಶ್ರಾಂತಿ ನೀಡಲಾಗಿದೆ. ಈ ವಿಷಯ ಅವರಿಗೂ ಗೊತ್ತಿದೆ. ಅವರು ಇಂದಿಗೂ ಭಾರತೀಯ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರೇ ನಮ್ಮ ನಂ. 1 ಸ್ಪಿನ್ನರ್ ಆಗಿ ಮುಂದುವರಿಯಲಿದ್ದಾರೆ” ಎಂದು ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.

“ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಅವರ ಸಾಮರ್ಥ್ಯ ಏನೆಂಬುದು ನಮಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಈ ಸಣ್ಣ ಸರಣಿಗಳಲ್ಲಿ ಹರ್ಷ ದುಬೆ ಅವರಂತಹ ಇತರ ಹೊಸ ಆಟಗಾರರನ್ನು ಕಣಕ್ಕಿಳಿಸಿ ನಮ್ಮಲ್ಲಿರುವ ಪರ್ಯಾಯ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಸಣ್ಣ ಸರಣಿಗಳಿಗೆ ಅಕ್ಷರ್ ಪಟೇಲ್ ಮತ್ತು ಜಡೇಜಾ ಇಬ್ಬರನ್ನೂ ಒಟ್ಟಿಗೆ ಕರೆದೊಯ್ಯುವುದರಲ್ಲಿ ಯಾವುದೇ ಅರ್ಥವಿಲ್ಲ. ಇಬ್ಬರಲ್ಲಿ ಒಬ್ಬರು ಬೆಂಚ್ ಕಾಯಬೇಕಾಗುತ್ತದೆ”.

“ಬದಲಿಗೆ ಸುದೀರ್ಘ ಕ್ರಿಕೆಟ್ ಸರಣಿಗಳನ್ನು ಆಡಲು ಅವರ ಫಿಟ್ನೆಸ್ ಮತ್ತು ಕೆಲಸದ ಹೊರೆಯನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಬಿಸಿಸಿಐ ಈಗ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ” ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.

ಇದೇ ವೇಳೆ ಜಡೇಜಾ ಏಕದಿನ ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅಗರ್ಕರ್, “ರವೀಂದ್ರ ಜಡೇಜಾ ಅವರು  ನಮ್ಮ 2027 ರ ವಿಶ್ವಕಪ್ ಯೋಜನೆಗಳಲ್ಲಿದ್ದಾರೆ. ಅವರ ಅನುಭವ ಮತ್ತು ಆಲ್-ರೌಂಡರ್ ಪ್ರದರ್ಶನ ತಂಡಕ್ಕೆ ಸದಾ ಮುಖ್ಯ” ಎಂದಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ರವೀಂದ್ರ ಜಡೇಜಾ ಆಯ್ಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಸರಿಯಾದ ನಿರ್ಧಾರ… ರಜತ್ ಪಾಟಿದಾರ್ ಆಯ್ಕೆಯಾಗದಿರಲು ಇದುವೇ ಕಾರಣ!

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಜುಲೈ 14 ರಿಂದ ಶುರುವಾಗಲಿದ್ದು, ಈ ಸರಣಿಯ ಮೂಲಕ ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

Source link

ಕೊನೆಯ ತ್ರೈಮಾಸಿಕದಲ್ಲಿ 7.1 ಬಿಲಿಯನ್ ಡಾಲರ್ ಹೆಚ್ಚುವರಿ; ಸರ್ವಿಸ್ ಸೆಕ್ಟರ್ ಮತ್ತು ರೆಮಿಟೆನ್ಸ್​ನಿಂದ ಭರ್ಜರಿ ಕೊಡುಗೆ – Kannada News

ನವದೆಹಲಿ, ಜೂನ್ 9: ಕಳೆದ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ (2026ರ ಜನವರಿಯಿಂದ ಮಾರ್ಚ್) ಭಾರತ ಚಾಲ್ತಿ ಖಾತೆ ಹೆಚ್ಚುವರಿಯನ್ನು (ಕರೆಂಟ್ ಅಕೌಂಟ್ ಸರ್​ಪ್ಲಸ್) ಸಾಧಿಸಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ನಾಲ್ಕನೇ ಕ್ವಾರ್ಟರ್​ನಲ್ಲಿ ಕರೆಂಟ್ ಅಕೌಂಟ್ ಸರ್​ಪ್ಲಸ್ 7.1 ಬಿಲಿಯನ್ ಡಾಲರ್ (ಸುಮಾರು 67,000 ಕೋಟಿ ರೂ) ದಾಖಲಾಗಿದೆ. ಸೇವಾ ವಲಯದ ಉತ್ತಮ ರಫ್ತು ಸಾಧಿಸಿರುವುದು ಮತ್ತು ವಿದೇಶಗಳಿಂದ ಸಾಕಷ್ಟು ಹಣದ ಹರಿವು (Remittances) ಬಂದಿರುವುದು ಚಾಲ್ತಿ ಖಾತೆ ಹೆಚ್ಚುವರಿ ಹೊಂದಲು ಸಾಧ್ಯವಾಗಿದೆ ಎಂದು ಆರ್​ಬಿಐ ನಿನ್ನೆ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಈ 7.1 ಬಿಲಿಯನ್ ಡಾಲರ್ ಮೊತ್ತವು ದೇಶದ ಜಿಡಿಪಿಯ ಶೇ. 0.7ರಷ್ಟಾಗುತ್ತದೆ.

ಆದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (13.7 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ 1.4%) ಈ ಬಾರಿಯ ಹೆಚ್ಚುವರಿ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ದೇಶದ ಸರಕು ವ್ಯಾಪಾರ ಕೊರತೆಯು (Merchandise Trade Deficit) ಈ ತ್ರೈಮಾಸಿಕದಲ್ಲಿ 83.4 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ (ಕಳೆದ ವರ್ಷ ಇದು 59.3 ಶತಕೋಟಿ ಡಾಲರ್ ಇತ್ತು). ಅಂದರೆ ನಾವು ಆಮದು ಮಾಡಿಕೊಂಡ ಪ್ರಮಾಣ ಹೆಚ್ಚಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜೊಮಾಟೊ ಡೆಲಿವರಿ ಬಾಯ್ ಆಗಿದ್ದ ಸೂರಜ್ ಈಗ ಎಐ ಸ್ಟಾರ್ಟಪ್ ಫೌಂಡರ್

ಸೇವಾ ವಲಯದ ಗಳಿಕೆ: ಟ್ರೇಡ್ ಡೆಫಿಸಿಟ್ ಹೆಚ್ಚಾಗಿರುವುದರ ಹೊರತಾಗಿಯೂ, ಸಾಫ್ಟ್‌ವೇರ್ ಮತ್ತು ಇತರ ವ್ಯವಹಾರ ಸೇವೆಗಳ ರಫ್ತು ಹೆಚ್ಚಾದ ಕಾರಣ ಸೇವಾ ವಲಯದ ನಿವ್ವಳ ಆದಾಯವು 60.4 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಇದು ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡಿದೆ.

ವಿದೇಶಿ ಭಾರತೀಯರ ಹಣ: ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ತಾಯ್ನಾಡಿಗೆ ಕಳುಹಿಸಿದ ಹಣವು (Remittances) ಈ ಬಾರಿ 43.5 ಶತಕೋಟಿ ಡಾಲರ್‌ಗೆ ತಲುಪಿದೆ. ಇದು ದೇಶದ ಆರ್ಥಿಕ ಸ್ಥಿರತೆಗೆ ದೊಡ್ಡ ಆಸರೆಯಾಗಿದೆ.

ಬಂಡವಾಳ ಹರಿವು ಮತ್ತು ಮೀಸಲು ನಿಧಿ

ಈ ತ್ರೈಮಾಸಿಕದಲ್ಲಿ ನಿವ್ವಳ ಎಫ್‌ಡಿಐ ಹರಿವು 4.2 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಕೇವಲ 0.4 ಶತಕೋಟಿ ಡಾಲರ್ ಇತ್ತು. ಆದರೆ, ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು (FPI) ಈ ಅವಧಿಯಲ್ಲಿ 12 ಶತಕೋಟಿ ಡಾಲರ್ ಹಣವನ್ನು ಭಾರತೀಯ ಮಾರುಕಟ್ಟೆಯಿಂದ ಹೊರತೆಗೆದಿದ್ದಾರೆ. ಇದೇ ವೇಳೆ, ಕೊನೆಯ ತ್ರೈಮಾಸಿಕದ ಮೂರು ತಿಂಗಳಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಗೆ (Forex Reserves) 7.2 ಶತಕೋಟಿ ಡಾಲರ್ ಸೇರ್ಪಡೆಯಾಗಿದೆ.

ಇದನ್ನೂ ಓದಿ: ನಿಜವಾದ ಶ್ರೀಮಂತಿಕೆ ಲಕ್ಷುರಿ ಕಾರು, ಬಂಗಲೆಗಳಲ್ಲ; ಏನೆಲ್ಲಾ ಅಂಶಗಳಲ್ಲಿ ನೀವು ಪಾಸಾಗಬೇಕು?

ಇಡೀ ಆರ್ಥಿಕ ವರ್ಷದ (FY26) ಒಟ್ಟಾರೆ ಚಿತ್ರಣ

ಸಂಪೂರ್ಣ 2025-26ರ ಹಣಕಾಸು ವರ್ಷವನ್ನು ಲೆಕ್ಕ ಹಾಕಿದರೆ, ಭಾರತವು ಒಟ್ಟಾರೆಯಾಗಿ 25.2 ಶತಕೋಟಿ ಡಾಲರ್ ಚಾಲ್ತಿ ಖಾತೆ ಕೊರತೆಯನ್ನು (Current Account Deficit) ಎದುರಿಸಿದೆ. ಇದು ದೇಶದ ಜಿಡಿಪಿಯ ಶೇಕಡಾ 0.6 ರಷ್ಟಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸುದೀರ್ಘ ಪ್ರಧಾನಿ: ನೆಹರು ದಾಖಲೆ ಮುರಿದ ನರೇಂದ್ರ ಮೋದಿ ನಾಯಕತ್ವ ಕೊಂಡಾಡಿದ ಚಂದ್ರಬಾಬು ನಾಯ್ಡು, ಹೆಚ್.ಡಿ. ದೇವೇಗೌಡ – Kannada News

ಹೆಚ್​ಡಿ ದೇವೇಗೌಡ-ಮೋದಿ-ಚಂದ್ರಬಾಬು ನಾಯ್ಡು

ನವದೆಹಲಿ, ಜೂನ್ 09: ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಆಯ್ಕೆಯಾದ ಪ್ರಧಾನಿ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿರುವ ನರೇಂದ್ರ ಮೋದಿ(Narendra Modi) ಅವರ ಆಡಳಿತ ಹಾಗೂ ಜಾಗತಿಕ ನಾಯಕತ್ವವನ್ನು ದೇಶದ ಪ್ರಮುಖ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸತತ ಆಡಳಿತದ ದಾಖಲೆಯನ್ನು ಹಿಂದಿಕ್ಕಿ ಮುನ್ನಡೆದಿರುವ ಪ್ರಧಾನಿ ಮೋದಿ ಅವರ ಸಾಧನೆಯ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ವಿಶೇಷ ಲೇಖನಗಳನ್ನು ಬರೆಯುವ ಮೂಲಕ ಗೌರವ ಸಲ್ಲಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಉಭಯ ನಾಯಕರು ಪ್ರಧಾನಿ ಮೋದಿಯವರ ಸುಧಾರಣಾವಾದಿ ಆಡಳಿತವು ಭಾರತದ ಭವಿಷ್ಯವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.

ಚಂದ್ರಬಾಬು ನಾಯ್ಡು ಆಶಯ: ಭಾರತದ ಜಾಗತಿಕ ಬೆಳವಣಿಗೆಗೆ ಮೋದಿ ದಿಕ್ಸೂಚಿ
ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ (TDP) ಮುಖ್ಯಸ್ಥರಾದ ಎನ್. ಚಂದ್ರಬಾಬು ನಾಯ್ಡು ಅವರು ಪ್ರಧಾನಿ ಮೋದಿ ಅವರ ಆಡಳಿತ ಶೈಲಿ ಮತ್ತು ದೇಶದ ಮೇಲಿನ ಅದರ ಪ್ರಭಾವವನ್ನು ತಮ್ಮ ಲೇಖನದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.

ದೂರದೃಷ್ಟಿಯ ನಾಯಕತ್ವ: ಪ್ರಧಾನಿ ನರೇಂದ್ರ ಮೋದಿ ಅವರ ದೃಢ ನಿರ್ಧಾರಗಳು ಮತ್ತು ಸುಧಾರಣೆಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಾಗೂ ತಾಂತ್ರಿಕ ಶಕ್ತಿಯನ್ನಾಗಿ ರೂಪಿಸಿವೆ. ರಾಷ್ಟ್ರ ಮೊದಲು ಎಂಬ ಪ್ರಧಾನಿ ಮೋದಿಯವರ ಪ್ರಿನ್ಸಿಪಲ್ ತಮಗೆ ತುಂಬಾ ಇಷ್ಟ. ಅಷ್ಟೇ ಅಲ್ಲದೆ ಜನ್​ಧನ್ ಯೋಜನೆ, ಯುಪಿಐ, ಆಧಾರ್ ಹೀಗೆ ಹಲವು ನಿರ್ಧಾರಗಳ ಕುರಿತು ಬರೆದಿದ್ದಾರೆ.

ಮತ್ತಷ್ಟು ಓದಿ: ಆತ್ಮನಿರ್ಭರ ಭಾರತವನ್ನು ಲೇವಡಿ ಮಾಡಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ವಿಕಸಿತ ಭಾರತ 2047: ದೇಶವನ್ನು 2047 ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ (ವಿಕಸಿತ ಭಾರತ) ಅವರ ದೂರದೃಷ್ಟಿಯು ಪ್ರತಿಯೊಬ್ಬ ಭಾರತೀಯನಲ್ಲೂ ಹೊಸ ಭರವಸೆಯನ್ನು ಮೂಡಿಸಿದೆ.

ಕೇಂದ್ರ ಮತ್ತು ರಾಜ್ಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮೂಲಕ, ಪ್ರಾದೇಶಿಕ ಹಿತಾಸಕ್ತಿ ಹಾಗೂ ರಾಷ್ಟ್ರೀಯ ಪ್ರಗತಿ ಎರಡನ್ನೂ ಸಮಾನವಾಗಿ ಮುನ್ನಡೆಸುತ್ತಿರುವ ಮೋದಿಯವರ ಕಾರ್ಯವೈಖರಿ ಅನನ್ಯವಾದುದು ಎಂದು ನಾಯ್ಡು ಶ್ಲಾಘಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕರತಾಡನ: ಐತಿಹಾಸಿಕ ಮತ್ತು ಅಪ್ರತಿಮ ಮೈಲಿಗಲ್ಲು
ಭಾರತದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ (JDS) ವರಿಷ್ಠರಾದ ಹೆಚ್.ಡಿ. ದೇವೇಗೌಡ ಅವರು, ಪ್ರಧಾನಿ ಮೋದಿ ಅವರು ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿ ಸತತವಾಗಿ ಸುದೀರ್ಘ ಅವಧಿಗೆ ದೇಶವನ್ನು ಮುನ್ನಡೆಸುತ್ತಿರುವುದರ ಐತಿಹಾಸಿಕ ಮಹತ್ವವನ್ನು ಕೊಂಡಾಡಿದ್ದಾರೆ. ನರೇಂದ್ರ ಮೋದಿಯವರು ಕೇವಲ ಅಧಿಕಾರ ರಾಜಕಾರಣದ ಕಾರಣಕ್ಕಾಗಿ ಇಷ್ಟು ಯಶಸ್ವಿಯಾಗಿಲ್ಲ, ಬದಲಿಗೆ ಅವರಲ್ಲಿರುವ ಕಲಿಯುವ ಮತ್ತು ಬದಲಾಗುವ ವಿಶಿಷ್ಟ ಗುಣ ಅವರನ್ನು ಈ ಮಟ್ಟಕ್ಕೆ ತಂದಿದೆ ಎಂದು ಬಣ್ಣಿಸಿದ್ದಾರೆ.

ನೆಹರು ಅವರ ನಂತರ ದೇಶದಲ್ಲಿ ಸತತವಾಗಿ ಅತಿ ಹೆಚ್ಚು ಅವಧಿಗೆ ಚುನಾಯಿತರಾದ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿರುವುದು ಅವರ ಮೇಲಿರುವ ಜನರ ಅಚಲವಾದ ವಿಶ್ವಾಸ ಮತ್ತು ಆಶೀರ್ವಾದಕ್ಕೆ ಸಾಕ್ಷಿಯಾಗಿದೆ. ಯಾವುದೇ ರಾಜಕೀಯ ಸವಾಲುಗಳಿದ್ದರೂ ರಾಷ್ಟ್ರದ ಭದ್ರತೆ, ಗಡಿ ರಕ್ಷಣೆ ಮತ್ತು ಕಡೇಯ ಸಾಲಿನಲ್ಲಿರುವ ಬಡವರ ಕಲ್ಯಾಣಕ್ಕೆ ಮೋದಿ ಸರ್ಕಾರ ನೀಡುತ್ತಿರುವ ಆದ್ಯತೆಯನ್ನು ಮಾಜಿ ಪ್ರಧಾನಿಗಳು ಮುಕ್ತವಾಗಿ ಶ್ಲಾಘಿಸಿದ್ದಾರೆ.

ಅವರು ಕೇವಲ ಯೋಜನೆಗಳನ್ನು ಘೋಷಿಸುವುದಿಲ್ಲ, ಬದಲಿಗೆ ತಮ್ಮ ನಿರ್ಧಾರಗಳ ಸಾಧಕ-ಬಾಧಕಗಳನ್ನು ತಾವೇ ನಿರಂತರವಾಗಿ ವಿಮರ್ಶಿಸಿಕೊಳ್ಳುತ್ತಾರೆ. ಯಾವುದೇ ಸವಾಲು ಎದುರಾದರೂ ಅದನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಕಾಲಕ್ಕೆ ತಕ್ಕಂತೆ ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳುವ ಅದ್ಭುತ ಚಾಣಾಕ್ಷತನ ಅವರಲ್ಲಿದೆ.

ಸ್ಥಿರತೆಯ ಸಂಕೇತ: ಜಾಗತಿಕವಾಗಿ ಕಠಿಣ ಪರಿಸ್ಥಿತಿಗಳು ಎದುರಾಗಿದ್ದಾಗಲೂ ಭಾರತಕ್ಕೆ ಸ್ಥಿರವಾದ, ಬಲಿಷ್ಠವಾದ ಆಡಳಿತವನ್ನು ನೀಡುವ ಮೂಲಕ ಜಗತ್ತಿನಾದ್ಯಂತ ಭಾರತದ ಘನತೆಯನ್ನು ಮೋದಿ ಹೆಚ್ಚಿಸಿದ್ದಾರೆ ಎಂದು ದೇವೇಗೌಡ ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಈ ಅಪ್ರತಿಮ ಸಾಧನೆಯು ಭಾರತೀಯ ಪ್ರಜಾಪ್ರಭುತ್ವದ ಶಕ್ತಿ ಹಾಗೂ ನವ ಭಾರತದ ವಿಕಾಸಕ್ಕೆ ಸಾಕ್ಷಿಯಾಗಿದೆ ಎಂದು ಜಾಗತಿಕ ರಂಗದಲ್ಲಿ ವಿಶ್ಲೇಷಿಸಲಾಗುತ್ತಿದೆ. ಮನ್​ ಕಿ ಬಾತ್ ಕಾರ್ಯಕ್ರಮವನ್ನು ಎಂದೂ ಕೂಡ ತಾವು ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:47 am, Tue, 9 June 26

Source link

ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ, ಸಚಿವ ಸ್ಥಾನದ ರೇಸ್​ನಲ್ಲೂ ಇಲ್ಲ: ರಾಜಣ್ಣ ಖಡಕ್ ಮಾತು – Kannada News

ಬೆಂಗಳೂರು, ಜೂನ್ 9: ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ ಮತ್ತು ಆ ರೇಸ್‌ನಲ್ಲೂ ಇಲ್ಲ ಎಂದು ಶಾಸಕ ಕೆಎನ್ ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಮುದಾಯವಾರು ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನಗಳನ್ನು ನೀಡುವ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಇದು ಬಹಳ ಹಿಂದಿನಿಂದಲೂ ಇರುವ ವಾದ ಎಂದು ಹೇಳಿದ್ದಾರೆ. ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಡಿಸಿಎಂ ಸ್ಥಾನಗಳನ್ನು ನೀಡಬೇಕೆಂಬ ವಾದಕ್ಕೆ ಬದ್ಧವಾಗಿರುವುದಾಗಿ ರಾಜಣ್ಣ ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವಲ್ಲಿನ ವಿಳಂಬದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಆಗಸ್ಟ್ ಅಂತ್ಯದೊಳಗೆ ಮುಗಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಐದು ವರ್ಷಗಳಿಂದ ನಡೆದಿರುವುದಿಲ್ಲ. ಈ ಚುನಾವಣೆಗಳ ವಿಳಂಬದಿಂದಾಗಿ ಕೇಂದ್ರ ಸರ್ಕಾರವು 73ನೇ ಮತ್ತು 74ನೇ ತಿದ್ದುಪಡಿ ಅಡಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಅನುದಾನವನ್ನು ನಿಲ್ಲಿಸಿದೆ, ಇದು ರಾಜ್ಯಕ್ಕೆ ಅನ್ಯಾಯ ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರು ಆಡಳಿತ ನಡೆಸಬೇಕೇ ಹೊರತು ಅಧಿಕಾರಿಗಳಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿ.ಕೆ. ಶಿವಕುಮಾರ್​​ ಸಂಪುಟದಲ್ಲಿ ಮುಗಿಯದ ಖಾತೆ ಕ್ಯಾತೆ: ವರಿಷ್ಠರ ಭೇಟಿಗಾಗಿ ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು, ಜೂನ್​​ 09: ಕರ್ನಾಟಕದಲ್ಲಿ ಖಾತೆ ಹಂಚಿಕೆ ಗೊಂದಲಗಳು ಮುಂದುವರಿದಿದ್ದು, ಸಚಿವ ಕೃಷ್ಣ ಭೈರೇಗೌಡ ಅವರು ತಮ್ಮ ಇಲಾಖೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದು, ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಮತ್ತು ಬಿಎಂಆರ್‌ಡಿಎ (ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಗಳನ್ನು ತನ್ನ ಖಾತೆಗೆ ಸೇರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಬಿಡಿಎ ಮತ್ತು ಬಿಎಂಆರ್‌ಡಿಎ ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಯಾವುದೇ ಮೌಲ್ಯವಿಲ್ಲ ಎಂಬುದು ಕೃಷ್ಣ ಭೈರೇಗೌಡರ ಅಭಿಪ್ರಾಯ. ಈ ಸಂಬಂಧ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸುರ್ಜೇವಾಲಾ ಅವರೊಂದಿಗೆ ಚರ್ಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೃಷ್ಣ ಭೈರೇಗೌಡರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಹೈಕಮಾಂಡ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಖರ್ಗೆ ಮತ್ತು ಸುರ್ಜೇವಾಲಾ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ರಾಜ್ಯದಲ್ಲಿ ಈ ಹಿಂದೆ ರೆಡ್ಡಿ ಮತ್ತು ಮುನಿಯಪ್ಪ ಕೂಡ ಖಾತೆ ಹಂಚಿಕೆಯಲ್ಲಿ ಇದೇ ರೀತಿಯ ಅಸಮಾಧಾನ ವ್ಯಕ್ತಪಡಿಸಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶ್ರೀಲಂಕಾಕ್ಕೆ ಹೊರಟ ಪ್ರಶಾಂತ್ ನೀಲ್ ಮತ್ತು ಜೂ ಎನ್​​ಟಿಆರ್ – Kannada News

ಪ್ರಶಾಂತ್ ನೀಲ್ (Prashanth Neel) ಸಾಮಾನ್ಯವಾಗಿ ತಮ್ಮ ಸಿನಿಮಾಗಳನ್ನು ಸೆಟ್​​ಗಳಲ್ಲಿಯೇ ಚಿತ್ರೀಕರಿಸುತ್ತಾರೆ. ಅವರು ಚಿತ್ರೀಕರಣಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗುವುದು ಬಹಳ ಕಡಿಮೆ. ಅದರಲ್ಲೂ ವಿದೇಶದಲ್ಲಿ ಚಿತ್ರೀಕರಣವೆಂದರೆ ಅವರಿಗೆ ಆಗದು. ಇದೀಗ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ಚಿತ್ರೀಕರಣವನ್ನು ನೀಲ್ ಮಾಡುತ್ತಿದ್ದು, ಈ ಸಿನಿಮಾಕ್ಕಾಗಿ ತಮ್ಮ ಹಳೆಯ ಪದ್ಧತಿಗಳನ್ನು ಮುರಿದಿದ್ದಾರೆ ಪ್ರಶಾಂತ್ ನೀಲ್. ‘ಡ್ರ್ಯಾಗನ್’ ಸಿನಿಮಾಕ್ಕಾಗಿ ಪ್ರಶಾಂತ್ ನೀಲ್ ವಿದೇಶಗಳನ್ನು ಸುತ್ತುತ್ತಿದ್ದಾರೆ. ಈಗಾಗಲೇ ಒಂದು ದೇಶಕ್ಕೆ ಹೋಗಿ ಬಂದಿರುವ ನೀಲ್ ಮತ್ತು ಎನ್​​ಟಿಆರ್, ಈಗ ಶ್ರೀಲಂಕಾದತ್ತ ಮುಖ ಮಾಡಿದ್ದಾರೆ.

ಪ್ರಶಾಂತ್ ನೀಲ್ ಅವರು ಜೂ ಎನ್​​ಟಿಆರ್ ಅವರನ್ನು ಕರೆದುಕೊಂಡು ಶ್ರೀಲಂಕಾದತ್ತ ಪಯಣ ಬೆಳೆಸಿದ್ದಾರೆ. ಅಲ್ಲಿ ಒಂದು ಪ್ರಮುಖ ಆಕ್ಷನ್ ದೃಶ್ಯದ ಜೊತೆಗೆ ಮಾದಕ ವಸ್ತು ಬೆಳೆಯುವ ಗುಂಪಿನ ದೃಶ್ಯಗಳನ್ನು ಸಹ ಚಿತ್ರೀಕರಣ ಮಾಡಲಿದ್ದಾರಂತೆ. ಶ್ರೀಲಂಕಾನಲ್ಲಿ ಬೀಚ್​​ಗಳ ಜೊತೆಗೆ ಪರ್ವತಶೃಂಗಗಳು, ದಟ್ಟ ಅರಣ್ಯ ಮತ್ತು ಸಾಕಷ್ಟು ಟೀ-ಕಾಫಿ ಪ್ಲಾಂಟೇಶನ್​​ಗಳು ಇದ್ದು, ಇದು ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣಕ್ಕೆ ಸೂಕ್ತವೆಂಬ ಕಾರಣಕ್ಕೆ ನೀಲ್, ಶ್ರೀಲಂಕಾದತ್ತ ಹೊರಟಿದ್ದಾರೆ.

ನೀಲ್ ಸಾಮಾನ್ಯವಾಗಿ ಸೆಟ್ಟುಗಳಲ್ಲಿ ಚಿತ್ರೀಕರಣ ಮಾಡುತ್ತಾರೆ. ಅಲ್ಲದೆ, ಅವರು ಹೆಣೆಯುವ ಕತೆಗಳು ಸಹ ಬಹುತೇಕ ಒಂದೇ ಸ್ಥಳದಲ್ಲಿ ಸ್ಥಿತವಾಗಿರುವ ವ್ಯಕ್ತಿಗಳ ಕುರಿತಾಗಿರುತ್ತದೆ. ಆದರೆ ಈ ಬಾರಿ ‘ಡ್ರ್ಯಾಗನ್’ನಲ್ಲಿ ಅವರು ಮಾದಕ ವಸ್ತು ‘ಉದ್ಯಮ’ದ ಕುರಿತು ಕತೆ ಹೇಳುತ್ತಿದ್ದಾರೆ. ಹಾಗಾಗಿ ಸೆಟ್​​ನಲ್ಲಿ ಅಲ್ಲದೆ ನಿಜವಾದ ಲೊಕೇಶನ್​​ಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಮತ್ತೊಂದು ಆಕ್ಷನ್ ದೃಶ್ಯದ ಚಿತ್ರೀಕರಣಕ್ಕಾಗಿ ಜೋರ್ಡನ್​​ಗೆ ಹೋಗಿದ್ದರು ನೀಲ್ ಮತ್ತು ಜೂ ಎನ್​​ಟಿಆರ್. ಜೋರ್ಡನ್​​ನ ಮರು ಭೂಮಿಯಲ್ಲಿ ಅದ್ಧೂರಿ ಆಕ್ಷನ್ ದೃಶ್ಯದ ಚಿತ್ರೀಕರಣದಲ್ಲಿ ಜೂ ಎನ್​​ಟಿಆರ್ ಭಾಗಿ ಆಗಿದ್ದರಂತೆ. ಈಗ ಜೋರ್ಡನ್ ಬಳಿಕ ಶ್ರೀಲಂಕಾಕ್ಕೆ ತೆರಳಿದೆ ಚಿತ್ರತಂಡ.

ಇದನ್ನೂ ಓದಿ:‘ಧುರಂಧರ್’ ನೋಡಿ ‘ಡ್ರ್ಯಾಗನ್’ ಕತೆ ಬದಲಾಯಿಸಿದರೇ ಪ್ರಶಾಂತ್ ನೀಲ್?

‘ಡ್ರ್ಯಾಗನ್’ ಸಿನಿಮಾ ನೀಲ್ ಅವರ ನಿರ್ದೇಶನದ ಐದನೆ ಸಿನಿಮಾ ಆಗಿದ್ದು, ಈ ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚು ರಿಚ್ ಆಗಿ ಮತ್ತು ಹೆಚ್ಚು ಆಕ್ಷನ್ ಭರಿತವಾಗಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ಸಿನಿಮಾನಲ್ಲಿರುವ ದುಷ್ಟ ಕೂಟವನ್ನು ಮತ್ತು ಅದರ ನಾಯಕನಂತಿರುವ ಜೂ ಎನ್​​ಟಿಆರ್ ಪಾತ್ರವನ್ನು ಖಡಕ್ ಆಗಿ ತೋರಿಸಿದ್ದಾರೆ. ಸಿನಿಮಾನಲ್ಲಿ ಜೂ ಎನ್​​ಟಿಆರ್ ಜೊತೆಗೆ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅನಿಲ್ ಕಪೂರ್ ಪವರ್​​ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಿಜು ಮೆನನ್, ಆಶುತೋಶ್ ರಾಣಾ, ಖುಷ್ಬು ಸುಂದರ್ ಅವರುಗಳು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶೂಟಿಂಗ್ ಮಾಡುವಾಗಲೇ ನಟಿಯರು ಈ ಬಗ್ಗೆ ಮಾತನಾಡಬೇಕು; ಕಂಗನಾ ನೇರ ಮಾತು

ಚಿತ್ರರಂಗದಲ್ಲಿ ನಾಯಕಿಯರನ್ನು ಅತಿಯಾಗಿ ಗ್ಲಾಮರೈಸ್ ಮಾಡುವ ಹಾಗೂ ಕಾಮಪ್ರಚೋದಕವಾಗಿ ಬಿಂಬಿಸುವ ವಿಚಾರ ಸದ್ಯ ದೇಶಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ರಾಮ್ ಚರಣ್ ಅವರ ‘ಪೆದ್ದಿ’ ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ ಅವರ ಪಾತ್ರವನ್ನು ತೋರಿಸಿರುವ ರೀತಿಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಈ ಚರ್ಚೆ ಮತ್ತಷ್ಟು ಜೋರಾಗಿದೆ. ಹಲವು ಹಿರಿಯ ನಟಿಯರು ಈ ಬಗ್ಗೆ ಮಾತನಾಡಿದ್ದರು. ಈಗ ಬಾಲಿವುಡ್ ನಟಿ ಹಾಗೂ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರನೌತ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸದ್ಯ ತಮ್ಮ ಮುಂಬರುವ ‘ಭಾರತ್ ಭಾಗ್ಯ ವಿಧಾತ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕಂಗನಾ, ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಈ ಬಗ್ಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ‘ನನ್ನ ಅನುಭವದ ಪ್ರಕಾರ, ಯಾವುದೇ ಚಲನಚಿತ್ರ ನಿರ್ದೇಶಕರು ಕೂಡ ಒಬ್ಬ ಮಹಿಳೆಯನ್ನು ಕೇವಲ ಒಂದು ವಸ್ತುವಾಗಿ ತೋರಿಸಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡುವುದಿಲ್ಲ. ಸಿನಿಮಾ ಎನ್ನುವುದು ಹಲವು ದೃಷ್ಟಿಕೋನಗಳಿರುವ ಒಂದು ಸಾಮೂಹಿಕ ಪ್ರಯತ್ನ’ ಎಂದಿದ್ದಾರೆ.

‘ಚಿತ್ರೀಕರಣದ ಸಮಯದಲ್ಲಿ ನಾಯಕಿಯರಿಗೆ ತಮಗಾಗುವ ಮುಜುಗರದ ಬಗ್ಗೆ ಮುಕ್ತವಾಗಿ ಮಾತನಾಡಲು ಸ್ವಾತಂತ್ರ್ಯ ಇರುತ್ತದೆ. ತಮಗೆ ಸರಿ ಅನಿಸದ ವಿಷಯಗಳನ್ನು ನಿರ್ದೇಶಕರಿಗೆ ತಿಳಿಸಿದಾಗ, ಅವರು ಖಂಡಿತಾ ಒಪ್ಪಿಕೊಳ್ಳುತ್ತಾರೆ. ಹಲವು ಬಾರಿ ಪುರುಷರ ದೃಷ್ಟಿಕೋನದಿಂದ ಕಥೆ ಬರೆಯುವಾಗ ಇಂತಹ ತಪ್ಪುಗಳು ಅರಿಯದೇ ನಡೆದುಹೋಗುತ್ತವೆ. ಹಾಗಾಗಿ ಮಹಿಳೆಯರು ತಮ್ಮ ಮನಸ್ಸಿನ ಮಾತನ್ನು ನೇರವಾಗಿ ಹೇಳಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ ಚಿತ್ರದ ಆಕ್ಷೇಪಾರ್ಹ ಶಾಟ್‌ಗಳಿಗೆ ಜಾನ್ವಿ ಕಪೂರ್ ವಿರೋಧ? ನಟಿಯ ಮೆಸೇಜ್ ಲೀಕ್

ಇನ್ನೊಂದೆಡೆ, ಜಾನ್ವಿ ಕಪೂರ್ ಪಾತ್ರದ ಉಡುಪು ಹಾಗೂ ದೃಶ್ಯಗಳ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ‘ಪೆದ್ದಿ’ ಚಿತ್ರದ ನಿರ್ದೇಶಕ ಬುಚಿ ಬಾಬು ಸನಾ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಚಿತ್ರದಲ್ಲಿನ ಜಾನ್ವಿ ಕಪೂರ್ ಅವರ ವಿವಾದಿತ ದೃಶ್ಯಗಳನ್ನು ಬದಲಾಯಿಸಲಾಗುವುದು (ಟ್ರಿಮ್ ಮಾಡಲಾಗುವುದು) ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಹಿಳೆಯರನ್ನು ಅಗೌರವಿಸುವ ಯಾವುದೇ ಉದ್ದೇಶ ತಮಗಿರಲಿಲ್ಲ ಎಂದು ಹೇಳಿರುವ ನಿರ್ದೇಶಕರು, ಜಾನ್ವಿ ಅವರ ಪಾತ್ರದಿಂದ ಮನನೊಂದ ಎಲ್ಲ ಪ್ರೇಕ್ಷಕರಿಗೂ ಕ್ಷಮೆಯಾಚಿಸಿದ್ದಾರೆ. ಆದರೆ, ಈ ಇಡೀ ವಿವಾದದ ಕುರಿತು ನಟಿ ಜಾನ್ವಿ ಕಪೂರ್ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲ್ಯಾಡಲ್ ಸ್ಫೋಟಕ್ಕೆ 8 ಕಾರ್ಮಿಕರು ಬಲಿ, ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ – Kannada News

ವಿಶಾಖಪಟ್ಟಣಂ, ಜೂನ್ 09: ವಿಶಾಖಪಟ್ಟಣಂನ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಎಂಟು ಕಾರ್ಮಿಕರು ಬಲಿಯಾಗಿದ್ದಾರೆ. ಕರಗಿದ ಕಬ್ಬಿಣವನ್ನು ಸಾಗಿಸುವಾಗ ಕ್ರೇನ್ ಕುಸಿದು, ಬಿಸಿ ಲೋಹ ಚೆಲ್ಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಈ ಪರಿಹಾರ ಕಾಯಂ ನೌಕರರು ಹಾಗೂ ಹೊರಗುತ್ತಿಗೆ ನೌಕರರು ಇಬ್ಬರಿಗೂ ಅನ್ವಯವಾಗುತ್ತದೆ. ಜೊತೆಗೆ, ಮೃತ ಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಕಾಯಂ ಉದ್ಯೋಗ, ಟೌನ್‌ಶಿಪ್‌ನಲ್ಲಿ ವಾಸವಿದ್ದ ಮನೆಯಲ್ಲೇ ಮುಂದುವರಿಯುವ ಅವಕಾಶ ಮತ್ತು ಕುಟುಂಬದ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಘೋಷಿಸಲಾಯಿತು.

ಇದಲ್ಲದೆ, ಪ್ರಧಾನ ಮಂತ್ರಿ ನಿಧಿಯಿಂದಲೂ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರವನ್ನು ಪ್ರಧಾನ ಮಂತ್ರಿಯವರು ಘೋಷಿಸಿದ್ದಾರೆ. ಒಟ್ಟಾರೆ ವಿಮೆ ಸೇರಿದಂತೆ ಪ್ರತಿ ಕುಟುಂಬಕ್ಕೆ 38 ಲಕ್ಷ ರೂಪಾಯಿ ಲಭ್ಯವಾಗುವ ನಿರೀಕ್ಷೆಯಿದೆ. ಈ ಘಟಕದ ಪುನಶ್ಚೇತನಕ್ಕೆ ಅಡ್ಡಿಪಡಿಸದಂತೆ ಹೆಚ್.ಡಿ. ಕುಮಾರಸ್ವಾಮಿ ಕಾರ್ಮಿಕ ಮುಖಂಡರಲ್ಲಿ ಮನವಿ ಮಾಡಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link