Category Archives: Blog

Your blog category

ಪ್ರಿಯಾಂಕಾ ಚೋಪ್ರಾ ಮನವಿಯನ್ನು ಪುರಸ್ಕರಿಸಿದ ರಾಜಮೌಳಿ, ಆದರೆ… – Kannada News | Priyanka Chopra talks about Rajamouli accepted her request

ರಾಜಮೌಳಿ (Rajamouli) ನಿರ್ದೇಶಿಸುತ್ತಿರುವ ‘ವಾರಣಾಸಿ’ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವರ್ಷ ಇರುವಾಗಲೇ ಸಿನಿಮಾದ ಪ್ರಚಾರ ಆರಂಭವಾದಂತಿದೆ. ಕೆಲ ವಾರಗಳ ಹಿಂದಷ್ಟೆ ಬಲು ಅದ್ಧೂರಿಯಾಗಿ ಸಿನಿಮಾದ ಸಣ್ಣ ಟೀಸರ್ ಬಿಡುಗಡೆ ಮಾಡಲಾಯ್ತು. ಸಿನಿಮಾದ ಹೆಸರು ಹಾಗೂ ಮಹೇಶ್ ಬಾಬು ಅವರ ಒಂದು ಲುಕ್ ಹೊರತಾಗಿ ಹೊಸತೇನನ್ನೂ ಸಹ ಟೀಸರ್​​ನಲ್ಲಿ ರಿವೀಲ್ ಮಾಡಲಾಗಿರಲಿಲ್ಲ. ಇದೀಗ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರುಗಳು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಹಲವು ವಿಷಯ ಮಾತನಾಡಿರುವ ನಟಿ ಪ್ರಿಯಾಂಕಾ ಚೋಪ್ರಾ, ತಾವು ರಾಜಮೌಳಿ ಅವರಿಗೆ ಮಾಡಿದ ಮನವಿ ಹಾಗೂ ಅದನ್ನು ಅವರು ಪುರಸ್ಕರಿಸಿದ್ದು, ಬಳಿಕ ತಮ್ಮ ಮನವಿಯಿಂದ ತಮಗೇ ಸಮಸ್ಯೆ ಆಗಿದ್ದರ ಬಗ್ಗೆ ಮಾತನಾಡಿದ್ದಾರೆ. ರಾಜಮೌಳಿ ಅವರು ‘ವಾರಣಾಸಿ’ ಸಿನಿಮಾಕ್ಕಾಗಿ ಪ್ರಿಯಾಂಕಾ ಅವರನ್ನು ಕೇಳಿದಾಗ ಪ್ರಿಯಾಂಕಾ ಕೂಡಲೇ ಒಪ್ಪಿಕೊಂಡರಂತೆ. ಆದರೆ ರಾಜಮೌಳಿ ಬಳಿ ಒಂದು ವಿಶೇಷ ಮನವಿ ಒಂದನ್ನು ಮಾಡಿದ್ದರಂತೆ.

‘ನಾನು ಭಾರತೀಯ ಸಿನಿಮಾದ ಹಾಡುಗಳಲ್ಲಿ ಡ್ಯಾನ್ಸ್ ಮಾಡಿ ಬಹಳ ವರ್ಷಗಳಾಗಿಬಿಟ್ಟಿವೆ. ನನಗಾಗಿ ಒಂದು ಡ್ಯಾನ್ಸ್ ನಂಬರ್ ಅನ್ನು ಸಿನಿಮಾನಲ್ಲಿ ಇಡಲು ಸಾಧ್ಯವಾ?’ ಎಂದು ಪ್ರಿಯಾಂಕಾ ಚೋಪ್ರಾ ಮನವಿ ಮಾಡಿದ್ದರಂತೆ. ಅದರಂತೆ ರಾಜಮೌಳಿ ಸಹ ಸರಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಆ ಡ್ಯಾನ್ಸ್ ಹಾಡಿನ ಚಿತ್ರೀಕರಣ ಮಾತ್ರ ಬಹಳ ಶ್ರಮದಾಯಕವಾಗಿತ್ತು. ಬಹಳ ವೇಗ ಮತ್ತು ಕೋಆರ್ಡಿನೇಷನ್ ಇರುವ ಹಾಡು ಅದು’ ಎಂದಿದ್ದಾರೆ ಪ್ರಿಯಾಂಕಾ.

ಇದನ್ನೂ ಓದಿ:ತಾವೇ ಆರಂಭಿಸಿದ ಟ್ರೆಂಡ್ ಬಗ್ಗೆ ರಾಜಮೌಳಿಗೆ ರೇಜಿಗೆ; ದೊಡ್ಡ ನಿರ್ಧಾರಕ್ಕೆ ಬಂದ ನಿರ್ದೇಶಕ

ರಾಜಮೌಳಿಯ ಈ ಹಿಂದಿನ ಸಿನಿಮಾ ‘ಆರ್​​ಆರ್​​ಆರ್’ನಲ್ಲಿನ ‘ನಾಟು ನಾಟು’ ಹಾಡು ಸಹ ಅದ್ಭುತ ಡ್ಯಾನ್ಸ್​​​ನಿಂದ ಇಡೀ ವಿಶ್ವದಲ್ಲೇ ಜನಪ್ರಿಯವಾಗಿತ್ತು. ಆ ಸಿನಿಮಾದ ಡ್ಯಾನ್ಸ್​ ಸಹ ಬಹಳ ಇಂಟೆನ್ಸ್ ಆಗಿತ್ತು ಎಂದು ಈಗಲೂ ಸಹ ರಾಮ್ ಚರಣ್ ಮತ್ತು ಜೂ ಎನ್​​ಟಿಆರ್ ನೆನಪು ಮಾಡಿಕೊಳ್ಳುತ್ತಾರೆ. ರಾಜಮೌಳಿ ಹೇಗೆ, ಡ್ಯಾನ್ಸ್ನ ಪ್ರತಿ ಮೂಮೆಂಟ್ ಅನ್ನು ನೋಡಿ ಫೈನಲ್ ಮಾಡುತ್ತಿದ್ದರು ಎಂದು ರಾಮ್ ಚರಣ್ ಮತ್ತು ಜೂ ಎನ್​​ಟಿಆರ್ ಹೇಳಿದ್ದಾರೆ.

ಇದೀಗ ‘ವಾರಣಾಸಿ’ ಸಿನಿಮಾನಲ್ಲಿಯೂ ಸಹ ಅಂಥಹುದೇ ಒಂದು ಡ್ಯಾನ್ಸ್ ನಂಬರ್ ರಾಜಮೌಳಿ ಇಟ್ಟಿದ್ದಾರೆ ಅನಿಸುತ್ತದೆ. ಅದೇ ವಿಷಯವನ್ನು ಪ್ರಿಯಾಂಕಾ ಚೋಪ್ರಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಿನಿಮಾ ಏಪ್ರಿಲ್ 7, 2027ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಖ್ಖರನ್ನು ಕೊಂದ ಗಾಂಧಿ ಕುಟುಂಬದ ಕುಡಿಯೊಂದಿಗೆ ನಾನು ಕೈಕುಲುಕುವುದಿಲ್ಲ; ರವನೀತ್ ಬಿಟ್ಟು ಪ್ರತಿಕ್ರಿಯೆ – Kannada News | Gandhi family is the murder of Sikhs I wont shake hands with Rahul Gandhi Ravneet Singh Bittu says

ನವದೆಹಲಿ, ಫೆಬ್ರವರಿ 4: ಇಂದು ಬೆಳಗ್ಗೆ ಸಂಸತ್ ಹೊರಗೆ ಪ್ರತಿಭಟನೆ ನಡೆಸುವಾಗ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು (Ravneet Singh Bittu) ಅವರನ್ನು ರಾಹುಲ್ ಗಾಂಧಿ “ದೇಶದ್ರೋಹಿ” ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಚಿವ ರವನೀತ್ ಸಿಂಗ್ ಬಿಟ್ಟು, “ತನ್ನ ತಂದೆ ದೇಶಕ್ಕಾಗಿ ತನ್ನನ್ನು ತ್ಯಾಗ ಮಾಡಿದ್ದಕ್ಕಾಗಿ ತಾನು ಅತ್ಯಂತ ದೊಡ್ಡ ದೇಶಭಕ್ತನೆಂದು ರಾಹುಲ್ ಗಾಂಧಿ (Rahul Gandhi) ಭಾವಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬ ಪಂಜಾಬ್‌ಗೆ ಬೆಂಕಿ ಹಚ್ಚಿತ್ತು. ಗೋಲ್ಡನ್ ಟೆಂಪಲ್‌ನಲ್ಲಿರುವ ನಮ್ಮ ಅತಿದೊಡ್ಡ ಗುರುದ್ವಾರದ ಮೇಲೆ ಗುಂಡು ಹಾರಿಸಲಾಯಿತು. ಅವರು ಸಾವಿರಾರು ಸಿಖ್ಖರು, ಪಂಜಾಬಿಗಳನ್ನು ಗುರಿಯಾಗಿಸಿಕೊಂಡು ಕೊಂದರು. ನಾನು ಕೂಡ ಆ ರೀತಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ಕುಟುಂಬದಿಂದ ಬಂದಿದ್ದೇನೆ, ಇದು ನನ್ನ ನೋವು. ಒಬ್ಬ ಹುತಾತ್ಮನ ಮೊಮ್ಮಗ ನಾನು. ಕಾಂಗ್ರೆಸ್ ಪಕ್ಷದಲ್ಲಿ ನಾನು ಇರುವವರೆಗೂ ಅವರಿಗೆ ಎಲ್ಲ ಚೆನ್ನಾಗಿತ್ತು. ಈಗ ನಾನು ಬಿಜೆಪಿಯಲ್ಲಿದ್ದೇನೆ, ಹೀಗಾಗಿ ಅವರು ನನಗೆ ದೇಶದ್ರೋಹಿ ಎಂಬ ಪದಗಳನ್ನು ಬಳಸುತ್ತಿದ್ದಾರೆ. ಅವನು ತನ್ನ ಬಗ್ಗೆ ಏನು ಅಂದುಕೊಂಡಿದ್ದಾರೆ? ರಾಹುಲ್ ಗಾಂಧಿ ಚಕ್ರವರ್ತಿಯಂತೆ ನನ್ನ ಕಡೆಗೆ ಕೈ ಚಾಚಿದರು. ಅವರು ತನ್ನನ್ನು ಈ ದೇಶದ, ಈ ಪ್ರಪಂಚದ ಮಾಲೀಕ ಎಂದುಕೊಂಡಿದ್ದಾರೆ. ನಾನು ಗಾಂಧಿ ಕುಟುಂಬಕ್ಕೆ ಸೇರಿದವನಲ್ಲದಿರಬಹುದು, ಆದರೆ ನನ್ನ ತಲೆಯ ಮೇಲೆ ಪೇಟವಿದೆ. ಹಾಗಾಗಿ, ಅವರು ನನ್ನೊಂದಿಗೆ ಕೈಕುಲುಕಲು ಮುಂದಾದಾಗ, ನಾನು ‘ಆಪ್ ಲೋಗ್ ತೋ ದೇಶ್ ಕೆ ಗದ್ದರ್ ಹೋ, ದೇಶ್ ಕೆ ದುಷ್ಮನ್ ಹೋ (ನೀವು ದೇಶದ ಶತ್ರುಗಳು)’ ಎಂದು ಹೇಳಿದೆ. ಗಾಂಧಿ ಕುಟುಂಬದಿಂದ ಸಿಖ್ಖರ ಕೊಲೆಯಾಗಿದೆ. ನಾನು ಆ ಕುಟುಂಬದ ಮಗನೊಂದಿಗೆ ಕೈಕುಲುಕುವುದಿಲ್ಲ” ಎಂದು ರವನೀತ್ ಬಿಟ್ಟು ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಗಾಂಧಿಯವರಿಗೆ ಹ್ಯಾಂಡ್‌ಶೇಕ್ ಏಕೆ ನೀಡಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, 1984ರಲ್ಲಿ ಗೋಲ್ಡನ್ ಟೆಂಪಲ್ ಸಂಕೀರ್ಣದಿಂದ ಉಗ್ರರನ್ನು ಹೊರಹಾಕಲು ನಡೆಸಿದ ಮಿಲಿಟರಿ ದಾಳಿ ಆಪರೇಷನ್ ಬ್ಲೂ ಸ್ಟಾರ್ ಮತ್ತು ಸಿಖ್ ವಿರೋಧಿ ಗಲಭೆಗಳ ಬಗ್ಗೆ ಗಾಂಧಿ ಕುಟುಂಬವನ್ನು ಟೀಕಿಸಿದರು. ಸಿಖ್ಖರ ಕೊಲೆಗಾರ ಗಾಂಧಿ ಕುಟುಂಬದ ಕುಡಿಯೊಂದಿಗೆ ಸರ್ದಾರ್ ಎಂದಿಗೂ ಕೈಕುಲುಕುವುದಿಲ್ಲ ಎಂದು ರವನೀತ್ ಬಿಟ್ಟು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರಾವಳಿಯಲ್ಲಿ ಮೊದಲ ಬೋಟ್ ಆಂಬ್ಯುಲೆನ್ಸ್, ತಮ್ಮ‌ ರಕ್ಷಣೆಗೆ ತಾವೇ ನಿರ್ಮಿಸಿಕೊಂಡ ಮೀನುಗಾರರು – Kannada News | Ullal fishermen build a First Boat Ambulance In Karavali, here Is How To Work

ಮಂಗಳೂರು, (ಫೆಬ್ರವರಿ 04): ಕರಾವಳಿಯಲ್ಲಿ ಮೊದಲ ಬೋಟ್ ಆಂಬ್ಯುಲೆನ್ಸ್  (Boat Ambulance) ನಿರ್ಮಾಣವಾಗಿದೆ. ಈ ಹಿಂದೆ ಬೋಟ್ ಆಂಬ್ಯುಲೆನ್ಸ್ ಆರಂಭಿಸುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಆದ್ರೆ, ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಇದೀಗ ಸರ್ಕಾರಕ್ಕೆ ಸೆಡ್ಡು ಹೊಡೆದ ಮೀನುಗಾರರು, ತಮ್ಮ‌ ರಕ್ಷಣೆಗೆ ತಾವೇ ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿಕೊಂಡಿದ್ದಾರೆ. ಸರ್ಕಾರದ ಯೋಜನೆಗೆ ಕಾಯದೇ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘದವರು ಮೊದಲ ಬೋಟ್ ಆಂಬುಲೆನ್ಸ್ ನಿರ್ಮಿಸಿದ್ದಾರೆ. ಮಂಗಳೂರಿನ ಉಳ್ಳಾಲ ವಲಯದ ಮೀನುಗಾರರ ಮಾದರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬೋಟ್ ಆಂಬ್ಯುಲೆನ್ಸ್ ಮೂಲಕ ಮೀನುಗಾರರ ಜೀವ ರಕ್ಷಣೆ ಕಾರ್ಯ ನಡೆಯಲಿದೆ. ನದಿ, ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭ ಅವಘಡ ಸಂಭವಿಸಿದ್ರೆ ತುರ್ತು ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ಬಳಕೆ ಮಾಡಲಾಗುತ್ತೆ. ಇನ್ನು ಸಮುದ್ರದ ಮಧ್ಯೆ ಆರೋಗ್ಯ ಸಮಸ್ಯೆ ಎದುರಾದರೂ ಸಹ ಈ ಬೋಟ್ ಆಂಬ್ಯುಲೆನ್ಸ್‌ ನೆರವಿಗೆ ಬರಲಿದೆ. ಇನ್ನು ಈ ಬೋಟ್ ಆಂಬ್ಯುಲೆನ್ಸ್ ಏನೆಲ್ಲಾ ಇದೆ ಎನ್ನುವ ಮಾಹಿತಿ ವಿಡಿಯೋನಲ್ಲಿ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಸಿನಿಮಾದಲ್ಲಿ ಸಲ್ಮಾನ್ ಖಾನ್? ವೈರಲ್ ಆಗಿದೆ ಫೋಟೋ – Kannada News | Is Salman Khan acting in Dhurandhar 2 movie Photo goes viral

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಧುರಂಧರ್ 2’ (Dhurandhar 2) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಅರ್ಜುನ್ ರಾಮ್​​ಪಾಲ್ ಮುಂತಾದವರು ನಟಿಸಿದ್ದಾರೆ. ಮಾರ್ಚ್ 19ರಂದು ಈ ಚಿತ್ರ ರಿಲೀಸ್ ಆಗಲಿದೆ. ಸಿನಿಮಾದ ಪಾತ್ರವರ್ಗದ ಬಗ್ಗೆ ಹಲವು ಗಾಸಿಪ್ ಕೇಳಿಬರುತ್ತಿದೆ. ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಕೂಡ ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಹೇಳಲಾಗುತ್ತಿದೆ. ಆದರೆ ಈ ಸುದ್ದಿಯನ್ನು ಚಿತ್ರತಂಡ ಖಚಿತಪಡಿಸಿಲ್ಲ.

‘ಧುರಂಧರ್ 2’ ಸಿನಿಮಾಗೆ ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ಅವರು ಈ ಹಿಂದೆ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದರು. ‘ಉರಿ’ ಸಿನಿಮಾದಲ್ಲಿ ನಟಿಸಿದ್ದ ಯಾಮಿ ಗೌತಮ್ ಮತ್ತು ವಿಕ್ಕಿ ಕೌಶಲ್ ಅವರು ‘ಧುರಂಧರ್ 2’ ಚಿತ್ರದಲ್ಲಿ ಇರಲಿದ್ದಾರೆ ಎಂಬ ಗಾಸಿಪ್ ಈಗಾಗಲೇ ಹಬ್ಬಿದೆ. ಅದರ ಜೊತೆಗೆ ಸಲ್ಮಾನ್ ಖಾನ್ ಹೆಸರು ಕೂಡ ಕೇಳಿಬರುತ್ತಿದೆ.

ಕಳೆದ ವರ್ಷ ಬಿಡುಗಡೆ ಆಗಿ ಬ್ಲಾಕ್​ ಬಸ್ಟರ್ ಹಿಟ್ ಆದ ‘ಧುರಂಧರ್’ ಸಿನಿಮಾದಲ್ಲಿ ಬಡೇ ಸಾಬ್ ಎಂಬ ಪಾತ್ರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಆ ಪಾತ್ರವು ‘ಧುರಂಧರ್ 2’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ. ಅಭಿಮಾನಿಗಳಿಗೆ ಬಡೇ ಸಾಬ್ ಬಗ್ಗೆ ಬಾರಿ ಕೌತುಕ ಇದೆ. ಸಲ್ಮಾನ್ ಖಾನ್ ಅವರು ಬಡೇ ಸಾಬ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಗಾಸಿಪ್ ಮಂದಿಯ ವಾದ.

ಸಲ್ಮಾನ್ ಖಾನ್ ಅವರ ಒಂದು ಫೋಟೋ ವೈರಲ್ ಆಗುತ್ತಿದೆ. ಇದು ‘ಧುರಂಧರ್ 2’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ತೆಗೆದ ಫೋಟೋ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಹಲವರು ನಂಬಿಲ್ಲ. ಇದು ಎಐ ಫೋಟೋ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ‘ಸಲ್ಮಾನ್ ಖಾನ್ ಅವರ ಅಭಿಮಾನಿಗಳು ಏನು ಬೇಕಾದರೂ ಮಾಡುತ್ತಾರೆ’ ಎಂಬ ಕಮೆಂಟ್ ಕೂಡ ಬಂದಿದೆ.

ಇದನ್ನೂ ಓದಿ: ಒಟಿಟಿಯಲ್ಲಿ ‘ಧುರಂಧರ್’ ನೋಡಿ ಮೆಚ್ಚಿಕೊಂಡ ಪಾಕಿಸ್ತಾನಿ ಪ್ರೇಕ್ಷಕರು

ಒಂದು ವೇಳೆ ಸಲ್ಮಾನ್ ಖಾನ್ ಅವರು ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದೇ ಹೌದಾದರೆ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ದಾಖಲೆ ಸೃಷ್ಟಿ ಆಗಲಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಪಾತ್ರವರ್ಗದಲ್ಲಿ ಸಲ್ಮಾನ್ ಖಾನ್ ಇದ್ದಾರೋ ಅಥವಾ ಇಲ್ಲವೋ ಎಂಬುದನ್ನು ಚಿತ್ರತಂಡದವರೇ ಸ್ಪಷ್ಟಪಡಿಸಬೇಕಿದೆ. ಇತ್ತೀಚೆಗೆ ‘ಧುರಂಧರ್ 2’ ಸಿನಿಮಾದ ಟೀಸರ್ ಮತ್ತು ಫಸ್ಟ್ ಲುಕ್ ಬಿಡುಗಡೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:34 pm, Wed, 4 February 26

Source link

ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ – Kannada News | Belagavi: Pan Shop Owner Murdered Over Cigarette Payment; Four Arrested

ಬೆಳಗಾವಿ, ಫೆಬ್ರವರಿ 04: ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ಹಣ ಕೇಳಿದ್ದಕ್ಕಾಗಿ ಪಾನ್ ಶಾಪ್ ಮಾಲೀಕ ಯಲ್ಲಪ್ಪ ನಾಯಕ್​​​ನನ್ನು ನಾಲ್ವರು ಯುವಕರು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಘಟನೆ ನಡೆದಿದೆ. ಯುವಕರು ಎರಡು ಸಿಗರೇಟ್ ಮತ್ತು ನೀರಿನ ಬಾಟಲಿಯನ್ನು ತೆಗೆದುಕೊಂಡು ಹಣ ಕೊಡದೇ ಹೋಗುತ್ತಿದ್ದರು. ಈ ವೇಳೆ ಯಲ್ಲಪ್ಪ ನಾಯಕ್ ಪ್ರಶ್ನಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಪುಣ್ಯಕೋಟಿ ಗೋವಿನ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ – Kannada News | A little boy was crying after hearing the song of the punyakoti cow

ಪುಟಾಣಿಗಳೇ (little kids) ಹಾಗೆ, ಸಣ್ಣ ಸಣ್ಣ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಇನ್ನು ಯಾವುದಾದರು ಕಥೆಯಲ್ಲಿ ಬರುವ ಪಾತ್ರವನ್ನು ನಿಜವೆಂದು ಭಾವಿಸುತ್ತಾರೆ. ಆದರೆ ಇಲ್ಲೊಬ್ಬ ಪುಟ್ಟ ಹುಡುಗನು ಕೂಡ ಪುಣ್ಯಕೋಟಿ (Punyakoti) ಗೋವಿನ ಹಾಡು ಕೇಳಿ, ಅದು ಮಾಡಿದ ತ್ಯಾಗವನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಪುಟಾಣಿಯ ಮುಗ್ಧತೆಗೆ ,ಮನಸೋತಿದ್ದಾರೆ.

ಕೋಸ್ಟಲ್ ಬೀಟ್ಸ್ (Costal beats) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆಯವರೆಲ್ಲರೂ  ಟಿವಿಯ ಮುಂದೆ ಕುಳಿತು ಪುಣ್ಯಕೋಟಿ ಗೋವಿನ ಹಾಡನ್ನು ವೀಕ್ಷಿಸುತ್ತಿದ್ದಾರೆ. ಈ ನಡುವೆ ಈ ಪುಟ್ಟ ಬಾಲಕನು ಈ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸ್ಟೇಜ್ ಮೇಲೆ ಹೊಗೆ ಕಂಡು ಭಯದಲ್ಲೇ ಅಳುತ್ತಾ ಓಡಿಹೋದ ಪುಟಾಣಿ ಡ್ಯಾನ್ಸರ್ಸ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮುಗ್ಧತೆ ಎಲ್ಲಾ ಕಾಲದಲ್ಲೂ ಸುಂದರ ಎಂದಿದ್ದಾರೆ. ಇನ್ನೊಬ್ಬರು, ಇವಾಗ್ಲೂ ಈ ಪುಣ್ಯಕೋಟಿ ಹಾಡು ಕೇಳುವಾಗ ದುಃಖ ಆಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪುಣ್ಯಕೋಟಿ ಹಾಡಿನಲ್ಲಿ ಅಡಗಿರುವ ಭಾವನೆ ಇದು, ದೇವರು ಆ ಮಗುವಿಗೆ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರೇ ಗಮನಿಸಿ: ಫೆ.4 ರಿಂದ 9 ರವರೆಗೆ ಈ ಪ್ರದೇಶಗಳಲ್ಲಿ ಪ್ರತಿದಿನ 4 ಗಂಟೆಗಳ ಕಾಲ ವಿದ್ಯುತ್ ಕಡಿತ – Kannada News | Bangalore Power Outage: BESCOM announces 4 hour daily cuts in Hebbal, North Bengaluru

ಬೆಂಗಳೂರು, ಫೆ.4: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಬೆಂಗಳೂರಿನ ಜನರು ಫೆ.4 ಅಂದರೆ ಇಂದಿನಿಂದ ಫೆ.9ರವರೆಗೆ ವಿದ್ಯುತ್​​ ಕಡಿತ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಫೆಬ್ರವರಿ 4 ರಿಂದ 9 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಪ್ರತಿದಿನ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳಲಿದ್ದು, ನಗರದ ಹಲವಾರು ಪ್ರದೇಶಗಳಲ್ಲಿ, ವಿಶೇಷವಾಗಿ ಹೆಬ್ಬಾಳ ಮತ್ತು ಉತ್ತರ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸಮಸ್ಯೆ ಉಂಟಾಗಲಿದೆ. ವರದಿಯ ಪ್ರಕಾರ, ನಗರದ ವಿದ್ಯುತ್ ಮೂಲಸೌಕರ್ಯವನ್ನು ಹೆಚ್ಚಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಹೇಳಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿದ್ಯುತ್​​​​​ ಸಂಪರ್ಕದಿಂದ ಯಾವುದೇ ಸಮಸ್ಯೆಗಳು ಬರಬಾರದು ಎಂದ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ವಿದ್ಯುತ್ ಕಡಿತಕ್ಕೆ ಕಾರಣವೇನು?

66/11 ಕೆವಿ ಎಚ್‌ಬಿಆರ್ ವಿದ್ಯುತ್ ಸ್ಥಾವರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ನಿಗದಿತ ವಿದ್ಯುತ್ ಕಡಿತ ಅಗತ್ಯವಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ನಗರದ ವಿದ್ಯುತ್ ಮೂಲಸೌಕರ್ಯವನ್ನು ಹೆಚ್ಚಿಸಲು ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ವಿದ್ಯುತ್ ಸರಬರಾಜಿನಲ್ಲಿ ದೀರ್ಘಕಾಲದ ವ್ಯತ್ಯಯಗಳಿಗೆ ಕಾರಣವಾಗುತ್ತದೆ, ಇದು ನಿವಾಸಿಗಳು, ಸಾರ್ವಜನಿಕ ಮತ್ತು ಖಾಸಗಿ ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ.

ಯಾವೆಲ್ಲ ಪ್ರದೇಶದಲ್ಲಿ ವಿದ್ಯುತ್​​​​ ವ್ಯತ್ಯಯವಾಗಲಿದೆ:

ಕಾವಲ್‌ಬೈರಸಂದ್, ಎಲ್.ಆರ್. ಬಂಡೆ ಮುಖ್ಯ ರಸ್ತ, ಗಾಂಧಿನಗ, ಚಿನ್ನಣ್ಣ ಬಡಾವಣ, ಅಂಬೇಡ್ಕರ್ ಲೇಔಟ,, ಅನ್ವರ್ ಲೇಔಟ, ಕಾವೇರಿ ನಗ, ಅಂಬೇಡ್ಕರ್ ವೈದ್ಯಕೀಯ ಕಾಲೇಜು ಪ್ರದೇ, ಸುಲ್ತಾನ್ ಪಾಳ್, ರಂಕಾ ನಗ,ಕನಕ ​​ನಗ, ಕೆಎಚ್‌ಬಿ ಮುಖ್ಯ ರಸ್ತೆ, ಭುವನೇಶ್ವರಿ ನಗ, ಡಿಜಿಎ ಹಳ್ಳ, ಕೆಜೆ ಹಳ್ಳಿ, ಕೆಜೆ ಕಾಲೋನ, ಆದರ್ಶ ನಗ, ವಿ. ನಾಗೇನಹಳ್ಳ, ಪೆರಿಯಾರ್ ನಗ, ಪೆರಿಯಾರ್ ವೃತ್, ಶಂಪು, ಕುಶಾಲ್ ನಗ, ಮೋದಿ ರಸ್ತೆ, ಮೋದಿ ಗಾರ್ಡನ, ದೊಡ್ಡಣ್ಣ ನಗ, ಮುನಿವೀರಪ್ಪ ಬಡಾವಣ, ಸಕ್ಕರೆ ಮಂಡ, ಉಪ್ಪು ಮಂಡಿ, ಮುನೇಶ್ವರ ನಗರ.

ಹೆಚ್ಚುವರಿಯಾಗಿ, ಐದು ದಿನಗಳ ನಿರ್ವಹಣಾ ಅವಧಿಯಲ್ಲಿ ದಿವ್ಯ ಶಾಂತಿ, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಟೈಟಾನ್ ಗ್ಯಾರೇಜ್, ಭೈರವಿ ಅಪಾರ್ಟ್‌ಮೆಂಟ್‌ಗಳು, ಹೆಗ್ಗಡೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೆಲಸ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ಯುವಕರು: 100 ಕೆಲಸಕ್ಕೆ ಅರ್ಜಿ, ಎಲ್ಲವೂ ತಿರಸ್ಕಾರ, ಟೆಕ್ಕಿ ಪೋಸ್ಟ್​​ ವೈರಲ್

ಈ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಿ:

ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪವರ್ ಬ್ಯಾಂಕ್‌ಗಳು ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿ. ಲಭ್ಯವಿರುವಲ್ಲಿ ವಿದ್ಯುತ್ ಬ್ಯಾಕಪ್ ವ್ಯವಸ್ಥೆಗಳನ್ನು ಬಳಸಿಕೊಳ್ಳಿ. ಪ್ರತಿದಿನ ನಿರ್ವಹಣಾ ಕಾರ್ಯಗಳು ಪೂರ್ಣಗೊಂಡ ನಂತರ ವಿದ್ಯುತ್ ಸಂಪರ್ಕವನ್ನು ನೀಡಲಾಗುವುದು. ಇದಲ್ಲದೆ, ನಿವಾಸಿಗಳು ತಮ್ಮ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳವಂತೆ ತಿಳಿಸಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ICC Rankings: ಬರೋಬ್ಬರಿ 32 ಸ್ಥಾನ ಮೇಲೇರಿದ ಕಿಶನ್; ಜಾರಿದ ಸಂಜು ಸ್ಯಾಮ್ಸನ್ – Kannada News | ICC T20 Rankings: Kishan, Suryakumar Climb; Varun Chakravarthy Tops Bowlers

ಅಭಿಷೇಕ್ ಶರ್ಮಾ ಟಿ20 ಶ್ರೇಯಾಂಕದಲ್ಲಿ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡಿದ್ದು, 917 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆದಾಗ್ಯೂ, ತಿಲಕ್ ವರ್ಮಾ ಒಂದು ಸ್ಥಾನ ಕುಸಿದು ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಸೂರ್ಯಕುಮಾರ್ ಯಾದವ್ ಏಳನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಶಿವಂ ದುಬೆ ಕೂಡ 17 ಆಟಗಾರರನ್ನು ಹಿಂದಿಕ್ಕಿ 41 ನೇ ಸ್ಥಾನಕ್ಕೆ ತಲುಪಿದ್ದಾರೆ.

Source link

ಪ್ರೆಗ್ನೆಂಟ್ ಆದ್ಮೇಲೆ ಕೈಕೊಟ್ಟವ್ನೆ: ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ – Kannada News | Victim Woman Talks about Man Cheating In Name Of Love In devanahalli

ದೇವನಹಳ್ಳಿ, (ಫೆಬ್ರವರಿ 04): ಗಂಡನಿಂದ ದೂರವಿದ್ದ ಮಹಿಳೆಯನ್ನು ಪ್ರೀತಿ (Love) ಹೆಸರಲ್ಲಿ ನಂಬಿಸಿ, ಲೈಂಗಿಕ ಸಂಪರ್ಕ ಬೆಳೆಸಿದ್ದು, ಬಳಿಕ ಆಕೆ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆಯೇ ಕೈಕೊಟ್ಟಿದ್ದಾನೆ. ಪ್ರಕರಣ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ದೊಡ್ಡಬಳ್ಳಾಪುರ (Doddaballapur) ನಗರದ ಶಾಂತಿನಗರ ನಿವಾಸಿ ಪ್ರವೀಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ಓರ್ವ ಮಗಳು ಕೂಡ ಇದ್ದಾಳೆಂಬ ವಿಷಯ ಬಹಿರಂಗವಾಗಿದ್ದು, ತನ್ನ ಮೇಲೆ ಆರೋಪಿ ಮತ್ತು ಆತನ ಕುಟುಂಬ ಶೋಷಣೆ ನಡೆಸಿರೋದಾಗಿ ಆಕೆ ಆರೋಪಿಸಿದ್ದಾಳೆ. ಇನ್ನು ಆರೋಪಿ ಪ್ರವೀಣ್ ಕುಮಾರ್ ಮಾಡಿದ ಮೋಸದ ಬಗ್ಗೆ ಸ್ವತಃ ಸಂತ್ರಸ್ತೆ ಟಿವಿ9 ಬಳಿ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ವಿವಾಹಿತ ಮಹಿಳೆ ಜೊತೆ ಚಕ್ಕಂದ: ನಂಬಿಸಿ ಗರ್ಭಪಾತ ಮಾಡಿಸಿದ್ನಾ ಯುವಕ?

Source link

ಬಾಯಿಯ ದುರ್ವಾಸನೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳು ಪರಿಣಾಮಕಾರಿ – Kannada News | These home remedies are effective in getting rid of bad breath

ದಿನಕ್ಕೆರಡು ಬಾರಿ ಹಲ್ಲುಜ್ಜಿದರೂ, ಅನೇಕರು ಬಾಯಿ ದುರ್ವಾಸನೆ (bad breath) ಸಮಸ್ಯೆಯನ್ನು ಎದುರಿಸುತ್ತಾರೆ. ಬಾಯಿಯ ಆರೋಗ್ಯ, ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಹೀಗೆ ಬಾಯಿ ವಾಸನೆ ಬರುತ್ತದೆ. ಇದು ಹೆಚ್ಚಿನವರಿಗೆ ಮುಜುಗರವನ್ನು ಉಂಟುಮಾಡುತ್ತದೆ. ಇದೇ ಕಾರಣಕ್ಕೆ ಅನೇಕರು ಮೌತ್‌ ಕ್ಲೀನರ್‌ಗಳನ್ನು ಬಳಕೆ ಮಾಡುತ್ತಾರೆ. ಇದರ ಬದಲು ಕೆಲವೊಂದು ಮನೆಮದ್ದುಗಳ ಸಹಾಯದಿಂದ ಬಾಯಿಯ ದುರ್ವಾಸನೆ ಸಮಸ್ಯೆಯಿಂದ ಪರಿಣಾಮಕಾರಿ ಪರಿಹಾರವನ್ನು ಪಡೆಯಬಹುದು. ಆ ಮನೆಮದ್ದುಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬಾಯಿ ದುರ್ವಾಸನೆಯನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ:

ಪುದೀನ: ಬಾಯಿಯ ದುರ್ವಾಸನೆಯನ್ನು ಹೋಗಲಾಡಿಲಸು ಪದೀನಾ ತುಂಬಾ ಪರಿಣಾಮಕಾರಿ ಪರಿಹಾರವಾಗಿದೆ. ಇದಕ್ಕಾಗಿ ಪುದೀನ ಎಲೆಗಳನ್ನು ನೀರಿನಲ್ಲಿ ಕುದಿಸಿ, ಒಂದು ದ್ರಾವಣವನ್ನು ತಯಾರಿಸಿ, ದಿನಕ್ಕೆ ಮೂರು ಬಾರಿ ಬಾಯಿ ಮುಕ್ಕಳಿಸುವುದರಿಂದ ಕೆಲವೇ ದಿನಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು. ಇದಲ್ಲದೆ ಪುದೀನಾ ಎಲೆಯನ್ನು ಜಗಿಯುವುದರಿಂದಲೂ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು.

ಶುಂಠಿ: ಬಾಯಿಯ ದುರ್ವಾಸನೆಯನ್ನು ತೊಡೆದುಹಾಕಲು, ಒಂದು ಲೋಟ ನೀರಿಗೆ ಶುಂಠಿ ರಸವನ್ನು ಸೇರಿಸಿ ಬಾಯಿ ಮುಕ್ಕಳಿಸಿ. ಹೌದು ದಿನಕ್ಕೆ ಮೂರು ಬಾರಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಈ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಪರಿಣಾಮಕಾರಿಪರಿಹಾರವನ್ನು ಪಡೆಯಬಹುದು.

ಲವಂಗ ಅಥವಾ ಸೋಂಪು ಬೀಜಗಳನ್ನು ಅಗಿಯಿರಿ: ಇವುಗಳಲ್ಲಿ ನಂಜುನಿರೋಧಕ ಗುಣಗಳಿದ್ದು, ಬಾಯಿಯ ದುರ್ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಸಿಟ್ರಸ್ ಹಣ್ಣುಗಳು: ಕಿತ್ತಳೆ ಮತ್ತು ನಿಂಬೆಹಣ್ಣಿನಂತಹ ಸಿಟ್ರಸ್ ಹಣ್ಣುಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಯಲು ಸಹಾಯ ಮಾಡುವ ಆಮ್ಲವನ್ನು ಹೊಂದಿರುತ್ತವೆ. ಇದಕ್ಕಾಗಿ, 1 ಟೀಚಮಚ ನಿಂಬೆ ಅಥವಾ ಕಿತ್ತಳೆ ರಸದೊಂದಿಗೆ ಸ್ವಲ್ಪ ಉಪ್ಪನ್ನು ಬೆರೆಸಿ, ಅದನ್ನು ಬಾಯಲ್ಲಿಟ್ಟು ನಂತರ ಸ್ವಚ್ಛಗೊಳಿಸಿ, ಇದು ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ. ಇದಲ್ಲದೆ ನಿಂಬೆ ಮತ್ತು ಕಿತ್ತಳೆ ಸಿಪ್ಪೆಗಳನ್ನು ಸಹ ಅಗಿಯಬಹುದು.

ಇದನ್ನೂ ಓದಿ: ಹಲ್ಲುಜ್ಜಲು ಎಷ್ಟು ಪ್ರಮಾಣದ ಟೂತ್‌ಪೇಸ್ಟ್‌ ಬಳಸುವುದು ಸೂಕ್ತ?

ಸಾಸಿವೆ ಮತ್ತು ಉಪ್ಪು: ಸಾಸಿವೆ ಎಣ್ಣೆಯನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಬೆರೆಸಿ ನಿಮ್ಮ ಒಸಡುಗಳಿಗೆ ಮಸಾಜ್ ಮಾಡುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಕೆಲವೊಮ್ಮೆ, ವಸಡಿನ ಕೊಳೆತ ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ, ಕೆಲವು ದಿನಗಳವರೆಗೆ ಈ ಪರಿಹಾರವನ್ನು ಅನುಸರಿಸುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ.

ನಾಲಿಗೆಯ ಸ್ವಚ್ಛಗೊಳಿಸುವುದು ಮುಖ್ಯ:

ಜನರು ಹೆಚ್ಚಾಗಿ ಹಲ್ಲುಜ್ಜುತ್ತಾರೆ, ಆದರೆ ನಾಲಿಗೆಯ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದರಿಂದ ಕೊಳಕು ಮತ್ತು ಬ್ಯಾಕ್ಟೀರಿಯಾಗಳು ಹಾಗೆಯೇ ಉಳಿದು ಬಿಡುತ್ತದೆ.  ಇದು ಬಾಯಿ ದುರ್ವಾಸನೆ ಸಮಸ್ಯೆಗೆ ದೊಡ್ಡ ಕಾರಣವಾಗಿದೆ. ಆದ್ದರಿಂದ, ಪ್ರತಿದಿನ ತಾಮ್ರ ಅಥವಾ ಉಕ್ಕಿನ ಟಂಗ್‌ ಕ್ಲೀನರ್‌ನಿಂದ ನಾಲಿಗೆಯನ್ನು ಸ್ವಚ್ಛಗೊಳಿಸಿ. ಅಲ್ಲದೆ ಸಾಕಷ್ಟು ನೀರು ಕುಡಿಯಿರಿ ಮತ್ತು ಊಟದ ನಂತರ ಬಾಯಿ ಮುಕ್ಕಳಿಸುವ ಅಭ್ಯಾಸ ಬೆಳೆಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link